ಪ್ರೀತಿಯೆಂಬ ಚುಂಬಕ | short story in kannada

ಪ್ರೀತಿಯೆಂಬ ಚುಂಬಕ

short story in kannada , short story , love story in kannada , the tell tale heart , moral stories , small story , best short stories

short story in kannada , short story , love story in kannada , the tell tale heart , moral stories , small story , best short stories

ಭಾಗ – 1

ಪ್ರೀತಿಯು ನನ್ನ ಜೀವನದಲ್ಲಿ ಯಾವತ್ತೂ ನಿಲುವಿಗೆ ಸಿಕ್ಕದಂತಹ ಒಂದು ಸಂಗತಿಯಾಗಿ ಉಳಿದುಕೊಂಡಿದೆ .

ಇಷ್ಟಾದರೂ ಈ ಪ್ರೀತಿಯ ಹುಡುಕಾಟವು ನನಗೆ ಎಂದಿಗೂ ದಣಿವನ್ನೇನೂ ಹುಟ್ಟಿಸಿಲ್ಲ .

ನನ್ನ ಇದುವರೆಗಿನ ಜೀವನದಲ್ಲಿ ನಾನು ಹತ್ತಾರು ಮಂದಿಯನ್ನು ಪ್ರೀತಿಸಿದ್ದೇನೆ .

ಇವುಗಳ ನೆನಪು ಒತ್ತರಿಸಿಕೊಂಡು ಬರತೊಡಗಿದಂತೆ ನನ್ನಲ್ಲಿ ಒಂದು ದೀರ್ಘವಾದ , ಹೃದಯವನ್ನು ನೋವಿನಿಂದ ಇರಿಯುವಂತಹ ನಿಟ್ಟುಸಿರು ಬರುತ್ತದೆ .

ನಾನು ಇಟ್ಟುಕೊಂಡಿದ್ದ ಇಂತಹ ಒಂದೊಂದು ಸಂಬಂಧವೂ ನನಗೆ ಅತೀವ ಯಾತನೆಯನ್ನು ನೀಡಿವೆ .

ಎಷ್ಟೋ ಸಲ , ಇದರಿಂದ ನನ್ನ ಹೃದಯ ಭಗ್ನವಾಗಿದೆ .

ಈ ಸಂಬಂಧಗಳು ನನಗೆ ಹೊಸಹೊಸ ಸತ್ಯಗಳನ್ನು ಮನದಟ್ಟು ಮಾಡಿಸಿದ್ದು , ಇದರಿಂದಾಗಿ ನಾನು ಪ್ರತೀಸಲವೂ ಒಂದಿಷ್ಟು ಪ್ರಬುದ್ಧತೆಯನ್ನೂ ವಿಶ್ವಾಸವನ್ನೂ ಗಳಿಸಿಕೊಂಡಿದ್ದೇನೆ .

ಇವೆಲ್ಲದರಿಂದಾಗಿ ನನಗೀಗ ಒಂದು ಅಂತಿಮಸತ್ಯ ಅರಿವಾಗಿದೆ .

ಬದುಕಿಗೆ ಕೊನೆಯಿರು ವಂತೆಯೇ ಈ ಸಂಬಂಧಗಳಿಗೂ ಒಂದು ಕೊನೆ ಇದ್ದೇ ಇದೆ !

ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ನಾವು ಬದುಕಿನಲ್ಲಿ ಮುಂದಕ್ಕೆ ಹೋಗುತ್ತಿರಬೇಕು .

ಇದೇನೋ ನಿಜ . ಆದರೆ , ಒಂಬತ್ತನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ನನಗೆ ಇದೆಲ್ಲ ಅರ್ಥವಾಗುತ್ತಿರಲಿಲ್ಲ ; ನಾನಿನ್ನೂ ಆಗ ಹದಿನಾಲ್ಕರ ಪ್ರಾಯದ ಹುಡುಗನಾಗಿದ್ದೆನಷ್ಟೆ .

ಓದುತ್ತಿದ್ದಾಗ ನನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನನ್ನ ಈ ಮಾತು ಸತ್ಯ .

ಏಕೆಂದರೆ , ನಾನು ಒಂಬತ್ತನೇ ಕ್ಲಾಸಿನಲ್ಲಿ ಪ್ರಣಯಸಂಬಂಧದಲ್ಲಿ ಮುಳುಗಿದೆ .

ಒಂಬತ್ತನೇ ಕ್ಲಾಸಿಗೆ ಬಂದ ಶುರುವಿನಲ್ಲಿ ಮಿಕ್ಕ ಹುಡುಗರಂತೆಯೇ ಇದ್ದೆನೆನ್ನುವುದು ಸುಳ್ಳಲ್ಲ .

ಆದರೆ , ಕೆಲವೇ ದಿನಗಳಲ್ಲಿ ನನ್ನ ಇಬ್ಬರು ಸೋದರಸಂಬಂಧಿಗಳು ನಾನು ಓದುತ್ತಿದ್ದ ಶಾಲೆಯಲ್ಲಿ ನನ್ನ ತರಗತಿಯ ಭಾಗವಾದರು .

ಇದಾದ ಕೂಡಲೇ ನನ್ನ ಜೀವನದಲ್ಲಿ ಬದಲಾವಣೆಯ ಸುಂಟರಗಾಳಿ ಬೀಸತೊಡಗಿತು ! ಅಷ್ಟು ಹೊತ್ತಿಗಾಗಲೇ ನಾನು ನಮ್ಮ ತರಗತಿಯ ‘ ಚೆಲುವೆ’ಯಾಗಿದ್ದೆ .

ಆಗ ಜಗತ್ತೆಲ್ಲ ನಾನು ಗಂಡೋ , ಹೆಣ್ಣೂ ಎಂದು ಚರ್ಚಿಸುತ್ತಿದ್ದರೆ ,

ನನ್ನ ತರಗತಿಯಲ್ಲಿದ್ದ ಹುಡುಗರು ಮಾತ್ರ ನನ್ನನ್ನು ಆಗತಾನೇ ಮೈನರೆದಿರುವ ಹುಡುಗಿಯೆಂದೇ ಭಾವಿಸಿಕೊಂಡು ,

ನನ್ನೊಂದಿಗೆ ಹಾಗೆಯೇ ನಡೆದುಕೊಳ್ಳುತ್ತಿದ್ದರು . ಇದರಿಂದ ನನಗೂ ತುಂಬಾ ತೃಪ್ತಿ ಸಿಕ್ಕುತ್ತಿತ್ತು .

ಅಲ್ಲದೆ , ಹುಡುಗರು ನನ್ನೊಂದಿಗೆ ಪ್ರಣಯಚೇಷ್ಟೆಗಳನ್ನು ಮಾಡುತ್ತ , ನನ್ನ ಗಮನ ಸೆಳೆಯಲು ನಾನಾ ಬಗೆಯ ಕಸರತ್ತುಗಳನ್ನು ಪ್ರದರ್ಶಿಸುತ್ತ ಸದಾ ನನ್ನನ್ನು ರಕ್ಷಿಸಲು ಹಾತೊರೆಯುತ್ತಿದ್ದರು .

ಇದೆಲ್ಲ ಹೀಗೆ ನಡೆಯುತ್ತಿರುವಾಗಲೇ ನನ್ನ ಇಬ್ಬರು ಸೋದರಸಂಬಂಧಿಗಳು ಇದೇ ತರಗತಿಗೆ ಬಂದಿದ್ದು , ಅಲ್ಲಿಯ ವಾತಾವರಣವನ್ನೇ ಬದಲಿಸಿ ಬಿಟ್ಟಿತು . ಹಾಗೆ ನೋಡಿದರೆ , ಇವರಿಬ್ಬರೂ ನಮ್ಮ ಶಾಲೆಗೆ ಹೊಸಬರಾಗಿದ್ದರು .

ಆದರೂ ಇವರಿಬ್ಬರು ತಮ್ಮತಮ್ಮದೇ ಆದ ವಿಧಾನಗಳಲ್ಲಿ ನನ್ನನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸತೊಡಗಿದರು .

ನಮ್ಮ ಆ ಶಾಲೆಯಲ್ಲಿ ಬುದ್ಧಿವಂತ ಹುಡುಗರನ್ನು ಒಂದು ಗುಂಪಾಗಿ ಮಾಡಿ , ಅವರ ಓದು – ಬರಹಕ್ಕೆ ಒತ್ತು ಕೊಡುತ್ತಿದ್ದರು .

ಹೀಗೆ ನಾನಿದ್ದ ಗುಂಪಿನಲ್ಲೇ ಈ ಸೋದರಸಂಬಂಧಿಗಳೂ ಇದ್ದರು . ಇವರಿಬ್ಬರೂ ನಮ್ಮ ಶಾಲೆಗೆ ಸೇರಿಕೊಂಡ ಕೂಡಲೇ ನನಗೆ ಆತ್ಮೀಯರಾಗಿದ್ದನ್ನು ಕಂಡು ಉಳಿದ ಹುಡುಗರಿಗೆಲ್ಲ ಹೊಟ್ಟೆ ಉರಿಯತೊಡಗಿತು .

ಒಟ್ಟಿನಲ್ಲಿ ತರಗತಿಯಲ್ಲಿದ್ದ ಹುಡುಗರ ನಡುವೆಯೇ ನನ್ನ ಕೈಯನ್ನು ಹಿಡಿದುಕೊಳ್ಳಲು

ತಾವು ಮನೆಯಿಂದ ತಂದಿರುತ್ತಿದ್ದ ತಿಂಡಿತೀರ್ಥಗಳನ್ನು ಹಂಚಿಕೊಳ್ಳಲು ಮತ್ತು ತಮ್ಮ ಗುಟ್ಟುಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಸದಾ ಒಂದು ಬಗೆಯ ಜಿದ್ದು ನಡೆಯುತ್ತಿತ್ತು .

ಈ ಸೋದರಸಂಬಂಧಿಗಳು ನಮ್ಮ ಶಾಲೆಗೆ ಸೇರಿಕೊಳ್ಳುವವರೆಗೂ ನಾನು ಕೂಡ ಹುಡುಗರೆಲ್ಲ ಹೀಗೆ ಆಡುವುದನ್ನು ನೋಡಿ ಖುಷಿಪಡುತ್ತಿದ್ದೆ .

ಜೊತೆಗೆ , ಹರೆಯಕ್ಕೆ ಬಂದ ಯಾವುದೇ ಒಬ್ಬ ಹೆಣ್ಣುಮಗಳು ಹುಡುಗರನ್ನು ಸೆಳೆಯಲು ತನ್ನ ಬಿಂಕಬಿನ್ನಾಣಗಳನ್ನು ಬಳಸಿಕೊಳ್ಳುವಂತೆ ನಾನೂ ಆಗ ವಯ್ಯಾರದಿಂದ ನಡೆದುಕೊಳ್ಳುತ್ತಿದ್ದೆ .

ಒಟ್ಟಿನಲ್ಲಿ , ಇಡೀ ತರಗತಿಯ ಪಾಲಿಗೆ ನಾನು ಚೆಂದುಳ್ಳಿ ಚೆಲುವೆಯಾಗಿದ್ದನ್ನು ಮನಸಾರೆ ಅನುಭವಿಸಿದೆ .

ನನ್ನ ಸೋದರಸಂಬಂಧಿಗಳಿಬ್ಬರೂ ನೋಡಲು ಸುಂದರಾಂಗ ರಾಗಿದ್ದರು . ಆದರೆ , ಇವರಿಬ್ಬರೂ ಸ್ವಭಾವ ಮತ್ತು ರೂಪಗಳಲ್ಲಿ ಒಬ್ಬರಂತೆ ಇನ್ನೊಬ್ಬರಿರಲಿಲ್ಲ .

ಇವೆಲ್ಲ ಆಗಿಹೋಗಿ ಈಗಾಗಲೇ ನಲವತ್ತು ವರ್ಷಗಳೇ ಉರುಳಿ ಹೋಗಿದ್ದು , ಅವರಿಬ್ಬರೂ ಸಮಾಜದಲ್ಲಿ ಈಗ ಸಂಭಾವಿತರೆನಿಸಿಕೊಂಡಿದ್ದಾರೆ . ಹೀಗಾಗಿ ನಾನು ಇಲ್ಲಿ ಅವರ ಹೆಸರುಗಳನ್ನು ಬದಲಿಸಿದ್ದೇನೆ .

ಏಕೆಂದರೆ , ನನ್ನಿಂದಾಗಿ ಅವರು ಮುಜುಗರಕ್ಕೊಳಗಾಗುವುದು ನನಗಿಷ್ಟವಿಲ್ಲ .

ಒಂದು ವೇಳೆ ನಾನು ನಿಜವನ್ನು ಹೇಳಿದರೆ , ಒಬ್ಬ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಸಮಾಜವು ಅವರನ್ನು ಛೀ ಥ ಎನ್ನುವುದಿಲ್ಲವೇ ?

ಇವರಿಬ್ಬರೂ ಈಗ ಎಲ್ಲರಂತೆಯೇ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ ಈಗ ಪುನಃ ನನ್ನ ಕತೆಗೆ ಹೋಗೋಣ .

ನಮ್ಮ ಸೋದರಸಂಬಂಧಿಗಳ ಪೈಕಿ ಒಬ್ಬ ನೋಡಲು ಸ್ವಲ್ಪ ಗಾಢ ಬಣ್ಣದವನಾಗಿದ್ದ . ನಾನು ಅವನನ್ನು ಇನ್ನುಮುಂದೆ ಶಾಮ ಎನ್ನುತ್ತೇನೆ . ಇನ್ನೊಬ್ಬ ನೋಡಲು ಒಳ್ಳೆಯ ಮೈಬಣ್ಣದವನಾಗಿದ್ದ .

ಹೀಗಾಗಿ ಅವನನ್ನು ನಾನು ಶ್ವೇತ್ ಎಂದು ಕರೆಯುತ್ತೇನೆ . ನಮ್ಮ ತರಗತಿಗೆ ಸೇರಿಕೊಂಡ ಶಾಮ ಮತ್ತು ಶ್ವೇತ್ ಇಬ್ಬರೂ ನೇರವಾಗಿ ನನ್ನೆಡೆಗೆ ಬಂದರು .

