ಛತ್ರಪತಿ ಶಿವಾಜಿ । chhatrapati shivaji maharaj

ಛತ್ರಪತಿ ಶಿವಾಜಿ

chhatrapati shivaji maharaj

shivaji maharaj , ಛತ್ರಪತಿ ಶಿವಾಜಿ , chhatrapati shivaji maharaj , shiva ji , chhatrapati , chhatrapati sambhaji maharaj

shivaji maharaj , ಛತ್ರಪತಿ ಶಿವಾಜಿ , chhatrapati shivaji maharaj , shiva ji , chhatrapati , chhatrapati sambhaji maharaj

ಮೊಗಲರೊಡನೆ ಸಮರ

ರಂಗಜೇಬನು ಉತ್ತರದಲ್ಲಿ ತನ್ನ ಅಧಿಪತ್ಯವನ್ನು ದೃಢವಾಗಿ ಸ್ಥಾಪಿಸಿದ ಬಳಿಕ ತನ್ನ ಹಿರಿಯ ಪತ್ರ ಮುಅಜಿಮ್ ಎಂಬುವನನ್ನು ಸುಬೇದಾರನನ್ನಾಗಿ ಮತ್ತು ಶಯಿಸ್ತಾಖಾನ್ ಎಂಬುವನನ್ನು ಸೇನಾಪತಿಯನ್ನಾಗಿ ನೇಮಿಸಿ ದಕ್ಷಿಣ ಭಾರತದತ್ತ ಕಳುಹಿಸಿದನು .

ಇವರಿಬ್ಬರೂ ಸೇನೆಯ ಸಮೇತ ದಕ್ಷಿಣದತ್ತ ಬರುತ್ತಿರುವ ಸುದ್ದಿಯನ್ನು ಶಿವಾಜಿ ಗೂಢಚಾರರ ಮೂಲಕ ತಿಳಿದುಕೊಂಡನು . ಅವನು ತತ್ ಕ್ಷಣ ತನ್ನ ಸೈನಿಕರಿಗೆ ಯುದ್ಧಕ್ಕೆ ಸಿದ್ಧವಾಗುವಂತೆ ಸೂಚಿಸಿದನು .

ಸೈನಿಕರು ಯುದ್ಧ ಸಾಮಗ್ರಿಗಳನ್ನು ಜೋಡಿಸಿಕೊಂಡರು ಮೋರೋಪಂತ ಪೇಶ್ವಯು ಪದಾತಿ ಸೇನೆಯೋಡನೆ ಹೋಗಿ ‘ ಜುನ್ನಾರ ಸಮೀಪದಲ್ಲಿದ್ದ ಅನೇಕ ದುರ್ಗಗಳನ್ನು ಹಿಡಿದನು .

ನೇತಾಜಿ ಪಾಲ್ಕರನು ಮೊಗಲರ ಮೇಲೆ ದಂಡೆತ್ತಿ ಹೋಗಿ ದಾಳಿಮಾಡಿದನು .

ಈ ವಿಷಯ ತಿಳಿದ ಶಯಿಸ್ತಾಖಾನ್ ಸುಮ್ಮನಿರಲಿಲ್ಲ . ಔರಂಗಾಬಾದಿನಿಂದ ಹೊರಟು ದಾರಿಯಲ್ಲಿ ಸಿಕ್ಕ ಗ್ರಾಮಗಳನ್ನು ನಾಶಮಾಡಿದನು .

ಹೊಲಗದ್ದೆಗಳಿಗೆ ಬೆಂಕಿಯಿಟ್ಟನು . ಅಂತಿಮವಾಗಿ ಪುಣೆ ಗೆ ಬಂದು ತಲಪಿದನು .

ಈ ನಡುವೆ ಶಯಿಸ್ತಾಖಾನ್‌ನು ಉದಾರಾಮ ದೇಶಮುಖ್ ನೆಂಬುವನ ಹೆಂಡತಿಯಾದ ರಾಯ್ ಬಾಗಿನಿಯನ್ನು ಸೇನೆಯ ಸಮೇತ ಶಿವಾಜಿಯ ಮೇಲೆ ಯುದ್ಧಮಾಡಲು ಕಳುಹಿಸಿದ್ದನು . ಆಕೆ ಶೂರಳೂ , ಧೀರಳೂ ಆಗಿದ್ದಳು .

ಆಕೆ ಅಂಜದೆ ಶಿವಾಜಿಯೊಡನೆ ಯುದ್ಧಕ್ಕೆ ನಿಂತಳು .

ಆದರೆ ಶಿವಾಜಿಯ ಮುಂದೆ ಅವಳ ಆಟ ನಡೆಯಲಿಲ್ಲ . ಆಕೆಯನ್ನು ಸೆರೆಹಿಡಿದು ಅವಳ ಸೈನಿಕರನ್ನೆಲ್ಲ ಶಿವಾಜಿ ಓಡಿಸಿದನು .

ಈ ಸಂದರ್ಭದಲ್ಲಿ ಶಯಿಸ್ತಾಖಾನ್ ಪುಣೆಗೆ ಬಂದ ಸುದ್ದಿ ಶಿವಾಜಿ ಕಿವಿಗೆ ಬಿದ್ದಿತು .

ಪುಣೆಯನ್ನು ವಶಪಡಿಸಿಕೊಂಡ ಶಯಿಸ್ತಾಖಾನ್ ಚಾಕಣದುರ್ಗವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸೇನೆಯ ಸಮೇತ ಹೊರಟನು .

ಆ ಸಮಯದಲ್ಲಿ ಫಿರಂಗಜಿ ನರಸಾಲನೆಂಬ ವೀರನು ಚಾಕಣದುರ್ಗಕ್ಕೆ ಅಧಿಕಾರಿಯಾಗಿದ್ದನು .

ತಾನು ಬರುತ್ತಿರುವ ಸುದ್ದಿ ತಿಳಿದ ತಕ್ಷಣ ಮರಾಠಿಯವರು ಶರಣಾಗತ ರಾಗುತ್ತಾರೆ ಎಂದು ಶಯಿಸ್ತಾಖಾನ್ ಭಾವಿಸಿದ್ದ . ಆದರೆ ಅಲ್ಲಿನ ಸನ್ನಿವೇಶವೇ ಬೇರೆ ಇತ್ತು .

ಫಿರಂಗಜಿ ತನ್ನ ಸೈನಿಕರೊಡನೆ ಯುದ್ಧಮಾಡಲು ಸಿದ್ಧನಾಗಿ ನಿಂತಿದ್ದ , ಇದನ್ನು ಕಂಡ ಮೊಗಲ್ ಸೈನಿಕರು ಮರಾಠಿಯವರ ಮೇಲೆ ಎರಗಿದರು . ಯುದ್ಧ ಆರಂಭವಾಯಿತು .

ರಂಗಜಿ ಅತ್ಯುತ್ಸಾಹ ದಿಂದ ತನ್ನ ಸೈನಿಕರನ್ನು ಹುರಿದುಂಬಿಸುತ್ತ ಹೋರಾಡತೊಡಗಿದನು .

ಎರಡೂ ಬಣಗಳ ನಡುವೆ ಭೀಕರ ಯುದ್ಧ ಮುಂದುವರೆಯಿತು , ಸುಮಾರು ಎರಡು ತಿಂಗಳ ಕಾಲ ಯುದ್ಧ ನಡೆಯಿತೆಂದು ಹೇಳಲಾಗಿದೆ .

ಯುದ್ಧ ಆರಂಭವಾದ ಐವತ್ತು ದಿನಗಳ ನಂತರ ಫಿರಂಗಜಿಗೆ ತಾನು ಸೋಲುವುದು ಖಚಿತವೆನಿಸತೊಡಗಿತು . ಅಂತಿಮವಾಗಿ ಅವನು ಶರಣಾಗಿ ಶಯಿಸ್ತಾಖಾನನಿಗೆ ದುರ್ಗವನ್ನು ಅರ್ಪಿಸಿದನು.

