
ಪರಿವಿಡಿ
ಪ್ರಧಾನ ಮಂತ್ರಿ ನೇಮಕ
( Appointment of The Prime Minister )
appointment of the prime minister, Prime Minister, appointment of prime minister, pm modi appointment, narendra modi appointment
ಭಾರತವು ಕ್ಯಾಬಿನೆಟ್ ಪದ್ಧತಿಯನ್ನು ಭಾರತದಲ್ಲಿ ಬ್ರಿಟಿಷ್ ಮಾದರಿಯ ಹೋಲುವುದರಿಂದ ಪ್ರಧಾನಮಂತ್ರಿ ಹುದ್ದೆ ಸೃಷ್ಟಿಯಾಯಿತು .
ರಾಷ್ಟ್ರಪತಿಗಳು ಶಾಸಕಾಂಗದ ನಾಮಮಾತ್ರ ಅಧ್ಯಕ್ಷರಾಗಿದ್ದು , ಪ್ರಧಾನ ಮಂತ್ರಿಗಳು ಶಾಸಕಾಂಗದ ನೈಜವಾದ ಅಧ್ಯಕ್ಷ ರಾಗಿದ್ದಾರೆ .
ವಿಧಿ 75. ಮಂತ್ರಿಗಳ ಬಗ್ಗೆ ಇತರ ಉಪಬಂಧಗಳು
ಪ್ರಧಾನಮಂತ್ರಿಯವರ ನೇಮಕಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ನಿರ್ಧಿಷ್ಟ ವಿಧಿ ವಿಧಾನಗಳನ್ನು ಸೂಚಿಸಿಲ್ಲ . 75 ನೇ ವಿಧಿ ಅನ್ವಯ ರಾಷ್ಟ್ರಪತಿಯವರು ಪ್ರಧಾನಮಂತ್ರಿಯವರನ್ನು ನೇಮಕಮಾಡುವರು
ರಾಷ್ಟ್ರಪತಿಯವರು ಬಹುಮತ ಪಡೆದ ಪಕ್ಷವು ಆಯ್ಕೆ ಮಾಡಿದ ನಾಯಕನನ್ನು ಪ್ರಧಾನಿಯಾಗಿ ನೇಮಕ ಮಾಡುತ್ತಾರೆ .
ಕೆಲವೊಮ್ಮೆ ನಿರ್ಧಿಷ್ಟ ಬಹುಮತವನ್ನು ಯಾವುದೇ ಪಕ್ಷ ಪಡೆಯದಿದ್ದ ಸಂದರ್ಭದಲ್ಲಿ ರಾಷ್ಟ್ರಪತಿಗಳು ಎರಡಕ್ಕಿಂತ ಹೆಚ್ಚು ಪಕ್ಷಗಳಿಂದ ಆಯ್ಕೆಯಾದ ಸಂಯುಕ್ತರಂಗ ನಾಯಕನನ್ನು ಪ್ರಧಾನಿ ಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ .
ಅಂತಹ ಸಂದರ್ಭಗಳೆಂದರೆ ರೆಡ್ಡಿಯವರು ರಾಷ್ಟ್ರಪತಿಯಾಗಿದ್ದ ಮೊದಲ ಬಾರಿಗೆ ನೀಲಂ ಸಂಜೀವ 1979 ರಲ್ಲಿ ಮೊರಾರ್ಜಿ ದೇಸಾಯಿರವರ ನಾಯಕತ್ವದ ಜನತಾ ಸರ್ಕಾರ ಪತನವಾದಾಗ ಸಂಯುಕ್ತ ರಂಗದ ನಾಯಕರಾಗಿ ಆಯ್ಕೆಯಾದ ಚರಣ್ಸಿಂಗ್ ಅವರನ್ನು ಪ್ರಧಾನಿ ಮಂತ್ರಿಯಾಗಿ ನೇಮಕ ಮಾಡಿದರು .
