ಭಾರತ ಸರ್ಕಾರ ಕಾಯ್ದೆ 1935

( Government of India Act – 1935 )

ಭಾರತ ಸರ್ಕಾರ ಕಾಯ್ದೆ 1935, government of india act 1935, government of india act , 1935 act, govt of india act 1935, acts in india

ಭಾರತ ಸರ್ಕಾರ ಕಾಯ್ದೆ 1935, government of india act 1935, government of india act , 1935 act, govt of india act 1935, acts in india

ಭಾರತದ ಸಂವಿಧಾನಕ್ಕೆ ಈ ಕಾಯ್ದೆಯು ಬುನಾದಿ ಸಂವಿಧಾನದ ಬಹುತೇಕ ಅಂಶಗಳು 1935 ರ ಕಾಯ್ದೆಯನ್ನು ಆಧರಿಸಿ ರಚಿಸಲಾಗಿದೆ ….. ಆದುದ್ದರಿಂದ ಇದು ಭಾರತದ ಚರಿತ್ರೆಯಲ್ಲಿ ಅತ್ಯಂತ ಮುಖ್ಯ ಕಾಯ್ದೆಯಾಗಿದೆ .

ಇದು ಭಾರತಕ್ಕೆ ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚಿಸಲು ಕಲ್ಪಿಸಿದ ಕಾಯ್ದೆಯಾಗಿದ್ದು ,

ಇದೊಂದು ಬ್ರಿಟಿಷ್ ಇಂಡಿಯಾ ಪ್ರಾಂತ್ಯಗಳಿಗೆ ಮಾತ್ರ ಅನ್ವಯವಾಗದೇ ಸಂಸ್ಥಾನಗಳಿಗೂ ಅನ್ವಯವಾಗುವ ಅಂಶಗಳನ್ನು ಒಳಗೊಂಡ 10 ಅನುಸೂಜೆ ಹಾಗೂ 321 ವಿಭಾಗ ಹೊಂದಿದ ಕಾಯ್ದೆಯಾಗಿದೆ .

 1935 ರ ಭಾರತ ಸರ್ಕಾರ ಕಾಯ್ದೆ ಪ್ರಮುಖ ಅಂಶಗಳು

1 ) ಬ್ರಿಟಿಷ್ ಪ್ರಾಂತ್ಯಗಳು , ದೇಶಿಯ ಸಂಸ್ಥಾನಗಳು ಹಾಗೂ ಆಶ್ರಿತ ರಾಜರನ್ನೊಳಗೊಂಡ ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ ಕಲ್ಪಿಸಿತು .

2 ) ಈ ಕಾಯ್ದೆಯು ವಿಷಯಗಳನ್ನು 59 ವಿಷಯಗಳನ್ನು ಒಳಗೊಂಡ ಫೆಡರಲ್ ಪಟ್ಟಿ ( ಕೇಂದ್ರ ಪಟ್ಟಿ ) ,

54 ವಿಷಯ ಒಳಗೊಂಡ ಪ್ರಾಂತೀಯ ಪಟ್ಟಿ

ರಾಜ್ಯ ಹಾಗೂ 36 ವಿಷಯಗಳನ್ನೊಳಗೊಂಡ ಸಮವರ್ತಿ ಪಟ್ಟಿ ಎಂಬುದಾಗಿ ಮೂರು ಪಟ್ಟಯಾಗಿ ಶೇಷಾಧಿಕಾರಗಳನ್ನು ವಿಂಗಡಿಸಲಾಯಿತು , ವೈಸ್‌ರಾಯ್‌ರವರಿಗೆ ನೀಡಲಾಯಿತು .

3 ) ದೇಶದ ಕರೆನ್ಸಿ ಹಾಗೂ ವ್ಯವಹಾರ ವಹಿವಾಟು ನಿರ್ವಹಿಸಲು ಏಪ್ರಿಲ್ 1 , 1935 ರಲ್ಲಿ ರಿಸರ್ವ್ ಬ್ಯಾಂಕ್ ನ್ನು ಸ್ಥಾಪಿಸಲಾಯಿತು .

4 ) ಬಾಂಬೆ ಪ್ರಾಂತ್ಯದಿಂದ ಹೊಸ ಪ್ರಾಂತ್ಯಗಳಾಗಿ ಸಿಂದ್ ಮತ್ತು ಒರಿಸ್ಥಾವನ್ನು ಸ್ಥಾಪಿಸಲಾಯಿತು . ಭಾರತದಿಂದ ಬರ್ಮಾ ಬೇರೆಯಾಯಿತು .

