June 27, 2022

ತ್ರಿಪದಿ

tripadi in kannada,sarvagnana tripadigalu in kannada,sarvagna tripadi,sarvagna tripadi in kannada,grammar kannada

 

tripadi in kannada,sarvagnana tripadigalu in kannada,sarvagna tripadi,sarvagna tripadi in kannada,grammar kannada

ಜನಪದ ಸಾಹಿತ್ಯದಲ್ಲಿ ತ್ರಿಪದಿಯ ಬಳಕೆ ಅತ್ಯಂತ ಜನಪ್ರಿಯವಾಗಿದೆ . ಡಾ.ಎ.ವೆಂಕಟಸುಬ್ಬಯ್ಯರವರು ಜೋಗಿಮಾರ ಗುಹೆಯ ಶಿಲಾಲೇಖನದ ಮೂರು ಪ್ರಾಕೃತ ಪದ್ಯವನ್ನು ಅಂಶಗಣ ಚರಣಗಳ ತ್ರಿಪದಿಯಾಗಿ ಭಾವಿಸಿರುವುದರಿಂದ ಇದೇ ಅತ್ಯಂತ ಪ್ರಾಚೀನ ತ್ರಿಪದಿಯೆಂದು ಹೇಳಲಾಗಿದೆ . ಸುಮಾರು 700 ರಲ್ಲಿ ದೊರೆತಿರುವ ಬಾದಾಮಿ ಶಾಸನವೇ ಅತ್ಯಂತ ಪ್ರಾಚೀನ ತ್ರಿಪದಿಯನ್ನೊಳಗೊಂಡಿರುವುದು , ಇದು ಕಪ್ಪೆ ಆರಭಟ್ಟನನ್ನು ಹೊಗಳುವ ಒಂದು ಶಾಸನ ಇದರಲ್ಲಿ ಮೂರು ತ್ರಿಪದಿಗಳಿವೆ . ಇವು ಅಂಶಗಣ ಘಟಿತವಾದ ತ್ರಿಪದಿಗಳು , ಪಂಪನ ಆದಿಪುರಾಣದಲ್ಲಿ ಎರಡು ತ್ರಿಪದಿಗಳು ಕಂಡು ಬರುತ್ತವೆ . ಸೊನ್ನನ ಶಾಂತಿ ಪುರಾಣದಲ್ಲಿಯೂ ನಾಲ್ಕು ತ್ರಿಪದಿಗಳು ಕಂಡು ಬಂದಿವೆ . ನಾಗವರ್ಮ , ಚಾವುಂಡರಾಯ , ದುರ್ಗಸಿಂಹ , ಶಾಂತಿನಾಥ , ನಾಗಚಂದ್ರ , ಸರ್ವಜ್ಞ ಅಕ್ಕಮಹಾದೇವಿ ಮೊದಲಾದವರ ಕೃತಿಗಳಲ್ಲೆಲ್ಲಾ ತ್ರಿಪದಿಗಳನ್ನು ಗುರ್ತಿಸಬಹುದು .

ತ್ರಿಪದಿ ಎಂಬುದು ಮೂರು ಚರಣಗಳುಳ್ಳ ಒಂದು ಪದ್ಯ ಜಾತಿ , ಇದರ ಬಗ್ಗೆ ದ.ರಾ.ಬೇಂದ್ರರವರು ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ ಎಂದಿದ್ದಾರೆ . ಸಂಸ್ಕೃತದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗಾಯಿತ್ರಿ ಬಳಕೆಯಲ್ಲಿರುವಂತೆ ಕನ್ನಡದಲ್ಲಿ ತ್ರಿಪದಿ ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಎಂಬುದು ಇದರ ಅರ್ಥ . ತಿಪದಿಗೆ ತಿವದಿ , ತಿವುಡ , ತಿವುಡ , ಅಪರಿಕಾ ಎಂಬ ಹೆಸರುಗಳು ಬಳಕೆಯಲ್ಲಿವೆ . ತ್ರಿಪದಿಯ ಲಕ್ಷಣವನ್ನು ಕುರಿತು ಮೊದಲು ಹೇಳಿದವನು ನಾಗವರ್ಮ ಜಯಕೀರ್ತಿ ಮತ್ತು ಸೋಮೇಶ್ವರ ಈ ಇಬ್ಬರು ನಾಗವರ್ಮನ ಅನಂತರ ಕ್ರಮವಾಗಿ ತ್ರಿಪದಿಯ ಲಕ್ಷಣವನ್ನು ಕುರಿತು ಹೇಳಿರುವರು .

