ಪೆಟ್ರೋಲ್ ಇಂಜಿನ್‌

petrol engine, ಪೆಟ್ರೋಲ್ ಇಂಜಿನ್‌, 4 stroke petrol engine, four stroke petrol engine, two stroke petrol engine, petrol in diesel engine

petrol engine, ಪೆಟ್ರೋಲ್ ಇಂಜಿನ್‌, 4 stroke petrol engine, four stroke petrol engine, two stroke petrol engine, petrol in diesel engine

ಪೆಟ್ರೋಲ್ ಇಂಜಿನ್‌ನಲ್ಲಿ ಸಿಲಿಂಡರ್‌ನೊಳಗೆ ಸುಲಭವಾಗಿ ಚಲಿಸುವ ಮತ್ತು ಗಾಳಿಯ ಪ್ರವೇಶವನ್ನು ಪ್ರತಿಬಂಧಿಸುವ ಪಿಸ್ಟನ್ ಇರುತ್ತದೆ . ಸಿಲಿಂಡರ್‌ನಲ್ಲಿ ಆಗಮಕವಾಟ ಮತ್ತು ನಿರ್ಗಮ ಕವಾಟಗಳೆಂಬ ಎರಡು ಕವಾಟಗಳಿರುತ್ತವೆ .

ಹಾಗೂ ಒಂದು ಕಿಡಿಬೆಣೆ ( Spark plug ) ಇರುತ್ತದೆ . ಪಿಸ್ಸನ್ನನ್ನು ವಕ್ರದ ೦ ಡಕ್ಕೆ ಸಂಪರ್ಕಿಸಲಾಗಿರುತ್ತದೆ ಮತ್ತು ಇಂಜಿನ್  ಕಾರ್ಬೊರೇಟರ್‌ಗೆ ಸಂಪರ್ಕ ಹೊಂದಿದೆ

ಕಾರ್ಬೊರೇಟರ್‌ನಲ್ಲಿ ಪೆಟ್ರೋಲ್ ಮತ್ತು ಗಾಳಿಯು ಸರಿಯಾದ ಪ್ರಮಾಣದಲ್ಲಿ ಮಿಶ್ರಣವಾಗಿ ನಂತರ ಮಿಶ್ರಣವು ಇಂಜಿನ್‌ನೊಳಗೆ ಪ್ರವೇಶಿಸುತ್ತದೆ .

ನಾವು ಈಗ ಪೆಟ್ರೋಲ್ ಇಂಜಿನ್ನಿನ ಕಾರ್ಯವಿಧಾನವನ್ನು ಗಮನಿಸೋಣ . ಪೆಟ್ರೋಲ್ ಇಂಜಿನ್ನಿನ ಕಾರ್ಯವಿಧಾನವು ಐದು ಹಂತಗಳನ್ನು ಒಳಗೊಂಡಿದೆ ಈ ಹಂತಗಳನ್ನು ಸೂಚಿಸುತ್ತವೆ .

ಎ ) ಭುಕ್ತಿ ಹೊಡೆತ :

ಆವೀಕೃತ ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವು ಆಗಮ ಕವಾಟದ ಮೂಲಕ ಸಿಲಿಂಡರ್‌ನೊಳಗೆ ಬರುತ್ತದೆ . ನಿರ್ಗಮಕವಾಟ ಮುಚ್ಚಿರುತ್ತದೆ . ಪಿಸ್ಟನ್‌ ಕಿಡಿಬೆಣೆಯ ಕಡೆಗೆ ಚಲಿಸುತ್ತದೆ . ?

ಬಿ ) ಸಂಪೀಡನಾ ಹೊಡೆತ :

ಆಗಮ ಮತ್ತು ನಿರ್ಗಮು ಕವಾಟಗಳೆರಡೂ ಮುಚ್ಚಿರುತ್ತವೆ . ಪಿಸ್ಟನ್ ಕಿಡಿಬೆಣೆಯ ಕಡೆಗೆ ಚಲಿಸುವುದರ ಮೂಲಕ , ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಸಂಪೀಡಿಸುತ್ತದೆ .

