
Table of Contents
ಭಾರತದ ಪ್ರಸ್ತಾವನೆಯಲ್ಲಿರುವ ಪ್ರಮುಖ ಪದಗಳು
( Key words in the Preamble )
keywords of preamble, keywords in preamble, preamble keywords, keywords of the preamble,The People of India, Sovereign
-
ಭಾರತದ ಪ್ರಜೆಗಳು ( The People of India )
ಸಂವಿಧಾನದ ಪ್ರಸ್ತಾವನೆಯ ಪ್ರಾರಂಭದಲ್ಲಿ ನಮೂದಿಸಿದ ಪದವೆಂದರೆ ಭಾರತದ ಪ್ರಜೆಗಳಾದ ನಾವು ” ಈ ಪದದ ಪ್ರಮುಖ ಹಿನ್ನಲೆಯೆಂದರೆ ಭಾರತದ ಸಂವಿಧಾನವು ಭಾರತೀಯರಿಂದಲೇ ರಚಿತವಾಗಿದ್ದು ಭಾರತೀಯರ ಆಶೋತ್ತರಗಳಿಗೆ ಅನುಗುಣವಾಗಿ ಅವರ ಆರ್ಥಿಕ ,
ಸಾಮಾಜಿಕ ,
ರಾಜಕೀಯ ,
ಸಮಸ್ಯೆಗಳಿಗೆ ಅನುಗುಣವಾಗಿ ಪರಿಹಾರ ರೂಪಿಸಲು ರಚಿಸಲಾಗಿರುವುದರಿಂದ ಪ್ರಸ್ತಾವನೆಯಲ್ಲಿ ಭಾರತದ ಪ್ರಜೆಗಳಾದ ನಾವು ‘ ಎಂಬ ಪದವನ್ನು ಸೇರಿಸಲಾಗಿದೆ . ಈ ಮೂಲಕ ಸಂವಿಧಾನವು ಭಾರತದ ಪ್ರಜೆಗಳಿಗಾಗೇ ನಿರ್ದೇಶನವನ್ನು ಸೂಚಿಸಿವೆ . ರೂಪಿತವಾಗಬೇಕು ಎಂಬ ಸಂವಿಧಾನ ರಚನಾಕಾರರಿಗೆ ಸೂಚಿಸಿವೆ
2 ) ಸಾರ್ವಭೌಮ ( Sovereign )
ಭಾರತವು ಅಧೀನಕ್ಕೆ ಯಾವುದೇ ಸಾರ್ವಭೌಮ ಒಳಗಾಗದೆ ಭಾರತವು ಸಾರ್ವಭೌಮ ರಾಷ್ಟ್ರವಾಗಿದೆ ಎಂಬುದನ್ನು ಸೂಚಿಸುತ್ತದೆ . ಮತ್ತು ಸಂವಿಧಾನದಲ್ಲಿ ರಾಷ್ಟ್ರವಾಗಿ ಹೊರ ಹೊಮ್ಮುವಂತೆ ರೂಪಿತವಾಗಬೇಕೆಂದು ಪ್ರಸ್ತಾವನೆಯಲ್ಲಿ “ ಸಾರ್ವಭೌಮ ” ಎಂಬ ಪದವನ್ನು ಸೇರಿಸಲಾಯಿತು .
ಸಾರ್ವಭೌಮ ಎಂದರೆ ಯಾವುದೇ ಮೇಲಾಧಿಕಾರವನ್ನು ರಾಷ್ಟ್ರದ ಒಪ್ಪದ ಉಚ್ಚ ಹಾಗೂ ಪರಿಪೂರ್ಣ ಅಧಿಕಾರವನ್ನು ಹೊಂದಿದ ದೇಶವೇ ಸಾರ್ವಭೌಮ ದೇಶ ಎಂದು “ ಕೂಲ ” ಅವರು ವರ್ಣಿಸಿದ್ದಾರೆ.
ಭಾರತವು ಆಂತರಿಕ ಮತ್ತು ವಿದೇಶಿ ನಿರ್ಣಯಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿದೆ ಎಂದು ಸ್ಪಷ್ಟಪಡಿಸಿತು .
