ಮಿದುಳು
brain, concussion, hypothalamus, hippocampus, cerebellum, brain tumor, brain fog, limbic system, corpus callosum,frontal lobe
ಮಾನವ ದೇಹದಲ್ಲಿ ಮಿದುಳು , ಕ್ರೇನಿಯಂನ ಒಳಗಿದ್ದು ಹಾನಿಗಳಿಂದ ಸುರಕ್ಷಿತವಾಗಿದೆ . ಮಿದುಳು ದೇಹದ ಪ್ರಮುಖ ಸಹಭಾಗಿತ್ವ ಮತ್ತು ನಿಯಂತ್ರಣದ ಭಾಗ , ಮಾನವನ ಮಿದುಳಿನ ಹೊರ ನೋಟದಲ್ಲಿ ಮೂರು ನಿರ್ದಿಷ್ಟ ಭಾಗಗಳನ್ನು ಕಾಣಬಹುದು . ಅವು , ಮುಮ್ಮೆದುಳು , ಮಧ್ಯಮಿದುಳು ಹಿಮ್ಮೆದುಳು . ಹಿಮ್ಮೆದುಳು ಮುಂಡದಲ್ಲಿ ಮಿದುಳು ಬಳ್ಳಿಯಾಗಿ ಮುಂದುವರಿಯುತ್ತದೆ .
ಮುಮ್ಮೆದುಳು ( fore brain )
ಇದು ಮಿದುಳಿನ ಅತಿ ಸಂಕೀರ್ಣ ಭಾಗ , ಇದರಲ್ಲಿ ಮಹಾಮಸ್ತಿಷ್ಕ ಮತ್ತು ಡೈಎನ್ಸೆಫೆಲಾನ್ ಎಂಬ ಎರಡು ಪ್ರಮುಖ ಭಾಗಗಳಿವೆ .
ಮಹಾಮಸ್ತಿಷ್ಕ ( cerebrum )
ಮಿದುಳಿನ ಅತ್ಯಂತ ದೊಡ್ಡ ಭಾಗ ಇದು ಹೆಚ್ಚು ಅಭಿವೃದ್ಧಿ ಹೊಂದಿದೆ ಮತ್ತು ಮಿದುಳಿನ ಒಟ್ಟು ತೂಕದ ಸುಮಾರು ಶೇ 80 ರಷ್ಟು ತೂಕ , ಇದರದು . ಇದರ ಮೇಲೈಯು ವಕ್ರವಾಗಿ , ಅನೇಕ ಮಡಿಕೆಗಳಿಂದ ಕೂಡಿದೆ .
ಮಹಾಮಸ್ತಿಷ್ಯದಲ್ಲಿ ಎರಡು ಅರ್ಧ ಸಮಗೋಳಗಳಿವೆ- ಅವುಗಳನ್ನು ಬಲ ಮತ್ತು ಎಡ ಗೋಳಾರ್ಧಗಳೆಂದು ಕರೆಯುತ್ತಾರೆ . ಈ ಎರಡು ಗೋಳಾರ್ಧಗಳೂ ಒಂದು ಎಳೆಯಿಂದ ಬೇರ್ಪಟ್ಟಿದ್ದರೂ ,
ಒಳಗೆ ಒಂದಕ್ಕೊಂದು ಕಾರ್ಪಸ್ ಕಲೋಸಮ್ ಎಂಬ ನರಗಳ ಎಳೆಯಿಂದ ಸೇರ್ಪಡೆಯಾಗಿದೆ . ದೇಹದ ಎಡಭಾಗದಿಂದ ಬರುವ ನರಗಳು , ಮಹಾಮಸ್ತಿಷ್ಕದ ಬಲಗೋಳಾರ್ಧಕ್ಕೆ ಸಂಪರ್ಕ ಹೊಂದಿವೆ . ಹಾಗೆಯೇ ದೇಹದ ಬಲ ಭಾಗದಿಂದ ಬರುವ ನರಗಳು ಕತ್ತಿನ ಭಾಗದಲ್ಲಿ ಅಡ್ಡಹಾಯ್ದು ಮಹಾಸ್ತಿಷ್ಕದ ಎಡಗೋಳಾರ್ಧಕ್ಕೆ ಸಂಪರ್ಕಗೊಂಡಿವೆ .