11 ಪ್ರಾಂತ್ಯಗಳಲ್ಲಿ ಗೌರರ್‌ರುಗಳು ಮತ್ತು 6 ಪ್ರಾಂತ್ಯಗಳಲ್ಲಿ ಚೀಫ್ ಕಮೀಷನರ್‌ಗಳು ಆಡಳಿತ ನಡೆಸುತ್ತಿದ್ದರು .

5 ) ಈ ಕಾಯ್ದೆ ಅನ್ವಯ 1937 ರಲ್ಲಿ ದೆಹಲಿಯಲ್ಲಿನ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರಗಳ ನಡುವೆ ಹುಟ್ಟುವ ಸಮಸ್ಯೆಗಳನ್ನು ತೀರ್ಮಾನ ಮಾಡಬೇಕಾಗಿತ್ತು .

6 ) ಇಂಡಿಯನ್ ಕೌನ್ಸಿಲ್‌ನ್ನು ರದ್ದುಪಡಿಸಿತು . ಗೌರ ಜನರಲ್ ಸಾಕಷ್ಟು ಆಡಳಿತ , ಶಾಸಕಾಂಗ ಮತ್ತುಹಣಕಾಸಿನ ಅಧಿಕಾರವನ್ನು ಪಡೆದಿದ್ದನು .

7 ) ಸಂಯುಕ್ತ ಶಾಸಕಾಂಗವನ್ನು ಕೇಂದ್ರ ಪಾರಿಮೆಂಟ್ಎಂದು ಕರೆದರು . ಇದರಲ್ಲಿ “ ಕೌನ್ಸಿಲ್ ಆಫ್ ಸ್ಟೇಟ್ಸ್ ಮತ್ತು ಹೌಸ್ ಆಫ್ ಅಸೆಂಬ್ಲಿ ” ಎಂಬ ಎರಡು ಶಾಸನ ಸಭೆಗಳಿದ್ದವು .

8 ) ವಯಸ್ಕ ಮತದಾನವನ್ನು ಮುಂದುವರಿಸಿದರು , ಇದ ರಿಂದ ಜನಸಂಖ್ಯೆ ಶೇ .10 ರಷ್ಟು ಮಂದಿ ಮತದಾನದ ಹಕ್ಕು ಪಡೆದರು .

9 ) ಕೌನಿ ಆಫ್ ಸ್ಟೇಟ್ಸ್‌ನಲ್ಲಿ ಬ್ರಿಟಿಷ್ ಇಂಡಿ c ಾದ 260 ಮಂದಿ ಒಳಗೊಂಡಿದ್ದು , 156 ಮಂದಿ ಬ್ರಿಟಿಷ್ ಇಂಡಿಯಾದಿಂದ ಆಯ್ಕೆಯಾಗಬೇಕಿತ್ತು . 104 ಮಂದಿ ಪ್ರತಿನಿಧಿಗಳು ದೇಶೀಯ ಸಂಸ್ಥಾನದಿಂದ ಆಯ್ಕೆಯಾಗುತ್ತಿದ್ದರು . ಈ ಸಭೆ ಖಾಯಂ ಸಭೆಯಾಗಿತ್ತು .

ಇಬ್ಬರು ಮಹಿಳಾ ಪ್ರತಿನಿಧಿಗಳಿರುತ್ತಿದ್ದರು . ಹೌಸ್ ಆಫ್ ಅಸಂಜ್ಞೆಯಲ್ಲಿ 375 ಸದಸ್ಯರಿದ್ದು , ಅವರಲ್ಲಿ 250 ಮಂದಿ ಆಟಫ್ ಇಂಡಿಯಾ ಪ್ರಾಂತ್ಯದಿಂದ ಆಯ್ಕೆಯಾದರೆ , 125 ಮಂದಿ ದೇಶಿಯ ಸಂಸ್ಥಾನದಿಂದ ಆಯ್ಕೆಯಾದ ಪ್ರತಿನಿಧಿಗಳಿರುತ್ತಿದ್ದರು .

ಹಿಂದೂ , ಮುಸ್ಲಿಂ ಮತ್ತು ಕೋಮುಗಳ ಪ್ರತಿನಿಧಿಗಳನ್ನು Add ಪ್ರಾಂತ್ಯಗಳ ಶಾಸನ ಸಭೆಗಳಲ್ಲಿರುವ ಆಯಾ ಕೋಮಿನ ಸದಸ್ಯರೇ ಚುನಾಯಿಸತಕ್ಕದೆಂದು ತೀರ್ಮಾನವಾಯಿತು .

