ರಗಳೆ

ರಗಳೆ,ragale in kannada,harihara ragale,kannada ragale galu,kannada grammar,kannada grammar in kannada,kannada basic grammar

 

 

ರಗಳೆ,ragale in kannada,harihara ragale,kannada ragale galu,kannada grammar,kannada grammar in kannada,kannada basic grammar

 

 

 

ರಗಳೆ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿರುವ ಛಂದೋಜಾತಿ ಗಳಲ್ಲಿ ಒಂದು . ರಗಳೆ ಎಂಬ ನಾಗವರ್ಮನು ಮಾತನ್ನು ಮೊಟ್ಟ ಮೊದಲು ಮೊದಲನೆಯ ತನ್ನ ಛಂದೋಂಬುದಿಯಲ್ಲಿ ಬಳಸಿರುವಂತೆ ಕಂಡು ಬರುತ್ತದೆ . ಅಲ್ಲದೆ ರಘಟ ಎಂಬ ಮಾತನ್ನೂ ಇಲ್ಲಿ ಬಳಸುತ್ತಾನೆ . ರಗಳೆಗಳು ಇತ್ತ ಪೂರ್ಣ ಸಂಸ್ಕೃತಗತಿಯ ಬಂಧಗಳೂ ಅಲ್ಲ . ಅತ್ತ ಪೂರ್ಣ ಪ್ರಾಕೃತ ಛಂದಾಧರಿತಗಳೂ ಅಲ್ಲ . ನಾಗವರ್ಮ ಹಾಗೂ ಜಯಕೀರ್ತಿಗಳಿ ಬರೂ ತಮ್ಮಕೃತಿಗಳಲ್ಲಿ ರಗಳೆಯ ಲಕ್ಷಣವನ್ನು ಹೇಳುತ್ತಾರೆ . ಲಕ್ಷಣಗಳು : – ಗಣ ವಿನ್ಯಾಸ ವೈವಿಧ್ಯವನ್ನು ತೋರಿಸುವಂತಿರುತ್ತದೆ .

ಅಂತ್ಯಪಾಸವಿರುವುದರಿಂದ ಎರಡೆರಡು ಪಾದಗಳು ಒಂದೊಂದು ಗುಂಪುಗಳಾಗಿರುವಂತೆ ಕಂಡು ಬರುತ್ತದೆ .

ಪ್ರತಿಯೊಂದು ಪಾದದಲ್ಲಿಯೂ ನಿಶ್ಚಿತ ಸಂಖ್ಯೆಯ ಮಾತ್ರೆಗಳು ಬರುತ್ತವೆ .

ನಿಶ್ಚಿತವಾದ ಮಾತ್ರಾಲಯದ ಪರಿಣಾಮವೂ ಕಂಡು ಬರುತ್ತದೆ .

ರಗಳೆ ಪ್ರಕಾರ ಮೊದಲು , ಆದಿಕವಿ ಪಂಪನ ಆದಿ ಪುರಾಣ & ಪಂಪ ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ . ಆದಿ ಪುರಾಣದಲ್ಲಿ ಬಳಕೆಯಾಗಿರುವ ರಗಳೆಯನ್ನು ರಗಳೆಯೆಂದೂ , ಮಟಟ್ ಮಂದಾನಿಲ ರಗಳೆಯೆಂದೂ ಕರೆಯಲಾಗಿದೆ . ಹರಿಹರನ ಕಾವ್ಯಗಳಲ್ಲಿ ರಗಳೆ ಹೆಚ್ಚು ಬಳಕೆಯಲ್ಲಿರುವುದನ್ನು ಕಾಣಬಹುದು . ರಗಳೆಯ ವಿಧಗಳು :

ಉತ್ಸಾಹ ರಗಳೆ

ಪಂಪನ ಪಂಪ ಭಾರತ ಹಾಗೂ ರನ್ನನ ಅಜಿತನಾಥಮ ರಾಣದಲ್ಲಿ ಉತ್ಸಾಹ ರಗಳೆಯ ಮೊದಲ ಸುಳಿವು ಕಂಡು ಬರುತ್ತದೆ . ಈ ವಿಧದ ರಗಳೆಯಲ್ಲಿ ಇಂತಿಷ್ಟೇ ಪಾದಗಳಿರಬೇಕೆಂಬ ನಿಯಮವಿಲ್ಲ . ಪ್ರತಿಯೊಂದು ಪಾದದಲ್ಲಿಯೂ ಮೂರು ಮಾತ್ರೆಯ ನಾಲ್ಕು ಗಣಗಳು ಅಥವಾ ಮೂರು ಮಾತ್ರೆಯ ಮೂರು ಗಣಗಳು ಒಂದು ಕೊನೆಯಲ್ಲಿ ಬಂದು ಗುರುವೂ ಬರುವುದು . ಅಂತ್ಯ ಪ್ರಾಸವಿರುತ್ತದೆ .

