ಮೂಲಭೂತ ಹಕ್ಕು ( Fundamental Rights )
ಮೂಲಭೂತ ಹಕ್ಕು, mulabhutha hakkugalu in kannada, fundamental rights, right against exploitation, right to constitutional remedies
ಭಾರತದ ಸಂವಿಧಾನವು ಹೆಚ್ಚು ಜನಪ್ರಿಯವಾಗಲು ಮೂಲ ಕಾರಣವೇ ಮೂಲಭೂತ ಹಕ್ಕುಗಳನ್ನು ಭಾರತದ ಒಳಗೊಂಡಿರುವುದು , ಪ್ರತಿಯೊಬ್ಬ ಪ್ರಜೆಯೂ ಶಾಂತಿ , ನೆಮ್ಮದಿಯಿಂದ ಸ್ವತಂತ್ರವಾಗಿ ಬದುಕಲು ಸಹಕಾರಿಯಾದ ಮಾನವೀಯ ಹಕ್ಕುಗಳನೆ “ ಮೂಲಭೂತ ಹಕ್ಕುಗಳು ” ಎನ್ನುವರು , ಇಂತಹ ಮೂಲಭೂತ ಹಕ್ಕುಗಳ ಬಗ್ಗೆ ಭಾರತದ ಸಂವಿಧಾನದ 3 ನೇ ಭಾಗದಲ್ಲಿ , 12 ನೇ ವಿಧಿಯಿಂದ 35 ನೇ ಮನೆಗೆ ವಿಧಿವರೆಗೆ ವಿವರಣೆಯನ್ನು ಒದಗಿಸಿದೆ . ಇಂತಹ ಮಹತ್ವವಾದಂತಹ ಮೂಲಭೂತ ಹಕ್ಕುಗಳನ್ನು ಅಮೆರಿಕಾ ಸಂವಿಧಾನದ ‘ ಜಲ್ಸ್ ಆಫ್ ರೈಟ್ಸ್ ‘ ( Bills of Rights ) ಎಂಬ ಹಕ್ಕುಗಆಂದ ಎರವಲು ಪಡೆಯಲಾಗಿದೆ . ವ್ಯಕ್ತಿಯ ಮಾನಸಿಕ , ಭಾವನಾತ್ಮಕ ನೈತಿಕ , ಅಧ್ಯಾತ್ಮಿಕ ಬೆಳವಣಿಗೆಯ ಮೂಲಕ ಸರ್ವತೋಮುಖ ಬೆಳವಣಿಗೆ ಸಹಕಾರಿಯಾದ ಮೂಲಭೂತ ಅವಶ್ಯಕವಾಗಿರುವ ಅಂಶಗಳೇ ಮೂಲಭೂತ ಹಕ್ಕುಗಳು , ಮೂಲಭೂತ ಹಕ್ಕುಗಳನ್ನು “ ಭಾರತದ ಮ್ಯಾಗ್ನಕಾರ್ಟ ” ( Magna carta of India ) ಎನ್ನುವರು .
ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಸಂವಿಧಾನದ ಕೊನೆಯ ಕರಡು ಪ್ರತಿಯಲ್ಲಿ 1949 , ನವೆಂಬರ್ 26 ರಂದು ಅಳವಡಿಸಿಕೊಳ್ಳಲಾಯಿತು .
ಇಂತಹ ಮಹತ್ವವಾದ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಲು ಅನೇಕ ಐತಿಹಾಸಿಕ ಹಂತಗಳನ್ನು ಹೊಂದಿದೆ .
ಇಂಗ್ಲೆಂಡ್ನ ಚಾರ್ಟರ್ , ಅಮೆರಿಕಾ ಸಂಯುಕ್ತ ಸಂಸ್ಥಾನದ ಬಿಲ್ಸ್ ಆಫ್ ರೈಟ್ಸ್ , ಮಾನವನ ಹಕ್ಕುಗಳ ಫ್ರಾನ್ಸ್ನ ಘೋಷಣೆಯಿಂದ ಪ್ರೇರಿತರಾಗಿ ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಸೇರ್ಪಡೆ ಮಾಡಲಾಯಿತು .
ಮೂಲಭೂತ ಹಕ್ಕುಗಳ ಮಹತ್ವದ ಬಗ್ಗೆ ಗ್ರಂಥಗಳ ಮೂಲಕ ಇಂಗ್ಲೆಂಡಿನ ಜಾನ್ಲಾಕ್ , ಫ್ರಾನ್ಸಿನ ಜೆ.ಜೆ. ರೊಸೋ ಮತ್ತು ಮಾಂಟೆಸ್ಟೋರವರು ಪರಿಚಯಿಸಿದ್ದು ಅದರಿಂದಲೂ ಕೂಡ ಪ್ರೇರಣೆ ಹೊಂದಿ ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಸೇರ್ಪಡೆ ಮಾಡಲಾಯಿತು
ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದ ನಂತರ ಸ್ವಾತಂತ್ರ್ಯದ ಜೊತೆಗೆ ಪ್ರಜೆಗಳ ಹಕ್ಕುಗಳನ್ನು ಕೂಡ ಪಡೆಯಲು ಬೇಡಿಕೆಯನ್ನು ಸಲ್ಲಿಸುತ್ತಾ ಬಂದಿತು . 1895 ರ ಭಾರತದ ಸಂವಿಧಾನ ಮಸೂದೆ ( The Constitution of India bill ) . ಹಕ್ಕುಗಳನ್ನು ನಮೂದಿಸಿ ಅವುಗಳ ಮಹತ್ವವನ್ನು ಒತ್ತಿ ಹೇಳಿತು
1925 ರಲ್ಲಿ ಶ್ರೀಮತಿ ಅನಿಬೆಸೆಂಟ್ರವರ ಕಾಮನ್ವೆಲ್ತ್ ( Common wealth
of In dia bill ) ನಲ್ಲಿ
- ವ್ಯಕ್ತಿ ಸ್ವಾತಂತ್ರ್ಯ ,
- ಆತ್ಮ ಸಾಕ್ಷಿ ಸ್ವಾತಂತ್ರ್ಯ ,
- ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ,
- ಸಭೆ ಸೇರುವ ಸ್ವಾತಂತ್ರ್ಯ ,
- ಲಿಂಗದ ಆಧಾರದ ಮೇಲೆ ತಾರತಮ್ಯದ ನಿಷೇಧ ,
- ಉಚಿತ ಪ್ರಾಥಮಿಕ ಶಿಕ್ಷಣ ,
7 , ಉಚಿತವಾಗಿ ಸಾರ್ವಜನಿಕ ಸ್ಥಳಗಳನ್ನು ಬಳಕೆ ಮಾಡುವುದು . ಮುಂತಾದ 7 ಮೂಲಭೂತ ಹಕ್ಕುಗಳನ್ನು ನಮೂದಿಸಿತ್ತು .
1928 ರಲ್ಲಿ ಸರ್ವ ಪಕ್ಷಗಳ ಸಮಾವೇಶದಲ್ಲಿ ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಸಂವಿಧಾನಾತ್ಮಕ ಸುಧಾರಣೆಯಾಗಬೇಕೆಂದು ಮನವಿ ಮಾಡಿದ್ದವು .
ಇದರ ಅಧ್ಯಯನ ಹಾಗೂ ಶಿಫಾರಸ್ಸಿಗಾಗಿ ಕೂಡ ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ 11 ಜನರ ಆಯೋಗವನ್ನು ರಚಿಸಲಾಯಿತು .
ಈ ವರದಿಯು ಮೂಲಭೂತ ಹಕ್ಕುಗಳ ಬಗ್ಗೆ ಭಾರತದ ಅಳವಡಿಸಿ ಅದನ್ನು ಯಾವುದೇ ಸಂದರ್ಭದಲ್ಲೂ ಕೂಡ ಮೊಟುಕುಗೊಳಿಸಬಾರದೆಂದು ಶಿಫಾರಸ್ಸು ಮಾಡಿತು .
ಮೂಲಭೂತ ಹಕ್ಕು
1)ಸಮಾನತೆಯ ಹಕ್ಕು
2 ) ಸ್ವಾತಂತ್ರ್ಯದ ಹಕ್ಕು
3 ) ಶೋಷಣೆ ವಿರುದ್ಧದ ಹಕ್ಕು
4) ಧಾರ್ಮಿಕ ಸ್ವಾತಂತ್ರದ ಹಕ್ಕು
5 ) ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮತ್ತು
ಎಫ್ ) ಸಂವಿಧಾನ ಪರಿಹಾರ ಹಕ್ಕು
0 Comments