ಭಾರತ ಸ್ವಾತಂತ್ರ್ಯ ಕಾಯ್ದೆ | indian independence act of 1947

1947 ಭಾರತ ಸ್ವಾತಂತ್ರ್ಯ ಕಾಯ್ದೆ

( Indian Independence Act of 1947 )

indian independence act of 1947,ಭಾರತ ಸ್ವಾತಂತ್ರ್ಯ ಕಾಯ್ದೆ, indian independence act, india independence act 1947, 1947 act

indian independence act of 1947,ಭಾರತ ಸ್ವಾತಂತ್ರ್ಯ ಕಾಯ್ದೆ, indian independence act, india independence act 1947, 1947 act

 ಭಾರತ ಸ್ವಾತಂತ್ರ್ಯ ಕಾಯ್ದೆ

1947

ಎರಡನೇ ಮಹಾಯುದ್ಧದ ಅಂತ್ಯದಲ್ಲಿ ಕ್ಲಿಮೆಂಟ್ ನೇತೃತ್ವದಲ್ಲಿ ಇಂಗ್ಲೆಂಡಿನಲ್ಲಿ ಸರ್ಕಾರ ( ಲೇಬರ್ ಸರ್ಕಾರ ) ಅಧಿಕಾರಕ್ಕೆ ಭಾರತದಲ್ಲಿ ರಾಜಕೀಯ ಸ್ಥಿತಿಗತಿ ಚಿಂತಾಜನಕವಾಗಿರುವುದನ್ನು ಮನಗಂಡು ಭಾರತಕ್ಕೆ ಅಧಿಕಾರ ವರ್ಗಾಯಿಸುವ ಚಿಂತನೆ ನಡೆಸಿತು .

ಇದರ ಫಲವಾಗಿ 1948 ಜೂನ್ 30 ರಂದು ಭಾರತದಲ್ಲಿ ಬ್ರಿಟಿಷರ ಅಧಿಕಾರ ಅಂತ್ಯವಾಗುವುದೆಂದು 1947 ಫೆಬ್ರವರಿ 17 ರಂದು ಘೋಷಿಸಿದರು .

ಭಾರತೀಯರಿಗೆ ಜವಬ್ದಾರಿಯುತ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿ ಕೊಡಲಾಗುವುದೆಂದು ನಿರ್ಧರಿಸಿದರು . ಈ ಘೋಷಣೆಯನ್ನು ಮುಸ್ಲಿಂ Oerr ಪ್ರತಿಭಟಿಸಿ ದೇಶವನ್ನು ವಿಭಜಿಸಿ ಪಾಕಿಸ್ತಾನ ರಚಿಸಬೇಕೆಂದು ಒತ್ತಾಯಿಸಿತು .

 ಜೂನ್ ಸೂತ್ರ: –

1947 ಜೂನ್ 3 ರಂದು ಭಾರತದ ವೈಸ್‌ರಾಯ್ ಮೌಂಟ್ ಬ್ಯಾಟನ್‌ರವರು ವಿಭಜನೆ ಸೂತ್ರವನ್ನು ಮುಂದಿಟ್ಟರು.ಈ ವಿಭಜನೆ ಯೋಜನೆಗೆ ಕಾಂಗ್ರೆಸ್ ಹಾಗೂ ಮುಸ್ಲಿಂಲೀಗ್ ಒಪ್ಪಿಗೆ ಸೂಚಿಸಿದವ , ಮೌಂಟ್ ಬ್ಯಾಟಸ್ ರವರ ವಿಭಜನೆ ಸೂತ್ರವನ್ನು ” ಜೂನ್ ಸೂತ್ರ ” ಎಂದು ಕರೆಯುತ್ತಾರೆ ,

