ಲೋಕಸಭಾ ಸಭಾಪತಿ । Speaker of the Lok Sabha

ಪರಿವಿಡಿ

ಲೋಕಸಭಾ ಸಭಾಪತಿ

Speaker of the Lok Sabha

Speaker of the Lok Sabha , om birla , deputy speaker of lok sabha , rajya sabha speaker , first speaker of lok sabha , current speaker

Speaker of the Lok Sabha , om birla , deputy speaker of lok sabha , rajya sabha speaker , first speaker of lok sabha , current speaker

“ ಸಭಾಪತಿಯು ಸದನವನ್ನು , ಸದನದ ಗೌರವವನ್ನು ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತಾರೆ , ಲೋಕಸಭೆಯು ದೇಶವನ್ನು ಪ್ರತಿನಿಧಿಸುವುದರಿಂದ ಒಂದು ರೀತಿಯಲ್ಲಿ ಸ್ಪೀಕರ್ ರಾಷ್ಟ್ರದ ಸ್ವಾತಂತ್ರ್ಯ ಮತ್ತು ಗೌರವಗಳ ಸಂಕೇತವಾಗುತ್ತಾರೆ .

ಆದುದ್ದರಿಂದಲೇ ಅದು ಒಂದು ಗೌರವಾನ್ವಿತ ಸ್ಥಾನವಾಗಿರುವುದು , ಅತ್ಯಂತ ಉಚಿತ ಮತ್ತು ಯಾವಾಗಲೂ ಅಸಾಧಾರಣ ಥೀಮಂತಿಕೆಯ ಸಾಮರ್ಥ್ಯ , ನಿಷ್ಪಕ್ಷಪಾತತೆಗಆರುವ ವ್ಯಕ್ತಿಯು ಆ ಸ್ಥಾನವನ್ನು ಅಲಂಕರಿಸುವುದು ಅಗತ್ಯ ” ಪ್ರಧಾನ ಮಂತ್ರಿ ಜವಹರಲಾಲ್ ನೆಹರು 1958 ಮಾ .8 ರಂದು ಸಭಾಪತಿ ಪಟೇಲ್‌ರವರ ಭಾವಚಿತ್ರವನ್ನು ಅನಾವರಣಗೊಳಿಸುತ್ತಾ ಈ ಹುದ್ದೆಯ ಮಹತ್ವದ ಬಗ್ಗೆ ಹೇಆದ ಮಾತು .

ಲೋಕಸಭೆಯ ಕಾರ್ಯಕಲಾಪಗಳನ್ನು ಸುಗಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಸಂವಿಧಾನದ 93 ನೇ ವಿಧಿಯು ಲೋಕಸಭಾ ಸಭಾಪತಿ ಮತ್ತು ಉಪಾಧ್ಯಕ್ಷರ ಹುದ್ದೆಗೆ ಅವಕಾಶ ಕಲ್ಪಿಸಿದೆ .

ಲೋಕಸಭಾ ಸಭಾಪತಿ

ಲೋಕಸಭಾ ಸಭಾಪತಿ ಲೋಕಸಭೆಯ ಮುಖ್ಯಸ್ಥರು ಈ ಹುದ್ದೆಯು ಮಹತ್ವ ಪೂರ್ಣವಾಗಿದ್ದು ಅನೇಕ ಮಹತ್ತರ ಜವಾಬ್ದಾರಿಯನ್ನು ಹೊಂದಿದೆ .

ಇವರ ಕಾರ್ಯವು ವೆಸ್ಟ್ ಮಿನಿಸ್ಟರ್ ಪದ್ಧತಿಯ ಸರ್ಕಾರದಂತೆ ಹೋಲುತ್ತದೆ . ಭಾರತವು ಸಂಸದೀಯ ಪದ್ಧತಿಯನ್ನು ಹೊಂದಿದ್ದು , ಭಾರತದ ಲೋಕಸಭೆಯ ಸ್ಪೀಕರ್ ಇಂಗ್ಲೆಂಡ್‌ನ ಸಾಮಾನ್ಯ ಸಭೆಯ ಸೀಕರ ನ ಹುದ್ದೆಯನ್ನು ಹೋಲುತ್ತದೆ .

ಸ್ಪೀಕರ್ ಹುದ್ದೆಯ ಮೂಲ

ಸ್ಪೀಕರ್‌ ಅಥವಾ ಸಭಾಧ್ಯಕ್ಷ ಪದವಿ ಮೊದಲು ಬ್ರಿಟನ್‌ನಲ್ಲಿ ಚಾಲ್ತಿ ಇತ್ತು . ಬ್ರಿಟನ್‌ನಲ್ಲಿ 1377 ರಲ್ಲಿ ಮೊದಲ ಬಾರಿಗೆ ಸ್ಪೀಕರ್ ಸ್ಥಾನವನ್ನು ಥಾಮಸ್ ಹ್ಯಾಂಗರ್ ಎಂಬುವರು ಪಡೆದಿದ್ದರು .