ಈ ಸಂದರ್ಭದಲ್ಲಿ ಶಯಿಸ್ತಾಖಾನ್ ಫಿರಂಗಜಿಯ ಶೌರ್ಯ – ಸಾಹಸಗಳನ್ನು ಮೆಚ್ಚಿ ,

“ ನನ್ನೊಂದಿಗೆ ದಾ , ನಿನಗೆ ಹಲವು ಕೊಡುಗೆಗಳನ್ನು ಕೊಡುತ್ತೇನೆ ” ಎಂದು ಆಸೆ ಹುಟ್ಟಿಸಿದನು . ಆದರೆ ಫಿರಂಗಜಿ ಒಪ್ಪಲಿಲ್ಲ .

“ ನಾನು ಶಿವಾಜಿಯ ಸೇವಕ , ಅವನು ನನ್ನ ಜೀವನಕ್ಕಾಗಿ ಏನು ಕೊಡುತ್ತಿದ್ದಾನೋ ಅದು ನನ್ನ ಸಂಸಾರಕ್ಕೆ ಸಾಕು , ನಾನು ತೃಪ್ತನಾಗಿರುವೆ ” ಎಂದು ಹೇಳಿದನು .

ಶಯಿಸ್ತಾಖಾನ್ ಮರುಮಾತನಾಡದೆ ಫಿರಂಗಜಿ ನರಸಾಲನನ್ನು ಬಿಟ್ಟುಬಿಟ್ಟನು . ನರಸಾಲ ನೇರವಾಗಿ ಶಿವಾಜಿ ಬಳಿ ಹೋಗಿ ನಡೆದುದೆಲ್ಲವನ್ನೂ ವಿವರವಾಗಿ ತಿಳಿಸಿದನು .

ಶಿವಾಜಿಗೆ ಅವನ ಮಾತು ಕೇಳಿ ಖುಷಿಯಾಯಿತು . ಅವನನ್ನು ಸನ್ಮಾನಿಸಿ ಭೂಪಾಲಗಡ ದುರ್ಗಾಧಿಪತಿಯನ್ನಾಗಿ ನೇಮಿಸಿ ಕಳುಹಿಸಿದನು .

ಚಾಕಣದುರ್ಗದಲ್ಲಿ ನಡೆದ ಯುದ್ಧದ ನಂತರ ಶಾಖಾನ್ ಮನಸ್ಸಿನಲ್ಲಿ ಒಂದು ವಿಷಯ ಉಳಿಯಿತು .

ಅದೇನೆಂದರೆ ಮರಾಠಿಗರ ಸ್ವಾಭಿಮಾನ , ಗಿರಿದುರ್ಗಗಳನ್ನು ಜಯಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬ ಅಂಶವೂ ಅವನಿಗೆ ಮನದಟ್ಟಾಯಿತು ,

ಮರಾಠಿಗರು ಶೂರರು ,

ಧೀರರು ,

ಬಲಾಡ್ಯರು ,

ಯುದ್ಧ ನಿಮರು ,

ಸಣ್ಣ – ಪುಟ್ಟ ಆಸೆಗಳಿಗೆ ಬಲಿಯಾಗುವವರಲ್ಲ .

ಎಂಬುದೂ ಕೂಡ ಅವನ ಹೃದಯದಲ್ಲಿ ಮುದಿತವಾದವು . ಶಿವಾಜಿಯ ಕೆಲವು ದಿನಗಳ ನಂತರ ಶಯಿಸ್ತಾಖಾನ್‌ ಚಾಕಣದುರ್ಗದಿಂದ ಮಣೆಗೆ ಹೋಗಿ ಅಲ್ಲಿ ದಾದಾಜಿ ಕೊಂಡದೇವನು ಕಟ್ಟಿಸಿದ್ದ ರಂಗಮಹಲಿನಲ್ಲಿ ವಿಶಾಂತಿ ಪಡೆದನು ,

ಈ ವಿಷಯವನ್ನು ಅದು ಹೇಗೋ ತಿಳಿದುಕೊಂಡ ಔರಂಗಜೇಬನು ಜೋಧಪುರ ಸಂಸ್ಥಾನದ ದೊರೆಯಾದ ಯಶವಂತ ಸಿಂಹನನ್ನು ಸೇನೆಯೊಡನೆ ಶಯಿಸ್ತಾಖಾನ್ ಬಳಿಗೆ ಕಳುಹಿಸಿದನು .

ಇತ್ತ ಸಿಂಹಗಢದಲ್ಲಿ ಉಳಿದುಕೊಂಡು ಶಯಿಸ್ತಾಖಾನನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದನು .

ಶಯಿಸ್ತಾಖಾನ್ ತಾನು ಮಾತ್ರ ಶೂರ , ಧೀರ , ಚತುರ ಎಂದುಕೊಳ್ಳುತ್ತಾ ಶಿವಾಜಿಯನ್ನು ಮಂಗನೆಂದು ಛೇಡಿಸಿ , ಮಂಗ ಕಾಡಿನಲ್ಲಿರುವುದೇ ಸರಿಯಾದುದು ಎಂದು ಕಟಕಿಯಾಡಿ ಪಾರ್ಸಿಕ ಭಾಷೆಯಲ್ಲಿ ಪದ್ಯವೊಂದನ್ನು ಬರೆದು ಕಳುಹಿಸಿದನಂತೆ ! ಇದಕ್ಕೆ ಶಿವಾಜಿ ಹೀಗೆ ಪ್ರತ್ಯುತ್ತರ ಕಳುಹಿಸಿದ :

” ಹೌದು , ನಾನು ಮಂಗ ಶ್ರೀರಾಮನು ಮಂಗಗಳ ಸಹಾಯದಿಂದ ರಾವಣನನ್ನು ಸಂಹಾರ ಮಾಡಿದಂತೆ ಶಯಿಸ್ತಾಖಾನನನ್ನು ಮುಗಿಸಲು ನಾನು ಪ್ರತಿಜ್ಞೆಮಾಡಿರುವೆನು . ”

ಹೀಗಿರುವಾಗ ಒಂದುದಿನ , ಶಿವಾಜಿಯು ಸಿಂಹಗಢದ ಸುತ್ತಮುತ್ತಲಿರುವ ಬೆಟ್ಟಗಳ ಮೇಲೂ , ಗಿಡಗಳ ಮೇಲೂ ಪಂಜುಗಳನ್ನು ಕಟ್ಟಿಸಿ ಸಂದರ್ಭ ಬಂದಾಗ ಬೆಂಕಿ ಹೊತ್ತಿಸುವಂತೆ ಆಜ್ಞೆ ಮಾಡಿದನು .

ದಾರಿಯಲ್ಲಿ ಸೈನಿಕರನ್ನು ನಿಲ್ಲಿಸಿದನು . ಎಲ್ಲ ವ್ಯವಸ್ಥೆ ಆದನಂತರ ಸುಮಾರು 30-40 ಯೋಧರನ್ನು ಕರೆದುಕೊಂಡು ಮನೆಗೆ ಹೋದನು .

ಅದು ರಾತ್ರಿ ಸಮಯ , ಹೀಗಾಗಿ ಹೆಚ್ಚು ಜನಸಂಚಾರವಿರಲಿಲ್ಲ . ಶಿವಾಜಿ ಬುದ್ಧಿವಂತಿಕೆಯಿಂದ ತನ್ನ ಹಿಂಬಾಲಕ ರೊಡನೆ ಮಣೆಯನ್ನು ಪ್ರವೇಶಿಸಿದನು .

ಅಲ್ಲಿಂದ ಮುಂದೆ ಅವನು ಬೇಗಬೇಗನೆ ನಡೆದು ಶಯಿಸ್ತಾಖಾನ್ ಇದ್ದ ಸ್ಥಳಕ್ಕೆ ಬಂದನು . ಮಲಗಿದ್ದ ದಾಸಿಯರು ಬೆಚ್ಚಿಬಿದ್ದರು .

ಸದ್ದಾಯಿತೆಂದು ಎದ್ದ ಶಯಿಸ್ಸಾಖಾನ್ ಹೆದರಿ ಓಡಿಹೋಗಲು ಯತ್ನಿಸಿದನು .

ಆ ಸಮಯದಲ್ಲಿ ಶಿವಾಜಿಯು ಬೀಸಿದ ಕತ್ತಿಯ ಪೆಟ್ಟಿನಿಂದ ಅವನ ಬೆರಳು ಕತ್ತರಿಸಿಹೋಯಿತು .

