ಜಿ.ಪಿ.ರಾಜರತ್ನಂ ( 1908-1979 )
ಜಿ.ಪಿ.ರಾಜರತ್ನಂ.gp rajaratnam,gp rajaratnam poems in kannada language,gp rajarathnam in kannada,rathnana padagalu,kannada kavigalu list
ಸ್ಥಳ – ಕ್ಲೋಸ್ ಪೇಟೆ , ( ಈಗಿನ ರಾಮನಗರ )
ತಂದೆ ಜಿ.ಕೆ.ಗೋಪಾಲ ಕೃಷ್ಣ ಅಯ್ಯಂಗಾರರು
. ಇವರು ಕನ್ನಡ , ಸಂಸ್ಕೃತ ,
ಇಂಗ್ಲೀಷ್ ಭಾಷೆಗಳಲ್ಲದೆ ಪಾಳಿ , ಹಿಂದಿ , ಪ್ರಾಕೃತ , ತೆಲಗು ಭಾಷೆಗಳಲ್ಲೂ ಪರಿಣತಿಯನ್ನು ಹೊಂದಿದ್ದರು .
ಉಪಾಧ್ಯಾಯರಾಗಿ ವೃತ್ತಿಯನ್ನಾರಂಭಿಸಿದರು ಕನ್ನಡ ಸೇವೆಯನ್ನು ವಿವಿಧ ಕ್ಷೇತ್ರಗಳಲ್ಲಿ ಮಾಡಿದ್ದಾರೆ . ಹೀಗಾಯಿತು ಎಂಬುದು ಇವರು ಬರೆದ ಮೊದಲ ಪದ್ಯ ( 22 ಪಂಕ್ತಿಗಳ ಒಂದು ಕವನ )
ನಾಟಕಗಳು –
ಸೋಲಿಗರ ಸಿದ್ಧ ,
ನೆನಪು ( ಏಕಾಂತ ನಾಟಕಗಳನ್ನು ಗಂಡು ಗೊಡಲಿ ( 1932 )
ನರಕದ ನ್ಯಾಯ ಮತ್ತು ಕಂಬಿ ಸೇವೆ ( 1934 )
ಸಂಭಾವಾಮಿ ಯುಗೇ ಯುಗೇ ( 1942 )
ಶಕಾರನ ಸಾರೋಟು ( 1934 )
ಬಾಹುಬಲಿಯವಿಜಯಂ ಮತ್ತು ಗೊಮ್ಮಟ ಶಿಲ್ಪಿ ( 1953 )
ಬೌದ್ಧ ಹಾಗೂ ಜೈನ ಧರ್ಮಗಳ ಪ್ರಚಾರಕ್ಕೆ ಶ್ರಮಿಸಿದ ವರಲ್ಲೊಬ್ಬರು ” ಡ್ಯೂಯೆನ್ ತ್ಸಾಂಗ್ ” , ಇಂಗ್ ” ಬೌದ್ಧ ಯಾತ್ರಿಕರನ್ನು ಕುರಿತ ಗ್ರಂಥಗಳು ನಂತರ ಶಾಕ್ಯ ಸಾಹಿತ್ಯ ಮಂಟಪ ಪುಸ್ತಕ ಮಾಲೆಯಲ್ಲಿ ಧರ್ಮದಾನಿ ಬುದ್ಧ ( 1933 )
ಬುದ್ಧ ವಚನ ಪರಿಚಯ ( 1937 )
ಜಾತಕ ಕಥೆಗಳು ಪಾಲಿಜ್ಜ ಪುಷ್ಪಾಂಜಲಿ ( 1937 )
ಬುದ್ಧನ ಕತೆಗಳು ( 1940 ) ,
ಭಗವಾನ್ ಬುದ್ಧ ( 1956 ) ,
