ಪರಿವಿಡಿ

ರಾಜ್ಯ ನಿರ್ದೇಶಕ ತತ್ವಗಳು

Directive Principles of state Policy

ರಾಜ್ಯ ನಿರ್ದೇಶಕ ತತ್ವಗಳು , directive principles of state policy , directive principles , directive principles are ,indian constitution

ರಾಜ್ಯ ನಿರ್ದೇಶಕ ತತ್ವಗಳು , directive principles of state policy , directive principles , directive principles are ,indian constitution

ಸಂವಿಧಾನ ರಚನಾಕಾರರು ಸಂವಿಧಾನದಲ್ಲಿ ಸರ್ಕಾರದ ರಚನೆ ಮತ್ತು ಕಾರ್ಯಗಳನ್ನು ಮಾತ್ರ ರೂಪಿಸುವುದರೊಂದಿಗೆ ಸರ್ಕಾರವು ರಾಜ್ಯದಲ್ಲಿ ಉತ್ತಮ ಸರ್ಕಾರ ನಡೆಸಲು ಬೇಕಾದ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುವ ಮಾರ್ಗಸೂಚಿಯನ್ನು ಕೂಡ ನೀಡಿದ್ದಾರೆ ಅಂತಹ ಮಾರ್ಗಸೂಚಿಗಳೇ “ ರಾಜ್ಯ ನಿರ್ದೇಶಕ ತತ್ವಗಳು ” , ಭಾರತದ ಸಂವಿಧಾನದ IV ಭಾಗದಲ್ಲಿ 36 ನೇ ವಿಧಿಯಿಂದ 51 ನೇ ವಿಧಿವರೆಗೆ ಸರ್ಕಾರಕ್ಕೆ ನೀಡಿರುವ ನಿರ್ದೇಶನಗಳೇ ರಾಜ್ಯನಿರ್ದೇಶಕ ತತ್ವಗಳು

ರಾಜ್ಯ ನಿರ್ದೇಶಕ ತತ್ವಗಳ ಮಹತ್ವ

ಪ್ರಸ್ತುತ ಸಂವಿಧಾನದ 4 ನೇ ಭಾಗದ ರಾಜ್ಯ ನಿರ್ದೇಶಕ ತತ್ವಗಳು ಭಾರತ ಸರ್ಕಾರ ಕಾಯ್ದೆ -1935 ರಲ್ಲಿ In strument of Instruction ನ್ನು ಹೋಲುತ್ತದೆ ಸುಖೀರಾಜ್ಯ | ( Welfare State ) ಕಲ್ಯಾಣ ರಾಜ್ಯವಾಗಿ ರೂಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ಹಾಗೂ ಯೋಜನೆ ರೂಪಿಸುವಾಗ ಪಾಲಿಸ ಬೇಕಾದ ಹಾಗೂ ಗಮನದಲ್ಲಿಟ್ಟು ರಚಿಸಬಹುದಾದ ಇವುಗಳು ದೇಶದಲ್ಲಿ ಮಾರ್ಗಸೂಚಿಗಳಾಗಿವೆ . ಸಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವ ಒದಗಿಸುತ್ತವೆ .

ರಾಜ್ಯ ನಿರ್ದೇಶಕ ತತ್ವಗಳು ಸಮಾಜದ ಹಿತವನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಪಾಡುತ್ತವೆ . ದೇಶವನ್ನು ವಿವಿಧ ರಂಗದಲ್ಲಿ ಮುನ್ನಡೆಸಲು ಸಹಕಾರಿಯಾದ ಸಲಹೆಗಳನ್ನು ಒಳಗೊಂಡಿವೆ . ರಾಜ್ಯ ನಿರ್ದೇಶಕ ತತ್ವಗಳು ಸರ್ಕಾರವು ದೇಶದ ಆಂತರಿಕ ಹಾಗೂ ವಿದೇಶಿ ವಿಷಯಗಳಿಗೆ ಸಂಬಂಧಿಸಿದ ಕಾನೂನು ರೂಪಿಸಲು ಸಹಕಾರಿಯಾಗಿದೆ . ಸರ್ಕಾರವು . ಮಹಿಳೆಯರಿಗೆ ಸಂಬಂಧಿಸಿದಂತೆ ಹೊಸ ಯೋಜನ ಕಾಠ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗಿದೆ . ” ಡಾ.ಬಿ.ಆರ್.ಅಂಬೇಡ್ಕರ್ ” ರವರು ರಾಜ್ಯ ನಿರ್ದೇಶಕ ತತ್ವದ ಮಹತ್ವವನ್ನು ಕುರಿತು ಹೀಗೆ ಹೇಳುತ್ತಾರೆ . ”

ಭಾರತದ ಸಂವಿಧಾನವು ಸರ್ಕಾರವನ್ನು ಹೇಗೆ ರಚಿಸಬೇಕು ಎಂದು ತಿಳಿಸಿದೆ . ಯಾವ ರಾಜಕೀಯ ಪಕ್ಷವಾದರೂ ಅಧಿಕಾರಕ್ಕೆ ಬರಬಹುದು . ಅವ ರೆ ಸ್ಟೇಚ್ಛೆಯಾಗಿ ವರ್ತಿಸುವಂತಿಲ್ಲ . ಸಂವಿಧಾನ ತತ್ವಗಳಿಗೆ ಅನುಗುಣವಾಗಿ ನಡೆಯಬೇಕಾಗುತ್ತದೆ . ಅವುಗಳನ್ನುಉದಾಸೀನ ಮಾಡುವಂತಿಲ್ಲ .

ಒಂದು ವೇಳೆ ಸರ್ಕಾರ ನಿರ್ಲಕ್ಷಿಸಿದರೆ ಅವುಗಳ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತಿಲ್ಲ . ಆದರೆ ಚುನಾವಣೆ ಸಮಯದಲ್ಲಿ ಜನತೆಗೆ ಉತ್ತರ ಕೊಡಬೇಕಾಗುತ್ತದೆ . ಪಕ್ಷಗಳು ಅಧಿಕಾರಕ್ಕೆ ಬರಬೇಕಾದರೆ ಈ ತತ್ವಗಳ ಪಾತ್ರ ಬಹಳ ಮುಖ್ಯವಾದದ್ದು ” .

