ಪರಿವಿಡಿ

ಪ್ರಾಣಿ ಅಂಗಾಂಶಗಳು

prani jeeva kosha in kannada ,, prani jeeva kosha ,prani meaning ,prani meaning in kannada ,science, science direct

 

prani jeeva kosha in kannada ,, prani jeeva kosha ,prani meaning ,prani meaning in kannada ,science, science direct

ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯ ಆಧಾರದ ಮೇಲೆ ಜೀವಿಗಳನ್ನು ಏಕಕೋಶೀಯ ಹಾಗೂ ಬಹುಕೋಶೀಯ ಎಂದು ವರ್ಗೀಕರಿಸಲಾಗುವುದನ್ನು ನೀವು ಈಗಾಗಲೇ ತಿಳಿದಿದ್ದೀರಿ .

ಅಮೀಬಾ , ಪ್ಯಾರಾಮೀಸಿಯಂ ಮುಂತಾದ , ಏಕಕೋಶ ಜೀವಿಗಳನ್ನು ನೆನಪಿಸಿಕೊಳ್ಳಿ . ಇವುಗಳಲ್ಲಿ ದೇಹದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಒಂದೇ ಒಂದು ಜೀವಕೋಶವಿದೆ .

ಆದರೆ , ಬಹುಕೋಶೀಯ ಸಸ್ಯ ಮತ್ತು ಪ್ರಾಣಿಗಳ ರಚನೆಯು ಹೆಚ್ಚು ಸಂಕೀರ್ಣವಾಗಿದೆ . ಇವುಗಳ ದೇಹದಲ್ಲಿ ನಿರ್ದಿಷ್ಟವಾದ ಕೆಲಸವನ್ನು ನಿರ್ವಹಿಸುವ ಸಲುವಾಗಿ ವಿಶಿಷ್ಟ ಜೀವಕೋಶಗಳ ಗುಂಪುಗಳಿವೆ .

ಒಂದು ನಿರ್ದಿಷ್ಟ ಮೂಲದಿಂದ ಬಂದ , ಒಂದೇ ರೀತಿಯ ರಚನೆ ಹಾಗೂ ಕಾರ್ಯಗಳನ್ನು ಮಾಡುವ ಜೀವಕೋಶಗಳ ಗುಂಪಿಗೆ ಅಂಗಾಂಶ ಎಂದು ಹೆಸರು .

ಅಂಗಾಂಶಗಳು ತಮ್ಮ ರಚನೆಯಲ್ಲಿ ಹೆಚ್ಚಿನ ವೈವಿಧ್ಯ ತೋರುತ್ತವೆ . ವಿಶೇಷವಾಗಿ ಕೋಶದ ಆಕಾರ , ಕೋಶಭಿತ್ತಿಯ ಮಂದತ್ವ ಹಾಗೂ ಇನ್ನಿತರ ಲಕ್ಷಣಗಳಲ್ಲಿ ಈ ಭಿನ್ನತೆ ಇದೆ .

ಪ್ರತಿಯೊಂದು ಅಂಗಾಂಶವು ಒಂದು ನಿರ್ದಿಷ್ಟಕಾರ್ಯವನ್ನು ನಿರ್ವಹಿಸುತ್ತದೆ . ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಜೊತೆಗೂಡುವ ಅಂಗಾಂಶಗಳ ಗುಂಪಿಗೆ ಅಂಗ ( organ ) ಎಂದು ಹೆಸರು .

ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವ ಅಂಗಗಳ ಗುಂಪಿಗೆ ಅಂಗ ವ್ಯವಸ್ಥೆ ( organ System ) ಎಂದು ಹೆಸರು .

ಅನುಲೇಪಕ ಅಂಗಾಂಶಅನುಲೇಪಕ ಅಂಗಾಂಶ

ಇದು ಅತ್ಯಂತ ಸರಳವಾದ ಅಂಗಾಂಶ , ದೇಹದ ವಿವಿಧ ಭಾಗಗಳ ಒಳಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಹೊದಿಕೆಯಾಗಿ ಇದು ಕಂಡು ಬರುತ್ತದೆ .

ಇದರ ಜೀವಕೋಶಗಳು ಯಾವಾಗಲೂ ಒಂದು ತಳ ಜೋಡಣೆಯಾಗಿದ್ದು ಅಂತರ್‌ಕೋಶೀಯ ಅವಕಾಶಗಳಿರುವುದಿಲ್ಲ .

ಅನುಲೇಪಕ ಅಂಗಾಂಶಗಳಲ್ಲಿ ಈ ಕೆಳಗಿನ ಬಗೆಗಳಿವೆ

ಜೀವಕೋಶಗಳು ಚಪ್ಪಟೆಯಾಗಿ ಬಹುಭುಜಾಕೃತಿಯಲ್ಲಿದ್ದರೆ ಅದಕ್ಕೆ ಚಪ್ಪಟೆ ಅನುಲೇಪಕ ( Squar mous epithilium ) ಅಂಗಾಂಶ ಎಂದು ಹೆಸರು .

ಎಚ್ಚರಿಕೆಯಿಂದ ಗಮನಿಸಿದಾಗ ಅವು ನೆಲದ ಮೇಲೆ ಫಲಕಗಳ ಜೋಡಣೆಯಂತೆ ಕಾಣುತ್ತವೆ . ಹೀಗಾಗಿ ಇದಕ್ಕೆ ನೆಲಗಟ್ಟು ( pavement ) ಅಂಗಾಂಶ ಎಂಬ ಹೆಸರೂ ಇದೆ .

ಇದು ಉಸಿರಾಟ ಹಾಗೂ ರಕ್ತ ಪರಿಚಲನೆಗೆ ಸಂಬಂಧಿಸಿದ ರಚನೆಗಳಾದ ವಾಯುಕೂಪಿಕೆ ( alveoli ) ಗಳು , ಅನ್ನನಾಳ , ರಕ್ತನಾಳಗಳು , ಲೋಮನಾಳಗಳು ಹಾಗೂ ಹೃದಯದ ಕೋಣೆಗಳ ಒಳಸ್ತರಿಯಲ್ಲಿ ಕಂಡು ಬರುತ್ತದೆ .

ಈ ಅಂಗಾಂಶದ ಮೂಲಕ ವಸ್ತುಗಳ ವಿಸರಣೆ ನಡೆಯುತ್ತದೆ . ಅನುಲೇಪಕ ಅಂಗಾಂಶ ಎಂದು ಹೆಸರು .