ಇವರು ಪ್ರತಿನಿಧಿಗಳ ಪರವಾಗಿ ರಾಜರ ಮುಂದೆ ಮಾತಾಡುತ್ತಿದ್ದರಿಂದ ಇವರನ್ನು ಸ್ಪೀಕರ್ ಎಂದು ಕರೆಯುತ್ತಿದ್ದರು .

ಭಾರತದಲ್ಲಿ ಸ್ಪೀಕರ್‌ ಹುದ್ದೆಯ ಇತಿಹಾಸ

ಸ್ಪೀಕರ್ ಹುದ್ದೆಯು ಸ್ವಾತಂತ್ರ್ಯ ಬಂದ ನಂತರ ಸೃಷ್ಟಿಯಾದುದ್ದಲ್ಲ . ಇದು ಸ್ವತಂತ್ರ ಪೂರ್ವದಲ್ಲೇ ಜಾರಿಯಲ್ಲಿದ್ದ ಹುದ್ದೆಯಾಗಿದೆ . ಸ್ವತಂತ್ರ ಪೂರ್ವದಲ್ಲಿ ಈ ಹುದ್ದೆಯಲ್ಲಿರುವವರನ್ನು ಅಧ್ಯಕ್ಷರು ಎಂದು ಕರೆ ~ ಯುತ್ತಿದ್ದರು . 1921 ಕ್ಕಿಂತ ಮೊದಲೇ ಈ ಹುದ್ದೆಯು ಸೃಷ್ಟಿಯಾಗಿತ್ತು .

1921 ಕ್ಕಿಂತ ಮೊದಲು ಭಾರತ ಉಾರತ ಗೌರ‌ ಜನರಲ್‌ರವರು ಲೆಜಿಸ್ಟೆಟಿವ್ ಕೌನ್ಸಿಲ್ ಸಭೆಗಳ ಅಧ್ಯಕತೆ ವಹಿಸುತ್ತಿದ್ದರು . ಭಾರತದಲ್ಲಿ ಮಾಂಟೆಗೊ ಚೇಮ್ಸ್ ಫರ್ಡ್ ಸುಧಾರಣೆಯ ಪ್ರಕಾರ ಕೇಂದ್ರ ಶಾಸನ ಸಭೆ ಜಾರಿಗೆ ಬಂದುದ್ದರಿಂದ ಕೇಂದ್ರ ಶಾಸನ ಸಭೆಯ ಮೊದಲ ಸ್ಪೀಕರ್ ಆಗಿ ಸರ್ ಫೆಡ್ರಿಕ್ ವೈಟ್‌ರವರನ್ನು ಗೌರರ್ ಜನರಲ್ ನೇಮಕ ಮಾಡಿದರು .

ಈ ಹುದ್ದೆಯ ಅವಧಿಯು 1921 ಫೆ .3 ರಿಂದ 4 ವರ್ಷಗಳ ಅವಧಿಯಾಗಿತ್ತು . ಶಾಸನ ಸಭೆಯ ಮೊದಲನೆಯ ಅಧಿಕಾರಿಯೇತರ ಚುನಾಯಿತ ಸಭಾಪತಿಯಾಗಿ ಶ್ರೀವಿಠಲ ಬಾಯ್ ಜೆ.ಪಟೇಲ್‌ರವರು ಚುನಾಯಿತರಾದರು . ಪಟೇಲ್‌ರವರು ಭಾರತದ ಕೇಂದ್ರ ಶಾಸನ ಸಭೆಯ ಮೊದಲ ಭಾರತೀಯ ಸ್ಪೀಕರ್ ಮತ್ತು ಮೊದಲ ಭಾರತೀಯ ಚುನಾಯಿತ ಸಭಾಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ .

ಭಾರತಕ್ಕೆ ಸ್ವತಂತ್ರ್ಯ ಬಂದು ಮೊದಲ ಸಾರ್ವತ್ರಿಕ ನಡೆದು ರಚನೆಯಾದ ಮೊದಲ ಚುನಾವಣೆ 3 ಲೋಕಸಭೆಗೆ ಜಿ.ವಿ.ಮಾಳವಂಕರ್ ರವರು ಸ್ಪೀಕರ್‌ ಆದರು .

ಇದಕ್ಕೂ ಮೊದಲು ಇವರು ಶಾಸಕಾಂಗ ಸಭೆ ( ರಾಜ್ಯಾಂಗ ಸಭೆ ) ಯಲ್ಲೂ ಸ್ಪೀಕರ್‌ ಹುದ್ದೆಯನ್ನು ಅಲಂಕರಿಸಿದ್ದರು ಹಾಗೂ ತಾತ್ಕಾಲಿಕ ಸಂಸತ್ತಿನಲ್ಲೂ ಕೂಡ ಸಭಾಪತಿಗಳಾಗಿ ಕಾರ್ಯ ನಿರ್ವಹಿಸಿದ್ದರು .

ಲೋಕಸಭಾಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ

ವಿಧಿ .93 . ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ

ಲೋಕಸಭೆ ಚುನಾವಣೆಗಳು ಮುಗಿದ ಬಳಿಕ ಲೋಕಸಭೆಯಲ್ಲಿ ಸಾಧ್ಯವಾದಷ್ಟು ಅಧಿವೇಶನದ ನಂತರ ) ಸದನದ ಬೇಗ ( ಮೊದಲ ಸದಸ್ಯರುಗಳಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ , ಮತ್ತೊಬ್ಬರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷನ ಹುದ್ದೆಗಳು ಆಕಸ್ಮಿಕವಾಗಿ ನಂತರದ ದಿನಗಳಲ್ಲಿ ಖಾಲಿಯಾದ ಸಂದರ್ಭದಲ್ಲಿ ತಕ್ಷಣವೇ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಯನ್ನು ಲೋಕಸಭಾ ಸದಸ್ಯರುಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವುದರ ಮೂಲಕ ಆ ಹುದ್ದೆಯನ್ನು ಭರ್ತಿ ಮಾಡಬೇಕು ಎಂದು ಸಂವಿಧಾನದ 93 ನೇ ವಿಧಿ ತಿಳಿಸುತ್ತದೆ . ಲೋಕಸಭೆ ಅಧ್ಯಕ್ಷರ ಚುನಾವಣಾ ದಿನಾಂಕವನ್ನು ರಾಷ್ಟ್ರಪತಿಗಳು ನಿಗಧಿ ಮಾಡುತ್ತಾರೆ .

ತಾತ್ಕಾಲಿಕ ಸಭಾಪತಿ ( Pro – tem Speaker )

ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆದ ನಂತರ ಮೊದಲ ಬಾರಿ ಲೋಕಸಭೆ ಸಭೆ ಸೇರುವಾಗ ರಾಷ್ಟ್ರಪತಿಯವರು ಲೋಕಸಭೆಯ ಹಿರಿಯ ಸದಸ್ಯರನ್ನು ತಾತ್ಕಾಲಿಕ ಸಭಾಪತಿಗಳಾಗಿ ಆಯ್ಕೆ ಮಾಡುತ್ತಾರೆ . ತಾತ್ಕಾಲಿಕ ಸಭಾಪತಿಗಳನ್ನು ಆಯ್ಕೆ ಮಾಡುವಾಗ ಅತ್ಯಂತ ಹಿರಿಯ ಸದಸ್ಯರೊಬ್ಬರನ್ನು ಆಯ್ಕೆ ಮಾಡುತ್ತಾರೆ .

ನೂತನವಾಗಿ ಆಯ್ಕೆಯಾದ ಸದಸ್ಯರು ಪ್ರಮಾಣ ವಚನವನ್ನು ಸ್ವೀಕರಿಸಲು ಸೇರುವ ಸಭೆಯ ಅಧ್ಯಕ್ಷತೆಯನ್ನು ಹಾಗೂ ತಮ್ಮ ಸಭಾಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆ ಸೇರುವ ಸಭೆಯ ಅಧ್ಯಕ್ಷತೆಯನ್ನು ಈ ತಾತ್ಕಾಲಿಕ ಸಭಾಪತಿಗಳು ವಹಿಸಿಕೊಳ್ಳುತ್ತಾರೆ .

ಹೊಸ ಅಧ್ಯಕ್ಷರು ಬರುತ್ತಿದ್ದಂತೆ ಇವರು ಅಧಿಕಾರ ಕಳೆದುಕೊಳ್ಳುತ್ತಾರೆ . ಇವರು ಕೆಲವೇ ದಿನಗಳು ಮಾತ್ರ ಅಧಿಕಾರವನ್ನು ನಿರ್ವಹಿಸುತ್ತಾರೆ .

ಲೋಕಸಭಾಧ್ಯಕ್ಷರ ಮತ್ತು ಉಪಾಧ್ಯಕ್ಷರ ಖಾಲಿ & ಪದಚ್ಯುತಿ

ವಿಧಿ 94. ಲೋಕಸಭೆಯ ಅಧ್ಯಕ್ಷನು ಮತ್ತು ಉಪಾಧ್ಯಕ್ಷನು ಅಧಿಕಾರಗಳನ್ನು ಖಾಲಿ ಮಾಡುವುದು , ಅವುಗಳಗೆ ರಾಜೀನಾಮೆ ನೀಡುವುದು ಮತ್ತು ಆ ಹುದ್ದೆಗಳಿಂದ ಅವರನ್ನು ತೆಗೆದು ಹಾಕುವುದು .

