
ಡಿಎನ್ಎ(DNA)
dna, dna test, paternity test, recombinant dna, DNA replication, Genetics, sanger sequencing, dna sequencing, circle dna
ಮಕ್ಕಳು ತಮ್ಮ ತಾಯಿ ತಂದೆಯರನ್ನು ಕೆಲವು ಲಕ್ಷಣಗಳಲ್ಲಿ ಹೋಲುತ್ತಾರೆ . ಹಾಗೆಯೇ ಅವರ ನಡುವೆ ಕೆಲವು ಭಿನ್ನತೆಗಳೂ ಇರುತ್ತವೆ ಎಂಬುದನ್ನು ನಾವು ಅರಿತಿದ್ದೇವೆ .
ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಲಕ್ಷಣಗಳು ಹೇಗೆ ವರ್ಗಾವಣೆಯಾಗುತ್ತವೆ ಎಂಬುದು ಕುತೂಹಲಕರವಾಗಿದೆ ಯಾವುದು ಹೀಗೆ ಲಕ್ಷಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ಒಯ್ಯುತ್ತದೆ ? ಈ ವರ್ಗಾವಣೆಯ ಭೌತಿಕ ಆಧಾರ ಯಾವುದು
ನೀವು ಹಿಂದಿನ ತರಗತಿಗಳಲ್ಲಿ , ಕೋಶಕೇಂದ್ರದ ರಚನೆಯನ್ನು ತಿಳಿದುಕೊಂಡಿರುವಿರಿ ಕೋಶಕೇಂದ್ರದಲ್ಲಿ ಉದ್ದವಾಗಿ ವಿಸ್ತರಿಸಿಕೊಂಡು , ತೆಳುವಾದ ಎಳೆಗಳಂತಿರುವ ರಚನೆ ಕ್ರೋಮ್ಯಾಟಿನ್ ಎಳೆ ಅಥವಾ ಕ್ರೋಮ್ಯಾಟಿನ್ನ ಬಲೆಯಾಕಾರದ ರಚನೆ , ನ್ಯೂಕ್ಲಿಯೋಪ್ಲಾಸಂನಲ್ಲಿರುವುದನ್ನು ನೆನಪಿಸಿಕೊಳ್ಳಿ .
ಕೋಶವಿಭಜನೆಯ ಸಂದರ್ಭದಲ್ಲಿ ತೆಳುವಾದ ಕ್ರೋಮ್ಯಾಟಿನ್ ಸಾಂದ್ರೀಕರಣಗೊಂಡು ವರ್ಣತಂತು ಗಳಾಗುತ್ತವೆ .
ವರ್ಣತಂತು ವಿನ ರಚನೆ
ವರ್ಣತಂತು ಪೋಟೀನ್ ಮತ್ತು ನ್ಯೂಕ್ಲಿಯಿಕ್ ಆಮ್ಲ ಎಂಬ ಎರಡು ಮುಖ್ಯ ವಸ್ತುಗಳಿಂದಾಗಿದೆ . ಪ್ರತಿ ವರ್ಣತಂತುವು ಎರಡು ಸಮಾನಾಂತರ ಎಳೆಗಳಿಂದ ಕೂಡಿರುತ್ತದೆ .
ಈ ಎಳೆಗಳಿಗೆ ಮ್ಯಾಟಿಡ್ಗಳು ಎಂದು ಹೆಸರು . ಈ ಎರಡು ಕ್ರೋಮ್ಯಾಟಿಡ್ಗಳು ಸೆಂಟ್ರೋಮಿಯರ್ ಎಂಬ ಒಂದು ಬಿಂದುವಿನಿಂದ ಬಂಧಿತವಾಗಿರುತ್ತದೆ . ವರ್ಣತಂತುವಿನ ಸೂಕ್ಷ್ಮ ರಚನೆಯನ್ನು
ನೋಡಿದಾಗ – ಪ್ರೋಟೀನ್ ಅಣುಗಳ ಸುತ್ತ ಡಿಎನ್ಎ ಎಳೆಗಳು ಸುರುಳಿಯಾಗಿ ಸುತ್ತಿಕೊಂಡಿರುವುದು ಆನುವಂಶೀಯ ಕಂಡುಬರುತ್ತದೆ .