ಅಂಗಾಂಶವು ಒಳಭಾಗದಲ್ಲಿ ಹೊದಿಕೆಯಾಗಿ ಕಂಡು ಬಂದರೆ ಅದಕ್ಕೆ ಒಳಸ್ತರಿ ( endothelium ) ಜೀವಕೋಶಗಳು ನೀಳವಾಗಿ ಇದ್ದಲ್ಲಿ ಅದಕ್ಕೆ ಸಂಭಾಕೃತಿ ಅನುಲೇಪಕ ಅಂಗಾಂಕ ಎಂದು ಹೆಸರು .

ಇದು ಆಹಾರ ನಾಳ ( digestive tube ) ಹಾಗೂ ಕೆಲವು ಗ್ರಂಥಿಗಳ ಒಳಸ್ತರಿಯಾಗಿ ಕಂಡುಬರುತ್ತದೆ .

ಅನುಲೇಪಕ ಅಂಗಾಂಶದ ಜೀವಕೋಶಗಳು ಘನಾಕೃತಿಯಲ್ಲಿದ್ದರೆ , ಅದಕ್ಕೆ ಸಾಕೃತಿ ಅನುಲೇಪಕ ಅಂಗಾಂಶ ಎಂದು ಹೆಸರು ,

ಮೇದೋಜೀರಕ ಗ್ರಂಥಿ , ಲಾಲಾರಸ ಗ್ರಂಥಿ , ಬೆವರಿನ ಗ್ರಂಧಿ ಮುಂತಾದ ಗ್ರಂಥಿಗಳ ನಾಳಗಳಲ್ಲಿ ಇದು ಕಂಡುಬರುತ್ತದೆ . ಲಾಲಾರಸ ಗ್ರಂಥಿ ಹಾಗೂ ಧ್ವರಾಯನಂತಹ ಗ್ರಂಧಿಗಳಲ್ಲಿ ಆದು ಸ್ರವಿಕೆಯಲ್ಲಿ ಪಾಲ್ಗೊಳ್ಳುತ್ತದೆ .

ಸಂಭಾಕೃತಿ ಅನುಲೇಪಕ ಅಂಗಾಂಶದ ಜೀವಕೋಶಗಳ ಹೊರಭಾಗದಲ್ಲಿ ಸೂಕ್ಷ್ಮಗಾತ್ರದ ರೋಮದಂತಹ ರಚನೆಗಳಿದ್ದರೆ ಅದನ್ನು ಕಶಾಂಗ ಸಹಿತ ಸಂಥ ಅನುಲೇಪಕ ಅಂಗಾಂಶ ಎನ್ನುತ್ತಾರೆ . ಇದು ಸ್ರವಿಕೆಗಳ ಸಾಗಾಣಿಕೆಯಲ್ಲಿ ನೆರವಾಗುತ್ತದೆ .

ಅನುಲೇಪಕ ಅಂಗಾಂಶದ ಕಾರ್ಯಗಳು

  1. ಚರ್ಮದಲ್ಲಿ ಅನುಲೇಪಕ ಅಂಗಾಂಶವು ತಮ್ಮ ಕೆಳಗಿರುವ ಅಂಗಾಂಶಗಳನ್ನು ರಕ್ಷಿಸುವ ಒಂದು ದಪ್ಪ ಪೊರೆಯಂತೆ ಕೆಲಸ ಮಾಡುತ್ತದೆ . ಅಲ್ಲದೆ , ಇದು ದೇಹದ ತಾಪಮಾನವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ .
  2. ಜ್ಞಾನೇಂದ್ರಿಯಗಳಲ್ಲಿರುವ ಅನುಲೇಪಕ ಅಂಗಾಂಶದಲ್ಲಿ ವಿಶಿಷ್ಟ ಗ್ರಾಹಕಕೋಶಗಳಿವೆ ( receptors ) .
  3. ಕಶಾಂಗ ಸಹಿತ ಅನುಲೇಪಕ ಅಂಗಾಂಶವು ವಸ್ತುಗಳ ಸಾಗಾಣಿಕೆಗೆ ನೆರವಾಗುತ್ತದೆ .
  4. ಅನುಲೇಪಕ ಅಂಗಾಂಶವು ಪೋಷಕಾಂಶಗಳ ಹೀರಿಕೆಯಲ್ಲಿ ಹಾಗೂ ತ್ಯಾಜ್ಯವಸ್ತುಗಳ ವಿಸರ್ಜನೆಯಲ್ಲೂ ಪಾತ್ರವಹಿಸುತ್ತದೆ .

 ಸ್ನಾಯು ಅಂಗಾಂಶಸ್ನಾಯು ಅಂಗಾಂಶ

ಸ್ನಾಯು ಅಂಗಾಂಶವು ದೇಹದ ಭಾಗಗಳ ಚಲನೆಗೆ ಕಾರಣವಾಗುತ್ತದೆ . ಇದು ನೀಳವಾದ ಜೀವಕೋಶಗಳಿಂದ ಕೂಡಿದೆ . ಹೀಗಾಗಿ ಈ ಜೀವಕೋಶಗಳಿಗೆ ಸ್ನಾಯು ತಂತುಗಳು ( muscle fibres ) ಎಂದು ಹೆಸರು .

ಈ ಸ್ನಾಯು ತಂತುಗಳು ಸಂಕುಚನ ಹಾಗೂ ವಿಕಸನ ಕ್ರಿಯೆಯನ್ನು ತೋರುತ್ತವೆ . ಈ ಕ್ರಿಯೆಯು ದೇಹದ ವಿವಿಧ ಭಾಗಗಳ ಮಣಿಯುವಿಕೆ ಹಾಗೂ ಚಲನೆಗೆ ಕಾರಣವಾಗುತ್ತದೆ ,

ಆಂತರಿಕ ಆಂಗಗಳಾದ ಹೃದಯ , ಜಠರ , ಆಹಾರ ನಾಳ ಮುಂತಾದ ಭಾಗಗಳಲ್ಲಿ ನಡೆಯುವ ಚಲನೆಯು ಸ್ನಾಯುಗಳಿಂದ ಉಂಟಾಗುತ್ತದೆ .