ಇದುವರೆಗೂ ನಮ್ಮದೇ ಶಾಲೆಯಲ್ಲಿ ಇನ್ನೊಂದು ಸೆಕ್ಷನ್‌ನಲ್ಲಿದ್ದ ಇವರಿಬ್ಬರೂ ನಮ್ಮ ತರಗತಿಯ ಬಳಿಗೆ ಆಗಾಗ್ಗೆ ಬಂದು ಠಳಾಯಿಸುತ್ತ ,

ನನ್ನ ಮೇಲೆ ಕಣ್ಣು ಹಾಕುತ್ತ , ಬೇರೆ ಹುಡುಗರು ತರಗತಿಯಲ್ಲಿ ನನ್ನೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆನ್ನುವುದನ್ನು ಗಮನಿಸುತ್ತಿದ್ದರಷ್ಟೆ .

ಆದರೆ , ಇವರಿಬ್ಬರೂ ನಮ್ಮ ಸೆಕ್ಷನ್ನಿಗೇ ಬಂದಮೇಲೆ ತಕ್ಷಣವೇ ನನ್ನ ಹತ್ತಿರಕ್ಕೆ ನುಗ್ಗಿ ಬಂದರು .

ಇವರಿಬ್ಬರ ಪೈಕಿ ಶ್ವೇತ್ , ನನ್ನ ಪಕ್ಕದಲ್ಲಿದ್ದ ಜಾಗವನ್ನು ಹಿಡಿದುಕೊಂಡ . ಇದಕ್ಕೆ ಅಡ್ಡಬಂದ ಯಾರ ಮಾತನ್ನೂ ಅವನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ .

ಹೀಗಾಗಿ ಉಳಿದ ಹುಡುಗರೆಲ್ಲ ಇವನ ಮುಂದೆ ತೆಪ್ಪಗಾಗಬೇಕಾಯಿತು .

ಒಟ್ಟಿನಲ್ಲಿ , ಶ್ವೇತ್ ನನ್ನ ಪಕ್ಕದ ಜಾಗವನ್ನು ಭದ್ರವಾಗಿ ಹಿಡಿದುಕೊಂಡ .

ಹೀಗೆ ಬಂದವನೇ ಒಂದಿಷ್ಟೂ ತಡ ಮಾಡದೆ , ನನ್ನ ಬಗ್ಗೆ ಅವನಲ್ಲಿದ್ದ ಪ್ರೀತಿಯನ್ನು ಯಾವುದೇ ಮುಚ್ಚುಮರೆಯಿಲ್ಲದ ಘೋಷಿಸಿದ .

ಈತ ಕೆಲವೊಮ್ಮೆ ನನ್ನನ್ನು ತನ್ನ ‘ ಗರ್ಲ್ ಫ್ರೆಂಡ್ ‘ ಎಂದು ಕರೆಯುತ್ತಿದ್ದರೆ , ಉಳಿದಂತೆ ನನ್ನನ್ನು ತನ್ನ ಹೆಂಡತಿ ‘ ಎಂದು ಕರೆಯುತ್ತಿದ್ದ .

ಇವನು ತರಗತಿಯಲ್ಲಿ ಪ್ರತಿದಿನವೂ ಉಳಿದ ಹುಡುಗರೆಲ್ಲರ ಎದುರು ನನಗೆ ಮುತ್ತು ಕೊಡುತ್ತಿದ್ದ .

ಅಲ್ಲದೆ , ನನ್ನನ್ನು ಅವನ ತೋಳತೆಕ್ಕೆಯಲ್ಲಿ ಹಿಡಿದುಕೊಂಡು , ‘ ಏಯ್ , ಉಳಿದಿದ್ದೆಲ್ಲ ನಾವಿಬ್ಬರೇ ಮಾಡುವಂಥದ್ದು ‘ ಎಂದು ಉಲಿಯುತ್ತಿದ್ದ .

ಮೊದಮೊದಲೆಲ್ಲ ಇದು ನನಗೆ ಇಷ್ಟವಾಗುತ್ತಿದ್ದರೂ ಆಮೇಲಾಮೇಲೆ ಕಿರಿಕಿರಿಯಾಗತೊಡಗಿತು .

ಶ್ವೇಶ್ ನನ್ನನ್ನು ಅಗಾಧವಾಗಿ ಪ್ರೀತಿಸುತ್ತಿದ್ದಾನೆ ಎನ್ನುವುದು ಗೊತ್ತಿತ್ತು , ಆದರೂ ಅದನ್ನು ಹೀಗೆ ರಾಜಾರೋಷವಾಗಿ ಪ್ರದರ್ಶಿಸುವುದು ನನಗೆ ಇಷ್ಟವಾಗುತ್ತಿರಲಿಲ್ಲ .

ಇದನ್ನು ನಾನು ಅವನಿಗೂ ಹೇಳಿ ನೋಡಿದೆ . ಆದರೆ , ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವನಿರಲಿಲ್ಲ .

ಅವನ ಸ್ವಭಾವವೇ ಹಾಗೆ , ತನಗನಿಸಿದ್ದನ್ನು ಅವನು ಯಾವುದೇ ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸುತ್ತ , ಉತ್ಸಾಹದಿಂದ ಕುಣಿಯುತ್ತಿದ್ದ . ಅವನ ನಗುವಿಗೆ ಎಲ್ಲರನ್ನೂ ಸೆಳೆಯುವಂತಹ ಶಕ್ತಿ ಇತ್ತು .

ಅವನ ಪ್ರೀತಿಗೂ ಅಷ್ಟೆ ; ಅದೇನೂ ಕಮ್ಮಿ ಇರಲಿಲ್ಲ . ಇಂತಹ ಶ್ವೇತ್ ಇಡೀ ತರಗತಿಯ ಪಾಲಿಗೆ ಅಚ್ಚುಮೆಚ್ಚಿನವನಾಗಿದ್ದ ಎನ್ನುವುದನ್ನೇನೂ ಬಿಡಿಸಿ ಹೇಳಬೇಕಾಗಿಲ್ಲ .

ನನ್ನ ಇನ್ನೊಬ್ಬ ಸೋದರಸಂಬಂಧಿ ಶಾಮ್ , ಇದಕ್ಕೆ ತದ್ವಿರುದ್ಧವಾಗಿದ್ದ .

ಅವನು ತರಗತಿಯಲ್ಲಿ ಒಂದು ಮೂಲೆಯ ಜಾಗವನ್ನು ಹಿಡಿದುಕೊಂಡ . ನಾನು ಕೂರುತ್ತಿದ್ದ ಜಾಗಕ್ಕೂ ಇದಕ್ಕೂ ದೂರವಿದ್ದರೂ ಅವನು ಅಲ್ಲಿಂದಲೇ ನನ್ನ ಮೇಲೆ ಮೋಹದ ಬಲೆ ಬೀಸಿದ .

ಅವನ ಪ್ರೀತಿಗೆ ಅಯಸ್ಕಾಂತದಂತಹ ಶಕ್ತಿಯಿತ್ತು ! ಅವನು ಸದಾ ನನ್ನ ಹಿಂದೆಯೇ ಇದ್ದು , ಅವನ ಕಣ್ಣುಗಳು ಆಸೆಯಿಂದ ಜ್ವಲಿಸುತ್ತಿವೆ ಎನ್ನುವ ಭಾವನೆ ನನಗೆ ಬರುತ್ತಿತ್ತು .

ನಾನಂತೂ ಅವನ ಈ ನೋಟಕ್ಕಾಗಿ ಹಾತೊರೆಯುತ್ತಿದ್ದೆ . ಅವನ ಆ ಕಣೋಟವು ನನ್ನನ್ನು ಬಂಧಿಸಿ ಬಿಡುತ್ತಿತ್ತಲ್ಲದೆ , ನಾನು ಲಜ್ಜೆಯಿಂದ ಕೆಂಪೇರುವಂತೆ ಮಾಡುತ್ತಿತ್ತು .

ಆ ಕ್ಷಣಗಳಲ್ಲಿ ನಾನು ನಾಚಿ ನೀರಾಗಿ , ಅವನ ಕಣೋಟದಿಂದ ತಪ್ಪಿಸಿಕೊಳ್ಳಲು ದೂರ ಎಲ್ಲೋ ನೋಡಲು ಶುರು ಮಾಡುತ್ತಿದ್ದೆ .

ಅವನು ತರಗತಿಯ ಇನ್ನೊಂದು ಮೂಲೆಯಲ್ಲೇ ಇದ್ದರೂ ನನ್ನ ತುಟಿಗಳನ್ನೇ ನೋಡುತ್ತ , ಅವುಗಳನ್ನು ಚುಂಬಿಸಲು ಹಂಬಲಿಸುತ್ತಿದ್ದ .

ನನಗೂ ಮತ್ತೇರಿದಂತಾಗಿ , ಅವನ ಬಳಿಗೆ ಓಡಿ ಹೋಗಿ , ಅವನ ತೋಳತೆಕ್ಕೆಯಲ್ಲಿ ಒಂದಾಗಿ ಬಿಡಲು ಚಡಪಡಿಸುತ್ತಿದ್ದೆ .

ಶಾಮ್ ಮಾಡುತ್ತಿದ್ದ ಪ್ರತಿಯೊಂದು ಕೆಲಸದಲ್ಲೂ ಏನೋ ಮಾಂತ್ರಿಕತೆ ಇರುವಂತೆ ನನಗೆ ಭಾಸವಾಗುತ್ತಿತ್ತು .

ಇವನು ತನ್ನ ಭಾವನೆಗಳನ್ನು ಎಲ್ಲರ ಎದುರೂ ಪ್ರದರ್ಶಿಸಿಕೊಳ್ಳುತ್ತಿರಲಿಲ್ಲ .

ಆದರೆ , ತನ್ನ ಪ್ರೇಯಸಿಯ ಬಗ್ಗೆ ತನಗಿರುವ ಭಾವನೆಗಳನ್ನು ಹೇಗೆ ನಾಜೂಕಾಗಿ ವ್ಯಕ್ತಪಡಿಸಬೇಕೆನ್ನುವುದು ಇವನಿಗೆ ಕರಗತವಾಗಿತ್ತು .

ಇವನಿಂದಾಗಿ ನನಗೆ ಮೊಟ್ಟಮೊದಲ ಬಾರಿಗೆ ‘ ನಾನೊಂದು ಹೆಣ್ಣು ‘ ಎನಿಸತೊಡಗಿತು .

ನನಗೆ ದೈಹಿಕವಾಗಿ ಹೆಣ್ಣಿನ ಆಕಾರವಾಗಲಿ , ಹೆಣ್ಣಿನ ಸಂಕೇತವಾದ ಮೊಲೆಗಳಾಗಲಿ ಅಥವಾ ಯೋನಿಯಾಗಲಿ ಇಲ್ಲದಿದ್ದರೂ ಶಾಮನ ಎದುರು ನನಗೆ ಅವೇನೂ ಜ್ಞಾಪಕಕ್ಕೆ ಬರುತ್ತಿರಲಿಲ್ಲ .

ಬದಲಿಗೆ , ಅವನ ಚಿತ್ರ ಕಣ್ಮುಂದೆ ಬಂದರೆ ಸಾಕು , ನನ್ನಲ್ಲಿ ‘

ನಾನೊಬ್ಬ ಪರಿಪೂರ್ಣ ಹೆಣ್ಣು ‘ ಎನಿಸುತ್ತಿತ್ತು .

ನಿಜಕ್ಕೂ ಅದೊಂದು ತೀವ್ರ ಸ್ವರೂಪದ ಭಾವನೆಯಾಗಿದ್ದು ,

ನನ್ನಲ್ಲಿ ದೈಹಿಕ ಭೋಗಾಪೇಕ್ಷೆಯು ಜಾಗೃತಗೊಳ್ಳುತ್ತಿತ್ತು .

ಒಟ್ಟಿನಲ್ಲಿ , ಅದೇ ಮೊದಲ ಬಾರಿಗೆ ನಾನು ಪ್ರತಿಯೊಂದು ಘಳಿಗೆಯನ್ನೂ ಉತ್ಕಟವಾಗಿ ಅನುಭವಿಸತೊಡಗಿದೆ .

ಆ ದಿನಗಳಲ್ಲಿ ನನ್ನ ಪಾಲಿನ ರಾತ್ರಿಗಳೇನೂ ನೆಮ್ಮದಿಯಿಂದ ಇರಲಿಲ್ಲ .

ಬದಲಿಗೆ , ನನ್ನಲ್ಲಿ ಒಂದು ಬಗೆಯ ರೋಮಾಂಚನ ಕಾಣಿಸಿಕೊಂಡು ,

ನನ್ನ ಪ್ರಿಯತಮನು ನನ್ನ ಎದೆಯ ಮೇಲೆ ಬಂದು ,

ನನ್ನ ತುಟಿಗೆ ಅವನ ತುಟಿಯನ್ನೊತ್ತಿ ಅದರ ಮೇಲೆ ತನ್ನ ಬೆಚ್ಚನೆಯ ಉಸಿರು ಬಿಡುವುದನ್ನು ಕಲ್ಪಿಸಿಕೊಳ್ಳುತ್ತಿದ್ದೆ .

ಆ ದಿನಗಳಲ್ಲಿ ನಾನು ಲೈಂಗಿಕವಾಗಿ ತುಂಬಾ ಸಕ್ರಿಯನಾಗಿದ್ದೆ ,

ಈ ವಿಷಯದಲ್ಲಿ ನಾನು ಶಾಮನಿಗಿಂತ ಹೆಚ್ಚು ಅನುಭವಸ್ಥನಾಗಿದ್ದೆ .

ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ನನ್ನೊಂದಿಗೆ ರತಿಕ್ರೀಡೆಯಲ್ಲಿ ತೊಡಗುತ್ತಿದ್ದ ನನ್ನ ಇನ್ನೊಬ್ಬ ಸೋದರಸಂಬಂಧಿ ಇದಕ್ಕೆ ಕಾರಣನಾಗಿದ್ದ .

ಅದು ಈಗಲೂ ಅಬಾಧಿತವಾಗಿ ಮುಂದುವರಿದಿತ್ತು .

ನಿಜ ಹೇಳಬೇಕೆಂದರೆ , ಅದೊಂದು ಮೃಗೀಯವಾದ ಕಾಮುಕತೆಯಾಗಿತ್ತು . ಆದರೆ , ನಾನು ಒಂಬತ್ತನೇ ಕ್ಲಾಸಿಗೆ ಬರುವ ಹೊತ್ತಿಗೆ ಅದಕ್ಕೆ ಒಗ್ಗಿಕೊಂಡು ಬಿಟ್ಟಿದ್ದೆ .

ಇದೆಲ್ಲ ನನಗೆ ಹಿಡಿಸುತ್ತಿರಲಿಲ್ಲ ಎಂದೇನಾದರೂ ನಾನು ಹೇಳಿದರೆ , ಅದು ಸುಳ್ಳಾಗುತ್ತದಷ್ಟೆ .

ನನ್ನ ಮತ್ತು ಶಾಮನ ನಡುವೆ ಹುಟ್ಟಿಕೊಂಡಿದ್ದ ಪ್ರೀತಿಯು ಎಲ್ಲ ದೃಷ್ಟಿಯಿಂದಲೂ ತುಂಬಾ ರೊಮ್ಯಾಂಟಿಕ್ ಆಗಿತ್ತು .

ಅವನು ನನ್ನ ಕೈಹಿಡಿದುಕೊಂಡರೆ ಸಾಕು , ಕೂಡಲೇ ನನ್ನ ಎದೆಬಡಿತ ಹೆಚ್ಚಾಗಿ ಮೈಯೆಲ್ಲ ನವಿರೇಳುತ್ತಿತ್ತು .

ದಿನವಿಡೀ ಅವನ ಬಗ್ಗೆಯೇ ಹಗಲುಗನಸು ಕಾಣುತ್ತ , ತರಗತಿಯಲ್ಲಿ ಹೇಗಾದರೂ ಸರಿ ಶಾಮನಿಗೆ ಹತ್ತಿರವಾಗುವುದು ಹೇಗೆಂದು ಯೋಚಿಸುತ್ತಿದ್ದೆ .

ಸುಸಂಸ್ಕೃತ ಮನೆತನದವನಾಗಿದ್ದ ಅವನಂತೂ ಸದಾ ಪ್ರೇಮಗೀತೆಗಳನ್ನು ಗುನುಗುತ್ತ ,

ರವೀಂದ್ರನಾಥ ಟ್ಯಾಗೋರರ ಪದ್ಯಗಳನ್ನು ಸಂದರ್ಭಕ್ಕೆ ಸರಿಯಾಗಿ ಹಾಡುತ್ತಿದ್ದ .

ಅವನು ಹೀಗೆ ಮಾಡಿದಾಗಲೆಲ್ಲ ನಾನು ಅವನನ್ನೇ ಕಣ್ಣರಳಿಸಿ ನೋಡುತ್ತ , ಅವನ ಪ್ರೀತಿಯಲ್ಲಿ ಮತ್ತಷ್ಟು ಮಗದಷ್ಟು ಮುಳುಗಿ ಹೋಗುತ್ತಿದ್ದೆ .

ನನ್ನನ್ನು ಹೀಗೆ ಅಗಾಧವಾಗಿ ಪ್ರೀತಿಸುತ್ತಿದ್ದ ಶಾಮನ ತಾಯಿ ವೃತ್ತಿಯಿಂದ ಶಿಕ್ಷಕಿಯಾಗಿದ್ದರು .

ನೈಹಾತಿಯ ಮನೆಯಲ್ಲಿದ್ದ ಇವರ ಒಬ್ಬ ಚಿಕ್ಕಪ್ಪನಂತೂ ಸರಕಾರದಲ್ಲಿ ಹಿರಿಯ ಅಧಿಕಾರಿಯಾಗಿದ್ದು , ಕಲೆ – ಸಂಸ್ಕೃತಿಗಳ ಪೋಷಕರಾಗಿದ್ದರು .

ಇವರಿಂದಾಗಿ ನೈಹಾತಿಯಲ್ಲಿನ ಇವರ ಮನೆತನವು ಎಲ್ಲರಿಗೂ ಚೆನ್ನಾಗಿ ಗೊತ್ತಿತ್ತು .

ಜೊತೆಗೆ ಇವರ ಆಸಕ್ತಿಯಿಂದಾಗಿ ಇವರ ಮನೆಯು ಪ್ರದರ್ಶಕ ಕಲೆಗಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಡುಂಬೊಲವೂ ಆಗಿ ಬೆಳೆದಿತ್ತು . ಇದರ ಪ್ರಭಾವ ಶಾಮನ ಮೇಲೂ ಆಗಿತ್ತು .

ಹೀಗಾಗಿಯೇ ಅವನು ಶಾಲೆಯಲ್ಲಿ ಉಳಿದ ಹುಡುಗರಿಗಿಂತ ಬೇರೆಯಾಗಿ ಕಾಣುತ್ತಿದ್ದ .

ಆತ ಯಾವ ಸದ್ದುಗದ್ದಲವೂ ಇಲ್ಲದೆ ನನ್ನ ಮೇಲೆ ಉತ್ಕಟವೂ ಭಾವನಾತ್ಮಕವೂ ಆದ ಉಪಶಮವನ್ನು ಉಂಟುಮಾಡುತ್ತಿದ್ದ .

ನಾನಂತೂ ಆ ದಿನಗಳಲ್ಲಿ ಆತನ ಪಾಲಿಗೆ ಜೀವಕ್ಕೆ ಜೀವ ಕೊಡುತ್ತಿದ್ದ ಗರ್ಲ್‌ಫ್ರೆಂಡ್ ಆಗಿದ್ದು ,

ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದೆ ಶಾಮ ಹೀಗೆ ನನ್ನನ್ನು ಒಲಿಸಿಕೊಂಡಿದ್ದರಿಂದ ಉಳಿದ ಹುಡುಗರು ಅವನನ್ನು ಆಸೂಯೆಯಿಂದ ನೋಡುತ್ತಿದ್ದರು .

ನಾನು ಮತ್ತು ಶಾಮ ಜೋಡಿಯಾಗಿದ್ದನ್ನು ಅವರೆಲ್ಲ ಅಸಹನೆಯಿಂದ ಕುದಿಯುತ್ತ , ನೋಡಬೇಕಾಯಿತು .

ಇನ್ನೊಂದೆಡೆಯಲ್ಲಿ , ಶ್ವೇತ್ ಕೂಡ ನನ್ನನ್ನು ತನ್ನವನನ್ನಾಗಿಸಿಕೊಳ್ಳಲು ತವಕಿಸುತ್ತಿದ್ದ .

ಆದರೆ ಅವನು ಸೋಲನ್ನು ಒಪ್ಪಿಕೊಳ್ಳುತ್ತಿರಲಿಲ್ಲ . ತುಂಬಾ ವಾಚಾಳಿಯಾಗಿದ್ದ ಅವನು , ಪ್ರತಿದಿನವೂ ನನ್ನ ಬಗ್ಗೆ ಅವನಿಗಿರುವ ಪ್ರೀತಿಯನ್ನು ಘಂಟಾಘೋಷವಾಗಿ ಸಾರುತ್ತಿದ್ದ .

ಆಗಿಂದಾಗ್ಗೆ ನನ್ನನ್ನು ಬರಸೆಳೆದು ಬಿಗಿಯಾಗಿ ಆಲಿಂಗಿಸಿಕೊಂಡು , ಎಲ್ಲರೆದುರೂ ಮುತ್ತಿನ ಮಳೆಗರೆಯುತ್ತಿದ್ದ .

ತರಗತಿಯಲ್ಲಿದ್ದ ಉಳಿದ ಹುಡುಗರೆದುರಿಗೇ ತನ್ನ ಪ್ರೀತಿಯನ್ನು ರಾಜಾರೋಷವಾಗಿ ಪ್ರದರ್ಶಿಸುವುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದ .

ನಾಲ್ಕು ಜನರೆದುರೇ ನನ್ನ ಕೆನ್ನೆಗಳನ್ನು ಚುಂಬಿಸುತ್ತ , ಒಂದೆರಡು ಘಳಿಗೆಯಲ್ಲಿ ಅಧರಾಮೃತ ಪಾನಕ್ಕೆ ಮುಂದಾಗುತ್ತಿದ್ದ . ಇದರ ಬಗ್ಗೆ ಅವನಿಗೆ ಎಳ್ಳುಕಾಳಿನಷ್ಟೂ ದಾಕ್ಷಿಣ್ಯವಿರಲಿಲ್ಲ .

ಅವನ ಈ ಸ್ವಭಾವ ನನಗೆ ಕಿಂಚಿತ್ತೂ ಹಿಡಿಸುತ್ತಿರಲಿಲ್ಲ . ಹೀಗಾಗಿ ನಾನು ಅವನನ್ನು ದೂರವಿಡಲು ಏನೇನು ಸಾಧ್ಯವೋ ಅದನ್ನೆಲ್ಲ ಮಾಡುತ್ತಿದ್ದೆ .

ಪ್ರಾಮಾಣಿಕವಾಗಿ ಹೇಳಬೇಕೆಂದರೆ , ಶುರುವಿನಲ್ಲಿ ಅವನು ಹೀಗೆ ನನ್ನೆಡೆಗೆ ಉತ್ಕಟವಾಗಿ ಗಮನ ಕೊಡುತ್ತಿದ್ದುದನ್ನು ಕಂಡು ನನಗೆ ಖುಷಿಯೇ ಆಗುತ್ತಿತ್ತು .

ಆದರೆ , ಅವನು ಹೀಗೆ ಎಲ್ಲರೆದುರೂ ನನ್ನನ್ನು ಹಿಡಿದುಕೊಳ್ಳುವುದು , ಮುತ್ತು ಕೊಡುವುದು , ತಬ್ಬಿಕೊಳ್ಳುವುದು ಇವೆಲ್ಲದರಿಂದ ನನಗೆ ಅಸಹ್ಯವಾಗತೊಡಗಿತು .

ಆಗ ನಾನು ಅವನಿಗೆ , ‘ ನೋಡು , ಪ್ರೇಮಿಗಳು ಹೀಗೆ ಎಲ್ಲರೆದುರಿಗೂ ತಮ್ಮ ದೈಹಿಕ ವಾಂಛಗಳನ್ನು ಪ್ರಕಟಿಸಬಾರದು , ‘ ಎಂದು ಹೇಳಿ , ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದೆ . ಆದರೆ ವ್ಯರ್ಥವಾಯಿತು . ಏಕೆಂದರೆ , ಅವನು ನನ್ನ ಮಾತುಗಳನ್ನು ಕೇಳಿಸಿಕೊಳ್ಳಲು ತಯಾರಿರಲಿಲ್ಲ .

ನಾನು ಅವನ ಗರ್ಲ್‌ಫ್ರೆಂಡ್ ಆಗಿದ್ದರಿಂದ ತಾನು ತನಗೆ ಇಷ್ಟಬಂದ ಹಾಗೆ ಮಾಡಬಹುದು ಎನ್ನುವುದು ಅವನ ಆಲೋಚನೆಯಾಗಿತ್ತು . ಅವನು ನನ್ನನ್ನು ತನ್ನ ಹೆಂಡತಿಯೆಂದು ಹೇಳುತ್ತಿದ್ದನಲ್ಲದೆ , ತರಗತಿಯಲ್ಲಿದ್ದ ಉಳಿದ ಹುಡುಗರೆಲ್ಲ ನನ್ನನ್ನು ಅತ್ತಿಗೆ ಎಂದು ಮರ್ಯಾದೆಯಿಂದ ಕರೆಯಬೇಕೆಂದು ಹುಕುಂ ಹೊರಡಿಸಿದ್ದ .

ಆದರೆ , ಅವನ ಈ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ . ನನಗೂ ಅವನು ಕಿರಿಕಿರಿಯ ಆಸಾಮಿ ಎನಿಸತೊಡಗಿತು . ಜೊತೆಗೆ , ಉಳಿದ ಹುಡುಗರು ಕೂಡ ಅವನು ಕೋಡಂಗಿಯಂತೆ ಆಡುವುದನ್ನು ಕಂಡು ನಗುತ್ತಿದ್ದರು . ಆದರೆ , ಕೆಲವೇ ದಿನಗಳಲ್ಲಿ ಇದೆಲ್ಲ ತಪ್ಪೆನ್ನುವುದು ನನಗೆ ಅರಿವಾಯಿತು . ಈ ಕತೆಯನ್ನು ನಾನು ಆಮೇಲೆ ಹೇಳುತ್ತೇನೆ .

ಶ್ವೇತ್ ನನ್ನನ್ನು ಪ್ರೀತಿಸುತ್ತಿದ್ದ ನಿಜ ಆದರೆ , ಇದಕ್ಕೆ ಪ್ರತಿಯಾಗಿ ನಾನೂ ಅವನನ್ನು ಪ್ರೀತಿಸುತ್ತಿದ್ದೀನೋ , ಇಲ್ಲವೋ ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ . ಅವನ ದೃಷ್ಟಿ ಹೇಗಿತ್ತೆಂದರೆ , ನಾನು ಅವನನ್ನಲ್ಲದೆ ಇನ್ನೊಬ್ಬರನ್ನು ಕನಸಿನಲ್ಲೂ ಕಲ್ಪಿಸಿಕೊಳ್ಳಲಾರೆ ಎನ್ನುವಂತಿತ್ತು .