ಲೋಕಸಭಾ ಸಭಾಪತಿ ಮತ್ತು ಉಪಸಭಾಪತಿಗಳು ಈ ಕೆಳಗಿನ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ಈ ಕೆಳಗಿನ ಸಂದರ್ಭದಲ್ಲಿ ಕಳೆದುಕೊಳ್ಳುತ್ತಾರೆ ಹಾಗೂ ಅವರನ್ನು ವಜಾಗೊಳಿಸಬೇಕಾಗುತ್ತದೆ .

1 ) ಲೋಕ ಸಭೆ ಸದಸ್ಯನಾಗಿರುವ ಅವಧಿ ಮುಗಿದು ಹೋದ ನಂತರ ತಮ್ಮ ಹುದ್ದೆಯನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಸಂವಿಧಾನದ 94 ( ಎ ) ವಿಧಿ ತಿಳಿಸುತ್ತದೆ .

2 ) ಸಭಾಪತಿಗಳು ಉಪಸಭಾಪತಿಗೆ ಉಪಸಭಾಪತಿಗಳು ಸಭಾಪತಿಗೆ ರಾಜೀನಾಮೆ ನೀಡುವ ಮೂಲಕ ತಮ್ಮ ಹುದ್ದೆಯನ್ನು ಖಾಲಿ ಮಾಡುತ್ತಾರೆ ..

3 ) ಲೋಕಸಭೆಯಲ್ಲಿ ಆಗಿನ ಎಲ್ಲಾ ಸದಸ್ಯರ ಬಹುಮತದ ಅಂಗೀಕೃತ ನಿರ್ಣಯದಿಂದ ಹುದ್ದೆಯಿಂದ ತೆಗೆದು ಹಾಕಬಹುದು .

ಸಭಾಪತಿ ಮತ್ತು ಉಪಸಭಾಪತಿಗಳನ್ನು ತೆಗೆದು ಹಾಕುವ ನಿರ್ಣಯಗಳನ್ನು ಮಂಡಿಸುವ 14 ದಿನಗಳ ಮೊದಲು ನೋಟೀಸ್‌ನ್ನು ನೀಡಿ ನಿರ್ಣಯವನ್ನು ಮಂಡಿಸತಕ್ಕದ್ದು ,

ಆದರೆ ಈ ಹುದ್ದೆಯು ಮೇಲಿನ ಯಾವ ಸಂದರ್ಭವೂ ಒದಗಿ ಬರದಿದ್ದರೆ ಲೋಕಸಭಾ ಸಭಾಪತಿ ಲೋಕಸಭೆ ವಿಸರ್ಜನೆಯಾದ ನಂತರ ಹೊಸ ಅಧಿವೇಶನ ಬರುವವರೆಗೆ ಅಧ್ಯಕ್ಷರು ತಮ್ಮ ಹುದ್ದೆಯಲ್ಲಿ ಮುಂದುವರೆಯುತ್ತಾರೆ .

 ಲೋಕಸಭೆಯ ಸಭಾಪತಿ ಹುದ್ದೆ ಖಾಲಿಯಾದಾಗ ಉಪಸಭಾಪತಿ ಅಧ್ಯಕ್ಷತೆ ವಹಿಸುವುದು

ವಿಧಿ 95 , ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅಥವಾ ಅಧ್ಯಕ್ಷ ಹುದ್ದೆಯ ಕರ್ತವ್ಯಗಳನ್ನು ನೆರವೇರಿಸಲು ಉಪಾಧ್ಯಕ್ಷನ ಅಥವಾ ಇತರ ವ್ಯಕ್ತಿಯ ಅಧಿಕಾರ

ಲೋಕಸಭೆಯ ಎಲ್ಲಾ ಕಲಾಪಗಳ ಅಧ್ಯಕತೆ ವಹಿಸುವವರು ಲೋಕಸಭಾ ಸಭಾಪತಿಗಳು ಆದ ಆಕಸ್ಮಿಕ ಕಾರಣಗಳಿಂದ ಸ್ಥಾನ ಖಾಲಿಯಾದ ಸಂದರ್ಭದಲ್ಲಿ ಲೋಕಸಭೆಯ ಉಪಸಭಾಪತಿಯು ‘  ಅಧ್ಯಕ್ಷರ ಆದರೆ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ

ಅದೇ ಸಮಯದಲ್ಲಿ ಉಪಸಭಾಪತಿಗಳ ಹುದ್ದೆಯು ಖಾಲಿಯಾಗಿದ್ದರೆ ರಾಷ್ಟ್ರಪತಿಗಳು ನೇಮಕ ಲೋಕಸಭಾ ಸದಸ್ಯನು ನಿರ್ವಹಿಸಬೇಕೆಂದು ಮಾಡಬಹುದಾದಂತಹ ಅಧ್ಯಕ್ಷನ ಕಾರ್ಯವನ್ನು ಸಂವಿಧಾನದ 95 ( 1 ) ನೇ ವಿಧಿ ತಿಳಿಸುತ್ತದೆ .