ಕಾರ್ಯಗಳ ಆಧಾರದ ಮೇಲೆ ಮೂರು ಬಗೆಯ ಸ್ನಾಯುಗಳನ್ನು ಗುರುತಿಸಬಹುದು

ಪಟ್ಟಿಸಹಿತ ಸ್ನಾಯುಗಳು

ಇಲ್ಲಿ ಸ್ನಾಯು ತಂತುಗಳು ನೀಳವಾಗಿ ಕೊಳವೆಯಾಕಾರದಲ್ಲಿವೆ . ಆದರೆ ಅವು ಶಾಖೆಗಳನ್ನು ಸ್ನಾಯುಶಲತು . ಅನೇಕ ಕೋಶಕೇಂದ್ರಗಳಿಂದ ಕೂಡಿದೆ ಈ ಸ್ನಾಯುಗಳು ಸಾಮಾನ್ಯವಾಗಿ ಮೂಳೆಗಳಿಗೆ ಅಂಟಿಕೊಂಡಿರುವುದರಿಂದ ಆ ಸ್ನಾಯು ಎಂಬ ಹೆಸರೂ ಇದೆ .

ಇವುಗಳ ಚಲನೆ ನಮ್ಮ ನಿಯಂತ್ರಣದಲ್ಲಿರುವುದರಿಂದ ಬಕ ಸ್ನಾಯುಗಳು ಎಂದು ಕರೆಯಲಾಗುತ್ತದೆ , ಇಡೀ ದೇಹದ ಚಲನೆಗೆ ಇವು ಕಾರಣವಾಗಿವೆ . ಈ ಸ್ನಾಯುಗಳು ಅತಿ ಶೀಘ್ರ ಆಯಾಸಗೊಳ್ಳುತ್ತವೆ .

ಪಟ್ಟಿರಹಿತ ಸ್ನಾಯುಗಳು

ಈ ಸ್ನಾಯುಗಳಲ್ಲಿ ನೀಳವಾದ , ಕದಿರಿ ಹರದ , ಯು ಕಂಕುಗಳಿವೆ . ಅವುಗಳಲ್ಲಿ ಅಡ್ಡಪಟ್ಟಿಗಳಿಲ್ಲ . ಅನೇಕ ಸ್ನಾಯುತಂತುಗಳು ಒಟ್ಟಿಗೆ ಒಂದು ಹೊರೆಯಿಂದ ಅವೃತವಾಗಿದ್ದು ಅದನ್ನು ಸ್ನಾಯು ಎಂದು ಕರೆಯಲಾಗುತ್ತದೆ .

ನ್ಯಾಯುಕಂಬಗಳು ಒಂದೇ ಒಂದು ಕೋಶಕೇಂದ್ರವನ್ನು ಹೊಂದಿವೆ . ಅನ್ನನಾಳ , ಜಪದ ಹಾಗೂ ಕರುಳುಗಳಲ್ಲಿ ಕಂಡುಬರುವ ಪರಿಕ್ರಮಣ ಚಲನೆಗೆ ಈ ಸ್ನಾಯುಗಳು ಕಾರಣವಾಗುತ್ತವೆ .

ಇವು ದೇಹಾವಾಕರ ಅತ್ತಿಗಳಲ್ಲಿಯೂ ಕಂಡುಬರುತ್ತವೆ . ಅಲ್ಲದೆ , ಮೂತ್ರಪಿಂಡ , ರಕ್ತನಾಳಗಳು ಹಾಗೂ ಈ ಸ್ನಾಯುಗಳಿಗೆ ಅನೈಚ್ಛಿಕ ಸ್ನಾಯುಗಳು ಎಂದೂ ಹೆಸರಿದೆ .

ಹೃದಯ ಸ್ನಾಯುಗಳು

ಇಲ್ಲಿ ಸ್ನಾಯು ತಂತುಗಳು ನೀಳವಾಗಿ ಕೊಳವೆಯಾಕಾರದಲ್ಲಿದ್ದು , ಶಾಖೆಗಳಾಗಿ ಒಡೆಯುತ್ತವೆ ಶಾಖೆಗಳು ಪರಸ್ಪರ ಸಂಬಂಧಿಗಳು ,

ಅನೈಚ್ಛಿಕ ಸ್ನಾಯುಗಳಾಗಿರುವ ಇವು ಅತ್ಯಂತ ಲಯಬದ್ಧವಾದ ( rhythmic ) ಸಂಕುಚನ ಮತ್ತು ವಿಕಸನಗಳನ್ನು ಕೊಡುತ್ತವೆ . ಇವು ಹೃದಯದಲ್ಲಿ ಮಾತ್ರ ಕಂಡುಬರುತ್ತವೆ . ಈ ಸ್ನಾಯುಗಳು ಆಯಾಸಗೊಳ್ಳುವುದಿಲ್ಲ .

ಸಂಯೋಜಕ ಅಂಗಾಂಶ

ದೇಹದ ವಿವಿಧ ಅಂಗಾಂಶಗಳನ್ನು ಒಂದಕ್ಕೊಂದು ಹೊಂದಿಸುವ ಹಾಗೂ ದೇಹಕ್ಕೆ ಆಧಾರ ನೀಡುವ ವಿವಿಧ ಅಂಗಾಂಶಗಳನ್ನು ಸೇರಿಸಿ ಸಂಯೋಜಕ ಅಂಗಾಂಶ ಎಂದು ಕರೆಯುತ್ತಾರೆ .

ಮೂಲಭೂತವಾಗಿ ಸಂಯೋಜಕ ಅಂಗಾಂಶದಲ್ಲಿ ಜೀವಕೋಶಗಳು ಮತ್ತು ತಂತುಗಳು ಒಂದು ಬಗೆಯ ಮಾತೃಕೆಯಲ್ಲಿ ಕಂಡು ಬರುತ್ತವೆ . ಮಾತೃಕೆಯು ಮೃದುವಾಗಿರಬಹುದು ಇಲ್ಲವೇ ಗಟ್ಟಿಯಾಗಿರಬಹುದು ಇಲ್ಲವೇ ದ್ರವ ರೂಪದಲ್ಲಿರಬಹುದು .

ಜೀವಕೋಶಗಳು ಸಡಿಲವಾಗಿ ಜೋಡಣೆಗೊಂಡಿರುವುದರಿಂದ ಅಂತರ್ ಕೋಶೀಯ ಅವಕಾಶಗಳು ಹೆಚ್ಚು ಪ್ರಮಾಣದಲ್ಲಿವೆ . ಸಂಯೋಜಕ ಅಂಗಾಂಶವು ಅತ್ಯಂತ ಹೆಚ್ಚು ರಕ್ತಪರಿಚಲನೆಯಿಂದ ಕೂಡಿದೆ .