ಡಿಎನ್ಎ ಅಣುವಿನಲ್ಲಿ ಆ ಘಟಕಗಳಾದ ಸಾವಿರಾರು ವಂಶವಾಹಿಗಳು ಇವೆ . ವಂಶವಾಹಿಗಳು ಜೀವಿಯ ಪ್ರತಿಯೊಂದು ಲಕ್ಷಣವನ್ನು ನಿಯಂತ್ರಿಸುತ್ತದೆ ಹಾಗಾಗಿ ವಂಶವಾಹಿಯ ರಚನೆ ಮತ್ತು ಕಾರ್ಯವನ್ನು ತಿಳಿದು ಕೊಳ್ಳೋಣ .
ಡಿಎನ್ಎ ರಚನೆ
ಡಿ ಆಕ್ಸಿರೈಬೋಸ್ ನ್ಯೂಕ್ಲಿಕ್ ಆಮ್ಲವು ಹೆಚ್ಚು ಅಣುತೂಕದ ಒಂದು ಬೃಹತ್ ಅಣು , ಇದು ಒಂದು ಆನುವಂಶೀಯ ವಸ್ತುವಾಗಿದ್ದು ಆನುವಂಶೀಯ ಮಾಹಿತಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತದೆ . ಡಿಎನ್ಎ ಅಣು ಕೆಲವು ಸಸ್ಯವೈರಸ್ಗಳನ್ನು ಬಿಟ್ಟು ಉಳಿದೆಲ್ಲ ಜೀವಿಗಳಲ್ಲೂ ಇದೆ .
ಡಿಆಕ್ಸಿರೈಬೋಸ್ ನ್ಯೂಕ್ಲಿಯಿಕ್ ಆಮ್ಲದ ಅಣುವಿನ ರಚನೆಯನ್ನು 1953 ರಲ್ಲಿ ಅಮೇರಿಕದ ವಿಜ್ಞಾನಿ ಜೇಮ್ಸ್ವ್ಯಾಟ್ಸನ್ ಮತ್ತು ಆಂಗ್ಲವಿಜ್ಞಾನಿ ಫ್ರಾನ್ಸಿಸ್ಕ್ನಿಕ್ ಕಂಡುಹಿಡಿದರು .
ಅವರ ಈ ಸಂಶೋಧನೆಗೆ , 1962 ರಲ್ಲಿ ನೊಬೆಲ್ ಪಾರಿತೋಷಕ ದೊರೆಯಿತು . ಡಿಎನ್ಎಯ ರಚನೆಯನ್ನು ತೃಪ್ತಿಕರವಾಗಿ ವಿವರಿಸುವುದಕ್ಕಾಗಿ ಡಿಎನ್ಎ ದ್ವಿಸುರುಳಿ ( Double helix ) ಮಾದರಿಯನ್ನು ಸೂಚಿಸಿದರು . ಡಿ ಎನ್ ಎ ಅಣುವಿನ ಈ ರಚನೆಯನ್ನು ವ್ಯಾಟನ್ ಕ್ಲಿಕ್ ಮಾದರಿ , ಎಂದೂ ಕರೆಯಲಾಗಿದೆ .
ಡಿಎನ್ಎ ಅಣುವು , ಸುರುಳಿ ಸುತ್ತಿಕೊಂಡಿರುವ ಒಂದು ಏಣಿಯಂತಿದೆ . ಇದಕ್ಕೆ ಸುರುಳಿ ಎಂದು ಹೆಸರು . ಡಿಎನ್ಎ ಅಣುವಿನಲ್ಲಿ ಒಂದು ಜೋಡಿ ಪಾಲಿನ್ಯೂಕ್ಲಿಯೋಟೈಡ್ನ ಸರಪಳಿಗಳಿವೆ . ಒಂದೊಂದು ಸರಪಳಿಯೂ ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಸಮಾನಾಂತರವಾಗಿ ನಲಿದಿದೆ .