ಮಹಾಮಸ್ತಿಷ್ಕದ ಹೊರಗಿನ ಕಾರ್ಟೆಕ್ಸ್- ನರಕೋಶಗಳಿಂದ ಕೂಡಿದ , ಬೂದು ಬಣ್ಣದ ವಸ್ತುವಿನಿಂದಾಗಿದೆ . ಒಳಗಿನ ಮೆಡುಲ್ಲಾ ಭಾಗವು- ನರತಂತು ( ಆಕ್ಸಾನ್ ಮತ್ತು ಡೆಂಡ್ರೈಟ್ ) ಗಳು ಸೇರಿದ ಬಿಳಿಯ ವಸ್ತು ವಿನಿಂದಾಗಿದೆ .
ಮಾನವನ ಉನ್ನತವಾದ ಬುದ್ಧಿವಂತಿಕೆಗೆ , ಹೆಚ್ಚಿನ ಮೇಲೆ ವಿಸ್ತೀರ್ಣವನ್ನು ಹೊಂದಿರುವ ಕಾರ್ಟೆಕ್ಸ್ನ ವಿಸ್ತತ ಬೆಳವಣಿಗೆಯೇ ಕಾರಣ
ಬೇರೆ ಬೇರೆ ಗ್ರಾಹಕಗಳಿಂದ ಜ್ಞಾನೇಂದ್ರಿಯಗಳು ಜ್ಞಾನವಾಹಿ ಆವೇಗಗಳನ್ನು ಮಹಾಮಸ್ತಿಷ್ಯದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ .
ಇದೇ ಜಾಪಕಶಕ್ತಿ , ಬುದ್ಧಿಶಕ್ತಿ , ಕಲ್ಪನೆ , ಭಾವನೆ , ವಿವೇಚನೆ ಮತ್ತು ಇಚ್ಛಾಶಕ್ತಿಗಳ ಕೇಂದ್ರಗಳು ಮಹಾಮಸ್ತಿಷ್ಯದಲ್ಲಿವೆ .
ಡೈಎನ್ಸೆಫೆಲಾನ್
ಇದು ಮಹಾಮಸ್ತಿಷ್ಕದಿಂದ ಆವೃತವಾಗಿರುವ ಒಂದು ಚಿಕ್ಕಭಾಗ ಇದರಲ್ಲಿ ಥಲಾಮಸ್ ಮತ್ತು ಹೈಮೊಥಲಾಮಸ್ ಎಂಬ ಎರಡು ಭಾಗಗಳಿವೆ .
ಥಲಾಮಸ್ ಜ್ಞಾನೇಂದ್ರಿಯಗಳಿಂದ ಸ್ವೀಕರಿಸಿದ ನರಾವೇಗಗಳನ್ನು ಮಿದುಳಿನ ಕಾರ್ಟೆಕ್ಸ್ಗೆ ಕಳುಹಿಸುತ್ತದೆ . ಹೈಮೊಥಲಾಮಸ್ , ದೇಹದ ಉಷ್ಣತೆ , ನೀರಿನ ಸಮತೋಲನ , ಹಸಿವು ಮತ್ತು ನಿದೆಗಳನ್ನು ನಿಯಂತ್ರಿಸುತ್ತದೆ ,
ಅಲ್ಲದೆ , ಸ್ವನಿಯಂತ್ರಕ ನರವ್ಯೂಹ ಮತ್ತು ಪಿಟ್ಯೂಟರಿಗ್ರಂಥಿಯನ್ನು ನಿಯಂತ್ರಿಸುತ್ತದೆ .
ಮಧ್ಯಮಿದುಳು ( Mid brain)
ಇದು ನರತಂತುಗಳಿಂದ ಕೂಡಿದ ಮಿದುಳಿನ ಒಂದು ಚಿಕ್ಕಭಾಗ . ಇದು ಮುಟ್ಟಿದಳು ಮತ್ತು ಹಿಮ್ಮೆದುಳಿಗೆ ಸಂಬಂಧ ಕಲ್ಪಿಸುತ್ತದೆ . ಜೊತೆಗೆ ಸಂದೇಶಗಳನ್ನು ಹಿಮ್ಮೆದುಳಿನಿಂದ ಮುಮ್ಮೆದುಳಿಗೆ ಸಾಗಿಸುತ್ತದೆ .
