ಪೌರತ್ವ | citizenship

ಪರಿವಿಡಿ

ಪೌರತ್ವ ( Citizenship )

citizenship, citizenship topic, nationality, dual citizenship, golden visa, naturalization, citizenship application, canadian citizenship

citizenship, citizenship topic, nationality, dual citizenship, golden visa, naturalization, citizenship application, canadian citizenship

ಪೌರತದಲ್ಲಿ ಪೌರತ್ವ ಪಡೆದ “ ಪ್ರಜೆಯೇ ಪ್ರಭು ” ಕಾರಣ ಪೌರತ್ವವು ದೇಶದ ನಾಗರೀಕ ಹಾಗೂ ರಾಜಕೀಯ ಹಕ್ಕುಗಳನ್ನು ಅನುಭವಿಸಲು ಸಹಕಾರಿಯಾಗಿವೆ . ಇಂತಹ ಪೌರತ್ವದ ಬಗ್ಗೆ ಸಂವಿಧಾನದ 2 ನೇ ಭಾಗದ 5 ನೇ ವಿಧಿಯಿಂದ 11 ನೇ ವಿಧಿವರೆಗೆ ವಿವರಣೆ ಇದೆ .

 

ಪೌರತ್ವದ ಹಿನ್ನಲೆ

ಭಾರತ ದೇಶದಲ್ಲಿ ವಿಭಿನ್ನ ಜನರು ವಾಸಿಸುತ್ತಿದ್ದಾರೆ . ಇವರುಗಳನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು , ಬಹುತೇಕ ಜನರು ಭಾರತದ ಮೂಲ ನಾಗರೀಕರಾದರೆ ಮತ್ತೆ ಕೆಲವರು ವಿದೇಶಿಯರು , ಭಾರತದಲ್ಲಿ ಪೌರತ್ವವನ್ನು ಪಡೆಯುವ ಮೂಲಕ ನಾಗರೀಕ ಹಾಗೂ ರಾಜಕೀಯ ಹಕ್ಕು ಪಡೆದರೆ , ವಿದೇಶಿಯರು ಭಾರತದ ಪೌರತ್ವವನ್ನು ಪಡೆದರೂ ನಾಗರೀಕ ಹಾಗೂ ರಾಜಕೀಯ ಹಕ್ಕನ್ನು ಅನುಭವಿಸಲು ಅರ್ಹರಲ್ಲ , ವಿದೇಶಿಯರನ್ನು ಮಿತ್ರ ವಿದೇಶದ ಪ್ರಜೆಗಳು ಹಾಗೂ ಶತ್ರುದೇಶದ ಪ್ರಜೆಗಳೆಂದು ಎರಡು ರೀತಿಯಲ್ಲಿ ವಿಂಗಡಿಸುತ್ತಾರೆ . – ಮಿತ್ರ ದೇಶವು ಭಾರತದೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದಾರೆ . ಆದರೆ ಶತ್ರು ದೇಶಗಳು ಭಾರತದಲ್ಲಿ ಭಯೋತ್ಪಾದನೆ ಪ್ರಚೋದಿಸುತ್ತವೆ ಭಾರತದೊಂದಿಗೆ ಯುದ್ಧಕ್ಕೆ ಇಳಿಯುತ್ತವೆ . ಹಾಗೂ * ಇಂತಹ ಶತ್ರು ದೇಶದಿಂದ ಬಂದ ವಿದೇಶಿಯರಿಗೆ ಮಿತ್ರ ದೇಶದ ವಿದೇಶಿಯರು ಪಡೆಯುವ ಪೌರತ್ವ ಸವಲತ್ತು ಕಡಿಮೆಯಾಗಿರುತ್ತದೆ .

ಉದಾ : – ಶತ್ರು ದೇಶದ ವಿದೇಶಿಯರು ಸಂವಿಧಾನದ 22 ನೇ ವಿಧಿ ಅನ್ವಯ ಬಂಧನ ಹಾಗೂ ಉಳಿಸುವ ರಕ್ಷಣೆಯ ಹಕ್ಕನ್ನು ಅನುಭವಿಸುವಂತಿಲ್ಲ .