ಲೋಕಸಭೆಯ ಸಭಾಪತಿ , ಉಪಸಭಾಪತಿ ಹಾಗೂ ಸಂಸತ್ತಿನ ಕಾನೂನಿನ ಪ್ರಕ್ರಿಯೆಗಳ ಪ್ರಕಾರ ನೇಮಕವಾದ ವ್ಯಕ್ತಿಯು ಕೂಡ ಗೈರು ಹಾಜರಾದ ಸಂದರ್ಭದಲ್ಲಿ ಸಂಸತ್ತು ನಿರ್ಧರಿಸುವಂತಹ ವ್ಯಕ್ತಿಯು ಅಧ್ಯಕ್ಷರ ಕಾರ್ಯವನ್ನು ನಿರ್ವಹಿಸುತ್ತಾನೆ ಎಂದು ಸಂವಿಧಾನದ 95 ( 2 ) ನೇ ವಿಧಿ ತಿಳಿಸುತ್ತದೆ .

ಸಭಾಪತಿಗಳಾಗಿ ಕಾರ್ಯನಿರ್ವಹಿಸುವವರ ಪಟ್ಟ

ಲೋಕಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳು ಗೈರು ಹಾಜರಾದ ಸಂದರ್ಭದಲ್ಲಿ ಕಲಾಪಗಳನ್ನು ನಡೆಸಲು ಲೋಕಸಭೆಯ ನಿಯಮದ ಅನುಸಾರ ಲೋಕಸಭಾ ಸಭಾಪತಿಗಳು 10 ಜನ ಲೋಕಸಭಾ ಸದಸ್ಯರ ಒಂದು ಪಟ್ಟಿಯನ್ನು ಸಿದ್ಧಗೊಳಿಸುತ್ತಾರೆ .

ಇವರು ಕಲಾಪಗಳನ್ನು ಅಧ್ಯಕ್ಷರು , ಉಪಾಧ್ಯಕ್ಷರು ಗೈರು ಹಾಜರಾದ ಸಂದರ್ಭದಲ್ಲಿ ನಡೆಸಿಕೊಂಡು ಹೋಗುತ್ತಾರೆ . ಈ ಪಟ್ಟಿಯಲ್ಲಿರುವವರು ಗೈರು ಹಾಜರಾದರೆ ಸದನ ಸೂಚಿಸಿದ ವ್ಯಕ್ತಿಗಳು ಕಲಾಪಗಳನ್ನು ನಡೆಸಿಕೊಂಡು ಹೋಗುತ್ತಾರೆ .

ಒಂದು ವೇಳೆ ಕಲಾಪಗಳನ್ನು ನಿರ್ವಹಿಸುವ ಸಭಾಪತಿಗಳ ಕಾರ್ಯ ನಿರ್ವಹಣಾ ಪಟ್ಟಿಯಲ್ಲಿರುವ 10 ಜನರು ಗೈರು ಹಾಜರಾಗಿದ್ದು ಸಭಾಪತಿಗಳು ಉಪಸಭಾಪತಿಗಳು ಖಾಲಿಯಾಗಿದ್ದು ,

ಅಂತಹ ಸಂದರ್ಭದಲ್ಲಿ ರಾಷ್ಟ್ರಪತಿಗಳು ನೇಮಕ ಮಾಡಿದ ಸದಸ್ಯರು ಸಭಾಪತಿಗಳ ಕಾರ್ಯವನ್ನು ನಿಭಾಯಿಸುತ್ತಾರೆ . ಆದಷ್ಟು ಬೇಗ ಸಭಾಪತಿ ಉಪಸಭಾಪತಿ ಚುನಾವಣೆಗಳನ್ನು ನಡೆಸಬೇಕಾಗುತ್ತದೆ .

ವಿಧಿ . 96. ಅಧ್ಯಕ್ಷನನ್ನು ಅಥವಾ ಉಪಾಧ್ಯಕ್ಷನನ್ನು ಪದದಿಂದ ತೆಗೆದುಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕುದಲ್ಲ

ಲೋಕಸಭೆಯಲ್ಲಿ ಯಾವುದಾದರೂ ಸಮರ್ಥ ಕಾರಣದಿಂದ ಸಭಾಪತಿಯನ್ನು ಹುದ್ದೆಯಿಂದ ತೆಗೆದು ಹಾಕುವ ನಿರ್ಣಯವನ್ನು ತಯಾರಿಗೊಳಿಸುತ್ತಿರುವಾಗ ಅಂತಹ ಸಂದರ್ಭದಲ್ಲಿ ಸಭಾಪತಿಯು ಹಾಜರಿದ್ದರು ಕೂಡ ಸಭೆಯ ಅಧ್ಯಕ್ಷತೆಯನ್ನು ವಹಿಸಿತಕ್ಕದ್ದಲ್ಲ .