ಉದಾ : –1 ನೇ ಪ್ರಕಾರ

ಮಾವಿನಡಿಯೊಳಾಡುತುಂ = 3 : 3 : 3 : –

ಪಾಡನೆಯೇ ಕೇಳುತಂ = 3 : 3 : 3 : –

ಪೂವಿನಿಂತ ಕಳೆಯುತುಂ = 3 : 3 : 3 : –

ತೊಲಗದಿ ದಟರೆಸೆಯುತುಂ

 2 ನೇ ಪ್ರಕಾರ

ಕುಳಿರ್ವಪೂಗೊಳಂಗಳಲ್ಲಿ 3 : 3 : 3 : 3

ತಳಿರ ಕಾವಣಂಗಳಲ್ಲಿ 3 : 3 : 3 : 3

ತುಂಬಿಎಂಡಿಯಂತೆ ಪಾಡಿ 3 : 3 : 3 : 3

ಜಕ್ಕವಕ್ಕಿಯಂತೆ ಕೂಡಿ 3 : 3 : 3 : 3

ಮಂದಾನಿಲ ರಗಳೆ

ಇದು ಪ್ರಾಕೃತದಲ್ಲಿರುವ ಪಜ್ಜಟಿಕೆಯ ಪ್ರಭಾವದಿಂದ ಕನ್ನಡಕ್ಕೆ ಬಂದಿರುವುದಾಗಿದೆ . ಮಟ್ಟ ರಗಳೆ ಎಂದು ಕರೆಯುವ ಪಂಪನ ಕಾವ್ಯದಲ್ಲಿ ಬಳಕೆಯಾಗಿರುವ ರಗಳೆಯಾಗಿದೆ . ಮಂದಾನಿಲ ರಗಳೆಯ ಪ್ರತಿಯೊಂದು ಪಾದದಲ್ಲಿಯೂ ನಾಲ್ಕು ನಾಲ್ಕು ಮಾತ್ರೆಯ ಸಾಲುಗಳು ಇರುತ್ತವೆ .

ಉದಾ : – 1 ನೇ ಪ್ರಕಾರ

ನಾಲ್ಕು ಮಾತ್ರೆಯ ನಾಲ್ಕು ಗಣಗಳು ಬರುತ್ತವೆ . ಅಂತ್ಯ ಪ್ರಾಸ ನಿಯತವಾಗಿರುತ್ತದೆ .

ಪೊವಿಲ ಬೆಡಂಗಂ ಮಗೆ ಮೆಚ್ಚೆ ನೋಡಿ = 4 : 4 : 4 : 4

ದಿವಿ ಜೇನ್ ವಿಲಾಸದೊಳೀತು ಕೂಡಿ = 4 : 4 : 4 : 4 –

2 ನೇ ಪ್ರಕಾರ

ಒಟ್ಟು 16 ಮಾತ್ರೆಗಳಾದರೂ ಗಣಗಳಲ್ಲಿ ವ್ಯತ್ಯಾಸ ಉಂಟು

ಈ ರಗಳೆಯಲ್ಲಿ 3 ಮಾತ್ರೆಯ ಗಣದ ಮುಂದೆ 5 ಮಾತ್ರೆಯ ಗಣ ಹೀಗೆ ಎರಡೆರಡು ಗಣ .