ಧರ್ಮಪದ ಮುಂತಾದ ಕೃತಿಗಳನ್ನು ಮತ್ತು ಜೈನ ಧರ್ಮಕ್ಕೆ ಸಂಬಂಧಿಸಿದ್ದಂತೆ ಮಹಾವಿರನ ಮಾತುಕತೆ- ( 1937 )
ಶ್ರೀ ಗೊಮ್ಮಟೇಶ್ವರ ( 1938 ) ,
ಭಗವಾನ್ಮಹಾವಿರ ( 1938 )
ಶ್ರೀ ಪಾರ್ಶ್ವನಾಥ ಚಂಪೂ ( 1940 ) ಇತ್ಯಾದಿಗಳನ್ನು ಪ್ರಕಟಿಸಿದರು
ಇವರ ರತ್ನನ ಪದಗಳು ( 1932 ) – ಕ.ಸಾ.ದಲ್ಲಿ ಕ್ರಾಂತಿ ಯನ್ನುಂಟು ಮಾಡಿದೆ . ಇದು ಆಡು ಭಾಷೆಯಲ್ಲಿವೆ ಅಲ್ಲಿನ ಪಾತ್ರಗಳು – ರತ್ನನಂಜಿ , ಮುನಿಯರಂಥ ವೃತ್ತಿಗಳು ಮತ್ತು ಯೆಂಡ , ಯೆಂಡ್ತಿ ಕನ್ನಡ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ ……. ಹೀಗೆ ಜನ ಪರ್ವ ವೃತ್ತಗಳಲ್ಲಿವೆ )
ಇವರ ಇನ್ನೊಂದು ಕೃತಿ ನಾಗನ ಪದಗಳು ( 1952 ) ಅಂಥದೇ ಕೃತಿಯಾಗಿದೆ ಶಾಂತಿ ( 1934 ) ನೂರು ಪುಟಾಣಿ ( 1940 ) ಮಹಾ ಕವಿ ಪುರುಷ ಸರಸ್ವತಿ ( 1940 ) ಇವು ಇತರ ಪದ್ಯ ಸಂಕಲನಗಳು ಹಳಗನ್ನಡ ಕೃತಿಗಳಿಗೆ ರಾಜರತ್ನಂರವರು ಟೀಕು ವ್ಯಾಖ್ಯಾನಗಳನ್ನು ಬರೆದಿದ್ದಾರೆ ಅವುಗಳೆಂದರೆ , ರತ್ನನ ರಸಘಟ್ಟ ( 1948 ) ಹೊಸಗನ್ನಡ ಯಶೋಧರ ಚರಿತ್ರೆ ( 1944 ) ಶ್ರೀಕವಿ ರತ್ನ ( 1948 ) ಶ್ರೀ ಕವಿ ಪಂಪ ಇತ್ಯಾದಿ
ಮಕ್ಕಳ ಸಾಹಿತ್ಯ-
ಬಣ್ಣದ ತಗಡಿನ ತುತ್ತೂರಿ , ಕೆನೆಹಾಲು ( 1935 ) ,
ತಾರೆ ( 1935 ) ,
ಚುಟುಕ , ಕಲ್ಲುಸಕ್ಕರೆ ( 1935 ) ,
ರಸಕವಳ ಗದ್ಯ ಕೃತಿಗಳು- ಗುಲಗಂಜಿ ( 1934 )
ಕೋಳಿಕಳ್ಳ ( 1941 )
ಗೂಳೂರು ಗಾಯಕರು ( 1946 ) ,
ಬಾಕರು ಬಾ ( 1946 )
ವಿಚಾರ ಸಾಹಿತ್ಯ ,
ವಿಚಾರತರಂಗ ( 1967 ) .