ಸ್ವಾತಂತ್ರ್ಯ ನಂತರ ಭಾರತವು ಕಾಮನ್ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದು ಹಾಗೂ ಸಂಸ್ಥೆಯ ಸದಸ್ಯತ್ವ ಹೊಂದಿದ್ದು , ಸಂವಿಧಾನೇತರ ಒಪ್ಪಂದವಾಗಿದೆ .
ಇಂತಹ ಒಕ್ಕೂಟದಿಂದ ಭಾರತವು ತಾವು ಯಾವಾಗ ಬೇಕಾದರೂ ಹೊರ ಬರುವ ಎಲ್ಲಾ ಹಕ್ಕನ್ನು ಹೊಂದಿದೆ . ಹಂಬಧಾನ
ಯಾವುದೇ ರಾಷ್ಟ್ರದೊಂದಿಗೆ ಅಧೀನವಾಗಿರುವ ಒಪ್ಪಂದ ಮಾಡಿಕೊಳ್ಳದೆ . ಸ್ವತಂತ್ರವಾದ ಒಪ್ಪಂದವನ್ನು ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿದೆ .
ಈ ಧೈಯದ ಆಧಾರದ ಮೇಲೆಯೇ ಭಾರತವು ಅಲಿಪ್ತ ನೀತಿಯನ್ನು ಅನುಸರಿಸುತ್ತಿದೆ .
3 ) ಸಮಾಜವಾದಿ ( Socialistic )
ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಸೇರಿಸಲಾಯಿತು .ಸಮಾಜವಾದಿ ತತ್ವಗಳನ್ನು ಪ್ರಜಾಪ್ರಭುತ್ವದ ಮೂಲಕ ಜಾರಿಗೆ ತರುವ ಉದ್ದೇಶದಿಂದ ಸಮಾಜವಾದಿ ಎಂಬ ಪದವನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಯಿತು .
ಭಾರತದಲ್ಲಿ ಬಂಡವಾಳ ಶಾಹಿಗಳು ಹಾಗೂ ಕಾರ್ಮಿಕರ ನಡುವೆ ತಾರತಮ್ಯ ಹೋಗಲಾಡಿಸಲು ಸಮಾಜವಾದಿ ತತ್ವವನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಯಿತು .
ರಾಜ್ಯ ನಿರ್ದೇಶಕ ತತ್ವಗಳು ಕೂಡ ಸಮಾಜವಾದಿ ತತ್ವವನ್ನು ಹೊಂದಿದ್ದರಿಂದ , ಭಾರತದಲ್ಲಿ ಮಿಶ್ರ ಆರ್ಥಿಕ ಪದ್ಧತಿಯನ್ನು ಅಂಗೀಕರಿಸಲಾಯಿತು .
1955 ರಲ್ಲಿ ತಮಿಳುನಾಡಿನ ಅವಾಡಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವು ‘ ಸಂಪತ್ತಿನ ಸಮಾನ ಹಂಚಿಕೆ ‘ ಕುರಿತು ಅಂಗೀಕರಿಸಿದ ನಿರ್ಣಯದಲ್ಲಿ ಸಮಾಜವಾದಿ ತತ್ವವನ್ನು ಬೆಂಬಲಿಸಿದ್ದರಿಂದ ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಸಮಾಜವಾದಿ ಎಂಬ ಪದವನ್ನು ಸೇರ್ಪಡೆ ಮಾಡಲಾಯಿತು .