ಅಂತ್ಯಪ್ರಾಸ ಕಡ್ಡಾಯ

ಉದಾ : ಅಲ್ಲಿ ಸೊಗಯಿಸುವ ಕೃತಕ ಗಿರಿಗಳಿಂ 3 : 5 : 3 : 5

ಕಲ್ಪ ತರುಗಳನೆ ಪೋಲ್ವ ಮರಗಳಿಂ 3 : 5 : 3 : 5

ಲಲಿತ ರಗಳೆ

ಇದು ಕೂಡ ಹತ್ತನೇಯ ಶತಮಾನದಿಂದಲೇ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿದೆ . ಪಂಪನು ತನ್ನ ಆದಿ ಪುರಾಣದಲ್ಲಿ ಇದನ್ನು ಪ್ರಯೋಗ ಮಾಡಿದ್ದಾನೆ . ಇವನಲ್ಲದೆ ರನ್ನನು ಕೂಡ ತನ್ನ ಅಜಿತನಾಥ ಪುರಾಣದಲ್ಲಿ ಈ ರಗಳೆಯ ಪ್ರಯೋಗ ಮಾಡಿರುವುದನ್ನು ನೋಡಬಹುದು . ಉಳಿದೆರಡು ರಗಳೆಗಳಿಗಿಂತ ಲಲಿತ ರಗಳೆಯು ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿದೆ . ಪ್ರತಿ ಪಾದದಲ್ಲಿಯೂ ಐದು ಮಾತ್ರೆಯ ನಾಲ್ಕು ಗಣಗಳಿರುತ್ತವೆ . ಅಲ್ಲದೆ ಅಂತ್ಯ ಪ್ರಾಸವಿರುವುದೂ ಕಂಡು ಬರುತ್ತದೆ .

ಉದಾ : – 5 : 5 : 5 : 5 = 20 ವಿಷಯ ವಿಷ ವಲ್ಲಿಯುಂ ಪರ್ಚಿಸುವ ಜಲಧಾರ ಸಾಧು ತ್ವಮ್ ಕಿಡಿಸಿ ನಡೆಸುವ ದುರಾಚಾರ ಕಪಟ ನಾಟಕದ ತತಿಗೆ ತಾನೆ ನೆಲೆತೆನಿಸುವಳ ಕೋಪ ಗ್ರಹಾ ವೇಶ ಜನ ನಿಧಿಯೆನಿಸುವಳ ಶಾಸ್ತ್ರ ದೃಷ್ಟಿಗೆ ತಿರುವ ಪಟಲತತಿಯೆನಿಸುವಳ ದೋಷ ಮೆಂಬಾಶೀವಿಷಕ್ಕೆ ಮತ್ತೆನಿಸುವ

ಅಂಶಗಣ

ಅಂಶಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಂಶ ಗಣ , ಈ ಅಂಶಗಳ ಮೊದಲನೆಯ ಅ ೦ ಶ ಒಂದು ಗುರು ಇಲ್ಲವೆ ಎರಡುಲಘು ಆಗಿರುತ್ತದೆ . ಒಂದೊಂದು ಅಕ್ಷರಗಳಲ್ಲಿ ಅದು ಗುರುವಾಗಿರಲಿ ಅಥವಾ ಲಘುವಾಗಿರಲಿ ಒಂದೊಂದು ಅಂಶಗಳಾಗತ್ತದೆ . ಉದಾ : – ಕಮಲ ಇಲ್ಲಿ ಮೊದಲ ಎರಡು ಅಕ್ಷರಗಳು ಲಘುಗಳು . ಆದ್ದರಿಂದ ಮೊದಲ ಎರಡು ಅಕ್ಷರಗಳು ಸೇರಿ ಒಂದು ಅಂಶ , ಮುಂದಿನ ಒಂದು ಅಕ್ಷರ ಲಘುವೇ ಇರಲಿ ಗುರುವೇ ಇರಲಿ ಅದು ಮತ್ತೊಂದು ಅಂಶ ಹೀಗೆ ಅಂಶಗಣಹಳ ಪ್ರತಿಯೊಂದು ಗಣವನ್ನು ಗುರ್ತಿಸಬೇಕಾಗುತ್ತದೆ . ಅಂಶಗಣದಲ್ಲಿ ಮೂರು ವಿಧ

1 ) ಬ್ರಹ್ಮ ಗಣ : – ಇದನ್ನು ಗುರು ಲಘುಗಳ ವಿನ್ಯಾಸದ ಆಧಾರದ ಮೇಲೆ ನಾಲ್ಕು ರೀತಿಯಾಗಿ ಬಳಕೆಯಾಗುತ್ತವೆ .

2 ) ವಿಷ್ಣು ಗಣ : – ವಿಷ್ಣುಗಣವನ್ನು ಗುರುಲಘುಗಳ ಆಧಾರದ ಮೇಲೆ 8 ರೀತಿಯಾಗಿ ಬಳಕೆಯಾಗುತ್ತವೆ .

 3 ) ರುದ್ರ ಗಣ : – ರುದ್ರಗಣವು ಗುರು ಲಘು ವಿನ್ಯಾಸದಲ್ಲಿ 16 ತೆರನಾಗಿರುತ್ತದೆ .

 


0 Comments

Leave a Reply

Avatar placeholder

Your email address will not be published. Required fields are marked *