ಮೂಲಭೂತ ಕರ್ತವ್ಯಗಳು Fundamental Duties

ಮೂಲಭೂತ ಕರ್ತವ್ಯಗಳು , Fundamental Duties , fundamental duties in kannada ,fundamental rights , right against exploitation

 

ಮೂಲಭೂತ ಕರ್ತವ್ಯಗಳು , Fundamental Duties , fundamental duties in kannada ,fundamental rights , right against exploitation

ಭಾರತದ ಸಂವಿಧಾನ ರಚನಾಕಾರರು ಮೂಲ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರ್ಪಡೆ ಮಾಡಿರಅಲ್ಲ . 1975 ರಲ್ಲಿ ಭಾರತವು ಅಂತರಿಕ ತುರ್ತುಪರಿಸ್ಥಿತಿಯನ್ನು ಎದುರಿಸಿದ ಸಂದರ್ಭದಲ್ಲಿ ಭಾರತದ ನಾಗರೀಕರಿಗೆ ಮೂಲಭೂತ ಕರ್ತವ್ಯಗಳು ಅನಿವಾರ್ಯವೆಂಬ ಸನ್ನಿವೇಶ ಒದಗಿ ಬಂದಿತು .

ಇದನ್ನು ಮನಗಂಡು , ರಾಷ್ಟ್ರದ ಸಂಪತ್ತನ್ನು ಉಆಸಲು ಮತ್ತು ಸಂರಕ್ಷಿಸಲು ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಲು ಸಕ ಸನ್ನದ್ದವಾಯಿತು .

ಅದರ ಫಲವಾಗಿ 1976 ರಲ್ಲಿ 42 ನೇ ತಿದ್ದುಪಡಿಯ ಮೂಲಕ ಭಾರತದ ಸಂವಿಧಾನಕ್ಕೆ IV – A ಭಾಗವನ್ನು ಸೇರ್ಪಡೆ ಮಾಡಿ 51 ಎ ವಿಧಿಯ ಅಡಿಯಲ್ಲ ಮೂಲಭೂತ ಕರ್ತವ್ಯಗಳನ್ನು ಸೇರ್ಪಡೆ ಮಾಡಲಾಯಿತು .

 

ಭಾರತದಲ್ಲಿ ಮೂಲಭೂತ ಕರ್ತವ್ಯಗಳ ಹಿನ್ನೆಲೆ

ಭಾರತದ ಮೂಲ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳು ಇಲ್ಲದ ಕಾರಣ ಮೂಲಭೂತ ಕರ್ತವ್ಯಗಳ ಆವಶ್ಯಕತೆಯನ್ನರಿತ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು 1975 ರಲ್ಲಿ ಸರ್ದಾರ್ ಸ್ವರ್ಣಸಿಂಗ್‌ರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿ

ಆ ಸಮಿತಿಯು ಸಂವಿಧಾನವನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಅಂದಿನ ರಾಷ್ಟ್ರೀಯ ಆಂತರಿಕ ತುರ್ತುಪರಿಸ್ಥಿತಿಯ ಅನುಭವಗಳನ್ನು ಆಧರಿಸಿ ರಾಷ್ಟ್ರದ ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳನ್ನು ಶಿಫಾರಸ್ಸು ಮಾಡಬೇಕೆಂದು ಆಯೋಗವನ್ನು ನೇಮಕ ಮಾಡಿದರು .

ಸರ್ದಾರ್ ಸ್ವರ್ಣಸಿಂಗ್ ರವರು ರಷ್ಯಾದ ಸಂವಿಧಾನದಲ್ಲಿದ್ದ ಮೂಲಭೂತ ಕರ್ತವ್ಯಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಭಾರತದ ಸನ್ನಿವೇಶಕ್ಕೆ ಸೂಕ್ತವಾಗುವ ಮೂಲಭೂತ ಕರ್ತವ್ಯಗಳನ್ನು ಶಿಫಾರಸ್ಸು ಮಾಡಿದರು .