ಕೆಲವು ಸಂದರ್ಭದಲ್ಲಿ ರಾಷ್ಟ್ರಪತಿಗಳು ವೈಯಕ್ತಿಕ ನಿರ್ಣಯ ತೆಗೆದುಕೊಂಡು ಪ್ರಧಾನ ಮಂತ್ರಿಯನ್ನಾಗಿ ನೇಮಕ ಮಾಡಲಾಗಿದೆ .
ಅಂತಹ ಸಂದರ್ಭವೆಂದರೆ 1984 ರಲ್ಲಿ ಇಂದಿರಾ ಗಾಂಧಿಯವರು ಆಕಸ್ಮಿಕವಾಗಿ ಮರಣ ಹೊಂದಿದ್ದರಿಂದ ಅವರ ಮಗ ರಾಜೀವ್ ಗಾಂಧಿಯವರನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡುವ ಮೂಲಕ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ರವರು ತಮ್ಮ ವೈಯಕ್ತಿಕ ನಿರ್ಣಯದ ಮೂಲಕ ಪ್ರಧಾನಮಂತ್ರಿಯನ್ನು ನೇಮಕ ಮಾಡಿದ್ದರು ,
ನಂತರ ಕಾಂಗ್ರೆಸ್ ಪಕ್ಷವು ರಾಜೀವ್ ಗಾಂಧಿಯವರನ್ನೇ ಪ್ರಧಾನಮಂತ್ರಿಯಾಗಿ ಮುಂದುವರಿಸಿತು . ಅವರನ್ನು ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು .
ರಾಷ್ಟ್ರಪತಿಯವರು ಪ್ರಧಾನಿಮಂತ್ರಿಯನ್ನು ಆಯ್ಕೆ ಮಾಡಿದಾಗ ಬೆಂಬಲವನ್ನು ತೋರಿಸುವ ಅವಶ್ಯಕತೆ ಇಲ್ಲ , ರಾಷ್ಟ್ರಪತಿಯು ನಿಗದಿಪಡಿಸಿದ ಅವಧಿಯೊಳಗೆ ಲೋಕಸಭೆಯಲ್ಲಿ ಆಯ್ಕೆಗೊಂಡ ಪ್ರಧಾನಿ ಬಹುಮತ ಸಾಬೀತು ಪಡಿಸಬೇಕು .
ಸಹಜವಾಗಿ ಆಯ್ಕೆಯಾದ ಪ್ರಧಾನಮಂತ್ರಿಗಳು ಒಂದು ತಿಂಗಳೊಳಗೆ ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕು .
1979 ರಲ್ಲಿ ಚರಣ್ ಸಿಂಗ್ರವರು ,
1989 ರಲ್ಲಿ ವಿ.ಪಿ.ಸಿಂಗ್ , 1990 ರಲ್ಲಿ ಚಂದ್ರಶೇಖರ್ ರವರು ,
1991 ರಲ್ಲಿ ಪಿ.ವಿ.ನರಸಿಂಹರಾವ್ರವರು
1996 ರಲ್ಲಿ ಅಟಲ್ ಬಿಹಾರಿ ವಾಜಪೇಯಿ
1996 ರಲ್ಲಿ ದೇವೆಗೌಡ ,
1997 ರಲ್ಲಿ ಐ.ಕೆ.ಗುಜ್ರಾಲ್
1998 ರಲ್ಲಿ ಆಟಲ್ ಬಿಹಾರಿ ವಾಜಪೇಯಿಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ ನಂತರ ಬಹುಮತ ಸಾಬೀತು ಪಡಿಸಲು ಅವಕಾಶ ಕಲ್ಪಿಸಲಾಯಿತು .
ಪ್ರಧಾನಿಯ ಅರ್ಹತೆ :
ಪ್ರಧಾನಿಯಾಗುವವರು ಸಂವಿಧಾನಾತ್ಮಕ ಯಾವುದಾದರೂ ಒಂದು ಸದನದ ಸದಸ್ಯರಾಗಿರಬೇಕು .