ಅದೇ ರೀತಿ ಉಪಸಭಾಪತಿಯನ್ನು ಆ ಹುದ್ದೆಯಿಂದ ತೆ ಹಾಕುವ ನಿರ್ಣಯವನ್ನು ಕೈಗೊಳ್ಳುತ್ತಿದ್ದರೆ ಅಂತಹ ಸಂದರ್ಭದಲ್ಲಿ ಉಪಾಧ್ಯಕ್ಷರು ಹಾಜರಿದ್ದರು ಅಧ್ಯಕ್ಷತೆಯನ್ನು ವಹಿಸಬಾರದೆಂದು ಸಂವಿಧಾನದ 96 ( 1 ) ನೇ ವಿಧಿ ತಿಳಿಸುತ್ತದೆ .

ಸಭಾಪತಿಯನ್ನು ಗೆದು ಮಂಡಿಸಿದಾಗ ಭಾಗವಹಿಸುವ ಅವನ ಹುದ್ದೆಯಿಂದ ತೆಗೆದು ಹಾಕುವ ಯಾವುದೇ ನಿರ್ಣಯವನ್ನು ಲೋಕಸಭೆಯಲ್ಲಿ ಅಧ್ಯಕ್ಷನು ಲೋಕಸಭೆಯಲ್ಲಿ ಮಾತನಾಡುವ ಮತ್ತು ಅದರ ವ್ಯವಹರಣೆಯಲ್ಲಿ ಹಕ್ಕು ಹೊಂದಿರುತ್ತಾನೆ .

ಈ ಸಂದರ್ಭದಲ್ಲಿ ನಿರ್ಣಯಕ್ಕೆ ಸಂಬಂಧಿಸಿದಂತೆ ಸಮಾನ ಮತವು ಬಂದಿದ್ದರೆ ಸಭಾಪತಿಗಳು ಮತಹಾಕುವ ಹಕ್ಕಿಲ್ಲವೆಂದು ಸಂವಿಧಾನದ 96 ( 2 ) ನೇ ವಿಧಿ ತಿಳಿಸುತ್ತದೆ .

ಲೋಕಸಭಾ ಸಭಾಪತಿ ಮತ್ತು ಉಪಾಸಭಾಪತಿ ವೇತನಗಳು

 ವಿಧಿ 97. ಸಭಾಪತಿಯ ಮತ್ತು ಉಪಸಭಾಪತಿಯ ಹಾಗೂ ಅಧ್ಯಕ್ಷನ ಮತ್ತು ಉಪಾಧ್ಯಕ್ಷನವೇತನಗಳು & ಭತ್ಯೆಗಳು .

ಲೋಕಸಭೆಯ ಸಭಾಪತಿ ಹಾಗೂ ಉಪಸಭಾಪತಿಗೆ ಸಂಸತ್ತಿನ ಕಾನೂನಿನ ಕಾನೂನಿನ ಮೂಲಕ ನಿಗಧಿಪಡಿಸಿದ ವೇತನವನ್ನು ಪಡೆಯುತ್ತಾನೆ .

ಇವರ ವೇತನಗಳು ಮತ್ತು ಭತ್ಯೆಗಳು ಸಂವಿಧಾನದ 2 ನೇ ಅನುಸೂಚಿಯಲ್ಲಿ ಸೂಚಿಸಿರುವಂತೆ ನೀಡಲಾಗುತ್ತದೆ . ಇವರ ಸಂಬಳ ಮತ್ತು ಭತ್ಯೆಗಳನ್ನು ಸಂಚಿತ ನಿಧಿಯಿಂದ ನೀಡಲಾಗುತ್ತದೆ .

ಇದು ಸಂಸತ್ತಿನ ವಾರ್ಷಿಕ ಆಯವ್ಯಯ ಪಟ್ಟಿಗೆ ಸಂಬಂಧಿಸಿರುವುದಿಲ್ಲ ಎಂದು ಸಂವಿಧಾನದ 97 ನೇ ವಿಧಿ ತಿಳಿಸುತ್ತದೆ . 1953 ರಲ್ಲಿ ಸಂಸತ್ತು ಲೋಕಸಭೆಯ ಸಭಾಪತಿಗಳ ಸಂಬಳ ಮತ್ತು ಭತ್ಯೆಗೆ ಸಂಬಂಧಿಸಿದಂತೆ ಕಾಯ್ದೆಯನ್ನು ಜಾರಿಗೆ ತಂದಿತು . ಈ ಕಾಯ್ದೆಯನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಾ ಬಂದಿದೆ .