ಕಾಂಗ್ರೆಸ್ ಸರ್ಕಾರವು ಈ ಎಲ್ಲಾ ಶಿಫಾರಸ್ಸುಗಳನ್ನು ಆಳವಡಿಸಿ ಕೊಳ್ಳದೆ

1)ತೆರಿಗೆ ಕಟ್ಟುವ ಕರ್ತವ್ಯ ,

2 ) ಕರ್ತವ್ಯಗಳನ್ನು ಪಾಲಿಸದಿದ್ದಾಗ ಸಂಸತ್ತು ಶಿಕ್ಷೆ ನೀಡುವುದಕ್ಕೆ ಸಂಬಂಧಿಸಿ ದಂತಹ ಶಿಫಾರಸ್ಸುಗಳನ್ನು ಕೈಬಿಟ್ಟು ಕೆಲವನ್ನು ಸೇರಿಸಿ ಹತ್ತು ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ 42 ನೇ ತಿದ್ದುಪಡಿ 1976 ರಲ್ಲಿ ‘ 4 ಎ ‘ ಭಾಗದಲ್ಲಿ ” 51 ಎ ‘ ನಲ್ಲಿ ಸೇರ್ಪಡೆ ಮಾಡಿತು .

ನಂತರ 2002 ರಲ್ಲಿ 86 ನೇ ತಿದ್ದುಪಡಿ ಮೂಲಕ ಶಿಕ್ಷಣದ ಕರ್ತವ್ಯ ವನ್ನು 1 ನೇ ಮೂಲಭೂತ ಕರ್ತವ್ಯವಾಗಿ ’51 ಕೆ ‘ ಯಲ್ಲಿ ಸೇರ್ಪಡೆ ಮಾಡಲಾಯಿತು .

ಪ್ರಸ್ತುತವಾಗಿ ಮೂಲಭೂತ ಕರ್ತವ್ಯಗಳ ಸಂಖ್ಯೆಯು 10 ರಿಂದ II ಕ್ಕೆ ಏರಿಕೆಯಾಗಿದೆ . ಈ ಮೂಲಭೂತ ಕರ್ತವ್ಯಗಳು ಮೂಲ ಸಂವಿಧಾನದಲ್ಲಿ ಇಲ್ಲದೇ , ನಂತರ ಸೇರಿಸಿದವುಗಳಾಗಿವೆ .

 

ಮೂಲಭೂತ ಕರ್ತವ್ಯಗಳ ಎರವಲು

ಭಾರತದ ಮೂಲಭೂತ ಸಂವಿಧಾನದಿಂದ ಕರ್ತವ್ಯಗಳನ್ನು ರಷ್ಯಾದ ಪಡೆಯಲಾಯಿತು .

ಬಹುತೇಕ ಸಮಾಜವಾದಿ ಎರವಲು ರಾಷ್ಟ್ರಗಳು ಮೂಲಭೂತ ಕರ್ತವ್ಯಗಳನ್ನು ತಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದು ಅವುಗಳ ಮೂಲಭೂತ ಮೂಲಭೂತ ಹಕ್ಕಿನಷ್ಟೆ ಕರ್ತವ್ಯಕ್ಕೂ ಆಧ್ಯತೆ ನೀಡಿದೆ .

ಆದರೆ ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮೂಲಭೂತ ಕರ್ತವ್ಯಗಳನ್ನು ಅಳವಡಿಸಿಕೊಂಡಿರುವುದು ಭಾರತ ಒಂದು ಎಂಬುದು ಹೆಗ್ಗಳಿಕೆಯಾಗಿದೆ .

ಜೊತೆಗೆ ಜಪಾನ್ ಕೂಡ ಮೂಲಭೂತ ಕರ್ತವ್ಯಗಳನ್ನು ಮೂಲಭೂತ ಅಳವಡಿಸಿಕೊಳ್ಳುತ್ತಾ , ಕರ್ತವ್ಯಗಳನ್ನು ಹೊಂದಿರುವಂತಥ ಪ್ರಜಾಪ್ರಭುತ್ವದ ರಾಷ್ಟ್ರದ ಸಾಲಿಗೆ ಸೇರ್ಪಡೆಯಾಗಿದೆ .

ಇಂತಹ  ಹಾಗೂ ಮೂಲಭೂತ ಮೂಲಭೂತ ಕರ್ತವ್ಯಗಳನ್ನು ಪ್ರಜಾಪ್ರಭುತ್ವ ರಾಷ್ಟ್ರಗಳಾದ

ಅಮೇರಿಕಾ ,

ಕೆನಡಾ ,

ಫ್ರಾನ್ಸ್ ,

ಜರ್ಮನಿ ,

ಆಸ್ಟ್ರೇಲಿಯಾಗಳಲ್ಲಿ ನಿಗದಿತವಾದ ಪ್ರತ್ಯೇಕವಾದ ಕರ್ತವ್ಯಗಳನ್ನು ಕಾಣಲು ಸಾಧ್ಯವಿಲ್ಲ .