ಈ ಸಂಪೀಡನೆಯು ಮಿಶ್ರಣದ ತಾಪವನ್ನು ಹೆಚ್ಚಿಸಿದರೂ ಸಹ , ಅದು ಪೆಟ್ರೋಲನ್ನು ಹೊತ್ತಿಸಲು ಸಾಕಾಗುವುದಿಲ್ಲ .

 ಸಿ ) ಜ್ವಲನ ಹೊಡೆತ :

ಕಿಡಿಬೆಣೆಯಿಂದ ಹೊಮ್ಮುವ ಕಿಡಿಗಳು ಸಂಪೀಡಿತಗೊಂಡ ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಹೊತ್ತಿಸುತ್ತವೆ .

ಡಿ) ವ್ಯಾಕೋಚಕ ಹೊಡೆತ :

ಪೆಟ್ರೋಲ್ ಅತಿ ವೇಗವಾಗಿ ಉರಿದು ( ದಹಿಸಿ ) ಉಷ್ಣ ಬಿಡುಗಡೆಯಾಗುತ್ತದೆ . ದಹನಕ್ರಿಯೆಯ ಉತ್ಪನ್ನಗಳಾದ ಕಾರ್ಬನ್ ಡೈ ಆಕ್ಸೆಡ್ ,

ಕಾರ್ಬನ್ ಮೊನಾಕ್ಸೆಡ್ ನೀರಾವಿಗಳು ಮತ್ತು ಕಾರ್ಬನ್ ಕಣಗಳು ಉಂಟಾಗುತ್ತವೆ ,

ಅನಿಲಗಳು ಥಟ್ಟನೆ ವ್ಯಾಕೋಚನೆ ಹೊಂದುತ್ತವೆ ಮತ್ತು ಪಿಸ್ಟನ್ ಹೆಚ್ಚು ಬಲದಿಂದ ಹೊರತಳ್ಳಿಕೆಗೊಳಗಾಗುತ್ತದೆ .

 ಇ ) ನಿಷ್ಕಾಸ ಹೊಡೆತ :

ನಿರ್ಗಮ ಕವಾಟವು ತೆರೆಯಲ್ಪಡುತ್ತದೆ ಪಿಸ್ಟನ್ ಹಿಂದಕ್ಕೆ ಚಲಿಸುತ್ತದೆ ದಹನಕ್ರಿಯೆಯ ಅನಿಲ ಉತ್ಪನ್ನಗಳು ಸಿಲಿಂಡರ್‌ನಿಂದ ನಿರ್ಗಮ ಕವಾಟದ ಮೂಲಕ ಹೊರಕ್ಕೆ ತಳ್ಳಿಕೆಯಾಗುತ್ತದೆ .

ಹೀಗೆ ಏಸ್ಟನ್ ಹಿಂದಕ್ಕೂ ಮುಂದಕ್ಕೂ ವೇಗವಾಗಿ ಚಲಿಸಿ ,

ವಕ್ರದಂಡವನ್ನು ತಳ್ಳುವುದರ ಮೂಲಕ ಚಕ್ರವು ವೇಗವಾಗಿ ತಿರುಗುವಂತೆ ಮಾಡುತ್ತದೆ ಮತ್ತು ಈ ಚಕ್ರ ಮನರಾವರ್ತನೆಯಾಗುತ್ತದೆ ಜಲನ ಹಂತ ಮತ್ತು ವ್ಯಾಕೋಚಕ ಹಂತಗಳನ್ನು , ಒಟಾಗಿ ಶಕ್ತಿ ಹೊಡೆತ ಎನ್ನುತ್ತೇವೆ .

