ಕನ್ನಡದ ಬಿರುದಾಂಕಿತರು

 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು / ಕನ್ನಡದ ಬಿರುದಾಂಕಿತರು

 

ಕನ್ನಡದ ಬಿರುದಾಂಕಿತರು / ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು / kannada kavigalu / kannada kavigalu list / kannada kavigalu in kannada

1. ದಾನ ಚಿಂತಾಮಣಿ – ಅತ್ತಿಮಬ್ಬೆ

2. ಕನ್ನಡ ಕುಲಪುರೋಹಿತ – ಆಲೂರು ವೆಂಕಟರಾಯ

3. ಕನ್ನಡದ ಶೇಕ್ಸ್ಪಿಯರ್ – ಕಂದಗಲ್ ಹನುಮಂತರಾಯ

4. ಕನ್ನಡದ ಕೋಗಿಲೆ – ಪಿ.ಕಾಳಿಂಗರಾವ್

5. ಕನ್ನಡದ ವರ್ಡ್ಸ್ವರ್ತ್ – ಕುವೆಂಪು

6. ಕಾದಂಬರಿ ಸಾರ್ವಭೌಮ – ಅ.ನ.ಕೃಷ್ನರಾಯ

7. ಕರ್ನಾಟಕ ಪ್ರಹಸನ ಪಿತಾಮಹ – ಟಿ.ಪಿ.ಕೈಲಾಸಂ

8. ಕರ್ನಾಟಕದ ಕೇಸರಿ – ಗಂಗಾಧರರಾವ್ ದೇಶಪಾಂಡೆ

9. ಸಂಗೀತ ಗಂಗಾದೇವಿ – ಗಂಗೂಬಾಯಿ ಹಾನಗಲ್

10. ನಾಟಕರತ್ನ – ಗುಬ್ಬಿ ವೀರಣ್ಣ

11. ಚುಟುಕು ಬ್ರಹ್ಮ – ದಿನಕರ ದೇಸಾಯಿ

12. ಅಭಿನವ ಪಂಪ – ನಾಗಚಂದ್ರ

13. ಕರ್ನಾಟಕ ಸಂಗೀತ ಪಿತಾಮಹ – ಪುರಂದರ ದಾಸ

14. ಕರ್ನಾಟಕದ ಮಾರ್ಟಿನ್ ಲೂಥರ್ – ಬಸವಣ್ಣ

15. ಅಭಿನವ ಕಾಳಿದಾಸ – ಬಸವಪ್ಪಶಾಸ್ತ್ರಿ

16. ಕನ್ನಡದ ಆಸ್ತಿ – ಮಾಸ್ತಿ ವೆಂಕಟೇಶ ಅಯ್ಯಂಗಾರ್

17. ಕನ್ನಡದ ದಾಸಯ್ಯ – ಶಾಂತಕವಿ

18. ಕಾದಂಬರಿ ಪಿತಾಮಹ – ಗಳಗನಾಥ

19. ತ್ರಿಪದಿ ಚಕ್ರವರ್ತಿ – ಸರ್ವಜ್ಞ

20. ಸಂತಕವಿ – ಪು.ತಿ.ನ.

