1955 ಪೌರತ್ವ ಕಾಯ್ದೆ ( Citizenship Act – 1955 )

citizenship act 1955,1955 ರ ಪೌರತ್ವ ಕಾಯ್ದೆ, citizenship act 1955 upsc, citizenship amendment act 1955, citizenship act 1955 pdf

 

citizenship act 1955,1955 ರ ಪೌರತ್ವ ಕಾಯ್ದೆ, citizenship act 1955 upsc, citizenship amendment act 1955, citizenship act 1955 pdf

ಭಾರತದ ಸಂವಿಧಾನವು ಏಕಪೌರತ್ವವನ್ನು ಪೌರತ್ವವನ್ನು ದೇಶಾದ್ಯಂತ ಅಳವಡಿಸಿಕೊಂಡಿತು . ಪಡೆಯುವ ಬಗ್ಗೆ ಸಂವಿಧಾನದ 2 ನೇ ಭಾಗದ 5 ನೇ ವಿಧಿಯಿಂದ 11 ನೇ ವಿಧಿ ವರೆಗೆ ವಿವರಿಸಿತು . ನಂತರ ಅನೇಕ ಬದಲಾವಣೆಗಳನ್ನು ಸೇರ್ಪಡೆಮಾಡಿ ಪೌರತ್ವ ಕಾಯ್ದೆಯನ್ನು ಸಂಸತ್ತು 1955 ಡಿಸೆಂಬರ್ 30 ರಂದು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿತು . ಅಂತಹ ಕಾಯ್ದೆಯೇ “ 1955 ರ ಪೌರತ್ವ ಕಾಯ್ದೆ ” . ಪೌರತ್ವ ಕಾಯ್ದೆಯನ್ನು 1957 , 1960 , 1985 , 1986 , 1992 , 2003 , 2005 , 2015 ರಲ್ಲಿ ತಿದ್ದುಪಡಿ ಮಾಡಲಾಯಿತು . 1955 ರ ಪೌರತ್ವ ಕಾಯ್ದೆಯಂತೆ ಪೌರತ್ವವನ್ನು ಪಡೆಯುವ ವಿಧಾನ ಈ ಕೆಳಕಂಡಂತಿದೆ .

  ಭಾರತದ ಪೌರತ್ವವನ್ನು ಪಡೆಯುವ ವಿಧಾನ

ಜನನದ ಮೂಲಕ( By Birth ) :

1950 ಜನವರಿ 26 ರ ಮೊದಲು ಹಾಗೂ ನಂತರ , ಆದರೆ 1987 ರ ಜುಲೈ 1 ಕ್ಕೂ ಮುಂಚೆ ಭಾರತದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಭಾರತದ ಪೌರನಾಗುತ್ತಾನೆ . * 1950 ಜನವರಿ 26 ಕ್ಕಿಂತ ಮೊದಲು ಜನಿಸಿದವರು ಹಾಗೂ ಭಾರತದಲ್ಲಿ ನೆಲೆಸಿದವರಿಗೆ ಪೌರತ್ವನೀಡಲಾಗಿದೆ .

 

ಸಂಸ್ಕೃತಿಯ ಮೂಲಕ ( By Descent ) :

ಭಾರತೀಯ ಪ್ರಜೆಗೆ ಭಾರತದಿಂದ ಹೊರಗೆ ಮಗು ಜನಿಸಿದರೆ , ಅಂತಹ ಸಂದರ್ಭದಲ್ಲಿ ಮಗುವು ರಕ್ತ ಸಂಬಂಧದ ಮೂಲಕ ಪೌರತ್ವವನ್ನು ಪಡೆಯುತ್ತದೆ . ಇದನ್ನು ಅನುವಂಶೀಯ ವಿಧಾನ ಎಂದು ಕರೆಯುತ್ತಾರೆ .