ಈ ಸರಪಳಿಗಳು ಒಂದಕ್ಕೊಂದು ಹೆಣೆದುಕೊಂಡಿವೆ . ಪಾಲಿನ್ಯೂಕ್ಲಿಯೋಟೈಡ್ನ ಒಂದೊಂದು ಸರಪಳಿಯೂ ಅನೇಕ ನ್ಯೂಕ್ಲಿಯೋಟೈಡ್ಗಳ ಘಟಕಗಳಿಂದಾಗಿದೆ . ಒಂದೊಂದು ನ್ಯೂಕ್ಲಿಯೋಟೈಡ್ ಘಟಕವೂ-
( 1 ) ಡಿ ಆಕ್ಸಿಟೋಸ್ ಸಕ್ಕರೆ
( 2 ) ಫಾಸ್ಟೇಟ್
( 3 ) ನೈಟ್ರೋಜನ್
ಕಾರಗಳು ಎಂಬ ಮೂರು ಸಂಯುಕ್ತಗಳನ್ನು ಹೊಂದಿದೆ .
ಡಿ ಆಕಿರೈಬೋಸ್ ಸಕ್ಕರೆಯು ಒಂದು ಪೆಂಟೋಸ್ ಸಕ್ಕರೆ ) ( CHO ) , ಡಿಎನ್ಎ ಏಣಿಯ ಎರಡು ಕಂಬಗಳು , ಪರ್ಯಾಯವಾಗಿ ಪೆಂಟೋಸ್ ಸಕ್ಕರೆ ಮತ್ತು ಫಾಸ್ಪೇಟುಗಳಿಂದ ಮಾಡಲಾಗಿವೆ .
ನೈಟ್ರೋಜನ್ ಪ್ರತ್ಯಾಮ್ಲಗಳು ಎದುರು ಬದುರಿನ , ಎರಡು ಕಂಬಗಳನ್ನು ಮೆಟ್ಟಿಲುಗಳಂತೆ ಸೇರಿಸುತ್ತವೆ . ಪ್ಯೂರಿನ್ ಮತ್ತು ಪಿರಿಮಿಡೀನ್ಗಳೆಂಬ ಎರಡು ರೀತಿಯ ನೈಟ್ರೋಜನ್ ಪ್ರತ್ಯಾಮ್ಲಗಳಿವೆ . 110 ಪ್ಯೂರಿನ್ಗಳಲ್ಲಿ ಅಡಿನೈನ್ ( A ) ಮತ್ತು ಗ್ಲಾನಿನ್ ಮರಳಿದರೆ ಸಿರಿಮಿಡೀನ್ಗಳಲ್ಲಿಎರಡು ರೀತಿಯ ನೈಟ್ರೋಜನ್ , ಪ್ರತ್ಯಾಮ್ಲಗಳಿವೆ .
ಪ್ಯೂರಿನ್ಗಳಲ್ಲಿ ಆಡಿನೈನ್ ( A ) ಮತ್ತು ಗ್ಲಾನಿನ್ ) ಹಕ ( G ) ಗಳೆಂಬ ಎರಡು ಬಗೆಯ ಪ್ರತ್ಯಾಮ್ಲಗಳಿದ್ದರೆ , ಪಿರಿಮಿಡೀನ್ಗಳಲ್ಲಿ ಸೈಟೋಸಿನ್ ( C ) ಮತ್ತು ಜೈಮೀನ್ ( 1 ) ಗಳೆಂಬ ಎರಡು ಬಗೆಯ ಪ್ರತ್ಯಾಮ್ಲಗಳಿವೆ .
ಒಂದು ಪಾಲಿನ್ಯೂಕ್ಲಿಯೋಟೈಡ್ ಸರಪಳಿಯ ಪಿರಿಮಿಡೀನ್ ಇನ್ನೊಂದು ಪಾಲಿನ್ಯೂಕ್ಲಿಯೋಟೈಡ್ ಸರಪಳಿಯ ಪ್ಯೂರಿನ್ನ ಜೊತೆ ಯಾಗಿರುತ್ತದೆ . ಅಂದರೆ , ಅನೈನ್ ಯಾವಾಗಲೂ ಥೈಮೀನ್ ಜೊತೆಯಲ್ಲಿ ಮತ್ತು ಗ್ಯಾನಿನ್ ಯಾವಾಗಲೂ ಸೈಟೋಸಿನ್ ಜೊತೆಯಲ್ಲಿ ಜೋಡಣೆಯಾಗುತ್ತವೆ .
