
ಪರಿವಿಡಿ
ಗುಣಿತಾಕ್ಷರ – ಸಂಯುಕ್ತಾಕ್ಷರ
kannada gunithakshara ,gunithakshara words in kannada, gunithakshara in kannada, gunithakshara, ಗುಣಿತಾಕ್ಷರ – ಸಂಯುಕ್ತಾಕ್ಷರ
ಎದ್ದು ಬಂದು ಗುದ್ದಿದರು .
ಬಿದ್ದ ಮೇಲೆ ಬುದ್ದಿ ಬಂತು .
ಅಕ್ಷರ ವಿದ್ಯೆಗೆ ಬೆಲೆ ಕಟ್ಟಲಾದೀತೆ ? ಸ್ತ್ರೀಯರು ಪುರುಷರಿಗಿಂತ ಕಡಿಮೆಯಿಲ್ಲ .
‘ ಸಕ್ಕರೆಯ ‘ ಎಂಬುದನ್ನು ಬಿಡಿಸಿ ಬರೆದಾಗ ಸ್ + ಆ , ಕ್ + ಕ್ + ಆ , ರ್ + ಎ , ಯ್ + ಆ ಎಂದಾಗುತ್ತದೆ .
ಸ್ + ಆ = ಸ ( ವ್ಯಂಜನ + ಸ್ವರ = ಗುಣಿತಾಕ್ಷರ ; ಕ್ + ಕ್ + ಆ = ಕ ( ವ್ಯಂಜನ + ವ್ಯಂಜನ + ಸ್ವರ = ಸಂಯುಕ್ತಾಕ್ಷರ ) ಸಹಜ ವ್ಯಂಜನಕ್ಕೆ ಸ್ವರಾಕ್ಷರ ಸೇರಿ ಗುಣಿತಾಕ್ಷರವಾಗುತ್ತದೆ .
ಒಂದಕ್ಕಿಂತ ಹೆಚ್ಚು ಸಹಜ ವ್ಯಂಜನಗಳು ಸೇರಿ ಆನಂತರ ಸ್ವರಾಕ್ಷರ ಸೇರಿದರೆ ಸಂಯುಕ್ತಾಕ್ಷರವಾಗುತ್ತದೆ . ಇದನ್ನು ಒತ್ತಕ್ಷರ , ದ್ವಿತ್ವಾಕ್ಷರ , ದಡ್ಡಕ್ಕರಗಳೆಂದೂ ಕರೆಯುತ್ತಾರೆ .
ಸಂಯುಕ್ತಾಕ್ಷರಗಳಲ್ಲಿ ಸಜಾತೀಯ ಸಂಯುಕ್ತಾಕ್ಷರ , ವಿಜಾತೀಯ ಸಂಯುಕ್ತಾಕ್ಷರಗಳೆಂದು ಎರಡು ವಿಧ . ಒಂದೇ ಜಾತಿಯ ಎರಡು ಸಹಜ ವ್ಯಂಜನಗಳಿಗೆ ಸ್ವರಾಕ್ಷರ ಸೇರಿ ಸಜಾತೀಯ ಸಂಯುಕ್ತಾಕ್ಷರವಾಗುತ್ತದೆ . ಉದಾ : ಕ್ + ಕ್ + ಅ = ಕ್ಯ , ಗ್ + ಕ್ + ಇ = ಗ್ಲಿ , ದ್ + ದ್ + ಇ = ದ್ವಿ , ದ್ + ದ್ + ಉ = ದ್ದು
ಬೇರೆಬೇರೆ ಜಾತಿಯ ಎರಡು ಅಥವಾ ಹೆಚ್ಚು ಸಹಜ ವ್ಯಂಜನಗಳಿಗೆ ಸ್ವರಾಕ್ಷರ ಸೇರಿ ವಿಜಾತೀಯ ಸಂಯುಕ್ತಾಕ್ಷರ ವಾಗುತ್ತದೆ . ಉದಾ : ಸ್ + ತ್ + ರ್ + ಈ = ಸ್ತ್ರೀ , ಕ್ + ಷ್ + ಆ = ಕ್ಷ , ದ್ + ಯ್ + ಎ = ದ್ಯೆ.