21. ಷಟ್ಪದಿ ಬ್ರಹ್ಮ – ರಾಘವಾಂಕ

22. ಸಾವಿರ ಹಾಡುಗಳ ಸರದಾರ – ಬಾಳಪ್ಪ ಹುಕ್ಕೇರಿ

23. ಕನ್ನಡದ ನಾಡೋಜ – ಮುಳಿಯ ತಿಮ್ಮಪ್ಪಯ್ಯ

24. ಸಣ್ಣ ಕತೆಗಳ ಜನಕ – ಮಾಸ್ತಿ ವೆಂಕಟೇಶ ಅಯ್ಯಂಗಾರ್

25. ಕರ್ನಾಟಕ ಶಾಸನಗಳ ಪಿತಾಮಹ – ಬಿ.ಎಲ್.ರೈಸ್

26. ಹರಿದಾಸ ಪಿತಾಮಹ – ಶ್ರೀಪಾದರಾಯ

27. ಅಭಿನವ ಸರ್ವಜ್ಞ – ರೆ. ಉತ್ತಂಗಿ ಚೆನ್ನಪ್ಪ

28. ವಚನಶಾಸ್ತ್ರ ಪಿತಾಮಹ – ಫ.ಗು.ಹಳಕಟ್ಟಿ

29. ಕವಿಚಕ್ರವರ್ತಿ – ರನ್ನ

30. ಆದಿಕವಿ – ಪಂಪ

31. ಉಭಯ ಚಕ್ರವರ್ತಿ – ಪೊನ್ನ

32. ರಗಳೆಯ ಕವಿ – ಹರಿಹರ

33. ಕನ್ನಡದ ಕಣ್ವ – ಬಿ.ಎಂ.ಶ್ರೀ

34. ಕನ್ನಡದ ಸೇನಾನಿ – ಎ.ಆರ್.ಕೃಷ್ಣಾಶಾಸ್ತ್ರಿ

35. ಕರ್ನಾಟಕದ ಉಕ್ಕಿನ ಮನುಷ್ಯ – ಹಳ್ಳಿಕೇರಿ ಗುದ್ಲೆಪ್ಪ

36. ಯಲಹಂಕ ನಾಡಪ್ರಭು – ಕೆಂಪೇಗೌಡ

37. ವರಕವಿ – ಬೇಂದ್ರೆ

38. ಕುಂದರ ನಾಡಿನ ಕಂದ – ಬಸವರಾಜ ಕಟ್ಟೀಮನಿ

39. ಪ್ರೇಮಕವಿ – ಕೆ.ಎಸ್.ನರಸಿಂಹಸ್ವಾಮಿ

40. ಚಲಿಸುವ ವಿಶ್ವಕೋಶ – ಕೆ.ಶಿವರಾಮಕಾರಂತ

41. ಚಲಿಸುವ ನಿಘಂಟು – ಡಿ.ಎಲ್.ನರಸಿಂಹಾಚಾರ್

42. ದಲಿತಕವಿ – ಸಿದ್ದಲಿಂಗಯ್ಯ

43. ಅಭಿನವ ಭೋಜರಾಜ – ಮುಮ್ಮಡಿ ಕೃಷ್ಣರಾಜ ಒಡೆಯರು

44. ಪ್ರಾಕ್ತನ ವಿಮರ್ಶಕ ವಿಚಕ್ಷಣ – ಆರ್.ನರಸಿಂಹಾಚಾರ್

45. ಕನ್ನಡದ ಕಬೀರ – ಶಿಶುನಾಳ ಷರೀಪ

46. ಕನ್ನಡದ ಭಾರ್ಗವ – ಕೆ.ಶಿವರಾಮಕಾರಂತ

47. ಕರ್ನಾಟಕದ ಗಾಂಧಿ – ಹರ್ಡೇಕರ್ ಮಂಜಪ್ಪ

 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
============
ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
=======
ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
1967 : ಕುವೆಂಪು – ಕನ್ನಡ – ಶ್ರೀ ರಾಮಾಯಣ ದರ್ಶನಂ

1973 : ದ. ರಾ. ಬೇಂದ್ರೆ – ಕನ್ನಡ – ನಾಕುತಂತಿ
1977 : ಕೆ. ಶಿವರಾಮ ಕಾರಂತ – ಕನ್ನಡ – ಮೂಕಜ್ಜಿಯ ಕನಸುಗಳು
1983 : ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಕನ್ನಡ ಚಿಕ್ಕವೀರ ರಾಜೇಂದ್ರ
1990 : ವಿ. ಕೃ. ಗೋಕಾಕ – ಕನ್ನಡ – ಸಮಗ್ರ ಸಾಹಿತ್ಯ
1994 : ಯು. ಆರ್. ಅನಂತಮೂರ್ತಿ – ಕನ್ನಡ – ಸಮಗ್ರ ಸಾಹಿತ್ಯ
1998 : ಗಿರೀಶ್ ಕಾರ್ನಾಡ್ – ಕನ್ನಡ – ಸಮಗ್ರ ಸಾಹಿತ್ಯ
2010 : ಚಂದ್ರಶೇಖರ ಕಂಬಾರ – ಕನ್ನಡ – ಸಮಗ್ರ ಸಾಹಿತ್ಯ

👉 ಜಞಾನ ಪೀಠ ಪ್ರಶಸ್ತಿ ಪಡೆದ
ಮೊದಲಿಗ – 1965 : ಜಿ. ಶಂಕರ ಕುರುಪ್ – ಮಲಯಾಳಂ – ಓಡಕ್ತುಳಲ್

 

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ

ಉಪರಾಷ್ಟ್ರಪತಿ ನೇಮಕ &ಅಧಿಕಾರ

ಪ್ರಧಾನ ಮಂತ್ರಿ ನೇಮಕ

ಪ್ರಧಾನ ಮಂತ್ರಿ ಅಧಿಕಾರ

 


0 Comments

Leave a Reply

Avatar placeholder

Your email address will not be published. Required fields are marked *