ಆದರೆ ಜೀವ ಉಳಿಯಿತು . ರಕ್ತಸುರಿಯುತ್ತಿದ್ದರೂ ಬದುಕಬೇಕೆಂಬ ಆಸೆಯಿಂದ ಕತ್ತಲಲ್ಲಿ ಮಾಯ ವಾದನು . ಆದರೆ ಶಯಿಸ್ತಾಖಾನ್ ಮಗ ಹತನಾದ .

ಇತ್ತ ಶಿವಾಜಿಯ ಕಡೆಯ ಮಾವಳಿಗಳು ಗಿಡಗಳ ಮೇಲೂ ಬೆಟ್ಟಗಳ ಮೇಲೂ ಬೆಂಕಿ ಹೊತ್ತಿಸಿದರು . ಆಗ ಮೊಗಲ್ ಸೈನಿಕರ ದೃಷ್ಟಿ ಅತ್ತ ಹರಿಯಿತು .

ಇದೇ ಸಮಯಕ್ಕಾಗಿ ಕಾಯುತ್ತಿದ್ದ ಶಿವಾಜಿ ಇನ್ನೊಂದು ದಾರಿಯಿಂದ ಸಿಂಹಗಢ ಸೇರಿದ ಮಾರನೇ ದಿನ ಮೊಗಲ್ ಸೈನಿಕರು ಬೆಂಕಿ ಹೊತ್ತಿಕೊಂಡಿದ್ದ ಸ್ಥಳಕ್ಕೆ ಹೋದಾಗ ಗೊತ್ತಾಯಿತು , ತಾವು ಮೂರ್ಖರಾದವೆಂದು , ಇದು ಇಲ್ಲಿಗೆ ಮುಗಿಯಲಿಲ್ಲ .

ಮೊಗಲರು ಅಲ್ಲಿಗೆ ಹೋದಾಗ ಅಲ್ಲಿ ಅವಿತುಕೊಂಡಿದ್ದ ಮಾವಳಿಗಳು ಅವರನ್ನು ಮುತ್ತಿದರು , ಹಠಾತ್ತನೆ ಮಾವಳಿಗಳು ಎರಗಿದ್ದರಿಂದ ಕಂಗಾಲಾದ ಮೊಗಲರು ದಿಕ್ಕಾಪಾಲಾಗಿ ಓಡಿಹೋದರು .

ವಿಷಯ ತಿಳಿದ ಶಯಿಸ್ತಾಖಾನ್ ಕೋಪದಿಂದ ಕಟಕಟನೆ ಹಲ್ಲುಕಡಿದ , ಉರಿಯುತ್ತಾ ತಾನೇ ಸೇನೆಯೊಡನೆ ಸಿಂಹಗಢಕ್ಕೆ ಪಯಣಿಸಿದ .

ಇದನ್ನು ನಿರೀಕ್ಷಿಸಿದ್ದ ಶಿವಾಜಿ ಬಣದವರು , ಗುಂಡು ಹಾರಿಸತೊಡಗಿದರು .

ಗುಂಡಿನ ಹೊಡೆತಕ್ಕೆ ಹೆದರಿದ ಮೊಗಲರು ಮಣೆಗೆ ಓಡಿಹೋದರು . ಶಯಿಸ್ತಾಖಾನ್‌ನ ಸೋಲು , ನೂರಾರು ಸೈನಿಕರ ಸಾವು ಔರಂಗಜೇಬನಿಗೆ ತಿಳಿಯಿತು .

ಔರಂಗಜೇಬನು ಸಿಟ್ಟಿಗೆದ್ದು ಶಯಿಸ್ತಾಖಾನನನ್ನು , ತನ್ನ ಮಗ ಮುಅಜಿಮ್‌ನನ್ನು ಹಿಂದಕ್ಕೆ ಕರೆಯಿಸಿಕೊಂಡನು .

ಬಳಿಕ ಅವನು ಮುಅಜಿಮ್‌ನನ್ನು ಮಾತ್ರ ಮತ್ತೆ ದಕ್ಷಿಣ ಭಾರತಕ್ಕೆ ಕಳುಹಿಸಿದನು . ಶಿವಾಜಿಯನ್ನು ಮುಗಿಸಬೇಕೆಂದು ಮುಅಜಿಮ್‌ಗೆ ಸೂಚಿಸಲಾಗಿತ್ತು .

ಈ ಬಾರಿ ಶಿವಾಜಿಯ ವಿರುದ್ಧ ಹೋರಾಡಲು ಮುಅಜಿಮ್‌ಗೆ ಬೆಂಬಲವಾಗಿ ಯಶವಂತಸಿ ೦ ಹ ಇದ್ದನು . ಈತ ತನ್ನ ಸೈನಿಕರೊಡನೆ ಜುನ್ನಾರ್ ಎಂಬ ಮರ್ಗದ ಸಮೀಪ ಬಿಡಾರ ಹೂಡಿದನು .

ವಿಷಯ ತಿಳಿದ ಶಿವಾಜಿ ಯಶವಂತಸಿಂಹನನ್ನು ಓಡಿಸುವ ಸಲುವಾಗಿ ಒಂದಷ್ಟು ಸೈನಿಕರನ್ನು ಕಲ್ಯಾಣದಲ್ಲೂ , ದಂಡರಾಜಪುರದಲ್ಲೂ ಇರಿಸಿದ .

ನಂತರ ಪ್ರತಾಪ್ ರಾವ್ ಗುಜರ್‌ , ಅನ್ನಾಜಿ ದತ್ತ ಮೊದಲಾದವರನ್ನು ಕರೆದುಕೊಂಡು ಸೂರತ್‌ಗೆ ಹೋಗಿ ಮುತ್ತಿಗೆ ಹಾಕಿದ . ಸೂರತ್ ಸುತ್ತಮುತ್ತ ನೆಲೆಸಿದ್ದ ಮೊಗಲರು ಹೆದರಿ ಓಡಿಹೋದರು .

ಈ ಸಂದರ್ಭದಲ್ಲಿ ಶಿವಾಜಿಗೆ ಅಪಾರ ನಗ – ನಾಣ್ಯ ಸಿಕ್ಕಿತು .

ಅದನ್ನು ತೆಗೆದುಕೊಂಡು ರಾಮಗಢಕ್ಕೆ ಹೋದ . ಮುಂದಿನ ದಿನಗಳಲ್ಲಿ ಮೊಗಲರ ವಿರುದ್ಧ ಹೋರಾಡಲು ತಯಾರಿಯಲ್ಲಿ ತೊಡಗಿದ .

ಅಷ್ಟರಲ್ಲಿ ಶಿವಾಜಿಯ ಪತ್ನಿ ಸಮಿಬಾಯಿ ಎರಡನೇ ಗಂಡುಮಗುವಿಗೆ ಜನ್ಮನೀಡಿದಳು .

ಎಂಬ ಸುದ್ದಿ ಬಂದಿತು . ಶಿವಾಜಿ ಆನಂದಪಟ್ಟು ವಿಶೇಷ ದಾನಧರ್ಮಗಳನ್ನು ಮಾಡಿದನು . ಕ್ರಿ.ಶ. 1664 ರಲ್ಲಿ ಶಿವಾಜಿಯ ತಂದೆ ಶಾಹಜಿ ಮೃತನಾದ .

ಅಂದಿನ ಕಾಲದ ಸಂಪ್ರದಾಯದಂತೆ ಜೀಜಾಬಾಯಿ ಅಗ್ನಿಪ್ರವೇಶ ಮಾಡಬೇಕೆಂದು ಬಯಸಿದಳು ,

ಆದರೆ ಶಿವಾಜಿಯು ತನ್ನ ತಾಯಿ ಇನ್ನೂ ಬದುಕಬೇಕೆಂದು ಬಯಸಿ ಅಗ್ನಿಪ್ರವೇಶವನ್ನು ತಪ್ಪಿಸಿದ .

ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ತಂದೆಯ ಕರ್ಮಗಳನ್ನು ಮಾಡಿ ಮುಗಿಸಿದ . ಶಾಹಜಿ ಉದಾರ ಹೃದಯಿ ಆಗಿದ್ದ .

