ಬಾಲಕಾರ್ಮಿಕ ನಿಷೇಧ | child act

ಬಾಲಕಾರ್ಮಿಕ ನಿಷೇಧ

child act , ಬಾಲಕಾರ್ಮಿಕ ನಿಷೇಧ , right against exploitation , fundamental rights , fundamental rights article 12 to 35 ,

child act , ಬಾಲಕಾರ್ಮಿಕ ನಿಷೇಧ , right against exploitation , fundamental rights , fundamental rights article 12 to 35 ,

ವಿಧಿ 24 ಕಾರ್ಖಾನೆ ಮುಂತಾದಲ್ಲಿ ಮಕ್ಕಳ ನಿಯೋಜನೆಗೆ ನಿಷೇಧ ಈ ವಿಧಿ ಅನ್ವಯ 14 ವರ್ಷದ ಒಳಗಿನ ಮಕ್ಕಳನ್ನು ಆಪಾಯಕಾರಿ ಚಟುವಟಿಕೆಗಳಿಗೆ ತೊಡಗಿಸುವುದನ್ನು ನಿಷೇಧಿಸುತ್ತದೆ .

ಈ ವಿಧಿ ಅನ್ವಯ ಕಾರ್ಖಾನೆಗಳಲ್ಲಿ ಗಣಿಗಳಲ್ಲಿ , ರೈಲ್ವೆ ಕೆಲಸಗಳಲ್ಲಿ ತೊಡಗುವುದನ್ನು ನಿಷೇಧಿಸುತ್ತದೆ . ಈ ವಿಧಿಯನ್ನು ಬಲಗೊಳಿಸಲು ಸಂಸತ್ತು ಅನೇಕ ಕಾಯ್ದೆಗಳನ್ನು ಕೂಡ ಜಾರಿಗೆ ತಂದಿದೆ .

ಅಂತಹ ಕಾಯ್ದೆಗಳೆಂದರೆ ಬಾಲಕಾರ್ಮಿಕರ ನಿಷೇಧ ಕಾಯ್ದೆ 1986 ,

ಮಕ್ಕಳ ಉದ್ಯೋಗ ಕಾಯ್ದೆ 1930 ,

ಕಾರ್ಖಾನೆ ಕಾಯ್ದೆ 1948 ,

ಸಿಗರೇಟ್ ಕಾರ್ಮಿಕರ ಕಾಯ್ದೆ 1966

ಇಂತಹ ಕಾಯ್ದೆಗಳು ಮಕ್ಕಳ ಶೋಷಣೆಯನ್ನು ತಪ್ಪಿಸಲು ಕೈಗೊಂಡ ಕಾಯ್ದೆಗಳಾಗಿವೆ . ಅಲ್ಲದೆ ಮಹಿಳೆಯರ ಶೋಷಣೆಯನ್ನು ಹೋಗಲಾಡಿಸಲು ಭಾರತ ಸರ್ಕಾರವು ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದೆ .

1929 ರಲ್ಲ ಖಾರದ ಕಾಯ್ದೆಯನ್ನು ಜಾರಿಗೊಳಿಸಿ ಬಾಲ್ಯವಿವಾಹ ಕಾಯ್ದೆಯನ್ನು ಕಾನೂನು ಬಾಹಿರಗೊಳಿಸಿತು . 1956 ರಲ್ಲ ಅನೈತಿಕ ವ್ಯವಹಾರ ನಿಗ್ರಹ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿ ನಂತರ 1978 ಹಾಗೂ 1986 ರಲ್ಲಿ ತಿದ್ದುಪಡಿ ಮಾಡಿ ಅನೈತಿಕ ವ್ಯವಹಾರ ತರ ಕಾನೂನು ಎಂಬುದಾಗಿ ಘೋಷಿಸಿ ಹೆಣ್ಣು ಮಕ್ಕಳನ್ನು ವೇಶ್ಯಾವೃತ್ತಿಗೆ ಕರೆತರುವ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಅಥವಾ 7 ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತದೆ .

ಹೆಣ್ಣುಮಕ್ಕಳ ವರದಕ್ಷಿಣೆ ಪಿಡುಗನ್ನು ಹೋಗಲಾಡಿಸಲು 1961 ರಲ್ಲಿ ವರದಕ್ಷಿಣಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು ನಂತರ 1984,1986 ರಲ್ಲಿ ತಿದ್ದುಪಡಿ ಮಾಡಿತು.

ಭಾರತ ದಂಡ ಸಂಹಿತೆ 304 ಬಿ ಆನ್ವಯ ವರದಕ್ಷಿಣೆ ಸಾವು ಆಪರಾಧ ಎಂದು ಪರಿಗಣಿಸಿತು . ಈ ವಿಧಿ ಆನ್ವಯ ಕಾರಣರಾದವರಿಗೆ 7 ವರ್ಷಗಳ ಕಾಲ ಶಿಕ್ಷೆ ಜಾರಿಗೆ ತಂದಿತು .

ಮಹಿಳೆಯರ ಶೋಷಣೆಯನ್ನು ತಪ್ಪಿಸುವ ಸಲುವಾಗಿ 1990 ರಲ್ಲಿ ಮಹಿಳಾ ಕಾಯ್ದೆಯನ್ನು ಜಾರಿಗೆ ತಂದು , ರಾಷ್ಟ್ರೀಯ ಮಹಿಳಾ ಆಯೋಗವನ್ನು 1992 ರಲ್ಲ ಮೊದಲ ಮಹಿಳಾ ಆಯೋಗವನ್ನು ಒಡಿಸ್ಸಾದ ಜಯಂತಿ ಪಟ್ನಾಯಕ್ ಅಧ್ಯಕ್ಷತೆಯಲ್ಲಿ ನೇಮಿಸಲಾಯಿತು .

ಬಾಲ ಕಾರ್ಮಿಕ ತಿದ್ದುಪಡಿ ಮಸೂದೆ – ಸಂಸತ್‌ನಲ್ಲಿ ಮಂಡನೆ

1986 ಬಾಲ ಕಾರ್ಮಿಕ ನಿಷೇಧ ಕಾಯಿದೆಗೆ ತಿದ್ದುಪಡಿ ಮಾಡುವ ಮಸೂದೆಯಾದ ( ಭಾರತದ ಬಾಲ ಕರ್ಮಿಕ ನಿಷೇಧ ಮತ್ತು ನಿಯಂತ್ರಣ ) ತಿದ್ದುಪಡಿ ಮಸೂದೆಗೆ 2016 ರ ಜುಲೈ 20 ರಂದು ಈ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿದೆ ,

ಈ ಮಸೂದೆಯನ್ವಯ ಕುಟುಂಬ ಉದ್ಯೋಗದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಿದೆ . ಈ ತಿದ್ದುಪಡಿ ಮಸೂದೆಗೆ ವಿಶ್ವಸಂಸ್ಥೆಯ ಮಕ್ಕಳ ನಿಧಿ ( ಯುನಿಸೆಫ್ ) ಹಾಗೂ ನೊಬೆಲ್ ಶಾಂತಿ ಪುರಸ್ಕೃತ ಭಾರತದ ಮಕ್ಕಳನ್ನು ಬಳಸಿಕೊಳ್ಳಲು ಅವಕಾಶ ಕೈಲಾಶ್ ಸತ್ಯಾರ್ಥಿ ಆತಂಕ ವ್ಯಕ್ತಪಡಿಸಿದ್ದಾರೆ .ಈ ತಿದ್ದುಪಡಿಯಲ್ಲಿ ಕುಟುಂಬ ಉದ್ಯಮದಲ್ಲಿ 14 ವರ್ಷದೊಳಗಿನ ಕಲ್ಪಿಸಿದೆ . ಈ ಮಸೂದೆಯಿ ೦ ದ ಈ ಅಂಶವನ್ನು ತೆಗೆಯಬೇಕೆಂದು ಯುನಿಸೆಫ್ ಒತ್ತಾಯಿಸಿದೆ . ನೂತನ ಕಾಯಿದೆ ಜಾರಿಗೆ ಬ ೦ ದರೆ ಬಾಲ ಕಾರ್ಮಿಕ ಪದ್ಧತಿಯ ವಿವಿಧ ರೂಪಗಳನ್ನು ಮರೆ ಮಾಚುವ ಅಪಾಯವಿದೆ ಎಂದು ಕಳವಳ ವ್ಯಕ್ತವಾಗಿದೆ . ಕುಟುಂಬ ಉದ್ಯಮಗಳಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದರೆ ಅಪಾಯಕಾರಿ ಉದ್ಯಮಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವ ಅಪಾಯವಿದೆ , ಅತ್ಯಂತ ದುರ್ಬಲ ಹಾಗೂ ಅಂಚೆಗೆ ದೂಡಲ್ಪಟ್ಟ ಮಕ್ಕಳ ಶಾಲಾ ಹಾಜರಾತಿ ಮಟ್ಟ ಮತ್ತು ಕಲಿಕಾ ಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತವಾಗಿದೆ .

ಭಾರತದಲ್ಲಿ ಬಾಲ ಕಾರ್ಮಿಕತೆಗೆ ಸಂಬಂಧಿಸಿದಂತೆ ಕಾಯ್ದೆಗಳು : –

ಸಂವಿಧಾನದ 24 ನೇ ವಿಧಿಯಲ್ಲಿ “ 14 ವರ್ಷದೊಳಗಿನ ವಯೋಮಿತಿಯ ಮಕ್ಕಳನ್ನು ಗಣಿ , ಕಾರ್ಖಾನೆ ಮತ್ತಿತ್ತರ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಿದೆ . ಈ ಮೂಲಕ ಶೋಷಣೆ ವಿರುದ್ಧ ಮಕ್ಕಳನ್ನು ರಕ್ಷಿಸಿದೆ .

ಬಾಲ ಕಾರ್ಮಿಕ ನಿಷೇಧಿಸುವ ಕಾಯ್ದೆಗಳು :

1 ) ಕಾರ್ಖಾನೆಗಳ ಕಾಯಿದೆ – 1948

2 ) ಗಣಿ ಕಾಯಿದ – 1952

3 ) ಮಗು ಮತ್ತು ತಾರುಣ್ಯ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ – 1986

4 ) ಬಾಲ ನ್ಯಾಯಾಲಯ ( ರಕ್ಷಣೆ ಮತ್ತು ಪೋಷಣೆ ) ಮಕ್ಕಳ ಕಾಯಿದೆ – 2000

5 ) ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ –

2009 ( 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ . ಶೇ 25 ರಷ್ಟು ಸೀಟುಗಳನ್ನು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಒದಗಿಸುವಂತೆ ಕಡ್ಡಾಯಗೊಳಿಸಬೇಕು . ) 1987 ರಲ್ಲಿ ಬಾಲ ಕಾರ್ಮಿಕರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಯಿತು .

 ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ-

ಇದನ್ನು 2007 ಮಾರ್ಚ್‌ನಲ್ಲಿ ಮಕ್ಕಳ ಹಕ್ಕುಗಳ ಆಯೋಗ ಕಾಯ್ದೆ -2005 ರ ಆನ್ವಯ ಸ್ಥಾಪಿಸಲಾಯಿತು . ಈ ಆಯೋಗವು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದಾಗಿದೆ . ಇದನ್ನು ಸಂಸತ್ತಿನಲ್ಲಿ ಕಾಯ್ದೆ ಮೂಲಕ ಸ್ಥಾಪಿಸಲಾಯಿತು .

ಶೋಷಣೆಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಕ್ಕುಗಳು :

ಕನಿಷ್ಠ ಕೂಲಿ ಕಾಯ್ದೆ – 1948 ,

ಕೌಟುಂಬಿಕ ದೌರ್ಜನ್ಯ ಕಾಯ್ದೆ – 2005 ,

ಜೀತ ನಿರ್ಮೂಲನ ಕಾಯ್ದೆ – 1976 ,

ವರದಕ್ಷಿಣೆ ನಿಷೇಧ ಕಾಯ್ದೆ – 1961 ,

ಸತಿ ನಿಷೇಧ ಕಾಯ್ದೆ – 1987 ,

ಆನೈತಿಕ ವ್ಯವಹಾರ ಕಾಯ್ದೆ – 1956 ,

ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ – 1993

Comments

Leave a Reply

Your email address will not be published. Required fields are marked *