ದಾಸ ಸಾಹಿತ್ಯ,ಸರ್ವಜ್ಞ | sarvagna | ಸಂಚಿಯ ಹೊನ್ನಮ್ಮ

ದಾಸ ಸಾಹಿತ್ಯ

sarvagna,sanchi honnamma,sarvagna vachanagalu,sarvagna vachanagalu in kannada,sarvagna vachana,sarvagna vachana in kannada

sarvagna,sanchi honnamma,sarvagna vachanagalu,sarvagna vachanagalu in kannada,sarvagna vachana,sarvagna vachana in kannada

ಸರ್ವಜ್ಞ

16-17ನೇ ಶತಮಾನದ ವಚನಕಾರ . ಈತನ ಜೀವನದ ಬಗ್ಗೆ ಖಚಿತವಾಗಿ ಯಾವ ಸಂಗತಿಗಳೂ ತಿಳಿದು ಬಂದಿಲ್ಲ .

ಈತನು ಧಾರವಾಡ ಜಿಲ್ಲೆಯ ಹುಟ್ಟಿದ್ದು ಅಂಬಲೂರಿನಲ್ಲಿ ಇದೇ ಜಿಲ್ಲೆಯ ಮಾಸೂರಿನ ಬಸವರಸವೆಂಬ ಆರಾಧ್ಯ ಬ್ರಾಹ್ಮಣ ಇವನ ತಂದೆ , ಮಾಳಿಯೆಂಬ ಕುಂಬಾರರ ಹೆಣ್ಣು ಇವನ ತಾಯಿ ಇವರ ವಿವಾಹ ಬಾಹಿರ ಸಂಬಂಧದಿಂದ ಇವನ ಜನನ . ಈ ಸಂಗತಿಗಳಲ್ಲಿ ಎಷ್ಟು ಸತ್ಯವಿದೆಯೋ ಹೇಳುವಂತಿಲ್ಲ .

ಸರ್ವಜ್ಞನ ಕರೆಯುವುದು ರಚನೆಗಳನ್ನು ವಚನಗಳೆಂದು ರೂಢಿಯಾಗಿದ್ದರೂ ಮೀರಿದಾಗಿವೆ . ವಾಸ್ತವವಾಗಿ ತ್ರಿಪದಿಗಳು 2000 ಅವುಗಳಲ್ಲಿ 1000 ಮಾತ್ರ ಸರ್ವಜ್ಞನವೆಂದೂ ಉಳಿದವು ಪ್ರಕ್ಷೇಪವೆಂದೂ ಹೇಳಲಾಗಿದೆ .

ಸರ್ವಜ್ಞ ಎಂಬುದು ಕವಿಯ ಹೆಸರಾಗಿ ತೋರುವುದಿಲ್ಲ ಇದು ಇವನ ಅಂಕಿತ ಇಲ್ಲವೆ ಬಿರುದಾಗಿರಬಹುದು ಸರ್ವಜ್ಞ ಎಂಬುದು ಹೆಸರೆಂದೂ , ಪರಮಾರ್ಥ ಎಂಬುದು ಇವನ ಅಂಕಿತವೆಂದೂ ಈಚೀನ ಒಂದು ಅಭಿಪ್ರಾಯ .

ಸರ್ವಜ್ಞ ವೀರಶೈವ ಧರ್ಮಕ್ಕೆ ಸೇರಿದವನಂತೆ ಮತಾತೀತವಾದ ತೋರಿದರು ಇವನದು ವಿಶಾಲ ದೃಷ್ಟಿ , ಸತ್ಯನಿಷ್ಠುರ ವ್ಯಕ್ತಿತ್ವ .

ಇವನೊಬ್ಬ ನಿರ್ಭೀತ ವಿರಕ್ತ ಸಮಾಜದ ರೋಗರುಜಿನಗಳನ್ನು ಬಯಲಿಗೆಳೆದು ಅವಕ್ಕೆ ಚಿಕಿತ್ಸೆ ಮಾಡುತ್ತ ತಿಳಿವನ್ನು ಹರಡುತ್ತ ನಾಡಿನಲ್ಲೆಲ್ಲ ಸಂಚರಿಸಿದ ಪರಿವ್ರಾಜಕ ಎನ್ನಬಹುದಾಗಿದೆ

ಇವನ ವಚನಗಳಲ್ಲಿ ಪ್ರಸ್ತಾಪವಾಗದಿರುವ ವಿಷಯವೇ ಇಲ್ಲ ಅವುಗಳಲ್ಲಿ ನೀತಿಯಿದೆ , ತಮ್ಮ ಎದೆ , ವಿವೇಕವಿದೆ , ಎಡಂಬನವಿದೆ , ಅನುಭವ ರಸಾಯನವಿದೆ .

ಎಲ್ಲವೂ ಸರಸವಾಗಿ ನಿರೂಪಿತವಾಗಿದೆ . ಮಿತ್ರಸಮ್ಮಿತಕಾಂತಾ ಸಮ್ಮಿತಗಳನ್ನು ಸರ್ವಜ್ಞನ ವಚನಗಳಲ್ಲಿ ಕಾಣುತ್ತೇವೆ . ಹೇಳಬೇಕಾದ್ದನ್ನು ಈತನು ಇವನು ಸರಳ ಸುಲಭವಾದ ಶೈಲಿಯಲ್ಲಿ , ಉಪಮಾನ ದೃಷ್ಟಾಂತಗಳ ಮೂಲಕ ಜನಸಾಮಾನ್ಯರ ಮನಸ್ಸಿಗೆ ನಾಟುವಂತೆ ಹೇಳುತ್ತಾನೆ . ಆದ್ದರಿಂದಲೇ ಇವನ ತ್ರಿಪದಿಗಳು ಗಾದೆಗಳಂತೆ ನಾಡಿನಲ್ಲಿ ಮನೆಮಾತಾಗಿವೆ . ಉದಾ- “ ಜಾತಿ -ಹೀನನ ಮನೆಯ ಜ್ಯೋತಿ ತಾ ಹೀನವೇ ” ಹೀಗೆ – “ ಅನ್ನದೇವರ ಮುಂದೆ ಇನ್ನ ದೇವರುಂಟೆ ” “ ವಿದ್ಯೆಯು ಳ್ಳವನ ಮುಖ ಮುದ್ದು ಬರುವ ೦ ತಿಕ್ಕು ….. ಮುಂತಾದ ನುಡಿಮುತ್ತಿನಲ್ಲಿ ಜಾತಿ , ಮತ ಧರ್ಮಅಂಧ ಶ್ರದ್ಧೆ ಮೌಡ್ಯತೆಗಳನ್ನು ಆಷಾಡಭೂತಿತನವನ್ನು ದೇವರುಗಳ ಭಕ್ತಿಯ ಡಾಂಭಿಕತೆ , ಅರ್ಥವಿಲ್ಲದ ವ್ಯರ್ಥ ಪ್ರಯತ್ನದ ಸಾಕ್ಷಾತ್ಕಾರವನ್ನು ನೀಡಿದವನಾಗಿದ್ದಾನೆ .

ಕನ್ನಡ  ತಮಿಳು ಸಾಹಿತ್ಯದಲ್ಲಿ ತಿರುವಳ್ಳುವರ್ , ತೆಲಗು ಸಾಹಿತ್ಯದಲ್ಲಿ ವೇಮನ ಇದ್ದ ಹಾಗೆ ಸಾಹಿತ್ಯದಲ್ಲಿ ಸರ್ವಜ್ಞನು ವಿಶಿಷ್ಟ ಸ್ಥಾನಗಳಿಸಿದ್ದಾನೆ .

 ಸಂಚಿಯ ಹೊನ್ನಮ್ಮ ( ಕ್ರಿ. .1680 )

ಇವಳು ಪ್ರಸಿದ್ಧ ಕವಯತ್ರಿ ಹದಿಬದೆಯ ಧರ್ಮ ಎಂಬ ಗ್ರಂಥದಕರ್ತೃ . * ಈಕೆ ಚಿಕ್ಕದೇವರಾಜ ಒಡೆಯರ್ ( 1673-1704 ) ಅವರಲ್ಲಿ ಸಂಚಿಯ ಊಳಿಗದಲ್ಲಿದ್ದವಳೆಂದು ತಿಳಿಯುತ್ತದೆ ಅಂದರೇ ಒಡೆಯನ ಅಂತಃಪುರದಲ್ಲಿ ಚೀಲವನ್ನು ಹಿಡಿದು ಕೆಲಸ ತಾಂಬೂಲ ನಿರ್ವಹಿಸುತ್ತಿದ್ದವಳು .

ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ಇವಳ ಜನ್ಮಸ್ಥಳ ಇದೇ ಚಿಕ್ಕದೇವರಾಜನ ಬಾಲ್ಯ ಸ್ನೇಹಿತೆಯೂ ಆಗಿದ್ದಳು .

ಇವಳು ಹದಿಬದಿಯ ಧರ್ಮ ಎಂಬ ಗ್ರಂಥವನ್ನು ಸಾಂಗತ್ಯದಲ್ಲಿ ರಚಿಸಿದ್ದಾಳೆ . ಇದರಲ್ಲಿ 9 ಸಂಧಿಗಳೂ 479 ಪದ್ಯಗಳೂ ಇವೆ . ಈ ಕಾವ್ಯದಲ್ಲಿ ಪತಿವ್ರತಾ ಸ್ತ್ರೀಯ ಧರ್ಮವು ವಿಶದವಾಗಿ ನಿರೂಪಿತವಾಗಿದೆ . ( ಪ್ರತಿವ್ರತಾ ಧರ್ಮದ ನಿಯಮಗಳು , ಭಾರತೀಯ ಸ್ತ್ರೀಯರ ಸ್ಥಾನಮಾನಗಳು , ಪತಿಯೊಂದಿಗೆ ಅತ್ತೆ ಮಾವಂ ರೊಂದಿಗೆ , ಗುರುಹಿರಿಯರೊಂದಿಗೆ , ಗ್ರಾಮದವಳಾದ ಪಟ್ಟದರಸಿ ದೇವಾರಾಜಮ್ಮಣ್ಣಿಯ ಬಂಧೂ ಬಳಗ ದವರೊಂದಿಗೆ ಹೆಣ್ಣು ಹೇಗೆ ನಡೆದು ಕೊಳ್ಳಬೇಕು ಈ ಮುಂತಾದ ವಿಷಯಗಳನ್ನು ಹೊನ್ನಮ್ಮ ಸುಂದರವಾಗಿ ನಿರೂಪಿಸಿದ್ದಾಳೆ .

ಹೆಣ್ಣನ್ನು ಕಂಡು ಅಸಡ್ಡೆ ಮಾಡುವವರನ್ನು ಕುರಿತು . “ ಪೆಣ್ಣಲ್ಲವೆ ತಮ್ಮನ್ನೆಲ್ಲ ಪಡೆದ ತಾಯಿ ಪೆಣ್ಣಲ್ಲವೆ ಮೊರೆದವಳು ” “

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವಿರು ಕಾಣದಗಾವಿಲರೆ ” ಎಂದು ನುಡಿದಿದ್ದು ಹೆಣ್ಣಿನ ಕು ಸರ್ವಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದಾಳೆ . ನಿರೂಪಣೆಯೇ ಕೃತಿಯ ಪರಮೋದ್ದೇಶವಾದರೂ ಕೆಲವು ಸಂದರ್ಭಗಳಲ್ಲಿ ಕಾವ್ಯಾಂಶವನ್ನು ಕಾಣಬಹುದು ಸತಿ ಧರ್ಮದೊಡನೆ ಪತಿಧರ್ಮವನ್ನು ಪತಿಯಾದವನ್ನು ಸತಿಯೊಡನೆ ವ್ಯವಹರಿಸಬೇಕಾದ ವಿನಯ , ವಿಧೇಯತೆಯನ್ನು ಹೇಳಿದ್ದಾಳೆ . “ ಸರಸ ಸಾಹಿತ್ಯದ ವರದೇವತೆ ” ಎಂಬ ಬಿರುದಿಗೆ ಪಾತ್ರಳಾಗಿ ಹೊನ್ನಮ್ಮ ಕನ್ನಡ ಸಾರಸತ್ವ ಕವಿಯತ್ರಿಯಾಗಿ ಧೃವತಾರೆಯಾಗಿ ಲೋಕದ ಮಿನುಗುತ್ತಿದ್ದಾಳೆ .

 

Comments

Leave a Reply

Your email address will not be published. Required fields are marked *