ಯೌವ್ವನದ ಕಾಲದಲ್ಲಿ ಅವನು ಅಹಮದ್‌ನಗರಕ್ಕೆ ಹೋಗಿ ಅಲ್ಲಿಯ ರಾಜನ ಉತ್ತರಾಧಿಕಾರಿಗೆ ಪಟ್ಟವನ್ನು ಕಟ್ಟಿ ರಾಜ್ಯವನ್ನು ಉಳಿಸಿದ್ದ .

ಬಿಜಾಪುರ ಸಂಸ್ಥಾನದಲ್ಲಿ ಮೂವತ್ತು ವರ್ಷಗಳ ಕಾಲ ಸೇನಾಪತಿಯಾಗಿ ಕಾರ್ಯನಿರ್ವಹಿಸಿ , ಆ ರಾಜ್ಯದ ವಿಸ್ತೀರ್ಣವನ್ನು ಹೆಚ್ಚಿಸಿದ್ದ .

ಅವನ ಶೌರ , ಸಾಹಸ , ರಾಜಭಕ್ತಿ ಮೆಚ್ಚಿ ಬಿಜಾಪುರದ ಸುಲ್ತಾನ ಕ್ರಿ.ಶ. 1648 ರಲ್ಲಿ ಬೆಂಗಳೂರು , ಕೋಲಾರ , ಮೊದಲಾದ ಊರುಗಳನ್ನು ಅವನಿಗೆ ಜಹಗೀರುಗಳನ್ನಾಗಿ ಕೊಟ್ಟಿದ್ದನು .

ಶಾಹಜಿ ತನ್ನ ಕರ್ತವ್ಯಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದ .

ಒಟ್ಟಾರೆ ಆತನದು ಜನಮೆಚ್ಚುವ ವ್ಯಕ್ತಿತ್ವ ,ಇತ್ತ ಔರಂಗಜೇಬನು ಶಿವಾಜಿಯ ಬಲವೃದ್ಧಿಯನ್ನು ಮತ್ತು ತನ್ನ ಕಡೆಯ ಅಧಿಕಾರಿಗಳ ನಿಷ್ಕ್ರಿಯತೆಯನ್ನು ಕೇಳಿ ಕುದಿಯತೊಡಗಿದನು .

ಪ್ರತಿ ಹಂತದಲ್ಲೂ ಶಿವಾಜಿ ಗೆಲ್ಲುತ್ತಿದ್ದಾನೆ , ತಾನು ಸೋಲುತ್ತಿದ್ದೇನೆ ಎಂದುಕೊಳ್ಳುತ್ತಾ ಅವನು ಶಿವಾಜಿಯನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಯೋಜನೆ ರೂಪಿಸಲು ಪ್ರಯತ್ನಿಸುತ್ತಿದ್ದ .

ಶಿವಾಜಿಯು ಸೂರತ್ತಿಗೆ ಹಾಕಿದ ಮುತ್ತಿಗೆ ,

ಮೊಗಲ್ ಸೇನೆಯ ಪರಾಭವ ,

ಮುಸಲ್ಮಾನ್ ಯಾತ್ರಿಕರ ಸೆರೆ ಮುಂತಾದ ಸಂಗತಿಗಳು ಔರಂಗಜೇಬನ ತಲೆಕೆಡಿಸಿದವು .

ಕಡೆಗೆ ಆತ ಕ್ರಿ.ಶ. 1665 ರಲ್ಲಿ ಅಂಬರ್‌ ಸಂಸ್ಥಾನಾಧಿಪತಿಯಾದ ಜಯಸಿಂಹನನ್ನು ,

ಆಫ್ಘಾನ್ ಯೋಧನಾದ ದಿಲೇರಿಖಾನ್‌ನನ್ನು ಸೇನೆಯೊಡನೆ ದಕ್ಷಿಣ ಭಾರತಕ್ಕೆ ಕಳುಹಿಸಿದನು .

ಇವರಿಬ್ಬರನ್ನು ಶಿವಾಜಿಯ ಮೇಲೆ ಯುದ್ಧಮಾಡಲು ಕಳುಹಿಸುವುದಕ್ಕೆ ಔರಂಗಜೇಬನಲ್ಲಿ ಒಂದು ದುರುದ್ದೇಶವಿತ್ತು .

ಜಯಸಿಂಹ ಮತ್ತು ದಿಲೇರಿಖಾನ್ ಶೂರರು , ಬುದ್ಧಿವಂತರು . ಜನಸಾಮಾನ್ಯರಿಗೆ ಇವರಿಬ್ಬರ ಬಗ್ಗೆ ವಿಶೇಷ ಮೆಚ್ಚುಗೆ ಇತ್ತು .

ಇದನ್ನು ಸಹಿಸದ ಔರಂಗಜೇಬನು ಉದ್ದೇಶ ಪೂರ್ವಕವಾಗಿಯೇ ಇವರಿಬ್ಬರನ್ನು ದಕ್ಷಿಣ ಭಾರತಕ್ಕೆ ಕಳುಹಿಸಿಕೊಟ್ಟನು .

ಅರವತ್ತು ವರ್ಷ ವಯಸ್ಸಿನ ಜಯಸಿಂಹ ದೃಢಕಾಯನಾಗಿದ್ದ . ವಿವೇಕ , ತಿಳಿವಳಿಕೆ ಅವನಲ್ಲಿತ್ತು .

ಇತರರಂತೆ ಆವೇಶದಿಂದ ಪೂರ್ವಾಪರ ವಿವೇಚನೆ ಇಲ್ಲದೆ ದಾಳಿನಡೆಸುವುದು . ಜಯಸಿಂಹನ ರೀತಿಯಾಗಿರಲಿಲ್ಲ .

ದಾಳಿಯ ಪ್ರತಿ ಹಂತವನ್ನು ಯೋಜಿಸಿ ಕಾರರೂಪಕ್ಕೆ ತರುತ್ತಿದ್ದ , ಜೊತೆಗೆ ಅಡ್ಡಿ – ಆತಂಕಗಳನ್ನು ಕಲ್ಪನೆ ಮಾಡಿಕೊಂಡು ಅವುಗಳನ್ನು ನಿವಾರಿಸುವ ಬಗೆಯನ್ನು ಯೋಚಿಸುತ್ತಿದ್ದನು , ದೈಹಿಕವಾಗಿ ಕ್ರಿ.ಶ. 1665 ರಲ್ಲಿ ಜಯಸಿಂಹ ಮತ್ತು ದಿಲೇರಿಖಾನ್ ಮಣೆಗೆ ಬ ೦ ದಿಳಿದರು .

ಬಂದ ತಕ್ಷಣ ಜಯಸಿಂಹ ದಾಳಿ ಆರಂಭಿಸಲಿಲ್ಲ ಬದಲಿಗೆ ವಶಪಡಿಸಿ ಶಿವಾಜಿಯ ವಿರುದ್ಧದ ಈ ಯುದ್ಧದಲ್ಲಿ ನೆರವು ನೀಡಬೇಕೆಂದು ಬಿಜಾಪುರದ ಸುಲ್ತಾನನನ್ನು ಕೋರಿದ .

ನಂತರ ದಾಳಿಮಾಡಲು ಸಜ್ಜಾದ , ಮೊದಲಿಗೆ ಜಯಸಿಂಹನು ಪುರಂದರ ದುರ್ಗಕ್ಕೆ ಮುತ್ತಿಗೆ ಹಾಕಿದನು .

ಅಲ್ಲಿಂದ ಸಿಂಹಗಢಕ್ಕೆ ದಂಡೆತ್ತಿ ಹೋದನು , ಪುರಂದರ ದುರ್ಗವನ್ನು ಕೊಳ್ಳುವ ಕೆಲಸ ದಿಲೇರಿಖಾನನಿಗೆ ವಹಿಸಲಾಯಿತು .

ಆದರೆ ದಿಲೇರಿಖಾನನಿಗೆ ದುರ್ಗವನ್ನು ವಶಪಡಿಸಿಕೊಳ್ಳುವುದು ಕಷ್ಟವೆನಿಸತೊಡಗಿತು .