ಇಂಜಿನ್‌ಗೆ ಅಗತ್ಯವಾದ ಆರಂಭಿಕ ಚಲನಶಕ್ತಿಯನ್ನು ಒತ್ತು ಪ್ರಾರಂಭಕ ( kick start ) ಅಥವಾ ನೂಕುಬಲ ಅಥವಾ ವಿದ್ಯುತ್ ಪ್ರಾರಂಭಕ ( start motor ) ಗಳಿಂದ ಒದಗಿಸಲಾಗುತ್ತದೆ .

ಪೆಟ್ರೋಲ್ ಇಂಜಿನ್ ಅನ್ನು ( ಲಘು ) ವಾಹನಗಳಾದ ಕಾರು , ಸ್ಕೂಟರ್ ಮತ್ತು ಮೋಟಾರ್ ಬೈಕ್‌ಗಳಲ್ಲಿ ಬಳಸುತ್ತಾರೆ . ಡೀಸೆಲ್ ( ತೈಲ ) ಕ್ಕೆ ಹೋಲಿಸಿದರೆ ,

ಪೆಟ್ರೋಲ್‌ನ ಬೆಲೆದುಬಾರಿಯಾಗಿದೆ ಪೆಟ್ರೋಲ್‌ನ ನಿರಂತರ ಪೂರೈಕೆಯಿಂದ ಅಲ್ಪ ಪ್ರಮಾಣದ ಪೆಟ್ರೋಲ್‌ , ವ್ಯರ್ಥವಾಗುತ್ತದೆ .

ಪೆಟ್ರೋಲ್ ಸಂಪೂರ್ಣವಾಗಿ ವಹಿಸದೇ ಇರುವುದರಿಂದ ಈ ನಷ್ಟ ಉಂಟಾಗುತ್ತದೆ . ಆದರೆ , ಡೀಸೆಲ್ ಉಚ್ಚಜ್ವಲನ ತಾಪವನ್ನು ಹೊಂದಿದೆ ಮತ್ತು ಇದನ್ನು ಉರಿಸಲು ಕಿಡಿಬೆಣೆ ಅಗತ್ಯವಿಲ್ಲ .

ಅಂತರ್ದಹನ ಇಂಜಿನ್‌ನಲ್ಲಿ ಡೀಸೆಲ್‌ನ್ನು ಬಳಸಬೇಕಾದರೆ ಕೆಲವು ಮಾರ್ಪಾಡುಗಳನ್ನು ಮಾಡುವುದು ಅಗತ್ಯವಾಗಿದೆ .

ಪೆಟ್ರೋಲ್ ಇಂಜಿನ್‌ 

1 ) ಪೆಟ್ರೋಲ್ ಇಂಜಿನ್‌ನಲ್ಲಿ ಕಿಡಿಬೆಣೆಯಿಂದ ಉಂಟಾದ ಕಿಡಿಗಳು ಇಂಧನವನ್ನು ಹೊತ್ತಿಸುತ್ತವೆ .

 

ಕಿಡಿಬೆಣೆ ಅಗತ್ಯವಾಗಿದೆ .

2 ) ಆವೀಕೃತ ಪೆಟ್ರೋಲ್‌ನ್ನು ಇಂಧನವನ್ನಾಗಿ ಬಳಸಲಾಗುತ್ತದೆ .

3 ) ಪೆಟ್ರೋಲ್‌ಗೆ ಬೇರೆ ಅನ್ವಯಗಳಿವೆ  ದುಬಾರಿ .

4 ) ತಕ್ಷಣ ಉಂಟಾಗುವ ಒತ್ತಡದಿಂದ ಅನಿಲಗಳು

ವ್ಯಾಕೋಚನೆ ಹೊಂದುತ್ತವೆ .

5 ) ಕಡಿಮೆ ದಕ್ಷತೆಯನ್ನು ಹೊಂದಿದೆ .

6 ) ಮಾಲಿನ್ಯ ತೀವ್ರತೆ ಕಡಿಮೆ .


0 Comments

Leave a Reply

Avatar placeholder

Your email address will not be published. Required fields are marked *