( A – T ಮತ್ತು G – C ) , ಇದಕ್ಕೆ ಪೂರಕ ಕ್ಷಾರ ಜೋಡಣೆ ( complementary base pairing ) ಎಂದು ಹೆಸರು , ಆದ್ದರಿಂದ ಡಿಎನ್ಎ ಅಣುವಿನ ಎರಡು ಎಳೆಗಳು ಒಂದಕ್ಕೊಂದು ಪೂರಕವಾಗಿರುತ್ತದೆಯೇ ( 12 ) ಹೊರತು ತದ್ರೂಪವಾಗಿರುವುದಿಲ್ಲ .
ಡಿಎನ್ಎ ಸ್ವತೀಕರಣ ( Replication )
ಕೋಶವಿಭಜನೆಯಿಂದ ಉತ್ಪತ್ತಿಯಾದ ಮರಿಜೀವ ಕೋಶಗಳು , ಮಾತೃಕೋಶವನ್ನು ಹೋಲುವಂತಿರ ಬೇಕಾದರೆ , ಮರಿಜೀವಕೋಶಗಳು ಒಂದೇ ರೀತಿಯ ಆನುವಂಶಿಕ ವಸ್ತುಗಳನ್ನು ಒಂದೇ ಪ್ರಮಾಣದಲ್ಲಿ ಪಡೆದಿರಬೇಕು . ಹೀಗಾಗಬೇಕಾದರೆ ತಾಯಿ ಕೋಶದಲ್ಲಿರುವ ಆನುವಂಶಿಕ ವಸ್ತುಗಳ ಪ್ರಮಾಣ ,
ಎರಡರಷ್ಟಾಗಬೇಕು . ಇದು ಯಾವಾಗ , ಹೇಗೆ ಸಂಭವಿಸುತ್ತದೆ ? ಸಿದ್ಧತಾ ಹಂತದಲ್ಲಿ ( Interphase ) ಕೋಶ ವಿಭಜನೆಗೆ ಮೊದಲು ಎಲ್ಲ ವರ್ಣತಂತುಗಳಲ್ಲಿರುವ ಡಿಎನ್ಎ ಅಣುವು ಸ್ವಪ್ರತೀಕರಣಗೊಳ್ಳುವುದು . ಇದು ಮುಂದಿನ ಪೀಳಿಗೆಯ ಜೀವಕೋಶಗಳಲ್ಲಿ ಆನುವಂಶಿಕ ವಸ್ತು ) ಸಮನಾಗಿ ವಿತರಿಸಿಕೊಳ್ಳಲು ಸಹಾಯವಾಗುತ್ತದೆ .
ಇದಕ್ಕೆ ಡಿಎನ್ಎ ಸ್ವಪ್ರತೀಕರಣ ಎಂದು ಹೆಸರು . ಈ ಕ್ರಿಯೆ ಆನುವಂಶೀಯತೆಯಲ್ಲಿ ಒಂದು ಪ್ರಮುಖ ಘಟನೆಯಾಗಿದೆ . ಡಿಎನ್ಎಯ ಸ್ವಪ್ರತೀಕರಣ ಆಗುವಾಗ ಪೂರಕ ನ್ಯೂಕ್ಲಿಯೋ ಟೈಡ್ ಎಳೆಗಳ ನೈಟ್ರೋಜನ್ ಕ್ಷಾರಗಳ ನಡುವೆ ಇರುವ ಹೈಡೋಜನ್ ಬಂಧಗಳು ಬೇರ್ಪಡುವುದರ ಮೂಲಕ , ಸ್ವಪ್ರತೀಕರಣಕ್ರಿಯೆಯು ಪ್ರಾರಂಭವಾಗುವುದು ,
ಡಿಎನ್ಎ ಸುರುಳಿಯ ಎರಡು ಎಳೆಗಳು ಸುತ್ತಿರುವ ಸುರುಳಿಯನ್ನು ಬಿಚ್ಚಿಕೊಂಡು ಕವಲೊಡೆದು ಫೋರ್ಕ್ನಂತೆ ಕಾಣಿಸುತ್ತದೆ . ಎರಡು ತೆರೆದ ಎಳೆಗಳು ಪೂರಕವಾದ ಹೊಸ ನ್ಯೂಕ್ಲಿಯೋಟೈಡ್ಗಳು ಸೇರಿ ಮರಿ ಎಳೆಗಳಾಗುವುದಕ್ಕೆ ಬೇಕಾದ ಅಚ್ಚು ( template ) ಗಳಾಗುತ್ತವೆ .