ಜೊತೆಗೆ ಈ ದುರ್ಗದ ರಕ್ಷಣೆಗೆ ಇದ್ದವನು ಮುರಾರಿ ಬಾಜಿಪ್ರಭುವೆಂಬ ವೀರ , ಅವನ ಕೈಕೆಳಗೆ ಇದ್ದವರು ಸುಮಾರು ಎರಡು ಸಾವಿರ ಮಂದಿ ಸೈನಿಕರು ,ದಿಲೇರಿಖಾನ್ ಮಾತ್ರ ತನ್ನ ಪ್ರಯತ್ನವನ್ನು ಬಿಡಲಿಲ್ಲ .

ಅವನು ತನ್ನ ಹಿಂಬಾಲಕರೊಂದಿಗೆ ದಾಳಿ ಮಾಡಿದನು .

ಮೊಗಲ್ ಸೈನಿಕರು ತಮ್ಮ ಯುದ್ಧ ಮಾತ್ರ ನಿಲ್ಲಲಿಲ್ಲ . ಬಾಹುಬಲವನ್ನೆಲ್ಲ ತೋರಿಸಿದರೂ ದುರ್ಗವು ಅವರ ಕೈಗೆ ಬರಲಿಲ್ಲ . ಆದರೆ ಸಮಯ ಉರುಳಿದಂತೆ ದಿಲೇರಿಖಾನ್ ಬಣದವರ ಕೈ ಮೇಲಾಯಿತು .

ಸ್ವತಃ ದಿಲೇರಿಖಾನನೇ ಮುರಾರಿ ಬಾಜಿಪ್ರಭುವನ್ನು ಕೊಂದುಹಾಕಿದನು .

ಅತ್ತ ಜಯಸಿಂಹನ ಅಟ್ಟಹಾಸ ಮುಂದುವರಿಯಿತು . ಪಶ್ಚಿಮ ಘಟ್ಟದಲ್ಲಿ ಸಾಲಾಗಿದ್ದ ಕೋಟೆಗಳನ್ನು ಶಿವಾಜಿಯ ಶಕ್ತಿಕೇಂದ್ರಗಳೆಂದು ಗುರುತಿಸಿದ ಜಯಸಿಂಹ ಬಯಲು ಪ್ರದೇಶದಲ್ಲಿ ಮರಾಠಾ ಸೇನೆಯನ್ನು ಎದುರಿಸುವುದಕ್ಕಿಂತ ಕೋಟೆಗಳನ್ನು ಗೆಲ್ಲುವುದು ಮುಖ್ಯ ಎಂದು ಭಾವಿಸಿ ಪ್ರಮುಖ ಕೋಟೆಗಳನ್ನು ವಶಪಡಿಸಿಕೊಂಡ .

ಇತ್ತ ಮೊಟ್ಟಮೊದಲ ಬಾರಿಗೆ ಶಿವಾಜಿ ಅಧೀರನಾದ , ಮೊಗಲರೊಡನೆ ಸಂಧಿಮಾಡಿಕೊಳ್ಳುವುದೇ ಕ್ಷೇಮಕರವೆಂದೆಣಿಸಿ ರಘುನಾಥಪಂತನೆಂಬುವನನ್ನು ಜಯಸಿಂಹನ ಬಳಿಗೆ ಕಳುಹಿಸಿದನು .

ಕೆಲವು ಇತಿಹಾಸಕಾರರು ಶಿವಾಜಿ ಮನಸ್ಸು ಮಾಡಿದ್ದರೆ ಜಯಸಿಂಹನನ್ನು ಬಗ್ಗುಬಡಿಯಬಹುದಿತ್ತು ,

ಮರಾಠಿಗರು ವೈರಿಗಳಿಗಂಜದೆ ಪರಾಕ್ರಮದಿಂದ ಕಾಳಗಮಾಡಿದ್ದರು ,

ಆದರೆ ಶಿವಾಜಿ ಯಾಕೆ ಸಂಧಿಗೊಪ್ಪಿದ ಎಂಬುದಕ್ಕೆ ಸ್ಪಷ್ಟವಾದ ಕಾರಣ ತಿಳಿಯದು ಎಂದು ಹೇಳಿದ್ದಾರೆ .

ಶಿವಾಜಿ ದೂರದೃಷ್ಟಿಯುಳ್ಳವನು , ಯೋಚನೆ ಮಾಡದೆ ಯಾವ ಕಾರ್ಯವನ್ನೂ ಮಾಡುವವನಲ್ಲ .

ಯಾವುದೋ ಒಂದು ಪ್ರಬಲವಾದ ಕಾರ್ಯವನ್ನುದ್ದೇಶಿಸಿಯೇ ಅವನು ಸಂಧಿಗೊಪ್ಪಿರಬಹುದೆಂದು ಕೆಲವು ಇತಿಹಾಸಕಾರರು ಹೇಳಿದ್ದಾರೆ .

ಸದ್ಯಕ್ಕೆ ಮೊಗಲರೊಂದಿಗೆ ಸ್ನೇಹಮಾಡಿ , ನಂತರ ದೆಹಲಿಗೆ ಹೋಗಿ ತನ್ನ ಕಾವ್ಯಕ್ಷೇತ್ರ ವಿಸ್ತರಿಸಬಹುದು ; ಮೊಗಲ್ ಸಾಮ್ರಾಜ್ಯದಲ್ಲಿ ಪ್ರಬಲರಾಗಿದ್ದವರ ಸ್ನೇಹ ಸಂಪಾದಿಸಬಹುದು ;

ಈಗ ಜಯಸಿಂಹನ ಗೆಳೆತನ ಸಂಪಾದಿಸಿ ನಂತರ ತನ್ನ ಕಾರ್ಯಸಾಧಿಸಬಹುದು ಎಂದು ಅವನು ಯುದ್ಧ ನಿಲ್ಲಿಸಿ ಸಂಧಿಗೆ ಒಪ್ಪಿರಬಹುದು ಎಂದು ತರ್ಕಿಸಲಾಗಿದೆ .

ಶಿವಾಜಿಯ ಅಭಿಮತಕ್ಕೆ ಅವನ ಮಂತ್ರಿಗಳೂ ಬೆಂಬಲ ನೀಡಿದರು .

ಜಯಸಿಂಹನು ತನ್ನಿಂದಾಗಬಹುದಾದ ಸಹಾಯವನ್ನೆಲ್ಲ ಮಾಡುವೆನೆಂದು ಶಿವಾಜಿಗೆ ಹೇಳಿಕಳುಹಿಸಿದನು .

ಜಯಸಿಂಹ ಮತ್ತು ಶಿವಾಜಿಯ ಭೇಟಿಯ ಸಂದರ್ಭ ಇಬ್ಬರ ಜೀವನದಲ್ಲೂ ಒಂದು ಅವಿಸ್ಮರಣಿಯ ಘಟನೆ.

ಶಿವಾಜಿ ತಾಯಿಯ ಆಶೀರ್ವಾದ ಪಡೆದು ಜಯಸಿಂಹನನ್ನು ಭೇಟಿಯಾದನು . ಆ ಸಂದರ್ಭದಲ್ಲಿ , ” ಧರ್ಮರಕ್ಷಣೆಗಾಗಿ ನಾನು ನಿಮ್ಮ ಬಳಿಗೆ ಬಂದಿರುವೆನು .

ನೀವು ನನ್ನ ತಂದೆಗೆ ಸಮಾನರು , ಧರ್ಮರಕ್ಷಣೆಯ ಕಾರ್ಯದಲ್ಲಿ ನೀವು ನನಗೆ ಸಹಾಯ ಮಾಡಿ ಕೀರ್ತಿಪಡೆಯಿರೆಂದು ಕೋರುವೆನು ” ಎಂದನು . ಶಿವಾಜಿ . ಅದಕ್ಕೆ ಜಯಸಿಂಹ ಹೀಗೆ ಉತ್ತರಿಸಿದನು :

” ನೀವು ನನ್ನ ಮತ್ರರಂತೆ , ನನ್ನ ಕೊನೆಯ ಉಸಿರುವ ವರೆಗೂ ನೀವು ನೆಮ್ಮದಿಯಾಗಿರಬಹುದು .

