ರಾಜ್ಯ ಪುನರ್ ರಚನೆ | states reorganisation commission

ರಾಜ್ಯ ಪುನರ್ ರಚನೆ

states reorganisation commission, state reorganisation commission upsc, state reorganisation commission 1953

states reorganisation commission, state reorganisation commission upsc, state reorganisation commission 1953

ವಿವಿಧ ರಾಜ್ಯಗಳು ಬೇರೆ ಬೇರೆ ಭಾಷೆಯ ಜನರನ್ನು ಒಳಗೊಂಡಿದ್ದು ಅವರ ನಡುವೆ ಸಾಮರಸ್ಯದ ಕೊರತೆ ಉಂಟಾಗಿ ತಾತ್ಕಾಲಿಕವಾಗಿ ಒಗ್ಗೂಡಿದ್ದ ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬಂತು . ಭಾಷೆಯನ್ನು ಆಧರಿಸಿ

ರಾಜ್ಯವನ್ನು ಪುನರ್‌ರಚಿಸಬೇಕೆಂದು ಎಲ್ಲೆಡೆ ಒತ್ತಾಯ ಕೇಳಿ ಬಂತು ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ಬೇಡಿಕೆ ಹೆಚ್ಚಾಗಿದ್ದು ಇದರ ಬಗ್ಗೆ ಅಧ್ಯಯನ ಮಾಡಲು ರಾಜ್ಯ ಪುನರ್‌ರಚನೆಗೆ ಸಂಬಂಧಿಸಿದ ಆಯೋಗಗಳನ್ನುರಚಿಸಲು ಭಾರತ ಮುಂದಾಯಿತು .

 

ರಾಜ್ಯ ಪುನರ್ ರಚನಾ ಆಯೋಗಗಳು

( States Reorganisation Commission )

ಧಾರ್ ಆಯೋಗ ( Dhar Commission )

1948 ಜೂನ್ .17 ರಂದು ಭಾರತ ಸರ್ಕಾರವು ಅಲಹಾಬಾದ್ ಮುಖ್ಯ ನ್ಯಾಯಾಧೀಶರಾದ ಹೈಕೋರ್ಟಿನ ಎಸ್.ಕೆ. ಧಾರ್ ಅವರ ಅಧ್ಯಕ್ಷತೆಯಲ್ಲಿ ಜೆ.ಎನ್.ಲಾಲ್ ಮತ್ತು ಪನ್ನಲಾಲ್‌ರವರ ಸದಸ್ಯತ್ವವನ್ನು ಒಳಗೊಂಡ ಆಯೋಗವನ್ನು ರಚಿಸಿತು .

ಭಾಷೆಯ ಆಧಾರದ ಮೇಲೆ ರಾಜ್ಯ ಪುನರ್‌ರಚನೆ ಆಗಬೇಕೆ ಬೇಡವೇ ಎಂಬುದನ್ನು ಅಧ್ಯಯನ ಮಾಡಿದ ಆಯೋಗವು 56 ಪುಟಗಳ ವರದಿಯನ್ನು ಡಿಸೆಂಬರ್ 10 , 1948 ರಂದು ಕೇಂದ್ರ ಸರ್ಕಾರದ ಮುಂದಿಟ್ಟಿತು .

ಧಾರ್ ಸಮಿತಿ 1948 ರಾಜ್ಯ ಪುನರ್ ರಚನೆಗೆ ನೇಮಕವಾದ ಮೊದಲ ಸಮಿತಿಯಾಗಿದ್ದು ,

ಎಸ್.ಕೆ. ಧಾರ್ . ಅಧ್ಯಕ್ಷರು

ಸದಸ್ಯರು – ಜೆ.ಎನ್ . ಲಾಲ್ ಮತ್ತು ಪನ್ನಾಲಾಲ್

ಈ ವರದಿಯ ಮುಖ್ಯಾಂಶಗಳು ರಾಜ್ಯ ಪುನರ್‌ರಚನೆಯನ್ನು ದೇಶದ ಏಕತೆಯನ್ನು ಗಮನದಲ್ಲಿರಿಸಿಕೊಂಡು ಆಡಳಿತದ ದೃಷ್ಟಿಯಿಂದ ರಾಜ್ಯ ಪುನರ್‌ರಚಿಸಬೇಕೆಂದು ಭಾಷೆಗಳ ಆಧಾರದ ಮೇಲೆ ರಚಿಸಬಾರದೆಂದು ಹೇಳಿತು .

 

ಹೊಸ ರಾಜ್ಯಗಳ ಸ್ಥಾಪನೆ

ವಿಧಿ .2 . ನೂತನ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ

ಸಂವಿಧಾನದ 2 ನೇ ವಿಧಿಯ ಪ್ರಕಾರ ಸಂಸತ್ತು ಭಾರತದ ಒಕ್ಕೂಟಕ್ಕೆ ಹೊಸ ರಾಜ್ಯಗಳನ್ನು ಸೇರಿಸಿಕೊಳ್ಳ ಬಹುದು ಮತ್ತು ಸೂಕ್ತವೆನಿಸಿದರೆ ಹೊಸ ರಾಜ್ಯವನ್ನು ಸ್ಥಾಪಿಸಲು ಈ ಕೆಳಕಂಡ 2 ಅಧಿಕಾರಗಳಿವೆ .

1 ) ಹೊಸದಾಗಿ ರಾಜ್ಯವನ್ನು ಒಕ್ಕೂಟಕ್ಕೆ ಸೇರಿಸುವಂತಹ ಅಧಿಕಾರ

ಉದಾ : – ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವದಲ್ಲಿದ್ದು , ಅಂತಹ ಸಂದರ್ಭದಲ್ಲಿ ಅವುಗಳಿಗೆ ಹೊಸ ರಾಜ್ಯವನ್ನಾಗಿ ಸೇರ್ಪಡೆ ಮಾಡುವ ಅಧಿಕಾರ .

2 ) ಹೊಸ ರಾಜ್ಯವನ್ನು ಒಕ್ಕೂಟದೊಳಗೆ ಸ್ಥಾಪಿಸುವ ಅಸ್ತಿತ್ವದಲ್ಲಿಲ್ಲದ ಹೊರ ಅಧಿಕಾರ ಒಕ್ಕೂಟದಲ್ಲಿ ರಾಜ್ಯವನ್ನು ಒಕ್ಕೂಟದೊಳಕ್ಕೆ ಸೇರಿಸಿ ರಾಜ್ಯವನ್ನು ಸ್ಥಾಪಿಸುವ ಅಧಿಕಾರ ,

ವಿಧಿ .3 . ನೂತನ ರಾಜ್ಯಗಳ ರಚನೆ ಮತ್ತು ಈಗಿರುವ ಪ್ರದೇಶಗಳ ಸರಹದ್ದುಗಳ ಅಥವಾ ಹೆಸರುಗಳ ಬದಲಾವಣೆ ಸಂಸತ್ತು ಕಾನೂನಿನ ಮೂಲಕ ಗಡಿ ,

ಹೆಸರು ಐದಲಾವರ & ರಾಜ್ಯಗಳ ಸೇರ್ಪಡೆ  ಸಂವಿಧಾನದ 3 ನೇ ವಿಧಿಯು ದೇಶದ ರಾಜಕೀಯ ಭೂಪಟವನ್ನು ಪುನರ್ ಜೋಡಣೆ ( Internal Re adjustment interse of the territories ) ಗೆ ಸಹಕಾರಿಯಾಗುತ್ತದೆ .

ಈ ಮೂಲಕ ರಾಜ್ಯಗಳ ಬದಲಾವಣೆ , ವಿಸ್ತೀರ್ಣದ ಬದಲಾವಣೆ , ಗಡಿ ತೆಗೆದುಕೊಳ್ಳಲು ಕಲ್ಪಿಸಿದೆ .

ಹೆಸರು ಬದಲಾವಣೆಯಂತಹ ಕ್ರಮಗಳನ್ನು ಸಂಸತ್ತು ಸಂವಿಧಾನ ಅವಕಾಶ ಈ ವಿಧಿ ಅನ್ವಯ ರಾಜ್ಯಗಳ ಅಂತರ್‌ ಬದಲಾವಣೆ ಮಾಡಬೇಕಾದರೆ ಮೊದಲು ರಾಷ್ಟ್ರಪತಿಗಳ ಸಂಸತ್ತಿನಲ್ಲಿ ಪೂರ್ವಾನುಮತಿಯ ಮೇರೆಗೆ ಮಸೂದೆಯನ್ನು ಮಂಡಿಸಬೇಕು .

ಅಂತಹ ಸಂದರ್ಭದಲ್ಲಿ ರಾಷ್ಟ್ರಪತಿಗಳು ಪೂರ್ವಾನುಮತಿ ನೀಡುವ ಮೊದಲು ಸಂಬಂಧಿಸಿದ ವಿಧಾನಸಭೆಯಲ್ಲಿ ನಿರ್ಧಿಷ್ಟ ಅವಧಿಯೊಳಗೆ ಅಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸುತ್ತಾರೆ .

ನಂತರ ರಾಷ್ಟ್ರಪತಿಗಳು ಅಥವಾ ಪಾರ್ಲಿಮೆಂಟ್ ರಾಜ್ಯದ ಶಾಸನ ಸಭೆಯ ಒಪ್ಪಿಗೆ ಅಥವಾ ತಿರಸ್ಕಾರವನ್ನು ಪರಿಗಣಿಸದಿರಬಹುದು .

ಸಂಸತ್ತು ಸರಳ ಬಹುಮತದಿಂದ ಹೊಸ ರಾಜ್ಯ ಸ್ಥಾಪನೆಗೆ ಮಸೂದೆಯನ್ನು ಅಂಗೀಕರಿಸಬಹುದು .

ಇದಕ್ಕೆ 368 ನೇ ವಿಧಿ ಅನ್ವಯ ತಿದ್ದುಪಡಿ ಮಾಡಬೇಕಾದ ಅವಶ್ಯಕತೆ ಇಲ್ಲ .

 

Comments

Leave a Reply

Your email address will not be published. Required fields are marked *