ಬೇರೆ ಬೇರೆ ಅಂಗಾಂಶಗಳನ್ನು ಜೋಡಿಸುವ ಕಾರಣ , ಇದಕ್ಕೆ ಬಂಧಕ ಅಂಗಾಂಶ ಎಂದು ಹೆಸರಿದೆ . ಪ್ರಾಣಿಗಳ ದೇಹದಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕಂಡುಬರುವ ಅಂಗಾಂಶ ಇದು .

ಸಂಯೋಜಕ ಅಂಗಾಂಶವನ್ನು ಮಾತೃಕೆಯ ಆಧಾರದ ಮೇಲೆ ಮೂರು ಬಗೆಗಳಾಗಿ ವರ್ಗೀಕರಿಸಲಾಗುತ್ತದೆ .

ಸಡಿಲ ಸಂಯೋಜಕ ಅಂಗಾಂಶಸಡಿಲ ಸಂಯೋಜಕ ಅಂಗಾಂಶ

  1. ಏರಿಯೋಲಾರ್ ಅಂಗಾಂಶ

ಇದು ದೇಹದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ . ಚರ್ಮದ ಕೆಳ ಪದರ- ಡರ್ಮಿಸ್ ಹಾಗೂ ಅದರ ಕೆಳಭಾಗದಲ್ಲಿ ಕಂಡುಬರುವ ಈ ಅಂಗಾಂಶ , ಚರ್ಮಕ್ಕೆ ಸ್ನಾಯುಗಳನ್ನು ಬಂಧಿಸುವಲ್ಲಿ ನೆರವಾಗುತ್ತದೆ .

ಲೋಳೆ ಪೊರೆಗಳಲ್ಲಿ ಹಾಗೂ ರಕ್ತನಾಳ ಮತ್ತು ನರಗಳ ಸುತ್ತಲೂ ಈ ಅಂಗಾಂಶ ಕಂಡುಬರುತ್ತದೆ . ಮೂರು ಬಗೆಯ ತಂತುಗಳನ್ನು ಇದರಲ್ಲಿ ಗುರುತಿಸಬಹುದು

 ಕೊಲ್ಯಾಜೆನ್ ಅಥವಾ ಬಿಳೀತಂತುಗಳು : ಇವು ಯಾವಾಗಲೂ ಗುಂಪುಗಳಲ್ಲಿರುತ್ತವೆ .

ಇಲಾಸ್ಟಿಕ್ ಅಥವಾ ಹಳದಿ ತಂತುಗಳು : ಇವು ಬಿಡಿಬಿಡಿಯಾಗಿ ಕಂಡುಬರುತ್ತವೆ .

ಜಾಲ ರೂಪೀ ತಂತುಗಳು : ಜಾಲರೂಪದಲ್ಲಿರುವ ತಂತುಗಳು . ಮಾತೃಕೆಯಲ್ಲಿ ನಾಲ್ಕು ಬಗೆಯ ಜೀವಕೋಶಗಳನ್ನು ಗುರುತಿಸಬಹುದು .

 ಫೈಬ್ರೋಬ್ಲಾಸ್ಟ್‌ಗಳು : ದೊಡ್ಡ ಗಾತ್ರದ , ಚಪ್ಪಟೆಯಾದ , ಶಾಖೆಯೊಡೆದ ಕೋಶಗಳು . ಇವು ತಂತುಗಳನ್ನು ಸ್ರವಿಸುತ್ತವೆ .

 ಪ್ಲಾಸ್ಟಾಕೋಶಗಳು : ಸಣ್ಣ ಕೋಶಕೇಂದ್ರವಿರುವ ಅಂಡಾಕಾರದ ಕೋಶಗಳು . ಇವು ಪ್ರತಿಕಾಯಗಳನ್ನು ಉತ್ಪಾದಿಸುತ್ತವೆ .

 ಮ್ಯಾಕ್ರೋಫೇಜ್‌ಗಳು : ನಿರ್ದಿಷ್ಟ ಆಕಾರವಿಲ್ಲದ , ಸದಾ ಅಲೆದಾಡುವ ಜೀವಕೋಶಗಳು , ಇವು ಸೂಕ್ತ ಜೀವಿಗಳನ್ನು ಭಕ್ಷಿಸಬಲ್ಲ ಜೀವಕೋಶಗಳು ,

ಮಾಸ್ಟ್ ಕೋಶಗಳು ( mast Cells ) : ದುಂಡಾದ ಕೋಶಕೇಂದ್ರ ಹಾಗೂ ಕಣ ಸಹಿತ ಕೋಶದ್ರವ್ಯವುಳ್ಳ ದೊಡ್ಡ ಜೀವಕೋಶಗಳು . ಇವು ಸೀರೋಟೋನಿನ್ ( Serotonin ) , ಹೆಪ್ಯಾರಿನ್ ( heparin ) ಹಾಗೂ ಹಿಸ್ಟಮಿನ್ ( histamin ) ನಂತಹ ವಸ್ತುಗಳನ್ನು ಸ್ರವಿಸುತ್ತವೆ .

2.ಅಡಿಪೋಸ್ ಅಂಗಾಂಶ

ಈ ಅಂಗಾಂಶದಲ್ಲಿ ಒತ್ತೊತ್ತಾಗಿ ಜೋಡಣೆಗೊಂಡಿರುವ ಕೊಬ್ಬಿನ ಸಂಗ್ರಹವಿರುವ ಜೀವಕೋಶಗಳಿವೆ , ಜೀವಕೋಶಗಳ ಸುತ್ತ ಜಾಲರೂಪೀ ತಂತುಗಳಿವೆ .

ಆಹಾರವನ್ನು ಸಂಗ್ರಹಿಸಿ , ದೇಹಕ್ಕೆ ಅವಶ್ಯಕವಾದಾಗ ಅವನ್ನು ಈ ಜೀವಕೋಶಗಳು ಒದಗಿಸುತ್ತವೆ . ಅಡಿಪೋಸ್ ಅಂಗಾಂಶವು ದೇಹದ ತಾಪಮಾನವನ್ನು ಕಾಪಾಡುವುದರ ಜೊತೆಗೆ ರಕ್ಷಣೆಯನ್ನೂ ನೀಡುತ್ತದೆ .

