ಜೆ.ವಿ.ಪಿ ಸಮಿತಿ | J.V.P.Commission

ಜೆ.ವಿ.ಪಿ ಸಮಿತಿ (J.V.P.Commission  1948 )

jvp commission, states reorganisation commission, state reorganisation commission upsc, state reorganisation commission 1948

jvp commission, states reorganisation commission, state reorganisation commission upsc, state reorganisation commission 1948

ದಾರ್ ಸಮಿತಿಯು ಭಾಷೆ ಆಧಾರದ ಮೇಲೆ ರಾಜ್ಯವನ್ನು ಪುನರ್ ರಚಿಸಬಾರದೆಂದು ಸಲ್ಲಿಸಿದ ವರದಿ ಅನೇಕ ಟೀಕೆಗೆ ಗುರಿಯಾಯಿತು .

ಇದರ ಹಿನ್ನಲೆಯಲ್ಲಿ 1948 ಡಿಸೆಂಬರ್‌ನಲ್ಲಿ ಜೈಪುರದಲ್ಲಿ ನಡೆದ ಪಟ್ಟಾಬಿ ಸೀತರಾಮಯ್ಯನವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ವರದಿಯನ್ನು ಚರ್ಚಿಸಲಾಯಿತು .

ದೇಶಾದ್ಯಂತ ಬಂದ ಬೇಡಿಕೆ ಅನುಸಾರವಾಗಿ ಮತ್ತೊಂದು ಆಯೋಗವನ್ನು ರಚಿಸಬೇಕೆಂದು ಕಾಂಗ್ರೆಸ್ ತೀರ್ಮಾನಕ್ಕೆ ಬಂದಿತು . 1948 ಡಿಸೆಂಬರ್‌ನಲ್ಲಿ ರಚನೆಯಾದ ತ್ರಿಸದಸ್ಯ ಸಮಿತಿಯೇ ಜೆ.ವಿ.ಪಿ ಸಮಿತಿ .

ಜೆ.ವಿ.ಪಿ ಸಮಿತಿಯಲ್ಲಿ ಜವಹರಲಾಲ್ ನೆಹರು , ವಲ್ಲಭಬಾಯ್ ಪಟೇಲ್ ಮತ್ತು ಪಟ್ಟಾಭಿ

 

ಸೀತಾರಾಮಯ್ಯ ಇದ್ದರು . ಈ ಮೂವರು ಸದಸ್ಯರ ಹೆಸರಿನ ಮೊದಲ ಮೂರು ಅಕ್ಷರಗಳನ್ನು ಬಳಸಿ ಸಮಿತಿಗೆ ಜೆ.ವಿ.ಪಿ ಎಂದು ಹೆಸರು ನೀಡಲಾಯಿತು .

ಜೆ.ವಿ.ಪಿ ಸಮಿತಿಯಲ್ಲಿ ಮೂವರು ಸದಸ್ಯರು ಕೂಡ ಸಮಾನ ಸಾಮರ್ಥ್ಯವಿರುವವರಾದ್ದರಿಂದ ಈ ಸಮಿತಿಯಲ್ಲಿ ಅಧ್ಯಕ್ಷರಿರಲಿಲ್ಲ ,

ಈ ಸಮಿತಿಯು ಕೂಲಂಕುಶವಾಗಿ ಅಧ್ಯಯನ ಮಾಡಿದ ನಂತರ 1949 ಏಪ್ರಿಲ್ 1 ರಲ್ಲಿ ವರದಿ ಸಲ್ಲಿಸಿದರು .

ಜೆ.ಬಿ.ಪಿ ಸಮಿತಿ ವರದಿಯ ಮುಖ್ಯಾಂಶಗಳು 

  • ರಾಜ್ಯಗಳನ್ನು ಭಾಷೆ ಆಧಾರದ ಮೇಲೆ ಪುನರ್ ರಚಿಸಲು ಸೂಕ್ತವಲ್ಲವೆಂದು ಶಿಫಾರಸ್ಸು ಮಾಡಿತು .
  • ಭಾಷೆ ಆಧಾರದ ಮೇಲೆ ರಾಜ್ಯ ಪುನರ್‌ರಚಿಸಿದರೆ ರಾಷ್ಟ್ರದ ಏಕತೆಗೆ ಧಕ್ಕೆ ಬರುತ್ತದೆ ಎಂದು ಭಾಷೆ ಆಧಾರದ ಮೇಲೆ ರಾಜ್ಯ ಪುನರ್ ರಚನೆ ಬೇಡಿಕೆಯನ್ನು ತಿರಸ್ಕರಿಸಿತು .