ದೃಶ್ಯ ಮತ್ತು ಶ್ರವ್ಯಕ್ಕೆ ಸಂಬಂಧಿಸಿದ ಚೋದನೆಗಳಿಗನುಗುಣವಾಗಿ ತಲೆ ಮತ್ತು ಕತ್ತಿನ ಪರಾವರ್ತಿತ ಚಲನೆಗಳಿಗೆ ಇದು ಕಾರಣ .
ಹಿಮ್ಮೆದುಳು ( Hind brain )
ಇದರಲ್ಲಿ ಅನುಮಸ್ತಿಷ್ಯ , ಪಾನ್ಸ್ ಮತ್ತು ಮೆಡುಲ್ಲಾ ಅಬ್ಲಾಂಗೇಟ ಎಂಬ ಮೂರು ಭಾಗಗಳಿವೆ . ಅನುಮಸ್ತಿಷ್ಕ ( Cerebellum ) : ಇದು ಮಿದುಳಿನ ಎರಡನೆ ದೊಡ್ಡ ಭಾಗ ಇದು ,
ಮಹಾಮಸಿವೃದ ಕೆಳಗೆ ಮತ್ತು ಹಿಂಭಾಗದಲ್ಲಿದೆ . ನಡೆಯುವ , ಓಡುವ ಚಲನೆಗಳಿಗೆ ಅಗತ್ಯವಾದ ಸ್ನಾಯುಗಳ ನಡುವೆ ಹೊಂದಾಣಿಕೆಯನ್ನು ಇದು ಏರ್ಪಡಿಸುತ್ತದೆ . ಹಾಗಾಗಿ ಇದು ದೇಹದ ಸಮತೋಲನವನ್ನು ಕಾಪಾಡುತ್ತದೆ .
ಪಾನ್ಸ್ ( pons ) :
ಪಾನ್ಸ್ ಅನುಮಸ್ತಿಷ್ಠರ ಮುಂದೆ ಮಧ್ಯಮಿದುಳಿನ ಕೆಳಗೆ ಮತ್ತು ಮೆಡುಲ್ಲಾ ಅಬ್ಲಾಂಗೇಟದ ಮೇಲೆ ಇದೆ , ಇದು ಆಹಾರ ಅಗಿಯುವರು , ಮುಖರ ಧಾನ ಮತ್ತು ಉಸಿರಾಟ ಕ್ರಿಯೆಗಳನ್ನು ನಿಯಂತ್ರಿಸುತ್ತದೆ .
ಮೆಡುಲ್ಲಾ ಅಬ್ಲಾಂಗೇಟ ( medulla oblongata ) :
ಇದು ಮಿದುಳಿನ ಅತಿ ಹಿಂದಿನ ಭಾಗವಾಗಿದ್ದು , ಮುಂಡದ ಭಾಗದಲ್ಲಿ ಮಿದುಳು ಬಳ್ಳಿಯಾಗಿ ಮುಂದುವರಿಯುತ್ತದೆ . ಇದು ದೇಹದ ಅನೈಚ್ಛಿಕ ಕ್ರಿಯೆಗಳಾದ ಉಸಿರಾಟ , ಹೃದಯದ ಬಡಿತ , ಜೀರ್ಣನಾಳದ ಚಲನೆ ( ನುಂಗುವುದು , ಕೆಮ್ಮುವುದು , ಎಂತ ಮಾಡುವುದು ) ಗಳನ್ನು ನಿಯಂತ್ರಿಸುತ್ತದೆ .
ಅಲ್ಲದೆ , ಕಿಣ್ವಗಳ ಸ್ರವಿಕೆ ಮತ್ತು ರಕ್ತದ ಒತ್ತಡದ ನಿಯಂತ್ರಣ ಮುಂತಾದ ಕ್ರಿಯೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ .
ಮಿದುಳು ಬಳ್ಳಿ
ಮಿದುಳು ಬಳ್ಳಿಯು ಸಿಲಿಂಡರ್ ಆಕಾರದಲ್ಲಿದ್ದು ಕಶೇರುಸ್ತಂಭದಲ್ಲಿ ಹಾದು ಹೋಗುತ್ತದೆ . ಇದು ಮು ೦ ಡಭಾಗದಲ್ಲಿ ಮೆಡುಲ್ಲಾ ಅಬ್ಲಾಂಗೇಟಾದ ಮುಂದುವರಿದ ಭಾಗ . ಇದು ಕೂಡ ಮೆನೆಂಜಿಸ್ನಿಂದ ಆವೃತವಾಗಿದೆ . ಇದು ಅನೇಕ ನರಕೋಶ ಮತ್ತು ನರತಂತು ಗಳಿಂದಾಗಿದೆ . ಇದರ ಮಧ್ಯಭಾಗದಲ್ಲಿ ನರಕೋಶಗಳಿಂದಾದ ಬೂದು ವಸ್ತುವಿದೆ . ಇದರ ಸುತ್ತಲೂ ನರತಂತುಗಳಿಂದಾದ ಬಿಳಿವಸ್ತು ಇದೆ .
ಮಿದುಳುಬಳ್ಳಿಯಿಂದ 31 ಜೊತೆ ಮಿಶ್ರ ನರಗಳು ಹೊರಡುತ್ತವೆ . ಈ ನರಗಳು ಮುಂಡಭಾಗದಲ್ಲಿ ಹೃದಯ , ಶ್ವಾಸಕೋಶ , ಜಠರ , ಮೂತ್ರಕೋಶ , ಜನನಗ್ರಂಥಿ ಮುಂತಾದ ಭಾಗಗಳಲ್ಲಿ ಕವಲೊಡೆದು ಹರಡಿಕೊಂಡಿವೆ . ಮಿದುಳುಬಳ್ಳಿನರಗಳಲ್ಲಿ ಜ್ಞಾನವಾಹಿ ಮತ್ತು ಕ್ರಿಯಾವಾಹಿ ಎಂಬ ಎರಡು ಬಗೆಯ ನರತಂತುಗಳಿವೆ . ಮಿದುಳುಬಳ್ಳಿಯು ಪರಾವರ್ತಿತ ಕ್ರಿಯೆಯಿಂದ ಕೈಕಾಲು ಮತ್ತು ಇತರ ಅಂಗಗಳ ಚಲನೆಯಲ್ಲಿ ಹೊಂದಾಣಿಕೆಯನ್ನು ಉಂಟು ಮಾಡುತ್ತದೆ . ಮಿದುಳುಬಳ್ಳಿ ಪರಾವರ್ತಿತ ಕ್ರಿಯೆಯ ಕೇಂದ್ರ
ಪರಾವರ್ತಿತ ಕ್ರಿಯೆ ಮತ್ತು ಪರಾವರ್ತಿತ ಕ್ರಿಯೆ ಚಾಪ
ಒಂದು ಕಾದ ತವ ಅಥವಾ ಬಿಸಿಯಾದ ಇಸ್ತ್ರಿಪೆಟ್ಟಿಗೆಯನ್ನು ತಿಳಿಯದೆ ಮುಟ್ಟಿದಾಗ ನೀವು ಹೇಗೆ ಪ್ರತಿಕ್ರಿಯಿಸುವಿರಿ ? ನೀವು ಚೀರುವಿರಿ ಮತ್ತು ಕೈಯನ್ನು ತಕ್ಷಣ ಹಿಂದಕ್ಕೆ ತೆಗೆದು ಕೊಳ್ಳುವಿರಿ . ಇದು ಐಚ್ಛಿಕ ಕ್ರಿಯೆಯೇ ? ಅಥವಾ ಅನೈಚ್ಛಿಕ ಕ್ರಿಯೆಯೇ ? ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಲು ತೆಗೆದುಕೊಂಡ ಸಮಯ ಬಹಳ ಕಡಿಮೆ . ಯಾಕೆ ? ಈ ರೀತಿ , ಅನೈಚ್ಛಿಕವಾಗಿ ತಾನೇ ತಾನಾಗಿ ಉಂಟಾಗುವ ತಕ್ಷಣದ ಪ್ರತಿಕ್ರಿಯೆಯೇ ಪರಾವರ್ತಿತ ಕಿಯ ( Reflex action ) . ಈ ಇಡೀ ಕ್ರಿಯೆ ಮಿದುಳು ಬಳ್ಳಿಯ ನಿಯಂತ್ರಣದಲ್ಲಿ ನಡೆಯುತ್ತದೆ .
0 Comments