1793 ರ ಚಾರ್ಟರ್ ಕಾಯ್ದೆ | Charter Act

ಚಾರ್ಟರ್ ಕಾಯ್ದೆ ( Charter Act )

charter act, 1793 ರ ಚಾರ್ಟರ್ ಕಾಯ್ದೆ, charter act 1813, charter act 1833, charter act 1853, charter act 1793, 1833 charter act

charter act, 1793 ರ ಚಾರ್ಟರ್ ಕಾಯ್ದೆ, charter act 1813, charter act 1833, charter act 1853, charter act 1793, 1833 charter act

1793  Charter Act 

ಕಾಯ್ದೆಯಲ್ಲಿ ಕಂಪನಿಯ ಚಾರ್ಟ‌್ರನ್ನು ಪರಿಷ್ಕರಣೆ ಮಾಡಲಾಯಿತು . ಭಾರತದಲ್ಲಿ ಕಂಪನಿ ನಿಯಮಗಳನ್ನು ಅವಕಾಶ ಕಲ್ಪಿಸಲಾಯಿತು .

1813   Charter Act 

ಪೂರ್ವ ಈಸ್ಟ್ ಇಂಡಿಯಾ ಕಂಪನಿಯು ಭಾರತ ಹಾಗೂ ದೇಶದಲ್ಲಿ ವ್ಯಾಪಾರ ಮಾಡಲು ಬ್ರಿಟಿಷ್ ಸರ್ಕಾರದಿಂದ ಪಡೆದಿದ್ದ ಸನ್ನದ್ದನ್ನು ಆಗಾಗ್ಗೆ ನವೀಕರಿಸುತ್ತಿದ್ದರು . ಇದರಿಂದ 1813 ರಲ್ಲಿ ಸನ್ನದ್ದನ್ನು ನವೀಕರಿಸಿದಾಗ ಹೊಸ ನಿಯಮಗಳನ್ನು ಸೇರಿಸಲಾಯಿತು . ಇಂತಹ ನಿಯಮಗಳನ್ನೇ “ 1813 ರ ಚಾರ್ಟರ್ ಕಾಯ್ದೆ ” ಎನ್ನುವರು .

ಕಾಯ್ದೆಯ ಪ್ರಮುಖ ಅಂಶಗಳು

1 ) ಬ್ರಿಟಿಷ್ ಇಂಡಿಯಾ ಸಾಮ್ರಾಜ್ಯವು ಬ್ರಿಟಿಷ್ ಸಾರ್ವ ಭೌಮರ ಅಧೀನಕ್ಕೆ ಒಳಪಟ್ಟಿದೆ ಎಂದು ತಿಳಿಸಿತು .

2 ) ಒಂದು ಲಕ್ಷ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ನಿರ್ದೇಶನ ಮಾಡಿತು . ಈ ಮೂಲಕ ಭಾರತದಲ್ಲಿ ಶಿಕ್ಷಣಕ್ಕೆ ಬ್ರಿಟಿಷ್ ಸರ್ಕಾರವು ಉತ್ತೇಜನ ನೀಡಿತು .

3 ) ಕ್ರೈಸ್ತ ಮತ ಪ್ರಚಾರಕರ ಪ್ರವೇಶದ ಮೇಲೆ ಇದ್ದ ಪ್ರತಿಬಂಧಕವನ್ನು ತೆಗೆದುಹಾಕಿ , ಇಲ್ಲಿ ಶಾಲೆ ಕಾಲೇಜು ಸ್ಥಾಪಿಸಲು ಅವಕಾಶ ಕಲ್ಪಿಸಿತು . ಕ್ರಿಶ್ಚಿಯನ್ ಮಿಷನರೀಸ್‌ಗಳು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಅವರ ಧಾರ್ಮಿಕ ಬೋಧನೆಗೆ ಅವಕಾಶ ಕಲ್ಪಿಸಿತು .

 1833 ಚಾರ್ಟರ್ ಕಾಯ್ದೆ Charter Act

ಇಂಗ್ಲೆಂಡಿನಲ್ಲಿ ಕ್ರಾಂತಿ ಉಂಟಾಗಿ ಮಹತ್ತರವಾದ ಕೈಗಾರಿಕಾ ಯಂತ್ರೋಪಕರಣಗಳ ಪ್ರಾರಂಭವಾಗಿತ್ತು . ಅಂತಹ ಸಂದರ್ಭದಲ್ಲಿ ಜಾರಿಗೆ ಬಂದ ಕಾಯ್ದೆಯೇ 1833 ರ ಕಾಯ್ದೆ , ಈ ಕಾಯ್ದೆಯ ಪ್ರಮುಖ ಅಂಶಗಳೆಂದರೆ

