ಪ್ರಸ್ತಾವನೆಯ ಮಹತ್ವ
( Importance of Preamble )
ಪ್ರಸ್ತಾವನೆಯ ಮಹತ್ವ, importance of preamble, significance of preamble, why is the preamble important, why is preamble very important
ಪಂಡಿತ್ ಜವಹರಲಾಲ್ ನೆಹರುರವರು ನೀಡಿದ ಪ್ರಸ್ತಾವನೆಯು ಭಾರತದ ಸಂವಿಧಾನದ ರಚನಾಕಾರರಿಗೆ ನಿರ್ದಿಷ್ಟವಾದ ಧೈಯಗಳನ್ನು , ದಿಕ್ಕನ್ನು ಹಾಗೂ ಸಂವಿಧಾನ ದಲ್ಲಿ ಅಳವಡಿಸಬೇಕಾದ ಅಂಶವನ್ನು ಸಂಕ್ಷಿಪ್ತವಾಗಿ ಮಾರ್ಗದರ್ಶನ ಒದಗಿಸಿತು . ಇದು ಒಂದು ನಿರ್ಣಯಕ್ಕಿಂತಲೂ ಹೆಚ್ಚಾಗಿತ್ತು .
ಒಂದು ಘೋಷಣೆಯಾಗಿತ್ತು , ಧೃಡ ನಿಶ್ಚಯವಾಗಿತ್ತು . ಅರ್ಪಣೆ ಮತ್ತು ತಿಳುವಳಿಕೆಯಾಗಿತ್ತು ಯಾವುದೇ ಗುಂಪು ಅಥವಾ ಪಕ್ಷ ಹಾಗೂ ಭಾರತದ ಯಾವುದೇ ವ್ಯಕ್ತಿಯು ಪ್ರಶ್ನಿಸಲಾಗದಂತಹ ಕೆಲವು ಮೂಲ ತತ್ವಗಳನ್ನು ಒಳಗೊಂಡಿತ್ತು . ಇದು ಇದು ರಾಜಕೀಯ , ಧಾರ್ಮಿಕ , ಹಾಗೂ ನೈತಿಕ ಮೂಲ ತತ್ವಗಳನ್ನು ಹಾಗೂ ಮೌಲ್ಯಗಳನ್ನು ಸಂವಿಧಾನಕ್ಕೆ ಒದಗಿಸಿತು .
ಇದರ ಆಧಾರದ ಮೇಲೆ ಸಂವಿಧಾನ ರಚನಾಕಾರರು ಸಂವಿಧಾನವನ್ನು ರಚಿಸಲು ಸಹಕಾರಿಯಾಯಿತು . ಇದರ ಮಹತ್ವವನ್ನು ಅರಿತು ಸಂವಿಧಾನ ರಚನಾ ಸಭೆಯ ಸದಸ್ಯರಾದ ಸರ್ , ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ರವರು ಭಾರತದ ಪ್ರಸ್ತಾವನೆಯ ಬಗ್ಗೆ ಹೀಗೆ ಹೇಳುತ್ತಾರೆ .
“ ಪ್ರಸ್ತಾವನೆಯು ಭಾರತದ ಸಂವಿಧಾನವು ಹೇಗಿರಬೇಕೆಂದು ಬಹಳ ದಿನದವರೆಗೆ ಯೋಚಿಸಿದ ಹಾಗೂ ಕಂಡ ಕನಸ್ಸಿನಂತಿದೆ ‘ ಎಂದಿದ್ದಾರೆ .
ಅದೇ ರೀತಿ ‘ ಕೆ.ಎಂ.ಮುನ್ನಿ ‘ ಯವರು “ ಇದೊಂದು ಸಾರ್ವಭೌಮ ಪ್ರಜಾಸತಾತ್ಮಕ , ಗಣತಂತ್ರ ವ್ಯವಸ್ಥೆಯ ಜಾತಕ ಎಂದಿದ್ದಾರೆ ” .
ಠಾಕೂರ್ದಾಸ್ ಭಾರ್ಗವ್ – ಎಂಬ ಸಂವಿಧಾನ ಮತ್ತೊಬ್ಬ ರಚನಾಕಾರರು ಪಸ್ತಾವನೆ ಕುರಿತು ಹೀಗೆ ಹೇಳುತ್ತಾರೆ . ಪ್ರಸ್ತಾವನೆಯು ಸಂವಿಧಾನದ ಅಮೂಲ್ಯ ಭಾಗವಾಗಿದ್ದು ,
ಇದು ಸಂವಿಧಾನದ ಒಡವೆಯಾಗಿದ್ದು , ಸಂವಿಧಾನವನ್ನು ಅಳತೆ ಮಾಡುವ ಮಾಪನಗೋಲಾಗಿದೆ ” ಎಂದಿದ್ದಾರೆ .
ಸರ್ . ಅರ್ನೆಸ್ಟ್ ಬಾರ್ಕ್ರ್ ಎಂಬ ರಾಜಕೀಯ ಚಿಂತಕ ಪ್ರಸ್ತಾವನೆಯು ಭಾರತದ ಸಂವಿಧಾನದ ಪ್ರಮುಖ ಒತ್ತಿಗೆ ( Key Notes ) ” ಎಂದಿದ್ದಾರೆ .
ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ‘ ಎಂ.ಹಿದಾಯಿತ್ವುಲ್ಲಾ ‘ “ ಭಾರತದ ಪ್ರಸ್ತಾವನೆಯು ಅಮೇರಿಕಾ ಸಂಯುಕ್ತಸಂಸ್ಥಾನದ ಸ್ವಾತಂತ್ರ್ಯ ಘೋಷಣೆ ಯನ್ನು ಹೋಲುವಂತಿದೆ ಅದಕ್ಕಿಂತ ಹೆಚ್ಚಿನದಾಗಿ ಇದು ಭಾರತದ ಸಂವಿಧಾನದ ಆತ್ಮವಾಗಿದೆ .
ಸಂವಿಧಾನ ತಜ್ಞ , ನ್ಯಾಯವಾದಿ ಎನ್.ಎ , ಪಾಲೈವಾಲ್ ಅವರ ಪ್ರಕಾರ ಇದೊಂದು ಭಾರತ ಸಂವಿಧಾನದ ( The preamble as the identity card of the constitution ) .
ಮೇಲಿನ ಎಲ್ಲಾ ರಾಜಕೀಯ ಚಿಂತಕರ ಹೇಳಿಕೆಗಳಿಂದ ಪ್ರಸ್ತಾವನೆಯು ಸಂವಿಧಾನದಲ್ಲಿ ಎಷ್ಟು ಮಹತ್ವಪೂರ್ಣ ವಾದುದ್ದು ಎಂದು ತಿಳಿಯುತ್ತದೆ .
ಪ್ರಸ್ತಾವನೆ ಸಂವಿಧಾನದ ಭಾಗವೇ ?
ಭಾರತದ ಪ್ರಸ್ತಾವನೆಯ ಬಗ್ಗೆ ಅನೇಕ ಚರ್ಚೆಗಳು , ವಾದ ವಿವಾದಗಳು ಹುಟ್ಟಿಕೊಂಡವು . ಕೆಲವರು ಪ್ರಸ್ತಾವನೆ ಯು ಸಂವಿಧಾನದ ಭಾಗ ಎಂದರೆ ಮತ್ತೆ ಕೆಲವರು ಇದನ್ನು ಸಂವಿಧಾನದ ಭಾಗವಲ್ಲವೆಂದು ವಾದಿಸಿದರು . ಇದಕ್ಕೆ ಸಂಬಂಧಿಸಿದಂತೆ ಮೊಕದ್ದಮೆಗಳಲ್ಲಿ ಪರ ಮತ್ತು ತೀರ್ಮಾನಗಳನ್ನು ನ್ಯಾಯಾಲಯ ನೀಡಿದೆ . ವಿರೋಧವಾಗಿ
1 ) ಮೊಟ್ಟ ಮೊದಲಬಾರಿಗೆ ಬೇರುಬಾರಿ ಮೊಕದ್ದಮೆ ( 1960 )
ಈ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ‘ ಪ್ರಸ್ತಾವನೆಯು ಸಂವಿಧಾನದ ಭಾಗವಲ್ಲವೆಂದು ‘ ತೀರ್ಪ ನೀಡಿತು .
2 ) ಕೇಶವಾನಂದ ಭಾರತಿ ಮೊಕದ್ದಮೆ ( 1973 )
ಈ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟು ಹಿಂದಿನ ತೀರ್ಪನ್ನು ವಜಾಗೊಳಿಸಿ ಸಂವಿಧಾನದ ಮಹತ್ವವನ್ನು ಆರಿತು ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು ತೀರ್ಪು ನೀಡಿತು .
3 ) ಎಲ್.ಐ.ಸಿ ಆಫ್ ಇಂಡಿಯಾ ಮೊಕದ್ದಮೆ ( 1995 )
ಈ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟು ಪ್ರಸ್ತಾವನೆ ಯನ್ನು ಸಂವಿಧಾನದ ಒಂದು ಅವಿಭಾಜ್ಯ ಅಂಗ ಎಂದು ತೀರ್ಪು ನೀಡಿತು .
ಮೇಲಿನ ಮೊಕದ್ದಮೆಗಳು ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಿತು .
ಪ್ರಸ್ತಾವನೆಯ ತಿದ್ದುಪಡಿ
ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಬಹುದೇ ಇಲ್ಲವೆ ಎಂಬ ವಾದವು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತು
. 1 ) ಕೇಶಾವಾನಂದ ಭಾರತಿ ಮೊಕದ್ದಮೆ ( 1973 )
ಸುಪ್ರೀಂ ಕೋರ್ಟ್ ಈ ಮೊಕದ್ದಮೆಯಲ್ಲಿ ಸಂವಿಧಾನ ದ ಮೂಲ ರಚನೆಗೆ ಧಕ್ಕೆ ಬಾರದಂತೆ ಪ್ರಸ್ತಾವನೆಯನ್ನು ತೀರ್ಪು ನೀಡಿತು . ತಿದ್ದುಪಡಿ ಮಾಡಬಹುದೆಂದು ಇದರ ಅನ್ವಯ 1976 ರಲ್ಲಿ ಸಂವಿಧಾನಕ್ಕೆ 42 ನೇ ತಿದ್ದುಪಡಿ ಮಾಡಿ ಭಾರತದ ಪ್ರಸ್ತಾವನೆಗೆ .
ಸಮಾಜವಾದಿ ( Socialistic )
ಜಾತ್ಯಾತೀತ ( Secular )
ಎಂಬ ಮೂರು ಪದಗಳನ್ನು ಸೇರಿಸಲಾಯಿತು .
0 Comments