 

ಪೌರತ್ವದ ಮಹತ್ವ ಹಾಗೂ ಸವಲತ್ತುಗಳು

ಭಾರತದ ಸಂವಿಧಾನವು ಪೌರತ್ವ ಪಡೆದ ಪ್ರತಿಯೊಬ್ಬ ರಿಗೂ ಅನೇಕ ಸವಲತ್ತುಗಳನ್ನು ನೀಡಿದೆ . I. ಜಾತಿ , ಧರ್ಮ , ಜನಾಂಗದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ . ( 15 ನೇ ವಿಧಿ )

  1. ಉದ್ಯೋಗ ಪಡೆಯುವಲ್ಲಿ ಸಮಾನ ಅವಕಾಶ ಪಡೆಯುತ್ತಾನೆ . ( 16 ನೇ ವಿಧಿ ) ಯಾವುದೇ ಸರ್ಕಾರಿ ಹುದ್ದೆಯನ್ನು ಪಡೆಯಲು , ಮೊದಲು ಭಾರತದ ನಾಗರೀಕನಾಗಿರಬೇಕು .
  2. ವಾಕ್ ಸ್ವಾತಂತ್ರ್ಯ , ಸಭೆ ಸೇರುವ ಸ್ವಾತಂತ್ರ್ಯ , ಸಂಘ ಕಟ್ಟುವ ಸ್ವಾತಂತ್ರ್ಯ , ಸಂಚರಿಸುವ ಸ್ವಾತಂತ್ರ್ಯ , ವಾಸಿಸುವ , ಉದ್ಯೋಗ ಸ್ವಾತಂತ್ರ್ಯವನ್ನು ಪಡೆಯುತ್ತಾನೆ . ( 19 ವಿಧಿ )
  3. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯ ( 29-30ನೇ ವಿಧಿ )
  4. ಉನ್ನತ ಹುದ್ದೆಗಳಾದ ರಾಷ್ಟ್ರಪತಿ , ಉಪರಾಷ್ಟ್ರಪತಿ , ಸುಪ್ರೀಂ ಕೋರ್ಟ್ , ಹೈಕೋರ್ಟ್ , ರಾಜ್ಯಪಾಲರು , ಅಟಾರ್ನಿ ಜನರಲ್ , ಅಡ್ವಕೇಟ್ ಜನರಲ್‌ನಂತಹ ಸಂವಿಧಾನಾತ್ಮಕ ಹುದ್ದೆಗಳನ್ನು ಪಡೆಯಲು ಅರ್ಹನಾಗುತ್ತಾನೆ . ಭಾರತದ ನಾಗರೀಕನಾದವನು ದೇಶದ ಯಾವುದೇ ಹುದ್ದೆಗಳನ್ನು ಹೊಂದಲು ಹೊಂದಿದ್ದರೆ ಪಡೆಯಲು ಹಕ್ಕನ್ನು ಅರ್ಹತೆ ಹೊಂದಿರುತ್ತಾನೆ .

6 , ಲೋಕಸಭೆ , ರಾಜ್ಯಸಭೆ , ವಿಧಾನ ಸಭೆಗಳಿಗೆ ಆಯ್ಕೆ ಯಾಗಲು ಅಥವಾ ಸದಸ್ಯತ್ವವನ್ನು ಪಡೆಯಲು ಅರ್ಹನಾಗುತ್ತಾನೆ .

  1. ಮೇಲಿನ ಸವಲತ್ತುಗಳನ್ನು ಹೊಂದುವುದರೊಂದಿಗೆ ಕೆಲವು ಸಂವಿಧಾನಾತ್ಮಕ ಕರ್ತವ್ಯಗಳನ್ನು ಹಾಗೂ ಸರ್ಕಾರವು ಕಾಲಕಾಲಕ್ಕೆ ನಿಗಧಿಪಡಿಸುವ ಕರ್ತವ್ಯವನ್ನು ನಿಭಾಯಿಸಬೇಕಾಗುತ್ತದೆ .

 

ಪೌರತ್ವಕ್ಕೆ ಸಂಬಂಧಿಸಿದ ಸಂವಿಧಾನಾತ್ಮಕ ಅವಕಾಶಗಳು

ಭಾರತೀಯರಿಗೆ ಪೌರತ್ವ

 ವಿಧಿ 5. ಸಂವಿಧಾನದ ಪ್ರಾರಂಭದಲ್ಲಿ ಪೌರತ್ವ

ಭಾರತದ ಸಂವಿಧಾನ ಪ್ರಾರಂಭವಾದಾಗ ಭಾರತದ ಭೂಪ್ರದೇಶದಲ್ಲಿ ವಾಸಿಸುವ ಮತ್ತು

ಎ ) ಭಾರತದ ಭೂಪ್ರದೇಶದಲ್ಲಿ ಜನಿಸಿದ್ದರೆ

ಬಿ ) ತನ್ನ ತಂದೆಯಾಗಲಿ ತಾಯಿಯಾಗಲಿ ಭಾರತದ ಭೂ ಪ್ರದೇಶದಲ್ಲಿ ಜನಿಸಿದ್ದರೆ ,

ಸಿ ) ಭಾರತದ ಸಂವಿಧಾನ ಪ್ರಾರಂಭವಾಗುವ ಆರಂಭದಲ್ಲಿ ಕನಿಷ್ಟ ಐದು ವರ್ಷ ಭಾರತದ ಭೂಪ್ರದೇಶದಲ್ಲಿ ವಾಸವಾಗಿರುವ ಭಾರತದ ಪ್ರತಿಯೊಬ್ಬ ವ್ಯಕ್ತಿಯು ಭಾರತದ ನಾಗರಿಕತ್ವವನ್ನು ಪಡೆಯುತ್ತಾನೆ ಎಂದು ಸಂವಿಧಾನದ 5 ನೇ ವಿಧಿ ತಿಳಿಸುತ್ತದೆ .