2010 ಡಿಸೆಂಬರ್‌ನಿಂದ ಲೋಕಸಭೆಯ ಸ್ಪೀಕರ್ ಪ್ರತಿ ತಿಂಗಳು 50,000 ರೂಗಳನ್ನು ಪಡೆಯುತ್ತಿದ್ದಾರೆ & ಇದರೊಂದಿಗೆ ಕ್ಷೇತ್ರ ಭತ್ಯೆಯಾಗಿ 40,000 ರೂ.ಗಳನ್ನು & ಸದನಲ್ಲಿ ಅಥವಾ ಸಂಸತ್ತಿನ ಅಧಿವೇಶನದಲ್ಲಿ ಯಾವುದೇ ಸಭೆಗೆ ಭಾಗವಹಿಸಿದಾಗ 2,5000 ರೂ . ಗಳ ಭತ್ಯೆ ಪಡೆಯುತ್ತಾರೆ . ಹಾಗೂ ದೆಹಲಿಯಲ್ಲಿ ಅಧಿಕೃತವಾದಂತಹ ನಿವಾಸವನ್ನು ಹೊಂದಿದ್ದಾರೆ . ಉಚಿತ ವೈದ್ಯಕೀಯ ಸೇವೆ , ಸರ್ಕಾರಿ ಕಾರು , ಉಚಿತ ರೈಲ್ವೆ ಸೌಲಭ್ಯ .

ಸ್ಪೀಕರ್‌ರವರ ಅಧಿಕಾರ ಮತ್ತು ಕರ್ತವ್ಯಗಳು

ಸ್ಪೀಕ‌ ಹುದ್ದೆಯು ಮಹತ್ತರವಾದುದ್ದಾಗಿದ್ದು 1992 ರ ಆರ್ಡರ್ ಆಫ್ ಪ್ರೆಸಿಡೆನ್ಸಿಯ ಅನ್ವಯ 6 ನೇ ಸ್ಥಾನವನ್ನು ನೀಡಲಾಗಿದೆ . ಇದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರೂ ಕೂಡ 6 ನೇ ಸ್ಥಾನವನ್ನು ಹೊಂದಿದ್ದು , ಗೌರವದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಸ್ಥಾನವನ್ನು ಹೊಂದಿದೆ . ಲೋಕಸಭೆಯ ಸಭಾಪತಿಗಳು ಈ ಕೆಳಗಿನ ಅಧಿಕಾರ ಮತ್ತು ಕರ್ತವ್ಯಗಳನ್ನು ಹೊಂದಿದ್ದಾರೆ .

1 ) ಲೋಕಸಭೆಯ ಅಧಿವೇಶನಗಳ ಅಧ್ಯಕ್ಷತೆ ವಹಿಸುತ್ತಾರೆ .

2 ) ಲೋಕಸಭೆಯಲ್ಲಿ ನಿರ್ದಿಷ್ಟ ಕೋರಂ ಇಲ್ಲದಿದ್ದರೆ ಸಭೆಯನ್ನು ಮುಂದೂಡುತ್ತಾರೆ .

3 ) ಸದನದಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಸ್ಪೀಕರ್‌ರವರು ನಿರ್ಧರಿಸುತ್ತಾರೆ .

4 ) ಸದಸ್ಯರುಗಳು ಸ್ಪೀಕರ್‌ರವರ ತೀರ್ಮಾನದ ಮೇಲೆ ಅನುಮತಿ ಪಡೆದು ಪ್ರಶ್ನೆಗಳನ್ನು ನಿರ್ಣಯಗಳನ್ನು ಮತ್ತು ಮಸೂದೆಗಳನ್ನು ಮಂಡಿಸುತ್ತಾರೆ .

5)ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸುತ್ತಾರೆ .

6 ) ಸದನದಲ್ಲಿ ಚರ್ಚೆಯಾದ ಮಸೂದೆಯ ಬಗ್ಗೆ ಸಮಾನ ಮತವಿದ್ದಾಗ ಸೀಕರ್‌ರವರು ತಮ್ಮ ಮತವನ್ನು ಚಲಾಯಿಸಬಹುದು .

7 ) ಯಾವುದಾದರೂ ಮಸೂದೆ ಹಣಕಾಸು ಮಸೂದೆಯೇ ಅಲ್ಲವೇ ಎಂಬುದನ್ನು ತೀರ್ಮಾನಿಸುತ್ತಾರೆ .

8 ) ಲೋಕಸಭಾ ಕಲಾಪಗಳಿಗೆ ಸಂಬಂಧಿಸಿದ ನೀತಿ ನಿಯಮಗಳ ವಿವರಣೆ ನೀಡುತ್ತಾರೆ .

9 ) ಅಸಂಬದ್ಧವಾದಂತಹ ಚರ್ಚೆಗಳನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿದ್ದಾರೆ . ಸದನದಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡುವ ಹೊಣೆ ಹೊಂದಿದ್ದಾರೆ . ಶಾಂತಿ ಉಲ್ಲಂಘನೆ ಮಾಡುವವರನ್ನು ಶಿಕ್ಷಿಸುವ ಅಧಿಕಾರ ಹೊಂದಿದ್ದಾರೆ .

