ರಾಜ್ಯ ಸಭೆ ( Rajya sabha )

rajya sabha , rajya sabha in kannada , difference between lok sabha and rajya sabha ,lok sabha and rajya sabha, ರಾಜ್ಯ ಸಭೆ

 

rajya sabha , rajya sabha in kannada , difference between lok sabha and rajya sabha ,lok sabha and rajya sabha, ರಾಜ್ಯ ಸಭೆ

ರಾಜ್ಯ ಸಭೆ ಎಂದರೆ ( ಕೌನ್ಸಿಲ್ ಆಫ್ ಸ್ಟೇಟ್ ) ‘ ರಾಜ್ಯಗಳ ಸಭೆ ” ಎಂದರ್ಥ . ಅಂದರೆ ರಾಜ್ಯಗಳ ವಿಧಾನ ಸಭೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆರಿಸಿ ಬಂದವರ ಸಭೆಯಾಗಿದೆ . ಇದು ಸಂಸತ್ತಿನ ಮೇಲ್ಮನೆ ಯಾಗಿದೆ . 1954 ರವರೆಗೆ ರಾಜ್ಯ ಸಭೆಯನ್ನು “ ಕೌನ್ಸಿಲ್ ಆಫ್ ಸ್ಟೇಟ್ಸ್ ” ಎಂದು ಕರೆಯುತ್ತಾರೆ . ಆಗಸ್ಟ್ , 23 , 1954 ರಲ್ಲಿ “ ಕೌನ್ಸಿಲ್ ಆಫ್ ಸ್ಟೇಟ್ಸ್ ” ಎಂಬ ಪದವನ್ನು ಬದಲಾಯಿಸಿ ಹಿಂದಿ ಭಾಷೆಯಲ್ಲಿ ‘ ರಾಜ್ಯ ಸಭಾ ‘ ಎಂಬ ಪದವನ್ನು ಅಳವಡಿಸಿಕೊಳ್ಳಲಾಯಿತು . ಇದು ಹಿರಿಯ ಸದನ ( House of Elders ) , ಬುದ್ಧಿವಂತರ ಸದನ ಎಂದು ಕರೆಯುತ್ತಾರೆ . ಇದೊಂದು ಶಾಶ್ವತ ಆಮೇರಿಕಾದಲ್ಲಿ ಮೇಲ್ಮನೆಯನ್ನು ಕರೆಯುತ್ತಾರೆ . ಯು.ಕೆಯಲ್ಲಿ ಮೇಲ್ಮನೆಯನ್ನು “ ಹೌಸ್ ಆಫ್ ಲಾರ್ಡ್ಸ್ ” ( House of Lords ) ಎನ್ನುವರು .

ರಾಜ್ಯ ಸಭೆ ಬೆಳೆದು ಬಂದು ಇತಿಹಾಸ

ಭಾರತದ ರಾಜ್ಯ ಸಭೆಯು ತನ್ನದೇ ಆದ ಇತಿಹಾಸವನ್ನು ಹೊಂದಿದೆ . ಇದು ಮಾಂಟೆಗೋ – ಚೇಮಫರ್ಡ್‌ರವರ ವರದಿಯನ್ನು ಆಧರಿಸಿ , 1919 ರ ಭಾರತ ಸರ್ಕಾರ ಕಾಯ್ದೆಯಲ್ಲಿ ಕೌನ್ಸಿಲ್ ಆಫ್ ಸ್ಟೇಟ್ಸ್ ಎಂಬ ಹೆಸರಿನಲ್ಲಿ ಉಗಮವಾಯಿತು . 1921 ರಲ್ಲಿ ನಿರ್ದಿಷ್ಟ ಮತದಾರರಿಂದ ಆಯ್ಕೆಯಾಗುವ ಒಂದು ಶಾಸಕಾಂಗ ವಾಯಿತು ಗೌರರ್ ಜನರಲ್‌ರವರು ಕೌನ್ಸಿಲ್ ಆಫ್ ಸ್ಟೇಟ್‌ನ ಅಧ್ಯಕ್ಷರಾದರು . 1935 ರ ಭಾರತ ಸರ್ಕಾರ ಕಾಯ್ದೆಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಹೊಂದುತ್ತಾ . ಸ್ವತಂತ್ರ ಭಾರತದಲ್ಲಿ 1952 ರಲ್ಲಿ ಮೊದಲ ಬಾರಿಗೆ ಚುನಾವಣೆ ಮೂಲಕ ಕೌನ್ಸಿಲ್ ಆಫ್ ಸ್ಟೇಟ್ ಎರಡನೇ ಸದನವಾಗಿ ಕಾರ್ಯ ಪ್ರಾರಂಭಿಸಿತು . ಇದರ ಮೊದಲ ಅಧಿವೇಶನವು ಮೇ .13,1952 ರಲ್ಲಿ ಪ್ರಾರಂಭವಾಯಿತು . ನಂತರ 1954 ರಿಂದ ರಾಜ್ಯಸಭೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸಿತ್ತು .