10 ) ಚುನಾವಣೆಯಲ್ಲಿ ಭಾಗವಹಿಸಲು ಇಂಡಿಯನ್‌ರಿಗೆ , ಭಾರತೀಯ ಕ್ರಿಶ್ಚಿಯನ್‌ಗೆ ಅಂಗೋ ಯುರೋಪಿಯನ್‌ರಿಗೆ ವಿಶೇಷ ಅವಕಾಶ

11) ರಾಜ್ಯಗಳಲ್ಲಿ ದ್ವಿಸದನ ಪದ್ಧತಿಗೆ ಅವಕಾಶ ಕಲ್ಪಿಸಲಾಯಿತು . ಈ ಮೂಲಕ ಬಂಗಾಳ , ಬಾಂಬೆ , ಮದ್ರಾಸ್ , ಬಿಹಾರ , ಆಸ್ಸಾಂ , ಸಂಯುಕ್ತ ಪ್ರಾಂತ್ಯಗಳು ಲೆಜಿಟಿವ್ ಕೌನ್ಸಿಲ್ ( ಮೇಲ್ಮನೆ ) , ಹಾಗೂ ಲೆಜಿಸ್ಟ್ರೇಟಿವ್ ಅಸೆಂಬ್ಲಿ ( ಕೆಳಮನೆ ) ಎಂಬ ಎರಡು ಸದನಗಳನ್ನು ಒಳಗೊಂಡವು .

12) ಈ ಕಾಯ್ದೆಯು ಸಂಯುಕ್ತ ಲೋಕಾ ಸೇವಾ ಆಯೋಗ ಸ್ಥಾಪಿಸುವುದರೊಂದಿಗೆ ಪ್ರಾಂತೀಯ ಲೋಕಸೇವಾ ಆಯೋಗ ಎರಡು ಹಾಗೂ ಅದಕ್ಕಿಂತ ಹೆಚ್ಚು ಪ್ರಾಂತ್ಯಗಳಲ್ಲಿ ಜಂಟಿ ಲೋಕಸೇವಾ ಆಯೋಗವನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿತು .

13 ) ಧಾರತದಲ್ಲಿ ಫೆಡರಲ್ ಕೋರ್ಟ್ 1937 ಆಕ್ಟೋಬರ್ 1 ರಂದು ಸ್ಥಾಪನೆಯಾದವು , ನಂತರ , ಸಂವಿಧಾನ ಜಾರಿಗೆ ಬಂದಾಗ ಫೆಡರಲ್ ನ್ಯಾಯಾಲಯವನ್ನು ಸುಪ್ರೀಂ ಕೋರ್ಟ್ ಎಂದು ಸಂವಿಧಾನದಲ್ಲಿ ಅವಕಾಶ –

 1935 ಭಾರತ ಸರ್ಕಾರ ಕಾಯ್ದೆ ಬರಲು ಕಾರಣಗಳು

  • 1919 ರ ಕಾಯ್ದೆಯು ಭಾರತೀಯರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಿಲ್ಲ . ಹಾಗೂ 1919 ರಲ್ಲಿ ಜಾರಿಗೆ ಬಂದ ರೌಲತ್ ಕಾಯ್ದೆ ಜಅಯನ್ ವಾಲಾಬಾಗ್ ದುರಂತಕ್ಕೆ ಕಾರಣವಾಯಿತು .
  • 1927 ನವಂಬರ್‌ನಲ್ಲಿ ಭಾರತಕ್ಕೆ ಬಂದ ಸೈಮನ್ ಆಯೋಗವು ಬಿಳಿಯರಿಂದಲೇ ಕೂಡಿತ್ತು , ಇಂತಹ ಸೈಮನ್ ಆಯೋಗವನ್ನು ಎಲ್ಲಾ ಪಕ್ಷಗಳು ಬಹಿಷ್ಕರಿಸಿದವು , ಸೈಮನ್ ಆಯೋಗವು ದ್ವಿ ಸರ್ಕಾರ ಪದ್ಧತಿಯನ್ನು ರದ್ದುಪಡಿಸಿ ಪ್ರಾಂತೀಯ , ಸ್ವಾಯತತೆಯನ್ನು ನೀಡಬೇಕೆಂದು ಮಾಡಿತು . ಮೇಲಿನ ಎಲ್ಲಾ ಅಂಶಗಳ ಕಾರಣದಿಂದ 1935 ರ ಭಾರತ ಸರ್ಕಾರ ಕಾಯಿದೆ ಜಾರಿಗೆ ಬಂದಿತು .

 


0 Comments

Leave a Reply

Avatar placeholder

Your email address will not be published. Required fields are marked *