I0) ಇವರು ರೂಲ್ಸ್ ಕಮಿಟಿ ಮತ್ತು ವ್ಯವಹಾರ ಸಲಹಾ ಸಮಿತಿ ಅಧ್ಯಕ್ಷರಾಗಿರುತ್ತಾರೆ .

11 ) ಸಂಸತ್ತಿನ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ , ಅಂದಾಜು ಸಮಿತಿ ಮತ್ತು ಸಾರ್ವಜನಿಕ ಉದ್ಯಮ ಸಮಿತಿಗಳ ಅಧ್ಯಕ್ಷರನ್ನು ನೇಮಕ ಮಾಡುವುದು ಇವರ ಕರ್ತವ್ಯವಾಗಿದೆ .

12 ) ಸಭಾಪತಿ ಮತ್ತು ಉಪಸಭಾಪತಿ ಏಕಕಾಲಕ್ಕೆ ಗೈರು ಹಾಜರಾದ ಸಂದರ್ಭದಲ್ಲಿ ಸದನದ ಕಲಾಪಗಳನ್ನು ನಡೆಸಿಕೊಂಡು ಹೋಗಲು ಅಧ್ಯಕ್ಷತೆಯನ್ನು ನಡೆಸುವ ಸದಸ್ಯರ ಪಟ್ಟಿಯನ್ನು ತಯಾರಿಸುತ್ತಾರೆ .

13) ಸಚಿವಾಲಯದ ಮೇಲ್ವಿಚಾರಣೆಯನ್ನು ನಡೆಸುತ್ತಾರೆ .

ಲೋಕಸಭೆಯ ಪ್ರಕಾರ ನಾಯಕರಾಗಿ ಲೋಕಸಭೆಯ ನಾಯಕ

( Leader of Lok Sabha )

ಕಾನೂನಿನ ನಿಯಮಗಳ ಪ್ರಧಾನ ಮಂತ್ರಿಗಳು ಲೋಕಸಭೆಯ ಕಾರ್ಯನಿರ್ವಹಿಸುತ್ತಾರೆ . ಅಥವಾ ನೇಮಕವಾದಂತಹ ಪ್ರಧಾನಮಂತ್ರಿಗಳಿಂದ ಲೋಕಸಭಾ ಸದಸ್ಯರು ಅಥವಾ ಲೋಕಸಭಾ ಲೋಕಸಭೆಯ ಸದಸ್ಯರಾಗಿ ಮಂತ್ರಿಯಾದವರನ್ನು ನಾಯಕರಾಗಿ ಕಾರ್ಯನಿರ್ವಹಿಸುತ್ತಾರೆ . ಇವರು ಲೋಕಸಭೆಯ ಎಲ್ಲಾ ವಿದ್ಯಾಮಾನಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ .

ಪ್ರಧಾನ ಮಂತ್ರಿಗಳು ಲೋಕಸಭೆಯ ಉಪನಾಯಕರನ್ನು ನೇಮಕ ಮಾಡುತ್ತಾರೆ . ಪ್ರಸ್ತುತ 2014 ಮೇ 26 ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 16 ನೇ ಲೋಕಸಭೆಗೆ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .

ಇದೇ ಪದ್ಧತಿ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲೂ ಕೂಡ ಸಭಾ ನಾಯಕರಿದ್ದು ಅವರನ್ನು ಬಹುಮತ ಪಡೆದ ನಾಯಕ ( Majority leader ) ಎಂದು ಕರೆಯುತ್ತಾರೆ .

ರಾಜ್ಯಸಭಾ  ನಾಯಕ  ( Leader of Rajya Sabha )

ರಾಜ್ಯಸಭೆಗೆ ನಾಯಕರಾಗಿ ಪ್ರಸ್ತುತವಾಗಿ ಅರುಣ್ ಜೇ ಟ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ . ಕ್ಯಾಬಿನೆಟ್ ದರ್ಜೆಯ ಸಚಿವರನ್ನು ಅಥವಾ ಇತರೆ ಸಚಿವರನ್ನು ನೇಮಕ ಮಾಡಬಹುದು .

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

ಸ್ವಾತಂತ್ರ್ಯದ ಹಕ್ಕು

ಶೋಷಣೆ ವಿರುದ್ಧದ ಹಕ್ಕು

ಬಾಲಕಾರ್ಮಿಕ ನಿಷೇಧ

ಕೇಂದ್ರಮಂತ್ರಿ ಮಂಡಲ

ಅಟಾರ್ನಿ ಜನರಲ್

ರಾಜ್ಯ ಸಭೆ

ಲೋಕಸಭೆ 

Comments

Leave a Reply

Your email address will not be published. Required fields are marked *