ಹೀಗೆ ನ್ಯೂಕ್ಲಿಯೋಟೈಡ್ಗಳು ಪಿತೃ ಅಚ್ಚುಗಳ ಜೊತೆ ಸೇರುವುದಕ್ಕೆ ಕೆಲವು ಕಿಣ್ವಗಳು ಸಹಾಯಮಾಡುತ್ತವೆ . ಬೇರೆಯಾಗಿರುವ ಎಳೆಗಳಲ್ಲಿ ಮುಕ್ತವಾಗಿರುವ ಪ್ರತ್ಯಾಮ್ಲಗಳ ಜೊತೆ ಹೊಸ ಪ್ರತ್ಯಾಮ್ಲಗಳ ಜೋಡಣೆ ಪೂರಕವಾಗಿ ನಡೆಯುತ್ತದೆ .
ಪಿತೃ ಡಿಎನ್ಎ ಎಳೆಗಳ , ತೆರೆದ ಪ್ರತ್ಯಾಮ್ಲಗಳಿಗೆ ಹೊಸಕ್ಷಾರಗಳ ಜೋಡಣೆಯು ಪೂರಕ ಕ್ರಮದಲ್ಲಿ ನಡೆಯುತ್ತದೆ . ಈ ಕ್ರಿಯೆಯು ಎರಡು ಮರಿ ಡಿಎನ್ಎ ಎಳೆಗಳು ರೂಪಿತಗೊಳ್ಳುವವರೆಗೂ ಮುಂದುವರಿಯುತ್ತದೆ .
ಡಿಎನ್ಎ ಪ್ರಾಮುಖ್ಯ
1.ಡಿಎನ್ , ಜೀವಕೋಶದ ಎಲ್ಲ ಉಪಾಪಚಯ ಚಟುವಟಿಕೆಗಳನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಿಯಂತ್ರಿಸಲು ಬೇಕಾದ ಸಾಂಕೇತೀಯ ಮಾಹಿತಿಯನ್ನು ಹೊಂದಿದೆ . ನಿಯತ್ರಿಕೆಗೆ
2 . ಡಿಎನ್ಎ , ತನ್ನ ಸ್ವಪ್ರತೀಕರಣದಂತಹ ವಿಶೇಷಗುಣದಿಂದ , ಮುಂದಿನ ಸಂತಾನಗಳಿಗೆ ಒಂದೇ ರೀತಿಯ ಆನುವಂಶೀಯ ವಸ್ತುವನ್ನು ಸಮನಾಗಿ ಹಂಚುತ್ತದೆ . ಹೀಗೆ ಆನುವಂಶೀಯತೆಗೆ ಕಾರಣವಾಗುತ್ತದೆ .
3.ಡಿಎನ್ಎ , ನಿರ್ದಿಷ್ಟ ಪ್ರೋಟೀನ್ಗಳ ಸಂಶ್ಲೇಷಣೆಗೆ ಸಂಕೇತಗಳನ್ನು ನೀಡುವ ಆರ್ಎನ್ಎಗಳನ್ನು ಸಂಶ್ಲೇಷಿಸುತ್ತದೆ . ಹಾಗಾಗಿ , ಪರೋಕ್ಷವಾಗಿ , ಪ್ರೋಟೀನ್ ಸಂಶ್ಲೇಷಣೆಯಲ್ಲಿ ಪಾಲ್ಗೊಳ್ಳುತ್ತದೆ .
4.ಕೆಲವೊಮ್ಮೆ ಡಿಎನ್ಎ – ಉತ್ಪರಿವರ್ತನೆ ( mutation ) ಮತ್ತು ಪುನರ್ ಸಂಯೋಜನೆ ( recombination ) ಗೆ ಒಳಗಾಗಿ , ಸಂತಾನಗಳಲ್ಲಿ ವಿಭಿನ್ನ ಲಕ್ಷಣಗಳನ್ನುಂಟು ಮಾಡುತ್ತದೆ .