ಅವನು ಮೂರ್ಖ ಶಿಖಾಮಣಿಯಂತೆ ವರ್ತಿಸುವುದನ್ನು ಕಂಡು ನಾನು ಸಿಟ್ಟಿನಿಂದ ಕೂಗಿಕೊಂಡರಷ್ಟೇ ಅಲ್ಲ , ತನ್ನನ್ನು ನಾಲ್ಕು ಜನರೆದುರು ಅವಮಾನಿಸಿದರೂ ಅವನ ಮೇಲೆ ಅದೆಲ್ಲ ಯಾವ ಪರಿಣಾಮವನ್ನೂ ಬೀರುತ್ತಿರಲಿಲ್ಲ .

ನನ್ನ ಈ ಸಿಟ್ಟು – ಸೆಡವುಗಳನ್ನೆಲ್ಲ ಅವನು ಪ್ರೇಮಿಯೊಬ್ಬಳ ಆಕ್ರೋಶ ಎಂದುಕೊಂಡಿದ್ದ ನಾನು ಏನೇ ಬೈದರೂ ಅವನು ‘ ಇದೆಲ್ಲ ಒಬ್ಬ ಮನದನ್ನೆಯ ಮಾತು , ‘ ಎಂದುಕೊಳ್ಳುತ್ತಿದ್ದ .

ಆತ ಕ್ಲಾಸ್‌ರೂಮಿನಲ್ಲೇ ರಾಜಾರೋಷವಾಗಿ ನನ್ನ ಮೈಮೇಲೆ ಬರುತ್ತಿದ್ದುದು ನನಗಂತೂ ಅಸಹ್ಯವಾಗಿ ಕಾಣುತ್ತಿತ್ತು . ನಾನು ಎಷ್ಟೋ ಸಲ ಅವನಿಂದ ತಪ್ಪಿಸಿಕೊಳ್ಳಲು ತರಗತಿಯಿಂದ ಆಚೆಗೆ ಓಡಿಹೋಗುತ್ತಿದ್ದೆ .

ಆಗಲೂ ಅವನು ನನ್ನ ಬೆನ್ನ ಹಿಂದೆಯೇ ಓಡೋಡಿಕೊಂಡು ಮನೆಯವರೆಗೂ ಬರುತ್ತಿದ್ದ , ದಿನವೂ ಸಂಜೆಯಾದರೆ ಸಾಕು , ಅವನು ನನ್ನೊಂದಿಗೆ ಕಾಲ ಕಳೆಯಲು ನಮ್ಮ ಮನೆಗೆ ಬರುತ್ತಿದ್ದ . ಅಲ್ಲಿ ಅವನು ನಮ್ಮ ತಾಯಿ ಮತ್ತು ಅಕ್ಕಂದಿರ ಎದುರಿಗೇ ನನ್ನನ್ನು ಅನಾಮತ್ತಾಗಿ ಹಿಡಿದುಕೊಂಡು ಆಲಿಂಗಿಸಿಕೊಳ್ಳುತ್ತ , ನನ್ನನ್ನು ಚುಂಬಿಸಲು ಶುರು ಮಾಡುತ್ತಿದ್ದ .

ಇದರಿಂದಂತೂ ನನಗೆ ಸಿಕ್ಕಾಬಟ್ಟೆ ಮುಜುಗರವಾಗುತ್ತಿತ್ತು . ಏಕೆಂದರೆ , ಅಷ್ಟು ಹೊತ್ತಿಗಾಗಲೇ ಉಳಿದ ಹುಡುಗರೆಲ್ಲ ನನ್ನನ್ನು ಒಬ್ಬ ಹುಡುಗಿಯಂತೆ ನೋಡುತ್ತಿದ್ದುದರಿಂದ ಅಮ್ಮ ಮತ್ತು ಅಕ್ಕಂದಿರೆಲ್ಲ ತಲೆಯ ಮೇಲೆ ಕೈ ಹೊತ್ತುಕೊಂಡು ಕೂತಿದ್ದರು . ನನ್ನನ್ನು ನೋಡಲೆಂದು ಬರುತ್ತಿದ್ದ ಶ್ವೇತ್ ಯಾವತ್ತೂ ಬರಿಗೈಯಲ್ಲಿ ಬರುತ್ತಿರಲಿಲ್ಲ .

ಅವನು ಪ್ರತಿಸಲವೂ ನನಗೆಂದು ಒಂದು ಕೇಕನ್ನೋ , ಸಿಹಿತಿಂಡಿಯನ್ನೋ , ಹಣ್ಣನ್ನೋ ಹಿಡಿದುಕೊಂಡು ಬರುತ್ತಿದ್ದ . ಆದರೂ ನಾನು ಮಾತ್ರ ಅವುಗಳಿಗೆ ಮರುಳಾಗದೆ , ‘ ಏಯ್ , ನೀನು ಮೊದಲು ಇಲ್ಲಿಂದ ತೊಲಗು ! ‘ ಎನ್ನುತ್ತಿದ್ದೆ .

ಆದರೆ , ಅವನು ಮಾತ್ರ ನನ್ನ ಮಾತುಗಳಿಗೆ ಸೊಪ್ಪನ್ನೂ ಹಾಕುತ್ತಿರಲಿಲ್ಲ . ಬದಲಿಗೆ , ‘ ಹಲೋ , ನಾನು ಇದನ್ನೆಲ್ಲ ತಂದಿರೋದು ನಿನಗೋಸ್ಕರ ಕೈಗೆ ಬರುವ ನಾಲ್ಕು ಕಾಸನ್ನು ಉಳಿಸಿ , ಇದನ್ನೆಲ್ಲ ತರಾ ಇದ್ದೀನಿ ಗೊತ್ತಾ ? ‘ ಎನ್ನುತ್ತಿದ್ದ .

ನನ್ನನ್ನು ಹೀಗೆ ವಿಪರೀತ ಹಚ್ಚಿಕೊಂಡಿದ್ದ ಈ ಹುಡುಗನ ಬದುಕು ನಿಜಕ್ಕೂ ಕರುಣಾಜನಕವಾಗಿತ್ತು . ತನ್ನ ಚಿಕ್ಕಪ್ಪನ ಮನೆಯಲ್ಲಿದ್ದ ಶ್ವೇತ್‌ನನ್ನು ನೋಡಿದರೆ , ಇವನ ಬದುಕು ಯಾತನಾಮಯವಾಗಿದೆ ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ .

ಏಕೆಂದರೆ , ಲೋಕದ ಎದುರು ಇವನು ಯಾವಾಗಲೂ ಖುಷಿಖುಷಿಯಾಗಿಯೇ ಇರುತ್ತಿದ್ದ . ಆದರೆ , ಇಂಥ ಮುಖವಾಡದ ಹಿಂದೆ ಅವನು ತನ್ನ ಕಣ್ಣೀರನ್ನು ಅದುಮಿಡುವ ಪ್ರಯತ್ನ ಮಾಡುತ್ತಿದ್ದ ಎನ್ನುವುದು ನನಗೆ ಈಗೀಗ ಗೊತ್ತಾಗಿದೆ . ಶ್ವೇತ್ ಮತ್ತು ಶಾಮ್ ಇಬ್ಬರೂ ಸೋದರ ಸಂಬಂಧಿಗಳು ಎನ್ನುವ ವಿಚಾರವನ್ನು ನಾನು ಈಗಾಗಲೇ ಹೇಳಿದ್ದೇನೆ . ಆದರೆ , ಶಾಮನ ತಂದೆ – ತಾಯಿಗಳು ಶ್ವೇತ್‌ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ .

ಇಷ್ಟರ ಮಧ್ಯೆ ಶ್ವೇತ್ , ವಿಜ್ಞಾನದ ಪಾಠವನ್ನು ಹೇಳಿಸಿಕೊಳ್ಳಲೆಂದು ದಿನವೂ ಶಾಮನ ಮನೆಗೆ ಹೋಗುತ್ತಿದ್ದ . ಏಕೆಂದರೆ , ಈತನ ಚಿಕ್ಕಪ್ಪನ ಮನೆಯಲ್ಲಿ ಇವನಿಗೆ ನಾಲ್ಕು ತುತ್ತು ಊಟ ಹಾಕುತ್ತಿದ್ದರೇ ವಿನಾ ಬೇರೇನನ್ನೂ ಮಾಡುತ್ತಿರಲಿಲ್ಲ . ಆದರೆ , ಶಾಮನ ಮನೆಯಲ್ಲಿ ವಿಜ್ಞಾನ ಪಾಠಕ್ಕೆಂದು ಒಬ್ಬ ಶಿಕ್ಷಕನನ್ನೇ ಗೊತ್ತು ಮಾಡಿಕೊಂಡಿದ್ದರು .

ಶ್ವೇತ್ ದಿನವೂ ನಮ್ಮ ಮನೆಯ ಮುಂದೆಯೇ ಶಾಮನ ಮನೆಗೆ ಹೋಗುತ್ತಿದ್ದ . ಹೀಗೆ ಹೋಗುವಾಗಲೆಲ್ಲ ಅವನು ಜೇಬಿನಲ್ಲಿ ಒಂದಿಷ್ಟು ಕಡಲೆಪುರಿಯನ್ನು ತುಂಬಿಕೊಂಡು ಹೋಗುತ್ತಿದ್ದ . ಆಗೆಲ್ಲ ನಾನು , ‘ ಅಲ್ಲ ಕಣೋ , ನೀನು ಹೇಗಿದ್ದರೂ ಶಾಮನ ಮನೆಗೆ ಹೋಗುತ್ತೀಯ .

ಅದು ನಿನಗೆ ಚಿಕ್ಕಮ್ಮನ ಮನೆ , ದಿನವೂ ಹೀಗೆ ಕಡಲೆಪುರಿ ತಿನ್ನೋ ಬದಲು ಅವರ ಮನೆಯಲ್ಲೇ ಏನನ್ನಾದರೂ ತಿನ್ನಬಹುದಲ್ಲೋ ‘ ಎನ್ನುತ್ತಿದ್ದೆ . ನಾನು ಹೀಗೆಂದಾಗಲೆಲ್ಲ ಅವನು ನೇರವಾಗಿ ಯಾವ ಉತ್ತರವನ್ನೂ ಕೊಡದೆ , ನಕ್ಕು ಸುಮ್ಮನಾಗುತ್ತಿದ್ದ . ಶಾಮನಿಗೆ ಇವನನ್ನು ಕಂಡರೆ ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು .

ಹೀಗಾಗಿ ಅವನಿಗೆ ಇವನಿಗೂ ಕೊಟ್ಟು ತಿನ್ನಬೇಕೆಂಬ ಮನೋಭಾವವೇ ಬೆಳೆದಿರಲಿಲ್ಲ . ಒಟ್ಟಿನಲ್ಲಿ , ನನಗೆ ಮುಂದೆ ಏನೋ ದುಃಖ ಕಾದಿದೆ ಎನ್ನುವುದು ಶಾಮನು ಶ್ವೇಶ್‌ನೆಡೆಗೆ ತೋರಿಸುತ್ತಿದ್ದ ವರ್ತನೆಯಿಂದ ಗೊತ್ತಾಗುತ್ತಿತ್ತು .

ಆದರೆ , ಆ ದಿನಗಳಲ್ಲಿ ನಾನು ಈ ಶಾಮನೊಂದಿಗೂ ಗಾಢ ಅನುರಕ್ತಿಯಲ್ಲಿದ್ದೆ . ಹೀಗಾಗಿ , ಅವನ ಬಗ್ಗೆ ಕೆಟ್ಟದಾಗಿ ಯೋಚಿಸಲು ನನಗೆ ಮನಸ್ಸು ಬರುತ್ತಿರಲಿಲ್ಲ .

ಇಷ್ಟಾದರೂ ಆ ಬಡಪಾಯಿ ಶಾಮ್ , ನಾಲ್ಕು ಕಾಸನ್ನು ಉಳಿಸಿಕೊಂಡು ನನಗೋಸ್ಕರ ಕೇಕು , ಸಿಹಿತಿಂಡಿ ಮತ್ತು ಹಣ್ಣನ್ನೆಲ್ಲ ತರುತ್ತಿದ್ದನಲ್ಲ ಎನ್ನುವುದನ್ನು ನೆನಪಿಸಿಕೊಂಡರೆ ಈಗ ನನಗೆ ನೋವಾಗುತ್ತದೆ .

ಪ್ರಾಯಶಃ , ಅವನು ನನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದ ಎನಿಸುತ್ತದೆ . ಓ , ದೇವರೇ । ಈ ಜಗತ್ತಿನಲ್ಲಿ ತಲೆಯೆತ್ತಿ ನಿಲ್ಲಬೇಕಾದರೆ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕೆನ್ನುವ ಅಂತಿಮ ಸತ್ಯ ಶ್ವೇತ್‌ಗೆ ಗೊತ್ತಿತ್ತು .

ಹೀಗಾಗಿಯೇ ಅವನು ಹನ್ನೊಂದು ಮತ್ತು ಹನ್ನೆರಡನೇ ತರಗತಿಗಳಲ್ಲಿದ್ದಾಗ ಅಲ್ಲೇ ಇದ್ದ ಒಂದು ಫೋಟೋ ಸ್ಟುಡಿಯೋದಲ್ಲಿ ಸಂಜೆ ಹೊತ್ತು ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ .

ಆಗಂತೂ ಇವನೊಬ್ಬನನ್ನು ಬಿಟ್ಟರೆ ನಮ್ಮ ಪ್ರಾಯದ ಯಾವೊಬ್ಬ ಹುಡುಗರೂ ಹೀಗೆ ದುಡಿಯುತ್ತಿರಲಿಲ್ಲ . ಅವನ ಹತ್ತಿರ ತುಂಬಾ ಚಿಕ್ಕ ವಯಸ್ಸಿನಲ್ಲೇ ಅವರ ತಂದೆ ತಂದುಕೊಟ್ಟಿದ್ದ ಒಂದು ಕ್ಯಾಮೆರಾ ಇತ್ತು . ಇದನ್ನು ತುಂಬಾ ಪ್ರೀತಿಸುತ್ತಿದ್ದ ಅವನು , ಮನೆಯಿಂದ ಆಚೆಗೆ ಹೊರಟಾಗಲೆಲ್ಲ ನೇತು ಹಾಕಿಕೊಂಡು , ಒಳ್ಳೆಯ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದ .

ಇದೊಂದೇ ಅವನಿಗಿದ್ದ ಹವ್ಯಾಸ . ಈ ಕ್ಯಾಮರಾವನ್ನು ಅವನು ಅಪ್ಪಿತಪ್ಪಿಯೂ ಶಾಲೆಗೆ ತರುತ್ತಿರಲಿಲ್ಲ . ಆದರೆ , ನಮ್ಮ ಮನೆಗೆ ಬರುವಾಗಲೆಲ್ಲ ಇದನ್ನು ಮರೆಯದೆ ನೇತು ಹಾಕಿಕೊಂಡು ಬರುತ್ತಿದ್ದ .

ಈ ಬಗ್ಗೆ ವಿಚಾರಿಸಿದರೆ , ‘ ನೀನೆಂದರೆ ನನ್ನ ಪಾಲಿಗೆ ತುಂಬಾ ಸ್ಪೆಷಲ್ ! ‘ ಎನ್ನುತ್ತಿದ್ದನಲ್ಲದೆ , ನನ್ನ ಫೋಟೋಗಳನ್ನೂ ತೆಗೆಯುತ್ತಿದ್ದ . ಅವನು ಹೀಗೆ ನನ್ನ ಫೋಟೋ ತೆಗೆಯುವಾಗಲೆಲ್ಲ ‘ ಏಸೋಮು , ನೀನು ಹಾಗೆ ನಿಂತ್ಕ , ಹೀಗೆ ನಿಂತ್ಕ , ಸೊಂಟದ ಮೇಲೆ ಕೈ ಇಟ್ಯೂ , ಸ್ವಲ್ಪ ನಗು , ಈ ಕಡೆ ನೋಡು , ಆ ಕಡೆ ನೋಡು , ‘ ಎನ್ನುವ ಹತ್ತಾರು ಸೂಚನೆಗಳನ್ನು ಕೊಡುತ್ತಿದ್ದುದು ನನಗಿನ್ನೂ ನೆನಪಿದೆ .

ಅವನ ಈ ಸೂಚನೆಗಳನ್ನು ನಾನೂ ಹಿಗ್ಗಿನಿಂದಲೇ ಅನುಸರಿಸುತ್ತಿದ್ದೆ . ಏಕೆಂದರೆ , ಅದು ನನ್ನೊಳಗಿರುವ ಹೆಣ್ಣನಕ್ಕೆ ಸಿಗುತ್ತಿದ್ದ ಮನ್ನಣೆಯಾಗಿತ್ತು ಅವನೂ ಅಷ್ಟೆ , ತನ್ನ ಕೈಯಲ್ಲಿರುತ್ತಿದ್ದ ಒಂದು ಸಣ್ಣ ಮೊತ್ತದ ಹಣದಿಂದಲೇ ನನಗೂ ಅವನಿಗೂ ಏನನ್ನಾದರೂ ಜೊತೆಯಲ್ಲಿ ತಿನ್ನೋಣವೆಂದು ತರುತ್ತಿದ್ದ .

ಕೆಲವೊಮ್ಮೆ ಅವನು ಥಳುಕುಪಳಕಿನ ಆಭರಣಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದ . ಇದರಿಂದ ನನಗೆ ಋಷಿಯೇನೋ ಆಗುತ್ತಿತ್ತು .

ಆದರೆ , ಅವನು ತರಗತಿಯ ಉಳಿದ ಹುಡುಗರ ಎದುರೇ ರಾಜಾರೋಷವಾಗಿ ಉಡುಗೊರೆಗಳನ್ನು ಕೊಡುತ್ತಿದ್ದುದು ನನಗೆ ಹಿಡಿಸುತ್ತಿರಲಿಲ್ಲ . ಅಂದರೆ , ಅವನ ಪ್ರದರ್ಶನಪ್ರಿಯತೆ ಮುಜುಗರ ಹುಟ್ಟಿಸುತ್ತಿತ್ತು . ಇಂತಹ ಸ್ವಭಾವದ ಶ್ವೇತ್ , ಒಂದು ದಿನ ಇದ್ದಕ್ಕಿದ್ದಂತೆಯೇ ನಮ್ಮ

ಮನೆಗೆ ಬಂದು , ನನ್ನನ್ನು ಅನಾಮತ್ತಾಗಿ ಬಿಗಿಯಾಗಿ ಹಿಡಿದುಕೊಂಡು ನನ್ನ ದೇಹದ ಎಲ್ಲ ಭಾಗಗಳಿಗೂ ಮುತ್ತಿನ ಮಳೆಗರೆಯತೊಡಗಿದ . ಅವನು ಅವತ್ತು ಫಳಫಳನೆ ಹೊಳೆಯುತ್ತಿದ್ದ ಹಸಿರು ಬಣ್ಣದ ಒಂದು ದುಬಾರಿ ಅಂಗಿಯನ್ನು ಹಾಕಿಕೊಂಡಿದ್ದ ಎನ್ನುವುದು ಇನ್ನೂ ನನಗೆ ನೆನಪಿನಲ್ಲಿದೆ .

ಅವನು ಅವತ್ತು ನನ್ನನ್ನು ನನ್ನ ಇಷ್ಟಕ್ಕೆ ವಿರುದ್ಧವಾಗಿ ಹೀಗೆ ಬಳಸಿಕೊಳ್ಳಲು ಶುರು ಮಾಡಿದ ಕೂಡಲೇ ನನಗೆ ಸಿಟ್ಟು ಬ್ರಹ್ಮರಂಧಕ್ಕೇರಿತು . ಆ ಭರದಲ್ಲಿ ನಾನು ಅನಾಮತ್ತಾಗಿ ಅವನ ಅಂಗಿಯ ಕೊರಳಪಟ್ಟಿಗೆ ಕೈಹಾಕಿ , ಜಗ್ಗಿ ಎಳೆದೆ . ಇದರ ಪರಿಣಾಮವಾಗಿ , ತುಂಬಾ ಮೃದುವಾಗಿದ್ದ ಅವನ ಆ ಅಂಗಿಯ ಒಂದು ಭಾಗ ಗುಂಡಿಗಳ ಸಮೇತ ಪರನೆ ಹರಿದು , ಜೂಲುಜೂಲಾಯಿತು . ಆದರೆ , ನಾನು ಹೀಗೆ ಮಾಡಿದ್ದು ಸರಿಯಲ್ಲ .

ಎಂದು ನನಗೆ ಆಮೇಲೆ ಮನದಟ್ಟಾಯಿತು . ಇಷ್ಟೇ ಅಲ್ಲ , ನಾನು ಹೀಗೆ ಮಾಡಿದ್ದಕ್ಕೆ ಶ್ವೇತ್ ನನ್ನ ಮೇಲೆ ಸೇಡು ತೀರಿಸಿಕೊಳ್ಳಬಹುದೆಂದು ಭಯವೂ ಆಯಿತು .

ಆದರೆ , ಶ್ವೇತ್ ತನ್ನ ಸ್ವಭಾವಕ್ಕೆ ಅನುಗುಣವಾಗಿ ಜೋರಾಗಿ ನಕ್ಕು ಅಲ್ಲಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದನಲ್ಲದೆ , ‘ ನೋಡು , ನೀನು ಹರಿದು ಹಾಕಿದ ಈ ಅಂಗಿಯನ್ನು ನನ್ನ ಜೀವಮಾನವಿಡೀ ಜೋಪಾನವಾಗಿ ಇಟ್ರೋತೀನಿ , ಯಾಕೆ ಗೊತ್ತ ? ನಿಜವಾದ ಹೆಂಡತಿಯಾದವಳು ಮಾತ್ರ ತನ್ನ ಗಂಡನ ವಿರುದ್ಧ ಹೀಗೆಲ್ಲ ಸಿಟ್ಟು ಮಾಡಿಕೊಳ್ಳಬಹುದು ಅಷ್ಟೆ ‘ ಎಂದ .

ಈ ಮಾತಿನಿಂದಾಗಿ ಅವನು ಇಂದಿಗೂ ನನ್ನ ನೆನಪಿನಲ್ಲಿ ಅಚ್ಚಹಸಿರಾಗಿದ್ದಾನೆ . ಇಂತಹ ಸಭ್ಯ ಹುಡುಗ ಶ್ವೇತ್ ನನ್ನಿಂದ ದೂರವಾದಾಗ ನಿಜಕ್ಕೂ ನನಗೆ ವೇದನೆಯಾಯಿತು . ಆದರೆ , ಈ ಭಾವನೆ ಕೂಡ ತಾತ್ಕಾಲಿಕವಾಗಿತ್ತು .

ಏಕೆಂದರೆ , ‘ ನಾಳೆ ಸ್ಕೂಲಿನಲ್ಲಿ ಶಾಮ್ ಸಿಕ್ತಾನೆ ಬಿಡು , ‘ ಎನ್ನುವ ಭಾವನೆ ನನ್ನನ್ನು ಆವರಿಸಿಕೊಂಡಿತು . ನಮ್ಮ ಮನೆಗೂ ಶಾಮನ ಮನೆಗೂ ದೂರವೇನಿರಲಿಲ್ಲ . ಆದರೂ ನಾನು ಯಾವತ್ತೂ ಅವರ ಮನೆಗೆ ಹೋಗುತ್ತಿರಲಿಲ್ಲ . ಅವನೂ ಅಷ್ಟೆ . ಅಪ್ಪಿತಪ್ಪಿಯೂ ನಮ್ಮ ಮನೆಗೆ ಬರುತ್ತಿರಲಿಲ್ಲ .

ಅಂದರೆ , ನಾವಿಬ್ಬರೂ ಗಂಡ – ಹೆಂಡತಿ ಎನ್ನುವ ವಿಚಾರವನ್ನು ನಮ್ಮ ತಂದೆ – ತಾಯಿಗಳು ಒಪ್ಪಿಕೊಳ್ಳುವವರೆಗೂ ಯಾವ ಕಾರಣಕ್ಕೂ ನಮ್ಮನಮ್ಮ ಮನೆಗಳಲ್ಲಿ ನಾವು ಒಬ್ಬರನ್ನೊಬ್ಬರು ಸಂಧಿಸಬಾರದೆನ್ನುವ ಒಂದು ತಿಳಿವಳಿಕೆ ನಮ್ಮಿಬ್ಬರ ಮಧ್ಯೆ ಇತ್ತು .

ಶಾಮನ ಪ್ರಾಮಾಣಿಕತೆಯನ್ನೇನೂ ನಾನು ಶಂಕಿಸುತ್ತಿರಲಿಲ್ಲ . ಅಲ್ಲದೆ , ಭವಿಷ್ಯದಲ್ಲಿ ಆತನ ಪತ್ನಿಯಾಗಿ ಕೈಹಿಡಿಯುವವರೆಗೂ ನಾನು ಗಂಡನ ಮನೆಗೆ ಕಾಲಿಡಬಾರದು ಎನ್ನುವ ಷರತ್ತನ್ನು ಒಪ್ಪಿಕೊಂಡಿದ್ದೆ . ಶಾಮನ ಪಕ್ಕದ ಮನೆಯಲ್ಲಿ ನನ್ನ ಒಬ್ಬ ಸ್ನೇಹಿತನಿದ್ದ . ನಾನು ಆ ದಿನಗಳಲ್ಲಿ ಶಾಲೆಯು ಮುಗಿದಮೇಲೆ ಪದೇಪದೇ ಇವನ ಮನೆಗೆ ಹೋಗುತ್ತಿದ್ದೆ .

ಶಾಮನಿಗೆ ನಾನು ಹತ್ತಿರವಾಗಬೇಕೆಂಬುದೇ ಇದರ ಹಿಂದಿನ ಮರ್ಮವಾಗಿತ್ತು ಎನ್ನುವುದನ್ನೇನೂ ಬಿಡಿಸಿ ಹೇಳಬೇಕಾಗಿಲ್ಲ . ಈ ಗೆಳೆಯನ ಮನೆಗೆ ಹೋಗುತ್ತಿದ್ದ ನಾನು , ಸೀದಾ ಮನೆಯ ಟೆರೇಸಿಗೆ ಹತ್ತಿ ಹೋಗಿ , ಪಕ್ಕದ ಮನೆಯಲ್ಲಿ ಶಾಮನು ಓಡಾಡುತ್ತಿರುವುದನ್ನು ನೋಡುತ್ತ ನಿಲ್ಲುತ್ತಿದ್ದೆ .

ದಿನಗಳಲ್ಲೇ ಅವರ ಮನೆಯ ಟೆರೇಸಿನಲ್ಲಿ ಓದಿ ಬರೆದು ಶಾಮನಿಗೆ ಮಾಡಲೆಂದು ಒಂದು ಪ್ರತ್ಯೇಕ ಕೊಠಡಿ ಇತ್ತು . ನಿಜಕ್ಕೂ ಇದೊಂದು ಐಷಾರಾಮವೇ ಆಗಿತ್ತು.ಅಲ್ಲಿ ಆ ಟೆರೇಸಿನಲ್ಲಿ ಅವನು ಮತ್ತು ಈ ಟೆರೇಸಿನಲ್ಲಿ ನಾನು ಇಬ್ಬರೂ ನಿಂತುಕೊಂಡು , ಗಂಟೆಗಟ್ಟಲೆ ಹರಟುತ್ತ , ಸೂರ್ಯ ಕಂತುವುದನ್ನೇ ನೋಡುತ್ತಿದ್ದೆವು .

ಆ ಕ್ಷಣಗಳಲ್ಲಿ ಶಾಮನು ನಮ್ಮಿಬ್ಬರ ಅನುರಕ್ತಿಯನ್ನು ಬಣ್ಣಿಸುವಂತಹ ಪ್ರಗಾಥಗಳನ್ನು ಹಾಡುತ್ತಿದ್ದ . ಒಂದು ಸಂಜೆಯಂತೂ ಅವನು ಬಂಗಾಳದ ಹೆಸರಾಂತ ಕವಿ ಖಾಜಿ ನಸ್ರುಲ್ ಅವರ ‘ ಬಹಳ ದಿನಗಳ ನಂತರ ಬಂದಿದೆ ಇಂಥದೊಂದು ಸಂಜೆ , ಆಹಾ ! ಮಳೆ ಸುರಿಯುತಿರುವ ಸಂಜೆ , ನೀನೀಗ ಮಾಡಿಕೊಂಡರೆ ನನ್ನ ನೆನಪನ್ನು ‘ ಎನ್ನುವ ಮಧುರ ಗೀತೆಯನ್ನು ಹಾಡತೊಡಗಿದ .

ಆ ಘಳಿಗೆಯಲ್ಲಿ ನಾವಿಬ್ಬರೂ ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಒಟ್ಟಿಗೆ ನಿಂತುಕೊಂಡು , ತೊಯ್ದು ತೊಪ್ಪೆಯಾಗಿದ್ದೆವು .

ಅವನ ಆ ಕಂಠ ಎಷ್ಟೊಂದು ಮಧುರವಾಗಿತ್ತೆಂದರೆ , ಆ ಹಾಡಿನ ಭಾವಕ್ಕೆ ಪರವಶನಾಗಿದ್ದ ನನ್ನ ಕಂಗಳಿಂದ ನೀರು ದಳದಳನೆ ಸುರಿಯತೊಡಗಿತು .

ಆ ಕಣ್ಣೀರ ಧಾರೆಯನ್ನು ಸುರಿಯುತ್ತಿದ್ದ ವರ್ಷಧಾರೆಯು ತೊಳೆದುಕೊಂಡು ಹೋಗುತ್ತಿತ್ತು !

ಆ ಸಂಜೆಯನ್ನು ನಾನು ಎಂದಿಗೂ ಮರೆಯಲಾರೆ . ಶಾಮ್ ಇದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾನೋ , ಇಲ್ಲವೋ ಗೊತ್ತಿಲ್ಲ .

ಆದರೆ , ಆ ಸಂಜೆ ಅವನು ಅಂತಃಕರಣದಿಂದ ಹಾಡಿನ ಹಾಡಿನ ಹಿಂದಿದ್ದ ಅವನ ಭಾವನೆಗಳು ಆದ್ರ್ರವಾಗಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ . ಇಷ್ಟಾದರೂ ನನ್ನ ಮತ್ತು ಶಾಮನ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ . ಬದುಕಿನಲ್ಲಿ ನಾವು ಎಷ್ಟೋ ಸಂಗತಿಗಳನ್ನು ತೀರಾ ಸಲೀಸಾಗಿ ಅಥವಾ ಅಳ್ಳಕವಾಗಿ ಒಪ್ಪಿಕೊಳ್ಳಬೇಕಷ್ಟೆ .

ಶಾಮನೊಂದಿಗೆ ನಾನಿದ್ದಾಗ , ನನ್ನಲ್ಲಿನ ಪ್ರೀತಿಯು ಅದರ ತುತ್ತತುದಿಯನ್ನು ಮುಟ್ಟಿತ್ತು . ನಮ್ಮಿಬ್ಬರ ದೇಹಗಳೂ ಮಿಲನ ಮಹೋತ್ಸವದಲ್ಲಿ ಒಂದಾದವು ಎನ್ನುವುದು ಸುಳ್ಳಲ್ಲ . ಆದರೆ , ಅದಷ್ಟೇ ನಮ್ಮ ಸಂಬಂಧದ ಗುರಿಯಾಗಿರಲಿಲ್ಲ .

ಅದೇನಿದ್ದರೂ ನಮ್ಮ ಭಾವತೀವ್ರವಾದ ಸಂಬಂಧವನ್ನು ವ್ಯಕ್ತಪಡಿಸಲು ಒಂದು ರೂಪವಾಗಿತ್ತಷ್ಟೆ . ನಾನಂತೂ ಕೇವಲ ದೈಹಿಕ ಕಾಮನೆಗಳ ತೃಪ್ತಿಯನ್ನು ಬಯಸುವ ಪೈಕಿಯಾಗಿರಲಿಲ್ಲ . ಅಂತಿಮವಾಗಿ ನಾವಿಬ್ಬರೂ ಲೋಕದ ಉಳಿದ ಗಂಡು – ಹೆಣ್ಣುಗಳಂತೆಯೇ ಬಾಳಸಂಗಾತಿಗಳಾಗಿ , ನಮ್ಮದೇ ಆದ ಸಂಸಾರವನ್ನು ಹೂಡಬೇಕೆಂದು ಹಾತೊರೆಯುತ್ತಿದ್ದೆ.

ಪ್ರಾಯಕ್ಕೆ ಬಂದ ಯಾವುದೇ ಒಬ್ಬ ಹೆಣ್ಣು ಮಗಳು ತನ್ನದೇ ಆದ ಸುಖಸಂಸಾರವನ್ನು ಹೊಂದಲು ತಹಿತಹಿಸುತ್ತಾಳಲ್ಲವೇ ? ಇದರಂತೆಯೇ ನಾನು ಕೂಡ ನನ್ನನ್ನು ಮುಚ್ಚಟೆಯಿಂದ ನೋಡಿಕೊಳ್ಳುವ ಮತ್ತು ಅಪಾರವಾಗಿ ಪ್ರೀತಿಸುವ ಒಬ್ಬ ಗಂಡ ನನ್ನವನಾಗಬೇಕೆಂದು ಬಯಸುತ್ತಿದ್ದೆ .

ನಾನು ಹೀಗೆಲ್ಲ ಕನಸು ಕಾಣುತ್ತಿದ್ದ ದಿನಗಳಲ್ಲೇ ಎರಡು ಘಟನೆಗಳು ನಡೆದವು . ಅಷ್ಟರಲ್ಲಿ ನಮ್ಮ ಮಧ್ಯಮಾವಧಿ ಪರೀಕ್ಷೆಯ ಫಲಿತಾಂಶ ಹೊರಬಂತು . ಇದರಲ್ಲಿ ನಾನು ಚೆನ್ನಾಗಿಯೇ ಅಂಕಗಳನ್ನು ತೆಗೆದಿದ್ದೆ . ಇದರಿಂದಂತೂ ನನಗೆ ನೆಮ್ಮದಿಯಾಯಿತು .

ನಾನು ಚೆನ್ನಾಗಿ ಅಂಕಗಳನ್ನು ತೆಗೆದಿದ್ದನ್ನೇ ಒಂದು ನೆಪವಾಗಿಟ್ಟುಕೊಂಡು ನಾನು ಮತ್ತು ಶಾಮ ಇಬ್ಬರೂ ಮನೆಯಲ್ಲಿ ಜೊತೆಗೂಡಿಯೇ ಸಂಭ್ರಮಿಸಿದೆವು . ನಮ್ಮ ಅಪ್ಪನೂ ಅಷ್ಟೆ , ನಾನು ಚೆನ್ನಾಗಿ ಅಂಕ ತೆಗೆದಿರುವ ವಿಷಯವನ್ನೇ ತಮ್ಮ ಸೋದರರಿಗೂ ಅವರ ಪತ್ನಿಯಂದಿರಿಗೂ ಹೇಳುತ್ತ ಬಂದರು .

ನನ್ನ ಈ ಸಾಧನೆಯನ್ನು ನೋಡಿದ ಅಪ್ಪ , ‘ ಸೋಮೂ , ಮುಂದೆ ನೀನು ವಿಜ್ಞಾನವನ್ನೇ ಓದಬೇಕು . ‘ ಎಂದು ತೀರ್ಮಾನ ಹೇಳಿಯೇ ಬಿಟ್ಟರು . ಅವರು ಹೀಗೆಂದಕೂಡಲೇ ಶಾಲೆಯಲ್ಲಿ ನನ್ನ ಮುಂದಿನ ಎರಡು ವರ್ಷಗಳು ಯಾತನಾಮಯವಾಗಿರಲಿವೆ ಎನ್ನುವುದು ನನಗೆ ಗೊತ್ತಾಯಿತು .

ಆದರೆ , ಸ್ವಭಾವತಃ ನಾನು ತುಂಬಾ ಅಂಜುಬುರುಕನಾಗಿದ್ದೆ . ಜೊತೆಗೆ , ನಮ್ಮ ತಂದೆಯನ್ನು ಕಂಡರೆ ಥರಥರನೆ ನಡುಗುತ್ತಿದ್ದೆ . ಹೀಗಾಗಿ ನನ್ನೊಳಗಿನ ತಳಮಳವನ್ನು ನಾನೇ ನುಂಗಿಕೊಂಡು ಸುಮ್ಮನಿದ್ದೆ . ನನ್ನ ಅಕ್ಕಂದಿರಿಬ್ಬರೂ ಕಾಲೇಜಿನಲ್ಲಿ ವಿಜ್ಞಾನದ ವಿದ್ಯಾರ್ಥಿಗಳಾಗಿದ್ದರು . ಅಂದಮೇಲೆ , ಹುಡುಗನಾದ ನಾನು ವಿಜ್ಞಾನವನ್ನುಓದದೆ , ಬೇರೆನನ್ನಾದರೂ ಆಯ್ಕೆ ಮಾಡಿಕೊಳ್ಳುವುದಾದರೂ ಎಲ್ಲಿ ಸಾಧ್ಯವಿತ್ತು ? ಸರಿಹೋಗ್ತಾನೆ , ಹರಿಸಲು ಅವರಿಗೆ ನನ್ನ ಮಧ್ಯಾಂತರ ಪರೀಕ್ಷೆಯ ಅಂಕಗಳನ್ನು ನೋಡಿ ಅಪ್ಪ ಹಿರಿಹಿರಿ ಹಿಗ್ಗಿದರು .

ಅವರು ಇಷ್ಟೊಂದು ಸಂತೋಷವಾಗಿ ಇದ್ದುದನ್ನು ನಾನು ಯಾವತ್ತೂ ನೋಡಿರಲಿಲ್ಲ . ಅವರು ನನ್ನ ಈ ಸಾಧನೆಯಿಂದ ಎಷ್ಟೊಂದು ಖುಷಿಪಡತೊಡಗಿದರೆಂದರೆ , ನಾನು ಲಿಪ್‌ಸ್ಟಿಕ್ , ಕಪ್ಪು , ಸ್ಕರ್ಟುಗಳನ್ನು ಇಷ್ಟಪಡುತ್ತಿದ್ದುದನ್ನೂ ಮರೆತರು ! ಇಷ್ಟೇ ಅಲ್ಲ , ಇವನು ಸ್ವಲ್ಪ ಹಟಮಾರಿ ಅಷ್ಟೆ .

ಇವನ ಮೇಲೆ ಸ್ವಲ್ಪ ಜಾಸ್ತಿ ನಿಗಾ ಕೊಟ್ಟರೆ ಎಂದುಕೊಂಡರು . ಆದರೆ , ನನ್ನ ಕಡೆಗೆ ಗಮನ ಪುರಸೊತ್ತಿರಲಿಲ್ಲ . ಹೀಗಾಗಿ ಅವರು , ಈ ವಿಚಾರದಲ್ಲಿ ನಮ್ಮ ಅಮ್ಮನನ್ನು ನಿನ್ನ ಮುದ್ದಿನಿಂದಲೇ ಅವನು ಹಾಳಾಗ್ತಿರೋದು , ನೀನು ಅವನನ್ನು ಸ್ವಲ್ಪ ಬಿಗಿಯಾಗಿ ಇಡೇಕು , ‘ ಎಂದು ಬೈಯತೊಡಗಿದರು . ನಾನು ‘ ದಾರಿ ಬಿಟ್ಟಿದ್ದೇನೆ ಎನ್ನುವುದು ಅಮ್ಮನಿಗೂ ಗೊತ್ತಿತ್ತು .

ಏಕೆಂದರೆ , ಇದನ್ನೆಲ್ಲ ಗ್ರಹಿಸುವಷ್ಟು ಸೂಕ್ಷ್ಮತೆ ಮತ್ತು ಬೌದ್ಧಿಕ ಸಾಮರ್ಥ್ಯ ಎರಡೂ ಅವರಿಗಿದ್ದವು . ಒಟ್ಟಿನಲ್ಲಿ ‘ ನಮ್ಮ ಮಗನಿಗೆ ಏನೋ ಸಮಸ್ಯೆಯಿದೆ . ಇದನ್ನು ಸರಿಪಡಿಸುವುದು ಸಾಧ್ಯವಿಲ್ಲ , ‘ ಎನ್ನುವುದು ಅಮ್ಮನ ಅಂತರಂಗಕ್ಕೆ ಗೊತ್ತಿತ್ತು .

ಅಮ್ಮ ನನ್ನ ಈ ಸಮಸ್ಯೆಯನ್ನು ತಮಗೆ ಸಾಧ್ಯವಿದ್ದಷ್ಟು ದಿವಸವೂ ಉದಾಸೀನ ಮಾಡಲು ನೋಡಿದರೆನ್ನುವುದು ಸುಳ್ಳಲ್ಲ . ಅಲ್ಲದೆ , ಆ ದೇವರೇ ನನ್ನ ಮಗನ ಭವಿಷ್ಯ ಹೀಗಿರಬೇಕೆಂದು ನಿರ್ಧರಿಸಿದ್ದಾನೆ . ಹೀಗಾಗಿ ಈ ವಿಚಾರದಲ್ಲಿ ನಮ್ಮ ಕೈಯಲ್ಲೇನೂ ಇಲ್ಲ . ‘ ಎಂದು ಅಂದುಕೊಂಡಿದ್ದರು .

ಹೀಗಾಗಿ ಅವರು , ‘ ನನ್ನ ಮೂರನೆಯ ಮಗುವೂ ಗಂಡು ಮಗುವಿನ ರೂಪದಲ್ಲಿರುವ ಹೆಣ್ಣು ಮಗುವೇ ಆಗಿದೆ . ‘ ಎನ್ನುವ ನಿಲುವಿಗೆ ಬಂದಿದ್ದರು . ಇವತ್ತಿಗೂನಾನು ನಮ್ಮ ತಾಯಿಗಾಗಿ ಹಂಬಲಿಸುತ್ತೇನೆ . ಏಕೆಂದರೆ , ಅವರು ನನ್ನ ಪಾಲಿಗೆ ನಿಜವಾದ ಗೆಳೆಯನಂತಿದ್ದರು .

ನನ್ನೊಳಗಿನ ತುಮುಲಗಳನ್ನು ಮತ್ತು ನನ್ನ ಆಳದಲ್ಲಿರುವ ಹಂಬಲಗಳನ್ನು ನಾನು ಅಮ್ಮನಿಗೆ ಅರ್ಥ ಮಾಡಿಸಲು ಸಾಕಷ್ಟು ಹೆಣಗಾಡಿದೆ . ಆದರೆ ಅವರು ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ . ಅವರು ಸದಾ ಮೌನದಿಂದಲೂ ಹತಾಶೆಯಿಂದಲೂ ತುಂಬಾ ಅಸಹಾಯಕರಾಗಿ ನನ್ನನ್ನು ನೋಡುತ್ತಿದ್ದರು .

ಈ ಮೂಲಕ ಅವರು ನನ್ನ ‘ ಭಯಾನಕ ಭವಿಷ್ಯ’ವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ತಮಗೆ ತಾವೇ ಸಜ್ಜಾಗುತ್ತಿದ್ದರು . ನಮ್ಮ ತಾಯಿಯೊಂದಿಗೆ ಸಾವಿರಾರು ಸಂಗತಿಗಳನ್ನು

ಹಂಚಿಕೊಳ್ಳಬೇಕೆಂದು ನನಗೆ ಈಗಲೂ ತೀವ್ರವಾಗಿ ಅನಿಸುತ್ತದೆ . ಆದರೆ , ಇದು ಸಾಧ್ಯವಿಲ್ಲ . ಏಕೆಂದರೆ , ನನ್ನನ್ನು ಹೆತ್ತತಾಯಿ ನಮ್ಮನ್ನೆಲ್ಲ ಆಗಲಿ ಹತ್ತಾರು ವರ್ಷಗಳಾಗಿ ಹೋಗಿವೆ . ಬದುಕು ಹೀಗೆ ಸಾಗುತ್ತಿದ್ದಾಗ ಒಂದು ದಿನ ಅಪ್ಪ ನನ್ನನ್ನು ನೈಹಾತಿಯಲ್ಲಿದ್ದ ನರೇಂದ್ರ ವಿದ್ಯಾನಿಕೇತನಕ್ಕೆ ಕರೆದುಕೊಂಡು ಹೋಗಿ , ನನ್ನನ್ನು ವಿಜ್ಞಾನ ವಿಭಾಗಕ್ಕೆ ಹಾಕಿದರು .

ಅವತ್ತು ನನ್ನನ್ನು ಹೀಗೆ ಕಾಲೇಜಿಗೆ ಸೇರಿಸಿ ಹಿಂದಿರುಗಿದ ಅಪ್ಪ , ವಿಜಯೋತ್ಸವವನ್ನು ಆಚರಿಸಿದರು . ಆದರೆ , ಅಂದು ಯಾರೊಬ್ಬರೂ ನನ್ನಲ್ಲಾಗುತ್ತಿದ್ದ ತಳಮಳವನ್ನು ಗುರುತಿಸಲಿಲ್ಲ . ಆಗ ನನ್ನಷ್ಟಕ್ಕೆ ನಾನು , ‘ ಈ ನರೇಂದ್ರ ವಿದ್ಯಾನಿಕೇತನವು ಇಡೀ ನೈಹಾತಿಯಲ್ಲೇ ಅತ್ಯುತ್ತಮವಾದ ಕಾಲೇಜಾಗಿದೆ . ಇಲ್ಲಿಗೆ ಬರುವ ಯಾವೊಬ್ಬ ಬುದ್ಧಿವಂತ ವಿದ್ಯಾರ್ಥಿಯೂ ಕಲಾ ವಿಭಾಗಕ್ಕೆ ಸೇರಿಕೊಳ್ಳುವುದಿಲ್ಲ .

ನನ್ನ ಪಾಲಿಗೆ ಪರಿಸ್ಥಿತಿ ಅಷ್ಟೇನೂ ಕೆಟ್ಟಿಲ್ಲ , ‘ ಎಂದು ಸ್ವಲ್ಪ ಅಳುಕುತ್ತಲೇ ಸಮಾಧಾನ ಹೇಳಿಕೊಳ್ಳತೊಡಗಿದೆ . ನಮ್ಮ ಮನೆಯಲ್ಲೂ ಪರಿಸ್ಥಿತಿ ಹೀಗೆಯೇ ಇತ್ತು . ಇಲ್ಲಿ ನಮ್ಮ ತಾಯಿಯೊಬ್ಬರನ್ನು ಬಿಟ್ಟರೆ ಬೇರಾರಿಗೂ ಕಲೆ – ಸಾಹಿತ್ಯಗಳ ಗಂಧಗಾಳಿಯೂ ಇರಲಿಲ್ಲ .

ಅಂದಹಾಗೆ , ನಮ್ಮ ತಾಯಿಯು ಚಿಕ್ಕಂದಿನಿಂದಲೇ ರವೀಂದ್ರನಾಥ ಟ್ಯಾಗೋರರ ಹಾಡುಗಳು , ಕಾದಂಬರಿಗಳು ಮತ್ತು ಪದ್ಯಗಳೊಂದಿಗೇ ಬೆಳೆದವರಾಗಿದ್ದರು . ನಾನು ಕೂಡ ಅಮ್ಮನೊಂದಿಗೆ ಮಾತನಾಡುತ್ತ , ‘ ಅಮ್ಮ , ನಾನು ದೊಡ್ಡವನಾದ ಮೇಲೆ ಕಾಲೇಜಿನಲ್ಲಿ ನಿನ್ನ ಹಾಗೆಯೇ ಕಲೆ – ಸಾಹಿತ್ಯಗಳನ್ನು ಓದುತ್ತೇನೆ ‘ ‘ ಎಂದು ಒಂದೆರಡು ಸಲ ಹೇಳಿದ್ದು ಇನ್ನೂ ಜ್ಞಾಪಕದಲ್ಲಿದೆ .

ಆದರೆ , ಅಮ್ಮನಿಗೆ ಕೂಡ ಇದು ಇಷ್ಟವಿರಲಿಲ್ಲ . ಏಕೆಂದರೆ , ‘ ನಾನು ಹತ್ತಿರುವ ಒಬ್ಬನೇ ಒಬ್ಬ ಮಗ ವಿಜ್ಞಾನವನ್ನೇ ಓದಬೇಕು , ಎನ್ನುವುದು ಅವರ ಆಸೆಯಾಗಿತ್ತು . ಇವೆಲ್ಲದರ ಮಧ್ಯೆಯೂ ನನ್ನ ಪಾಲಿಗೊಂದು ಭರವಸೆಯ ಬೆಳ್ಳಿಕಿರಣವಿತ್ತು .

ಅದೇನೆಂದರೆ , ಶಾಮ ಕೂಡ ನರೇಂದ್ರ ವಿದ್ಯಾನಿಕೇತನವನ್ನೇ ಸೇರಿಕೊಂಡಿದ್ದ ! ನನ್ನ ಕಾಲೇಜು ದಿನಗಳ ಈ ಹಂತದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದವು . ಅದೇನೆಂದರೆ , ನಾನು ಹೈಸ್ಕೂಲಿನಲ್ಲಿದ್ದಾಗ ನನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದ ರಾಮ , ಈಗ ನನ್ನನ್ನು ಆಸಡ್ಡೆ ಮಾಡಲು ಶುರು ಮಾಡಿದನಲ್ಲದೆ , ನನ್ನೊಂದಿಗೆ ತುಂಬಾ ಒರಟಾಗಿ ನಡೆದುಕೊಳ್ಳತೊಡಗಿದೆ .

ಅವನು ನನ್ನಿಂದ ತಪ್ಪಿಸಿಕೊಳ್ಳುತ್ತಿದ್ದ , ಇಷ್ಟೇ ಅಲ್ಲ , ನನ್ನನ್ನು ಭೇಟಿ ಮಾಡುವುದಕ್ಕಾಗಲಿ , ನನ್ನೊಂದಿಗೆ ಕಲೆತು ಮಾತನಾಡುವುದಕ್ಕಾಗಲಿ ಅವನು ಹಿಂದೇಟು ಹಾಕುತ್ತಿದ್ದ .

ಇದನ್ನು ನೋಡಿ , ‘ ಓಹೋ , ಇವನ್ಯಾಕೋ ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದಾನೆ , ‘ ಎಂದು ನನಗನಿಸಿತು . ಹೀಗಾಗಿ ನಾನು ಅವನನ್ನು ರಮಿಸತೊಡಗಿದೆ , ಆದರೆ ಇದು ಫಲ ಕೊಡಲಿಲ್ಲ . ಅವನು ತರಗತಿಯಲ್ಲೂ ಸುತ್ತಮುತ್ತಲೂ ಇದ್ದ ಶ್ರೀಮಂತ ಮನೆತನದ ಹುಡುಗರೊಂದಿಗೆ ಅಲೆಯತೊಡಗಿದ .

ಕೊನೆಗೂ ನಾನು ಧೈರ್ಯ ಮಾಡಿ , ‘ ಏಯ್ , ಶಾಮೂ , ಹೀಗ್ಯಾಕೆ ಮಾಡ್ತಿದೀಯ ? ‘ ಎಂದೆ . ಅವನು ಆಗ ನೇರವಾಗಿ ಮುಖಕ್ಕೆ ಹೊಡೆದಂತೆ , ‘ ನನ್ನ ಅಂತಸ್ತಿಗೂ ನಿನ್ನ ಅಂತಸ್ತಿಗೂ ಸರಿ ಹೊಂದುವುದಿಲ್ಲ . ಎಂದ . ಇದರಿಂದ ನನಗಂತೂ ಆಘಾತವಾಯಿತು .

ಏಕೆಂದರೆ , ಇಂತಹ ಶಾಮ ನನ್ನ ‘ ಹೀರೋ ‘ ಆಗಿರಲಿಲ್ಲ ! ಇದರಿಂದ ತೀವ್ರವಾಗಿ ನೊಂದ ನಾನು , ಅವನು ಯಾರಾರ ಜೊತೆ ಸೇರಿಕೊಂಡಿದ್ದಾನೆ ಮತ್ತು ಅವರ ಜೊತೆಯಲ್ಲ ಸೇರಿಕೊಂಡು ಏನೇನೆಲ್ಲ ಮಾಡುತ್ತಿದ್ದಾನೆ . ಎನ್ನುವುದನ್ನು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾದೆ .

ಕೊನೆಗೊಂದು ದಿನ , ಅವನ ಹತ್ತಿರಕ್ಕೆ ಓಡಿ ಹೋಗಿ , ‘ ರಾಮ , ದಯವಿಟ್ಟು ನನ್ನನ್ನು ಕೈ ಬಿಡಬೇಡ . ನೀನೇ ನನಗೆ ಗತಿ ! ‘ ಎಂದು ಗೋಗರೆದೆ . ಆದರೆ ಅವನ ಮನಸ್ಸು ಕರಗಲಿಲ್ಲ , ಬದಲಿಗೆ ಅವನು ತನ್ನ ಆ ಶ್ರೀಮಂತ ಗೆಳೆಯರಿಗೆ ‘ ಲೇ , ಇವನೊಬ್ಬ ಶಿಖಂಡಿ ಕಣೋ ! ‘ ಎಂದು ಹೇಳಿದನಲ್ಲದೆ , ಅವರೆಲ್ಲ ಸೇರಿಕೊಂಡು ನನ್ನನ್ನು ಬಾಯಿಗೆ ಬಂದಂತೆ ಬೈಯುವಂತೆ ಕುಮ್ಮಕ್ಕು ಕೊಟ್ಟ ; ಅವರ ಜೊತೆಯಲ್ಲಿ ತಾನೂ ಸೇರಿಕೊಂಡ .

ಇದನ್ನೆಲ್ಲ ಕಂಡು ನನಗಂತೂ ಸಿಕ್ಕಾಬಟ್ಟೆ ಅವಮಾನವಾದಂತಾಗಿ , ತುಂಬಾ ನೋವಾಯಿತು . ಇದೇ ಹಂತದಲ್ಲಿ ನನ್ನನ್ನು ಭೇಟಿ ಮಾಡಿದ ಶ್ವೇತ್ ಕೂಡ , ‘ ಸೋಮ , ನಾನು ನಿನ್ನನ್ನು ಬಿಟ್ಟು ಶಾಶ್ವತವಾಗಿ ದೂರವಾಗುತ್ತಿದ್ದೇನೆ ‘ ಎಂದು ಹೇಳಿದ . ನಿಜ . ಆಗ ಅವನು ನೈಹಾತಿಯನ್ನು ಬಿಟ್ಟು ಕಲ್ಕತ್ತಾಕ್ಕೆ ಹೋಗುತ್ತಿದ್ದ .

ಏಕೆಂದರೆ , ಅವನ ತಾಯಿ ಅಲ್ಲಿದ್ದು , ಇನ್ನು ಮುಂದೆ ತಮ್ಮ ಮಗನನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಅವರು ಕೊನೆಗೂ ಮನಸ್ಸು ಮಾಡಿದ್ದರು . ಸದ್ಯ ಅವರು ಕೊನೆಗಾದರೂ ತನ್ನ ತಾಯಿಯ ಜೊತೆಗೆ ಹೋಗುತ್ತಿದ್ದಾನಲ್ಲ ಎಂದು ತಿಳಿದು ನನಗೆ ಸಂತೋಷವೇ ಆಯಿತು .

ಅವತ್ತು ಸಂಜೆ ಶ್ವೇಶ್ ತುಂಬಾ ದುಃಖದಲ್ಲಿ ಮುಳುಗಿದ್ದನಲ್ಲದೆ , ಒಬ್ಬನೇ ಅಲಕ್ಕಾಗಿದ್ದ . ಎಂದಿನಂತೆ ಇರದಿದ್ದ ಅವನು , ನನ್ನಿಂದ ನಾಲ್ಕು ಮಾರು ದೂರದಲ್ಲೇ ಕೂತುಕೊಂಡಿದ್ದ . ಅವನ ಕಂಗಳಲ್ಲಿ ನೋವು ತೇಲಾಡುತ್ತಿತ್ತು . ಹಿಂದೆಂದೂ ನಾನು ಅವನನ್ನು ಈ ಸ್ಥಿತಿಯಲ್ಲಿ ನೋಡಿರಲಿಲ್ಲ . ಹೀಗಾಗಿ , ಅವನಿಗೆ ಏನು ಹೇಳಬೇಕೆಂದೇ ನನಗೆ ತೋಚಲಿಲ್ಲ . ಇದಕ್ಕೂ ಮೊದಲು ಅವನು ನನ್ನನ್ನು ಹುಚ್ಚನಂತೆ ಪ್ರೀತಿಸುತ್ತಿದ್ದುದು ನಿಜವಾದರೂ ಅವನ ಆ ಪ್ರೀತಿಯನ್ನು ನಾನು ತಿರಸ್ಕರಿಸಿದ್ದೆ .

ಇನ್ನೊಂದೆಡೆಯಲ್ಲಿ , ನಾನು ಮತ್ತು ಶಾಮ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದೆವು . ಈ ಸಂಗತಿ ತಿಳಿದಮೇಲೆ ಸ್ವತಃ ಇವನೇ ನನ್ನಿಂದ ದೂರವಾಗಿದ್ದ . ಅಂದರೆ , “ ಓಹೋ , ಇವನು ನಾನು ಅಂದುಕೊಂಡಿರುವಂತಹ ಪ್ರೇಮಿಯಲ್ಲ ! ‘ ಎನ್ನುವುದು ಅವನಿಗೆ ಮನದಟ್ಟಾಗಿತ್ತು . ಅಲ್ಲದೆ , ‘ ಈ ಪ್ರೀತಿಯಲ್ಲಿ ಶಾಮನ ಕೈ ಮೇಲಾಗಿದೆ . ಹೀಗಾಗಿ ಈ ಸೋಮು ಇನ್ನೆಂದೂ ನನ್ನ ಪಾಲಿಗೆ ಸಿಕ್ಕೋದಿಲ್ಲ .

ಏನು ಮಾಡೋದು , ಇದೆಲ್ಲ ನನ್ನ ಹಣೆಬರಹ , ‘ ಎಂದು ಅವನು ತೀರ್ಮಾನಿಸಿದ್ದ . ಪ್ರಾಯಶಃ , ಇದೇ ಕಾರಣಕ್ಕಾಗಿಯೇ ಅವನು ನೈಹಾತಿಯನ್ನು ತೊರೆಯಲು ನಿರ್ಧರಿಸಿದ್ದ ಎನಿಸುತ್ತದೆ . ಇಂತಹ ಸ್ಥಿತಿಯಲ್ಲಿ ಅವನನ್ನು ನೋಡಿದ ನಾನು , ‘ ನನ್ನಿಂದ ತಪ್ಪಾಯಿತು .

ನಾನು ನಿನ್ನನ್ನು ತಪ್ಪಾಗಿ ತಿಳಿದುಕೊಂಡು ಬಿಟ್ಟೆ , ನನಗೀಗ ಪಶ್ಚಾತ್ತಾಪವಾಗುತ್ತಿದೆ ‘ ಎಂದು ಹೇಳಲು ನೋಡಿದೆ . ಆದರೆ , ಆ ಕ್ಷಣದಲ್ಲಿ ನನ್ನ ತುಟಿಗೆ ಜೋಮು ಹಿಡಿದಂತೆ ಭಾಸವಾಗುತ್ತಿತ್ತು . ನಾನು ಎಷ್ಟೇ ಪ್ರಯತ್ನಿಸಿದರೂ ನನ್ನಿಂದ ಮಾತು ಹೊರಬರಲಿಲ್ಲ . ಒಟ್ಟಿನಲ್ಲಿ ನನಗೆ ಪಾಪಪ್ರಜ್ಞೆ ಕಾಡತೊಡಗಿತು .

ಇಷ್ಟೇ ಅಲ್ಲ , ನಾನಿನ್ನು ಎಷ್ಟೇ ಅಲವತ್ತುಕೊಂಡರೂ ಶ್ವೇತ್ ಇನ್ನು ನೈಹಾತಿಯಲ್ಲಿರಲಾರ , ನನ್ನ ಪಶ್ಚಾತ್ತಾಪವನ್ನು ನಂಬಲಾರ ಎನಿಸಿತು . ಬದುಕು ಕೊನೆಗೂ ಅವನಿಗೆ ಒಂದು ನೆಮ್ಮದಿಯ ತಾಣವನ್ನು ಕರುಣಿಸಿತ್ತಲ್ಲದೆ , ಅವನ ತಾಯಿಯು ಅವನನ್ನು ಒಪ್ಪಿಕೊಂಡಿದ್ದರು .

ಹೀಗಾಗಿಯೇ ಏನೋ ಅವನು ತನ್ನನ್ನು ತಾನು ‘ ಏನೇ ಇರಲಿ , ಕೊನೆಗೂ ನಾನು ಸಂತೋಷದಿಂದಿದ್ದೇನೆ ‘ ಎಂದು ಸಮಾಧಾನ ಪಡಿಸಿಕೊಳ್ಳುತ್ತಿರುವಂತೆ ಕಂಡಿತು . ಅವನು ಇವೆಲ್ಲದರ ನಡುವೆಯೇ ಏನನ್ನೋ ಹೇಳುತ್ತಿದ್ದ . ಆದರೆ , ಆ ಮಾತುಗಳನ್ನು ನಾನು ಅರ್ಧಂಬರ್ಧ ಕೇಳಿಸಿಕೊಂಡೆನಷ್ಟೆ , ಆ ಕ್ಷಣಗಳಲ್ಲಿ ನನಗೆ , ‘ ಅಯ್ಯೋ , ಇವನು ಕಟ್ಟಕಡೆಯ ಬಾರಿಗೆ ನನ್ನನ್ನೊಂದು ಸಲ ಬರಸೆಳೆದು ಅಪ್ಪಿಕೊಳ್ಳಬಾರದೇ ? ಅವನ ಆ ಬಾಹುಬಂಧನದಲ್ಲಿ ನಾನು ಸಂಪೂರ್ಣವಾಗಿ ಕಳೆದುಹೋಗಬಾರದೆ ?

ಅವನ ಆ ಅಪ್ಪುಗೆಯ ಬಿಸಿಯಲ್ಲಿ ನಾನು ಕಣ್ಣೀರು ಸುರಿಸಬಾರದೇ ? ನಾನು ಅವನ ಪಾಲಿಗೆ ಹೆಂಡತಿಯಂತೆ ಇರಲಿಲ್ಲವೇ ? ಹೆಂಡತಿಯರು ತಪ್ಪು ಮಾಡುವುದಿಲ್ಲವೇ ?

ಇವನು ಇವತ್ತು ಇಲ್ಲಿಂದ ಹೋದರೂ ಇವನನ್ನು ಪುನಃ ನೈಹಾತಿಗೆ ಕರೆತರುವ ಶಕ್ತಿ ನನಗಿಲ್ಲವೇ ? ‘ ಎಂದು ತೀವ್ರವಾಗಿ ಅನಿಸುತ್ತಿತ್ತು . ಆದರೆ , ನಂತರದ ದಿನಗಳಲ್ಲಿಇದ್ಯಾವುದೂ ಕೈಗೂಡಲಿಲ್ಲ . ಅಂದು ಸಂಜೆ ಅವನು , ‘ ಸೋಮೂ , ನೀನು ನನ್ನನ್ನು ಮರೆತು ಬಿಡು .

ಇನ್ನೆಂದೂ ನಾವಿಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗುವುದು ಸಾಧ್ಯವಿಲ್ಲ ‘ ಎಂದು ಹೇಳಿ , ಕಲ್ಕತ್ತಾದ ತನ್ನ ಮನೆಯ ವಿಳಾಸವನ್ನೂ ಕೊಡದೆ ಎದ್ದು ಹೋದ . ನಿಜಕ್ಕೂ ನನ್ನ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು . ಪುನಃ ನನ್ನಲ್ಲಿ , ‘ ಅಯ್ಯೋ , ಇವನು ನನ್ನನ್ನು ಭದ್ರವಾಗಿ ತಬ್ಬಿಕೊಳ್ಳಬಾರದೇ ? ತನ್ನ ಪ್ರೀತಿಯನ್ನು ವ್ಯಕ್ತಪಡಿಸಬಾರದೇ ? ನನ್ನನ್ನು ತನ್ನ ಹೆಂಡತಿಯೆಂದು ಕರೆಯದಾದರೇ ?

‘ ಎನ್ನುವ ಆಸೆ ಹುಟ್ಟಿಕೊಂಡಿತು . ಆದರೆ , ಅವನು ಕಣ್ಮರೆಯಾಗಿ ಹೋಗಿಯೇ ಬಿಟ್ಟ ಶಾಮ ಮತ್ತು ಶ್ವೇತ್ ಇಬ್ಬರೂ ನನ್ನ ಬದುಕಿನಿಂದ ದೂರವಾಗಿದ್ದರಿಂದ ಒಂದು ಶೂನ್ಯ ಸೃಷ್ಟಿಯಾಯಿತು . ಇದನ್ನಂತೂ ಹೇಗೆ ಎದುರಿಸಬೇಕೆನ್ನುವುದೇ ಗೊತ್ತಾಗಲಿಲ್ಲ .

ನಾನು ಇದರಿಂದ ಎಷ್ಟೊಂದು ಹತಾಶನಾದೆನೆಂದರೆ , ಎಲ್ಲ ಗೆಳೆಯರಿಂದಲೂ ದೂರವಾಗಿ ಮನೆಯಲ್ಲೇ ಮುದುಡಿಕೊಂಡೆ , ರಾಮನಿಗೆ ನನ್ನ ಈ ಪರಿಸ್ಥಿತಿ ಗೊತ್ತಾಗಿದ್ದು , ಅವನು ಇದರಿಂದ ಖುಷಿಯಾಗಿದ್ದಾನೆ ಎನ್ನುವುದು ನನಗೆ ಗೊತ್ತಿತ್ತು . ಗಂಟೆಗಟ್ಟಲೆ ಕಣ್ಣೀರು ಸುರಿಸುತ್ತ ಕೂರುತ್ತಿದ್ದ ನಾನು , ‘ ಅಯ್ಯೋ ದೇವರೇ , ಈ ರಾಮನ್ಯಾಕೆ ನನಗೆ ಹೀಗೆ ಮೋಸ ಮಾಡಿದ ? ‘

ಎಂದು ಕೊರಗುತ್ತಿದ್ದೆ . ಏಕೆಂದರೆ , ಅವನು ನನ್ನ ಪಾಲಿಗೆ ಒಬ್ಬ ಪರಿಪೂರ್ಣ ಪ್ರೇಮಿಯಾಗಿದ್ದನಲ್ಲದೆ , ನನ್ನ ಬರಡು ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ತುಂಬಾ ಆದ್ರ್ರವಾದ ಭಾವನೆಗಳನ್ನು ಜಾಗೃತಗೊಳಿಸಿದ್ದ ; ಅವನ ಬಗ್ಗೆ ನನಗೆ , ‘ ಆಹಾ , ಇವನು ನನ್ನವನು ಎನ್ನುವ ಭಾವನೆ ಪ್ರಬಲವಾಗಿತ್ತು .

ಅವನೇನೂ ನಾವಿಬ್ಬರೂ ಹೊಂದಿದ್ದ ಸಂಬಂಧದ ಬಗ್ಗೆ ಕಾಲೇಜಿನಲ್ಲಿ ಏನನ್ನೂ ತೋರಿಸಿಕೊಳ್ಳುತ್ತಿರಲಿಲ್ಲ . ಆದರೂ ಉಳಿದ ಹುಡುಗರಿಗೆ ಎಲ್ಲವೂ ಗೊತ್ತಿತ್ತು .

ಹೀಗಾಗಿ , ಅವನು ನನ್ನೊಂದಿಗೆ ಅನಾದರದಿಂದ ನಡೆದುಕೊಳ್ಳುವ ಅಗತ್ಯವಾದರೂ ಏನಿತ್ತು ? ಹಾಗಾದರೆ ಅವನು ನನ್ನ ಲೈಂಗಿಕತೆಯನ್ನು ಅಣಕಿಸಿಕೊಳ್ಳಲು ಹೀಗೆ ವರ್ತಿಸುತ್ತಿದ್ದನೇ ? ನನ್ನ ಬದುಕು ಸ್ತಬ್ಧವಾಗಿ ಹೋಯಿತು ಎನ್ನಿಸಿದಾಗಲೆಲ್ಲ ನಾನು , ನನ್ನ ಮತ್ತು ಶಾಮನ ನಡುವೆ ಇದ್ದ ಈ ಸಂಬಂಧದ ಸಂತೋಷದ ಘಳಿಗೆಗಳನ್ನು ಕಣ್ಮುಂದೆ ತಂದುಕೊಳ್ಳುತ್ತಿದ್ದೆ . ಆದರೆ , ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆನ್ನುವುದು ನಮ್ಮ ಮನೆಯ ಸದಸ್ಯರಿಗಾಗಲಿ , ನನ್ನ ಗೆಳೆಯರಿಗಾಗಲಿ ಗೊತ್ತಾಗಲಿಲ್ಲ . 

ಮುಂದುವರೆಯುದು ……………

Comments

Leave a Reply

Your email address will not be published. Required fields are marked *