 ರಾಜ್ಯ ಸಭೆ ಸಂರಚನೆ

 ವಿಧಿ 80. ರಾಜ್ಯಸಭೆಯ ರಚನೆ

ಭಾರತದ ಸಂವಿಧಾನವು ರಾಜ್ಯ ಸಭೆಯ ಗರಿಷ್ಟ ಸ್ಥಾನವನ್ನು 250 ಕ್ಕೆ ನಿಗಧಿಪಡಿಸಿದ್ದು ಅವುಗಳಲ್ಲಿ 238 ಸ್ಥಾನವನ್ನು ವಿವಿಧ ರಾಜ್ಯಗಳಿಂದ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿನಿಧಿಸುತ್ತಾರೆ . 12 ಮಂದಿಯನ್ನು ರಾಷ್ಟ್ರಪತಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ನಾಮಕರಣ ಮಾಡಬೇಕೆಂದು ನಿಗಧಿಪಡಿಸಿದೆ .

ರಾಜ್ಯ ಸಭೆ ಗರಿಷ್ಟ ಸ್ಥಾನ 250

238 ಸದಸ್ಯರು ( ಚುನಾಯಿತ ಸದಸ್ಯರು )

( ವಿವಿಧ ರಾಜ್ಯಗಳಿಂದ ಹಾಗೂ ಕೇಂದ್ರಾಡಳಿತ ಪ್ರದೇಶದಿಂದ ಪರೋಕ್ಷ ಮತದಾನದ ಮೂಲಕ ಪಡೆದವರನ್ನು ಚುನಾಯಿತರಾಗುತ್ತಾರೆ)

12 ಸದಸ್ಯರು ( ನಾಮಕರಣ ಸದಸ್ಯರು ) ( ಸಾಹಿತ್ಯ , ವಿಜ್ಞಾನ , ಸಮಾಜ ಸೇವೆ , ಕಲೆ ಕ್ಷೇತ್ರದಿಂದ ) ಅನುಭವ ಪಡೆದವರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ

ರಾಜ್ಯಗಳಲ್ಲಿ ರಾಜ್ಯ ಸಭೆ ಸ್ಥಾನಗಳ ನಿರ್ಧಾರ

ಸಂವಿಧಾನದ 4 ನೇ ಅನುಸೂಚಿಯಲ್ಲಿ ರಾಜ್ಯ ಸಭೆಗೆ ವಿವಿಧ ರಾಜ್ಯಗಳಿಂದ ಹಾಗೂ ಕೇಂದ್ರಾಡಳಿತ ಪ್ರದೇಶ ಗಳಿಂದ ಸ್ಥಾನಗಳ ಹಂಚಿಕೆ ಮಾಡುವುದರ ಬಗ್ಗೆ ತಿಳಿಸುತ್ತದೆ .