ಡಿಎನ್ಎ ತಂತ್ರಜ್ಞಾನ
ಆನುವಂಶೀಯತೆ , ಭಿನ್ನತೆ ಮತ್ತು ಅವುಗಳಿಗೆ ಕಾರಣಗಳನ್ನೂ ನಾವು ತಿಳಿದುಕೊಂಡಿದ್ದೇವೆ . ಇವುಗಳನ್ನು ತಿಳಿಯುವುದರ ಪ್ರಾಮುಖ್ಯವೇನು ? ಇವುಗಳ ಅರಿವು ಆನುವಂಶಿಕವಾದ ಭೌತಿಕ ಹಾಗೂ ಶಾರೀರ ಕ್ರಿಯಾತ್ಮಕ ಸಮಸ್ಯೆಗಳನ್ನು ತಿಳಿಯಲು ಸಸ್ಯ ಮತ್ತು ಪ್ರಾಣಿಗಳ ಗುಣಮಟ್ಟವನ್ನು ಸುಧಾರಿಸಲು ,
ಸಸ್ಯ ಹಾಗೂ ಪ್ರಾಣಿಸಂಕುಲಗಳಿಂದ ಮಾನವನ ಅನುಕೂಲಕ್ಕಾಗಿ ಬೇಕಾದ ವಸ್ತುಗಳನ್ನು ಪಡೆಯಲು ಇರಬಹುದಾದ ಸಾಧ್ಯತೆಗಳ ಅಧ್ಯಯನಕ್ಕೆ ದಾರಿತೋರಿದೆ . ಆನುವಂಶೀಯತೆ ಅಥವಾ ತಳಿವಿಜ್ಞಾನದ ಮೂಲ ತತ್ವಗಳ ಅನ್ವಯಗಳು ,
ಮಾನವ ಜೀವನಕ್ಕೆ ಸಂಬಂಧಿಸಿದಂತೆ – ಕೃಷಿ , ಆರೋಗ್ಯ , ಆಹಾರ ನಿರ್ವಹಣೆ , ಪರಿಸರ ಸಂರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿವೆ .
ಹಿಂದೆ , ಇನ್ಸುಲಿನ್ ಅನ್ನು ಹಂದಿಗಳ ಮೇದೋಜೀರಕದಿಂದ ಪಡೆಯುತ್ತಿದ್ದರು . ಈಗ ಇನ್ ಸುಲಿನ್ ಅನ್ನು ಬ್ಯಾಕ್ಟಿರಿಯಾಗಳ ಸಹಾಯದಿಂದ ಜೈವಿಕತಂತ್ರಜ್ಞಾನವನ್ನು ಬಳಸಿ ಪ್ರಯೋಗಶಾಲೆಯಲ್ಲಿ ಸಂಶ್ಲೇಷಿಸುತ್ತಾರೆ .
ಜೈವಿಕ ಕಾರ್ಯವಿಧಾನಗಳನ್ನು ಜೀವಿಗಳ ಅಥವಾ ಅವುಗಳ ಪ್ರಕ್ರಿಯೆಗಳ ಇಲ್ಲವೇ ಅವುಗಳ ಉತ್ಪನ್ನಗಳ ಮೇಲೆ ಬಳಸಿ ಮಾನವ ಕಲ್ಯಾಣಕ್ಕೆ ಅವಶ್ಯವಾದ ನೂತನವಸ್ತುಗಳನ್ನು ಪಡೆಯುವ ತಂತ್ರಜ್ಞಾನವೇ ಜೈವಿಕ ತಂತ್ರಜ್ಞಾನ ( biotechnology ) ಜೈವಿಕತಂತ್ರಜ್ಞಾನವು ಕೋಶಿಕಾವಿಜ್ಞಾನ ( Cytology ) ಅಣು ಜೀವವಿಜ್ಞಾನ ( moleculor biology ) ಸೂಕ್ಷ್ಮಾಣು ಜೀವಿ ವಿಜ್ಞಾನ ( microbiology ) , ತಳಿವಿಜ್ಞಾನ , ಜೀವರಸಾಯನ ವಿಜ್ಞಾನ ( biochemistry ) – ಗಳೊಂದಿಗೆ , ನೂತನ ತಂತ್ರಜ್ಞಾನ ಸೇರಿ ಉಂಟಾಗಿದೆ . ಜೈವಿಕ ತಂತ್ರಜ್ಞಾನದ ಅನ್ವಯಗಳಿಗೆ ಮಿತಿಯೇ ಇಲ್ಲ . ಹಾಲನ್ನು ಮೊಸರು ಮಾಡುವ ಸಾಂಪ್ರದಾಯಿಕ ವಿಧಾನದಿಂದ ಹಿಡಿದು ಆಂಟಿಬಯಾಟಿಕ್ ತಯಾರಿಕೆ , ಅಷ್ಟೇ ಏಕೆ ತದ್ರೂಪಿ ಸೃಷ್ಟಿಯವರೆಗೂ ಇದರ ಅನ್ವಯಗಳನ್ನು ಕಾಣುತ್ತೇವೆ .