ರಾಜಕೀಯ ರಾಜ್ಯ ನಿರ್ದೇಶಕ ತತ್ವದ ಮಹತ್ವವನ್ನರಿತು ‘ ಗ್ರಾನ್ ಎಲ್ ಆಸ್ಟಿನ್ ‘ ರವರು ರಾಜ್ಯ ನಿರ್ದೇಶಕ ತತ್ವಗಳು ಹಾಗೂ ಮೂಲಭೂತ ಹಕ್ಕುಗಳನ್ನು ಸಂವಿಧಾನದ ಪ್ರಶ್ನೆ ( Conscience of the Constitution ) wo ರೆದರೆ ‘ ಡಾ | ಬಿ.ಆರ್.ಅಂಬೇಡ್ಕರ್‌ ‘ ರಾಜ್ಯ ನಿರ್ದೇಶಕ ತತ್ವಗಳನ್ನು “ Novel features of the constitu tion ” ಎಂದಿದ್ದಾರೆ . ಪ್ರತಿಯೊಬ್ಬ ನಾಗರಿಕರಿಗೂ ಅಳತೆ ಗೋಲಾಗಿದ್ದು , ಈ ಮೂಲಕ ಸರ್ಕಾರದ ಸಾಧನೆ ಅಳೆಯಲು ಸಹಕಾರಿ ಯಾಗಿದೆ . ಇದರಿಂದ ತೃಪ್ತರಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ಹೊಸ ಸರ್ಕಾರ ಆಯ್ಕೆ ಮಾಡುತ್ತಾರೆ ನಮ್ಮ ದೇಶದ ಜನರು ಪ್ರಜ್ಞಾವಂತರಾದರೆ ಸರ್ಕಾರಕ್ಕೆ ನಿರ್ದೇಶಕ ತತ್ವಗಳನ್ನು ನಿರ್ಲಕ್ಷಿಸುವ ಧೈರ್ಯವಿಲ್ಲ .

ರಾಜ್ಯ ನಿರ್ದೇಶಕ ತತ್ವದ ಲಕ್ಷಣಗಳು ( Characterstics of Directive Principles )

1 ) ನ್ಯಾಯರಕ್ಷಿತವಾಗಿಲ್ಲ ( Non Justiciable ) :

ರಾಜ್ಯ ನಿರ್ದೇಕ ತತ್ವಗಳನ್ನು ಸರ್ಕಾರವು ಜಾರಿಗೊಳಿಸದಿದ್ದರೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ .

2 ) ರಾಜಕೀಯ ರಹಿತತೆಯಿಂದ ಕೂಡಿದೆ : –

ರಾಜ್ಯ ನಿರ್ದೇಶಕ ತತ್ವಗಳು ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಅನುಷ್ಠಾನಕ್ಕೆ ತರಬಹುದು . ಇವು ಎಲ್ಲಾ ಪಕ್ಷಗಳು ಕೂಡ ಅಳವಡಿಸಿಕೊಳ್ಳಬಹುದಾದಂತಹ ರಾಜಕೀಯ ರಹಿತವಾದಂತಹ ತತ್ವಗಳಾಗಿವೆ .

3 ) ಸಾಮಾನ್ಯ ಕಾನೂನು , ಆಜ್ಞೆಗಳ ಮೂಲಕ ಈ ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸಬಹುದು .

4 ) ರಾಜ್ಯ ನಿರ್ದೇಶಕ ತತ್ವಗಳು ನಾಗರೀಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ಸುಧಾರಿಸುವಂತೆ ಮಾಡಿ ಜೀವನ ಮಟ್ಟವನ್ನು ಉತ್ತಮಗೊಳಿಸುತ್ತದೆ .

5 ) ಸಾಮಾಜಿಕ & ಆರ್ಥಿಕ ಪ್ರಜಾ ಪ್ರಭುತ್ವವನ್ನು ಸ್ಥಾಪಿಸುವ ಮೂಲಕ ಕಲ್ಯಾಣ ರಾಜ್ಯವನ್ನು ಸ್ಥಾಪಿಸುತ್ತದೆ .

ರಾಜ್ಯ ನಿರ್ದೇಶಕ ತತ್ವಗಳ ವರ್ಗೀಕರಣ ( Classification of Directive Principles )

ರಾಜ್ಯ ನಿರ್ದೇಶಕ ತತ್ವವು ಹೊಂದಿರುವ ಹಿನ್ನಲೆಯ ಆಧಾರವಾಗಿ ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ .

1 ) ಗಾಂಧಿ ತತ್ವಗಳು : –

ಗಾಂಧೀಜಿಯವರು ಪ್ರತಿಪಾದಿಸಿದ ತತ್ವಗಳು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಸೇರಿಸಲಾಗಿದೆ . ಗಾಂಧೀಜಿಯವರು ಮಹಾತ್ಮ ಗ್ರಾಮ ಸ್ವರಾಜ್ ಪರಿಕಲ್ಪನೆ , ಹೈನುಗಾರಿಕೆ , ಕೃಷಿ , ಗುಡಿ ಕೈಗಾರಿ ಕೆಗೆ ಸಂಬಂಧಿಸಿದ ಅಂಶಗಳನ್ನು ಪ್ರತಿಪಾದಿಸಿದ್ದರು . ಅಂತಹ ಅಂಶಗಳನ್ನು ಈ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿಕೊಳ್ಳಲಾಗಿದೆ .

ಅವುಗಳೆಂದರೆ –

ಪಂಚಾಯತ್ ರಾಜ್ ಸ್ಥಾಪನೆ . ( 40 ನೇ ವಿಧಿ )

ಮಧ್ಯಪಾನ & ಮಾಧಕ ವಸ್ತುಗಳ ನಿಷೇಧ . ( 47 ನೇ ವಿಧಿ )

ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳಿಗೆ ಉತ್ತೇಜನ , ( 43 ನೇ ವಿಧಿ )

ದುರ್ಬಲ ವರ್ಗದವರ ಶೈಕ್ಷಣಿಕ ಮತ್ತು ಆರ್ಥಿಕ ರಕ್ಷಣೆ & ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವುದು . ( 46 ನೇ ವಿಧಿ )

ಪಶು ಸಂಗೋಪನೆಯನ್ನು ವೃದ್ಧಿಗೊಳಿಸುವುದು , ಗೋ ಹತ್ಯೆ ನಿಷೇಧ ವೈಜ್ಞಾನಿಕ ಕ್ರಮದಲ್ಲಿ ಕೃಷಿ ಅಭಿವೃದ್ಧಿ ಗೊಳಿಸುವುದು . ( 48 ನೇ ವಿಧಿ )

2 ) ಸಮಾಜವಾದಿ ತತ್ವಗಳು : –

ಸಮಾಜದ ತಾರತಮ್ಯವನ್ನು ಹೋಗಲಾಡಿಸಲು ಸಾಮಾಜಿಕ ನ್ಯಾಯ ಒದಗಿಸಲು ನೀಡಿರುವ ತತ್ವಗಳೇ ಸಮಾಜವಾದಿ ತತ್ವಗಳು ,

ಸಮಾನ ಕೆಲಸಕ್ಕೆ ಸಮಾನ ವೇತನ . ( 39 ನೇ ವಿಧಿ )

ಕಾರ್ಮಿಕರ ಯೋಗಕ್ಷೇಮ ರಕ್ಷಿಸುವುದು . ( 43 ಎ ವಿಧಿ )

ವೃದ್ಧರಿಗೆ , ರೋಗಿಗಳಿಗೆ ಸಹಾಯ ಧನ ನೀಡುವುದು . ( 41 ನೇ ವಿಧಿ )

