ಪರಿವಿಡಿ

ಭಾರತದ ರಾಷ್ಟ್ರಪತಿ ( President of India )

rashtrapati , President of India , first president of india , vice president of india , president of india list , present president of india

rashtrapati , President of India , first president of india , vice president of india , president of india list , present president of india

ಕಾರ್ಯಾಂಗ ಅಧಿಕಾರ

 

ಭಾರತ ದೇಶದ ಗಣತಂತ್ರ ವ್ಯವಸ್ಥೆಯಲ್ಲಿ ರಾಹ ಅತ್ಯುನ್ನತ ಸ್ಥಾನವೇ ರಾಷ್ಟ್ರಪತಿ ಹುದ್ದೆಯಾಗಿದೆ .

ರಾಷ್ಟ್ರಪತಿಯು ಭಾರತ ದೇಶದ ಮೊದಲ ಪ್ರಜೆ ದೇಶದ ಕಾರ್ಯಾಂಗದ ಕಾರ್ಯಗಳೂ ಇವರ ಹೆಸರಿನಲ್ಲೇ ನಡೆಯುವುದರ ಜೊತೆ ಗೆ ದೇಶದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ 3 ವಿಧದ ರಕ್ಷಣಾಪಡೆಯ ಮಹಾದಂಡನಾಯಕರಾಗಿದ್ದಾರೆ .

ರಾಷ್ಟ್ರಪತಿಗಳು ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ . ಒಕ್ಕೂಟದ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಕೇಂದ್ರ ಹಾಗೂ ರಾಜ್ಯಗಳು , ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಾಗಿದ್ದಾರೆ .

 

ಭಾರತಸ್ಥ ರಾಷ್ಟ್ರಪತಿಯ ಹುದ್ದೆ

ವಿಧಿ .52 . ಭಾರತದ ರಾಷ್ಟ್ರಪತಿ : -ಭಾರತಕ್ಕ ಒಬ್ಬ ರಾಷ್ಟ್ರಪತಿ ಇರತಕ್ಕುದು . ಭಾರತದ ಸಂವಿಧಾನದ 52 ನೇ ವಿಧಿಯು ಭಾರತ ದೇಶಕ್ಕೆ ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿದೆ .

ಈ ಹುದ್ದೆಯು ಆಟನ್ ದೊರೆಯ ಹುದ್ದೆಯನ್ನು ಹೋಲುತ್ತದೆ .

ರಾಷ್ಟ್ರಪತಿಯ ಕಾರ್ಯಾಂಗ ಅಧಿಕಾರ

ವಿಧಿ 53. ಒಕ್ಕೂಟದ ಕಾರ್ಯಾಂಗ ಅಧಿಕಾರ ಸಂವಿಧಾನದ 53 ನೇ ವಿಧಿಯ ಅನ್ವಯ ಭಾರತದಲ್ಲಿ ಯಾವುದೇ ಕಾರ್ಯಾಂಗೀಯ ಅಧಿಕಾರಗಳು ರಾಷ್ಟ್ರಪತಿಯ ಅನುಮತಿ ಅನುಸಾರ ಜರುಗುತ್ತವೆ .

ದೇಶದಲ್ಲಿ ಯಾವುದೇ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಬೇಕಾದರೆ ರಾಷ್ಟ್ರಪತಿಗಳ ಅಂಕಿತ ಹಾಕಬೇಕು . ಆಗ ಮಾತ್ರ ಕಾಯ್ದೆಯಾಗುತ್ತವೆ .

ಇಂತಹ ಕಾರ್ಯಾಂಗೀಯ ಅಧಿಕಾರವನ್ನು ಭಾರತದ ರಾಷ್ಟ್ರಪತಿಗಳು ಹೊಂದಿದ್ದಾರೆ .