 

ಆಂಧ್ರದಲ್ಲಿ ಹೋರಾಟ

ವಿವಿಧ ಆಯೋಗಗಳು ಭಾಷೆಯ ಆಧಾರದ ಮೇಲೆ ರಾಜ್ಯ ಪುನರ್ ವಿಂಗಡನೆ ಯನ್ನು ತಳ್ಳಿ ಹಾಕಿದ ನಂತರ ಆಂಧ್ರಪ್ರದೇಶದಲ್ಲಿ ತೆಲುಗು ಪ್ರೇಮಿಗಳು ಆಂಧ್ರವನ್ನು ಮದ್ರಾಸ್ಸಿನಿಂದ ಪ್ರತ್ಯೇಕಿಸಿ ತೆಲುಗು ಭಾಷೆಯನ್ನು ಮಾತನಾಡುವವರನ್ನೇ ಪ್ರತ್ಯೇಕ ರಾಜ್ಯ ಸ್ಥಾಪಿಸಬೇಕೆಂದು ಪೊಟ್ಟಿ ಶ್ರೀರಾಮಲುರವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆ .19 , 1952 ರಲ್ಲಿ ಪ್ರಾರಂಭವಾಯಿತು .

ನಿರಂತರವಾಗಿ 58 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಪೊಟ್ಟಿ ಶ್ರೀರಾಮುಲುರವರು ಡಿ .15 , 1952 ರಲ್ಲಿ ಮರಣ ಹೊಂದಿದ್ದರು .

ಇವರ ಮರಣದಿಂದ ಇಡೀ ಆಂಧ್ರವೇ ಹೊತ್ತಿ ಉರಿಯಿತು . ಮುಂದೆ ಆಗುವ ಅನಾಹುತವನ್ನು ತಪ್ಪಿಸಲು , ಮದ್ರಾಸ್‌ನಿಂದ ಆಂಧ್ರವನ್ನು ಪ್ರತ್ಯೇಕಿಸಲು ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿತು .

ಆಂಧ್ರ ರಾಜ್ಯ ರಚಿಸಲು ಕೇಂದ್ರ ಸರ್ಕಾರವು ಸೆಪ್ಟೆಂಬರ್ 12 , 1953 ರಲ್ಲಿ ಸಂಸತ್ತಿನಲ್ಲಿ ಮಂಡಿಸಿದ ಮಸೂದೆಯು ಅಂಗೀಕಾರವಾಯಿತು . ಈ ಮೂಲಕ ಅಕ್ಟೋಬರ್ 1 , 1953 ರಂದು ಆಂಧ್ರ ಪ್ರದೇಶವು ಪ್ರತ್ಯೇಕ ರಾಜ್ಯವಾಯಿತು .

ಈ ರಾಜ್ಯಕ್ಕೆ ಕರ್ನೂಲು ರಾಜಧಾನಿಯಾಗಿತ್ತು ಮುಂದಿನ ದಿನಗಳಲ್ಲಿ 1956 ರ ನವೆಂಬರ್ 1 ರಲ್ಲಿ ಆಂಧ್ರಪ್ರದೇಶಕ್ಕೆ ಮದ್ರಾಸಿಗೆ ಸೇರಿದ್ದ ಭಾಷೆ ಮಾತನಾಡುತ್ತಿದ್ದ ಪ್ರದೇಶಗಳನ್ನು ಸೇರಿಸಿ ಹೈದ್ರಾಬಾದ್‌ನ್ನು ಹೊಸ ರಾಜಧಾನಿಯಾಗಿ ಮಾಡಿ ಆಂಧ್ರಪ್ರದೇಶವನ್ನು ಸ್ಥಾಪಿಸಲಾಯಿತು . ತೆಲುಗು

 

Comments

Leave a Reply

Your email address will not be published. Required fields are marked *