ದೇಶದ ಸಂಪತ್ತನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳುವುದು . ( 38 ನೇ ವಿಧಿ )

ಕಾರ್ಖಾನೆಯಲ್ಲಿ ಕೆಲಸ ಮಾಡಲು ಯೋಗ್ಯವಾದ ವಾತಾವರಣವನ್ನು ನಿರ್ಮಾಣ ಮಾಡುವುದು ( 42 ನೇ)

ಜೀವನೋಪಾಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು . ( 43 ನೇ ವಿಧಿ )

ಉದಾರವಾದಿ ತತ್ವಗಳು :

ಒಂದು ದೇಶವು ಎಲ್ಲ ಪ್ರಜೆಗಳನ್ನೂ ಒಂದೇ ರೀತಿ ನೋಡುವಂತೆ ಮುಕ್ತವಾದಂತಹ , ಉತ್ತಮವಾದಂತಹ ವಾತಾವರಣವನ್ನು ಒದಗಿಸುವ ತತ್ವಗಳನ್ನು ಅಳವಡಿಸಿಕೊಳ್ಳಬೇಕು . ಅಂತಹ ತತ್ವಗಳನ್ನು ಉದಾರವಾದಿ ತತ್ವಗಳು ಎನ್ನುವರು .

ದೇಶಾದ್ಯಂತ ಒಂದೇ ರೀತಿ ಸಿವಿಲ್ ಕೋಡ್‌ನ್ನು ಜಾರಿಗೆ ತರುವುದು . ( 44 ನೇ ವಿಧಿ ) *

ಮಕ್ಕಳಿಗೆ ಉಚಿತ & ಕಡ್ಡಾಯ ಶಿಕ್ಷಣ ( 45 ನೇ ವಿಧಿ )

ಸ್ಮಾರಕ & ಐತಿಹಾಸಿಕ ಸ್ಥಳಗಳನ್ನು ರಕ್ಷಣೆ ( 49 ನೇ ವಿಧಿ )

ದೇಶದ ಅರಣ್ಯ ಮತ್ತು ವನ್ಯಮೃಗಗಳನ್ನು ರಕ್ಷಿಸುವುದು , ( 49 ಎ ವಿಧಿ )

ಕಾರ್ಯಾಂಗದಿಂದ ನ್ಯಾಯಾಂಗವನ್ನು ಬೇರ್ಪಡಿ ಸುವುದು . ( 50 ನೇ ವಿಧಿ )

ಅಂತರರಾಷ್ಟ್ರೀಯ ಸಂಬಂಧ ರಾಷ್ಟ್ರೀಯ ವಿವಾದಗಳನ್ನು ಶಾಂತಿ ಮೂಲಕ ಬಗೆಹರಿಸುವುದು , ( 51 ನೇ ವಿಧಿ )

 

ಸಂವಿಧಾನದಲ್ಲಿ ಸೂಚಿಸಿರುವ ರಾಜ್ಯ ನಿರ್ದೇಶಕ ತತ್ವಗಳು ಮತ್ತು ಅಳವಡಿಕೆ

ಅನುಸರಿಸಬೇಕಾದ ತತ್ವಗಳು

 

ರಾಜ್ಯ ಎಂಬ ಪದದ ಅರ್ಥ

ವಿಧಿ 36 , ಪರಿಭಾಷೆ : – ರಾಜ್ಯ ನಿರ್ದೇಶಕ ತತ್ವದಲ್ಲಿ ಉಲ್ಲೇಚಿಸಿರುವ ” ರಾಜ್ಯ ” ಎಂಬ ಪದಕ್ಕೆ ಸಂವಿಧಾನದ ಭಾಗ -3 ರಲ್ಲರುವ 2 ನೇ ವಿಧಿಯಲ್ಲಿರುವ ವಿವರಣೆಯೇ ಆಗಿದೆ .

ರಾಜ್ಯ ನಿರ್ದೇಶಕ ತತ್ವದಲ್ಲಿ ರಾಜ್ಯ ” ಎಂದರೆ ಭಾರತದ ಕೇಂದ್ರ ಸರ್ಕಾರವನ್ನು , ಸಂಸತ್ತನ್ನು , ರಾಜ್ಯ ಸರ್ಕಾರವನ್ನು ರಾಜ್ಯದ ವಿಧಾನ ಮಂಡಲಗಳನ್ನು , ಭಾರತದ ಕ್ಷೇತ್ರದ ವ್ಯಾಪ್ತಿ ಒಳಗಿನ ಹಾಗೂ ಭಾರತದ ಸರ್ಕಾರದ ನಿಯಂತದ ಎಲ್ಲಾ ಪ್ರಾಧಿಕಾರಗಳನ್ನು , ಇತರೆ ಪ್ರಾಧಿಕಾರಗಳನ್ನು ಸೂಚಿಸುತ್ತದೆ

ರಾಜನಿರ್ದೇಶನ ತವ್ವಗಳ ಅಳವಡಿಕೆ

ವಿಧಿ 37 , ಭಾಗದಲ್ಲಿ ಅಡಕವಾಗಿರುವ ತತ್ವಗಳ ಅನ್ವಯ

ರಾಜ್ಯ ನಿರ್ದೇಶಕ ತತ್ವಗಳು ” ರಾಜ್ಯ ಸರ್ಕಾರ ನಡೆಸಲು ಸೂಚಿಸಿರುವ ಸಲಹೆಗಳಾಗಿವೆ . ಇವುಗಳನ್ನು ಆಡಳಿತ ನಡೆಸುವಾಗ ಅಳವಡಿಸಿಕೊಂಡರೆ ದೇಶವ ಅಭಿವೃದ್ಧಿಯಾಗುತ್ತದೆ ಆದರೆ ಈ ನಿರ್ದೇಶನಗಳನ್ನು ಪಾಲಿಸದಿದ್ದರೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸು ವಂತಿಲ್ಲ ಎಂದು ಸಂವಿಧಾನದ 37 ನೇ ವಿಧಿ ತಿಳಿಸುತ್ತದೆ . ರಾಮಾಜರ ಜನಮಾನತೆ ಹೋಗಲಾಡಿಸುವದು ವಿಧಿ 38. ಜನತೆಯ ಕಲ್ಯಾಣೋನ್ನತಿಗಾಗಿ ರಾಜ್ಯವು ಸಾಮಾಜಿಕ ವ್ಯವಸ್ಥೆಯನ್ನು ಸುರಿಸ್ಥಿತಗೊಳಿಸುವುದು * ದೇಶದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಅಸಮತೋ ಅನವನ್ನು ಹೋಗಲಾಡಿಸಲು ಜನತೆಯ ಸಾಮಾಜಿಕ ಮತ್ತು ಆರ್ಥಿಕ ಕಲ್ಯಾಣಕ್ಕಾಗಿ ಉತ್ತಮ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಬೇಕೆಂದು ಸಂವಿಧಾನದ 38 ನೇ ವಿಧಿ ತಿಳಿಸುತ್ತದೆ . ಈ ವಿಧಿ ಅನ್ವಯ ಭಾರತ ANFO ಹಾಗೂ ರಾಜ್ಯ ಸರ್ಕಾರವು ಆನೇಕ ಅಸಮತೋಲನ ಹೋಗಲಾಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ ಸಾಮಾಜಿಕ ಮತ್ತು SOFE ಪ್ರಗತಿಯನ್ನು ಸಾಧಿಸಲು 1951 ನೇ ಇಸವಿಯಿಂದ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದ್ದಾರೆ . ವಿವಿಧ ವರ್ಗಗಳಲ್ಲಿರುವ ಸಾಮಾಜಿಕ & ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದ್ದಾರೆ .