3.ಜಾಲರೂಪೀ ಅಂಗಾಂಶ :

ಅತೀ ಹೆಚ್ಚು ಜಾಲರೂಪೀ ತಂತುಗಳನ್ನು ಹೊಂದಿರುವ ಈ ಅಂಗಾಂಶ , ದೇಹದ ಪ್ರಮುಖ ಅಂಗಗಳಾದ ಪಿತ್ತಜನಕಾಂಗ , ಗುಲ್ಬ , ಅಸ್ಥಿರಜ್ಜು , ಟಾನ್ಸಿಲ್‌ಗಳಿಗೆ ಅವಶ್ಯಕ ಆಧಾರವನ್ನು ಒದಗಿಸುತ್ತದೆ .

ಜೊತೆಗೆ ಆಹಾರ ನಾಳ ಹಾಗೂ ಉಸಿರ್ನಾಳದ ಲೋಳೆ ಪೊರೆಗಳಿಗೂ ಆಧಾರವನ್ನು ಒದಗಿಸುತ್ತದೆ .

4.ಸ್ನಾಯು ರಜ್ಜು ಮತ್ತು ಆಸ್ತಿರದ್ದು 

ಸ್ನಾಯು ರಜ್ಜು ( tendons ) ಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕೊಲ್ಯಾಜಿನ್ ತಂತುಗಳು ಕಂಡುಬರುತ್ತವೆ . ಸ್ನಾಯು ರಜ್ಜುಗಳು ಸ್ನಾಯುಗಳನ್ನು ಮೂಳೆಗಳಿಗೆ ಜೋಡಿಸಲು ಸಹಾಯಕವಾಗಿವೆ .

ಅಸ್ಥಿರಜ್ಜು ( ligaments ) ಗಳಲ್ಲಿ ಅತಿ ಹೆಚ್ಚು ಪ್ರಮಾಣದ ಇಲ್ಯಾಸ್ಟಿಕ್ ತಂತುಗಳು ಕಂಡುಬರುತ್ತವೆ . ತಂತುಕಟ್ಟುಗಳು ಮೂಳೆಗಳನ್ನು ಒಂದಕ್ಕೊಂದು ಬಂಧಿಸಲು ನೆರವಾಗುತ್ತವೆ ಹಾಗೂ ಮೂಳೆಗಳ ಚಲನೆಗೆ ಸಹಕಾರಿಯಾಗಿವೆ .

 ದಟ್ಟ ಸಂಯೋಜಕ ಅಂಗಾಂಶ 

ಮಾತೃಕೆಯು ದಟ್ಟವಾಗಿರುವ ಕಾರಣ ಇದಕ್ಕೆ ದಟ್ಟ ಸಂಯೋಜಕ ಅಂಗಾಂಶ ಎಂದು ಹೆಸರು . ಮಾತೃಕೆಯಲ್ಲಿ ಕ್ಯಾಲಿಯಂ ಕಾರ್ಬೋನೇಟ್ , ಕ್ಯಾಲ್ಸಿಯಂ ಫಾಸ್ಟೇಟ್‌ನಂಥ ಲವಣಗಳು ಕಂಡು ಬರುತ್ತವೆ .

ದಟ್ಟ ಸಂಯೋಜಕ ಅಂಗಾಂಶವನ್ನು ಎರಡು ಬಗೆಗಳಾಗಿ ವಿಂಗಡಿಸಬಹುದು .

  1. ಮೃದ್ವಸ್ಥಿಮೃದ್ವಸ್ಥಿ

ಮೃದ್ವಸ್ಥಿಯಲ್ಲಿ ಕಾಂಡ್ರಿನ್ ( chondrin ) ಎಂಬ ಪಾರದರ್ಶಕ ಮಾತ್ರಕ್ಕೆ ಇದೆ . ವಾತ್ಮಕೆಯಲ್ಲಿರುವ ಸ್ಥಳಾವಕಾಶಗಳಲ್ಲಿ oda ( chondrocytes ) ಜೀವಕೋಶಗಳಿವೆ .

ಇವು ಬಿಡಿಯಾಗಿ ಅಥವ ಎರಡು ಅಥವಾ ನಾಲ್ಕರ ಗುಂಪಿನಲ್ಲಿ ಕಂಡು ಬರುತ್ತವೆ . ಕಾಂಡೋಸೈಟ್‌ಗಳು ಮಾತೃಕೆಯನ್ನು ಸ್ರವಿಸುತ್ತವೆ .

ಮಾತೃಕೆಯಲ್ಲಿ ಬಿಳಿ ಹಾಗೂ ಹಳದಿ ತಂತುಗಳು ಕಂಡು ಬರುತ್ತವೆ , ಮಾತೃಕೆಯ ಹಾಗೂ ತಂತುಗಳ ವಕೀಭವನ ಸೂಚ್ಯಂಕ ( refractive index ] ಒಂದೇ ಆಗಿರುವುದರಿಂದ ತಂತುಗಳ ಇರುವಿಕೆ ಕಾಣಿಸುವುದಿಲ್ಲ .

ಮೃದ್ವಸ್ಥಿ ಹೊರಭಾಗದಲ್ಲಿ ಪೆರಿಕಾಂಡ್ರಿಯಮ್ ( perichondrium ) ಎಂಬ ಸಂಯೋಜಿಕ ಅಂಗಾಂಶದ ಹೊದಿಕೆ ಇದೆ .

ರಕ್ತ ಸಂಚಾರವಿರುವ ಈ ಸೇರೆ ಕಾಂಡ್ರೋಸೈಟ್‌ಗಳಿಗೆ ಪೋಷಕಾಂಶ ಹಾಗೂ ಆಮ್ಲಜನಕವನ್ನು ಒದಗಿಸುತ್ತದೆ . ಅಲ್ಲದೇ ಇದು ಹೊಸ ಜೀವಕೋಶಗಳ ಉತ್ಪತ್ತಿಗೆ ಕಾರಣವಾಗುತ್ತದೆ . ‌

ಉಸಿರ್ನಾಳ ಹಾಗೂ ಅದರ ಶಾಖೆಗಳ ಸುತ್ತ ಮೃಷ್ಟಯು ‘ C ‘ ಆಕಾರದ ಉಂಗುರಗಳ ರೂಪದಲ್ಲಿ ಕಂಡುಬರುತ್ತದೆ .