ಮೌಂಟ್ ಬ್ಯಾಟನ್‌ರವರು ಸೂಚಿಸಿದ ಸೂತ್ರ ವನ್ನು ಅಳವಡಿಸಿ ಕೊಳ್ಳಲು ಹಾಗೂ ಭಾರತ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕಿಸಿ ಅವುಗಳಿಗೆ ಸ್ವಾತಂತ್ರ್ಯ ನೀಡುವುದಕ್ಕೆ ಸಂಬಂಧಿಸಿದಂತೆ ರೂಪಿಸಿದ ಕಾಯ್ದೆ ಜಾರಿಗೆ ತರಲು 1947 ಜುಲೈ 4 ರಂದು ಕಾಮನ್ ವೆಲ್ತ್ ಸಭೆಯಲ್ಲಿ ಬ್ರಿಟಿಷ್ ಸರ್ಕಾರ ಮಸೂದೆಯನ್ನು ಮಂಡಿಸಿತು .

ಬ್ರಿಟಿಷ್ ಪಾರ್ಲಿಮೆಂಟಿನಿಂದ ಅಂಗೀಕಾರ ಪಡೆದ ಈ ಮಸೂದೆ 1947 ಜುಲೈ 18 ರಂದು ರಾಣಿಯ ಒಪ್ಪಿಗೆ ಪಡೆಯಿತು .

 ಕಾಯ್ದೆಯ ಪ್ರಮುಖ ಅಂಶಗಳು

1 ) ಈ ಕಾಯ್ದೆ ಅನ್ವಯ ಭಾರತದಲ್ಲಿ ಬ್ರಿಟಿಷ್ ಅಧಿಪತ್ಯ ಅಂತ್ಯಗೊಂಡು 1947 ಆಗಸ್ಟ್ 15 ರಂದು ಭಾರತವು ಸ್ವಾತಂತ್ರ್ಯ ಪಡೆಯಿತು .

2 ) 947 ಆಗಸ್ಟ್ 15 ರಂದು ಭಾರತ ಮತ್ತು 1947 ಆಗಸ್ಟ್ 14 ರಂದು ಪಾಕಿಸ್ತಾನ ಎಂಬ ಎರಡು ಎರಡು ಸ್ವತಂತ್ರ ದೇಶಗಳನ್ನು ನಿರ್ಮಿಸಲಾಯಿತು .

3 ) ಎರಡು ದೇಶಕ್ಕೂ ಪ್ರತ್ಯೇಕವಾದ ಸಂವಿಧಾನ ರಚಿಸಲು ಅವಕಾಶ ಕಲ್ಪಿಸಲಾಯಿತು . ಪ್ರತ್ಯೇಕ

4 ) ದೇಶಿಯ ಸಂಸ್ಥಾನಗಳು ಯಾವುದೇ ಲೋಮಿನಿಯನ ಯಲ್ಲಿ ವಿಲೀನವಾಗಲು ಸ್ವಾತಂತ್ರ್ಯ ಪಡೆದವು .

5 ) ಪ್ರತಿಯೊಂದು ಡೋಮಿನಿಯನ್‌ನ ಗೌರರ್‌ ಜನರಲ್‌ನನ್ನು ಬ್ರಿಟಿಷ್ ಸರ್ಕಾರ ನೇಮಿಸುತ್ತದೆ .

6 ) ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಹುದ್ದೆ ರದ್ದಾಗುತ್ತದೆ . ಇವರ ಕಾರ್ಯಗಳು ಕಾಮನ್‌ವೆಲ್ ವ್ಯವಹಾರ ನೋಡಿಕೊಳ್ಳುವ ಕಾರ್ಯದರ್ಶಿಗೆ ವರ್ಗಾಯಿಸಲಾಯಿತು .

7 ) ಪಾಕಿಸ್ತಾನಕ್ಕೆ ಸೇರಿದ ಪ್ರಾಂತ್ಯಗಳನ್ನು ಬಿಟ್ಟು ಉಳಿದ ಎಲ್ಲ ಬ್ರಿಟಿಷ್ ಇಂಡಿಯಾದ ಪ್ರಾಂತ್ಯಗಳು ಭಾರತಕ್ಕೆ ಸೇರುತ್ತವೆ .