4 ) ಜಾತ್ಯಾತೀತ ( Secular )
ಭಾರತವು ಅನೇಕ ಧರ್ಮ , ಜಾತಿ , ಜನಾಂಗಗಳನ್ನು ಒಳಗೊಂಡಿದ್ದು , ಅವರೆಲ್ಲರಿಗೂ ನಿರ್ಭಯವಾದ ಜೀವನ ನಡೆಸಲು ಯಾವುದೇ ತಾರತಮ್ಯವಿಲ್ಲದೆ ರಾಷ್ಟ್ರದಲ್ಲಿ ಜಾತ್ಯಾತೀತ ತತ್ವವನ್ನು ಅನುಸರಿಸುತ್ತಿದ್ದು , ಧರ್ಮ ನಿರಪೇಕ್ಷವಾಗಿ ಬದುಕುವ ಅವಕಾಶ ಕಲ್ಪಿಸಿಕೊಟ್ಟಿದ್ದರು ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯಾತೀತ ಎಂಬ ಪದವಿಲ್ಲದ ಕಾರಣ 1976 ರಲ್ಲಿ 42 ನೇ ತಿದ್ದುಪಡಿ ಮಾಡಿ ಭಾರತೀಯ ಪ್ರಸ್ತಾವನೆಗೆ ಜಾತ್ಯಾತೀತ ಎಂಬ ಪದವನ್ನು ಸೇರ್ಪಡೆ ಮಾಡಲಾಯಿತು . ಜಾತ್ಯಾತೀತತೆ ಎಂದರೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುವುದು ಎಂದರ್ಥ .
ಇದನ್ನು ಮತ್ತೊಂದು ಹೆಸರಿನಲ್ಲಿ ‘ ಧರ್ಮ ನಿರಪೇಕ್ಷಿತ ಎಂದು ಕರೆಯುವರು . ಭಾರತದಲ್ಲಿ ಎಲ್ಲಾ ಧರ್ಮಗಳ ಆಚರಣೆಗೂ ಅವಕಾಶವಿದೆ . ದೇಶದಲ್ಲಿ ಯಾವುದೇ ಅಧಿಕೃತವಾದ ಧರ್ಮವಿಲ್ಲ .
ಧರ್ಮದ ಆಚರಣೆಗೆ ಸಹಕಾರಿಯಾಗುವಂತೆ 25 ನೇ ವಿಧಿಯಿಂದ 28 ನೇ ವಿಧಿವರೆಗೆ ಅವಕಾಶ ಕಲ್ಪಿಸಲಾಗಿದೆ . ಮೂಲಕ ಭಾರತವು ಒಂದು ಜಾತ್ಯಾತೀತ ರಾಷ್ಟ್ರವಾಯಿತು .
5 ) ಪ್ರಜಾಸತಾತ್ಮಕ ( Democratic )
ಅಮೇರಿಕಾದ 16 ನೇ ‘ ಅಬ್ರಾಹಂ ಅಂಕನ್’ರವರ “ ಪ್ರಜೆಗಆಂದ , ಪ್ರಜೆಗಳಗಾಗಿ , ಪ್ರಜೆಗಆಗೋಸ್ಕರ ” , ಎಂಬ ಪ್ರಜಾಪ್ರಭುತ್ವ ತತ್ವವನ್ನು ಆಧರಿಸಿ ರಚಿತವಾಗಬೇಕೆಂದು ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ‘ ಪ್ರಜಾಸತಾತ್ಮಕ ‘ ಎಂಬ ಪದವನ್ನುಸೇರ್ಪಡೆ ಮಾಡಲಾಯಿತು .
ಪ್ರಜಾಪ್ರಭುತ್ವ ಒಂದು ಸರ್ಕಾರ ಪದ್ಧತಿ , ಇದೊಂದು ಜನಪ್ರಿಯ ರಾಜಕೀಯ ವ್ಯವಸ್ಥೆಯಾಗಿದೆ . ಇದರಲ್ಲಿ ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ತಮಗೆ ಬೇಕಾದ ರೀತಿಯಲ್ಲಿ ಸರ್ಕಾರವನ್ನು ನಡೆಸುವಂತೆ ಮಾಡುವುದಾಗಿದೆ . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿರುತ್ತಾರೆ .
ಇವರು ಚುನಾವಣೆಯ ಮೂಲಕ ಒಂದು ಸರ್ಕಾರವನ್ನು ರಚಿಸುತ್ತಾರೆ . ಈ ಮೂಲಕ ಪ್ರಜೆಗಳಿಂದಲೇ ಸರ್ಕಾರ ನಡೆಯುತ್ತದೆ .
ಇಂತಹ ಅಂಶವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿ ಆ ಮೂಲಕ ಸಂವಿಧಾನದಲ್ಲಿ ಪ್ರಜಾಸತಾತ್ಮಕ ಮೌಲ್ಯಗಳನ್ನು ಸೇರ್ಪಡೆ ಮಾಡುವಂತೆ ಮಾಡಲಾಯಿತು .