ವಿಮರ್ಶೆ : – ಭಾರತ ದೇಶದಲ್ಲಿ ರಾಷ್ಟ್ರಪತಿಯ ಹೆಸರಿನಲ್ಲಿ ದೇಶದ ಎಲ್ಲಾ ಕಾರ್ಯಗಳು ನಡೆದರೂ ಅವುಗಳ ನಿರ್ದೇಶನ ನಿಯಂತ್ರಣ , ನಿರ್ವಹಣೆಗಳನ್ನು ಮಾಡುತ್ತಿರುವವರು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವ ಸಂಪುಟವಾದುದ್ದರಿಂದ ರಾಷ್ಟ್ರಪತಿಯನ್ನು ಉತ್ಸವ ಮೂರ್ತಿ , ನಾಮ ಮಾತ್ರ ಹುದ್ದೆ , ರಬ್ಬರ್ ಸ್ಟಾಂಪ್ ಎಂದು ಕರೆಯುತ್ತಾರೆ .

ರಾಷ್ಟ್ರಪತಿಯವರು ಕೇವಲ ಆಳುವವರೇ ಹೊರತು ಅಡಕತ ನಡೆಸುವವರಲ್ಲ

ಎಂಬ ಮಾತಿದೆ . ಇದರಿಂದ ರಾಷ್ಟ್ರಪತಿಗಳನ್ನು ನಾಮಮಾತ್ರ ಶಿರೋಮಣಿ ಎಂದು ಕರೆಯಲಾಗುತ್ತಿದೆ .

ಡಾ | ಬಿ.ಆರ್.ಅಂಬೇಡ್ಕರ್ ಕೂಡ ಹೇಳುವಂತೆ “ ರಾಷ್ಟ್ರಪತಿಗಳು ರಾಷ್ಟ್ರದ ಪ್ರಮುಖರೆಂದೂ , ಪ್ರಧಾನಿಗಳನ್ನೂ ಸರ್ಕಾರದ ಪ್ರಮುಖರೆಂದೂ ಕರೆದಿದ್ದಾರೆ ” .

ಕೆಲವು ವಿಶೇಷ ಸಂದರ್ಭ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡಾಗ ರಾಷ್ಟ್ರಪತಿ ಹುದ್ದೆಯ ಪಾತ್ರವು ಮಹತ್ವಪೂರ್ಣವಾದದ್ದು & ಕೆಲವೊಮ್ಮೆ ವಿವೇಚನಾಧಿಕಾರವನ್ನು ಬಳಸಬಹುದು .

 

ರಾಷ್ಟ್ರಪತಿ ಚುನಾವಣೆ

ವಿಧಿ .54 , ರಾಷ್ಟ್ರಪತಿಯ ಚುನಾವಣೆ ಭಾರತದ ಸಂವಿಧಾನದ 54 ನೇ ವಿಧಿಯು ರಾಷ್ಟ್ರಪತಿ ಚುನಾವಣೆ ಬಗ್ಗೆ ತಿಳಿಸುತ್ತದೆ .

ಈ ವಿಧಿ ಅನ್ವಯ ದೇಶದ ರಾಷ್ಟ್ರಪತಿಗಳು ನೇರವಾಗಿ ಜನರಿಂದ ಆಯ್ಕೆಯಾಗುವುದಿಲ್ಲ .

ಇವರನ್ನು ಲೋಕಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ರಾಜ್ಯಸಭೆಯ ಚುನಾಯಿತ ಸದಸ್ಯರು , ರಾಜ್ಯಗಳ ವಿಧಾನಸಭೆಯ ಚುನಾಯಿತ ಸದಸ್ಯರು ಹಾಗೂ ಕೇಂದ್ರಾರ೦ತ ಪ್ರದೇಶಗಳಾದ ದೆಹಲ ಮತ್ತು ಪಾಂಡಿ ಚೇರಿಯ ಚುನಾಯಿತ ಸದಸ್ಯರುಗಳನ್ನು ಒಳಗೊಂಡ ವಿಶೇಷ ಮತದಾರರ ವರ್ಗ ( Electrol college ) ನಿಂದ ಆರಿಸಲಾಗುತ್ತದೆ .

ನೇರವಾಗಿ ಸಂವಿಧಾನ ರಚನಾಕಾರರಲ್ಲಿ ಕೆಲವರು ರಾಷ್ಟ್ರಪತಿಯನ್ನು ಜನರಿಂದ ಆಯ್ಕೆಯಾಗಬೇಕೆಂಬ ಅಭಿಪ್ರಾಯ ವ್ಯಕ್ತ ಪಡಿಸಿದರೆ ಮತ್ತೆ ಕೆಲವರು ಪರೋಕ್ಷವಾಗಿ ಆಯ್ಕೆಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು .

ಭಾರತವು ಸಂಸದೀಯ ಪದ್ಧತಿಯ ಸರ್ಕಾರವನ್ನು ಹೊಂದಿರುವುದರಿಂದ ಸಂಸತ್ತು ಜನರಿಗೆ ಜವಾಬ್ದಾರವಾಗಿರುತ್ತದೆ .

ಸಂಸತ್ತಿನ ಮುಖ್ಯಸ್ಥರಾಗಿ ಪ್ರಧಾನ ಮಂತಿಗಳು ಕಾರ್ಯ ನಿರ್ವಹಿಸುವುದರಿಂದ ಪ್ರಧಾನಿಗಳು ಮಾತ್ರ ನೇರ ಜನರಿಂದ ಆಯ್ಕೆಯಾದ ಹುದ್ದೆಯಾಗಬೇಕು

ರಾಷ್ಟ್ರಪತಿಗಳು ನೇರವಾಗಿ ಜನರಿಂದ ಆಯ್ಕೆಯಾದರೆ ಎರಡು ಹುದ್ದೆಗಳು ಕೂಡ ಸಮಾನವಾಗುತ್ತವೆ ಎಂದು ಮನಗಂಡು ರಾಷ್ಟ್ರಪತಿ ಹುದ್ದೆಯನ್ನು ಪರೋಕ್ಷವಾಗಿ ವಿಶೇಷ ಮತದಾರರ ವರ್ಗದಿಂದ ಆಯ್ಕೆಯಾಗುವಂತೆ ಮಾಡಲಾಯಿತು .

ಈ ಮೂಲಕ ಸಂಸದೀಯ ಪದ್ಧತಿ ಸರ್ಕಾರಕ್ಕೆ ಹೆಚ್ಚು ಆದ್ಯತೆ ನೀಡಲಾಯಿತು .

 

ರಾಷ್ಟ್ರಪತಿಯ ಚುನಾವಣಾ ವಿಧಿವಿಧಾನಗಳು

ವಿಧಿ .55 ರಾಷ್ಟ್ರಪತಿಯ ಚುನಾವಣೆಯ ರೀತಿ :

ಸಂವಿಧಾನದ 55 ನೇ ವಿಧಿಯು ರಾಷ್ಟ್ರಪತಿಯವರ ಚುನಾವಣೆಗೆ ವಿಧಾನಸಭಾ ಸದಸ್ಯರ ಹಾಗೂ ಸಂಸತ್ ಸದಸ್ಯರ ಮತಗಳ ಮೌಲ್ಯವನ್ನು ನಿರ್ಧರಿಸುವ ಬಗ್ಗೆ ತಿಳಿಸುತ್ತದೆ .

ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯಗಳ ವಿಧಾನ ಸಭಾ ಸದಸ್ಯರ ಓಟಿನ ಮೌಲ್ಯವು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ .

ಆ ರಾಜ್ಯದ ಜನಸಂಖ್ಯೆ ಹಾಗೂ ಚುನಾಯಿತ ವಿಧಾನ ಸಭಾ ಸದಸ್ಯರ ಸಂಖ್ಯೆಯನ್ನು ಆಧರಿಸಿ ಓಟಿನ ಮೌಲ್ಯವು ನಿರ್ಧಾರವಾಗುತ್ತದೆ .

ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ವಿಧಾನ ಸಭಾ ಸದಸ್ಯರ ಓಟಿನ ಮೌಲ್ಯವು ಹೆಚ್ಚಾದರೆ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯದ ವಿಧಾನಸಭಾ ಸದಸ್ಯರ ಓಟಿನ ಮೌಲ್ಯವು ಕಡಿಮೆಯಾಗುತ್ತದೆ .

 

ರಾಷ್ಟ್ರಪತಿ ಚುನಾವಡಾ ಕಾಯ್ದೆಗಳು

ರಾಷ್ಟ್ರಪತಿ ಚುನಾವಣೆಯು ಕ್ರಮಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ – ನಡೆಯಲು 1952 ರಲ್ಲಿ ರಾಷ್ಟ್ರಪತಿ ಚುನಾವಣಾ ಕಾಯ್ದೆ ಜಾರಿಗೆ ತಂದಿತು . ಈ ಕಾಯ್ದೆಯು ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಒಳಗೊಂಡಿದೆ .

ಅದೇ ರೀತಿ ಕಾಲಕಾಲಕ್ಕೆ ಎದುರಾಗುವ ಚುನಾವಣಾ ಸಮಸ್ಯೆಗಳನ್ನು ಬಗೆಹರಿಸಲು , ಹಾಗೂ ಸುಧಾರಣೆ ತರಲು ಹಿಂದಿನ ರಾಷ್ಟ್ರಪತಿ ಅನುಭವದ ಆಧಾರದ ಮೇಲೆ ಅನೇಕ ಹೊಸ ಅಂಶಗಳು ಹಾಗೂ ಮಾರ್ಪಾಡುಗಳನ್ನು ಒಳಗೊಂಡು ಆದರೆ ತಿದ್ದುಪಡಿಗಳನ್ನು 1974 ಹಾಗೂ 1997 ರಲ್ಲಿ ಮಾಡಲಾಗಿದೆ .

1974 ರ ರಾಷ್ಟ್ರಪತಿ ಚುನಾವಣಾ ಕಾಯ್ದೆ

ಆದರೆ 1974 ಕ್ಕಿಂತ ಮೊದಲು ಯಾರು ಬೇಕಾದರೂ ಸ್ಪರ್ಧಿಸಬಹುದಿತ್ತು . 1974 ರ ಕಾಯ್ದೆಯಲ್ಲಿ ರಾಷ್ಟ್ರಪ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯನ್ನು ) ಜ ಮತದಾರರು ಸೂಚೀಕರು 0 ಜನ ಮತದಾರರು ಅನುಮೋದಿಸಬೇಕಾಗಿತ್ತು , 2500 ರೂ ಭದ್ರತಾ ಸಣ ಇಡಬೇಕಾಗುತ್ತಿತ್ತು .

1997 ರ ರಾಷ್ಟ್ರಪತಿ ಚುನಾವಣಾ ಕಾಯ್ದೆ

1997 ರ ರಾಷ್ಟ್ರಪತಿ ಚುನಾವಣಾ ಕಾಯ್ದೆ ಜಾರಿಯಲ್ಲಿದೆ . ಇದರ ಪ್ರಕಾರ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಪ್ರಸ್ತುತವಾಗಿ

1 ) ಅಭ್ಯರ್ಥಿಯು ನಿಗದಿತ ನಮೂನೆಯಲ್ಲಿ ನಾಮಪತ್ರ ಸಲ್ಲಿಸಬೇಕು .

2 ) ಚುನಾವಣೆಗೆ ಸ್ಪರ್ಧಿಸಲು 50 ಜನ ಮತದಾರರು ಸೂಚಿಸಬೇಕು ( Froposersy ಇದು ಚುನಾವಣೆಯಲ್ಲಿ ಅನವಶ್ಯಕವಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ . ಹಾಗೂ 50 ಜನ ಮತದಾರರು ಅನುಮೋದಿಸಬೇಕು ( Seconders )

3 ) ರಿಸರ್ವ ಬ್ಯಾಂಕಿನಲ್ಲಿ 15,000 / – ರೂಪಾಯಿಗಳನ್ನು ದೇವಣಿ ಇಡಬೇಕು .

ಚುಣಾವಣೆ ವಿವಾದಗಳು :

ರಾಷ್ಟ್ರಪತಿ ಚುಣಾವಣೆಗೆ ಸಂಬಂಧಿಸಿದ ವಿವಾದಗಳನ್ನು ಸಂವಿಧಾನದ ವಿಧಿ 11 ರ ಪ್ರಕಾರ ಸುಪ್ರೀಂಕೋರ್ಟ್ ವಿಚಾರಣೆ ನಡೆಸುವುದು ಹಾಗೂ ಅದರ ತೀರ್ಮಾನವೇ ಅಂತಿಮವಾಗಿದೆ .