ಒತ್ತಕ್ಷರಗಳು :
ಸಂಯುಕ್ತಾಕ್ಷರಗಳ ಅಥವಾ ಒತ್ತಕ್ಷರಗಳ ಬರವಣಿಗೆಯಲ್ಲಿ ಕೆಲವು ವ್ಯಂಜನಗಳಿಗೆ ಮೂಲರೂಪವನ್ನೇ ಒತ್ತಕ್ಷರವಾಗಿ ಬಳಸಲಾಗುತ್ತದೆ .
ಉದಾ : ಬಿ , ಬಿ , ಜ , ಞ , ಟ , ಣ , ವ – ಇತ್ಯಾದಿ ,
ಇನ್ನುಳಿದವುಗಳಿಗೆ ಸ್ವಲ್ಪ ಬದಲಾದ ಚಿಹ್ನೆಗಳನ್ನು ಉಪಯೋಗಿಸಲಾಗುತ್ತಿದೆ . ಆದುದರಿಂದ ಒತ್ತಕ್ಷರದ ಚಿಹ್ನೆಗಳನ್ನು ತಿಳಿದುಕೊಳ್ಳಬೇಕು .
ಒತ್ತಕ್ಷರಗಳು ಚಿಹ್ನೆ
ರ’ಕಾರದ ಒತ್ತುಗಳಾಗಿ ‘ ‘ ( ರವತ್ತು ) ಮತ್ತು ‘ ೯ ‘ ( ಅರ್ಕಾವತ್ತು ) ಎರಡು ಚಿಹ್ನೆಗಳನ್ನು ಬಳಸಲಾಗುತ್ತಿದೆ . ನಕ್ಕ , ಅತ್ರಿ , ಸುಗ್ರೀವ – ಇಂಥ ಪ್ರಯೋಗಗಳಲ್ಲಿ ‘ ( ರ ವತ್ತು ) ಬಳಕೆಯಾಗುತ್ತದೆ . ಇವನ್ನು ಬಿಡಿಸಿ ಬರೆದಾಗ ಕ್ + ರ್ + ಅ = ಕ್ರ ತ್ + ರ್ + ಇ = ತ್ರಿ , ಗ್ + ರ್ + ಈ = ಗ್ರೀ – ರವತ್ತು ಎರಡನೆಯ ವರ್ಣವಾಗಿ ಬರುತ್ತದೆ .
ಕಾರ್ಯ , ಮಾರ್ಗ , ಮಹರ್ಷಿ ಮುಂತಾದ ಪ್ರಯೋಗಗಳಲ್ಲಿರ್’ ‘ ( ಅರ್ಕಾವತ್ತು ) ಬಳಕೆಯಾಗುತ್ತಿದೆ . ಇವನ್ನು ಬಿಡಿಸಿದಾಗ ರ್ + ಯ್ + ಅ = ರ್ಯ ; ರ್ + ಮ್ + ಅ = ರ್ಗ ; ರ್ + ಷ್ + ಇ = ರ್ಷಿ ಎಂದಾಗುತ್ತದೆ . ಇಲ್ಲಿ ಅರ್ಕಾವತ್ತು ( ೯ ) ಮೊದಲನೆಯ ವ್ಯಂಜನವಾಗಿ ಬಂದಿದೆ . ಇವನ್ನು ಕಾವ್ಯ , – ಹೀಗೂ ಬರೆಯಬಹುದು .
ಕನ್ನಡದಲ್ಲಿ ಅರ್ಕಾವತ್ತನ್ನು ಕಾಗುಣಿತದ ನಡುವೆ ಸೇರಿಸುವ ಪದ್ಧತಿಯಿದೆ . ಏತ್ವ , ಓತ್ವಗಳು ಬರುವ ಕಡೆಗಳಲ್ಲಿ ಇದು ಹೆಚ್ಚಾಗಿ ಬಳಕೆಯಾಗುತ್ತದೆ .
ಉದಾ : ದುರ್ಯೋಧನ , ನಿರ್ದೇಶಕ , ಸೂರ್ಯೋದಯ ಸಂಸ್ಕೃತ ಭಾಷೆಯ ಪ್ರಭಾವದಿಂದ ಹೀಗೆ ಬರೆಯಲಾಗುತ್ತಿದೆ . ