ಛತ್ರಪತಿ ಶಿವಾಜಿ | chhatrapati shivaji maharaj

ಛತ್ರಪತಿ ಶಿವಾಜಿ

chhatrapati shivaji maharaj , shivaji maharaj , sambhaji maharaj , shiva ji , chatrapati sambhaji maharaj , chhatrapati sambhaji maharaj

 

chhatrapati shivaji maharaj , shivaji maharaj , sambhaji maharaj , shiva ji , chatrapati sambhaji maharaj , chhatrapati sambhaji maharaj

ಶಿವಾಜಿಯ ಬಾಲ್ಯ  ಜೀವನ 

ಅದೊಂದು ಭವ್ಯವಾದ ಅರಮನೆ ,

ಹೊರಭಾಗದಲ್ಲಿ ನೂರಾರು ಕಾವಲುಗಾರರು ,

ಒಳಗಡೆ ವಿಶಾಲವಾದ ಸಭಾಂಗಣ ,

ಕಣ್ಣಿಗೆ ರಾಚುವಂತೆ ಸಿಂಹಾಸನ ,

ಸಾಮಂತರು ,

ಅಧಿಕಾರಿಗಳು ಸುಲ್ತಾನನ ಆಗಮನಕ್ಕಾಗಿ ಕಾಯುತ್ತಿದ್ದರು ಅಲ್ಲೇ ಇದ್ದ ಬಾಲಕನೊಬ್ಬ ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದ . ಸುಲ್ತಾನನ ಆಗಮನವಾಯಿತು .

ಜಯಘೋಷಗಳು ಆದವು . ಸಿಂಹಾಸನದ ಮೇಲೆ ಸುಲ್ತಾನ ಕುಳಿತ ತಕ್ಷಣ ಗಣ್ಯರು ಒಬ್ಬೊಬ್ಬರಾಗಿ ಎದ್ದು ಅವನ ಮುಂದೆ ಹೋಗಿ ಹಣೆಯನ್ನು ನೆಲಕ್ಕೆ ಮುಟ್ಟಿಸಿ ಅವನಿಗೆ ನಮಸ್ಕರಿಸಿದರು .

ಬಾಲಕನೂ ಸುಲ್ತಾನನಿಗೆ ನಮಸ್ಕರಿಸಲು ಮುಂದಾದ ನಾದರೂ ಅವನು ತನ್ನ ತಲೆಯನ್ನು ತುಸುವೇ ಬಗ್ಗಿಸಿ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದ ಹಣೆಯನ್ನು ನೆಲಕ್ಕೆ ಮುಟ್ಟಿಸಲಿಲ್ಲ .

ಸುಲ್ತಾನನಿಗೆ ಅವನು ನೀಡಿದ್ದನೇನೋ ಗೌರವ ಹೌದು , ಆದರೆ ನಾನು ನಿಮ್ಮ ದಾಸ ಅಲ್ಲ  ಎಂದು ಅವನು ಹೀಗೆ ಪರೋಕ್ಷವಾಗಿ ತಿಳಿಸಿದ್ದ .

ಸುಲ್ತಾನನಿಗೆ ಸಿಟ್ಟು ಬಂದಿತು . ಅಲ್ಲಿದ್ದ ಹಲವು ಮಂದಿ ಅಧಿಕಾರಿಗಳು ಬಾಲಕನ ವರ್ತನೆಯಿಂದ ದಂಗಾದರು , ಸನ್ನಿವೇಶ ವಿಪರೀತಕ್ಕೆ ಹೋಗಲಿಲ್ಲ . ಹುಡುಗನಿಗೆ ತಿಳಿವಳಿಕೆ ಕಡಿಮೆ ಎಂದು ಸುಲ್ತಾನ ನಿರ್ಲಕ್ಷಿಸಿದ .

ಆದರೆ ಆ ಬಾಲಕ ಅಮಾಯಕನಾಗಿರಲಿಲ್ಲ ಸ್ವಾಭಿಮಾನ ಅವನಲ್ಲಿ ಮನೆ ಮಾಡಿತ್ತು .

ಆ ಬಾಲಕ ಮತ್ತಾರೂ ಅಲ್ಲ , ಮುಂದೆ ಸ್ವತಂತ್ರ ಸಾಮ್ರಾಜ್ಯವನ್ನು ಸ್ಥಾಪಿಸಿ ಘನತೆಯನ್ನು ಮೆರೆದ ಛತ್ರಪತಿ ಶಿವಾಜಿ ,ಮುಂದೆ ನಡೆದ ಮತ್ತೊಂದು ಘಟನೆ : ತಾಯಿ – ಮಗ ಚದುರಂಗ ಆಡುತ್ತಿದ್ದರು . ತಾಯಿ ಗೆದ್ದಳು .

“ ಗೆದ್ದುದಕ್ಕೆ ನಿನಗೇನು ಬಹುಮಾನ ಕೊಡಲಿ ? ” ಮಗ ಕೇಳಿದ . ತಾಯಿ ದುರ್ಗದ ಹೆಸರೊಂದನ್ನು ಹೇಳಿದಳು .

ಮೊಗಲರ ವಶದಲ್ಲಿದ್ದ ಆ ದುರ್ಗವನ್ನು ಮಗ ಗೆದ್ದು ತಾಯಿಗೆ ಅರ್ಪಿಸಿದ .

ಈ ಮಗ ಮತ್ತಾರೂ ಅಲ್ಲ . ಈ ಹಿಂದೆ ವಿವರಿಸಿದ ಅದೇ ಛತ್ರಪತಿ ಶಿವಾಜಿ .

ಹೀಗೆ ತನ್ನ ಮಗನಿಂದ ಇಂಥ ವೀರ ಬಹುಮಾನ ಕೇಳಿದವಳು ಜೀಜಾಬಾಯಿ . ಈಕೆ ಕರ್ತವ್ಯಪ್ರಜ್ಞೆ ಸ್ವಾತಂತ್ರ್ಯಪ್ರಿಯತೆಗೆ ಹೆಸರಾಗಿದ್ದವಳು .

ಧೈರ್ಯ ,

ಆತ್ಮಾಭಿಮಾನ ,

ನ್ಯಾಯಪರತೆ ,

ಸ್ತ್ರೀಯರಲ್ಲಿ ಗೌರವ ,

ಪರಮತ ಸಹಿಷ್ಣುತೆ ಶಿವಾಜಿಯಲ್ಲಿ ಜೀಜಾಬಾಯಿ ಬೆಳೆಸಿದ ಗುಣಗಳು ,

ತಾಯಿಯ ಆರೈಕೆಯಲ್ಲಿ ಬೆಳೆದ ಶಿವಾಜಿ ದೈವಭಕ್ತನಾಗಿ ,

ಸ್ವಾತಂತ್ರ್ಯ ಪ್ರೇಮಿಯಾಗಿ ಮತ್ತು ಮಹಾವೀರನಾಗಿ ರೂಪಗೊಂಡು ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ .

ಕ್ರಿ.ಶ. 1630 ರ ಫೆಬ್ರವರಿ 19 ರಂದು ಮಹಾರಾಷ್ಟ್ರದ ಶಿವನೇರಿದುರ್ಗದಲ್ಲಿ ಶಿವಾಜಿಯ ಜನ್ಮವಾಯಿತು .

ಕೆಲವು ಇತಿಹಾಸಕಾರರು ಅವನು ಕ್ರಿ.ಶ. 1627 ರ ಏಪ್ರಿಲ್ 10 ರಂದು ಜನಿಸಿದನೆಂದು ಹೇಳುತ್ತಾರೆ .