ತ್ರಿಪದಿಯಲ್ಲಿ ಅದರ ಹೆಸರೇ ತಿಳಿಸುವಂತೆ ಮೂರು ಪಾದಗಳಿರುತ್ತದೆ . ಒಟ್ಟು 11 ಗಣಗಳಿರುತ್ತದೆ . 6 & 11 ನೆಯ ಗಣಗಳು ಬ್ರಹ್ಮ ಗಣಗ ರುತ್ತವೆ . ಉಳಿದ ಗಣಗಳಲ್ಲಿ ವಿಷ್ಣು ಗಣಗಳಾಗಿರುತ್ತವೆ . ಕೆಲವು ಸಲ ವಿಷ್ಣುಗಣಗಳಿಗೆ ಬದಲಾಗಿ ಪರಾಯ ಗಣಗಳು ಬರಬಹುದು . 1. 2 ನೇಯ ಪಾದಗಳಲ್ಲಿ ನಾಲ್ಕು ನಾಲ್ಕು ಗಣಗಳು ಬಂದರೆ 3 ನೆಯ ಚರಣದಲ್ಲಿ ತಿಗಣಗಳು ಬರುತ್ತವೆ . 2 ನೇಯ ಪಾದದ 3 ನೇ ಗಣದಲ್ಲಿ ಯತಿ ಇರುತ್ತದೆ .

ಉದಾ : – ಸಾಧುಗೆ ಸಾಧುಮಾ ಧುರಂಗ ಮಾರ್ಧುಯಾಂ – ವಿವಿಐಐ ವಾಧಿಪ ಕಲಿಗೆ ಕಲಿಯುವ ವಿಪರೀತನ್ – ಎಬ್ರವಿವಿ ಮಾಧವ ನೀತನ್ ಪೆವಿನಲ್ಲ – ಎಬ್ರವಿ ಲಕ್ಷಣಗಳು

  1. ಮೂರು ಸಾಲುಗಳುಳ್ಳ ಪದ್ಯವಾಗಿದ್ದು , ಒಟ್ಟು 11 ಗಣಗಳು ಬರುತ್ತವೆ .
  2. 2 . 6 & 10 ನೇ ಸ್ಥಾನದಲ್ಲಿ ಬ್ರಹ್ಮಗಣಗಳು ಬರುತ್ತವೆ
  3. 2 ನೇಯ ಪಾದದ ೨ ನೇ ಗಣದಲ್ಲಿ ಯತಿ ಬರುತ್ತದೆ . ತ್ರಿಪದಿಯಲ್ಲಿ ಚಿತ್ರ ವಿಚಿತ್ರ , ಚಿತ್ರಲತ ಎಂದು ದೇವ ಬೇರೆ ರೀತಿಗಳಿವೆ .

 

