ಭಾರತದ ಸಂವಿಧಾನ ಶಿಲ್ಪಿ
( Architect of Indian Constitution )
ಭಾರತದ ಸಂವಿಧಾನ ಶಿಲ್ಪಿ, br ambedkar, architect of indian constitution, dr br ambedkar, dr babasaheb ambedkar, dr ambedkar
ಡಾ | ಬಿ.ಆರ್.ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮಹ ದಂಡು ಪ್ರದೇಶದಲ್ಲಿ 1891 ಏಪ್ರಿಲ್ 14 ರಂದು ಜನಿಸಿದ್ದರು . ಅವರ ನೆನಪಿಗಾಗಿ ರಾಜ್ಯಸರ್ಕಾರ ಅವರ ಹುಟ್ಟೂರಿನಲ್ಲಿ ಭವ್ಯ ಸ್ಮಾರಕ ನಿರ್ಮಾಣ ಮಾಡಿ ಡಾ | ಬಿ.ಆರ್.ಅಂಬೇಡ್ಕರ್ ಅವರ ಕುಟುಂಬ ಪ್ರಸ್ತುತ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಾವಾಡಿ ಪಟ್ಟಣದವರು .
ಡಾ | ಬಿ.ಆರ್ . ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಇವರನ್ನು ಭಾರತದ ಸಂವಿಧಾನ ಶಿಲ್ಪ ಹಾಗೂ ಆಧುನಿಕ ಮನು ” ಎಂದು ಕರೆಯುತ್ತಾರೆ .
ಸಮಾಜದ ಶೋಷಿತ ವರ್ಗದವರ ಧ್ವನಿಯಾಗಿ ಶ್ರಮಿಸಿದ ಡಾ | ಬಿ.ಆರ್ . ಅಂಬೇಡ್ಕರ್ ಅವರ ಸ್ಮರಣಾರ್ಥ ದೇಶಾದ್ಯಂತ ಅನೇಕ ಕಡೆ ಸ್ಮಾರಕಗಳು , ಕೆಲವು ಸಂಸ್ಥೆಗಳಿಗೆ ಇವರ ಹೆಸರನ್ನು ಇಡಲಾಗಿದೆ . ಪ ೦ ಜಾಬ್ನ ಜಲಂದರ್ನಲ್ಲಿರುವ ಐಐಟಿಗೆ ಡಾ | ಬಿ.ಆರ್ . ಅಂಬೇಡ್ಕರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂದು ಮರುನಾಮಕರಣ ಮಾಡಲಾಗಿದೆ . ಮಹಾರಾಷ್ಟ್ರದ ನಾಗುರದಲ್ಲಿರುವ ವಿಮಾನ ನಿಲ್ದಾಣಕ್ಕೆ ಡಾ | ಬಾಬಾ ಸಾಹೇಬ್ ಅಂಬೇಡ್ಕರ್ ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ . ಬೆಂಗಳೂರಿನ ಜ್ಞಾನಭಾರತಿ ಬಳಿ ಡಾ.ಬಿ.ಆರ್ . ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪಿಸಲು 2017 ರ ಏಪ್ರಿಲ್ 14 ರಂದು ಶಂಬು ಸ್ಥಾಪನೆ ಮಾಡಲಾಗಿದೆ
ಡಾ || ಬಿ.ಆರ್.ಅಂಬೇಡ್ಕರ್ ಅವರ ಆತ್ಮ ಚರಿತ್ರೆ
1935-36ರ ಅವಧಿಯಲ್ಲಿ ಅವರು ತಮ್ಮ ಆತ್ಮ ಚರಿತ್ರೆ “ Waiting for a Visa ” ಎಂಬ ಕೃತಿ ಬರೆದಿದ್ದಾರೆ . ಇದು 20 ಪಟಗಳ ಆತ್ಮಚರಿತ್ರೆಯಾಗಿದೆ . ಇದನ್ನು ಸ್ವಂತ ಕೈ ಬರಹದಲ್ಲಿ ಬರೆದಿದ್ದಾರೆ . ಇದು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿದೆ .
ವಿಶ್ವಸಂಸ್ಥೆಯಲ್ಲಿ ಡಾ || ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ : –
ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಡಾ || ಬಿ.ಆರ್ . ಅಂಬೇಡ್ಕರ್ ಅವರ 125 ನೇ ವರ್ಷದ ಜಯಂತಿಯನ್ನು 2016 ರಲ್ಲಿ ಆಚರಿಸಲಾಯಿತು .
ಡಾ || ಬಿ.ಆರ್ . ಅಂಬೇಡ್ಕರ್ ಅವರ ಬೌದ್ಧ ದೀಕ್ಷೆ : –
ಡಾ || ಬಿ.ಆರ್ . ಅಂಬೇಡ್ಕರ್ ಅವರು 1956 ಅಕ್ಟೋಬರ್ 14 ರಂದು ನಾಗುರದ ದೀಕ್ಷಾ ಭೂಮಿಯಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು . ನಾಗುರ ಸ್ಥಳದಲ್ಲಿ ಬೌದ್ಧ ಧರ್ಮದ ಸ್ಮಾರಕವಿದ್ದು , ಇದನ್ನು ದೀಕ್ಷಾಭೂಮಿ ಎನ್ನುವರು .
ಡಾ || ಜಿ.ಆರ್.ಅಂಬೇಡ್ಕರ್ ಅವರ ಸಮಾಧಿ
ಚೈತ್ಯ ಭೂಮಿ : 1956 ಡಿಸೆಂಬರ್ 6 ರಂದು ತಮ್ಮ 65 ನೇ ವಯಸ್ಸಿನಲ್ಲಿ ದೆಹಲಿಯಲ್ಲಿ ನಿಧನರಾದರು . ಮುಂಬೈನ ಸಮಾಧಿ ಸ್ಥಳವನ್ನು “ ಚೈತ್ಯ ಭೂಮಿ ” ( Chaitya Bhoomi ) ಎನ್ನುವರು .
ಭಾರತ ರತ್ನ ಪ್ರಶಸ್ತಿ ಪುರಸ್ಕೃತರು : –
1990 ರಲ್ಲಿ ಡಾ || ಬಿ.ಆರ್.ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಲಾಗಿದೆ .
0 Comments