ಧ್ವನಿ ಪೆಟ್ಟಿಗೆ , ಎಪಿಗ್ಲಾಟಿಸ್ , ಯೊಸ್ಪೇಷಿಯನ್ ನಾಳದ ಭಿತ್ತಿ ಹಾಗೂ ಹೊರಕಿವಿಗಳಲ್ಲಿ ಕಂಡು ಬರುವ ಮೃದ್ವಸ್ಥಿಯಲ್ಲಿ ಹೆಚ್ಚಿನ ಪ್ರಮಾಣದ ಇಲ್ಯಾಸ್ಟಿಕ್ ತಂತುಗಳಿವೆ . ಇದಕ್ಕೆ ಇಲ್ಯಾಸ್ಟಿಕ್ ಮೃದ್ವಸ್ಥಿ ಎಂದು ಹೆಸರು

ಕಶೇರು ಸಂಭದಲ್ಲಿರುವ ಕಶೇರು ಮಣಿಗಳ ನಡುವೆ ಕಂಡು ಬರುವ ಮೃದ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಾಜನ್ ತಂತುಗಳಿವೆ .

ಇದಕ್ಕೆ ತಂತುರೂಪಿ ಮೈಧ್ಯ ಎಂದು ಹೆಸರು , ಇವು ದಾಗುವ ಹಾಗೂ ಹಿಗ್ಗುವ ಚಲನೆಗಳಿಗೆ ಪೂರಕವಾಗಿವೆ .

2.ಮೂಳೆ ಅಥವಾ ಆಸ್ತಿ ಅಂಗಾಂಶ ( Bone Ussue )ಮೂಳೆ ಅಥವಾ ಆಸ್ತಿ ಅಂಗಾಂಶ

ದೇಹದ ಕಂಕರ ವ್ಯವಸ್ಥೆಯ ಅತಿ ಮುಖ್ಯಭಾಗವನ್ನು ಮೂಳೆ ಅಂಗಾಂಶ ಪ್ರತಿನಿಧಿಸುತ್ತದೆ . ಈ ಅಂಗಾಂಶವು ನಮ್ಮ ದೇಹದ ಒಟ್ಟು ತೂಕದ ಬಹು ಭಾಗಕ್ಕೆ ಕಾರಣವಾಗಿದೆ .

ಮೂಳೆ ಅಂಗಾಂಶದಲ್ಲಿ ಕ್ಯಾಲ್ಸಿಯಂನಿಂದ ಕೂಡಿದ ದಟ್ಟ ಮಾತ್ರಕೆಯಿದೆ .

ಇದರಲ್ಲಿ ಕೊಲ್ಯಾಜನ್ ತಂತುಗಳು ,

ಪೊಟೀನ್‌ಗಳು ಜೊತೆಗೆ ಲವಣಗಳಾದ ಕ್ಯಾಲ್ಸಿಯಂ ಫಾಸ್ಟಟ್ ,

ಪೊಟ್ಯಾಸಿಯಂ ,

ಮೆಕ್ಸಿಯಂನ ಕ್ಲೋರೈಡ್‌ಗಳು ಕಂಡು ಬರುತ್ತವೆ .

ಮೂಳೆಯ ರಚನೆಯು , ಒತ್ತಡ ಹಾಗೂ ಶ್ರಮವನ್ನು ತಡೆಯುವುದಕ್ಕೆ ಪೂರಕವಾಗಿದೆ .

ಕೈಕಾಲುಗಳಲ್ಲಿನ ನೀಳವಾದ ಮತ್ತು ಬಲಿಷ್ಠವಾದ ಮೂಳೆಗಳಲ್ಲಿ ಆಸ್ತಿಮತ್ತೆ ( Bone marrow ) ಎಂಬ ದವವಿದೆ , ರಕ್ತನಾಳಗಳು ಹಾಗೂ ಕೊಬ್ಬಿನ ಪದಾರ್ಥಗಳಿರುವ ಈ ದ್ರವ , ರಕ್ತದ ಜೀವಕೋಶಗಳನ್ನು ಉತ್ಪಾದಿಸುತ್ತದೆ .

ಇಂದು ಮೂಳೆಯ ಅಡ್ಡ ಸೀಳಿಕೆಯಲ್ಲಿ ಈ ಕೆಳಗಿನ ವಿವರಗಳನ್ನು ಗಮನಿಸಬಹುದು .

ಮೂಳೆ ಅಂಗಾಂಶದ ರಚನಾತ್ಮಕ ಘಟಕವೇ ಹಾವರ್ಷಿಯನ್ ವ್ಯವಸ್ಥೆ ( Haversian system ) ಇದರ ಮಧ್ಯಭಾಗದಲ್ಲಿ ಹಾವರ್ಷಿಯನ್ ನಾಳವಿದ್ದು , ಅದರಲ್ಲಿ ರಕ್ತನಾಳ ಮತ್ತು ನರಗಳು ಕಂಡು ಬರುತ್ತವೆ .

ಈ ನಾಳದ ಸುತ ಇದೆ . ಆಸೀನ್ಸ್ ( Ossein ) ಎಂಬ ಮಾತೃಕೆ ಇದರಲ್ಲಿ ಮುಖ್ಯವಾಗಿ ಕ್ಯಾಲ್ಸಿಯಂ ಫಾಸ್ಟೇಟಿನ ಲವಣವಿದೆ .

ಮಾತೃಕೆಯು ಒಂದರ ಸುತ್ತ ಇನ್ನೊಂದರಂತೆ ( concentric ) ಹಲವು ಪದರಗಳಲ್ಲಿ ಜೋಡಣೆಯಾಗಿದೆ . ಇವುಗಳಿಗೆ ಲ್ಯಾಮೆಲ್ಲೇ ( lamellae ) ಎಂದು ಹೆಸರು .

ಇವುಗಳ ನಡುವೆ ದ್ರವ ತುಂಬಿದ ಸೂಕ್ಷ್ಮ ರಂಧ್ರಗಳಿವೆ . ಲ್ಯಾಕ್ಯುನೇ ( lacunae ) ಎಂದು ಕರೆಯಲಾಗುವ ಈ ರಂಧ್ರಗಳಲ್ಲಿ ಆಸ್ತಿಯೋ ಸೈಟ್ ( osteocytes ) ಎಂಬ ಜೀವಕೋಶಗಳಿವೆ .

ಎಲ್ಲಾ ಲ್ಯಾಮೆಲ್ಲಾಗಳನ್ನು ಸಂಪರ್ಕಿಸುವ ಕೆನಲಿಕ್ಯುಲೈ ( canaliculi ) ಎಂಬ ಸೂಕ್ಷ್ಮನಾಳಗಳಿವೆ .