 

 

ರಾಜ್ಯವು ಅನುಸರಿಸಬೇಕಾದ ತತ್ವಗಳು

 ವಿಧಿ .39 . ರಾಜ್ಯವು ಅನುಸರಿಸಬೇಕಾದ ಕೆಲವು ತತ್ವಗಳು

ಜನರ ಆರ್ಥಿಕ ಮತ್ತು ಸಾಮಾಜಿಕ ಶೋಷಣೆಯಿಂದ ರಕ್ಷಿಸಲು ಹಾಗೂ ಉತ್ತಮ ಜೀವನ ನಡೆಸಲು ಆನೇಕ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಸಂವಿಧಾನದ 39 ನೇ ವಿಧಿ ತಿಳಿಸುತ್ತದೆ . ಸಹಕಾರಿಯಾಗುವಂತೆ

ಈ ವಿಧಿಯನ್ನು ಜಾರಿಗೊಳಿಸಲು 1948 ರಲ್ಲ  ಕನಿಷ್ಠ ಕೂಲ ಕಾಯ್ದೆಯನ್ನು ಜಾರಿಗೆ ತರಲಾಗಿದೆ . ಗ್ರಾಮೀಣ ಪ್ರದೇಶದಲ್ಲಿನ ಜನರ ಗುಣಮಟ್ಟವನ್ನು ಉತ್ತಮ ಗೊಳಿಸಲು . ಬ್ಯಾಂಕಿಂಗ್ ನಿಯಮಗಳನ್ನು ಜಾರಿಗೆ ತರಲಾಗಿದೆ . 1976 ರಲ್ಲಿ ಸಮಾನ ವೇತನ ಕಾಯ್ದೆ ಜಾರಿಗೆ ತಂದು ಮಹಿಳೆ ಮತ್ತು ಪುರುಷರಿಗೆ ಸಮಾನವಾದ ವೇತನವನ್ನು ನೀಡಲು ಅವಕಾಶ ಕಲ್ಪಿಸ ಲಾಗಿದೆ . ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಕೆಲಸ ಮಾಡುವ ಸ್ಥಳದಲ್ಲಿ ಶೋಷಣೆಯನ್ನು ತಪ್ಪಿಸಲು ಸರ್ಕಾರವು ಹೊಸ ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ . 1986 ರಲ್ಲಿ ಬಾಲ ಕಾರ್ಮಿಕ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ , 1976 ರಲ್ಲಿ ಪದ್ಧತಿ ನಿರ್ಮೂಲನ ಕಾಯ್ದೆ , 1926 ರಲ್ಲಿ ಯೂನಿಯನ್ ಕಾಯ್ದೆ , 1947 ರಲ್ಲಿ ಕೈಗಾರಿಕಾ ವಿವಾದ ಕಾಯ್ದೆ , 1952 ರಲ್ಲಿ ಗಣಿ ಕಾಯ್ದೆ , 1948 ರಲ್ಲಿ ಕೈಗಾರಿಕಾ ಕಾಯ್ದೆ , 1923 ರಲ್ಲಿ ಕೆಲಸಗಾರರ ಪರಿಹಾರ ಕಾಯ್ದೆ , ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಲಾಗಿದೆ .

 

ಉಚಿವ ಕಾನೂನು ನೆರವು

 ವಿಧಿ .39 ಎ . ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು

ಭಾರತದಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೂ ನ್ಯಾಯ ಸಿಗಲೆಂಬ ದೃಷ್ಟಿಯಿಂದ ಉಚಿತ ಕಾನೂನು ನೆರವನ್ನು ನೀಡುವಂತೆ ಸಂವಿಧಾನದ 39 ಎ ವಿಧಿಯಲ್ಲಿ ನಿರ್ದೇಶಿಸಿದೆ .  ಈ ವಿಧಿ ಅನ್ವಯ ದೇಶಾದ್ಯಂತ 1987 ರಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಾಯ್ದೆ ಜಾರಿಗೊಳಿಸಿ , ದೇಶಾದ್ಯಂತ ಉಚಿತ ಕಾನೂನಿನ ಸಲಹೆಯನ್ನು ಬಡವರಿಗೆ ಲೋಕ ಆದಾಲತ್ ಮೂಲಕ ನೀಡಲಾಗಿದೆ . ಉಭಯ ಪಕ್ಷದವರ ಅನೇಕ ವ್ಯಾಜ್ಯಗಳನ್ನು ರಾಜೀ ಮೂಲಕ ಬಗೆಹರಿಸಲಾಗಿದೆ . 1986 ರಿಂದ ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿ ಗ್ರಾಹಕರ ಸಂರಕ್ಷಣೆಯನ್ನು ಕಾಯುತ್ತಿದೆ . ಆರೋಪಿಯು ಕ್ರಿಮಿನಲ್ ಅಪರಾಧವನ್ನು ಎದುರಿಸುತ್ತಿದ್ದು ಅವನು ಬಡವನಾಗಿದ್ದರೆ , ಸರ್ಕಾರವೇ ಅವನ ಪರವಾಗಿ ವಾದಿಸಲು ವಕೀಲರನ್ನು ನೇಮಕ ಮಾಡುತ್ತದೆ .