 

ರಾಷ್ಟ್ರಪು ಅಧಿಕಾರವಧಿ

ವಿಧಿ .56 . ರಾಷ್ಟ್ರಪತಿಯ ಪದಾವಧಿ

ಸಂವಿಧಾನದ 5 ನೇ ವಿಧಿ ತಿಳಿಸುವಂತೆ ಅವರ ಅಧಿಕಾರವಧಿ 5 ವರ್ಷಗಳು ಇವರು ತಮ್ಮ ಅಧಿಕಾರ ಸ್ವೀಕರಿಸಿದ ದಿನದಿಂದ 5 ವರ್ಷಗಳ ಅವಧಿಯಾಗಿದೆ .

ಕೆಲವು ಅನಿವಾರ್ಯ ಸಂದರ್ಭಗಳು ಒದಗಿದಾಗ 5 ವರ್ಷಕ್ಕಿಂತ ಮುಂಚಿತವಾಗಿಯೇ ರಾಜಿನಾಮೆ ನೀಡಬಹುದು ಅಥವ ಮಹಾಭಿಯೋಗದ ಮೂಲಕವು ವರ್ಷಕ್ಕಿಂತ ಮುಂಚಿತವಾಗಿಯೇ ಕಳೆದುಕೊಳ್ಳಬಹುದು .

ತಮ್ಮ ಕೂಡ 5 ಅಧಿಕಾರವನ್ನು ರಾಜೀನಾಮೆಯನ್ನು ಉಪರಾಷ್ಟ್ರಪತಿಗೆ ನೀಡಬೇಕೆಂದು ತಿಳಿಸುತ್ತದೆ .

 

ಮರು ಚುನಾವಣೆಗೆ ಅರ್ಹತೆ

ವಿಧಿ .57 . ಮರು ಚುನಾವಣೆಗೆ ಅರ್ಹತೆ

ಸಂವಿಧಾನದ 57 ನೇ ವಿಧಿಯು ರಾಷ್ಟ್ರಪತಿ ಯವರು ಎಷ್ಟು ಬಾರಿಯಾದರೂ ಕೂಡ ಮರು ಆಯ್ಕೆಯಾಗ ಬಹುದು . ಆದರೆ ಅಮೆರಿಕಾದ ರಾಷ್ಟ್ರಧ್ಯಕ್ಷರು 2 ಬಾರಿ ~ ಗಿಂತ ಹೆಚ್ಚು ಬಾರಿ ಮರು ಆಯ್ಕೆಯಾಗುವಂತಿಲ್ಲ .

 ರಾಷ್ಟ್ರಪು ಹುದ್ದೆಗೆ ಸ್ಪರ್ಧಿಸಲು ಅರ್ಹತೆಗಳು

ವಿಧಿ .58 ರಾಷ್ಟ್ರಪತಿಗಾಗಿ ಚುನಾಯಿತನಾಗಲು ಅರ್ಹತೆಗಳು – ಸಂವಿಧಾನದ 58 ನೇ ವಿಧಿಯು ರಾಷ್ಟ್ರಪತಿ ಚುನಾ ವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು

ಈ ಕೆಳಕಂಡಅರ್ಹತೆ ಹೊಂದಿರಬೇಕೆಂದು ತಿಳಿಸುತ್ತದೆ .

1 ) ಭಾರತೀಯ ನಾಗರೀಕನಾಗಿರಬೇಕು .

2 ) 35 ವರ್ಷ ವಯಸ್ಸಾಗಿರಬೇಕು .

3 ) ಲೋಕ ಸಭಾ ಸದಸ್ಯರು ಹೊಂದಿರುವ ಅರ್ಹತೆಗಳನ್ನು ಹೊಂದಿರಬೇಕು .

4 ) ಕೇಂದ್ರ ಅಥವಾ ರಾಜ್ಯದ ಯಾವುದೇ ಲಾಭದಾಯಕ ಹುದ್ದೆಯಲ್ಲಿರಬಾರದು .

 

ರಾಷ್ಟ್ರಪತಿಗೆ ಸಂಬಂಧಿಸಿದ ನಿಬಂಧನೆಗಳು

ವಿಧಿ .59 . ರಾಷ್ಟ್ರಪತಿಯ ಪದದ ಷರತ್ತುಗಳು

ಸಂವಿಧಾನದ 59 ನೇ ವಿಧಿಯು ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ನಂತರ ರಾಷ್ಟ್ರಪತಿಗಳು ಅನುಸರಿಸಬೇಕಾದ ನಿಬಂಧನೆಗಳನ್ನು ಹಾಗೂ ಅವರು ಪಡೆಯುವ ಸಂಬಳ ಮತ್ತು ಸವಲತ್ತುಗಳ ಬಗ್ಗೆ ತಿಳಿಸುತ್ತದೆ .