 ಪಾಕಿಸ್ತಾನದಿಂದ ಧಾರವಸ್ಥೆ ವಲಸೆ ಬಂದವರಿಗೆ ಪೌರತ್ವ

ವಿಧಿ 6. ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು ದಲ್ಲಿ ಭಾರತದ

ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಸಂದರ್ಭ ಪಾಕಿಸ್ತಾನಕ್ಕೆ ಸೇರಿರುವ ದೂಪ್ರದೇಶದಿಂದ ಭೂಪ್ರದೇಶದಿಂದ ವಲಸೆ ಬಂದಿರುವ ವ್ಯಕ್ತಿಯು ಈ ಕೆಳಕಂಡ ಸಂದರ್ಭದಲ್ಲಿ ಭಾರತದ ಪೌರತ್ವವನ್ನು ಪಡೆಯುತ್ತಾನೆ ಎಂದು ಸಂವಿಧಾನದ 6 ನೇ ವಿಧಿ ತಿಳಿಸುತ್ತದೆ .

ಎ ) ಭಾರತ ಸರ್ಕಾರ ಕಾಯ್ದೆ 1935 ರಲ್ಲಿ ವಿವರಿಸಿರುವಂತೆ ವ್ಯಕ್ತಿಯಾಗಲಿ , ವ್ಯಕ್ತಿಯ ತಾಯಿ ಅಥವಾ ತಂದೆಯಾಗಲಿ ಅಥವಾ ಅಜ್ಜ ಅಗಲಿ ಭಾರತದಲ್ಲಿ ಹುಟ್ಟಿದ್ದರೆ ,

ಬಿ ) 1948 , ಜುಲೈ ತಿಂಗಳ 0 ನೇ ತಾರೀಖಿಗಿಂತ ಮುಂಚಿತವಾಗಿ ವಲಸೆ ಬಂದಿದ್ದ ಸಂದರ್ಭದಲ್ಲಿ , ತಾನು ವಲಸೆ ಬಂದ ತಾರೀಖಿನಿಂದ ಭಾರತದ ಭೂಪ್ರದೇಶದಲ್ಲಿ ವಾಸಿಸುತ್ತಿದ್ದರೆ , ಸಂವಿಧಾನದ ಪ್ರಾರಂಭವಾದಾಗಿನಿಂದ ಪೌರತ್ವ ಹೊಂದುತ್ತಾರೆ .

ಪಾಕಿಸ್ತಾನಷ್ಟೆ ವಲಸೆ ಹೋದ ವೃತ್ತಿಗಳ ಪೌರತ್ವದ ಹಕ್ಕು

 ವಿಧಿ 7 , ಪಾಕಿಸ್ತಾನಕ್ಕೆ ವಲಸೆ ಹೋದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

1947 ನೇ ಇಸವಿ ಮಾರ್ಚ್ 1 ರ ನಂತರ ಯಾವುದೇ ವ್ಯಕ್ತಿ ಭಾರತದ ಭೂಪ್ರದೇಶದಿಂದ ಸೇರುವ ಭೂಪ್ರದೇಶಕ್ಕೆ ವಲಸೆ ಭಾರತದ ನಾಗರೀಕತ್ವವನ್ನು ಪಡೆಯುವುದಿಲ್ಲ ಎಂದು ಸಂವಿಧಾನದ 7 ನೇ ವಿಧಿ ತಿಳಿಸುತ್ತದೆ .

 

ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಮೂಲ ವ್ಯಕ್ತಿಗಳಿಗೆ ಪೌರತ್ವ

 ವಿಧಿ 8. ಭಾರತದ ಹೊರಗೆ ವಾಸಿಸುತ್ತಿರುವ , ಭಾರತೀಯ ಮೂಲದ ಕೆಲವು ವ್ಯಕ್ತಿಗಳ ನಾಗರಿಕತ್ವದ ಹಕ್ಕುಗಳು