 ಗ್ರಾಮ ಪಂಚಾಯತಿಗಳ ಸ್ಥಾಪನೆ

ವಿಧಿ 40 , ಗ್ರಾಮ ಪಂಚಾಯಿತಿಗಳ ಸಂಘಟನೆ

ಗ್ರಾಮಮಟ್ಟದಲ್ಲಿ ಗ್ರಾಮ ಪಂಚಾಯತಿಗಳನ್ನು ಸಂಘಟಿಸಿ ಆಡಳಿತವನ್ನು ವಿಕೇಂದ್ರೀಕರಿಸಿ ಗ್ರಾಮೀಣ ಹಂತದಲ್ಲಿ ಜನರು ಸರ್ಕಾರದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು ಸಂವಿಧಾನದ 40 ನೇ ವಿಧಿ ತಿಳಿಸುತ್ತದೆ . ಈ ವಿಧಿ ಅನ್ವಯ ಭಾರತ ಸರ್ಕಾರವು 1992 ರಲ್ಲಿ 73 ನೇ ಸಂವಿಧಾನದ ತಿದ್ದುಪಡಿ ಗ್ರಾಮ ಪಂಚಾಯತಿಗಳನ್ನು ದೇಶದಲ್ಲಿ ಸ್ಥಾಪನೆ ಮಾಡಿತು . 1992 ರಲ್ಲಿ 74 ನೇ ಮೂಲಕ ಮುನ್ಸಿಪಾಲಿಟಿಗಳನ್ನು ಸ್ಥಾಪನೆ ಮಾಡಿತು . ಈ ಮೂಲಕ ಗಾಂಧೀಜಿಯವರ ಕನಸಾದ ಗ್ರಾಮ ಸ್ವ ರಾಜ್ ಕಲ್ಪನೆಯನ್ನು ಹಾಗೂ ತತ್ವವನ್ನು ಅಳವಡಿಕೆ ಮಾಡಿ ಕೊಂಡಂತಾಯಿತು . ಸ್ಥಳೀಯ ಸರ್ಕಾರಗಳ ಮೂಲಕ ಆಡಳಿತವನ್ನು ಕಟ್ಟಕಡೆಯ ವ್ಯಕ್ತಿಯು ತಿದ್ದುಪಡಿ ಮಹಿಳೆಯರಿಗೆ ನಿರ್ವಹಿಸು ವಂತಾಯಿತು . ಪ್ರಸ್ತುತವಾಗಿ ಮೂರು ಹಂತದ ಪಂಚಾಯತ್ ವ್ಯವಸ್ಥೆಯು ಜಾರಿಯಲ್ಲಿದೆ . ಪಂಚಾಯತ್ ವ್ಯವಸ್ಥೆಯಲ್ಲಿ ಕೆಲವು ರಾಜ್ಯಗಳಲ್ಲಿ ಒಟ್ಟು ಸ್ಥಾನಗಳಲ್ಲಿ 12 ದಷ್ಟು ಭಾಗವನ್ನು ಮೀಸಲಿರಿಸಲಾಗಿದೆ . ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 50 ರಷ್ಟು ಸ್ಥಾನವನ್ನು ಕರ್ನಾಟಕದಲ್ಲಿ ಮೀಸಲಿರಿಸಲಾಗಿದೆ .

 

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದ ಸಹಾಯ

 ವಿಧಿ .41 . ಕೆಲವು ಸಂದರ್ಭಗಳಲ್ಲಿ ಕೆಲಸ ಮಾಡುವ , ಶಿಕ್ಷಣ ಪಡೆಯುವ & ಸರ್ಕಾರದ ಸಹಾಯ ಪಡೆಯುವ ಹಕ್ಕು

ಸಂವಿಧಾನದ 41 ನೇ ವಿಧಿ ಅನ್ವಯ ಅಂಗವಿಕಲರಿಗೆ , ನಿರುದ್ಯೋಗಿಗಳಿಗೆ ಉದ್ಯೋಗವನ್ನು ವೃದ್ಧರಿಗೆ , ರೋಗಿಗಳಿಗೆ , ಆಸಮರ್ಥರಿಗೆ ಸರ್ಕಾರವು ಸಹಾಯ ಮಾಡಬೇಕೆಂದು ನಿರ್ದೇಶಿಸಿದೆ . ಈ ವಿಧಿ ಅನ್ವಯ ಗ್ರಾಮೀಣ ಬಡವರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಭಾರತ ಸರ್ಕಾರವು 2001 ರಲ್ಲಿ ಸಂಪೂರ್ಣ ಗ್ರಾಮೀಣ ರೋಜಗಾರ್‌ ಯೋಜನೆ ಜಾರಿಗೆ ತಂದಿತು . ಈ ಕಾರ್ಯಕ್ರಮವನ್ನು ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಜಾರಿಗೊಳಿಸಿತು . 1952 ರಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ , 1960 ರಲ್ಲಿ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ , 1973 ರಲ್ಲಿ ಬರ ಪೀಡಿತ ಪ್ರದೇಶದ ಅಭಿವೃದ್ಧಿ , 1974 ರಲ್ಲಿ ಕನಿಷ್ಟ ಅಗತ್ಯತಾ ಕಾರ್ಯಕ್ರಮ , 1978 ರಲ್ಲಿ ಐ.ಆರ್.ಡಿ.ಪಿ ,1999 ರಲ್ಲಿ ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜನರ ಜೀವನಮಟ್ಟವನ್ನು ರಾಜ್ಯಗಳಲ್ಲಿ 65 ವರ್ಷ ಮೀರಿದ ವೃದ್ಧಾಪ್ಯ ವೇತನದ ನೀಡುವ ವ್ಯವಸ್ಥೆ ಜಾರಿಯಲ್ಲಿದೆ

 

ಕೆಲಸ ಮಾಡುವ ಮಹಿಳೆಯರಿಗೆ ಪ್ರಸೂತಿ ಪ್ರಯೋಜನ

 ವಿಧಿ 42 . ಕಲಸ ಮಾಡಲು ನ್ಯಾಯಯುತ ಮತ್ತು ದಯಾಪರ ಪರಿಸ್ಥಿತಿಗಆರುವಂತೆ ಮತ್ತು ಪ್ರಸೂತಿ ಪ್ರಯೋಜನ ದೊರೆಯುವಂತೆ ಉಪಬಂಧಿಸುವುದು

ಕೆಲಸ ಮಾಡಲು ಸೂಕ್ತವಾದ ಮಾನವೀಯ ಹಾಗೂ ನ್ಯಾಯಸಂಬಂಧ ವಾತಾವರಣವನ್ನು ಒದಗಿಸಬೇಕು ಮತ್ತು ಮಹಿಳೆಯರಿಗೆ ಪ್ರಸೂತಿ ಪ್ರಯೋಜನವನ್ನು ದೊರೆಯುವಂತೆ ಅವಕಾಶ ಸಂವಿಧಾನದ 42 ನೇ ವಿಧಿ ತಿಳಿಸುತ್ತದೆ . ಅನ್ವಯ ಸರ್ಕಾರವು 1961 ರಲ್ಲಿ ಪ್ರಸೂತಿ ಕ್ಷೇಮಾಭಿವೃದ್ಧಿ ಕಲ್ಪಿಸಬೇಕೆಂದು ಈ ವಿಧ ( Maternit Benifit Act ) ಗರ್ಭಿಣಿ ಮಹಿಳೆಯರಿಗೆ ವೇತನ ಸಹಿತ ರಜೆ ನೀಡುವ ಸೌಲಭ್ಯವನ್ನು ಒದಗಿಸಿದೆ .

