ಮಲೆನಾಡಲೂ ಹಿಜಾಬ್ , ಕೇಸರಿ ಶಾಲು ಸಂಘರ್ಷ

hijab vs burka

hijab vs burka, ಮಲೆನಾಡಲೂ ಹಿಜಾಬ್ , ಕೇಸರಿ ಶಾಲು ಸಂಘರ್ಷ, hijab, hijab style, hijab fashion, keshari shalu, ಹಿಜಾಬ್ , ಕೇಸರಿ ಶಾಲು ಸಂಘರ್ಷ

hijab vs burka, ಮಲೆನಾಡಲೂ ಹಿಜಾಬ್ , ಕೇಸರಿ ಶಾಲು ಸಂಘರ್ಷ, hijab, hijab style, hijab fashion, keshari shalu, ಹಿಜಾಬ್ , ಕೇಸರಿ ಶಾಲು ಸಂಘರ್ಷ

ಶಿವಮೊಗ್ಗ : ಜಿಲ್ಲೆಯ ಹಲವು ಕಾಲೇಜು ಗಳಲ್ಲಿ ಸೋಮವಾರ ಹಿಜಾಬ್ , ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದೆ . ಪರ , ವಿರುದ್ಧ ಹೇಳಿಕೆಗಳು , ಪ್ರತಿಭಟನೆಗಳಿಗೆ ಮಲೆನಾಡು ಸಾಕ್ಷಿಯಾಯಿತು .

ಸಹ್ಯಾದ್ರಿ ಕಾಲೇಜು : ಸಹ್ಯಾದ್ರಿ ವಾಣಿಜ್ಯ ಮತ್ತು ಕಾಲೇಜಿನ ನಿರ್ವಹಣಾ ಹಲವು ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಧರಿಸಿ ಬಂದಿದ್ದರು ಅವರನ್ನು ಕಾಲೇಜು ಆವರಣದಲ್ಲೇ ತಡೆಯಲಾಯಿತು .

ಸ್ಥಳದಲ್ಲೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು . ಕಾಲೇಜಿನಲ್ಲಿ ಸಮಾನ ಸಮವಸ್ತ್ರ ಸಂಹಿತೆ ಕಟ್ಟು ನಿಟ್ಟಾಗಿ ಜಾರಿ ಗೊಳಿಸಬೇಕು . ಎಲ್ಲರಿಗೂ ವಸ್ತ್ರ ಸಂಹಿತ ಕಡ್ಡಾಯಗೊಳಿಸಬೇಕು .

ಈಗಾಗಲೇ ಸಮವಸ್ತ್ರ ಸಂಹಿತೆ ಜಾರಿಯಲ್ಲಿದ್ದರೂ ಹಲವು ವಿದ್ಯಾರ್ಥಿನಿಯರು ಕಾಲೇಜಿಗೆ ಸಮವಸ್ತ್ರ ಧರಿಸದೇ ಉಲ್ಲಂಘಿಸುತ್ತಿದ್ದಾರೆ .

ಹಿಜಾಬ್ ಧರಿಸಿ ಬರುತ್ತಿದ್ದಾರೆ . ಎಲ್ಲರೂ ಸಾಮರಸ್ಯದ ಸಮಾನತೆಯ ಶಿಕ್ಷಣಕ್ಕೆ ಒತ್ತು ನೀಡಬೇಕು . ಎಂದು ಆಗ್ರಹಿಸಿದರು .

ಎಟಿಎನ್‌ಸಿ ಕಾಲೇಜು :

ನಗರದ ಸಮವಸ್ತ್ರಕ್ಕೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಅವಕಾಶ ನೀಡುವುದಾದರೆ ಕೇಸರಿ ಶಾಲು ಧರಿಸಿಕೊಂಡು ಬರಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು .

ಪ್ರತಿಭಟನೆ ಕೈಬಿಡುವಂತೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತು . ತರಗತಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ನಿಗದಿಪಡಿಸಿದ ಸಮವಸ್ತ್ರ ಧರಿಸಿ ಬರಬೇಕು .

ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿಕೊಂಡು ತರಗತಿಗೆ ಬರಲು ಅವಕಾಶವಿಲ್ಲ ಎಂದು ಪ್ರಾಂಶುಪಾಲರು ಸೂಚಿಸಿದರು .

ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಶಿವಮೊಗ್ಗ :

ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಹತ್ತಿಕುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು . ಹಿಜಾಬ್ ಧರಿಸಲು ವಿಧಿಸಿರುವ ನಿರ್ಬಂಧ ಆದೇಶ ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಮಹಿಳಾ ಒಕ್ಕೂಟ ,

ಪೀಸ್ ಆರ್ಗನೈಸೇಷನ್ ನೇತೃತ್ವದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು .

ಈ ದೇಶದ ಸಂವಿಧಾನ ಧಾರ್ಮಿಕ , ಶೈಕ್ಷಣಿಕ ಹಕ್ಕುಗಳನ್ನು ಮಾನ್ಯ ಮಾಡಿದೆ . ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಹಿಜಾಬ್ ,

ಬುರ್ಖಾ ಧರಿಸುವುದು ಧಾರ್ಮಿಕ ನೀತಿ . ಇನ್ನೊಬ್ಬರ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗದಂತೆ ನಿಯಮಗಳ ಪಾಲನೆ ಮಾಡಿಕೊಂಡು ಬರಲಾಗಿದೆ .

ಇದುವರೆಗೂ ಸಹಬಾಳ್ವೆಯಿಂದ ಶಾಲಾ ಕಾಲೇಜುಗಳಲ್ಲಿ ಜ್ಞಾನಾರ್ಜನೆ ಮಾಡಿಕೊಂಡು ಹೋಗುತ್ತಿದ್ದೇವೆ . ಸಹಪಾಠಿ ವಿದ್ಯಾರ್ಥಿಗಳು ಹಿಜಾಬ್ ಮತ್ತು ಬುರ್ಖಾಕ್ಕೆ ವಿರೋಧ ವ್ಯಕ್ತಪಡಿಸಿಲ್ಲ .

ಸರ್ಕಾರದ ಆದೇಶ ಧಾರ್ಮಿಕ ಹಕ್ಕಿನ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದರು . ರಾಜ್ಯದ ಕೆಲವು ಕಾಲೇಜುಗಳಲ್ಲಿ ಮತೀಯ ಸಂಘರ್ಷ ಹುಟ್ಟು ಹಾಕಲು ಕೋಮುವಾದಿ ಸಂಘಟನೆಗಳಿಂದ ಇಂತಹ ವಿರೋಧ ಕಂಡುಬರುತ್ತಿದೆ .

ಇಂತಹ ನಡೆ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು . ರಾಜ್ಯ ಸರ್ಕಾರ ವಸ್ತ್ರಸ ೦ ಹಿತೆ ಆದೇಶದಲ್ಲಿ ಮಾರ್ಪಾಡು ಮಾಡಬೇಕು .

ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸಿಕೊಂಡು ಬರುತ್ತಿದ್ದಂತಹ ಹಿಜಾಬ್ ಹಾಗೂ ಬುರ್ಖಾಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು . ಒಕ್ಕೂಟದ ಮುಖಂಡರಾದ ಎಹಸಸ್ ಎ . ನಾಯಬ್ , ಹೀನ ಕೌಸರ್ , ಯಾಸ್ಮಿನ್ , ಸಲ್ಮಾ ಸೋಫಿಯಾ , ಹಸೀನಾ , ರಿಯಾಜ್ ಅಹಮದ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು .

ತೀರ್ಥಹಳ್ಳಿ ಬಾಳೇಬೈಲು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಧರಿಸಿ ಪ್ರವೇಶಕ್ಕೆ ಮುಂದಾಗಿದ್ದು , ಪ್ರಾಂಶುಪಾಲರು ಮನವರಿಕೆ ಮಾಡಲು ಪ್ರಯತ್ನಿಸಿದರು .

ಹೊಸನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪಿಎಸ್‌ಐ ರಾಜೇಂದ್ರ ನಾಯ್ಕ ಎಚ್ಚರಿಕೆ ನೀಡಿ ಪ್ರಕರಣ ತಿಳಿಗೊಳಿಸಿದರು .

 


0 Comments

Leave a Reply

Avatar placeholder

Your email address will not be published. Required fields are marked *