ಪ್ರಸ್ತುತವಾಗಿ ಭಾರತವು ಪ್ರಜಾಸತಾತ್ಮಕ ಮೌಲ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡು ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಸತಾತ್ಮಕ ರಾಷ್ಟ್ರವಾಗಿದೆ .
6 ) ಗಣತಂತ್ರ ( Republic )
ಗಣತಂತ್ರ ಎಂಬುದು ರಾಜ ಪ್ರಭುತ್ವಕ್ಕೆ ವಿರುದ್ಧವಾದ ಸರ್ಕಾರವಾಗಿದೆ . ರಿಪಬ್ಲಿಕ್ ಎಂದರೆ ಅನೇಕ ವ್ಯಕ್ತಿಗಳಿಂದ ಸರ್ಕಾರ ನಡೆಸುವುದಾಗಿದೆ . ಇದು ಅನುವಂಶೀಯವಾದ ಪ್ರಭುತ್ವವನ್ನು ಹೋಗಲಾಡಿಸಿ ಜನಗಳಿಂದ ನೇರವಾಗಿ ಸರ್ಕಾರದ ಮುಖ್ಯಸ್ಥರನ್ನು ಆಯ್ಕೆ ಮಾಡುವ ಪದ್ಧತಿಯಾಗಿದೆ .
ಈ ಪದ್ಧತಿಯಲ್ಲಿ ಅಂತಿಮ ಅಧಿಕಾರವಿರುವುದು ಪ್ರಜೆಗಳಲ್ಲಿ ಅವರಿಂದ ಚುನಾಯಿತರಾದ ಪ್ರತಿನಿಧಿಗಳು ಸಂವಿಧಾನಕ್ಕೆ ಅನುಗುಣವಾಗಿ ಅಧಿಕಾರವನ್ನು ಚಲಾಯಿಸುತ್ತಾರೆ .
ಒಂದೇ ವಂಶದವರು ಅಥವಾ ವರ್ಗದವರು ನಿರಂತರವಾಗಿ ಅಧಿಕಾರ ನಡೆಸುವಂತದ್ದಲ್ಲಿ ಇದು ಜನರಿಂದ ಆಯ್ಕೆಯಾಗುವ ವ್ಯಕ್ತಿಗಳು ನಡೆಸುವಂತಹ ಸರ್ಕಾರವಾಗಿದೆ .
ಇಂತಹ ಸರ್ಕಾರವನ್ನು ಭಾರತದ ಸಂವಿಧಾನವು ಒದಗಿಸಿರುವು ದರಿಂದ ಭಾರತವು ಗಣತಂತ್ರ ವ್ಯವಸ್ಥೆ ಹೊಂದಿದೆ .
7 ) ನ್ಯಾಯ ( Justice )
ನ್ಯಾಯ ಎಂಬ ಪದವು ವಿಶಾಲವಾದ ಅರ್ಥವನ್ನು ಹೊಂದಿದ್ದು , ಇದು ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಸೂಚಿಸುತ್ತದೆ . ಇಂತಹ ನ್ಯಾಯ ಎಂಬ ಧೈಯವನ್ನು 1917 ರಲ್ಲಿ ಜರುಗಿದ ರಷ್ಯಾದ ಕ್ರಾಂತಿಯಿಂದ ಎರವಲು ಪಡೆದು ಭಾರತದ ಪ್ರಸ್ತಾವನೆಗೆ ಸೇರ್ಪಡೆ ಮಾಡಲಾಯಿತು .
ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳನ್ನು ,ರಾಜ್ಯ ನಿರ್ದೇಶಕ ತತ್ವಗಳನ್ನು ಎಲ್ಲಾ ಪ್ರಜೆಗಳಿಗೂ ಯಾವುದೇ ತಾರತಮ್ಯವಿಲ್ಲದೆ ಒದಗಿಸುತ್ತಿರುವುದರಿಂದ ರಾಷ್ಟ್ರದ ಜನರಿಗೆ ಆರ್ಥಿಕ ,
ಸಾಮಾಜಿಕ ಹಾಗೂ ಒದಗಿಸಿದಂತಾಗಿದೆ . ರಾಜಕೀಯ ನ್ಯಾಯವನ್ನು ಈ ಮೂಲಕ ಪ್ರಜಾ ಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಲಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ನ್ಯಾಯ ಎಂಬ ಪದವನ್ನು ಸೇರ್ಪಡೆ ಮಾಡಲಾಯಿತು .
