ದೇ.ಜವರೇಗೌಡ ( 1918 )

ದೇ.ಜವರೇಗೌಡ,de javaregowda,javaregowda,nanjamma javaregowda hospital,chandan javaregowda,kannada kavigalu list,kannada kavigalu

 

 

ದೇ.ಜವರೇಗೌಡ,de javaregowda,javaregowda,nanjamma javaregowda hospital,chandan javaregowda,kannada kavigalu list,kannada kavigalu

ದೇ.ಜವರೇಗೌಡ

ಸ್ಥಳ – ಚನ್ನಪಟ್ಟಣ ( ತಾ ) , ಚಕ್ಕರೆ ಗ್ರಾಮ * ಕಾವ್ಯನಾಮ – ದೇಜಗೌ, ತಂದೆ – ದೇವೇಗೌಡರು , ತಾಯಿ ಚೆನ್ನಮ್ಮ

ಕನ್ನಡನಾಡಿನ ಹೆಸರಾಂತ ಗದ್ಯ ಲೇಖಕರಲ್ಲೊಬ್ಬರು , ಮುಖ್ಯವಾಗಿ ಕನ್ನಡಕ್ಕೆ ಸೂಕ್ತ ಶಾಸ್ತ್ರೀಯ ಸ್ಥಾನಮಾನ ವನ್ನು ದೊರೆಕಿಸಿಕೊಡುವ ಹೋರಾಟದಲ್ಲಿ ಇವರು ವಹಿಸಿದ ಪಾತ್ರ ಹಿರಿದು.

ಕನ್ನಡ ಮಾಧ್ಯಮವಾಗಬೇಕು , ಕನ್ನಡ ಆಡಳಿತ ಭಾಷೆಯಾಗಬೇಕು , ಕನ್ನಡ ನಾಡಿನಲ್ಲಿ ಕನ್ನಡವೇ ಅಗ್ರಪೀಠದಲ್ಲಿ ಪ್ರತಿಷ್ಠಾಪಿತವಾಗಬೇಕು , ಕನ್ನಡಕ್ಕೆ ವಿಶ್ವಮಾನ್ಯತೆ ದೊರಯಬೇಕು

ಎಂಬ ಹ ೦ ಬಲವನ್ನು ತುಂಬಿಕೊಂಡು ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು ದೇ.ಜ.ಗೌನವರು ಕುವೆಂಪುನವರ ಶಿಷ್ಯರಾಗಿ ಅವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು .

ಇವರು ಮೊದಲು ಅಠಾರ ಕಚೇರಿಯಲ್ಲಿ ಗುಮಾಸ್ತರಾಗಿ ,ಮೈಸೂರು ವಿ.ವಿ.ನಿಲಯದಲ್ಲಿ ಅಧ್ಯಾಪಕರಾಗಿ ಪ್ರಕಟಣ ಶಾಖೆಯ ಕಾರ್ಯದರ್ಶಿಯಾಗಿ , ಕುವೆಂಪು & ಮೈಸೂರು ವಿ.ವಿ.

ನಿಲಯಕ್ಕೆ ಉಪಕುಲಪತಿಗಳಾಗಿ ನಂತರ 1957 ರಲ್ಲಿ ವಿ.ವಿ.ನಿಲಯದ ಪ್ರಪ್ರಥಮ ಪರೀಕ್ಷಾ ನಿಯಂತ್ರಣಾಧಿಕಾರಿಯನ್ನಾಗಿ , 1969 ರಲ್ಲಿ ಮೈಸೂರು ವಿ.ವಿ. ಕುಲಪತಿಗಳಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದರು .

ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಕೃತಿ ರಚನೆ ಮಾಡಿದ್ದಾರೆ .

 ಆತ್ಮ ಕಥೆಗಳು –

ಹೋರಾಟದ ಬದುಕು , ನೆನಪಿನ ಬುತ್ತಿ ನನ್ನ ಉಪವಾಸದ ಕಥೆ ( 1994 ) ಕುಲಪತಿ ದಿನಚರಿ ( 1973 ) .

ಭಾಷಾಂತರ ಕೃತಿಗಳು : –

ಮನರುತ್ಥಾನ ಟಾಲ್‌ಸ್ಟಾಯ್ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ 1967 ) ಯುದ್ಧ ಮತ್ತು ಶಾಂತಿ , ನೆನಪು ಕಹಿಯಲ್ಲ.ಅನ್ನಾಕರೆನಿನ , ಹಮ್ಮು – ಬಿಮ್ಮು ( ಜೇನ್ ಆಸ್ಟಿನ್ -1961 ) .

ಸಂಪಾದಿಸಿದ ಕೃತಿಗಳು –

ಕಬ್ಬಿಗರ ಕಾವ್ಯ ( 1964 ) , ಗಿರಿಜಾ ಕಲ್ಯಾಣ ಮಹಾ ಪ್ರಬಂಧ , ಚಿಕುಪಾಧ್ಯಾಯನ , ರುಕ್ಷಾಂಗದ ( 1992 ) ಚರಿತ್ರೆ , ಜೈಮಿನಿ ( 1959 ) ಭಾರತ ಸಂಗ್ರಹ , ಧರ್ಮಾಮೃತ ಸಂಗ್ರಹ , ನಳಚರಿತ್ರೆ , ಕುಲಪತಿಯ ಭಾಷಣಗಳು ಮತ್ತು ಪತ್ರಗಳು ,