ವ್ಯಕ್ತಿಯೊಬ್ಬ 1950 ಜನವರಿ 26 ರ ನಂತರ ಆದರೆ 1992 ರ ಶಿಇಸದಲ್ಲಿ ವಿದೇಶದಲ್ಲಿ ಹುಟ್ಟಿದ್ದು , ಆ ಸಮಯದಲ್ಲಿ ತಂದೆ ಅಥವಾ ತಾಯಿ ಭಾರತದ ಪೌರರಾಗಿದ್ದರೆ , ಅವನು ಕೂಡ ಭಾರತೀಯ ಪೌರತ್ವ ಪಡೆಯುತ್ತಾನೆ

ಭಾರತದ ಪೌರರಲ್ಲದವರು ನೊಂದಾವಣಿ ಮೂಲಕ ( By Registration )

ಭಾರತದ ಪ್ರಜೆಯಾಗಿರದವರು  ಭರ್ತಿ ಮಾಡಿ ಪಡೆಯಬಹುದು .

1 ) ಮೂಲತಃ ಭಾರತೀಯನಾಗಿದ್ದು , ಅರ್ಜಿ ಸಲ್ಲಿಸಿದ 6 ತಿಂಗಳ ನಂತರ ಪಡೆಯುತ್ತಾನೆ .

2 ) ಭಾರತೀಯ ಪ್ರಜೆ ವಿವಾಹವಾದ ಮಹಿಳೆಯಾಗಿರಬೇಕು .

3 ) ಯಾವುದೇ ಕಾಮನ್ ವೆಲ್ತ್ ರಾಷ್ಟ್ರಗಳ ಪ್ರಜೆಯಾಗಿರಬೇಕು .

ಉದಾ- 7 ವರ್ಷದ ಕಾಲ ಭಾರತದಲ್ಲಿದ್ದ ಭಾರತೀಯ ಮೂಲ ಪ್ರಜೆಗಳು . ಭಾರತದ ನಾಗರೀಕರಲ್ಲದ ಯಾವುದೇ ವ್ಯಕ್ತಿ ಭಾರತದ ನಾಗರೀಕನಾಗಬೇಕೆಂದು ಬಯಸಿದರೆ , ಭಾರತದ

ಸಂವಿಧಾನ ಪ್ರಕಾರ ಅಥವಾ ಪೌರತ್ವ ಕಾಯ್ದೆಯ ಪ್ರಕಾರ ನೊಂದಣಿ ಮಾಡಿಕೊಂಡು ಪೌರತ್ವವನ್ನು ಪಡೆಯಬಹುದು .

 ಸಹಜೀಕೃತ ವಿಧಾನದ ಮೂಲಕ ( By Naturalisation )

ಕಾಮನ್ ವೆಲ್ತ್ ರಾಷ್ಟ್ರವಲ್ಲದ ಯಾವುದೇ ವಿದೇಶಿಯರು ಅಧಿಕೃತವಾದ ಪ್ರಮಾಣ ಪತ್ರ ನೀಡಿ ಸೂಕ್ತ ಅರ್ಜಿಯ ನಿಬಂಧನೆಗೆ ಒಳಪಟ್ಟು ಪೌರತ್ವವನ್ನು ಮೂಲಕ ಪಡೆಯುತ್ತಾನೆ .

ಭಾರತದ ರಾಷ್ಟ್ರಪತಿಗಳಿಗೆ ಪೌರತ್ವಕ್ಕಾಗಿ ಪರಕೀಯರು ಅಂದರೆ ಅನ್ಯ ದೇಶದವರು ಅರ್ಜಿ ಸಲ್ಲಿಸಿ ಪೌರತ್ವ ಸಂಪಾದಿಸಿಕೊಳ್ಳಬಹುದು . ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಕನಿಷ್ಠ 14 ವರ್ಷ ವಾಸವಾಗಿದ್ದು , ಇನ್ನಿತರೆ ನಿಬಂಧನೆಗಳನ್ನು ಪೂರೈಸತಕ್ಕದ್ದು , ಇವರಿ ಸಲ್ಲಿಸಿದ 12 ತಿಂಗಳೊಳಗಾಗಿ ಪೌರತ್ವ ನೀಡಲಾಗುತ್ತದೆ .

ಸರ್ಕಾರಿ ಸೇವೆಯಲ್ಲಿದ್ದರೆ ಕನಿಷ್ಟ ವರ್ಷಗಳು ಭಾರತದಲ್ಲಿ ವಾಸವಾಗಿರಬೇಕು & ಉತ್ತಮ ನಡತೆ ಹೊಂದಿರಬೇಕು .