 ಸಾಂಗತ್ಯ

ಸಾಂಗತ್ಯ . ಕನ್ನಡದ ಶುದ್ಧ ಪಂದಸ್ಸು , ಸಾಂಗತ್ಯ ಅಂಶಗ ಗಾತ್ಮಕವಾದ ಬುದ್ಧ ದೇಶೀಯ ಛಂದಸ್ಸು ಗಣ , ಸಂಯೋಜನೆಯಲ್ಲಿ ತ್ರಿವರಿ & ಪಟ್ಟದಿ ಎರಡು ಘಟ್ಟಗಳನ್ನು ಗುರುತಿಸಬಹುದು , ಒಂದು ಅಂಶಗಣಾತ್ಮಕವಾದದ್ದು , ಎರಡು ಮಾತ್ರ ಗಣಾತ್ಮಕ ವಾದವು . ಆದರೆ ಸಾಂಗತ್ಯ ಮಾತ್ರ ತ್ರಿಪದಿ , ಪಟ್ಟದಿಗಳಂತೆ ಮಾತ್ರಾ ಗಣಕ್ಕೆ ತಿರುಗದೆ ತನ್ನ ಮೂಲ ಸ್ವರೂಪವಾದ ಅಂಶಗಣಾತ್ಮಕ ರೂಪದಲ್ಲಿಯೇ ಇಂದಿನವರೆಗೂ ಉಳಿದು ಕೊಂಡು ಬಂದಿದೆ . ಇದು ಸಾಂಗತ್ಯದ ವಿಶೇಷ . ಮೊದಲು ಸಾಂಗತ್ಯ ಕಾಣಿಸಿಕೊಂಡುದ್ದು ಕ್ರಿ.ಶ .1400 ರಲ್ಲಿದ್ದ ದೇವರಾಜನ ಸೊಬಗಿನ ಸೋನೆ ಎಂಬ ಕೃತಿಯಲ್ಲಿ , ಸಾಂಗತ್ಯದ ಕೃತಿಗಳೆಂದರೆ ರತ್ನಾಕರವರ್ಣಿಯ ಭರತೇಶ ವೈಭವ , ಸಂಚಿಹೊನ್ನಮ್ಮಳ ಹದಿಬದೆಯ ಧರ್ಮ , ಕನಕದಾಸರ ಮೋಹನ ತರಂಗಿಣಿ , ಪದರಸರ ಶೃಂಗಾರ ಕಥೆ  ಇತ್ಯಾದಿಗಳಿವೆ

. ಲಕ್ಷಣ ; ಹೀಗೇ . ಸಾಂಗತ್ಯದಲ್ಲಿ ನಾಲ್ಕು ಪಾದಗಳಿರುತ್ತವೆ . ಇದು ಆಂಶಗಣಾನ್ವಿತವಾದದ್ದು , ಮೊದಲ ಮೂರನೆಯ ಚರಣಗಳು ಒಂದು ಸಮವಾಗಿದ್ದರೆ ಎರಡು ಹಾಗೂ ನಾಲ್ಕನೆಯ ಚರಣಗಳು ಮತ್ತೊಂದು ಸಮವಾಗಿರುತ್ತದೆ . ಅಂದರೆ ಮೊದಲನೆಯ ಮತ್ತು ಮೂರನೆಯ ಸಾಲುಗಳಲ್ಲಿ ನಾಲ್ಕು ನಾಲ್ಕು ವಿಷ್ಣುಗಳು ಬಂದರೆ , ಎರಡು ಮತ್ತು ನಾಲ್ಕನೆಯ ಸಾಲುಗಳಲ್ಲಿಎರಡೆರಡು ಎಷ್ಟುಗಳು ಒಂದು ಕೊನೆಯಲ್ಲಿ ಒಂದೊಂದು ಬ್ರಹ್ಮಗಣ ಬರುತ್ತದೆ .

ಉದಾ : – ಉಡಲಿಲ್ಲ ಉಣಲಿಲ್ಲ ಹಿಡಿತಂದು ನಾಕಷ್ಟ = ವಿ ವಿ ವಿ ವಿ ಬಡಸಿದೆ ಪರದೇ ಶದೊಳಗೆ = 2 2 ಬ ಮಡದಿ ಕಂ ದನ ಮಾಳೆ ಮೊಡವಿಯೊ ಳಪಕೀರ್ತಿ ಎಎಐಎ ಪಡೆಯಲಾಳನು ಯಂದ ಭೂಪ = ವಿವಿ ಚಿ

ಕರ್ನಾಟಕ ಭಾಷಾ ವಿಷಯ ಜಾತಿಗಳು

ನಾಗವರ್ಮ ತನ್ನ ಛಂದೋಬುಧಿಯ ಪ್ರಥಮಾಧಿ ಕಾರದಲ್ಲಿ 10 ಅಂಶ ಗಣಾನ್ವಿತವಾದ ಪದ್ಯಜಾತಿಗಳನ್ನು ಹೆಸರಿಸುತ್ತಾನೆ . ಅವುಗಳನ್ನು ಕರ್ಣಾಟಕ ಭಾಷಾ ವಿಷಯ ಜಾತಿಗಳು ಎಂದು ಕರೆಯುತ್ತಾರೆ . ಅವುಗಳೆಂದರೆ

