ಮೂಲಭೂತ ಕರ್ತವ್ಯಗಳ ಲಕ್ಷಣಗಳು

ಮೂಲಭೂತ ಕರ್ತವ್ಯಗಳ ಲಕ್ಷಣಗಳು , fundamental duties , fundamental rights , right against exploitation , right to constitutional remedies

 

ಮೂಲಭೂತ ಕರ್ತವ್ಯಗಳ ಲಕ್ಷಣಗಳು , fundamental duties , fundamental rights , right against exploitation , right to constitutional remedies

ಮೂಲಭೂತ ಕರ್ತವ್ಯಗಳು ಈ ಕೆಳಕಂಡ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ .

 

1 ನೈತಿಕ ಕರ್ತವ್ಯಗಳು

ಮೂಲಭೂತ ಕರ್ತವ್ಯಗಳು ಭಾರತದ ಸಂವಿಧಾನ , ರಾಷ್ಟ್ರಗೀತೆಯನ್ನು ಗೌರವಿಸುವಂತಹ ಕರ್ತವ್ಯವನ್ನು ಹೊಂದಿರುವುದರಿಂದ ಇವು ವ್ಯಕ್ತಿಯ ನೈತಿಕ ಹಾಗೂ ನಾಗರೀಕ ಕರ್ತವ್ಯಗಳಾಗಿವೆ .

 

  1. ಭಾರತದ ಜೀವನ ಶೈಲಿಯನ್ನು ಉತ್ತೇಜಿಸುವಂತವು .

ಮೂಲಭೂತ ಕರ್ತವ್ಯಗಳಲ್ಲಿ ದೇಶದ ಸಂಸ್ಕೃತಿಯನ್ನು , ಪರಂಪರೆಯನ್ನು ಉಳಿಸಿ , ಬೆಳೆಸಲು ನಿರ್ದೇಶಿಸಿರುವುದರಿಂದ ಇವು ಭಾರತದ ಜೀವನ ಶೈಲಿಯನ್ನು ಉತ್ತೇಜಿಸುವಂತವಾಗಿದೆ .

 

3 , ಎಲ್ಲರಿಗೂ ಅನ್ವಯವಾಗುವಂತದ್ದು .

ಭಾರತದ ಪ್ರತಿಯೊಬ್ಬ ಮೂಲಭೂತ ಹಕ್ಕುಗಳಂತೆಯೇ ಮೂಲಭೂತ ಕರ್ತವ್ಯಗಳು ಕೂಡ ನಾಗರೀಕನಿಗೂ ಯಾವುದೇ ಲಿಂಗ , ಜಾತಿ , ಜನಾಂಗ , ಧರ್ಮ , ತಾರತಮ್ಯವಿಲ್ಲದೆ ಆನ್ವಯಿ ಸುತ್ತವೆ ಹಾಗೂ ಪ್ರತಿಯೊಬ್ಬರು ಇವುಗಳನ್ನು ಪಾಲಿಸಬೇಕಾದ್ದರಿಂದ ದೇಶದಲ್ಲಿ ಸಾರ್ವತ್ರಿಕ ಅನ್ವಯವನ್ನು ಹೊಂದಿವೆ .

 

4.ಇವು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದವು .

ಇವು ರಾಷ್ಟ್ರದ ನೈಸರ್ಗಿಕ ಸಂಪತ್ತುಗಳಾದ ಅರಣ್ಯ ಸಂಪತ್ತು , ಸರೋವರ , ನಟ , ಸಾರ್ವಜನಿಕ ಸಂಪತ್ತುಗಳನ್ನು ಸಂರಕ್ಷಿಸುವುದು ಹಾಗೂ ಶಿಕ್ಷಣವನ್ನು ಒದಗಿಸುವಂತಹ ಮಹತ್ತರವಾದ ಜವಾಬ್ದಾರಿಗಳನ್ನು ನಾಗರೀಕರಿಗೆ ನೀಡಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದೆ .

 

  1. ಇವು ರಾಜ್ಯ ನಿರ್ದೇಶಕ ತತ್ವವನ್ನು ಹೋಲುವಂತವು

ಮೂಲಭೂತ ಕರ್ತವ್ಯಗಳಿಗೆ ನ್ಯಾಯಾಲಯದಿಂದ ಯಾವುದೇ ರಕ್ಷಣೆ ಇಲ್ಲದ ಕಾರಣ ಇವುಗಳು ರಾಜ್ಯ ನಿರ್ದೇಶಕ ತತ್ವವನ್ನು ಹೋಲುತ್ತದೆ

 

6 ಮೂಲಭೂತ ಕರ್ತವ್ಯಗಳ ಇತಿಮಿತಿಗಳು

ಮೂಲಭೂತ ಸೇರ್ಪಡೆ ಕರ್ತವ್ಯಗಳನ್ನು ಸಂವಿಧಾನದಲ್ಲಿ ಮಾಡಿರುವುದು . ಉತ್ತಮವಾದದ್ದಾದರೆ ಇತಿಮಿತಿಗಳಿಂದ ಕೂಡಿದೆ ಎಂಬ ಮತ್ತೊಂದೆಡೆ ವಾದ ಕೇಳಿ ಬರುತ್ತಿದೆ . ಅಂತಹ ಇತಿಮಿತಿಗಳೆಂದರೆ

 

, ಅವಶ್ಯಕವಾದ ಕರ್ತವ್ಯಗಳನ್ನು ಅಳವಡಿಸಲಾಗಿಲ್ಲ

ಭಾರತದ ನಾಗರೀಕನು ಕೆಲವು ಅನಿವಾರ್ಯವಾಗಿ ನಿಭಾಯಿಸಬೇಕಾದ ಕರ್ತವ್ಯಗಳಾದ ಮತದಾನದ ಕರ್ತವ್ಯ , ಕುಟುಂಬ ಯೋಜನೆ , ತೆರಿಗೆ ಕಟ್ಟುವುದು ಸಂವಿಧಾನದ ಮೂಲಭೂತ ಕರ್ತವ್ಯದ ಪಟ್ಟಿಯಲ್ಲಿ ಸೇರಿಸದಿರುವುದು ಪ್ರಮುಖವಾದ ಕೊರತೆ ಎನ್ನಲಾಗಿದೆ .