8 ) ಪಾಕಿಸ್ತಾನದ ಭೂ ಪ್ರದೇಶವು ಪೂರ್ವ ಬಂಗಾಳ , ಪಶ್ಚಿಮ ಪರಿಪರಿ ಸಿಂದ್ , ಬಲೂಚಿಸ್ತಾನ & ನಾರ್ತ್ ಪ್ರಾಂಟಿಯರ್ ಪ್ರಾವಿನ್ಸ್‌ಗಳನ್ನು ಒಳಗೊಂಡಿರುತ್ತದೆ .

  • ಈ ಕಾಯ್ದೆಯ ಅನ್ವಯ 1947 , ಆಗಸ್ಟ್ 14 , ಗುರುವಾರದಂದು ಪಾಕಿಸ್ತಾನ ಸ್ವಾತಂತ್ರ್ಯವನ್ನು ಪಾಕಿಸ್ತಾನದ ಕರಾಚಿಯಲ್ಲಿ , ಮೌಂಟ್ ಬ್ಯಾಟನ್ ಘೋಷಿಸಿದರು . ಪಾಕಿಸ್ತಾನದ ಮೊಟ್ಟ ಮೊದಲ ಪ್ರಧಾನಿಯಾಗಿ ಅಯಾಖತ್ ಅಅಖಾನ್‌ರವರು ಅಧಿಕಾರ ಸ್ವೀಕರಿಸಿದರು .
  • ಮೌಂಟ್ ಬ್ಯಾಟನ್‌ರವರು ಆಗಸ್ಟ್ 14 , 1947 ರಂದು ಭಾರತಕ್ಕೆ ವಾಪಸ್ ಆಗಿ ಮಧ್ಯ ರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ಘೋಷಿಸಿದರು . 1947 , ಆಗಸ್ಟ್ 15 , ಶುಕ್ರವಾರದಂದು ಭಾರತವು ಸ್ವಾತಂತ್ರ್ಯ ಪಡೆಯುವುದರ ಮೂಲಕ ಬ್ರಿಟಿಷ್ ಆಳ್ವಿಕೆ ಅಂತ್ಯಗೊಂಡಿತು .
  • ಕೊನೆಯ ವೈಸ್‌ರಾಯ್ ಆಗಿದ್ದ ಮೌಂಟ್ ಬ್ಯಾಟನ್ ರವರು ಸ್ವತಂತ್ರ ಭಾರತದ ಮೊದಲ ಗೌರರ್ ಜನರಲ್ ಆಗಿ ಮುಂದುವರಿದರು , ಭಾರತದ ಸಂವಿಧಾನ ರಚನಾ ಕೇಳಿ ಬರು ತಾತ್ಕಾಲಿಕ ಸರ್ಕಾರವಾಯಿತು . ನೆಹರು ಪ್ರಧಾನ ಮಂತ್ರಿಯಾದರು , ಸರ್ಧಾರವಲ್ಲಭಬಾಯಿ ಪಟೇಲ್‌ರವರು ಉಪಪ್ರಧಾನಿಯಾದರು .
  • 1947 ಆಗಸ್ಟ್ 15 ರಿಂದ ಜೂನ್ 21 , 1948 ರವರೆಗೆ ಮೌಂಟ್ ಬ್ಯಾಟನ್‌ರವರನ್ನು ಭಾರತೀಯರ ಆಶಯದ ಮೇರೆಗೆ , ಅವರ ಪ್ರಾಮಾಣಿಕತೆಗಾಗಿ ಗೌರರ್‌ ಜನರಲ್ ಆಗಿ ಮುಂದುವರಿದರು , ಲಾರ್ಡ್ ಮೌಂಟ್ ಬ್ಯಾಟನ್‌ರವರು ಗೌರರ್ ಜನರಲ್ ಹುದ್ದೆಯನ್ನು ರಾಜಗೋಪಾಲಚಾರಿಯವರಿಗೆ ಅಧಿಕಾರ ಹಸ್ತಾಂತರಿಸಿ : ಬ್ರಿಟನ್‌ಗೆ ಮರಳಿದರು . 1949 ನ .26 ರಂದು . ಅ ೦ ಗೀಕಾರವಾದ ಸಂವಿಧಾನವು 1950 ಜನವರಿ 26 ರಂದು ಜಾರಿಗೆ ಬಂದಿತು .