ಕಿರಣಾನುಭವ ( 1968 )
ಸಭಾವಿನಯ ( 1969 )
ಸಾರಸ್ಯ & ವಿಚಾರರಶ್ಮಿ ,
ನಾಟಕಗಳು –
ಬೆಳೆಯುವ ಪಯಿರು ( 1949 ) . ಧ್ವಜವಂದನೆ ( 1949 ) ಎಲ್ಲಾ ಕವಿಗಳ ಕವನವನ್ನು ಕೂಡಿಸಿ ಕಂದನ ಕಾವ್ಯಮಾಲೆ ಎಂಬ ಒಂದು ಸಂಕಲನವನ್ನು ಬರೆದಿದ್ದಾರೆ . ಗಾಂಧಿ ಸಾಹಿತ್ಯಗಳು- ದೇವರ ಸಾಕ್ಷಿ , ಗಾಂಧೀ ಅವರ ಕತೆ , ಗಿಳಿಮರಿಗಳ ಗಾಂಧಿ , ಮಕ್ಕಳ ಗಾಂಧಿ , ವಂದೇ ಗಾಂಧೀಜಿ ಅಂತರ್ದಶ್ರನ ಕೃತಿ- ನಿರ್ಭಯಾಗ್ರಫಿ , ( ಎಂಟು ಕಂತುಗಳಲ್ಲಿದೆ ) ಬದುಕು ಬರಹಗಳನ್ನು ಕುರಿತಾದ ಹತ್ತು ವರ್ಷ ಎಂಬ ಮಹಾ ಹರಟೆಯನ್ನು ಪ್ರಕಟಿಸಿದ್ದಾರೆ .
ಪ್ರಶಸ್ತಿಗಳು-
ವಿದ್ಯಾರ್ಥಿ ದೆಸೆಯಲ್ಲಿ ಬರೆದ ತಾರೆ ಎಂಬ ಪದ್ಯಕ್ಕೆ ಶ್ರೀ ಅವರ ರಜತೋತ್ಸವ ಸ್ವರ್ಣಪದಕದೊರೆಕಿತು . * 1938 ರಲ್ಲಿ ಬಳ್ಳಾರಿಯಲ್ಲಿ ನಡೆದ 23 ನೇ ಕ.ಸಾ.ಸ ಮತ್ತು 1944 ರಲ್ಲಿ ರಬಕವಿಯಲ್ಲಿ ನಡೆದ 28 ನೇಯ ಕ.ಸಾ.ಸ ಲೇಖಕರ ಗೋಷ್ಠಿಗೆ ಅಧ್ಯಕ್ಷರಾಗಿದ್ದರು . ಇವರ ಚೀನಾ ದೇಶದ ಬೌದ್ಧ ಯಾತ್ರಿಕರು , ಬುದ್ಧ ವಚನ , ಪರಿಚಯ ಬುದ್ಧನ ಕಥೆಗಳು ಈ ಕೃತಿಗಳಿಗೆ ದೇವರಾಜ ಬಹದ್ದೂರರ ದತ್ತಿ ಬಹುಮಾನ , ರಾಜರತ್ನಂ ಎಂಬ ಗೌರವ ಗ್ರಂಥ , ಬಹುಮಾನ , ರಾಜರತ್ನಂ , ಎಂಬ ಗೌರವ ಗ್ರಂಥ ಮತ್ತು ಮೈಸೂರು ವಿಶ್ವ ವಿದ್ಯಾಲಯ 1972 ರಲ್ಲಿ ಗೌರವ ಡಿಲಿಟ್ ಪದವಿ ನೀಡಿತ್ತು . 1978 ರಲ್ಲಿ ದೆಹಲಿಯಲ್ಲಿ ನಡೆದ ಕ.ಸಾ.ಸ ಅಧ್ಯಕ್ಷರಾಗಿದ್ದರು 1979 ರಲ್ಲಿ ಧರ್ಮಸ್ಥಳದಲ್ಲಿ ನಡೆದ 51 ನೇ ಕಸಾಸ ಮಕ್ಕಳ ಸಾಹಿತ್ಯ ಗೋಷ್ಟಿಗೆ ಅಧ್ಯಕ್ಷರಾಗಿದ್ದರು .
0 Comments