ರಾಷ್ಟ್ರಧ್ವಜ ( National Flag )

ರಾಷ್ಟ್ರಧ್ವಜ, national flag, flags of the world, our national flag, country flags with names, all country flags, all national flag, un flag

ರಾಷ್ಟ್ರಧ್ವಜ, national flag, flags of the world, our national flag, country flags with names, all country flags, all national flag, un flag

 

ಭಾರತದ ರಾಷ್ಟ್ರಧ್ವಜವನ್ನು ಪಿಂಗಾಳಿ ವೆಂಕಯ ವಿನ್ಯಾಸಗೊಳಿಸಿದರು .

ಭಾರತ ರಾಷ್ಟ್ರಧ್ವಜವನ್ನು ಜುಲೈ 22 , 1947 ರಂದು ಸಂವಿಧಾನ ರಚನಾ ಸಭೆ ಅಳವಡಿಸಿಕೊಂಡಿತು . ರಾಷ್ಟ್ರಧ್ವಜವು ಸ್ವಾತಂತ್ರ್ಯ , ದೇಶಪ್ರೇಮ , ಒಗ್ಗಟ್ಟು ಮತ್ತು ನಿಷ್ಠೆಯ ಸಂಕೇತವಾಗಿದೆ

ರಾಷ್ಟ್ರಧ್ವಜದ ಬಣ್ಣಗಳು ಆಯಾ ದೇಶದ ಆದರ್ಶ ಮತ್ತು ಅಭಿಲಾಷೆಗಳನ್ನು ಪ್ರತಿನಿಧಿಸುತ್ತವೆ .

ಭಾರತದ ತ್ರಿವರ್ಣ ಧ್ವಜದ ವಿಶೇಷತೆಗಳು

ಭಾರತ ತ್ರಿವರ್ಣ ಧ್ವಜವು ಮೇಲೆ ಕಡು ಕೇಸರಿ . ಮಧ್ಯ ಬಿಳಿ ಹಾಗೂ ಕೆಳಗೆ ಕಡು ಹಸಿರು ಬಣ್ಣಗಳಿವೆ . ಬಿಳಿಯ ಬಣ್ಣದ ಪಟ್ಟಿಯ ಮಧ್ಯದಲ್ಲಿ ನೀಲಿ ಬಣ್ಣದ ಚಕ್ರವಿದೆ . ಇಪ್ಪತ್ನಾಲ್ಕು ಅರಗಳಿವೆ .

ಈ ಚಕ್ರದ ವ್ಯಾಸ ಬಿಳಿ ಪಟ್ಟಿಯ ಅಗಲದಷ್ಟಿದೆ .

ಧ್ವಜವು ಆಯತಾಕಾರದಲ್ಲಿದೆ . ರಾಷ್ಟ್ರಧ್ವಜದ ಉದ್ಘ ಅಗಲದ ಅನುಪಾತ 3 : 2 ಆಗುತ್ತದೆ .

ರಾಷ್ಟ್ರಧ್ವಜದ  ಬಟ್ಟೆಯು ಹತ್ತಿ ರೇಷ್ಮೆಯಾಗಿರಬೇಕು . ಕೈನೇಯ್ದೆಯದ್ದಾಗಿರಬೇಕು .

ಅದರ ದಾರವು ಕೈಯಿಂದಲೇ ಮಾಡಿದ್ದಾಗಿರಬೇಕು

ತ್ರಿವರ್ಣಗಳ ಸಂಕೇತಗಳು :

1 ) ಕೇಸರಿಬಣ್ಣ – ತ್ಯಾಗ

2 ) ಬಿಳಿಬಣ್ಣ – ಸತ್ಯ , ಶಾಂತಿ , ಪರಿಶುದ್ಧತೆ

3 ) ಹಸಿರುಬಣ್ಣ ಸಸ್ಯ ಶಾಮಲೆಯಾದ ಭೂಮಿ ಸಂಕೇತವಾಗಿ ಕೃಷಿ , ಕೈಗಾರಿಕೆಗಳ ಸಮೃದ್ಧಿ

ಚಕ್ರವು ಸಾರನಾಥದ ಅಶೋಕ ಸ್ತಂಭದಲ್ಲಿರುವ ಚಕ್ರದ ಪ್ರತಿರೂಪವಾಗಿದೆ .

ಅಶೋಕ ಚಕ್ರವು ಧರ್ಮ ಚಕ್ರವಾಗಿದೆ . ಅಲ್ಲದೇ ಅದು , ನಿರಂತರ ಚಲನೆಯ ಪ್ರತೀಕವಾಗಿದ್ದು , 24 ರೇಖೆಗಳಿವೆ . ಇವು 24 ಗಂಟೆಯನ್ನು ಪ್ರತಿನಿಧಿಸುತ್ತವೆ

ಕೇಸರಿ , ಬಿಳಿ ಮತ್ತು ಹಸಿರು ಬಣ್ಣಗಳ ಅಳತೆ ಸಮಪ್ರಮಾಣದಲ್ಲಿರುತ್ತವೆ .

ರಾಷ್ಟ್ರಧ್ವಜದ ಸಂಹಿತೆ :

ಭಾರತದ ರಾಷ್ಟ್ರಧ್ವಜ ಸಂಹಿತೆಯನ್ನು ಜನವರಿ 26 , 2002 ರಲ್ಲಿ ಜಾರಿಗೆ ತರಲಾಗಿದೆ .

ರಾಷ್ಟ್ರಧ್ವಜದ ಸಂಹಿತೆಯಲ್ಲಿರುವ ಪ್ರಮುಖ ಅಂಶಗಳು :

ರಾಷ್ಟ್ರಧ್ವಜ ಹಾರಿಸುವಾಗ ಯಾವಾಗಲೂ ಕೇಸರಿ ಬಣ್ಣ ಮೇಲಿರುವಂತೆ ಹಾರಿಸಬೇಕು .

ಧ್ವಜ ಕೊಳೆಯಾಗಿರಬಾರದು , ಹರಿದಿರಬಾರದು .

ರಾಷ್ಟ್ರಧ್ವಜದ ಎತ್ತರಕ್ಕೆ ಬೇರೆ ಯಾವುದೇ ಧ್ವಜವನ್ನು ಹಾರಿಸಬಾರದು .

ಕಂಬದ ತುದಿಯವರೆಗೂ ಮೇಲೇರಿಸಿ ಧ್ವಜವನ್ನು ಹಾರಿಸಬೇಕು .

ಒಂದು ಕಂಬದಿಂದ ಒಂದೇ ಧ್ವಜ ಹಾರಿಸಬೇಕು .

ಮಡಚುವಾಗ ಇಬ್ಬರೂ ಹಿಡಿದು ಮಡಚಬೇಕು .

ಧ್ವಜವನ್ನು ಬಲಗೈನಲ್ಲಿ ಹಿಡಿದು ನಡೆಯಬೇಕು .

ರಾಷ್ಟ್ರದ ಪ್ರಮುಖರು ನಿಧನವಾದಾಗ ರಾಷ್ಟ್ರಧ್ವಜವನ್ನು ಕಂಬದ ಅರ್ಧದ ಎತ್ತರಕ್ಕೆ ಹಾರಿಸಬೇಕು . ಧ್ವಜವನ್ನು ನೆಲಕ್ಕೆ ತಾಗಿಸಬಾರದು .

ರಾಷ್ಟ್ರಧ್ವಜ ತಯಾರಿಕ :

ಭಾರತದ ರಾಷ್ಟ್ರಧ್ವಜವನ್ನು ಖಾದಿ ಮತ್ತು ಆಯೋಗದವರು ತಯಾರಿಸುವ ಗ್ರಾಮೋದ್ಯೋಗ ಹಕ್ಕು ನೀಡುತ್ತಾರೆ .

ಭಾರತದಲ್ಲಿ ರಾಷ್ಟ್ರಧ್ವಜವನ್ನು ತಯಾರಿಸುವ ಹಕ್ಕನ್ನು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದವರು ಪಡೆದಿದ್ದಾರೆ .

ಇದು ಭಾರತದಲ್ಲಿ ರಾಷ್ಟ್ರಧ್ವಜವನ್ನು ತಯಾರಿಸುವ ಮತ್ತು ವಿತರಿಸುವ ಏಕೈಕ ಘಟಕವಾಗಿದೆ .

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಹುಬ್ಬಳ್ಳಿ ಬಳಿಯ ಗರಗ ಎಂಬಲ್ಲಿ ಕಂಡು ಬರುತ್ತದೆ .


0 Comments

Leave a Reply

Avatar placeholder

Your email address will not be published. Required fields are marked *