ಈ ಕೆನಲಿಕ್ಯುಲೈಗಳ ಮೂಲಕ ಎಲ್ಲಾ ಆಸ್ಟ್ರಿಯೋಸೈಟ್‌ಗಳು ಒಂದರೊಡನೊಂದು ಸಂಪರ್ಕಹೊಂದಿವೆ . ಎಲ್ಲಾ ಹ್ಯಾವರ್ಷಿಯನ್ ನಾಳಗಳು ವೋಲ್ಡ್‌ಮನ್ ( Volkmann ) ನಾಳಗಳು ಎಂಬ ಅಡ್ಡನಾಳದ ಮೂಲಕ ಒಂದಕ್ಕೊಂದು ಸಂಪರ್ಕ ಸಾಧಿಸುತ್ತವೆ .

ದ್ರವರೂಪೀ ಸಂಯೋಜಕ ಅಂಗಾಂಶ

ರಕ್ತರಕ್ತ

ರಕ್ತ ಮತ್ತು ದುಗ್ಧರಸ ( lymph ) ಎಂಬ ಎರಡು ದವರೂಪೀ ಸಂಯೋಜಕ ಅಂಗಾಂಶಗಳಿವೆ ಇವುಗಳಲ್ಲಿ ಮಾತೃಕೆ ದ್ರವರೂಪದಲ್ಲಿರುತ್ತದೆ . ಇದಕ್ಕೆ ಪರಿಚಲನಾ ಅಂಗಾಂಶ ಎಂದೂ ಹೆಸರಿದೆ .

ಇದರ ದ್ರವರೂಪದ ಮಾತೃಕೆಗೆ ಪ್ಲಾಸ್ಮಾ ಎಂದು ಹೆಸರು . ಪ್ಲಾಸ್ಮಾದಲ್ಲಿ ಕೆಂಪುರಕ್ತ ಕಣಗಳು , ಬಿಳಿ ರಕ್ತಕಣಗಳು ಹಾಗೂ ಕಿರುತಟ್ಟೆಗಳು ಕಂಡುಬರುತ್ತವೆ .

ಪ್ಲಾಸ್ಮಾ ದ್ರವರೂಪದಲ್ಲಿರುವುದರಿಂದ ದೇಹದ ವಿವಿಧ ಭಾಗಗಳಿಗೆ ವಸ್ತುಗಳನ್ನು ಸಾಗಣೆ ಮಾಡಲು ಸುಲಭ ಸಾಧ್ಯವಾಗುತ್ತದೆ .

ಕೆಂಪುರಕ್ತ ಕಣಗಳು

ಇವು ದೇಹದ ಎಲ್ಲ ಜೀವಕೋಶಗಳಿಗೆ ಆಕ್ಸಿಜನ್ ಒದಗಿಸುತ್ತದೆ , ಅಲ್ಲದೇ ಸಂಖ್ಯೆ ಪ್ರತಿ ಒಂದು ಕ್ಯೂಬಿಕ್ ಮಿಲಿಮೀಟರ್ ( Imm ) ರಕ್ತದಲ್ಲಿ ( ಅಂದಾಜು ಒಂದು ಹನಿ ) ಸುಮಾರು 4.5 ರಿಂದ 5.5 ಮಿಲಿಯನ್‌ಗಳಷ್ಟಿರುತ್ತದೆ .

ವೃತ್ತಾಕಾರದ ದ್ವಿಮ್ಮ ತಟ್ಟೆಗಳ ರೂಪದಲ್ಲಿರುವ ಕೆಂಪು ರಕ್ತಕಣಗಳು 100 ರಿಂದ 120 ದಿನಗಳ ಜೀವಿತಾವಧಿಯವು , ಅವು ಅಸ್ಥಿಮಜ್ಜೆಯಲ್ಲಿ ಉತ್ಪತ್ತಿಯಾಗುತ್ತವೆ .

ಅವುಗಳಲ್ಲಿ ಆಕ್ಸಿಜನ್ ಸಾಗಣೆಗೆ ನೆರವಾಗುವ ಕಬ್ಬಿಣದ ಅಂಶವಿರುವ ಹೀಮೋಗ್ಲೋಬಿನ್ ಎಂಬ ವರ್ಣಿಕೆ ಇರುತ್ತದೆ

 ಬಿಳಿ ರಕ್ತಕಣಗಳು

ಇವು ದೊಡ್ಡದಾಗಿದ್ದು ಕೋಶಕೇಂದ್ರ ಸಹಿತವಾದ ಜೀವಕೋಶಗಳು , ಅವುಗಳ ಸಂಖ್ಯೆ Imma ರಕ್ತದಲ್ಲಿ ಸುಮಾರು 6000 ದಿಂದ 10,000 ದಷ್ಟಿರುತ್ತದೆ . ಈ ಜೀವಕೋಶಗಳು ಅಮೀಬಾ ಆಕಾರದಲ್ಲಿರುತ್ತವೆ .

ಅವುಗಳ ಕೋಶದ್ರವ್ಯದಲ್ಲಿರುವ ಕಣಗಳ ಆಧಾರದ ಮೇಲೆ ಎರಡು ಬಗೆಯನ್ನು ಗುರುತಿಸಲಾಗುತ್ತದೆ .

ಕಣ ಸಹಿತ ಬಿಳಿರಕ್ತ : ಕೋಶಗಳಲ್ಲಿ ಕೋಶದ್ರವ್ಯವು ಸೂಕ್ಷ್ಮ ಕಣಗಳಿಂದಾಗಿದೆ ಇವುಗಳಲ್ಲಿ ನ್ಯೂಟ್ರೋಫಿಲ್ ( neutrophils ) , ಇಯೋಸಿನೋಫಿಲ್ ( eosinophils ) ಹಾಗೂ ಬೇಸೋಫಿಲ್ಸ್ ( basophils ) ಎಂಬ ಮೂರು ವಿಧಗಳಿವೆ

ಕಣರಹಿತ ಬಿಳಿರಕ್ತ : ಕೋಶಗಳಲ್ಲಿ ( Agranulocytes ) ಕೋಶದ್ರವ್ಯವು ಕಣವನ್ನು ಹೊಂದಿರುವುದಿಲ್ಲ , ಕೋಶಕೇಂದ್ರ ದೊಡ್ಡದಾಗಿದ್ದು ಹಾಲೆಗಳಿವೆ . ಇವುಗಳಲ್ಲಿ ಮಾನೋಸೈಟ್ ( monocyte ) ಹಾಗೂ ಲಿಂಫೋಸೈಟ್ ( lymphocyte ) ಎಂಬ ಎರಡು ವಿಧಗಳಿವೆ .