8 ) ಸ್ವಾತಂತ್ರ್ಯ ( Liberty )
ಭಾರತದ ಸಂವಿಧಾನ ರಚನಾಕಾರರು ವ್ಯಕ್ತಿ ಸ್ವತಂತ್ರ ದಲ್ಲಿ ಹೆಚ್ಚು ನಂಬಿಕೆ ಹೊಂದಿದ್ದು , ಪ್ರತಿಯೊಬ್ಬ ವ್ಯಕ್ತಿಯು ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿದಾಗ ಪ್ರಜಾಪ್ರಭುತ್ವಕ್ಕೆ ಹಾಗೂ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಮನಗಂಡು 19 ನೇ ವಿಧಿಯಲ್ಲಿ
1 ) ವಾಕ್ ಸ್ವಾತಂತ್ರ್ಯ
2 ) ಸಭೆ ಸೇರುವ ಸ್ವಾತಂತ್ರ್ಯ
3 ) ಸಂಘ ಕಟ್ಟುವ ಸ್ವಾತಂತ್ರ್ಯ
4 ) ಸಂಚರಿಸುವ ಸ್ವಾತಂತ್ರ್ಯ
5 ) ವಾಸಿಸುವ ಸ್ವಾತಂತ್ರ್ಯ
6 ) ಉದ್ಯೋಗ ಮಾಡುವ ಸ್ವಾತಂತ್ರ್ಯ
ಎಂಬ ಆರು ಸ್ವಾತಂತ್ರ್ಯಗಳನ್ನು ಒದಗಿಸಿ ಕೆಲವು ನಿರ್ಬಂಧಕ್ಕೊಳಪಡಿಸಿ ವ್ಯಕ್ತಿಯು ಸ್ವತಂತ್ರವಾದ ಜೀವನವನ್ನು ನಡೆಸಲು ಅವಕಾಶ ಕಲ್ಪಿಸಿದೆ . ಈ ಸ್ವತಂತ್ರ ಎಂಬ ಕಲ್ಪನೆಯನ್ನು ಫ್ರೆಂಚ್ ಕ್ರಾಂತಿಯಿಂದ ( 1789-1799 ) ಎರವಲು ಪಡೆಯ ಲಾಯಿತು .
9 ) ಸಮಾನತೆ ( Equality )
ಸಮಾನತೆ ಎಂದರೆ ಯಾವುದೇ ಒಂದು ವರ್ಗಕ್ಕೆ ವಿಶೇಷ ಆದ್ಯತೆ ನೀಡದೆ ಸಮಾಜದ ಎಲ್ಲರಿಗೂ ಕೂಡ ಒಂದೇ ರೀತಿಯಾದಂತಹ ಸವಲತ್ತುಗಳನ್ನು ಒದಗಿಸುವುದೇ “ ಸಮಾನತೆ ” ,
ಭಾರತದ ಸಂವಿಧಾನದ ಪ್ರಸ್ತಾವನೆಗೆ ಸಮಾನತೆ ಎಂಬ ಪದವನ್ನು ಫ್ರೆಂಚ್ ಕ್ರಾಂತಿಯಿಂದ ( 1789-1799 ) ಎರವಲು ಪಡೆಯಲಾಯಿತು . ಭಾರತದ ಸಂವಿಧಾನದಲ್ಲಿ ಸಮಾನತೆ ಹಕ್ಕನ್ನು ಒದಗಿಸಿ ಉದ್ಯೋಗ ಪಡೆಯುವುದರಲ್ಲಿ ಹಾಗೂ ಎಲ್ಲಾ ಸಂದರ್ಭದಲ್ಲೂ ದೇಶದ ನಾಗರೀಕರನ್ನು ಒಂದೇ ರೀತಿಯಲ್ಲಿ ಪರಿಗಣಿಸುವಂತೆ ಅವಕಾಶ ಕಲ್ಪಿಸಿದೆ .
ಭಾರತದಲ್ಲಿ ಸಮಾನತೆ ತರಲು ಅನೇಕ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ .
ಕಾನೂನಿನ ಮುಂದೆ ಎಲ್ಲರೂ ಸಮಾನರು ( 14 ನೇ ವಿಧಿ ) ,
ತಾರತಮ್ಯ ಮಾಡಬಾರದು ( 15 ನೇ ವಿಧಿ)
ಉದ್ಯೋಗ ಪಡೆಯುವುದರಲ್ಲಿ ಎಲ್ಲರೂ ಸಮಾನರು ( 16 ನೇ ವಿಧಿ ) ,
ಅಸೃಷ್ಯತೆ ನಿವಾರಣೆ ( 17 ನೇ ವಿಧಿ ) ,
ಬಿರುದು ಬಾವಳಿ ಸ್ವೀಕಾರದ ನಿಷೇಧ ( 18 ನೇ ವಿಧಿ ) ,
10 ) ಐಕ್ಯತೆ ಮತ್ತು ಭಾತೃತ್ವ ( Integrity & Fraternity )
ಭಾರತದಲ್ಲಿ ಅನೇಕ ಜಾತಿ , ಧರ್ಮ , ಜನಾಂಗಗಳಿದ್ದು , ಎಲ್ಲರಲ್ಲೂ ಕೂಡ ಏಕತೆ ಮತ್ತು ಸೋದರತ್ವ ಮೂಡಿಸುವ ಉದ್ದೇಶದಿಂದ ಭಾರತದ ಸಂವಿಧಾನದಲ್ಲಿ ಮತ್ತೊಂದು ಪೌರತ್ವವನ್ನು ಜಾರಿಗೆ ತರಲಾಯಿತು .
ಪ್ರತಿಯೊಬ್ಬರೂ ಸಂವಿಧಾನವನ್ನು , ಧರ್ಮವನ್ನು , ರಾಷ್ಟ್ರಗೀತೆಯನ್ನು , ಸಂಸ್ಕೃತಿಯನ್ನು ಗೌರವಿಸಬೇಕೆಂಬ ಸಂವಿಧಾನದ 4 ನೇ ಎ ಭಾಗದಲ್ಲಿ 51 ( ಎ ) ಯಿಂದ 51 ( ಕೆ ) ವರೆಗೆ ಹನ್ನೊಂದು ಮೂಲಭೂತ ಕರ್ತವ್ಯವನ್ನು ಸೇರ್ಪಡೆ ಮಾಡಿ ಜನರಲ್ಲಿ ರಾಷ್ಟ್ರದ ಬಗ್ಗೆ ಜವಾಬ್ದಾರಿ ಮೂಡಿಸುವುದರೊಂದಿಗೆ ರಾಷ್ಟ್ರದಲ್ಲಿ ಭಾವೈಕ್ಯತೆಯನ್ನು ಸಂವಿಧಾನದಲ್ಲಿ ಉಂಟು ಮಾಡಲಾಯಿತು .
ಇಂತಹ ಅಂಶಗಳನ್ನು ತಿದ್ದುಪಡಿ 1976 ರಲ್ಲಿ ಐಕ್ಯತೆ ಎಂಬ ಪದವನ್ನು ಭಾರತದ ಪ್ರಸ್ತಾವನೆಯಲ್ಲಿ 42 ನೇ ಸೇರಿಸಲಾಯಿತು .
ಪ್ರಸ್ತುತವಾಗಿ ಭಾರತ ದೇಶವು ಭಾವೈಕ್ಯತೆಯನ್ನು ಹೊಂದಿರುವುದರಿಂದ ವಿವಿಧತೆಯಲ್ಲಿ ಏಕತೆಯನ್ನು ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಕಾಣುತ್ತಿದೆ ಹಾಗೂ ಇಡೀ ಜಗತ್ತಿನಲ್ಲೇ ಶಾಂತಿಯುತ