ಯಾವ ಭಯವೂ ಬೇಡ , ಯಾವ ಯಾವ ದುರ್ಗಗಳನ್ನು ನೀವು ಜಯಿಸಿದ್ದೀರೋ ಅವುಗಳನ್ನೆಲ್ಲ ಹಿಂದಕ್ಕೆ ನೀಡುವಿರಾದರೆ ಸಂಧಿಯಾಗುವುದಕ್ಕೆ ಯಾವ ಅಡ್ಡಿಯೂ ಇರದು .

” ಶಿವಾಜಿ ತತ್‌ಕ್ಷಣ , ” ನಾನು ದುರ್ಗದ ಬೀಗದ ಕೈಗಳನ್ನು ಒಪ್ಪಿಸುವೆನು ದುರ್ಗವನ್ನು ತಾವು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು ” ಎಂದನು .

ಪುರಂದರ ದುರ್ಗದ ಒಪ್ಪಂದದ ಪ್ರಕಾರ ಶಿವಾಜಿಯು ತಾನು ಮೊಗಲರ ರಾಷ್ಟ್ರದಲ್ಲಿ ಜಯಿಸಿದ್ದ ಪ್ರದೇಶಗಳನ್ನು , ಪುರಂದರ ,

ಸಿಂಹಗಢ ,

ಮೊದಲಾದ ದುರ್ಗ ಗಳನ್ನು ಮೊಲಗರಿಗೆ ಕೊಟ್ಟನು .

ತನ್ನ ಅಧಿಕಾರದಲ್ಲಿದ್ದ ಕೆಲವು ಪ್ರದೇಶಗಳನ್ನು , ದುರ್ಗಗಳನ್ನು ಅವನೇ ಇಟ್ಟುಕೊಂಡನು . ಅವನ ಮಗ ಸಾಂಬಾಜಿಯು ಸಾಮ್ರಾಜ್ಯದ ಐದು ಸಾವಿರ ಕುದುರೆಗೆ ದೊಡ್ಡ ಅಧಿಕಾರಿಯಾದನು ಇಷ್ಟಾದರೂ ಹಲವು ವಿಷಯಗಳು ಬಗೆಹರಿಯಲಿಲ್ಲ .

ಅಂತಿಮವಾಗಿ ದೆಹಲಿಗೆ ಹೋಗಿ ಸಾಮ್ರಾಟನ ಸಮ್ಮುಖದಲ್ಲಿ ಚರ್ಚಿಸಿ ಕಗ್ಗಂಟಾಗಿರುವ ಸಂಗತಿಗಳನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳಬೇಕೆಂದು ನಿರ್ಧರಿಸಿದನು .

ಇಷ್ಟೆಲ್ಲ ಆದಮೇಲೆ ಜಯಸಿಂಹನು ಬಿಜಾಪುರದ ಮೇಲೆ ದಂಡೆತ್ತಿ ಹೋದನು .

ಒಪ್ಪಂದದ ಪ್ರಕಾರ ಶಿವಾಜಿ ಎರಡು ಸಾವಿರ ಕುದುರೆಗಳನ್ನು ಮತ್ತು ಏಳುಸಾವಿರ ಕಾಲಾಳುಗಳನ್ನು ತೆಗೆದುಕೊಂಡು ನೇತಾಜಿ ಪಾಲ್ಕರನ ಸಂಗಡ ಮೊಗಲರಿಗೆ ನೆರವಾಗುವ ದೃಷ್ಟಿಯಿಂದ ಬಿಜಾಪುರಕ್ಕೆ ಹೋದನು .

ಬಿಜಾಪುರ ಸಂಸ್ಥಾನದವರು ಮೊಗಲರಿಗೆ ಶರಣಾದರು . ಜೊತೆಗೆ ಕಪ್ಪವನ್ನು ಕೊಡಲೊಪ್ಪಿದರು .

ಜಯಸಿಂಹನು ಶಿವಾಜಿಯ ನೆರವಿನಿಂದ ಸಂತುಷ್ಟನಾದನು ಅವನಿಗೆ ಸನ್ಮಾನಮಾಡಿ ದೆಹಲಿಗೆ ( ಕೆಲವು ಇತಿಹಾಸಕಾರರು ಆಗ್ರಾ ಎಂದು ಉಲ್ಲೇಖಿಸಿದ್ದಾರೆ ) ಬರುವಂತೆ ಮನವಿ ಮಾಡಿಕೊಂಡನು .

ಶಿವಾಜಿಯಮಾತಿನ ಚಾತುರ್ಯ , ಚಾಣಾಕ್ಷ್ಯ ಬುದ್ಧಿ , ದೇಶಾಭಿಮಾನ ಎಲ್ಲವೂ ಜಯಸಿಂಹನಿಗೆ ಹಿಡಿಸಿತು .

ಇನ್ನು ಮುಂದೆ ತಾನು ಅವನ ಆಪ್ತಮಿತನಾಗಿ ಯಾವುದೇ ಸಹಾಯ ನೀಡಲು ಸಿದ್ಧ ಎಂದು ಘೋಷಿಸಿ ದೆಹಲಿಗೆ ಹಿಂದಿರುಗಿದನು .

ಶಿವಾಜಿ ಮುಂದಾಲೋಚನೆಯಿದ್ದವನಾಗಿದ್ದ . ದೆಹಲಿಗೆ ಹೋದ ನಂತರ ತನ್ನ ರಾಜ್ಯದಲ್ಲಿ ಎಲ್ಲವೂ ಸುರಕ್ಷಿತವಾಗಿರಬೇಕೆಂಬ ದೃಷ್ಟಿಯಿಂದ ತಕ್ಕ ಏರ್ಪಾಡುಗಳನ್ನು ಮಾಡಿದನು .

ದುರ್ಗಗಳನ್ನು ನೋಡಿಕೊಂಡು ಬಂದು , ರಾತ್ರಿಯ ವೇಳೆ ಯಾರೇ ಬಂದರೂ ಕೋಟೆಯ ಬಾಗಿಲನ್ನು ತೆರೆಯ ಕೂಡದೆಂದು ಕಟ್ಟಪ್ಪಣೆ ಮಾಡಿದನು .

ಜೀಜಾಬಾಯಿ , ಮೋರೋಪಂತ , ಪೇಶ್ವ ನೀಲೋಪಂತ ಮಜುಮ್ದಾರ್ ಮತ್ತು ನೇತಾಜಿಪಾಲ್ಕರ್ ಇವರುಗಳಿಗೆ ರಾಜ್ಯದ ಉಸ್ತುವಾರಿಯನ್ನು ವಹಿಸಿಕೊಟ್ಟನು .

ತಾಯಿಯ ಆಶೀರ್ವಾದ ಪಡೆದು ದೆಹಲಿಯತ್ತ ಪಯಣ ಆರಂಭಿಸಿದನು . ದೆಹಲಿಗೆ ಶಿವಾಜಿ ಒಬ್ಬನೇ ಹೊರಡಲಿಲ್ಲ .

ಹತ್ತಾರು ಅಧಿಕಾರಿಗಳು , ಒಂದಷ್ಟು ಮಂದಿ ಮಾವಳಿಗಳು , ಮಗ ಸಾಂಬಾಜಿ ಮತ್ತು ಕೆಲವು ಕುದುರೆ ಸವಾರರು ಶಿವಾಜಿಯನ್ನು ಹಿಂಬಾಲಿಸಿದರು .

ಮೊದಲು ಅವನು ಹೋಗಿದ್ದು ಔರಂಗಾಬಾದ್‌ಗೆ , ಅಲ್ಲಿ ಜಯಸಿಂಹನನ್ನು ಭೇಟಿಮಾಡಿದನು . ಅವನ ಆತಿಥ್ಯ ಸ್ವೀಕರಿಸಿ ನಂತರ ದೆಹಲಿಯತ್ತ ಪ್ರಯಾಣ ಬೆಳೆಸಿದನು .

ಮಥುರೆ , ಬೃಂದಾವನ ಮೊದಲಾದ ಈ ಮಧ್ಯೆ ಶಿವಾಜಿ ಪುಣ್ಯಕ್ಷೇತ್ರಗಳನ್ನು ನೋಡಿದನು .