ಡಿಎನ್ಎ ಬೆರಳಚ್ಚು ತಂತ್ರಜ್ಞಾನ
ಇಂದಿನ ಈ ಆಧುನಿಕ ಪ್ರಪಂಚದಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿಯಿಂದಾಗಿ , ಅಪರಾಧ ತನಿಖಾ ವಿಜ್ಞಾನದಲ್ಲಿ ಈ ತಂತ್ರಜ್ಞಾನ ಸಹಕಾರಿಯಾಗಿದೆ , ಕಾನೂನುಬದವಿವಾದಗಳು ಅಂದರೆ , ಸತ್ತವ್ಯಕ್ತಿಗಳನ್ನು ಗುರುತಿಸುವುದು , ಸತ್ರವ್ಯಕ್ತಿಗಳ ಹಾಗೂ ಅವರ ವಾರಸುದಾರರೆನ್ನುವವರ ನಡುವಣ ತಳಿ ಸಂಬಂಧಗಳನ್ನು ಗುರುತಿಸುವುದು . ಮುಂತಾದುವುಗಳನ್ನು ನೀವು ನೋಡಿರಬಹುದು . ಇಲ್ಲವೇ ಕೇಳಿರಬಹುದು .
ಇಂತಹ ಅನೇಕ ಕಾನೂನು ಬದ್ರ ವಿವಾದಗಳನ್ನು ಅತ್ಯಂತ ಸಮರ್ಪಕವಾಗಿ ಪರಿಹರಿಸಲು ಸಹಾಯ ಮಾಡುವ ತಂತ್ರಜ್ಞಾನವೇ ಡಿಎಸ್ಎ ಬೆರಳಚ್ಚು ತಂತ್ರಜ್ಞಾನ.
ಈ ತಂತ್ರಜ್ಞಾನದಲ್ಲಿ ಒಬ್ಬ ವ್ಯಕ್ತಿಯ ಜೀವಕೋಶದಲ್ಲಿರುವ ಡಿಎನ್ಎ ಅಣುವನ್ನು ಕಿಣ್ವಗಳ ಸಹಾಯದಿಂದ ಸಣ್ಣ ತುಣುಕುಗಳನ್ನಾಗಿ ವಿಭಜಿಸಿ ಕಲ್ ಇದಕ್ಟೋಫೋಟೋಸ್ ಸಹಾಯದಿಂದ ಅವುಗಳ ಗಾತ್ರ ಹಾಗೂ ವಿದ್ಯುದಾವೇಶದ ಆಧಾರದ ಮೇಲೆ ಬೇರ್ಪಡಿಸಲಾಗುವುದು ,
ದೊಡ್ಡ ತುಣುಕುಗಳು , ಸತುಣುಕುಗಳಿಗಿಂತ ನಿಧಾನವಾಗಿ ಚಲಿಸುವುದರ ಪರಿಣಾಮವಾಗಿ ಬೆರಳಚ್ಚುಗಳಂತಹ ಅನೇಕ ರೇಖೆಗಳು ಉಂಟಾಗುವುವು . ಇದೇ ಡಿಎನ್ಎ ಬೆರಳಚ್ಚು , ಪ್ರತಿವ್ಯಕ್ತಿಯ ಡಿಎನ್ಎ ಬೆರಳಚ್ಚು ವಿಶೇಷ , ವಿಶಿಷ್ಟ