ಕಾನೂನಿನ ರಕ್ಷಣೆ ಇಲ್ಲದಿರುವುದು

ಇವುಗಳನ್ನು ಎಂದು ನೈತಿಕ ಹಕ್ಕುಗಳು ಪರಿಗಣಿಸಲಾಗಿದೆಯೇ ಹೊರತು ಶಾಸನಬದ್ದ ಕರ್ತವ್ಯಗಳೆಂದು ಪರಿಗಣಿಸಿಲ್ಲ ಆದುದ್ದರಿಂದ ಇವುಗಳಿಗೆ ನ್ಯಾಯಾಲಯದ ರಕ್ಷಣೆ ಇಲ್ಲದಿರುವುದರಿಂದ ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಕಳಕಳಿ ಕಡಿಮೆ ಇದೆ .

 

ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದ ವರ್ಮಾ ಸಮಿತಿ

ಮೂಲಭೂತ ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರೀಕರು ಆಳವಡಿಸಿ ಕೊಳ್ಳುವುದಕ್ಕೆ ಸಂಬಂಧಿಸಿದಂತೆ 1999 ರಲ್ಲಿ ನ್ಯಾ | ಜೆ.ಎಸ್.ವರ್ಮಾರವರ ಅಧ್ಯಕ್ಷತೆಯಲ್ಲಿ ನೇಮಕ | ಗೊಂಡ ಸಮಿತಿಯು ಗುರ್ತಿಸಿದ ಕಾನೂನು ಬದ್ಧ ಕ್ರಮಗಳು ಈ ಕೆಳಕಂಡಂತಿವೆ .

1 ) 1971 ರ “ ದಿ ಪ್ರಿವೆನ್ನನ್ ಆಫ್ ಇನಸಲ್ಟ್ ಟು ನ್ಯಾಷನಲ್ ಆನರ್ ಅನ್ನು ಜಾರಿಗೊಳಿಸಿ ಸಂವಿಧಾನಕ್ಕೆ ಹಾಗೂ ರಾಷ್ಟ್ರ ಧ್ವಜ , ರಾಷ್ಟ್ರಗೀತೆಗೆ ಅವಮಾನವನ್ನು ತಪ್ಪಿಸಬಹುದೆಂದು ತಿಳಿಸಿದರು .

2 ) ನಾಗರೀಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1955 ನ್ನು ಬಳಸಿ ಧರ್ಮ ಹಾಗೂ ಜಾತಿಗೆ ಸಂಬಂಧಿಸಿದ ಆಪರಾಧಗಳಿಗೆ ಶಿಕ್ಷಿಸಬಹುದೆಂದು ಗುರುತಿಸಿದರು .

3 ) 1947 ರ ಕಾನೂನು ರಹಿತ ಚಟುವಟಕಾ ನಿಯಂತ್ರಣ ಕಾಯ್ದೆಯನ್ನು ಬಳಸಿ ಮತೀಯಾ ಸಂಘಟನೆಗಳನ್ನು ಕಾನೂನುರಹಿತ ಸಂಘಟನೆಗಳೆಂದು ಘೋಷಿಸಬಹುದೆಂದು ತಿಳಿಸಿದರು .

4 ) 1951 ರ ಪ್ರಜಾ ಪ್ರತಿನಿಧಿ ಕಾಯ್ದೆಯನ್ನು ಬಳಸಿ ಜಾತೀಯ , ಜನಾಂಗೀಯ ಧರ್ಮದ ಆಧಾರದ ಮೇಲೆ ಮತ ಪಡೆಯುವ ಸಂಸತ್ತಿನ ಸದಸ್ಯರುಗಳು ಹಾಗೂ ವಿಧಾನ ಸಭಾ ಸದಸ್ಯರುಗಳ ಸದಸ್ಯತ್ವವನ್ನು ರದ್ದುಗೊಳಿಸಬಹುದೆಂದು ಗುರುತಿಸಿದರು .

5 ) 1972 ರ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಅಪರೂಪದ ಮತ್ತು ವಿನಾಶದಲ್ಲಿರುವ ವನ್ಯಜೀವಿಗಳನ್ನು ಮಾರಾಟ ಮಾಡುವುದನ್ನು ತಡೆಯಬಹುದು .

6 ) ಭಾರತ ದಂಡ ಸಂಹಿತೆ ಬಳಸಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವವರನ್ನು ಶಿಕ್ಷಿಸಬಹುದೆಂದು ಗುರ್ತಿಸಿದರು .

7 ) 1980 ರ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಅರಣ್ಯ ನಾಶವನ್ನು ತಡೆಗಟ್ಟಬಹುದೆಂದು ತಿಳಿಸಿದರು

 


0 Comments

Leave a Reply

Avatar placeholder

Your email address will not be published. Required fields are marked *