ಈ ಮೂಲಕ ಭಾರತವು ಸಮಾಜವಾದಿ ತತ್ವವನ್ನು ಅಳವಡಿಸಿಕೊಳ್ಳುವುದರೊಂದಿಗೆ ದೇಶದ ನಾಗರೀಕರಿಗೆ ಅನೇಕ ಜವಬ್ದಾರಿಗಳನ್ನು ಒದಗಿಸಿದೆ .

 

ಸಂವಿಧಾನದಲ್ಲಿ ಸೂಚಿಸಿರುವ ಮೂಲಭೂತ ಕರ್ತವ್ಯಗಳು

ವಿಧಿ51.ಎ . ಮೂಲಭೂತ ಕರ್ತವ್ಯಗಳು

  1. ಸಂವಿಧಾನ , ರಾಷ್ಟ್ರಗೀತೆ , ರಾಷ್ಟ್ರಧ್ವಜವನ್ನು ಗೌರವಿಸುವುದು

ಎ ) ಸಂವಿಧಾನವನ್ನು ಅನುಸರಿಸುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು , ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಳನ್ನು ಗೌರವಿಸುವುದು

ಭಾರತದ ಪ್ರತಿಯೊಬ್ಬ ಪ್ರಜೆಯು ಭಾರತದ ಸಂವಿಧಾನಕ್ಕೆ ಗೌರವವನ್ನು ಸೂಚಿಸುವುದು ಆಧ್ಯ ಕರ್ತವ್ಯ ವಾಗಿದೆ . ದೇಶವು ಅನೇಕ ಭಾಷೆ , ಉಪಸಂಸ್ಕೃತಿಗಳು ಧಾರ್ಮಿಕ ಮತ್ತು ಜನಾಂಗೀಯ ವಿಶಾಲ ದೇಶವಾದರೂ ಹಾಗೂ ವೈವಿಧ್ಯತೆಗಳ ದೇಶದ ಏಕತೆ.

ಆಗ ಮಾತ್ರ ಸ್ವಾತಂತ್ರ್ಯ ಗಳಿಸಿದ್ದು ಸಾರ್ಥಕವಾಗುತ್ತದೆ ಎಂದು ಸಂವಿಧಾನದ 51 ಎ ವಿಧಿ ತಿಳಿಸುತ್ತದೆ

 

  1. ಸ್ವಾತಂತ್ರ್ಯ ಸಂಗ್ರಾಮದ ಧೈಯಗಳನ್ನು ಗೌರವಿಸುವುದು

ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಪೂರ್ತಿದಾಯಕವಾದಂತಹ ಉದಾತ್ತ ಆದರ್ಶಗಳನ್ನು ಗೌರವಿಸುವುದು ಮತ್ತು ಅನುಸರಿಸುವುದು ಸ್ವಾತಂತ್ರಕ್ಕಾಗಿ ಸಾವಿರಾರು ಜನರು ಪ್ರಾಣವನ್ನು ತೆತ್ತರು ಆಂಥಹ ಹಿರಿಯರು ಮಾಡಿದ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.ನ್ಯಾಯ ಪರವಾದ ಒಂದು ಸಮಾಜದ ಮತ್ತು ಒಗ್ಗಟ್ಟಿನ ದೇಶದ ನಿರ್ಮಾಣ , ಸ್ವಾತಂತ್ರ್ಯ ,

ಸಮಾನತೆ ,

ಅಹಿಂಸೆ ,

ಭಾತೃತ್ವ ,

ವಿಶ್ವ ಶಾಂತಿಗಳು ಹೋರಾಟದ ಆದರ್ಶಗಳಾಗಿದ್ದವು . ಅಂತಹ ಧೈಯಗಳನ್ನು ಪ್ರತಿಯೊಬ್ಬ ಪ್ರಜೆಯು ಅನುಸರಿಸಬೇಕು ಎಂದು ಸಂವಿಧಾನದ 51 ಬಿ ವಿಧಿ ತಿಳಿಸುತ್ತದೆ .