ಕೆಲವು ಕಡೆ ದೇವರಿಗೆ ವಿಶೇಷ ಪೂಜೆ ಮಾಡಿಸಿದನು . ಎರಡು ತಿಂಗಳ ಪ್ರಯಾಣದ ನಂತರ ಶಿವಾಜಿಯು ತನ್ನವರೊಂದಿಗೆ ದೆಹಲಿ ಸೇರಿದನು .

ಶಿವಾಜಿ ಬರುತ್ತಿರುವ ಸುದ್ದಿ ತಿಳಿದ ಔರಂಗಜೇಬನು ಅವನನ್ನು ಸ್ವಾಗತಿಸಲು ಜಯಸಿಂಹನ ಮಗ ರಾಯಸಿಂಹ ನನ್ನು ಮತ್ತು ಕೆಲವು ಸಾಮಾನ್ಯ ಅಧಿಕಾರಿಗಳನ್ನು ಕಳುಹಿಸಿದನು .

ಇದರಿಂದ ಶಿವಾಜಿಗೆ ಅವಮಾನವಾದಂತಾಯಿತು , ಆದರೂ ತೋರಗೊಡಲಿಲ್ಲ . ನಂತರ ಔರಂಗಜೇಬನ ದರಬಾರನ್ನು ಹೊಕ್ಕು ಅವನಿಗೆ ಮೂರು ಬಾರಿ ಸಲಾಮು ಮಾಡಿದನು .

ಆದರೆ ನೆಲವನ್ನು ಮುಟ್ಟಿ ಸಲಾಮು ಮಾಡಲಿಲ್ಲ .

ಔರಂಗಜೇಬನು ಇದನ್ನು ಗಮನಿಸಿದರೂ , ಗಮನಿಸದಂತೆ ಇದ್ದುಬಿಟ್ಟ , ಅಷ್ಟೇ ಅಲ್ಲ , ಒಂದು ಶಬ್ದವನ್ನೂ ಕೂಡ ಮಾತನಾಡಲಿಲ್ಲ .

ಶಿವಾಜಿ ದರಬಾರಿಗೆ ಬಂದೇ ಇಲ್ಲವೇನೋ ಎಂಬಂತೆ ಎಲ್ಲರೂ ವರ್ತಿಸಿದರು . ಕಲಾಪಗಳೆಲ್ಲ ಎಂದಿನಂತೆ ನಡೆದವು . ಈ ಸಂದರ್ಭದಲ್ಲಿ ಶಿವಾಜಿಗೆ ಸ್ವಲ್ಪ ಮಟ್ಟಿಗೆ ಸಿಟ್ಟು ಅವಮಾನ , ನಿರಾಶೆ ಉಂಟಾದವು .

ಆದರೆ ಏನೂ ಮಾಡುವಂತಿರಲಿಲ್ಲ . ಒಂದು ಹಂತದಲ್ಲಿ ಶಿವಾಜಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ .

ಕಿಡಿಕಿಡಿ ಯಾಗಿ ತನಗೆ ಅವಮಾನವಾಯಿತೆಂದು ಕೂಗಾಡಿದನು , ಆಗ ಜಯಸಿಂಹನ ಮಗ ರಾಮಸಿಂಹನು ಶಿವಾಜಿಯ ಬಗ್ಗೆ ವ್ಯಂಗ್ಯವಾಗಿ ಮಾಡನಾಡಿದ ಔರಂಗಜೇಬನು ,

“ ಶಿವಾಜಿಯನ್ನು ಹೊರಗೆ ಕರೆದುಕೊಂಡು ಹೋಗಿ ಸುಮ್ಮನಾದ ಮೇಲೆ ಕರೆದುಕೊಂಡು ಬನ್ನಿ ” ಎಂದು ಹೇಳಿದನು .

ಶಿವಾಜಿ ತತ್‌ಕ್ಷಣ ಹೊರಗೆ ಬಂದುಬಿಟ್ಟ . ಔರಂಗಜೇಬನ ಕುತಂತ್ರ ಮನಸ್ಸು ಕೆಲಸಮಾಡಿತು . ಶಿವಾಜಿಯು ತಪ್ಪಿಸಿಕೊಂಡು ಹೋಗಲಾರದಂತೆ ಕಾವಲು ಹಾಕಲಾಗಿತ್ತು .

ಶಿವಾಜಿ ಅವನಾಗಿಯೇ ಬಂದು ಬಲೆಗೆ ಬಿದ್ದಿದ್ದ ,

ಮಹಾರಾಷ್ಟ್ರ ಪ್ರಾಂತ್ಯದ ಬೆಟ್ಟ ಗುಡ್ಡಗಳ ಮಧ್ಯೆ ರಾಜಾರೋಷವಾಗಿ ಓಡಾಡುತ್ತಿದ್ದ ಶಿವಾಜಿ ಈಗ ಬಂಧಿಯಾಗಿದ್ದ ,

ಮೊಟ್ಟಮೊದಲು ಬಾರಿಗೆ ಶಿವಾಜಿಯ ಮನಸ್ಸು ನೊಂದಿತು ತಾನೀಗ ಏನೂ ಮಾಡಲಾರೆ ಎಂದೆಣಿಸಿ ದುಃಖ ಉಕ್ಕಿಬಂತು .

ಶಿವಾಜಿ ಇಳಿದಿದ್ದ ಮನೆಯ ಸುತ್ತ ನೂರಾರು ಮಂದಿ ಸೈನಿಕರು ಆಯುಧಗಳನ್ನು ಇಟ್ಟುಕೊಂಡು ಕಾಯುತ್ತಿದ್ದರು . ಹೀಗಿರುವಾಗ ಒಂದುದಿನ , “ ಇಲ್ಲಿನ ನೀರು , ಆಹಾರ , ಹವಾಗುಣ ನಮ್ಮ ಸೈನಿಕರಿಗೆ ಆಗಿಬರುತ್ತಿಲ್ಲ .

ಅವರನ್ನೆಲ್ಲ ಹಿಂದಕ್ಕೆ ಕಳುಹಿಸಲು ಅಪ್ಪಣೆ ಕೊಡಿ ” ಎಂದು ಶಿವಾಜಿಯು ಔರಂಗಜೇಬನನ್ನು ಕೇಳಿಕೊಂಡನು . ಅವನು ತತ್‌ಕ್ಷಣ ಒಪ್ಪಿಕೊಂಡನು . ಆದರೆ ಶಿವಾಜಿಯ ಸೈನಿಕರು ಅವನನ್ನು ಬಿಟ್ಟುಹೊಗಲು ಇಷ್ಟಪಡಲಿಲ್ಲ .

ಆಗ ಅವನು ಅವರೆಲ್ಲರನ್ನೂ ಕೂರಿಸಿಕೊಂಡು ಉಪದೇಶಮಾಡಿದನು : “ ಎಲ್ಲರೂ ನನ್ನೊಡನೆ ಇದ್ದರೆ ಸಮಸ್ಯೆಗಳು ಜಾಸ್ತಿಯಾಗುತ್ತವೆ . ಮೂಾಲ್ಕು ಮಂದಿ ಇದ್ದರೆ ಸಾಕು .

ಎಲ್ಲರೂ ಒಟ್ಟಿಗೆ ತಪ್ಪಿಸಿಕೊಂಡು ಹೋಗುವುದು ಕಷ್ಟದ ಕೆಲಸ ಈಗ ತತ್‌ಕ್ಷಣ ನೀವೆಲ್ಲ ಹಿಂದಿರುಗಿ ಪ್ರತೀಕಾರದ ಬಗ್ಗೆ ಯೋಚಿಸಿರಿ , ಯುದ್ಧಕ್ಕೆ ತಕ್ಕ ಏರ್ಪಾಡು ಮಾಡಿರಿ .

” ಶಿವಾಜಿ ಮಾತುಗಳನ್ನು ಕೇಳಿದ ಸೈನಿಕರು ಭಾರವಾದ ಮನಸ್ಸಿನಿಂದ ದಕ್ಷಿಣ ಭಾರತದತ್ತ ಪ್ರಯಾಣ ಬೆಳೆಸಿದರು .