1 ) ಮದನವತಿ

2 ) ಗೀತಿಕೆ

3 ) ಏಳೆ

4 ) ತ್ರಿಪದಿ

5 ) ಉತ್ಸಾಹ

6 ) ಅಕ್ಕರ

7 ) ಚೌಪದಿ

8 ) ಪಟ್ಟದಿ

9 ) ಅಕ್ಕರಿಕೆ

10 ಛಂದೋವತಂಸ

ಜಯಕೀರ್ತಿ ತನ್ನ ಛಂದೋನುಶಾಸನದಲ್ಲಿ ನಾಗವರ್ಮ ಗುರುತಿಸಿದ ಎಲ್ಲಾ ಪದ್ಯ ಜಾತಿಗಳನ್ನು ಗುರುತಿಸಿ “ ಉತ್ಸಾಹ ” ವೊಂದನ್ನು ಬಿಟ್ಟಿದ್ದಾನೆ . ಹಾಗಾದರೆ ಜಯಕಿರ್ತಿಯ ಪ್ರಕಾರ ಕರ್ಣಾಟಕ ವಿಷಯ ಜಾತಿಗಳ ಸಂಖ್ಯೆ 9 ಮಾತ್ರ

ಯತಿ

ಕಾವ್ಯಗಳಲ್ಲಿ ಪದ್ಯಗಳನ್ನು ಓದುವಾಗ ಕೆಲವು ನಿರ್ದಿಷ್ಟವಾದ ಸ್ಥಳಗಳಲ್ಲಿ ನಿಲುಗಡೆ ಬರುತ್ತದೆ . ಈ ನಿಲುಗಡೆಯ ಸ್ಥಾನವನ್ನ ಛಂದಸ್ಸಿನ ಪರಿಭಾಷೆಯಲ್ಲಿ ಎಂದು ಕರೆಯಲಾಗಿದೆ . ‘ ಯತಿ ‘ ಪದ್ಯಗಳನ್ನು ಓದುವಾಗ ಅರ್ಥ ಸೂರ್ತಿ ಕೆಡದಂತೆ ಪದ್ಯಪಾದದ ನಿಯತವಾದ ಒಂದೊಂದೆಡೆಯಲ್ಲಿ ನಿಲ್ಲಿಸುವುದು ಹಾಗೆ ನಿಲ್ಲಿಸುವುದು ಪದದ ಮಧ್ಯದಲ್ಲಿಯಾದರೆ ಅರ್ಥಸೂರ್ತಿ ಕೆಡುವುದರಿಂದ ಪದದ ಕೊನೆಯಲ್ಲಿಯೇ ನಿಲ್ಲಿಸಬೇಕು . ಯತಿ ಎಂಬ ಶಬ್ದ ಬ ೦ ದಿದೆ . ಸಂಸ್ಕೃತದ ಧಾತುವಿನಿಂದ ಎಂದರೆ ತಡೆ ಅಥವಾ ತಡೆಯುವಿಕೆ , ವಿಶ್ರಾಂತ , ವಿರಾಮ ಎಂದರ್ಥ .

1 ) ಜಯದೇವ – ವಿರೋಮೋಯತಿ ‘

2 ) ಜಯಕೀರ್ತಿ – ‘ ವಾಕ್ ವಿರಾಮ ‘

3 ) ಹೇಮ ಚಂದ್ರ – ‘ ರವೋ ವಿರಾಮೋಯುತಿ ‘

4 ) ಕವಿರಾಜಮಾರ್ಗ ಕಾರ – ‘ ಯತಿಯೆಂಬುದುಸಿರ್ವದಾಣಂ ‘

5 ) ನಾಗವರ್ಮ – ‘ ಯತಿಯೆಂಬುದು ಗಣನಿಯಮ ಪ್ರತೀತಗುಸಿರ್ದಾಣಮಪುದು

Leave a Reply

Your email address will not be published.