8 ನೇ ಅನುಸೂಚಿಯಲ್ಲಿರುವ ಯಾವುದಾದರೂ ಒಂದು ನಿರ್ದಿಷ್ಟ ಭಾಷೆಯ ಜ್ಞಾನ ಹೊಂದಿರಬೇಕು .

ಭೂ ಪ್ರದೇಶ ಭಾರತಕ್ಕೆ ವಿಲೀನವಾಗುವುದರ ಮೂಲಕ ( By Incorporation of Territory )

ಭಾರತ ಸರ್ಕಾರವು ಯಾವುದೇ ರಾಷ್ಟ್ರದ ಭೂ ಪ್ರದೇಶ ವನ್ನು ವಿಲೀನಗೊಳಿಸಿಕೊಂಡಾಗ ಆ ಪ್ರದೇಶದ ಜನರು ಪೌರತ್ವವನ್ನು ಪಡೆಯುತ್ತಾರೆ . 1961 ರಲ್ಲಿ ಗೋವಾ ಪ್ರದೇಶ ಪೋರ್ಚುಗೀಸರ ವಿದೇಶಿ ಆಡಳಿತದಿಂದ ಮುಕ್ತವಾಯಿತು . ಆ ಪ್ರದೇಶದ ಜನರು ಭಾರತದ ಪೌರತ್ವ ಪಡೆದರು .

 

ಅದೇ ರೀತಿ ಸಿಕ್ಕಿಂ ರಾಜ್ಯವು 1975 ರಲ್ಲಿ ಭಾರತದಲ್ಲಿ ವಿಲೀನಗೊಂಡ ಬಳಿಕ ಅಲ್ಲಿನ ಎಲ್ಲಾ ಪ್ರಜೆಗಳಿಗೆ ಪೌರತ್ವವನ್ನು ನೀಡಲಾಯಿತು . ಪಾಂಡಿಚೆರಿಯು ಫ್ರೆಂಚರಿಂದ 1954 ರಲ್ಲಿ ವಿಮೋಚನೆ ಹೊಂದಿದಾಗ ಭಾರತದ ಪೌರತ್ವವನ್ನು ಪಾಂಡಿಚೇರಿ ಜನತೆ ಪಡೆದರು .

 

ಪೌರತ್ವವನ್ನು ಕಳೆದುಕೊಳ್ಳುವ ವಿಧಾನ

1 ) ತ್ಯಜಿಸುವುದು ( Renunciation ) : –

ವಿದೇಶಿ ಪೌರತ್ವ ಪಡೆದ ಭಾರತೀಯ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪೌರತ್ವವನ್ನು ತ್ಯಜಿಸಬಹುದು .

 2 ) ರದ್ದುಮಾಡುವುದು ( Termination ) : –

ಜ 26 1950 ಮತ್ತು ಪೌರತ್ವ ಕಾಯ್ದೆ ಜಾರಿಗೆ ಬಂದ ಡಿ .30 1955 ರ ನಡುವೆ ವಿದೇಶಿ ಪೌರತ್ವ ಪಡೆದ ಭಾರತೀಯರ ಪೌರತ್ವ ರದ್ದಾಗುತ್ತದೆ .

3)ಕಸಿದುಕೊಳ್ಳುವುದು ( Deprivation )

ಭಾರತದ ಪೌರನು ಸಂವಿಧಾನ ಬಾಹಿರವಾಗಿ ಹಾಗೂ ದೇಶ ದೋಹವನ್ನು ಮಾಡಿದಾಗ ಅಥವಾ ವಿದೇಶದಲ್ಲಿ ದೀರ್ಘಕಾಲ ( 7 ವರ್ಷ ) ನೆಲೆಸುತ್ತಾರೋ ಅವರ ಪೌರತ್ವವನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳುತ್ತದೆ . 1980 ರಲ್ಲಿ ಈ ಕಾಯ್ದೆ ಯನ್ನು ತಿದ್ದುಪಡಿ ಮಾಡಲಾಗಿದೆ


0 Comments

Leave a Reply

Avatar placeholder

Your email address will not be published. Required fields are marked *