ಈಗ ಶಿವಾಜಿ ಪ್ರತಿ ಗುರುವಾರ ಗುರುಪೂಜೆ ಮಾಡಲಾರಂಭಿಸಿದ ದೇವರಿಗೆ ನಿವೇದನೆ ಮಾಡಿದ ಭಾರಿಗಳನ್ನು ದೊಡ್ಡ ದೊಡ್ಡ ಬಿದಿರ ಬುಟ್ಟಿಗಳಲ್ಲಿ ತುಂಬಿ , ಶುಕ್ರವಾರದ ದಿನ ಬ್ರಾಹ್ಮಣರಿಗೆ , ಅಧಿಕಾರಿಗಳಿಗೆ ಬೈರಾಗಿಗಳಿಗೆ ಹಂಚುವಂತೆ ವ್ಯವಸ್ಥೆಮಾಡಿದ .

ಕಾವಲುಗಾರರು ಬುಟ್ಟಿಗಳನ್ನು ಶೋಧಿಸುತ್ತಿದ್ದರು . ಯಾವಾಗ ಪ್ರತಿ ಶುಕ್ರವಾರ ಬುಟ್ಟಿಗಳು ಹೋಗಲಾ ರಂಭಿಸಿದವೋ ಆಗ ಕಾವಲುಗಾರರು ನಿರ್ಲಕ್ಷ್ಯ ಮಾಡಲಾರಂಭಿಸಿದರು .

ಶಿವಾಜಿಗೆ ಈ ವಿಷಯ ತಿಳಿಯಿತು . ತಕ್ಷಣ ಆತ ಚುರುಕಾದ , ತಾನು ತಪ್ಪಿಸಿಕೊಂಡು ಹೋಗುವ ಸಮಯ ಹತ್ತಿರ ಬಂದಿತು ಎಂದು ಸಂಭ್ರಮಿಸಿದ .

ಒಂದು ಶುಕ್ರವಾರ ಎಂದಿನಂತೆ ಬಿದಿರಿನ ಬುಟ್ಟಿಗಳು ಹೊರಟವು . ಒಂದು ಬುಟ್ಟಿಯಲ್ಲಿ ಶಿವಾಜಿ ಮತ್ತೊಂದು ಬುಟ್ಟಿಯಲ್ಲಿ ಸಾಂಬಾಜಿ ಕುಳಿತುಕೊಂಡರು . ಶಿವಾಜಿಯ ಆಪ್ತರು ಆ ಬುಟ್ಟಿಗಳನ್ನು ತಲೆಯಮೇಲೆ ಹೊತ್ತುಕೊಂಡು ಹೊರಹೋದರು .

ಕಾವಲುಗಾರರು ಎಂದಿನಂತೆ ನಿರ್ಲಕ್ಷ್ಯ ಮಾಡಿದರು . ಒಂದು ನಿರ್ಜನವಾದ ಸ್ಥಳದಲ್ಲಿ ಬುಟ್ಟಿಗಳನ್ನು ಇಳಿಸಲಾಯಿತು . ಶಿವಾಜಿ ಮತ್ತು ಸಾಂಬಾಜಿ ಬುಟ್ಟಿಗಳಿಂದ ಹೊರಜಿಗಿದರು . ನಂತರ ಅಲ್ಲಿ ನೆರೆದಿದ್ದ ಶಿವಾಜಿಯ ಆಪ್ತರು ಇವರಿಬ್ಬರ ಜೊತೆ ಸೇರಿ ಬೇಗಬೇಗನೆ ಮಥುರೆಗೆ ಹೊರಟರು .

ಶಿವಾಜಿಯು ತಪ್ಪಿಸಿಕೊಂಡ ಸುದ್ದಿ ಔರಂಗಜೇಬನಿಗೆ ತಲಪಿತು . ಅವನಿಗೆ ಸಿಡಿಲು ಬಡಿದಂತಾಯಿತು . ಸಿಟ್ಟಿನಿಂದ ಅವನ ಕಣ್ಣುಗಳು ಕೆಂಪಾದವು . ಹತಾಶೆಯಿಂದ ಕಟಕಟನೆ ಹಲ್ಲು ಕಡಿದ ಶಿವಾಜಿಯು ಸಮೀಪದಲ್ಲೆಲ್ಲಿ ಯಾದರೂ ಅಡಗಿರಬೇಕೆಂದು ಭ್ರಮಿಸಿ ಸೈನಿಕರನ್ನು ಅಟ್ಟಿದ .

ಆದರೆ ಏನೂ ಪ್ರಯೋಜನವಾಗಲಿಲ್ಲ . ಶಿವಾಜಿಯನ್ನು ಹಿಡಿದುಕೊಟ್ಟವರಿಗೆ ಯೋಗ್ಯ ಬಹುಮಾನ ಕೊಡಲಾಗುವುದೆಂದು ಡಂಗೂರ ಸಾರಿದ ಸನ್ಯಾಸಿ , ಯೋಗಿ , ಬೈರಾಗಿ , ಫಕೀರ ಮೊದಲಾದವರ ವೇಷ ತೊಟ್ಟ ಗೂಢಚಾರರು ನಾಲ್ಕು ದಿಕ್ಕಿಗೂ ಹೋದರು .

ಅಂತಿಮವಾಗಿ ಔರಂಗಜೇಬನು ಅಧಿಕಾರಿಗಳನ್ನು ಮತ್ತು ಕಾವಲುಗಾರರನ್ನು ದಂಡಿಸಿ ತನ್ನ ಸಿಟ್ಟನ್ನು ಶಮನಮಾಡಿಕೊಂಡ .

ಇತ್ತ ಶಿವಾಜಿ , ಸಾಂಬಾಜಿ ಮಥುರೆಯಲ್ಲಿ ಸುರಕ್ಷಿತವಾಗಿದ್ದರು ಮೋರೋಪಂತ ಪೇಳ್ವೆಯ ಮೈದುನನಾದ ಕೃಷ್ಣಾಜಿಪಂತನ ಮನೆಯಲ್ಲಿ ವಿಶ್ರಾಂತಿಪಡೆದರು .

ಕೆಲವು ಕಾಲ ಅಲ್ಲಿ ತಂಗಿದ್ದು ನಂತರ ಶಿವಾಜಿ ಜುಟ್ಟು ,

ಮೀಸೆ ಬೋಳಿಸಿಕೊಂಡು ,

ಕಾವಿ ,

ರುದ್ರಾಕ್ಷಿ ಮಾಲೆ ಧರಿಸಿಕೊಂಡು ಪ್ರಯಾಗ ,

ಕಾಶಿಗೆ ಹೋದನು ,

ಹೀಗೆ ಹಗಲಿರುಳೆನ್ನದೆ ಪ್ರಯಾಣಮಾಡಿ ಶಿವಾಜಿ ತನ್ನ ರಾಜ್ಯಕ್ಕೆ ಬಂದು ಸೇರಿದನು .

ಮೊದಲಿಗೆ ಅವನು ತಾಯಿ ಜೀಜಾಬಾಯಿಯ ಕಾಲು ಮುಟ್ಟಿ ನಮಸ್ಕರಿಸಿದನು . ಮಗ ಬಂದ ಎಂದು ತಿಳಿದಕೊಡಲೇ ಜೀಜಾಬಾಯಿ ಆನಂದಭಾಷ್ಪ ಸುರಿಸಿದಳು .

ಶಿವಾಜಿ ಹಿಂದಿರುಗಿದ ಸುದ್ದಿ ಮಿಂಚಿನಂತೆ ಎಲ್ಲೆಲ್ಲೂ ಸಂಚರಿಸಿತು . ದುರ್ಗವು ಆನಂದಸಾಗರವಾಯಿತು . ಬಾಲಕರು , ವೃದ್ಧರು , ಪುರುಷರು – ಸ್ತ್ರೀಯರು ಎಲ್ಲರೂ ಶಿವಾಜಿಯನ್ನು ಕಾಣಲು ಮುಗಿಬಿದ್ದರು . ಅವರೆಲ್ಲರನ್ನು ಕಂಡು ಶಿವಾಜಿಗೆ ಬದುಕು ಸಾರ್ಥಕವೆನಿಸಿತು


Posted

in

, , , , , ,

by

Comments

Leave a Reply

Your email address will not be published. Required fields are marked *