ಕಿರುಪಟ್ಟೆಗಳು

ದೊಡ್ಡ ಕೋಶಗಳ ಒಡೆದ ರೂಪದಲ್ಲಿ ಕಂಡು ಬರುತ್ತವೆ . ಇವುಗಳ ಸಂಖ್ಯೆ Imm ‘ ಗಾತ್ರದಲ್ಲಿ ಸುಮಾರು 2,50,000 ಇರುತ್ತದೆ . ಇವು ರಕ್ತ ಹೆಪ್ಪುಗಟ್ಟುವ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ .

ಲಿಂಪ್‌ ಅಥವಾ  ದುಗ್ಧರಸ

ರಕ್ತದಂತೆಯೇ ಇರುವ ದುಗ್ಧರಸವು ಒಂದು ಬಣ್ಣರಹಿತ ದ್ರವರೂಪೀ ಅಂಗಾಂಶ , ಕೆಂಪು ರಕ್ತ ಕಣಗಳು ಹಾಗೂ ಕೆಲವು ಪೋಟೀನ್‌ಗಳು ದುಗ್ಧರಸದಲ್ಲಿ ಇರುವುದಿಲ್ಲ .

ವಿಶೇಷವಾದ ದುಗ್ಧರಸ ನಾಳಗಳ ಮೂಲಕ ದುಗ್ಧರಸವು ಸಂಚರಿಸುತ್ತವೆ . ಅಲ್ಲಲ್ಲಿ ಈ ನಾಳಗಳು ದುಗ್ಧರಸ ಗ್ರಂಥಿಗಳು ಹಾಗೂ ದುಗ್ಧರಸ ಗಂಟುಗಳನ್ನು ( nodes ) ಉಂಟುಮಾಡುತ್ತವೆ .

ದುಗ್ಧರಸ ನಾಳಗಳು ಅಂತಿಮವಾಗಿ ದುಗ್ಧರಸವನ್ನು ರಕ್ತ ಪರಿಚಲನಾ ವ್ಯವಸ್ಥೆಗೆ ಸೇರಿಸುತ್ತವೆ .

ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಅತ್ಯವಶ್ಯಕ ಘಟಕಗಳಾದ ಪ್ರತಿಕಾಯಗಳನ್ನು ದುಗ್ಧರಸ ಉತ್ಪಾದಿಸುತ್ತದೆ .

ಒಂದು ಬಗೆಯ ಬಿಳಿ ರಕ್ತಕಣಗಳಾದ , ಲಿಂಫೋಸೈಟ್ ಕೋಶಗಳು ಬ್ಯಾಕ್ಟಿ ರಿಯಾ ಹಾಗೂ ಅನವಶ್ಯಕ ವಸ್ತುಗಳನ್ನು ನಿರ್ಮೂಲನ ಮಾಡುವಲ್ಲಿ ನೆರವಾಗುತ್ತವೆ .

  ನರ ಅಂಗಾಂಶ  ನರ ಅಂಗಾಂಶ

ಜೀವಿಗಳಲ್ಲಿ ಪ್ರಚೇತನ ( irritability ) ಒ ೦ ದು ಪ್ರಮುಖ ಲಕ್ಷಣ ಎಂಬುದು ನಿಮಗೆ ತಿಳಿದಿದೆ . ಈ ಲಕ್ಷಣ ನರ ಅ ೦ ಗಾ ೦ ಶಗಳಲ್ಲಿ ಪ್ರಮುಖವಾಗಿ ಅಭಿವೃದ್ಧಿ ಯಾಗಿದೆ .

ನರ ಅಂಗಾಂಶವು ದೇಹದ ಬಾಹ್ಯ ಹಾಗೂ ಆಂತರಿಕ ಪ್ರಚೋದನೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ .

ಇದು ಮಾಹಿತಿಯನ್ನು ದೇಹದ  ವಿವಿಧ ಭಾಗಗಳಿಂದ ನರಕೇಂದ್ರಗಳಿಗೆ ನರಾವೇಗಗಳ ರೂಪದಲ್ಲಿ ಕೊಂಡೊಯ್ಯುತ್ತದೆ .

ಅಲ್ಲಿಂದ ಪ್ರತಿಕ್ರಿಯೆಗಳನ್ನು ಅಷ್ಟೇ ವೇಗದಲ್ಲಿ ತರುತ್ತವೆ . ನರ ಅಂಗಾಂಶದ ರಚನೆಯ ಹಾಗೂ ಕಾರ್ಯದ ಘಟಕವನ್ನು ನರಕೋಶ ( neuron ) ಎಂದು ಕರೆಯಲಾಗುತ್ತದೆ .

ದೊಡ್ಡ ಕೋಶಕೇಂದ್ರವನ್ನು ಹೊಂದಿರುವ ಕೋಶಕಾಯಕ್ಕೆ ಸೈಟಾನ್ ( cyton ) ಎಂದು ಹೆಸರು .

ಅದರಿಂದ ಹೊರಚಾಚುವ ಚಿಕ್ಕ ರಚನೆಗಳಿಗೆ ಡೆಂಡ್ರೈಟ್‌ಗಳು ( dendrites ) ಎಂದು ಹೆಸರು . ಇದರಲ್ಲಿ ನೀಳವಾಗಿರುವ ಶಾಖೆಗೆ ಆಕ್ಸಾನ್ ( axon ) ಎಂದು ಹೆಸರು .

ಆಕ್ಸಾನ್ ತನ್ನ ತುದಿಯಲ್ಲಿ ಹೊಂದಿರುವ ಶಾಖೆಗಳಿಗೆ ಟೀಲೋಡೆಂಡ್ರಾನ್‌ಗಳೆಂದು ( telodendrons ) ಎಂದು ಹೆಸರು . ಆಕ್ಸಾನ್‌ನ ಸುತ್ತ ಕೊಬ್ಬಿನ ಪದರದ ಹೊದಿಕೆಯಿದ್ದು ಅದಕ್ಕೆ ಮಯ

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳು :

 

ಸಿರಾಮಿಕ್

ಕಾರ್ಬನ್

ಏಡ್ಸ್

ಸಸ್ಯ ಜೀವಕೋಶ 


0 Comments

Leave a Reply

Avatar placeholder

Your email address will not be published. Required fields are marked *