ಕೆಲಸಗಾರರಿಗೆ ಜೀವನ ನಿರ್ವಹಣಾ ಸೌಲಭ್ಯ

 ವಿಧಿ .43 ಕಲಸಗಾರರಿಗೆ ಜೀವನ ನಿರ್ವಹಣಾ ಮಜೂರಿ , ಇತ್ಯಾದಿ

ದೇಶವು ಸೂಕ್ತ ಕಾನೂನು ರಚಿಸುವ ಮೂಲಕ ಅಥವಾ ಆರ್ಥಿಕ ವ್ಯವಸ್ಥೆಯ ಮೂಲಕ ಅಥವಾ ಇತರೆ ಯಾವುದೇ ರೀತಿಯಲ್ಲಿ ಕೃಷಿಯ , ಕೈಗಾರಿಕೆಯ ಅಥವಾ ಇತರೆ ಕೆಲಸಗಾರರಿಗೆ ಜೀವನ ನಿರ್ಮಾಣಕ್ಕೆ ಸಂಬಳ ವನ್ನು ಒದಗಿಸುವುದು ಅವರ ಜೀವನ ಮಟ್ಟವನ್ನು ಉತ್ತಮಗೊಳಿಸುವುದು ಅವರಿಗೆ ಸಾಮಾಜಿಕ ವಿಶೇಷವಾಗಿ ಮತ್ತು ಸಾಂಸ್ಕೃತಿಕ ಅವಕಾಶಗಳನ್ನು ಒದಗಿಸುವುದು ಗ್ರಾಮಾಂತರ ಪ್ರದೇಶಗಳಲ್ಲಿ ವೈಯಕ್ತಿಕ ಆಧಾರದ ಮೇಲೆ ಅಥವಾ ಸಹಕಾರಿ ವ್ಯವಸ್ಥೆಯ ಆಧಾರದ ಮೇಲೆ ಗೃಹ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಬೇಕೆಂದು ಸಂವಿಧಾನದ 43 ನೇ ವಿಧಿ ತಿಳಿಸುತ್ತದೆ . ಈ ವಿಧಿ ಅನ್ವಯ ಭಾರತ ಸರ್ಕಾರವು ಅನೇಕ ಭೂ ಸುಧಾರಣ ಕಾಯ್ದೆಗಳನ್ನು ಜಾರಿಗೆ ತಂದಿದ್ದು , ಆ ಮೂಲಕ ಬಡ ರೈತರಿಗೆ 20 ಜಮೀನುಗಳನ್ನು ಹೊಂದುವ ಹಕ್ಕನ್ನು ನೀಡಿತು . ಈ ಮೂಲಕ 2001 , ಸೆಪ್ಟೆಂಬರ್‌ವರೆಗೆ ದೇಶಾದ್ಯಂತ ಲಕ್ಷ ಎಕರೆ ಜಮೀನು ಎಲ್ಲಾ ವರ್ಗದ ಬಡ ರೈತರಿಗೆ ಹಂಚಿಕೆಯಾಗಿದೆ .

ಕಾರ್ಮಿಕ ಸಂಘಗಳ ಸ್ಥಾಪನೆ

ವಿಧಿ 43 ಎ . ಕೈಗಾರಿಕಗಳ ಆಡಆತ ವ್ಯವಸ್ಥೆಯಲ್ಲ ಕಲಸಗಾರರು ಭಾಗವಹಿಸುವುದು

ಈ ವಿಧಿ ಅನ್ವಯ ಕಾರ್ಮಿಕ ಸಂಘಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಯಿತು . ಈ ಮೂಲಕ ಕಾರ್ಮಿಕರು ತಮ್ಮ ಶೋಷಣೆಗಳನ್ನು ಸಂಘಟನೆಯ ಮೂಲಕ ಪ್ರತಿಭಟಿಸುವಂತೆ ಆಯಿತು . ಭಾರತದಲ್ಲಿ ಅನೇಕ ಕೈಗಾರಿಕಾ ಕಾರ್ಮಿಕ ಸಂಘಟನೆಗಳು ಜಾರಿಯಲ್ಲಿವೆ . ಅವುಗಳು ಕೈಗಾರಿಕೆಯ ಆಡಳಿತದಲ್ಲಿ ಭಾಗವಹಿಸುತ್ತಿವೆ . ಏಕರೂಪದ ಸಿವಿಲ್ ಕೋಡ್ ದಿಧಿ .44 ನಾಗರಿಕರಿಗೆ ಏಕರೂಪದ ಸಿವಿಲ್ ಸಂಹಿತೆ : * ಸಂವಿಧಾನದ 44 ನೇ ವಿಧಿಯ ಅನ್ವಯ ಎಲ್ಲಾ ನಾಗರಿಕರಿಗೂ ಹಾಗೂ ಧರ್ಮದವರಿಗೂ ದೇಶಾದ್ಯಂತ ಒಂದೇ ರೀತಿಯ ಸಿವಿಲ್ ಸಂಹಿತೆಯನ್ನು ಜಾರಿಗೆ ತರಲಾಗಿದೆ . * ಭಾರತ ದೇಶದಲ್ಲಿ ವಿವಿಧ ಧರ್ಮದವರು ತಮ್ಮದೇ ಆದ ಆಚರಣೆಗಳನ್ನು ಹೊಂದಲು ಅವಕಾಶವಿದೆ . ಆದರೆ , ಕಾನೂನಾತ್ಮಕವಾಗಿ ಕೆಲವು ನಿಯಮಗಳನ್ನು ಎಲ್ಲರೂ ಅನುಸರಿಸಬೇಕಾಗಿದೆ . ಇಂತಹ ಪದ್ಧತಿಯನ್ನು ಜಾರಿಗೆ ತರಬೇಕೆಂದು ದೇಶಾದ್ಯಂತ ಇಂದು ಚರ್ಚೆ ನಡೆಯುತ್ತಿದೆ . * ವಿವಾಹ ಕಾಯ್ದೆಯಲ್ಲಿ ತಾರತಮ್ಯವಿದ್ದು , ಇಂತಹ ತಾರತಮ್ಯವನ್ನು ಹೋಗಲಾಡಿಸಿ ಏಕರೂಪದ ಕಾನೂನು ಉರಿಗೆ ತರಲು ಇಂದು ಚರ್ಚೆ ಆರಂಭವಾಗಿದೆ .

 

ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಅವಕಾಶ

ವಿಧಿ 45 , ಮಕ್ಕಆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಅವಕಾಶ

ಸಂವಿಧಾನದ 45 ನೇ ವಿಧಿ ಅನ್ವಯ ಭಾರತ ಸರ್ಕಾರವು ಸಾರ್ವತ್ರಿಕ ಶಿಕ್ಷಣವನ್ನು ಜಾರಿಗೊಳಿಸಿ ಆ ಮೂಲಕ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುತ್ತಾ 1986 ರಲ್ಲಿ ರಾಷ್ಟ್ರೀಯ ಶಿಕ್ಷಣನೀತಿಯನ್ನು ಜಾರಿಗೆ ತರಲಾಯಿತು . ಸಾರ್ವತ್ರಿಕ ಶಿಕ್ಷಣವನ್ನು ಯಶಸ್ವಿಗೊಳಿಸಲು 1994 ರಲ್ಲಿ ಡಿ.ಪಿ.ಇ.ಪಿ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು . 2000 ರಲ್ಲಿ ಸಾರ್ವತ್ರಿಕ ಶಿಕ್ಷಣವನ್ನು ಯಶಸ್ವಿಗೊಳಿಸಲು ಸರ್ವಶಿಕ್ಷಣ ಅಭಿಯಾನ ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು ದೇಶಾದ್ಯಂತ ಜಾರಿಗೆ ತರಲಾಯಿತು . 2002 ರಲ್ಲಿ 8 ನೇ ತಿದ್ದುಪಡಿ ತಂದು 45 ನೇ ವಿಧಿಯನ್ನು ಬದಲಾವಣೆ ಮಾಡಿ 6 ರಿಂದ 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತಾ ಬಂದಿದೆ .