ಅವನು ಭೋಂಸ್ಥೆ ಎಂಬ ಶೂರರ ಮನೆತನಕ್ಕೆ ಸೇರಿದವನು , ಶಿವಾಜಿಯ ತಾಯಿ ಜೀಜಾಬಾಯಿ ಧಾರ್ಮಿಕ ಮನೋಭಾವದವಳಾಗಿ ಸದಾ ಶಿವನನ್ನು ಪೂಜಿಸುತ್ತಿದ್ದಳು .

ಶಿವಾಜಿ ಹುಟ್ಟಿದಾಗ ಅವಳಿಗಾದ ಸಂತೋಷ ಅಷ್ಟಿಷ್ಟಲ್ಲ  ಹಿಂದೂ ಧರ್ಮದ ರಕ್ಷಣೆಗೆ ತನಗೆ ಗಂಡುಮಗುವಾಗಿದ್ದು ಅದು ದೇವರ ಕೃಪೆಯಿಂದ ಎಂದು ಅವಳು ತಿಳಿದಳು .

ಅವರು ವಾಸಿಸುತ್ತಿದ್ದುದು ಅರಣ್ಯ ಮಧ್ಯದ ಒಂದು ಪುಟ್ಟ ಹಳ್ಳಿಯಲ್ಲಿ ,

ತಾಯಿ ಜೀಜಾಬಾಯಿ ಮಗನಿಗೆ ಸದಾ ವೀರರ ,

ಧೀರರ ಕತೆಗಳನ್ನು ಹೇಳುತ್ತಾ ಅವನಲ್ಲಿ ವೀರರಸ ತುಂಬುತ್ತಿದ್ದಳು .

ಶಿವಾಜಿಯು ಆ ಕತೆಗಳನ್ನು ಬಹಳ ಕುತೂಹಲ ಮತ್ತು ಆಸಕ್ತಿಯಿಂದ ಕೇಳುತ್ತಿದ್ದನು . ಜೀಜಾಬಾಯಿ ರಾಜನೀತಿಯಲ್ಲೂ ಪ್ರವೀಣಳಾಗಿದ್ದಳು .

ರಾಮಾಯಣ ,

ಮಹಾಭಾರತ ಮೊದಲಾದ ಮಹಾಕಾವ್ಯದ ಕಥೆಗಳನ್ನು ಸ್ವಾರಸ್ಯವಾಗಿ ವರ್ಣಿಸಿ ಅವನ ಮನಸ್ಸಿನಲ್ಲಿ ಧಾರ್ಮಿಕ ಶ್ರದ್ದೆಯ ,

ರಾಷ್ಟ್ರಭಕ್ತಿಯ ಮೊಳಕೆಗಳನ್ನು ನೆಟ್ಟಳು ,

ಸ್ವತಂತ್ರವಾಗಿ ಬದುಕಬೇಕಾಗಿದ್ದ ತಮ್ಮ ಜೀವನ ಈ ರೀತಿ ಕಾಡುಪಾಲಾಗಿರುವುದಕ್ಕೆ ಪರಕೀಯರ ಆಕ್ರಮಣ ಕಾರಣವಾಗಿದ್ದು ,

ಅವನು ದೊಡ್ಡವನಾದ ಮೇಲೆ ಅವರನ್ನು ಸದೆಬಡಿಯಬೇಕು ಎಂದು ಜೀಜಾಬಾಯಿ ಶಿವಾಜಿಯ ಮನದಲ್ಲಿ ಕಿಚ್ಚು ಹಚ್ಚಿಸುತ್ತಿದ್ದಳು .

 

ಧೈಯ್ಯಕ್ಕೆ , ಸಾಹಸಗಳಿಗೆ ಹೆಸರಾಗಿದ್ದ ಭೋಂಸ್ಲಿ ಮನೆತನ ಮಹಾರಾಷ್ಟ್ರದ ಪುಣೆ ,

ಸತಾರಾ ,

ರತ್ನಗಿರಿ ಮುಂತಾದ ಪ್ರಾಂತ್ಯಗಳಲ್ಲಿ ನೆಲೆಸಿತು .

ಮೂಲತಃ ಭೋಂಸ್ಥೆ ಮನೆತನದವರು ಕೃಷಿಕರಾಗಿದ್ದರೂ ಶಿವಾಜಿಯ ಪೂರ್ವಿಕರು ಉದಯಪುರ , ಅಹಮದ್‌ನಗರ ಮುಂತಾದ ಪ್ರಾಂತ್ಯಗಳ ಅರಸರ ಸೈನ್ಯದಲ್ಲಿ ಕೆಲಸಮಾಡುತ್ತಿದ್ದರು .

ಅಹಮದ್‌ನಗರದ ಸುಲ್ತಾನನಲ್ಲಿ ನೌಕರಿಯಲ್ಲಿದ್ದ ಮಾಲೋಜಿ ಎಂಬ ಮರಾಠಾ ವೀರನಿಗೆ ಕ್ರಿ.ಶ. 1594 ರಲ್ಲಿ ಶಾಹಜಿ ಎಂಬ ಮಗ ಜನಿಸಿದ ,

ಈತನೇ ಶಿವಾಜಿಯ ತಂದೆ ,

ಶಾಹಜಿ ಜೀಜಾಬಾಯಿಯನ್ನು ಮದುವೆಯಾದ .

ಕ್ರಿ.ಶ. 1623 ರಲ್ಲಿ ಇವರ ಮೊದಲ ಮಗ ಶಂಭೂಜಿ ಜನಿಸಿದ . ಕೆಲವು ಕಾಲ ಗಂಡ – ಹೆಂಡತಿ ಮಗುವಿನ ಬಾಲಲೀಲೆಗಳನ್ನು ನೊಡುತ್ತಾ ಸುಖವಾಗಿ ಇದ್ದರು .

ಆದರೆ ಶಿವಾಜಿಯ ಜನನದ ವೇಳೆ ಶಾಹಜಿ ಜೀಜಾಬಾಯಿಯರನ್ನು ವಿಧಿ ಬೇರ್ಪಡಿಸಿತು .

ಶಾಹಜ ಅಹಮದ್‌ನಗರದ ಸೈನ್ಯದಲ್ಲಿ ಸರದಾರನಾಗಿ ವೃತ್ತಿಜೀವನವನ್ನು ಆರಂಭಿಸಿದ .

ಆದರೆ , ಅಲ್ಲಿನ ರಾಜಕೀಯದ ಜಂಜಾಟ ಬೇಸರತರಿಸಿತು . ರೋಸಿಹೋದ ಶಾಹಜಿ ಅಲ್ಲಿಂದ ದೂರವಾಗಿ ಬಿಜಾಪುರದ ಸುಲ್ತಾನನ ಸೈನ್ಯವನ್ನು ಸೇರಿದ . ಆದರೆ ಅಲ್ಲೂ ಅವನಿಗೆ ಕಾಡಿತ್ತು ಕಿರಿಕಿರಿ .

ಹಾಗಾಗಿ ಆತ ಅಹಮದ್‌ನಗರಕ್ಕೆ ಹಿಂದಿರುಗಿದ . ಶಾಹಜಿಯ ವರ್ತನೆಯಿಂದ ಸಿಟ್ಟುಗೊಂಡ ಬಿಜಾಪುರದ ಸುಲ್ತಾನ ಪಣೆಯ ಸುತ್ತಮುತ್ತ ಶಾಹಜಿಗೆ ಸೇರಿದ್ದ ಜಹಗೀರಿಗಳನ್ನು ವಶಪಡಿಸಿಕೊಂಡನು .

ಅಹಮದ್‌ನಗರದಲ್ಲಿಯೂ ಪರಿಸ್ಥಿತಿ ಉತ್ತಮವಾಗಿರಲಿಲ್ಲ . ಕ್ರಿ.ಶ. 1628 ರಲ್ಲಿ ಶಾಹಜಿಯ ಮಾವ ಲಕ್ಕೋಜಿಯ ಹತ್ಯೆಯಾದಾಗ ಶಾಹಜಿಗೆ ಅಹಮದ್‌ನಗರದಲ್ಲಿರುವುದು ಅತ್ಯಂತ ಕಷ್ಟವೆನಿಸಿತು .

ಇನ್ನಿತರ ಹಲವು ಸಮಸ್ಯೆಗಳು ಅವನನ್ನು ಮುತ್ತಿಕೊಂಡವು .

ಹೀಗಾಗಿ ಅವನು ಗರ್ಭಿಣಿ ಜೀಜಾಬಾಯಿಯನ್ನು ಬೇರೆಡೆಗೆ ಕಳುಹಿಸಲು ಪ್ರಯತ್ನಿಸಿದನು .

ಅಂತಿಮವಾಗಿ ಶಿವಾಜಿಯ ಜನನದ ಕಾಲದಲ್ಲಿ ಜೀಜಾಬಾಯಿ ಶಿವನೇರಿದುರ್ಗದಲ್ಲಿ ಆಶ್ರಯ ಪಡೆಯಬೇಕಾಯಿತು .

ಇಂತಹ ಕಷ್ಟಕಾಲದಲ್ಲಿ ಅವಳಿಗೆ ಬೆಂಬಲವಾಗಿ ನಿಂತವರು ಶಿವನೇರಿದುರ್ಗದ ‘ ಮಹಾರ್ ‘ ಎಂಬ ಗುಡ್ಡಗಾಡು ನಿವಾಸಿಗಳು ಎಂದು ಇತಿಹಾಸಕಾರರು ತಿಳಿಸಿದ್ದಾರೆ .

ಕೆಲವು ವರ್ಷಗಳ ನಂತರ ಜೀಜಾಬಾಯಿ ಪತಿಯನ್ನು ಸೇರಿದಳು .

ಬಹುತೇಕ ಇತಿಹಾಸಕಾರರು ಶಿವಾಜಿ ತಂದೆಯ ಪ್ರೀತಿಯ ಮಗನಾಗಿರಲಿಲ್ಲ ಎನ್ನುತ್ತಾರೆ .

ಶಾಹಜಿಗೆ ಶಂಭೂಜಿ ಮೇಲೆ ಅಧಿಕ ಪ್ರೀತಿಯಿದ್ದಿತ್ತಂತೆ . ಈ ಕಾರಣದಿಂದ ಶಾಹಜಿಯು ಶಂಭೂಜಿಯನ್ನು ಯಾವಾಗಲೂ ತನ್ನ ಹತ್ತಿರವೇ ಇಟ್ಟುಕೊಂಡಿರುತ್ತಿದ್ದ .

ಶಿವಾಜಿ ಮಾತ್ರ ಸದಾ ತಾಯಿಯ ಹಿಂದೆ ಓಡಾಡುತ್ತಿದ್ದ ,

ಜೀಜಾಬಾಯಿಗೂ ಶಿವಾಜಿ ಬಗ್ಗೆ ವಿಶೇಷ ಪ್ರೀತಿ ಇತ್ತು .

ಶಿವಾಜಿ ಮೂರು ವರ್ಷದವನಾಗಿದ್ದಾಗ ಶಾಹಜಿಯು ‘ ಮೋಹಿತೆ ‘ ಮನೆತನಕ್ಕೆ ಸೇರಿದ ತಾರಾಬಾಯಿ ಎಂಬಾಕೆಯನ್ನು ಮದುವೆಯಾದ .

ಈ ಎರಡನೇ ಸಂಬಂಧದಿಂದ ಸಹಜವಾಗಿ ಶಾಹಜಿ ಮತ್ತು ಜೀಜಾಬಾಯಿ ನಡುವೆ ವೈಷಮ್ಯ ಹುಟ್ಟಿಕೊಂಡಿತು .

ಕಡೆಗೆ ಬೇಸತ್ತ ಜೀಜಾಬಾಯಿ ಕ್ರಿ.ಶ .1637 ರಲ್ಲಿ ಮಗನನ್ನು ಕರೆದುಕೊಂಡು ಬಿಜಾಪುರಕ್ಕೆ ಹೊರಟುಹೋದಳು .

ಬಿಜಾಪುರದಲ್ಲೂ ಅವಳೇನೂ ನೆಮ್ಮದಿಯಾಗಿರಲಿಲ್ಲ .

ಅಂತಿಮವಾಗಿ ಅವಳು ಮಣೆಗೆ ಬಂದು ನೆಲೆಸಿದಳು . ಜೀಜಾಬಾಯಿ ಮತ್ತು ಶಿವಾಜಿ ಮಣೆಗೆ ಬಂದು ನೆಲೆಸಿದ ಮೇಲೆ ಅವರನ್ನು ನೋಡಿಕೊಳ್ಳುವುದಕ್ಕೆ ಶಾಹಜಿಯು ದಾದಾಜಿ ಕೊಂಡದೇವನೆಂಬ ವಾಹ್ಮಣನನ್ನು ನೇಮಿಸಿ ಮುಗಯ ಜಹಗೀರಿಯ ಕಾರ್ಯಭಾರವನ್ನು ಅವನಿಗೊಪ್ಪಿಸಿದನು .

ಅವನು ವಾಸಕ್ಕೆ ದೊಡ್ಡ ಮನೆಯೊಂದನ್ನು ಕಟ್ಟಿಸಿದನು .

ಆ ಮನೆಯಲ್ಲಿ ಶಿವಾಜಿಯ ಬಾಲ್ಯ ಕಳೆಯಿತು . ದಾದಾಜಿ ಕೊಂಡದೇವ ಬುದ್ಧಿವಂತ ಮತ್ತು ಚಾಣಾಕ್ಷ , ಅವನು ಶಿವಾಜಿಗೆ ಯುದ್ಧಕಲೆಗಳನ್ನು ಕಲಿಸಿಕೊಟ್ಟನು . ಶಿವಾಜಿಗೆ ವಿದ್ಯೆ ಕಲಿಯುವುದರಲ್ಲಿ ಆಸಕ್ತಿ ಇರಲಿಲ್ಲ .

ಆದರೆ ಆತ ಚತುರನಿದ್ದ .

ಧನುರ್ವಿದ್ಯೆ ,

ಕತ್ತಿವರಸೆ ,

ಕುದುರೆ ಸವಾರಿ ಮುಂತಾದವುಗಳನ್ನು ಬಲು ಬೇಗನೆ ಕಲಿತನು .

ದಾದಾಜಿ ಕೊಂಡದೇವನು ಶಿವಾಜಿಗೆ ಸ್ವಧರ್ಮದಲ್ಲಿ ಆಸ್ಥೆಯನ್ನು ಹುಟ್ಟಿಸುವ ಸಲುವಾಗಿ ವಿಶೇಷ ಪ್ರಯತ್ನಪಟ್ಟು , ಅದರಲ್ಲಿ ಸಫಲನೂ ಆದನು . ಜೀಜಾಬಾಯಿಗೆ ಓರ್ವ ಮಹಾನ್ ಮಗ ಶಿವಾಜಿಯೂ ವ್ಯಕ್ತಿಯಾಗಬೇಕೆಂಬ ದೊಡ್ಡ ಆಸೆಯಿತ್ತು .