ಕೆಲವು ಪ್ರಧಾನಿಗಳು ಲೋಕಸಭಾ ಸದಸ್ಯರಾಗಿದ್ದರು , ಕೆಲವರು ರಾಜ್ಯಸಭಾ ಸದಸ್ಯರಾಗಿದ್ದು ಅದೇ ರೀತಿ 1966 ರಲ್ಲಿ ಇಂದಿರಾ ಗಾಂಧಿಯವರು ಹಾಗೂ 1996 ರಲ್ಲಿ ದೇವೇಗೌಡರು .
2004 ರಲ್ಲಿ ಮನಮೋಹನ್ ಸಿಂಗ್ರವರು ರಾಜ್ಯಸಭಾ ಸದಸ್ಯರಾಗಿದ್ದರು .
1997 ರ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಯಾವುದೇ ಸದನದ ಸದಸ್ಯರಲ್ಲದವರೂ ಕೂಡ ಪ್ರಧಾನಿಯಾಗಬಹುದು . ಆದರೆ 6 ತಿಂಗಳೊಳಗೆ ಯಾವುದಾದರೊಂದು ಸದನದ ಸದಸ್ಯರಾಗಿ ಆಯ್ಕೆಯಾಗಬೇಕು ,
ಇಲ್ಲದಿದ್ದಲ್ಲಿ ತಮ್ಮ ಹುದ್ದೆ ತ್ಯಜಿಸಬೇಕಾಗುತ್ತದೆ . ಭಾರತದಲ್ಲಿ ಪ್ರಧಾನಮಂತ್ರಿ ಯಾವುದೇ ಸದನದ ಸದಸ್ಯರಾಗಿರಬಹುದು , ಬ್ರಿಟನ್ನಲ್ಲಿ ಪ್ರಧಾನಿಯು ಮಾತ್ರ ಕೆಳಮನೆ ಸದಸ್ಯರಾಗಿರಬೇಕು .
ಪ್ರಧಾನ ಮಂತ್ರಿಗಳು ಸಂಸತ್ತಿನ ಸದಸ್ಯರು ಹೊಂದಿರ ಬಹುದಾದ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು .
ಪ್ರಧಾನಿಗೆ ಪ್ರಮಾಣವಚನ
ರಾಷ್ಟ್ರಪತಿಗಳು ಪ್ರಧಾನ ಮಂತ್ರಿಯವರಿಗೆ ಪ್ರಮಾಣವಚನ ಹಾಗೂ ಗೌಪ್ಯತೆಯನ್ನು ಬೋಧಿಸುವರು .
ಪ್ರಧಾನಿಯ ಅಧಿಕಾರಾವಧಿ :
ಪ್ರಧಾನಿ ಮಂತ್ರಿಯ ಅಧಿಕಾರವನ್ನು ನಿರ್ಧಿಷ್ಟವಾಗಿ ಸೂಚಿಸಿಲ್ಲ . ಅವರು ಲೋಕಸಭೆಯಲ್ಲಿ ಬಹುಮತ ಹೊಂದಿರುವವರೆಗೂ ಅಧಿಕಾರ ಹೊಂದಿರುತ್ತಾರೆ .
ಲೋಕಸಭೆಯಲ್ಲಿ ವಿಶ್ವಾಸ ಕಳೆದುಕೊಂಡಾಗ ಪ್ರಧಾನಿಯು ರಾಜೀನಾಮೆ ನೀಡುತ್ತಾರೆ ಅಥವಾ ರಾಷ್ಟ್ರಪತಿಗಳು ವಜಾ ಮಾಡುತ್ತಾರೆ .