ಈ ಅನುಸೂಚಿ ಅನುಸಾರವಾಗಿ ರಾಜ್ಯ ಸಭೆಗೆ ಜನಸಂಖ್ಯೆ ಆಧಾರದ ಮೇಲೆ ವಿವಿಧ ರಾಜ್ಯಗಳಿಗೆ ರಾಜ್ಯಸಭಾ ಸ್ಥಾನಗಳನ್ನು ನಿಗಧಿಪಡಿಸಲಾಗಿದೆ . ಎಲ್ಲಾ ರಾಜ್ಯಗಳಿಗೂ ಸಮಾನವಾದ ಪ್ರಾತಿನಿಧ್ಯವನ್ನು ಕೊಟ್ಟಿಲ್ಲ .

ಭಾರತದ ಕೆಲವು ರಾಜ್ಯಗಳಲ್ಲಿ ರಾಜ್ಯಸಭಾ ಸದಸ್ಯರ ಸಂಖ್ಯೆ ಹೆಚ್ಚಾಗಿದೆ . ಉದಾಹರಣೆ – ಉತ್ತರ ಪ್ರದೇಶ 31 ಸ್ಥಾನ , ಮಹಾರಾಷ್ಟ್ರ 19 ಸ್ಥಾನ ಹೊಂದಿದೆ . ಆದರೆ ಕೆಲವು ರಾಜ್ಯಗಳಾದ ನಾಗಲ್ಯಾಂಡ್ , ತ್ರಿಪುರ , ಮಣಿಪುರ , ಸಿಕ್ಕಿಂ , ಅರುಣಾಚಲ ಪ್ರದೇಶ , ಪದುಚೇರಿ , ಮಿಜೋರಾಂ , ಮೇಘಾಲಯ , ಗೋವಾ ಕೇವಲ ಒಂದೇ ಒಂದು ಸ್ಥಾನವನ್ನು ಹೊಂದಿವೆ .

ದೆಹಲಿ ಮತ್ತು ಪಾಂಡಿಚೇರಿಯನ್ನು ಹೊರತು ಪಡಿಸಿದರೆ ಉಳಿದ ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಸಭಾ ಸ್ಥಾನಗಳನ್ನೇ ನೀಡಲಾಗಿಲ್ಲ .

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳದೆ 50 ರಾಜ್ಯಗಳಿಗೆ ಸಮಾನವಾಗಿ ಎರಡು ಸ್ಥಾನವನ್ನು ನಿಗದಿಪಡಿಸಿ 100 ಸೆನೆಟ್‌ ಸದಸ್ಯರನ್ನು ಒಳಗೊಂಡಿದೆ . ವಿವಿಧ ರಾಜ್ಯದ ವಿಧಾನ ಸಭಾ ಸದಸ್ಯರುಗಳು ಅನುಪಾತ ಪ್ರಾತಿನಿಧ್ಯ ಅನ್ವಯ ಏಕಪರಿವರ್ತಿತ ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ .

ಕೇಂದ್ರಾಡತ ಪ್ರದೇಶದಲ್ಲಿ ರಾಜ್ಯ ಸಭೆ ಸ್ಥಾನಗಳ ನಿರ್ಧಾರ

ಕೇಂದ್ರಾಡಳಿತ ಪ್ರದೇಶದಿಂದ ರಾಜ್ಯಸಭೆಗೆ ವಿಶೇಷ ಮತದಾರರ ವರ್ಗದ ಮೂಲಕ ಪರೋಕ್ಷವಾಗಿ ಆಯ್ಕೆ ಮಾಡುತ್ತಾರೆ . ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ ಮತ್ತು ಪಾಂಡಿಚೇರಿಗಳಲ್ಲಿ ಮಾತ್ರ ರಾಜ್ಯಸಭೆ ಸ್ಥಾನ ದೆಹಲಿ ಹಾಗೂ ಪಾಂಡಿಚೆರಿಗಳನ್ನು ಹೊಂದಿವೆ . ಹೊರತುಪಡಿಸಿ ಉಳಿದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಸಂಖ್ಯೆ ವಿಪರೀತ ಕಡಿಮೆ ಇರುವುದರಿಂದ ರಾಜ್ಯ ಸಭೆ ಸ್ಥಾನ ನಿಗದಿಪಡಿಸಿಲ್ಲ . ದೆಹಲಿ 03 ಸ್ಥಾನ , ಪಾಂಡಿಚೇರಿ – 01 ಸ್ಥಾನ ಉಳಿದೆಲ್ಲಾ ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಸಭೆಯಲ್ಲಿ ಸ್ಥಾನವಿಲ್ಲ .

ವಿವಿಧ ಕ್ಷೇತ್ರದಿಂದ ರಾಜ್ಯಸಭೆಗೆ ನಾಮಕರಣಗೊಂಡ ಸದಸ್ಯರು

ರಾಜ್ಯಸಭೆಗೆ ವಿಜ್ಞಾನ , ಕಲೆ , ಸಮಾಜ ಸೇವೆ , ಸಾಹಿತ್ಯ | ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 12 ಮಂದಿಯನ್ನು ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ .

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸಂಸತ್ತಿನ ಮೇಲ್ಮನೆಗೆ ಆಯ್ಕೆ ಮಾಡುವ ಉದ್ದೇಶದಿಂದ ರಾಷ್ಟ್ರಪತಿಗಳು 12 ಮಂದಿ ಸದಸ್ಯರನ್ನು 6 ವರ್ಷದ ಅವಧಿಗೆ ನಾಮಕರಣ ಮಾಡುತ್ತಾರೆ . ಈ ಮೂಲಕ ಮೇಲ್ಮನೆಯು ಬುದ್ಧಿವಂತರ ಸದನ ಮತ್ತು ಚಿಂತಕರ ಸದನವನ್ನಾಗಿ ರೂಪಿಸಲಾಗಿದೆ .

ರಾಜ್ಯ ಸಭಾ ಸ್ಥಾನಗಳು ( ವಿವಿಧ ರಾಜ್ಯಗಳಲ್ಲಿ )

ಉತ್ತರ ಪ್ರದೇಶ 31

ಆಂಧ್ರಪ್ರದೇಶ 11

ಬಿಹಾರ 18

ಪಶ್ಚಿಮ ಬಂಗಾಳ  16

ಗುಜರಾತ್ 11

ಓಡಿಸಾ 10

ಕೇರಳ 9

ಹರಿಯಾಣ 05

ಜಮು & ಕಾಶ್ಮೀರ 04

ಹಿಮಾಚಲ ಪದೇಶ 03

ನಾಗಾಲ್ಯಾಂಡ್ 01

ಮೇಘಾಲಯ 01

ಅರುಣಾಚಲಪ್ರದೇಶ 01

ಮಿಜೋರಾಂ 01

ಮಹಾರಾಷ್ಟ್ರ 19

ತಮಿಳುನಾಡು 18

ಜಾರ್ಖಂಡ  16

ಕರ್ನಾಟಕ 12

ಮಧ್ಯ ಪ್ರದೇಶ 11

ರಾಜಸ್ಥಾನ  10

ಅಸ್ಸಾಂ 07

ಛತ್ತೀಸ್ ಘಡ  05

ಉತ್ತರ ಖಂಡ  03

ಗೋವಾ  01

ಮಣಿಪುರ  01

ಸಿಕ್ಕಿಂ  01

ತೆಲಂಗಾಣ 07

ತ್ರಿಪುರ 01

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

ಸ್ವಾತಂತ್ರ್ಯದ ಹಕ್ಕು

ಶೋಷಣೆ ವಿರುದ್ಧದ ಹಕ್ಕು

ಬಾಲಕಾರ್ಮಿಕ ನಿಷೇಧ

ಕೇಂದ್ರಮಂತ್ರಿ ಮಂಡಲ

ಅಟಾರ್ನಿ ಜನರಲ್

 


0 Comments

Leave a Reply

Avatar placeholder

Your email address will not be published. Required fields are marked *