ಭಾರತಕ್ಕೆ ಅಧಿಕಾರ ಹಸ್ತಾಂತರ : –

1947 ಆಗಸ್ಟ್ 14 ರ ರಾತ್ರಿ 11:00 ಗಂಟೆಗೆ ಭಾರತ ಸಂವಿಧಾನ ರಚನಾ ಸಭೆಯು ಅಧಿವೇಶನ ಸೇರಿತ್ತು . ಈ ಸಂದರ್ಭದಲ್ಲಿ ನವದೆಹಲಿಯ ಸಂವಿಧಾನ ಭವನದಲ್ಲಿ ಸಭೆ ಸೇರಲಾಯಿತು .

ಈ ಅಧಿವೇಶನದ ಅಧ್ಯಕ್ಷತೆಯನ್ನು ಡಾ || ಬಾಬು ರಾಜೇಂದ್ರ ಪ್ರಸಾದ್ ಅವರು ವಹಿಸಿಕೊಂಡಿದ್ದರು . ಅಂದಿನ ಅಧಿವೇಶನದಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ” Tryst With Destiny ” ( ಭಾಗ್ಯದೊಡನೆ ಒಪ್ಪಂದ ) ಎಂಬ ಭಾಷಣವನ್ನು ಮಾಡಿದರು . ಮಧ್ಯರಾತ್ರಿಯ ಗಂಟೆ ಕೇಳುತ್ತಿದ್ದಂತೆಯೇ , ಜಗತ್ತು ಮಲಗಿರುವಾಗ ಭಾರತವು ಚಲನಾಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ .ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂತಹ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ , ಹಳೆಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೈತನ್ಯವು ತಮ್ಮ ಅಭಿವ್ಯಕ್ತಿಯನ್ನು ಕಂಡು ಕೊಳ್ಳುತ್ತಿದೆ . ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ .

ಭಾರತವು ತನ್ನನ್ನು ತಾನು ಮತ್ತೆ ಕಂಡು ಕೊಳ್ಳುತ್ತಿದೆ ಎಂದು ಭಾಷಣವನ್ನು ನೆಹರೂ ಅವರು ಮಾಡಿದರು . ನಂತರ 1947 ಆಗಸ್ಟ್ 15 ಮಧ್ಯರಾತ್ರಿ ಸ್ವಾತಂತ್ರ್ಯವನ್ನು ಘೋಷಿಸಲಾಯಿತು . ಅಂದು ಬೆಳಗ್ಗೆ ಕಾರ್ಯಕ್ರಮಗಳು ನಡೆದವು .

ಸ್ವತಂತ್ರ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ : –

ಸ್ವತಂತ್ರ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯು 1952 ರಲ್ಲಿ ಜರುಗಿತು . ಇದುವರೆಗೂ 16 ಲೋಕಸಭಾ ಚುನಾವಣೆಗಳು ಜರುಗಿವೆ .

ಕೇಂದ್ರ ಚುನಾವಣಾ ಆಯೋಗದ ದೇಶದ ಮೊದಲ ಮುಖ್ಯ ಆಯುಕ್ತರಾಗಿ ಸುಕುಮಾರ್ ಸೇನ್ ಅವರು ಕಾರ್ಯ ನಿರ್ವಹಿಸಿದ್ದಾರೆ .

Comments

Leave a Reply

Your email address will not be published. Required fields are marked *