June 26, 2022

 ಚಂದ್ರ ಶೇಖರ ಕಂಬಾರಚಂದ್ರ ಶೇಖರ ಕಂಬಾರ,chandrashekhara kambara,chandrashekhara kambara in kannada,chandrashekhara kambara books,chandrashekhara kambara kannada

 

 

ಚಂದ್ರ ಶೇಖರ ಕಂಬಾರ,chandrashekhara kambara,chandrashekhara kambara in kannada,chandrashekhara kambara books,chandrashekhara kambara kannada

 

 

1937 ಕಲಾವಿದರಾಗಿ ಸ್ಥಳ- ಬೆಳಗಾವಿ ( ಜಿ ) , ಗೋಕಾಕ ( ತಾ ) ಘೋಢಗೇರಿ ಇವರು ಪ್ರಸಿದ್ಧ ಕವಿ , ನಾಟಕಕಾರ , ಜಾನಪದ ನಟರಾಗಿ ಮತ್ತು ತಜ್ಞ ಚಲನಚಿತ್ರ ನಿರ್ದೇಶಕರಾಗಿ , ಗಾಯಕರಾಗಿ ಮತ್ತು ಕನ್ನಡ ವಿಶ್ವವಿದ್ಯಾಲಯದ ( 1992 ) ಪಥಮ ಕುಲಪತಿಯಾಗಿದ್ದರು .

ಇವರ ವಿದ್ಯಾಭ್ಯಾಸವು ನಡೆದದ್ದು ಗೋಕಾಕ್ , ಬೆಳಗಾವಿ & ಧಾರವಾಡಗಳಲ್ಲಿ ಹಾಗೂ ಅಮೆರಿಕಾದ ಚಿಕಾಗೋ ವಿಶ್ವ ವಿದ್ಯಾಲಯದಲ್ಲಿ ದಿ ಆರಿಜನ್ ಅಂಡ್ ಡೆವಲಪ್‌ಮೆಂಟ್ ಆಫ್ ಕನ್ನಡ ಲಿಟರೇಚರ್‌ ಎಂ.ಎ. ವಿಷಯದ ಬಗ್ಗೆ ( 1968-69 ) ಸಂಶೋಧನೆ ನಡೆಸಿ ಪಿ.ಎಚ್.ಡಿ. ಪದವಿಗಳಿಸಿದರು .

ಇದೇ ವಿಷಯದಲ್ಲಿ ಫುಲ್‌ಬ್ರೆಟ್ ವಿದ್ಯಾಂಸರೆನಿಸಿಕೊಂಡರು . ಅನಂತರ ಬೆಂಗಳೂರು ವಿದ್ಯಾಲಯದಲ್ಲಿ ಅಧ್ಯಾಪಕರಾಗಿ , ಪ್ರವಾಚಕರಾಗಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿ ಸಿದರು ಮತ್ತು ದೇಶ – ವಿದೇಶಗಳಲ್ಲಿ

ಜಾನಪದ ಬಗ್ಗೆ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ .

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ . ( 1980-83 ) ಮೈಸೂರಿನ ಕನಾಟಕ ನಾಟಕ ರಂಗಾಯಣದ ಸದಸ್ಯರಾಗಿ ( 1987-91 ) ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ 1979 ರಲ್ಲಿ ಅಖಿಲ ಭಾರತ ಕ.ಸಾ.ಸಮ್ಮೇಳನದ ಅಂಗವಾಗಿ ಜರುಗಿದ  ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ .

 ಕವನ ಸಂಕಲನಗಳು

ಮುಗುಳು ಹೇಳುತೇನ ಕೇಳ ,

ತಕರಾರಿನವರು ,

ಸಾವಿರದ ನೆರಳು .. ( 1964 )

ಬೆಳ್ಳಿಮೀನು ಅಕ್ಕುಕ್ಕು

ನಾಟಕಗಳು 

ಚಾಳೇಶ ಮತ್ತು ನಾರ್ಸಿಸಸ್ ,

ಬೆಂಬತ್ತಿದ ಕಣ್ಣು ಪುಷ್ಪರಾಣಿ ,

ಹುಲಿಯ ನೆರಳು ,

ಬೆಪ್ಪ ತಕ್ಕಡಿ ,

ಬೋಳೆ ಶಂಕರ ,

ತುಕನ ಕನಸು ,

ಸಿರಿ ಸಂಪಿಗೆ ,

ಜೋಕು ಕುಮಾರ ಸ್ವಾಮಿ ಅಂಗಿಮ್ಯಾಲಂಗಿ ,

ಕಿಟ್ಟಿಯ ಕಥೆ , ಜೈಸಿದ್ಧ ನಾಯಕ ,

ಆಲಿಬಾಬ ,

ಕಾಡುಕುದುರೆ ( ಇದಕ್ಕೆ 1978 ರಲ್ಲಿ ರಾಷ್ಟ್ರ ಪ್ರಶಸ್ತಿ )