 

ಪರಿಶಿಷ್ಟ ಜಾತಿ & ಪಂಗಡದವರಿಗೆ ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿ ರಕ್ಷಣೆ

 ವಿಧಿ .46 , ಅನುಸೂಚಿತ ಜಾತಿಗಳ , ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆ

ಸಂವಿಧಾನದ 46 ನೇ ವಿಧಿಯ ಅನ್ವಯ ಭಾರತ ಸರ್ಕಾರವು ಪಂಗಡದವರ ಪರಿಶಿಷ್ಟ ಜಾತಿ ಮತ್ತು ಕ್ಷೇಮಾಭಿ ವೃದ್ಧಿಗಾಗಿ ಪರಿಶಿಷ್ಟ ವಸತಿ ನಿಲಯಗಳನ್ನು ಬಾಲಕ ಮತ್ತು ಬಾಲಕಿ ಯರಿಗೆ ಪ್ರತ್ಯೇಕವಾಗಿ ನಿರ್ಮಿಸಿದೆ .

1990-1991ನ್ನು ಸಾಮಾಜಿಕ ನ್ಯಾಯ ವರ್ಷವೆಂದು ಆಚರಿಸಿ ಸರ್ಕಾರವು ಉಚಿತ ಪಠ್ಯ ಪುಸ್ತಕಗಳನ್ನು ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ವರೆಗೆ ಅಭ್ಯಾಸ ಮಾಡುವ ಮಕ್ಕಳಿಗೆ ವಿತರಿಸಿತು . * ಅಸ್ಪೃಶ್ಯತೆ ಆಚರಣೆಯನ್ನು ಹೋಗಲಾಡಿಸಲು 1995 ರಲ್ಲಿ ಅಸ್ಪೃಶ್ಯತಾ ನಿಷೇಧ ಕಾಯ್ದೆ ಜಾರಿಗೆ ತಂದಿತು . 1976 ರಲ್ಲಿ ನಾಗರೀಕ ಹಕ್ಕು ಕಾಯ್ದೆ ಎಂದು ಜಾರಿಗೆ ತರಲಾಯಿತು . 1990 ರಲ್ಲಿ 65 ನೇ ತಿದ್ದುಪಡಿ ಮೂಲಕ ಪರಿಶಿಷ್ಟ ಜಾತಿ ಮತ್ತು ಪ . ಪಂಗಡದವರ ಹಿತ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಲಾಯಿತು .

 

ಪೌಷ್ಠಿಕ ಆಹಾರ & : ಉತ್ತಮ ಆರೋಗ್ಯ ಒದಗಿಸುವುದು

 ವಿಧಿ 47 . ಪೌಷ್ಠಿಕತೆಯ ಮಟ್ಟ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಕರ್ತವ್ಯ

ಈ ವಿಧಿ ಅನ್ವಯ ಆನೇಕ ರಾಜ್ಯಗಳು ಮಧ್ಯಪಾನ ವನ್ನು ನಿಷೇಧಿಸಿದೆ ಹಾಗೂ ಮಾದಕ ವಸ್ತುಗಳ ಸೇವನೆಯನ್ನು ನಿಷೇದಿಸಿವೆ . ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುತ್ತಾ ಬಂದಿದೆ .

ಅನೇಕ ರಾಜ್ಯಗಳಲ್ಲಿ ಈ ವಿಧಿಯನ್ವಯ ತಂಬಾಕನ್ನು ನಿಷೇಧಿಸಿದ್ದು , ಮದ್ಯಪಾನವನ್ನು ಕೂಡ ನಿಷೇಧಿಸಿವೆ . ಇತ್ತೀಚೆಗೆ ಬಿಹಾರ ರಾಜ್ಯವು ಮದ್ಯಪಾನವನ್ನು ನಿಷೇಧಿಸಿ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಯತ್ನಿಸಿದೆ . ಗುಜರಾತ್ ನಂತಹ ರಾಜ್ಯಗಳು ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ರಾಜ್ಯ ನಿರ್ದೇಶಕ ತತ್ವಗಳನ್ನು ಸಮಥವಾಗಿ ಅನುಷ್ಠಾನಗೊಳಿಸಿವೆ .

 

ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ

 ವಿಧಿ .48 ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ

ವಿಧಿಯ ಅನ್ವಯ ಸರ್ಕಾರವು ಕೃಷಿಯನ್ನು ಆಧುನೀಕರಣಗೊಳಿಸಿದೆ . ಹೈಬ್ರಿಡ್ ಭಿತ್ತನೆ ಬೀಜ , ರಾಸಾಯನಿಕ ಗೊಬ್ಬರ , ನೀರಾವರಿ ಪದ್ಧತಿಗಳನ್ನು ಬಳಸಲು ರೈತರಿಗೆ ಸಹಾಯ ಮಾಡುತ್ತಿದ್ದು ಉತ್ತಮ ಇಳುವರಿಯನ್ನು ಪಡೆಯಲು ಸಹಕರಿಸುತ್ತಿದೆ . ಹೈಬ್ರಿಡ್ ತಳಿಯ ಹಸುಗಳನ್ನು , ಬಳಸಿ ಹೆಚ್ಚಿನ ಹಾಲನ್ನು ಉತ್ಪಾದಿಸುವಂತೆ ಹೈನುಗಾರಿಕೆ ಮಾಡುತ್ತಿದೆ . ಸಂಶೋಧನೆ ಕೃಷಿ ಸಂಶೋಧನೆಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ .

ತುಂತುರು ನೀರಾವರಿ , ಹನಿ ನೀರಾವರಿ ಯೋಜನೆಗಳಿಗೆ ಸರ್ಕಾರವು ಹೆಚ್ಚಿನ ದರಗಳಲ್ಲಿ ರಿಯಾಯಿತಿ ಕೊಡುವ ಮೂಲಕ ಕೃಷಿಯನ್ನು ಉತ್ತೇಜಿಸುತ್ತಿದೆ .

ಹೈನುಗಾರಿಕೆಗೆ ಸಂಬಂಧಿಸಿದಂತೆ ಉತ್ತಮ ತಳಿಯ ಜಾನುವಾರುಗಳನ್ನು ಅಭಿವೃದ್ಧಿಪಡಿಸಿ , ರೈತರುಗಳಿಗೆ ವಿತರಿಸಲಾಗುತ್ತಿದೆ .

 

ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ

 ವಿಧಿ , 48 ಎ , ಪರಿಸರ ಸಂರಕ್ಷಣೆ ಮತ್ತು ಸುಧಾರಣೆ ಮತ್ತು ಅರಣ್ಯಗಳ ಹಾಗೂ ವನ್ಯಜೀವಿಗಳ ರಕ್ಷಣೆ

ಸಂವಿಧಾನದ 48 ಎ ವಿಧಿಯು ಮತ್ತು ಪರಿಸರವನ್ನು ವನ್ಯ ಸಂರಕ್ಷಿಸಬೇಕು ಹಾಗೂ ಅರಣ್ಯ ಜೀವಿಗಳನ್ನು ನಾಶವಾಗದಂತೆ , ಸಂರಕ್ಷಿಸುವುದು ಮತ್ತು ಸುಧಾರಿಸಬೇಕೆಂದು ನಿರ್ದೇಶನವನ್ನು ನೀಡಲಾಗಿದೆ .

ವನ್ಯಜೀವಿಗಳನ್ನು ಸಂರಕ್ಷಿಸಲು 1972 ರಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ . ಅರಣ್ಯ ಸಂರಕ್ಷಣೆಗಾಗಿ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು 1980 ರಲ್ಲಿ ಜಾರಿಗೆ ತಂದಿದೆ .

1988 ರಲ್ಲಿ ರಾಷ್ಟ್ರೀಯ ಅರಣ್ಯ ನೀತಿಯನ್ನು ಜಾರಿಗೆ ತಂದು ಅರಣ್ಯಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡುತ್ತಿದೆ . ಸಾಮಾಜಿಕ ಅರಣ್ಯ ಯೋಜನೆ ಹಾಗೂ ವನಮಹೋತ್ಸವದ ಅಡಿಯಲ್ಲಿ ಅರಣ್ಯ ಬೆಳೆಸುವ ಹಾಗೂ ಸಂರಕ್ಷಿಸುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ .

ಜೂನ್ 5 ರಂದು ಪರಿಸರ ದಿನಾಚರಣೆ , ಮಾರ್ಚ್ 21 ರಂದು ಅರಣ್ಯ ದಿನಾಚರಣೆ , ಮಾರ್ಚ್ 22 ರಂದು ಜಲದಿನ , ಏಪ್ರಿಲ್ 22 ರಂದು ಭೂದಿನ , ಸೆಪ್ಟೆಂಬರ್ 16 ರಂದು ಓಜೋನ್ ರಕ್ಷಣಾ ದಿನ ಹೀಗೆ ಪರಿಸರಕ್ಕೆ ಸಂಬಂಧಿಸಿದಂತೆ ದಿನಗಳನ್ನು ಆಚರಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ .

 

ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳ , ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ

 ವಿಧಿ .49 . ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳ , ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ

ಸಂಸತ್ತು ಕಾನೂನಿನ ಮೂಲಕ ರಾಷ್ಟ್ರೀಯ ಮಹತ್ವವುಳ್ಳ ಕಲಾತ್ಮಕ ಐತಿಹಾಸಿಕ ,

ಆಸಕ್ತಿ ಹುಟ್ಟಿಸುವ ಪ್ರತಿಯೊಂದು ಸ್ಥಳವನ್ನು ಅಥವಾ ವಸ್ತುವನ್ನು ಅಪಹರಿಸದಂತೆ ,

ವಿರೂಪಗೊಳಿಸದಂತೆ ,

ನಾಶಗೊಳಿಸದಂತೆ ,

ಮಾಡಬೇಕೆಂದು ಸಂವಿಧಾನದ 49 ನೇ ಮಾರದಂತೆ ವಿಧಿ ನಿರ್ದೇಶಿಸಿದೆ .

ಈ ವಿಧಿಯನ್ನು ಅನುಷ್ಟಾನಕ್ಕೆ ತರಲು ಪ್ರಾಚೀನ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಪ್ರಾಚ್ಯ ಸ್ಥಳ ಹಾಗೂ ಪಳೆಯುಆಕೆ ಕಾಯ್ದೆಯನ್ನು 1951 ರಲ್ಲಿ ಜಾರಿಗೆ ತಂದು ದೇಶದ ಸ್ಮಾರಕ ಗಳನ್ನು ಐತಿಹಾಸಿಕ ಸ್ಥಳಗಳನ್ನು ವಸ್ತುಗಳನ್ನು ಸಂರಕ್ಷಿಸಲಾಗುತ್ತಿದೆ .

 

ತಿದ್ದುಪಡಿಯಾದ ರಾಜ್ಯ ನಿರ್ದೇಶಕ ತತ್ವಗಳು

ವಿಧಿ 31 ಎ ಯನ್ನು 1972 ರಲ್ಲಿ ಮಾಡಲಾದ ಸಂವಿಧಾನದ 25 ನೇ ತಿದ್ದುಪಡಿಯಲ್ಲಿ ಸೇರಿಸಲಾಯಿತು . ಈ ಮೂಲಕ ರಾಜ್ಯ ನಿರ್ದೇಶಕ ತತ್ವಗಳನ್ನು ಉನ್ನತೀಕರಿಸಲಾಯಿತು .

45 ನೇ ವಿಧಿ ಪ್ರಕಾರ ಸಂವಿಧಾನ ಜಾರಿಗೆ ಬಂದ 10 ವರ್ಷದೊಳಗೆ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದು ಸಂವಿಧಾನ ಜಾರಿಗೆ ಬಂದಾಗ ಇದ್ದ ವಿವರಣೆಯನ್ನು 2002 ರಲ್ಲಿ 86 ನೇ ತಿದ್ದುಪಡಿ ಮಾಡಿ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದನ್ನು 21 ಎ ಅನ್ವಯ ಮಗುವಿನ ಮೂಲಭೂತ ಹಕ್ಕನಾಗಿಸಿದೆ .

51 ಕೆ ಅನ್ವಯ ಪೋಷಕರ ಕರ್ತವ್ಯವನ್ನಾಗಿಸಿದೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವಂತೆ ತಿದ್ದುಪಡಿ ಮಾಡಲಾಗಿದೆ .

ವಿಧಿ 48 ಎ ನ್ನು 1976 ರಲ್ಲಿ 42 ನೇ ತಿದ್ದುಪಡಿ ಮಾಡಿ ಈ ವಿಧಿ ಆನ್ವಯ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಹಾಗೂ ವನ್ಯಜೀವಿ ರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರಕ್ಕೆ ನಿರ್ದೇಶಿಸಿ , ರಾಜ್ಯ ನಿರ್ದೇಶಕ ತತ್ವಕ್ಕೆ ಸೇರಿಸಲಾಯಿತು .

 


0 Comments

Leave a Reply

Avatar placeholder

Your email address will not be published. Required fields are marked *