1 ) ಬಂಗಾಳದ ಗೌರರ್‌ ಜನರಲ್‌ನ್ನು ‘ ಭಾರತದ ಗೌರರ್ ಜನರಲ್ ‘ ಎಂದು ನಾಮಕರಣ ಮಾಡಲಾಯಿತು . ಅವರಿಗೆ ನಾಗರೀಕ ಹಾಗೂ ಮಿಲಿಟರಿಗೆ ಸಂಬಂಧಿಸಿದ ಅಧಿಕಾರ ನೀಡಲಾಯಿತು . ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಇಡೀ ಭಾರತದ ನಿಯಂತ್ರಣವು ಗೌರರ್‌ ಜನರಲ್‌ನ ಕೇಂದ್ರೀಕೃತವಾಯಿತು . ವಿಲಿಯಂ ಬೆಂಟಿಕ್‌ರವರು ಮೊಟ್ಟ ಮೊದಲ ಭಾರತದ ಗೌರರ್ ಜನರಲ್ ಆಗಿ ನೇಮಕವಾದರು .

2 ) ಈಸ್ಟ್ ಇಂಡಿಯಾ ಕಂಪನಿಯು ತನ್ನ ವ್ಯಾಪಾರ ಚಟುವಟಿಕೆಗಳನ್ನು ನಿಲ್ಲಿಸಿ ಇದು ಆಡಳಿತ ನಡೆಸುವ ಅಂಗವಾಯಿತು .

3 ) ಈ ಕಾಯ್ದೆಯು ನಾಗರೀಕ ಸೇವೆಗಳಿಗೆ ಆಯ್ಕೆ ಮಾಡಲು ಮುಕ್ತವಾದ ಸ್ಪರ್ಧಾತ್ಮಕ ವ್ಯವಸ್ಥೆ ಜಾರಿಗೆ ತಂದಿತು . ಇದರಿಂದ ಭಾರತೀಯರು ನಾಗರೀಕ ಸೇವಾ ಹುದ್ದೆಗಳನ್ನು ಅಲಂಕರಿಸಲು ಅವಕಾಶವಾಯಿತು .

1853 ಚಾರ್ಟರ್ ಕಾಯ್ದೆ Charter Act

1793 ರಿಂದ 1853 ರವರೆಗೆ ಬ್ರಿಟಿಷ್ ಸರ್ಕಾರ ಹೊರಡಿಸಿದ ಸರಣಿ ಚಾರ್ಟರ್ ಕಾಯ್ದೆಗಳಲ್ಲಿ ಕೊನೆಯ ಕಾಯ್ದೆಯೇ ಚಾರ್ಟರ್ ಕಾಯ್ದೆ . ಇದು 1853 ರ ಭಾರತದ ಸಂವಿಧಾನದ ಸ್ಥಾಪನೆಯಲ್ಲಿ ಒಂದು ಮೈಲಿಗಲ್ಲು , ಈ ಕಾಯ್ದೆಯು ಭಾರತದಲ್ಲಿ ಪರಿಣಾಮಕಾರಿಯಾಗಿ ಶಾಸಕಾಂಗವನ್ನು ಸೃಷ್ಟಿಸಿತು .

ಈ ಕಾಯ್ದೆಯ ಪ್ರಮುಖ ಅಂಶಗಳು

1 ) ಕೇಂದ್ರದಲ್ಲಿ ಶಾಸನ ಸಭೆ ಸ್ಥಾಪನೆಯಾಯಿತು .

2 ) ಈ ಕಾಯ್ದೆಯು ಗೌರರ್ ಜನರಲ್ ಕೌನ್ಸಿಲ್‌ನ ಶಾಸಕಾಂಗೀಯ ಹಾಗೂ ಕಾರ್ಯಗಳನ್ನು ಕಾರ್ಯಾಂಗೀಯ ಎಂದು ಪ್ರತ್ಯೇಕಿಸಿತು .

3 ) ಹೆಚ್ಚುವರಿಯಾಗಿ ಜನ ಶಾಸಕ ಸದಸ್ಯ ( Legislative Councillors ) ರನ್ನು ಗೌರರ್ ಕೌನ್ಸಿಲ್‌ಗೆಒದಗಿಸಿತು . ಇದನ್ನು ಲೆಜಿಸ್ಟೆಟೀವ್ ಕೌನ್ಸಿಲ್ ” ಎಂದು ಕರೆಯಲಾಯಿತು . ಇದು ಮಿನಿ ಸಂಸತ್ತಿನಂತೆ ಕಾರ್ಯ ನಿರ್ವಹಿಸಿತು . ( ಇದು ಇಂದಿನ ಪಾರ್ಲಿಮೆಂಟಿನ ಮೂಲ ರೂಪವಾಯಿತು ) .

4 ) ಸರ್ಕಾರಿ ಸೇವೆ ( ಸಿಎಲ್‌ಸೇವೆ ) ಗಳಿಗೆ ಮುಕ್ತವಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತರಲು ಅವಕಾಶ ಕಲಿಸಿತು .

 

Comments

Leave a Reply

Your email address will not be published. Required fields are marked *