  ಪ್ರವಾಸ ಕಥನಗಳು –

ವಿದೇಶದಲ್ಲಿ ನಾಲ್ಕು ವಾರ ( 1970 ) , ಪ್ರವಾಸಿಯ ದಿನಚರಿ ಆಫ್ರಿಕಯಾತ್ರ , ಯೇಸು ವಿಭೀಷಣ ನಾಡಿನಲ್ಲಿ ( 1978 ) , ಹಚ್ಚ ಹಸುರಿನ ಹಾಡಿನಲ್ಲಿ ಇತ್ಯಾದಿ ಜೀವನ ಚರಿತ್ರೆಗಳು – ರಾಷ್ಟ್ರಕವಿ ಕುವೆಂಪು ( 1967 ) , ಮೋತಿಲಾಲ್ ನೆಹರು , ತೀನಂಶ್ರೀ , ಲೋಕನಾಯಕ , ಲೋಕದ ಬೆಳಕು , ಇತ್ಯಾದಿ

ಜಾನಪದ ಕೃತಿಗಳು –

ಜಾನಪದ ಅಧ್ಯಾಯನ , ಜಾನಪದ ವಾಹಿನಿ ಜಾನಪದ ಸೌಂದರ್ಯ ಜನಪದ ಗೀತಾಂಜಲಿ ಇತ್ಯಾದಿ , ಜಾನಪದವನ್ನು 1966 ರಲ್ಲಿ ಕನ್ನಡ ಎಂ.ಎ. ತರಗತಿಗಳಲ್ಲಿ ವಿಶೇಷ ಅಧ್ಯಾಯನವನ್ನಾಗಿ * – ಅಳವಡಿಸಿದರು .

ಕುವೆಂಪು ಸಾಹಿತ್ಯದ ಅಧ್ಯಯನಕ್ಕೆ ದೇಜಗೌ ಮಹತ್ತರ ಕೊಡುಗೆ ನೀಡಿದ್ದಾರೆ . ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ , ಕುವೆಂಪು ಸಾಹಿತ್ಯ , ದಾಂಪತ್ಯ ದರ್ಶನ , ಕುವೆಂಪು ಶೈಲಿ , ಕುವೆಂಪನವರ ಕೊನೆ ದಿನಗಳು ಇತ್ಯಾದಿಗಳು ಅವರ ಸಾಧನೆಯ ಕುರಿತ ಕೃತಿಗಳಾಗಿವೆ .

ವೈಚಾರಿಕ ಕೃತಿಗಳು – ಕನ್ನಡಿಗರೇ ಎಚ್ಚರಗೊಳ್ಳಿ ( 1951 )ಕನ್ನಡಕ್ಕಾಗಿ ಕೈ ಎತ್ತು ( 1981 ) , ಕನ್ನಡಕ್ಕೆ ನಮನ ರಾಷ್ಟ್ರೀಯಮೂಲಭೂತ ಸಮಸ್ಯೆ .ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಸ್ಥಾಪಿಸಿದರು .

ಐತಿಹಾಸಿಕ ಕಾದಂಬರಿ –

ಕಡುಗಲಿ ಕುಮಾರರಾಮ ( 1961 ) ಇಂಗ್ಲೀಷ್‌ನಲ್ಲಿ -ಕಲ್ಟರ್ ಎಜ್ಯೂಕೇಷನ್ ಅಂಡ್ ಸೊಸೈಟಿ ಪೊಯೆಮ್ಸ್ ಆಫ್ ಕುವೆಂಪು * ಬೆಂಗಳೂರಿನಲ್ಲಿ ನಡೆದ 47 ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ( 1970 ) ಅಧ್ಯಕ್ಷರಾಗಿದ್ದರು .

ಕರ್ನಾಟಕ ವಿಶ್ವ ವಿದ್ಯಾಲಯವು 1975 ರಲ್ಲಿ ಗೌರವ ಡಾಕ್ಟರೇಟ್ ಹಾಗೂ ಜಾನಪದ ಕ್ಷೇತ್ರದ ಸೇವೆಗೆ ಗಮನಿಸಿ ಅದೆ ವಿ.ವಿ ನಿಲಯದ 3 ನೇ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ( 1976 ) ಆರಿಸಿತು .

 ಪ್ರಶಸ್ತಿಗಳು –

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ( 1984 ) , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ( 1985 ) , ಪಂಪ ಪ್ರಶಸ್ತಿ ( 1998 ) ನಾಡೋಜ ಗೌರವ ಡಿಲಿಟ್ ಇತ್ಯಾದಿಗಳು ಇವರಿಗೆ ಅಭಿನಂದನಾ ಗ್ರಂಥಗಳು ಅರ್ಪಣೆಯಾಗಿವೆ , ಅವೆಂದರೆ ಅಂತಃಕರಣ , ರಸಷಷ್ಟಿ , ನಮ್ಮ ನಾಡೋಜ , 70 ರ ಹೊಸ್ತಿಲಲ್ಲಿ , ಕಣ್ಮಣಿ , ಕನ್ನಡ ಸೇನಾನಿ ಇತ್ಯಾದಿಗಳು .

ಇವರ ಸೇವೆಯನ್ನು ಪರಿಗಣಿಸಿ 2008 ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿಯನ್ನು 2011 ರಲ್ಲಿ ನೀಡಲಾಯಿತು . * ಕರ್ನಾಟಕ ಸರ್ಕಾರ ನೀಡುವ 2010 ನೇ ಸಾಲಿನ ಬಸವ ಪ್ರಶಸ್ತಿಯನ್ನು ನೀಡಲಾಗಿದೆ .

 


0 Comments

Leave a Reply

Avatar placeholder

Your email address will not be published. Required fields are marked *