 

  1. ಭಾರತದ ಸಮಗ್ರತೆಯನ್ನು ಕಾಪಾಡುವುದು

ಭಾರತದ ಸಾರ್ವಭೌಮತ್ವವನ್ನು , ಐಕ್ಯತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು  ಭಾರತದ ಸಮಗ್ರತೆಯನ್ನು ಸಾರ್ವಭೌಮತೆ , ಏಕತೆ ಮತ್ತು ರಕ್ಷಿಸುವುದು .

ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ . ಇದನ್ನು ಸಂವಿಧಾನದ ಪ್ರಸ್ತಾವನೆಯಲ್ಲೇ ಸೂಚಿಸಲಾಗಿದೆ . ದೇಶದ ಸ್ವಾತಂತ್ರ್ಯ , ಸಾರ್ವಭೌಮತ್ವ ಹಾಗೂ ಏಕತೆಗೆ ಧಕ್ಕೆ ಬಂದರೆ ದೇಶ ಛಿದ್ರವಾಗುತ್ತದೆ .

ದೇಶವೇ ಛಿದ್ರವಾದ ನಂತರ ವ್ಯಕ್ತಿಗೆ ಏನು ಬೆಲೆ ಇದೆ ಎಂದು ಸಂವಿಧಾನದ 51 ಸಿ ವಿಧಿ ತಿಳಿಸುತ್ತದೆ .

4.ದೇಶವನ್ನು ರಕ್ಷಿಸುವುದು

ದೇಶವನ್ನು ರಕ್ಷಿಸುವುದು ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಕರೆ ಬಂದಾಗ ಹಾಗೆ ಮಾಡುವುದು ;

ಭಾರತ ದೇಶವು ಬೇರೆ ಯಾವ ದೇಶದ ಮೇಲೆ ಆಕ್ರಮಣ ಮಾಡಿದ ಉದಾಹರಣೆ ಇಲ್ಲ ಆದರೆ ಇಂತಹ ಶಾಂತಿ ಮಂತ್ರವನ್ನು ಪಠಿಸುವ ದೇಶಕ್ಕೂ ಕೂಡ ಅನೇಕ ಬಾರಿ ವಿದೇಶಿಯರ ಆಕ್ರಮಣ ಆಗುತ್ತಿದೆ .

ಇಂತಹ ಆಕ್ರಮಣ ವನ್ನು ತಪ್ಪಿಸುವುದು ಪ್ರತಿಯೊಬ್ಬ ಪ್ರಜೆ ಯ ಕರ್ತವ್ಯವಾಗಿದೆ . ನಮ್ಮ ದೇಶವನ್ನು ಯೋಧರು ಹಗಲಿರುಳು ರಕ್ಷಿಸುತ್ತಿದ್ದಾರೆ .

ಕೆಲವು ಸಂದರ್ಭದಲ್ಲಿ ಯೋಧರಲ್ಲದ ನಾವು ಕೂಡ ರಾಷ್ಟ್ರ ರಕ್ಷಣೆಗೆ ಮುಂದಾಗಬೇಕು . ಇದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂವಿಧಾನದ 51 ಡಿ ವಿಧಿ ತಿಳಿಸುತ್ತದೆ .

 

5  ದೇಶದಲ್ಲಿ ಭಾತೃತ್ವ ಮನೋಭಾವ ಹೊಂದುವುದು

ಧಾರ್ಮಿಕ ,

ಭಾಷಾ ಮತ್ತು ಪ್ರಾದೇಶಿಕ ಅಥವಾ ಪಂಗಡಗಳ ಭಿನ್ನತೆಗಳಿಂದ ಅತೀತವಾಗಿ ,

ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟು ಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು ಭಾರತ ದೇಶವು ಅನೇಕ ಧರ್ಮ ,

ಜಾತಿ ಜನಾಂಗಗಳನ್ನು ,

ಆಚಾರ ,

ವಿಚಾರ ಹೊಂದಿದ್ದು ಇಂತಹ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬದುಕಲು ಸಾಮರಸ್ಯ ,

ಭಾತೃತ್ವ ಭಾವನೆ ಹೊಂದಿರಬೇಕು .

ಮಹಿಳೆಯರ ಬಗ್ಗೆ ಗೌರವವನ್ನು ಹೊಂದಿರಬೇಕು . ದೇಶವೇ ಒಂದು ಮನೋಭಾವವನ್ನು ಕುಟುಂಬ ಎಂಬ ವಿಶಾಲ ಹೊಂದುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ .

ಈ ಮೂಲಕ ಕೋಮುಗಲಭೆ ಮತೀಯಕಲಹಗಳನ್ನು ಹೋಗಲಾಡಿಸಬಹುದು ದೇಶದಿಂದ ಎಂದು ಸಂವಿಧಾನದ 51 ಇ ವಿಧಿ ತಿಳಿಸಲಾಗಿದೆ .

 

6.ದೇಶದ ಸಂಸ್ಕೃತಿ , ಪರಂಪರೆ ಗೌರವಿಸುವುದು &ರಕ್ಷಿಸುವುದು

ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು ; ಈ ಭಾರತವು ಜಗತ್ತಿನಲ್ಲೇ ಹಾಗೂ ಅಗ್ರಗಣ್ಯವಾದ ಸಂಸ್ಕೃತಿ , ಭವ್ಯ ಪರಂಪರೆಯನ್ನು ಹೊಂದಿದೆ .

ಜಗತ್ತಿಗೆ ಮಾದರಿಯಾದ ಸಂಸ್ಕೃತಿ , ಪರಂಪರೆಯನ್ನು ಹೊಂದಿದ್ದು ,

ಅದನ್ನು ಉಳಿಸಬೇಕಾದ್ದು ,

ಬೆಳೆಸಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ .

ಅಲ್ಲದೆ , ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ವಿಭಿನ್ನ ಸಂಸ್ಕೃತಿಗಳ ತಾಣವಾಗಿದ್ದು , ಅಂತಹ ಸಂಸ್ಕೃತಿಯನ್ನು ಉಳಿಸಬೇಕು ಮತ್ತು ಬೆಳೆಸಬೇಕಾಗಿದೆ .

7.ದೇಶದ ಪರಿಸರ ಸಂರಕ್ಷಿಸುವುದು

ಅರಣ್ಯಗಳು , ಸರೋವರಗಳು , ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು ಇಂತಹ ಪೀಳಿಗೆವರೆಗೂ

ದೇಶವು ಉತ್ತಮ ನೈಸರ್ಗಿಕ ಸಂಪತ್ತು ಒಳಗೊಂಡಿದ್ದು ,

ನೈಸರ್ಗಿಕ ಸಂಪತ್ತನ್ನು ಮುಂದಿನ ವರ್ಗಾಯಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ .;

ಪಾಣಿವರ್ಗ , ವಿನಾಶದ ಅಂಚಿನಲ್ಲಿದ್ದು ಅದನ್ನು ಅಭಿವೃದ್ಧಿಗೊಳಿಸುವ ನಾಗರೀಕನ ಜವಬ್ದಾರಿಯಾಗಿದೆ .

8 ವೈಜ್ಞಾನಿಕ ಮನೋಭಾವ ಬೆಳೆಸುವುದು

ವೈಜ್ಞಾನಿಕ ಮನೋಭಾವನೆ ಮಾನವೀಯತೆ , ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿ . ಇವುಗಳನ್ನು ಅಭಿವೃದ್ಧಿಗೊಳಿಸುವುದು ;

ಇತ್ತೀಚಿನ ದಿನಗಳಲ್ಲಿ ಮೌಡ್ಯತೆ ,

ಅಂಧಕಾರಕ್ಕೆ ಸಿಲುಕಿ ವ್ಯಕ್ತಿಯು ಮಾನವೀಯ ಗುಣಗಳನ್ನು ಮರೆತಿದ್ದಾನೆ ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ವೈಜ್ಞಾನಿಕ ಚಿಂತನೆ ಮಾನವೀಯತೆ ಗುಣಗಳನ್ನು ಹೊಂದುವುದರ ಮೂಲಕ ಕೆಟ್ಟ ಸಂಪ್ರದಾಯಗಳನ್ನು ಹೋಗಲಾಡಿಸಿ ,

ಉತ್ತಮ ನಾಗರೀಕ ಸಮಾಜವನ್ನು ಸೃಷ್ಟಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ .

ವಿಜ್ಞಾನ ತಂತ್ರಜ್ಞಾನವನ್ನು ಬಳಸಿ ಕೈಗಾರಿಕಾ ಅಭಿವೃದ್ಧಿಯನ್ನು ಮಾಡುತ್ತಾ , ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಮಹತ್ತರವಾದ ಜವಬ್ದಾರಿಯನ್ನು ಹೊಂದಿದ್ದಾನೆ ಎಂದು ಸಂವಿಧಾನದ 51 ( ಹೆಚ್ ) ವಿಧಿ ತಿಳಿಸುತ್ತದೆ ,

9.ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು

ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು ;

ಪ್ರತಿಯೊಬ್ಬ ನಾಗರೀಕನು ಸಾರ್ವಜನಿಕ ಸ್ವತ್ತನ್ನು , ಸ್ವಂತ ಸ್ವತ್ತೆಂದು ಭಾವಿಸಿ ಅವುಗಳನ್ನು ರಕ್ಷಿಸುವ ಹಾಗೂ ಅವುಗಳನ್ನು ಜೋಪಾನವಾಗಿ ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಬ್ದಾರಿಯನ್ನು ಹೊಂದಿದ್ದಾನೆ .

ಸಮಾಜದಲ್ಲಿ ಹಿಂಸೆಯನ್ನು ತೊರೆದು ಅಹಿಂಸಾ ಮಾರ್ಗದ ಮೂಲಕ ತನ್ನ ಸುತ್ತಮುತ್ತಲಿರುವ ಸಾರ್ವಜನಿಕ ಸಂಪತ್ತನ್ನು ರಕ್ಷಿಸಬೇಕಾಗಿರುವುದು ಪ್ರಸ್ತುತ ದಿನಗಳಲ್ಲಿ ಅನಿವಾರ್ಯವಾಗಿದೆ ಎಂದು ಸಂವಿಧಾನದ 51 ( ಐ ) ವಿಧಿ ತಿಳಿಸುತ್ತದೆ .

10. ರಾಷ್ಟ್ರವನ್ನು ಪ್ರತಿನಿಧಿಸುವುದು 

ರಾಷ್ಟ್ರವು ನಿರಂತರವಾಗಿ ಸಾಧನೆಯ ಮತ್ತು ಸಿದ್ಧಿಯ ಉನ್ನತ ಮಟ್ಟಗಳನ್ನು ತಲುಪಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಉನ್ನತಿಗಾಗಿ ಶ್ರಮಿಸುವುದು .

ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು , ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿರುವಂತಹ ಸಾಮರ್ಥ್ಯವನ್ನು ಸಮರ್ಪಕವಾಗಿ ಹಾಗೂ ಸಮರ್ಥವಾಗಿ ಬೆಳಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಹಿರಿಮೆಯನ್ನು ಹೆಚ್ಚಿಸುವುದು ಕರ್ತವ್ಯವಾಗಿದೆ . ಮಾಡಿ

ಕ್ರೀಡೆ ,

ವಿಜ್ಞಾನ ,

ತಂತ್ರಜ್ಞಾನ ,

ಕಲೆ , ಸಾಹಿತ್ಯಗಳಂತಹ ಕ್ಷೇತ್ರಗಳಲ್ಲಿ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ರಾಷ್ಟ್ರವನ್ನು ಪ್ರತಿನಿಧಿಸಿ ಸಾಧನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ .

11.ಪೋಷಕರು ಶಿಕ್ಷಣ ನೀಡುವ ಕರ್ತವ್ಯ

6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯವಾಗಿದೆ . ಸಂವಿಧಾನದ 51 ( ಕೆ ) ವಿಧಿಯನ್ನು 2002 ರಲ್ಲಿ 86 ನೇ ತಿದ್ದುಪಡಿಯ ಮೂಲಕ ಸೇರ್ಪಡೆ ಮಾಡಲಾಯಿತು .

ಈ ವಿಧಿ ಅನ್ವಯ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದು ಅವರ ಪೋಷಕರ ಆದ್ಯ ಕರ್ತವ್ಯವಾಗಿದೆ .

ಈ ಮೂಲಕ ಸಾರ್ವತ್ರಿಕ ಶಿಕ್ಷಣದಲ್ಲಿ ಪೋಷಕರನ್ನು ತೊಡಗಿಸುವಂತೆ ಮಾಡಿಕೊಳ್ಳಲಾಯಿತು .

ಪೋಷಕರಿಗೆ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕೊಡಿಸುವುದನ್ನು ಪೋಷಕರ ಕರ್ತವ್ಯವನ್ನಾಗಿಸಲಾಯಿತು .


0 Comments

Leave a Reply

Avatar placeholder

Your email address will not be published. Required fields are marked *