ಅದಕ್ಕಾಗಿ ಅವಳು ಹಗಲಿರುಳು ಪ್ರಯತ್ನಿಸುತ್ತಿದ್ದಳು . ದೇವರ ಮೇಲೆ ಭಾರ ಹಾಕಿ ಮಗನನ್ನು ಸಾಹಸ ಕಾರ್ಯಗಳಿಗೆ ಕಳುಹಿಸುತ್ತಿದ್ದಳು . ಒಂದು ರೀತಿಯಲ್ಲಿ ಶಿವಾಜಿಗೆ ಅವಳ ತಾಯಿ ಜೀಜಾಬಾಯಿಯೇ ಎಲ್ಲವೂ ಆಗಿದ್ದಳು . ಮಂತ್ರಿ , ಮಾರ್ಗದರ್ಶಿನಿ , ಗುರು , ಸಲಹೆಗಾರ್ತಿ ಹೀಗೆ ಹಲವು ಪಾತ್ರಗಳನ್ನು ಅವಳು ವಹಿಸಿದ್ದಳು .

ತಾಯಿ ಮತ್ತು ದಾದಾಜಿ ಪ್ರಭಾವದಿಂದ ಅವನಲ್ಲಿ ದೇಶದ ಬಗ್ಗೆ , ಹಿಂದೂ ಧರ್ಮದ ಬಗ್ಗೆ ವಿಶೇಷ ಅಭಿಮಾನ ಬೆಳೆಯಿತು .

ಶಿವಾಜಿಯು ತನ್ನ ಸ್ನೇಹಿತರ ಜತೆಗೂಡಿ ಮಣ್ಣಿನ ಕೋಟೆಗಳನ್ನು ಕಟ್ಟಿ ಅವರೊಂದಿಗೆ ಕತ್ತಿವರಸೆಯ ಅಭ್ಯಾಸದಲ್ಲಿ ತೊಡಗುತ್ತಿದ್ದನು .

ಒಟ್ಟಾರೆ ದಾದಾಜಿ ಶಿವಾಜಿಯ ಪರಿಪೂರ್ಣ ವ್ಯಕ್ತಿತ್ವದ ವಿಕಾಸಕ್ಕೆ ಕಾರಣನಾದನು .ಶಿವಾಜಿಗೆ ಹದಿನಾರು ವರ್ಷ ತುಂಬಿತು . ಅವನಿಗೆ ಜವಾಬ್ದಾರಿ ಬರಲೆಂದು ದಾದಾಜಿ ಜಹಗೀರಿಯ ಕೆಲಸಗಳೆಲ್ಲವನ್ನೂ ಅವನ ಮೇಲೆ ಹೊರಿಸಿದನು .

ಆದರೆ ಶಿವಾಜಿ ಮಾತ್ರ ವಯಸ್ಸಿಗೆ ತಕ್ಕಂತೆ ವರ್ತಿಸುತ್ತಿದ್ದನು .

ಗಾಂಭೀರ ಅವನ ಬಳಿ ಸುಳಿಯಲಿಲ್ಲ . ಪದೇ ಪದೇ ಅವನು ಕುದುರೆಯ ಸವಾರರೊಡಗೂಡಿ ಬೆಟ್ಟ – ಗುಡ್ಡಗಳನ್ನೆಲ್ಲ ಅಲೆಯುತ್ತಿದ್ದನು .

ಇದರಿಂದಾಗಿ ಅವನಿಗೆ ಬೆಟ್ಟ – ಗುಡ್ಡಗಳಲ್ಲಿದ್ದ ದಾರಿಗಳೆಲ್ಲವೂ ಪರಿಚಯವಾದವು , ಶಿವಾಜಿಯು ಉಪಾಯದಿಂದ ಆ ದುರ್ಗಗಳನ್ನು ವಶಪಡಿಸಿಕೊಂಡನು .

ಕ್ರಿ.ಶ. 1646 ರಲ್ಲಿ ತೋರಣವೆಂಬ ದುರ್ಗವ ಅವನ ಕೈಸೇರಿತು , ಆಶ್ಚರ್ಯಕರ ಸಂಗತಿಯೆಂದರೆ ಆ ದುರ್ಗದಲ್ಲಿ ಒಂದು ಕಡೆ ನೆಲವನ್ನು ಆಯಿಸುತ್ತಿರುವಾಗ ಶಿವಾಜಿಗೆ ನಿಧಿ ಸಿಕ್ಕಿತು .

ಅದರಿಂದ ತೋರಣದ ಸಮೀಪ ನೂತನ ಕೋಟೆಯೊಂದನ್ನು ಕಟ್ಟಿಸಿ ಅದಕ್ಕೆ ರಾಜಗಡ್ ಎಂದು ಹೆಸರಿಟ್ಟನು ; ಜೊತೆಗೆ ಆಯುಧಗಳನ್ನು ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿಟ್ಟುಕೊಂಡನು .

ಇದೇ ಸಮಯದಲ್ಲಿ ಕೊಂಡದೇವನಿಗೆ ಎಪ್ಪತ್ತು ವರ್ಷವಾಯಿತು . ಅವನು ತಾನು ಇನ್ನು ಹೆಚ್ಚು ಕಾಲ ಬದುಕುವ ಸಾಧ್ಯತೆ ಇಲ್ಲ . ಎಂಬುದನ್ನರಿತು ಶಿವಾಜಿಯನ್ನು ತನ್ನ ಬಳಿ ಕೂರಿಸಿಕೊಂಡು ಉಪದೇಶ ಮಾಡಿದನು ; ” ಸಾತ್ವಿಕಗುಣ ಬೆಳೆಸಿಕೊ , ಪ್ರತಿನಿತ್ಯ ದೇಗನೆದ್ದು ಭಗವಂತನನ್ನು ಸ್ಮರಿಸು .

ಈ ಜಗತ್ತು ಶಾಶ್ವತವಲ್ಲ , ಹೀಗಾಗಿ ಉದ್ಯೋಗಕ್ಕೆ ಒಳಗಾಗದೆ ನಿನ್ನ ಕೆಲಸ ಕಾರ್ಯಗಳನ್ನು ಮಾಡು , ವ್ಯಾಮೋಹಕ್ಕೆ ಸಿಲುಕಬೇಡ , ಹಾಗೆಯೇ ಕ್ರೋಧಕ್ಕೂ ಒಳಗಾಗಬೇಡ . ಒಬ್ಬ ವ್ಯಕ್ತಿಯ ಮಾತು ಕೇಳಿ ನಿರ್ಧಾರಕ್ಕೆ ಬರಬೇಡ , ಸತ್ಯಕ್ಕೆ ತಲೆಬಾಗು , ಸತ್ಯವೇ ಸಕಲ ಧರ್ಮದ ಎಂದಿಗೂ ಅಹಂಕಾರ ಪಡಬೇಡ , ಭ್ರಾಂತಿಯಲ್ಲಿ ಜೀವಿಸಬೇಡ , ಹೊಗಳುವವರ ಮಾತಿಗೆ ಹಿಗ್ಗಬೇಡ , ಅವರು ಸ್ವಾರ್ಥಿಗಳು , ದುರಾಲೋಚನೆಯುಳ್ಳವರು . ನೇರವಾಗಿ , ಸತ್ಯದ ಮಾತುಗಳನ್ನಾಡುವವರನ್ನು ಗೌರವಿಸು .

ದೇಶ ನೋಡು , ಕೋಶ ಓದು , ಊಟದಲ್ಲಿ , ಉಡಿಗೆ ತೊಡಿಗೆಗಳಲ್ಲಿ ಅನವಶ್ಯಕ ಆಡಂಬರ ಬೇಡ , ಮದ್ಯ , ಮಾನಿನಿಯರ ಸಂಗ ಬೇಡ . ನಿದ್ರಾಹಾರಗಳಲ್ಲಿ ಮಿತವಿರಲಿ , ಯಾರನ್ನೂ ಅವಲಂಬಿಸಬೇಡ . ಅಪರಾಧವು ಒಂದೇ ಆದರೂ ಅಪರಾಧಿಗಳ ಸ್ವಭಾವವನ್ನರಿತು ದಂಡನೆಯನ್ನು ವಿಧಿಸು , ಪ್ರಜೆಗಳಿಗೆ ರಾಜನೇ ತಂದೆ – ತಾಯಿ ‘ ಆರ್ಥಿಕ ಸ್ಥಿತಿ – ಗತಿ ನೋಡಿಕೊಂಡು ಹಣ ಖರ್ಚು ಮಾಡು .

ಪಡೆಗಳ ಹಣವನ್ನು ಎಂದಿಗೂ ದುರುಪಯೋಗ ಮಾಡಬಾರದು . ವಿಶ್ವಾಸಕ್ಕೆ ಯೋಗ್ಯರಾದ ಬುದ್ಧಿವಂತರ ವಿಚಾರಗಳನ್ನು ಕಿವಿಗೊಟ್ಟು ಕೇಳು . ವಿದೇಶಿಯರ ಇತಿಹಾಸವನ್ನೂ ವೀರಮರುಷರ ಚರಿತ್ರೆಯನ್ನೂ ಕೇಳುವುದು ಒಳ್ಳೆಯದು . ಒಂದು ದೇಶವು ಹೀನಸ್ಥಿತಿಯಿಂದ ಉನ್ನತ ಸ್ಥಿತಿಗೆ ಯಾವ ಆಧಾರದ ಮೇಲೆ ಬ ೦ ದಿತು .

ಯಾವ ಕಾರಣದಿಂದ ಅವನತಿ ಹೊಂದಿತು . ಎಂಬುದರ ಬಗ್ಗೆ ಅರಿವಿರಲಿ , ಇತಿಹಾಸ ಓದು , ಇತಿಹಾಸದಿಂದ ಮನುಷ್ಯನಿಗೆ ಲೋಕಜ್ಞಾನ ಹೆಚ್ಚುವುದು , ಕನಸಿನಲ್ಲೂ ಯಾರಿಗೂ ಕಟುಭಾಷೆಯನ್ನಾಡಬೇಡ , ಎಂದಿಗೂ ಯಾರಿಗೂ ದೋಹಬಗೆಯ ಬೇಡ , ಯಾವ ಕಾರ್ಯವನ್ನು ಮಾಡಬೇಕೆಂದು ನೀನು ಪ್ರತಿಜ್ಞೆ ಮಾಡಿದ್ದೀಯೋ ಅದಕ್ಕಿಂತ ಶ್ರೇಷ್ಠ ಕಾರ್ಯ ಯಾವುದೂ ಇಲ್ಲ ಕಷ್ಟಗಳು ಬಂದಾಗ ಹೆದರದ ಸಮಾಧಾನದಿಂದಿರು .

” ಈ ರೀತಿಯಾಗಿ ಉಪದೇಶ ನೀಡಿದ ದಾದಾಜಿ ಕೊಂಡದೇವ ಶಿವಾಜಿಯನ್ನು ಒಂದು ಕ್ಷಣ ಗಮನಿಸಿದನು . ಅವನ ಮುಖದಲ್ಲಿ ಅಪೂರ್ವ ಕಾಂತಿಯೊಂದು ಕಂಡುಬಂದಿತು . ಗುರುವಿನ ಹಿತೋಪದೇಶ ಕೇಳಿದ ಶಿವಾಜಿಗೆ ಆನಂದ ಉಕ್ಕಿಬಂದಿತು . ನೋಡ ನೋಡುತ್ತಲೇ ದಾದಾಜಿ ಕೊಂಡದೇವ ಇಹಲೋಕ ತ್ಯಜಿಸಿದನು .

ಶಿವಾಜಿಯ ವ್ಯಕ್ತಿತ್ವ ರೂಪಿಸುವಲ್ಲಿ ದಾದಾಜಿಯ ಪಾತ್ರ ಬಹು ಪ್ರಮುಖವಾದದ್ದು , ದಾದಾಜಿ ಮಾನವತಾವಾದಿ ಮತ್ತು ತತ್ವಜ್ಞಾನಿಯಾಗಿದ್ದನು . ಅವನು ಜನಿಸಿದ್ದು ಮಣೆಯ ಮಲ್ಪನವೆಂಬ ಗ್ರಾಮದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ , ಅವನ ಪೂರ್ವಿಕರು ಆ ಗ್ರಾಮದ ಕುಲಕರ್ಣಿಗಳಾಗಿದ್ದರು .

ದಾದಾಜಿಯ ಒಳ್ಳೆಯ ಮನಸ್ಸು , ಕಾರ್ಯತತ್ಪರತೆ , ಧರ್ಮಪರಾಯಣತೆ ಮುಂತಾದ ಗುಣಗಳನ್ನು ಮೆಚ್ಚಿದ್ದ ಶಾಹಜಿಯು ಅವನಿಗೆ ತನ್ನ ಜಹಗೀರಿಗಳ ಸಂಪೂರ್ಣ ಮೇಲುಸ್ತುವಾರಿ ವಹಿಸಿದ್ದನು .

ದಾದಾಜಿ ಕೆಲವೇ ತಿಂಗಳುಗಳಲ್ಲಿ ಜಹಗೀರಿಯನ್ನು ಅಭಿವೃದ್ಧಿಪಡಿಸಿ ಭೂಮಿಯ ಹುಟ್ಟುವಳಿಗೆ ತಕ್ಕ ಹಾಗೆ ಕಂದಾಯ ಹಾಕಿ ಜಹಗೀರಿಯ ಉತ್ಪತ್ತಿಯನ್ನು ಹೆಚ್ಚಿಸಿದನು . ಅವನ ಉಸ್ತುವಾರಿ ಉತ್ತಮವಾಗಿದ್ದುದರಿಂದ ಪ್ರಜೆಗಳೆಲ್ಲ ಸಂತೋಷದಿಂದಿರುತ್ತಿದ್ದರು .

ಶಾಹಜಿಗಂತೂ ದಾದಾಜಿ ಕೊಂಡದೇವ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ . ದಾದಾಜಿಯು ತನ್ನ ಅಂತ್ಯಕಾಲದಲ್ಲಿ ಶಿವಾಜಿಗೆ ನೀಡಿದ ಉಪದೇಶ ಅಪೂರ್ವವಾದದ್ದು ಎನ್ನುತ್ತಾರೆ ಇತಿಹಾಸಕಾರರು . ಬಾಲ್ಯದಲ್ಲಿಯೇ ಶಿವಾಜಿ ಬಹಳ ಧೈರವಂತನಾಗಿದ್ದ .