ರಾಷ್ಟ್ರಪತಿಯು ಪ್ರಧಾನ ಮಂತ್ರಿಯನ್ನು ವಜಾ ಮಾಡುವ ಅಧಿಕಾರ ಹೊಂದಿರುತ್ತಾರೆ ಆದರೆ ಅನಾವಶ್ಯಕವಾಗಿ ವಜಾ ಮಾಡುವಂತಿಲ್ಲ .
ಲೋಕಸಭೆಯಲ್ಲಿ ವಿಶ್ವಾಸ ಕಳೆದುಕೊಂಡ ನಂತರ ಪ್ರಧಾನಮಂತ್ರಿಗಳು ರಾಜೀನಾಮೆ ನೀಡುತ್ತಾರೆ . 1990 ರಲ್ಲಿ ವಿ.ಪಿ.ಸಿಂಗ್ ಹಾಗೂ 1997 ರಲ್ಲಿ ದೇವೇಗೌಡರು ರಾಜೀನಾಮೆ ನೀಡಿದ್ದರು .
ಪ್ರಧಾನಿ ಸಂಬಳ ಹಾಗೂ ಸವಲತ್ತುಗಳು :
ಪ್ರಧಾನಮಂತ್ರಿಯು ಸಂಸತ್ ಸದಸ್ಯನಂತೆ ಸಂಬಳವನ್ನು ಪಡೆಯುವುದರ ಜೊತೆಗೆ ಉಚಿತ ವಸತಿ , ಸಾರಿಗೆ , ವೈದ್ಯಕೀಯ ಭತ್ಯೆಗಳನ್ನು ಪಡೆಯುತ್ತಾರೆ .
ಪ್ರಧಾನಿ ಸಂಬಳ ಹಾಗೂ ಸವಲತ್ತನ್ನು ಸಂಸತ್ ಕಾಲಕಾಲಕ್ಕೆ ಬದಲಾಯಿಸುತ್ತದೆ . 2001 ರಲ್ಲಿ ಸಂಸತ್ ಪ್ರಧಾನಿ ಸಂಬಳ ಹೆಚ್ಚಿಸಿದೆ .
ಪ್ರಧಾನಿ ಮಂತ್ರಿಗಳ ರಕ್ಷಣೆಗಾಗಿ ವಿಶೇಷ ದಳವನ್ನು ರಚಿಸಲಾಗಿದೆ .
ಪ್ರಧಾನಮಂತ್ರಿಗಳಿಗೆ 2012 ಜುಲೈನಿಂದ ಪ್ರತಿ ತಿಂಗಆಗೆ 1.60 ಲಕ್ಷ ಸಂಬಳವನ್ನು ಪಡೆಯುತ್ತಿದ್ದಾರೆ . ಜೊತೆಗೆ ಇತರೆ ಭತ್ಯೆಗಳನ್ನು ಪಡೆಯುತ್ತಾರೆ .
ಭಾರತದ ಪ್ರಧಾನಮಂತ್ರಿಗಳ ಅಧಿಕೃತ ನಿವಾಸವನ್ನು ‘ ಪಂಚವಟಿ ‘ ಎಂದು ಕರೆಯುತ್ತಾರೆ . ಇದು ದೆಹಲಿಯ 7 ನೇ ರೇಸ್ಕೋರ್ಸ್ ರೋಡ್ ಅಥವಾ 7RCR ಎಂಬುದು ಅಧಿಕೃತ ನಿವಾಸವಾಗಿದೆ .
ಪ್ರಧಾನಮಂತ್ರಿಗಳ ಕಛೇರಿಯು ನವದೆಹಲಿಯ ರೈಸಿನ್ ಹಿಲ್ಸ್ ಬಳಿ ಕಂಡು ಬರುತ್ತದೆ .
ಇನ್ನು ಹೆಚ್ಚಿನ ವಿಷಯಗಳನ್ನು ಓದಿ :
ರಾಷ್ಟ್ರಪತಿ ನೇಮಕ ಅಧಿಕಾರ
ರಾಷ್ಟ್ರಪತಿ ಅಧಿಕಾರ