1 ) ಇವರು ಸಂಸತ್ತಿನ ಅಥವಾ ರಾಜ್ಯ ಶಾಸನ ಸಭೆಯ ಸದಸ್ಯರಾಗಿರಬಾರದು .

2 ) ರಾಷ್ಟ್ರಪತಿಯವರು ಹುದ್ದೆಯಲ್ಲಿದ್ದಾಗ ಯಾವುದೇ ಲಾಭದಾಯಕ ಹುದ್ದೆ ಹೊಂದಿರಬಾರದು .

 

ರಾಷ್ಟ್ರಪತಿಯ ಸಂಬಳ ಮತ್ತು ಸವಲತ್ತುಗಳು

1 ) ರಾಷ್ಟ್ರಪತಿಗಳಿಗೆ ಅಧಿಕೃತ ನಿವಾಸವಾಗಿ ದೆಹಲಿಯಲ್ಲಿ ರುವ ರಾಷ್ಟ್ರಪತಿ ಭವನ ವನ್ನು ವಾಸಕ್ಕೆ ಪಡೆ ಯುತ್ತಾರೆ . ಅಲ್ಲದೆ ಸಿಮ್ಲಾದ ಚಾರಾಬ್ರಾ ಬಳಿ ರಾಷ್ಟ್ರಪತಿ ನಿವಾಸ ಹಾಗೂ ಹೈದ್ರಾಬಾದ್‌ನಲ್ಲಿ ರಾಷ್ಟ್ರಪತಿ ನಿಲಯಂ ಎಂಬ ಹೆಸರಿನಲ್ಲಿ ಕೂಡ ರಾಷ್ಟ್ರಪತಿಗಳು ತಮ ಅಧಿಕೃತವಾದಂತಹ ನಿವಾಸವನ್ನು ಹೊಂದಿರುತ್ತಾರೆ .

 

ಸಂಬಳ ಮತ್ತು ಸವಲತ್ತುಗಳು

ರಾಷ್ಟ್ರಪತಿಗಳು ಸಂಬಳವನ್ನು ರಾಷ್ಟ್ರಪತಿಗಳಿಗೆ ಸಾವಿರ ಸಂಬಳವನ್ನು ನಿಗಧಿಪಡಿಸಿತ್ತು . ಆದರೆ 1998 ರಲ್ಲಿ ಆ ಸಂಬಳವನ್ನು 10 ಸಾವಿರ ರೂಗಳಿಂದ 50 ಸಾವಿರ ರೂಗಳಿಗೆ ಕಾಲಕಾಲಕ್ಕೆ ಪಡೆಯುತ್ತಾರೆ .

10 ಪರಿಷ್ಕೃತವಾದ ಸಂವಿಧಾನವು ಹೆಚ್ಚಿಸಲಾಯಿತು . ಭಾರತ 2008 ಸೆಪ್ಟೆಂಬರ್ 1 ರಂದು ಸರ್ಕಾರವು ರಾಷ್ಟ್ರಪತಿಗಳ ಸಂಬಳವನ್ನು 15 ಲಕ್ಷ ರೂ ಗಳಿಗೆ ಹೆಚ್ಚಿಸಿತು .

ಇದುವರೆಗೂ 1.50 ಲಕ್ಷ ರೂ ಸಂಬಳವನ್ನು ಪಡೆಯುತ್ತಿದ್ದರು . ಅಲ್ಲದೆ ಸಿಬ್ಬಂದಿ ವಾಹನ , ಕಾರ್ಯಾಲಯ ಸಿಬ್ಬಂದಿ ವಿಮಾನದ ಉನ್ನತ ವರ್ಗದ ಸೀಟಿನ ಉಚಿತ ಪ್ರಯಾಣ , ಉಚಿತ ದೂರವಾಣಿ , ನೀರು , ವಿದ್ಯುತ್ ಇತ್ಯಾದಿ ಮೂಲಭೂತ ಸೌಕಯ್ಯ ಹೊಂದಿರುತ್ತಾರೆ .

ನಿವೃತ್ತಿಯ ನಂತರ ವಾರ್ಷಿಕ 3 ಲಕ್ಷ ರೂಗಳ ಪಿಂಚಣಿ , ಮನೆಯವರಿಗೂ ಪಿಂಚಣಿ ಸೌಲಭ್ಯ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತದೆ .

ಸಂಸತ್ತಿನ ಕಾನೂನಿನ ಪ್ರಕಾರ ಇವರ ಸವಲತ್ತುಗಳನ್ನು ಪಡೆಯುತ್ತಾರೆ . ಅನೇಕ ಭಾರತದ ರಾಷ್ಟ್ರಪತಿಗಳು ತಮ್ಮ ಸಂಬಳವನ್ನು ಸಂಚಿತ ಸ p Consolidated Fund ) ಯಿಂದ ಪಡೆಯುತ್ತಾರೆ .

 

ಭಾರತದ ರಾಷ್ಟ್ರಪತಿಗಳ ಸಂಬಳವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು , ಈ ಸಂಬಳವನ್ನು 5 ಲಕ್ಷ ರೂ . ಗಳಿಗೆ ಹೆಚ್ಚಿಸಲು ಸಂಸತ್ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ .

ರಾಷ್ಟ್ರಪತಿಗಳ ಸಂಬಳ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರದಲ್ಲಿ ಕ್ಯಾಬಿನೆಟ್ 2016 ಆಕ್ಟೋಬರ್ | 25 ರಂದು ಒಪ್ಪಿಗೆ ಸೂಚಿಸಿದೆ .

 

ಭಾರತದ ರಾಷ್ಟ್ರಪತಿಯ ಪ್ರಮಾಣ ವಚನ ಮತ್ತು ಅಧಿಕಾರ ಸ್ವೀಕಾರ

ವಿಧಿ 60. ರಾಷ್ಟ್ರಪತಿಯಿಂದ ಪ್ರಮಾಣವಚನ ಅಥವಾ ದೃಢೀಕರಣ

ಸಂವಿಧಾನದ 60 ನೇ ವಿಧಿ ಅನ್ವಯ ಚುನಾಯಿತ ರಾಷ್ಟ್ರಪತಿಗೆ ಪ್ರಮಾಣ ವಚನವನ್ನು ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಾಧೀಶರುಬೋಧಿಸುವರು ಒಂದು ವೇಳೆ ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಾಧೀಶರ ಅನುಪಸ್ಥಿತಿಯಲ್ಲಿ ಸುಪ್ರಿಂಕೋರ್ಟಿನ ನ್ಯಾಯಾಧೀಶರು ಪ್ರಮಾಣವಚನ ಬೋಧಿಸುವರು .

“ ರಾಷ್ಟ್ರಪತಿಗಳು ಸಂವಿಧಾನವನ್ನು ಹಾಗೂ ಕಾನೂನನ್ನು ಸಂರಕ್ಷಿಸುವ , ಕಾಪಾಡುವ , ಪ್ರಾಮಾಣಿಕ ನಿರ್ವಹಿಸುತ್ತೇನೆಂದು ನನ್ನ ಸೇವೆಯನ್ನು ರಾಷ್ಟ್ರಕ್ಕೆ ಅರ್ಪಿಸುತ್ತೇನೆಂದು ರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ . ” ಹಂಗಾಮಿ ರಾಷ್ಟ್ರಪತಿಗಳು ಕೂಡ ಇದೇ ರೀತಿ ಪ್ರಮಾಣವಚನ ಸ್ವೀಕರಿಸಬೇಕು .

ರಾಷ್ಟ್ರಪತಿಯ ಮಹಾಭಿಯೋಗ

ವಿಧಿ 61 ರಾಷ್ಟ್ರಪತಿಯ ಕಾರ್ಯವಿಧಾನ ಮಹಾಭಿಯೋಗದ ಬಗ್ಗೆ ಸಂವಿಧಾನದ 8 ನೇ ವಿಧಿಯು ಭಾರತದ ರಾಷ್ಟ್ರಪತಿಗಳನ್ನು ಮಹಾಭಿಯೋಗ ಮಾಡುವುದರ ಬಗ್ಗೆ ತಿಳಿಸುತ್ತದೆ .

ಮಹಾಭಿಯೋಗದ ವಿಧಿ ವಿಧಾನಗಳನ್ನು ಭಾರತದ ಸಂವಿಧಾನಕ್ಕೆ ಅಮೆರಿಕಾ ಸಂಯುಕ್ತ ಸಂಸ್ಥಾನದಿಂದ ಎರವಲು ಪಡೆದು ಸೇರಿಸಲಾಗಿದೆ . ರಾಷ್ಟ್ರಪತಿ ಸ್ಥಾನವು ಎಷ್ಟೇ ದೊಡ್ಡದಾದರೂ ಅವರನ್ನು ನಿಯಂತ್ರಿಸಲು , ಸಂವಿಧಾನದ ಚೌಕಟ್ಟಿನಡಿಯಲ್ಲಿ ಕೆಲಸ ಮಾಡುವಂತೆ ಮಾಡಲು ಹಾಗೂ ಸಂವಿಧಾನದ ನಿಯಮನ್ನು ಉಲ್ಲಂಘಿಸಿದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ವಿಧಾನವನ್ನೇ ಮಹಾಆಯೋಗ ಅಥವಾ ದೋಷಾರೋಪದಿಂದ ಸರಕುತಿಗೊಳಿಸುವುದು ( Im peachment ) ಎನ್ನುವರು .

ಇದಕ್ಕಾಗಿ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಅವರ ವಿರುದ್ಧ ಆಪಾದನೆಗೆ ಸಂಬಂಧಿಸಿದ ಪ್ರಸ್ತಾವನೆ ಮಂಡಿಸಬೇಕು ಆ ಪ್ರಸ್ತಾವನೆಗೆ ಆ ಸದನದ ಒಟ್ಟು ಸದಸ್ಯರ 1/4 ರಷ್ಟು ಸದಸ್ಯರ ಸಹಿಯಾಗಿರಬೇಕು .

ಈ ಸೂಚನೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಬೇಕು & ಕಳುಹಿಸಿದ ನಂತರ ಮಹಾಭಿಯೋಗವನ್ನು 14 ದಿನಗಳ ಕೈಗೆತ್ತಿಕೊಳ್ಳಬೇಕು . ಆಂತರ ದೋಷಾರೋಪ ಪಟ್ಟಿ ಸಾಬೀತಾದಲ್ಲಿ ರಾಷ್ಟ್ರಪತಿಯನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದು . ಇದಕ್ಕಾಗಿ ಸದನ 2/3 ಭಾಗದಷ್ಟು ಸದಸ್ಯರ ಬೆಂಬಲ ಅಗತ್ಯವಾಗಿದೆ .

ಭಾರತ ದೇಶದಲ್ಲಿ ಇದುವರೆಗೂ ಅಂತಹ ಸಂದರ್ಭಗಳು ಒದಗಿಬಂದಿಲ್ಲ . ಚುನಾಯಿತ ಆಳ್ವಿಕೆ ಮಾಡಿದ ಎಲ್ಲಾ ರಾಷ್ಟ್ರಪತಿಗಳು ಸಂವಿಧಾನದ ಚೌಕಟ್ಟಿನಲ್ಲೇ ಘನತೆಯಿಂದ ವರ್ತಿಸಿ ಸ್ಥಾನಕ್ಕೆ ಗೌರವ ತಂದುಕೊಟ್ಟಿದ್ದಾರೆ . ಮಹಾಭಿಯೋಗದಲ್ಲಿ ಸಂಸತ್ತಿನ ಸದಸ್ಯರು ಹಾಗೂ ನಾಮಕರಣ ಸದಸ್ಯರು ಭಾಗವಹಿಸಬಹುದು , ಆದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಿದ ರಾಜ್ಯದ ವಿಧಾನ ಸಭಾ ಚುನಾಯಿತ ಸದಸ್ಯರುಗಳು ಭಾಗವಹಿಸುವುದಿಲ

 

 


0 Comments

Leave a Reply

Avatar placeholder

Your email address will not be published. Required fields are marked *