ಒಮ್ಮೆ ಶಹಜಿಯು ವಿಜಾಪುರದ ಬಾದಶಾಹನನ್ನು ಭೇಟಿಮಾಡಲು ಮಗ ಶಿವಾಜಿಯ ಜೊತೆಗೆ ಹೋದನು . ಅಲ್ಲಿ ಶಾಹಜಿಯು ಬಾದಶಹನ ಮುಂದೆ ಮೂರು ಬಾರಿ ಮುಜರೆಮಾಡಿ ಹಿಂದಕ್ಕೆ ಸರಿದು ನಿಂತನು . ತನ್ನ ಮಗನಿಗೂ ನಮಸ್ಕಾರಮಾಡಲು ಹೇಳಿದನು . ಆದರೆ ಶಿವಾಜಿ ಮಾಡಲಿಲ್ಲ .

ಅರಮನೆಯಿಂದ ಹೊರಗೆ ಬಂದಮೇಲೆ ಶಾಹಜಿಯು ಸಿಟ್ಟಿನಿಂದ , “ ಶಿವಾಜಿ ನೀನೇಕೆ ಬಾದಶಹನಿಗೆ ನಮಸ್ಕಾರ ಮಾಡಲಿಲ್ಲ ? ” ಎಂದು ಕೇಳಿದನು . ಆಗ ಶಿವಾಜಿ , “ ಪಿತಾಜಿ , ನಿಮಗೆ ಬೇಕಾದರೆ ನಮಸ್ಕಾರ ಮಾಡುತ್ತೇನೆ , ಭಗವಂತನಿಗೆ , ತಾಯಿಗೆ ಸಾಷ್ಟಾಂಗ ನಮಸ್ಕಾರಹಾಕುತ್ತೇನೆ .

ಆದರೆ ಆ ಮನುಷ್ಯನಿಗೆ ನಾನೇಕೆ ನಮಸ್ಕಾರ ಮಾಡಬೇಕು ? ಅವನೇನು ದೇವರೆ ? ” ಶಿವಾಜಿಯ ಮಾತು ಕೇಳಿದ ಶಾಹಜಿ ದಂಗಾದ , ಇಷ್ಟು ಚಿಕ್ಕವಯಸ್ಸಿನಲ್ಲಿ ಎಷ್ಟು ಧೈರ್ಯವಾಗಿ ಮಾತನಾಡುತ್ತಾನಲ್ಲ ಎಂದು ಆಶ್ಚರ್ಯಪಟ್ಟ ದಾದಾಜಿ ಕೊಂಡದೇವನ ಕಾಲದಲ್ಲಿ ಮಣೆಯ ಸಮೀಪ ಮಾವಳ ಎಂಬ ಪ್ರದೇಶವಿತ್ತು .

ಅಲ್ಲಿ ಚಿಕ್ಕ ಚಿಕ್ಕ ಜಹಗೀರಗಳು ಇದ್ದವು . ಅವುಗಳ ಮೇಲ್ವಿಚಾರಣೆಯನ್ನು ದೇಶಪಾಂಡೆಗಳು ಮತ್ತು ದೇಶಮುಖರು ನೋಡಿಕೊಳ್ಳುತ್ತಿದ್ದರು . ಅಲ್ಲಿ ಶಿವಾಜಿ ತನ್ನ ಸಮವಯಸ್ಸಿನ ಹುಡುಗರೊಡನೆ ಆಟವಾಡುತ್ತ ಇದ್ದನು . ಅವನ ಧೈರ್ಯ , ಸಾಹಸ ಕ ೦ ಡ ಹುಡುಗರು ಅವನನ್ನ ತಮ್ಮ ನಾಯಕನನ್ನಾಗಿ ಮಾಡಿಕೊಂಡರು .

ಅಷ್ಟೇ ಅಲ್ಲ , ಆ ಹುಡುಗರಿಗೆ ಯುದ್ಧ ಮಾಡುವುದು ಹೇಗೆಂದು ಶಿವಾಜಿಯು ತೋರಿಸಿಕೊಟ್ಟನು . ಅವನ ಧೈರ್ಯ , ಸಾಹಸ ನೋಡಿದ ದೇಶಮುಖರಿಗೆ ಅವನ ಮೇಲೆ ಪ್ರೀತಿ ಹುಟ್ಟಿತು .ಶಿವಾಜಿಯು ತನ್ನ ಸೈನ್ಯವನ್ನು ಕಟ್ಟಿದನು . ಸಹ್ಯಾದ್ರಿಯ ಪ್ರತಿಯೊಂದು ಶಿಖರವನ್ನು ಏರಿದನು .

ಅಲ್ಲಿಯ ಗಿರಿಕಂದರಗಳಲ್ಲಿ ಓಡಾಡಿದನು . ಹೀಗೆ ಶಿವಾಜಿ ಅತ್ಯಂತ ಚಿಕ್ಕವಯಸ್ಸಿನಲ್ಲೇ ಧೈರ್ಯ – ಸಾಹಸಗಳಿಂದ ಕೂಡಿ ಚಟುವಟಿಕೆಯಿಂದಿದ್ದನು . ಆತ ಬಹಳ ಪ್ರತಿಭಾಶಾಲಿಯೂ ಆಗಿದ್ದನು . ಅವನು ಬಾಲ್ಯದಲ್ಲಿ ಮಾವಳಿಗಳೆಂಬ ಮಲೆಯರ ಜೊತೆಯಲ್ಲಿ ವಿಶೇಷವಾಗಿ ಓಡಾಡುತ್ತಿದ್ದನು .

ಅವರು ಶಕ್ತಿವಂತರೂ ಸಾಹಸಿಗಳೂ ಆಗಿದ್ದರು ; ಹಿಡಿದ ಕಾರ್ಯವನ್ನು ಪೂರ್ಣಗೊಳಿಸುವವರೆಗೂ ಬಿಡುತ್ತಿರಲಿಲ್ಲ . ನೋಡುವುದಕ್ಕೆ ಸುಂದರವಾಗಿರಲಿಲ್ಲವಾದರೂ ಅವರು ವಿಶ್ವಾಸಕ್ಕೆ ಯೋಗ್ಯರಾಗಿದ್ದರು .

ಅವರದು ಸಂತೃಪ್ತ ಸ್ವಭಾವವಾಗಿತ್ತು . ಶಿವಾಜಿ ದೊಡ್ಡವನಾದ ಮೇಲೆ ಅವನ ಆಪ್ತಭಟರು ಅವರೇ ಆದರು . ಕೊಂಡದೇವ ನಿಧನವಾದನಂತರ , ಜಹರಿಯನ್ನು ಅವನ ನೋಡಿಕೊಳ್ಳುವ ಹೊಣೆ ಶಿವಾಜಿ ಮೇಲೆ ಬಿದ್ದಿತು . ಆಗ ಕಾರ್ಯಕ್ಷೇತ್ರವು ವಿಸ್ತಾರಗೊಂಡಿತು .

ಯಾರನ್ನೂ ಅವಲಂಬಿಸಬೇಡ ಎಂದು ದಾದಾಜಿ ಹೇಳಿದ್ದ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಶಿವಾಜಿ ಎಲ್ಲ ಜವಾಬ್ದಾರಿಯನ್ನು ತಾನೇ ನಿಭಾಯಿಸಲಾರಂಭಿಸಿದ . ಅಲ್ಲದೆ , ದೇಶದ ಅಭಿವೃದ್ಧಿ , ಹಿಂದೂ ಧರ್ಮ ರಕ್ಷಣೆ ಮುಂತಾದವುಗಳ ಬಗ್ಗೆ ಅವನು ಸದ ಯೋಚಿಸುತ್ತಿದ್ದ .

ಒಮ್ಮೆ ಜಹಗೀರಿಯಿಂದ ಬರಬೇಕಾಗಿದ್ದ ಹಣ ತೆಗೆದುಕೊಂಡು ಬರುವಂತೆ ಶಾಹಜಿ ತನ್ನ ಆಳು – ಕಾಳುಗಳನ್ನು ಶಿವಾಜಿಯ ಬಳಿ ಕಳುಹಿಸಿದನು . ಆದರೆ ಶಿವಾಜಿಯ ಯೋಚನೆಯೇ ಬೇರೆಯದಾಗಿತ್ತು .

ತರ್ಕಬದ್ಧವಾಗಿ ವಿಚಾರಮಾಡಿದ್ದ ಅವನು ಸಂಗ್ರಹಗೊಂಡಿದ್ದ ಹಣವನ್ನು ಆ ಸಂದರ್ಭದಲ್ಲಿ ಕಳುಹಿಸುವುದು ಸರಿಯಲ್ಲ ಎಂದು ಭಾವಿಸಿ , ದೇಶವು ದರಿದ್ರಾವಸ್ಥೆಯಲ್ಲಿದೆಯೆಂದೂ ಕಂದಾಯ ಮೊದಲಾದ ರಾಜಕೀಯ ವಿಷಯಗಳಲ್ಲಿ ಮಾಡಿದ ತಿದ್ದುಪಡಿಗಳಿಂದಾಗಿ ವೆಚ್ಚವು ಹೆಚ್ಚಿರುವುದೆಂದೂ ತಿಳಿಸಿ ಹಣವನ್ನು ಕಳುಹಿಸುವುದಕ್ಕೆ ನಿರಾಕರಿಸಿ ದಾದಾಜಿ ಕೊಂಡದೇವನ ನಿಧನದ ಸುದ್ದಿಯನ್ನು ಮಾತ್ರ ಬರೆದು ಕಳುಹಿಸಿದ .

ಶಿವಾಜಿ ಕನಸುಗಾರನಾಗಿದ್ದ . ಆದರೆ ಅವನೆಂದೂ ಹಗಲುಗನಸಿನಲ್ಲಿ ಕಾಲ ಕಳೆಯುತ್ತಿರಲಿಲ್ಲ . ತನ್ನ ಕನಸುಗಳನ್ನು ನನಸುಮಾಡಲು ಪ್ರಯತ್ನಿಸುತ್ತಿದ್ದ .

ಸ್ವಧರ್ಮವನ್ನು , ಸ್ವದೇಶವನ್ನು ರಕ್ಷಿಸಬೇಕೆಂದು ಎಲ್ಲರಲ್ಲೂ ಪ್ರಾರ್ಥಿಸುತ್ತಿದ್ದ . ದೇಶಕ್ಕೆ ಹಾಗೂ ಧರ್ಮಕ್ಕೆ ಆವರಿಸಿರುವ ವಿಪತ್ತನ್ನು ತೊಲಗಿಸುವುದಕ್ಕೆ ಯತ್ನಿಸಿರೆಂದು ಎಲ್ಲರನ್ನು ಪ್ರೋತ್ಸಾಹಿಸುತ್ತಿದ್ದ . ಶಿವಾಜಿಯು ತಾನು ಜನ್ಮವೆತ್ತಿರುವುದು ದೇಶೋದ್ಧಾರಕ್ಕಾಗಿಯೇ ಎಂದು ಸಂಪೂರ್ಣವಾಗಿ ನಂಬಿದ್ದನು .

ಅಲ್ಲದೆ , ತನಗೆ ದೈವಾನುಗ್ರಹ ಮತ್ತು ದೈವಬಲ ಸಹ ಇವೆಯೆಂಬುದು ಅವನ ದೃಢವಾದ ವಿಶ್ವಾಸವಾಗಿತ್ತು . ಹಿಂದೂಗಳ ರಕ್ಷಣೆಗಾಗಿ ಒಂದು ರಾಜ್ಯವನ್ನು ನಿರ್ಮಾಣಮಾಡುವುದು ಶಿವಾಜಿಯ ಜೀವನೋದ್ದೇಶ ವಾಗಿತ್ತು . ತನ್ನ ಇಷ್ಟಸಿದ್ಧಿಗೆ ದೈವಬಲವೇ ಮುಖ್ಯ ಎಂದು ತಿಳಿದಿದ್ದ ಶಿವಾಜಿ ಸಮಸ್ಯೆ ಉಂಟಾದಾಗಲೆಲ್ಲ ತನ್ನ ಕುಲದೇವತೆ ಭವಾನಿ ಮಾತೆಗೆ ನಮಸ್ಕರಿಸದೆ ಒಂದು ಹೆಜ್ಜೆಯೂ ಮುಂದೆ ಹೋಗುತ್ತಿರಲಿಲ್ಲ .

ದೇಶದ ಬಗ್ಗೆ , ಧರ್ಮದ ಬಗ್ಗೆ ಶಿವಾಜಿಗಿದ್ದ ಅಪಾರ ಪ್ರೀತಿ – ಗೌರವ ಅಭಿಮಾನ ಹಲವರನ್ನು ಆಕರ್ಷಿಸಿತು . ಹೀಗೆ ಆಕರ್ಷಿತನಾದವನು ಚಾಣಕದುರ್ಗಕ್ಕೆ ನಾಯಕನಾಗಿದ್ದ ಫರಂಗಜಿ ನರಸಾಲ , ಸೂಪವೆಂಬ ಸಹ ಪ್ರದೇಶಕ್ಕೆ ವಿಚಾರಣಕರ್ತನಾಗಿದ್ದ ಬಾಜಿಮೋಹಿತನೆಂಬುವನೂ ಶಿವಾಜಿಯ ವ್ಯಕ್ತಿತ್ವಕ್ಕೆ ಮಾರುಹೋದ .

ಇವನು ಶಿವಾಜಿಯ ಮಲತಾಯಿಯ ಒಡಹುಟ್ಟಿದವನು . ಕ್ರಿ.ಶ. 1648 ರಲ್ಲಿ ಫರಂಗಜಿಯು ಚಾಣಕದುರ್ಗವನ್ನು ಶಿವಾಜಿಗೆ ಒಪ್ಪಿಸಿದನು . ಶಿವಾಜಿಯು ಅವನ ನಡತೆಯನ್ನು ಮೆಚ್ಚಿ ಅವನನ್ನೇ ದುರ್ಗದ ನಾಯಕನನ್ನಾಗಿ ಮಾಡಿದನು . ಸುಮಾರು 20 ರ ವಯಸ್ಸಿನಲ್ಲೇ ಶಿವಾಜಿ ಒಬ್ಬ ಪ್ರಮುಖ ನಾಯಕನಾಗಿ ರೂಪುಗೊಂಡನು .

ಅವನೇ ಉದ್ಯೋಗಸ್ಥರನ್ನೂ ನೇಮಿಸುವುದಕ್ಕೆ ಆರಂಭಿಸಿದನು . ಜೊತೆಗೆ ಸಾಹಿಸಿಗಳಾಗಿಯೂ ಆಪ್ತವಾಗಿಯೂ ಇದ್ದವರಿಗೆಲ್ಲ ಬಿರುದುಗಳನ್ನು ಕೊಡಲಾರಂಭಿಸಿದನು . ಯಾವುದೇ ಪ್ರದೇಶವನ್ನು ಆಕ್ರಮಿಸಿಕೊಂಡ ನಂತರ ಉತ್ತಮವಾಗಿ ಆಳಿ , ಅದನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದನು ಬಾರಾಮತಿ , ಇಂದಾಪುರ , ಮೊದಲಾದ ಪ್ರದೇಶಗಳ ಅಧಿಕಾರಿಗಳು ಶಿವಾಜಿಗೆ ಕಂದಾಯಗಳನ್ನು ಸಲ್ಲಿಸುತ್ತಿದ್ದರು .

ಶಿವಾಜಿಯ ಅದ್ಭುತ ಕಾರ್ಯಗಳನ್ನು ಮೆಚ್ಚಿಕೊಂಡ ತಾನಾಜಿಯೆಂಬ ವೀರನೊಬ್ಬ ಶಿವಾಜಿಯನ್ನು ಭೇಟಿಮಾಡಿದನು . ಆಗ ಕೊಂಡವೆಂಬ ದುರ್ಗವ ಒಬ್ಬ ಮುಸಲ್ಮಾನ್ ಕಿಲ್ಲೇದಾರನ ವಶದಲ್ಲಿತ್ತು .

ಶಿವಾಜಿಯು ಅಪ್ಪಣೆ ಕೊಟ್ಟರೆ ಆ ದುರ್ಗವನ್ನು ಶಿವಾಜಿಯ ಕೈಗೆ ಒಪ್ಪಿಸುವೆನು ಎಂದು ಮುಂದಾದನು . ಅದಕ್ಕೆ ಶಿವಾಜಿ ಸಮ್ಮತಿಸಿದನು . ಒಂದು ರಾತ್ರಿ ತಾನಾಜಿ ತನ್ನ ಸೈನಿಕರನ್ನು ಕರೆದುಕೊಂಡು ಹೋಗಿ ಹಠಾತ್ತನೆ ಕೋಟೆಯ ಮೇಲೆ ದಾಳಿಮಾಡಿ ತನ್ನ ಅದನ್ನು ವಶಕ್ಕೆ ತೆಗೆದುಕೊಂಡನು . ಶಿವಾಜಿ ಆ ದುರ್ಗಕ್ಕೆ ಸಿಂಹಗಢ ಎಂದು ಹೆಸರಿಟ್ಟು ತಾನಾಜಿಯನ್ನೇ ಅದಕ್ಕೆ ನಾಯಕನನ್ನಾಗಿ ನೇಮಿಸಿದನು .

ಶಿವಾಜಿ ಮುಂದಾಲೋಚನೆಯಿಂದ ಕಾರ್ಯತತ್ಪರನಾಗುತ್ತಿದ್ದನು . ಮುಸಲ್ಮಾನರಿಗೂ ತನಗೂ ಎಂದಾರೊಂದು ದಿನ ಯುದ್ಧ ಆಗಬಹುದು ಎಂದು ಒಮ್ಮೆ ಆಲೋಚಿಸಿದ ಅವನು , ಕದನದ ವೇಳೆಯಲ್ಲಿ ಅಗತ್ಯವಾಗುವ ಆಹಾರ ಪದಾರ್ಥಗಳನ್ನು ಮತ್ತು ಆಯುಧಗಳನ್ನು ಕೂಡಿಸಿಟ್ಟನು , ಶಿಥಿಲವಾದ ಕೋಟೆಗಳನ್ನು ದುರಸ್ತಿಮಾಡಿಸಿದನು . ಸೈನಿಕರು ಸದಾ ಕಟ್ಟೆಚ್ಚರದಲ್ಲಿರುವಂತೆ

ನೋಡಿಕೊಂಡನು . ಅಂತಹ ಸಮಯದಲ್ಲಿ ಧೈರ್ಯದಿಂದ ಮುನ್ನುಗ್ಗಿ ಯುದ್ಧ ಮಾಡಲು ಅವರಲ್ಲಿ ಉತ್ಸಾಹ ತುಂಬಿದನು , ಹೊಸದಾಗಿ ಮೂರು ಸಾವಿರಕ್ಕೂ ಅಧಿಕ ಸವಾರರನ್ನು , ಹತ್ತು ಸಾವಿರ ಕಾಲಾಳುಗಳನ್ನು ನೇಮಕಮಾಡಿಕೊಂಡನು . ಇವೆಲ್ಲವನ್ನು ಮುಗಿಸಿಯೇ ಅವನು ನನಗೆ ಹೋದದ್ದು .

ಶಿವಾಜಿ ಮಣೆಗೆ ಹೋದಾಗ ಪುರ ೦ ದರದುರ್ಗದ ನಾಯಕ ಅತ್ಯಂತ ಅಧಿಕಾರ ಯಾರಿಗೆ ಸೇರಬೇಕೆಂಬ ವಿಚಾರದಲ್ಲಿ ವಿವಾದ ಹುಟ್ಟಿತು . ಶಿವಾಜಿ ನೀಲಕಂಠರಾಯ ಮೃತನಾಗಿದ್ದ . ಇದರಿಂದಾಗಿ ಅವನ ಮಕ್ಕಳಲ್ಲಿ ಆ ದುರ್ಗದ ಅವರ ಸಮಸ್ಯೆಯನ್ನು ಪರಿಹರಿಸಲು ಯತ್ನಿಸಿದನು . ದುರ್ಗ ಮುಖ್ಯವಾದ ಪ್ರದೇಶವಾಗಿತ್ತು .

ನೀಲಕಂಠರಾಯನ ಮಕ್ಕಳು ದುರ್ಗವನ್ನು ಉಳಿಸಿಕೊಳ್ಳುತ್ತಾರೋ ಅಥವಾ ಪರರ ಪಾಲು ಮಾಡುತ್ತಾರೋ ಎಂದು ಯೋಚಿಸಿ ಶಿವಾಜಿಯೇ ಅದನ್ನು ವಶಪಡಿಸಿಕೊಂಡನು . ನಂತರ ಜಗಳವಾಡುತ್ತಿದ್ದ ಸಹೋದದರಿಗೆ ಕೆಲವು ಕೊಡುಗೆಗಳನ್ನು , ಅಧಿಕಾರಗಳನ್ನು ಕೊಟ್ಟು ಮೋರೋಪಂತ ಪಿಂಗಳೆ ಎಂಬುವವನ ಕೈಗೆ ದುರ್ಗದ ಜವಾಬ್ದಾರಿಯನ್ನು ಹೊರಿಸಿದನು .

ಇದಾದ ಕೆಲವೇ ದಿನಗಳಲ್ಲಿ ಶಿವಾಜಿ ಚಾಣಕದುರ್ಗದಿಂದ ನೀರಾರವೆಂಬ ಪ್ರದೇಶದವರೆಗಿರುವ ನಾಡನ್ನು ವಶಪಡಿಸಿಕೊಂಡ . ಒಟ್ಟಾರೆ ಶಿವಾಜಿ ಹಂತ ಹಂತವಾಗಿ ಬೆಳೆಯತೊಡಗಿದೆ . ಒಬ್ಬ ಸಾಮಾನ್ಯ ಜಹಗೀರುದಾರನ ಮಟ್ಟದಿಂದ ಶಿವಾಜಿ ನಾಲ್ಕಾರು ಕೋಟೆಗಳ ಒಡೆಯನೆನೆಸಿದ .

ಇದೇ ಸಂದರ್ಭದಲ್ಲಿ ಆತ ಸಯಿಬಾಯಿ ಎಂಬುವವಳನ್ನು ಮದುವೆ ಯಾದ ಎಂದು ಇತಿಹಾಸಕಾರರು ಹೇಳಿದ್ದಾರೆ . ಇದು ಪಾರಂಪರಿಕ ನಂಬಿಕೆಯೂ ಆಗಿದೆ

Comments

Leave a Reply

Your email address will not be published. Required fields are marked *