ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

 Right to Freedom of Religious 

Indian religions , fundamental rights , right to freedom of religious , right against exploitation , right to constitutional remedies

 

Indian religions , fundamental rights , right to freedom of religious , right against exploitation , right to constitutional remedies

ಸಂವಿಧಾನದ 25 ನೇ ವಿಧಿ 26 , 27 , 28 ನೇ ವಿಧಿಗಳು ಧಾರ್ಮಿಕ ಹಕ್ಕಿನ ಬಗ್ಗೆ ವಿವರಣೆ ನೀಡುತ್ತದೆ .

ವಿಧಿ .25 . ಅಂತಃ ಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಬಾಧಿತ ಅವಲಂಬನೆ , ಆಚರಣೆ ಮತ್ತು ಪ್ರಚಾರ  25 ನೇ ವಿಧಿ ಅನ್ವಯ ಪ್ರತಿಯೊಬ್ಬರು ಧಾರ್ಮಿಕ ಆಚರಣೆಯನ್ನು ಮಾಡಲು ಅವಕಾಶವಿದೆ . ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದು ಪ್ರತಿಯೊಬ್ಬರು ತಮಗಿಷ್ಟವಾದ ಧರ್ಮವನ್ನು ಸ್ವೀಕರಿಸಲು ಮತ್ತು ಪ್ರಚಾರ ಮಾಡಲು ಧಾರ್ಮಿಕ ಆಚರಣೆಗಳನ್ನು ಮಾಡಲು ಅವಕಾಶ ಕಲ್ಪಿಸಿದೆ . ಈ ಮೂಲಕ ಎಲ್ಲಾ ಧರ್ಮಗಳನ್ನು ಕೂಡ ಸಮಾನವಾಗಿ ಕಾಣಲಾಗುತ್ತಿದೆ . ಅದೇ ರೀತಿ ಹಿಂದುಗಳು , ಭೌದ್ಧರು , ಜೈನರು ತಮ್ಮ ಧರ್ಮವನ್ನು ಪ್ರಚಾರ ಮಾಡುವ ಆಚರಣೆಗಳನ್ನು ಮಾಡುವ ಹಕ್ಕನ್ನು ಪಡೆಯುತ್ತಾರೆ .

ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಧರ್ಮವನ್ನು ಆಚರಣೆ ಮಾಡಲು ಅವಕಾಶ ಕಲ್ಪಿಸಿದೆ . ಆದರೆ ಒತ್ತಾಯದಿಂದ ಅಥವಾ ಯಾವುದೇ ಆಮಿಷ ಒಡ್ಡಿ , ಧರ್ಮಕ್ಕೆ ಸೆಳೆಯಬಾರದು ಮತ್ತು ಆಚರಿಸುವಂತೆ ಒತ್ತಾಯಿಸಬಾರದು .

ಧಾರ್ಮಿಕ ಸಂಸ್ಥೆ ಸ್ಥಾಪನೆ ಸ್ಥಾತಂತ್ರ್ಯ

ವಿಧಿ .26 . ಧಾರ್ಮಿಕ ವ್ಯವಹಾರ ನಿರ್ವಹಿಸಲು ಸ್ವಾತಂತ್ರ್ಯ

26 ನೇ ವಿಧಿ ಅನ್ವಯ ಪ್ರತಿಯೊಬ್ಬ ನಾಗರೀಕನು ಅಥವಾ ನಾಗರೀಕರ ಸಮೂಹವು ಒಂದು ಧರ್ಮದ ಸಂಸ್ಥೆಯನ್ನು ಸ್ಥಾಪಿಸುವ ಅಧಿಕಾರ ಹೊಂದಿದ್ದಾರೆ . ಇಂತಹ ಧಾರ್ಮಿಕ ಸಂಸ್ಥೆಗಳನ್ನು ದೇಶದಲ್ಲಿ ಸ್ಥಾಪಿಸಲಾಗಿದೆ . ಅಂತಹ ಸಂಸ್ಥೆಗಳೆಂದರೆ ರಾಮಕೃಷ್ಣ ಮಿಶನ ಆನಂದ ಮಾರ್ಗ ಎಂಬ ಹಿಂದೂ ಧರ್ಮದವರು ಸ್ಥಾಪಿಸಿದ ಸಂಸ್ಥೆಗಳಾಗಿವೆ .

ಕ್ರಿಶ್ಚಿಯನ್ನರು ಚರ್ಚ್‌ಗಳನ್ನು ಮುಸಲ್ಮಾನರು ಮಸೀದಿಗಳನ್ನು ಸ್ಥಾಪಿಸುವ ಹಕ್ಕನ್ನು ಹೊಂದಿದ್ದಾರೆ .

ಧಾರ್ಮಿಕ ಅಭಿವೃದ್ಧಿಗಾಗಿ ತೆರಿಗೆ ಸಂಗ್ರಹ

ಈ ವಿಧಿ ಅನ್ವಯ ಧಾರ್ಮಿಕ ಸಂಸ್ಥೆಗಳನ್ನು ಮತ್ತು ಚಾರಿಟಬಲ್ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಸಾರ್ವಜನಿ ಕರಿಂದ ಧಾನವನ್ನು ಹಾಗೂ ದತ್ತಿಯನ್ನು ಪಡೆಯಬಹುದು ಆದರೆ ಯಾವುದೇ ರೀತಿಯಲ್ಲಿ ಒತ್ತಾಯಪೂರ್ವಕವಾಗಿ ಪಡೆಯುವಂತಿಲ್ಲ .

ನಿರ್ಬಂದಗಳು  : – ಭಾರತದ ಸಂವಿಧಾನವು ಧಾರ್ಮಿಕ ಹಕ್ಕನ್ನು ನೀಡಿದ್ದು ಈ ಮೂಲಕ ಧಾರ್ಮಿಕ ಸ್ವಾತಂತ್ರ್ಯ ಕ್ಕೆ ಅವಕಾಶ ಕಲ್ಪಿಸಿದೆ . ಆದರೆ ಸಂಸತ್ತು ಹಾಗೂ ಸುಪ್ರಿಂ ಕೋರ್ಟ್ ಕೆಲವು ನಿಬಂಧನೆಗಳನ್ನು ಹಾಕಿದೆ .

ಈ ಕೆಳಕಂಡ ನಿಬಂಧನೆಗಳನ್ನು ಧಾರ್ಮಿಕ ಸ್ವಾತಂತ್ರ್ಯವನ್ನು ಆಚರಿಸುವಾಗ ಅಳವಡಿಸಿಕೊಳ್ಳಬೇಕು

 

1 ) ಧಾರ್ಮಿಕ ಸ್ವಾತಂತ್ರ್ಯವನ್ನು ಆಚರಿಸುವಾಗ ಯಾವುದೇ ಸಾರ್ವಜನಿಕ ಹಿತಾಸಕ್ತಿಗೆ , ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು .

2 ) ಧಾರ್ಮಿಕ ಸಂಸ್ಥೆಗಳನ್ನು ರಾಜಕೀಯ ಮತ್ತು ಇತರೆ ಪ್ರಚೋದನಾಕಾರಿ ಚಟುವಟಿಕೆಗಳಿಗೆ ಬಳಸಬಾರದೆಂದು ರಾಷ್ಟ್ರಪತಿಯವರು 1988 , ಮೇ28 ರಂದು ಸುಗ್ರೀವಾಜ್ಞೆಯನ್ನು ಹೊರಡಿಸಿದರು . ಈ ಸುಗ್ರೀವಾಜ್ಞೆಯು 1988 ರ ಆಗಸ್ಟ್‌ನಲ್ಲಿ ಸಂಸತ್ತನಲ್ಲಿ ಅ ೦ ಗೀಕಾರವಾಯಿತು . ಏಧಿ 27 , ಯಾವುದೇ ನಿರ್ದಿಷ್ಟ ಧರ್ಮದ ಉನ್ನತಿಗಾಗಿ ತೆರಿಗೆಗಳ ಸಂದಾಯದ ಬಗ್ಗೆ ಸ್ವಾತಂತ್ರ್ಯ

3 ) ಕಾನೂನಿನ ಅನ್ವಯ ಸ್ಥಾಪನೆಯಾದ ಧಾರ್ಮಿಕ ಸಂಸ್ಥೆಗಳಲ್ಲಿ ಎಲ್ಲ ವರ್ಗದವರಿಗೂ ಪ್ರವೇಶ ದೊರೆಯುವಂತೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ .

4 ) ಒಂದು. ಪೂರ್ವಕವಾಗಿ ಧಾರ್ಮಿಕ ಸಂಸ್ಥೆಯು ಉದ್ದೇಶ ಮತ್ತೊಂದು ಧರ್ಮದ ಅನುಯಾಯಿಗೆ ಭಂಗ ಉಂಟು ಮಾಡಬಾರದೆಂದು ಸುಪ್ರೀಂಕೋರ್ಟ್‌ ತಿಳಿಸಿದೆ .

ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆ

ವಿಧಿ 28. ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ಧಾರ್ಮಿಕ ಶಿಕ್ಷಣದಲ್ಲಿ ಅಥವಾ ಧಾರ್ಮಿಕ ಉಪಾಸನೆಯಲ್ಲ ಹಾಜರಾಗುವ ಸ್ವಾತಂತ್ರ್ಯ

ಈ ವಿಧಿ ಅನ್ವಯ ಸರ್ಕಾರದ ಅನುದಾನದ ಸಹಾಯದಿಂದ ಸ್ಥಾಪಿತವಾಗಿರುವ ಸಂಸ್ಥೆಯು ಯಾವುದೇ ವ್ಯಕ್ತಿಯನ್ನು ಧಾರ್ಮಿಕ ಆಚರಣೆಗೆ ಒತ್ತಾಯಿಸುವಂತಿಲ್ಲ .