ಯಾವುದೇ ವ್ಯಕ್ತಿಯಾಗಲಿ ಅಥವಾ ಅವನ ಅಥವಾ ತಂದೆಯಾಗಲಿ , ಅಜ್ಜನಾಗಲಿ ಮೂಲತಃ ಭಾರತ ಸರ್ಕಾರ ಕಾಯ್ದೆ 1935 ರಲ್ಲಿ ಹೇಳಿರುವಂತೆ ಭಾರತದಲ್ಲಿ ಹುಟ್ಟಿದ್ದು , ಭಾರತದ ಹೊರಗಿನ ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೆ ಆ ದೇಶದಲ್ಲಿನ ರಾಜ ತಾಂತ್ರಿಕ ಪ್ರತಿನಿಧಿಗೆ ಸಂವಿಧಾನದ ಮುಂಚಿತವಾಗಲಿ ಅಥವಾ ತರುವಾಯ ತಾನು ಭಾರತದ ನಾಗರೀಕನಾಗಬೇಕೆಂದು ಅರ್ಜಿಯನ್ನು ಸಲ್ಲಿಸಿ , ಆ ಪ್ರತಿನಿಧಿಯಿಂದ ತಾನು ಭಾರತದ ನಾಗರಿಕನೆಂದು ನೊಂದಾಯಿಸಿಕೊಂಡಿದ್ದರೆ ಅಂತಹ ವ್ಯಕ್ತಿಯನ್ನು ಭಾರತದ ನಾಗರೀಕನೆಂದು ಪರಿಗಣಿಸಬಹುದೆಂದು ಭಾರತದ ಸಂವಿಧಾನದ 8 ನೇ ವಿಧಿ ತಿಳಿಸುತ್ತದೆ .

ವಿದೇಶಿ ಪೌರತ್ವ ಪಡೆದವರಿಗೆ ಪೌರು ಕಡಿತ

 ವಿಧಿ 9. ಸ್ವಯಿಚ್ಛೆಯಿಂದ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದವರು ಭಾರತದ ನಾಗರಿಕರಲ್ಲ ಎಂದು

ಯಾವುದೇ ವ್ಯಕ್ತಿ ಸ್ವ ಇಚ್ಛೆಯಿಂದ ವಿದೇಶದ ನಾಗರಿಕತ್ವವನ್ನು ಪಡೆದಿದ್ದರೆ ಅಂತವರನ್ನು ಭಾರತದ ನಾಗರೀಕನೆಂದು ಪರಿಗಣಿಸುವುದಿಲ್ಲ ಸಂವಿಧಾನದ 9 ನೇ ವಿಧಿ ತಿಳಿಸುತ್ತದೆ .

ಪೌರತ್ವದ ಮುಂದುವರಿಕೆಗೆ ರಾನೂನು ಮಾಡುವ ಸಂಪತ್ತಿನ ಅಧಿಕಾರ

ವಿಧಿ 10.ನಾಗರಿಕತ್ವದ ಹಕ್ಕುಗಳ ಮುಂದುವರಿಕ

ಭಾರತದ ಪೌರನಾಗಿರುವ ಅಥವಾ ಪೌರನಾಗ ಬೇಕೆಂದು ಭಾವಿಸಿರುವ ಪ್ರತಿಯೊಬ್ಬ ವ್ಯಕ್ತಿಯು ಸಂಸತ್ತು ಮಾಡುವ ಕಾನೂನಿಗೆ ಒಳಪಟ್ಟು ಭಾರತದ ನಾಗರೀಕತ್ವವನ್ನು ಮುಂದುವರಿಸಬೇಕು . ಎಂದು ಸಂವಿಧಾನದ 10 ನೇ ವಿಧಿ ತಿಳಿಸುತ್ತದೆ .

ಪೌರವ್ವದ ಬಗ್ಗೆ ಕಾನೂನು ಮಾಡಲು ಸಂಸತ್ತಿಗೆ ಅಧಿಕಾರ

ವಿಧಿ 11. ಸಂಸತ್ತು ನಾಗರಿಕತ್ವದ ಹಕ್ಕನ್ನೂ ಕಾನೂನಿನ ಮೂಲಕ ವಿನಿಮಯಿಸುವುದು

ಪೌರತ್ವವವನ್ನು ವಜಾಗೊಳಿಸುವ ಮತ್ತು ಪೌರತ್ವಕ್ಕೆ ಸಂಬಂಧಿಸಿದ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತಿಗೆ ಇರುವ ಅಧಿಕಾರವನ್ನು ಕಡಿತಗೊಳಿಸುವಂತಿಲ್ಲ . ಸಂವಿಧಾನದ 2 ನೇ ವಿಧಿ ತಿಳಿಸುತ್ತದೆ . ಸಂಸತ್ತು ಕಾಲಕಾಲಕ್ಕೆ ಕಾನೂನಿನ ಮೂಲಕ ಪೌರತ್ವದ ಹಕ್ಕುಗಳಿಗೆ ನಿಯಮಗಳನ್ನು ರೂಪಿಸಬಹುದು .

Comments

Leave a Reply

Your email address will not be published. Required fields are marked *