ನಾಯಿಕಥೆ ,

ಖರೋಖರ ಮತಾಂತರ ( ಭಾರತಾಂಬೆ ) ಹರಕೆಯ ಕುರಿ

ಕಾದಂಬರಿಗಳು

ಕರಿಮಾಯಿ , ಸಿಂಗಾರವ್ವ ( 2003 ರಲ್ಲಿ ಅತ್ಯುತ್ತಮ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ) & ಅರಮನೆ ( ಚಲನಚಿತ್ರವಾಗಿದೆ ) ಜೀ.ಕೆ ಮಾಸ್ತರ ಪ್ರಣಯ ಪ್ರಸಂಗ , ಅಣ್ಣತಂಗಿ * ಜಾನಪದ ಸಂಗ್ರಹಗಳು- ಬಣ್ಣಿಸಿ ಹಾಡವ , ನನಬಳಗ , ಉತ್ತರ ಕರ್ನಾಟಕದ ಜನಪದ , ರಂಗಭೂಮಿ ಬಯಲಾಟಗಳು , ಸಂಗ್ಯಾಬಾಳ್ಯಾ , ಲಕ್ಷಾಪತಿರಾಜನ

ಕಥೆ , ಮತಾಡೊ ಲಿಂಗವೇ ಬೇಡರ ಹುಡುಗ , ಮತ್ತು ಗಿಳಿ ಕಾಸಿಗೊಂದು ಸೇರು , ನಮ್ಮ ಜಾನ ಪದ .

ಮಹಾಕಾವ್ಯ “ ಚಕೋರಿ ” .  ಭಾರತೀಯ ಭಾಷೆಗಳಲ್ಲಿಯೇ ಮೊಟ್ಟ ಮೊದಲನೆ ಯದಾದ ಕನ್ನಡ ಜಾನಪದ ವಿಶ್ವಾಕೋಶವನ್ನು ಸಂಪಾದಿಸಿದರು .ತಕರಾರಿನವರು ಜೈಸಿದ್ಧನಾಯಕ , ಸಿಂಗಾರವ್ವ ಮತ್ತು ಅರಮನೆ , ಬೇಡರ ಹುಡುಗ , ಗಿಳಿ ಈ ಪುಸ್ತಕ ಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .

ಜೋಕುಮಾರ ಸ್ವಾಮಿ – ನಾಟಕಕ್ಕೆ ಕಮಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ .  ರಾಜ್ಯೋತ್ಸವ ಪ್ರಶಸ್ತಿ ( 1988 ) ಸಿರಿ ಸಂಪಿಗೆ ಎಂಬ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( 1991 ) .

ಜೈಸಿದ್ಧ ನಾಯಕ ನಾಟಕಕ್ಕೆ ವರ್ಧಮಾನ ಪ್ರಶಸ್ತಿ ಮತ್ತು ಸಾವಿರ ನೆರಳು ಕವನಕ್ಕೆ ಕೇರಳದ ಕುಮಾರನ್ ಆಶನ್ ಪ್ರಶಸ್ತಿ 1981 ರಲ್ಲಿ ಸಂಗೀತ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರವೆಂದು ರಾಜ್ಯ ಪ್ರಶಸ್ತಿ  ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ( 1983 )  ಪಂಪ ಪ್ರಶಸ್ತಿ , ಕಬೀರ್ ಸಮ್ಮಾನ್ ಪ್ರಶಸ್ತಿ ( 2002 ) ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ .

ಚಲನಚಿತ್ರರಂಗದಲ್ಲಿಯೂ ಇವರ ಸಾಧನೆ ಅಪಾರವಾ ದುದು 5 ಚಲನಚಿತ್ರಗಳನ್ನು ಸಾಕ್ಷ್ಯ ಚಿತ್ರಗಳನ್ನು ಇವರು ಸಿದ್ಧಪಡಿಸಿದ್ದಾರೆ . ಹಲವಾರು . ಚಿತ್ರಗಳಿಗೆ ಸಾಕ್ಷ್ಯಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ . ಇವರ ಋಷ್ಯಶೃಂಗ , ಕಾಡುಕುದುರೆ , ಹರಕೆಯ ಕುರಿ , ಸಿಂಗಾರವ್ವ ಅತ್ಯತ್ತಮ ಚಿತ್ರವೆಂದು ಹೆಸರಾಗಿವೆ . ಸಿಂಗಾರವ್ವ ಅತ್ಯುತ್ತಮ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ಪಡೆದಿದೆ ( 2003 )

2010 ನೇ ಸಾಲಿನ 46 ನೇ ಜ್ಞಾನಪೀಠ ಪ್ರಶಸ್ತಿಯು ಕನ್ನಡದ ಖ್ಯಾತ ಸಾಹಿತಿ , ನಾಟಕಕಾರ , ಕಾದಂಬರಿಕಾರ , ಜಾನಪದ ತಜ್ಞರಾದ ಡಾ || ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯಕ್ಕೆ ದೊರೆತಿದ್ದು , ಈ ಮೂಲಕ ಕನ್ನಡ ಭಾಷೆಗೆ ” 8 ನೇ ಜ್ಞಾನಪೀಠ ಪ್ರಶಸ್ತಿಯು ದೊರೆತಂತಾಗಿದೆ . 2012 ನೇ ಸಾಲಿನ ದ.ರಾ.ಬೇಂದ್ರೆ ಪ್ರಶಸ್ತಿ ಲಭಿಸಿದೆ .

 

Leave a Reply

Your email address will not be published.