ಅಂತಹ ಧಾರ್ಮಿಕ ಸಂಸ್ಥೆಗಳು ಧಾರ್ಮಿಕ ವಿಷಯವನ್ನು ಬೋಧನೆ ಮಾಡಲು ಅವಕಾಶವಿದ್ದರೆ ಅಂತಹ ವಿದ್ಯಾ ಸಂಸ್ಥೆಗೆ ಹಾಜರಾಗುವ ವ್ಯಕ್ತಿಯ ಅನುಮತಿ ಇಲ್ಲದೆ ಬೋಧಿಸುವಂತಿಲ್ಲ . ಹಾಗೂ ವಿದ್ಯಾಸಂಸ್ಥೆಗೆ ಹಾಜರಾಗುವ ವ್ಯಕ್ತಿಗಳು ಆಪಾಪ್ತರಾಗಿದ್ದರೆ ಅಂತಹ ಸಂದರ್ಭದಲ್ಲಿ ಪೋಷಕರ ಅನುಮತಿಯನ್ನು ಪಡೆಯಬೇಕು .

28 ನೇ ವಿಧಿಯು ಶೈಕ್ಷಣಿಕ ಸಂಸ್ಥೆಗಳನ್ನು ಪ್ರಮುಖವಾಗಿ 4 ವಿಧಗಳಲ್ಲಿ ವಿಂಗಡಿಸಿ , ಧಾರ್ಮಿಕ ಶಿಕ್ಷಣ ನೀಡುವ ಬಗ್ಗೆ ತಿಳಿಸಿದೆ .

1 ) ಸರ್ಕಾರವು ನೇರವಾಗಿ ನಿರ್ವಹಿಸುತ್ತಿರುವ ಸಂಸ್ಥೆ . ಇವುಗಳಲ್ಲಿ ಧಾರ್ಮಿಕ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ .

2 ) ಟ್ರಸ್ಟ್‌ವತಿಯಿಂದ ಸ್ಥಾಪನೆಯಾಗಿ ಸರ್ಕಾರದ ಅನುದಾನದ ಪಡೆದು , ಸರ್ಕಾರದಿಂದ ನಿರ್ವಹಣೆ ಯಾಗುತ್ತಿರುವ ಸಂಸ್ಥೆಗಳು , ಇವುಗಳಲ್ಲಿ ಧಾರ್ಮಿಕ ಬೋಧನೆಗೆ ಅನುಮತಿಯಿದೆ .

3 ) ಸರ್ಕಾರದಿಂದ ಅನುಮತಿ ಪಡೆದ ಸಂಸ್ಥೆಗಳು . ಇವುಗಳಲ್ಲಿ ಧಾರ್ಮಿಕ ಬೋಧನೆಯು ಸ್ವಯಂ ಆಧಾರಿತವಾಗಿ ಅನುಮತಿ ನೀಡಲಾಗಿದೆ . ಇವುಗಳಲ್ಲಿ ಧಾರ್ಮಿಕ ಬೋಧನೆಗೆ ಅನುಮತಿಯಿದೆ .

ಈ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವಾಗ ಅಪ್ರಾಪ್ತರಾಗಿದ್ದರೆ ಅಂತಹ ಸಂದರ್ಭದಲ್ಲಿ ಪೋಷಕರ ಅನುಮತಿಯನ್ನು ಪಡೆದು , ಧಾರ್ಮಿಕ ಬೋಧನೆ ನೀಡಬೇಕಾಗುತ್ತದೆ .

4 ) ಸರ್ಕಾರದಿಂದ ಅನುದಾನ ಪಡೆಯದೇ ನಡೆಸುತ್ತಿರುವ ಸಂಸ್ಥೆಗಳು ಇವುಗಳಲ್ಲಿ ಧಾರ್ಮಿಕ ಬೋಧನೆಗೆ ಅನುಮತಿಯಿದೆ .

ಆನುದಾನರಹಿತವಾಗಿ ಧಾರ್ಮಿಕ ಅಲ್ಪಸಂಖ್ಯಾತರು ಸ್ಥಾಪಿಸಿರುವ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆಗೆ ಅವಕಾಶವಿದೆ . ಈ ಸಂಸ್ಥೆಗಳು ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆಯದೇ ನಡೆಸುತ್ತಿರುತ್ತವೆ


0 Comments

Leave a Reply

Avatar placeholder

Your email address will not be published. Required fields are marked *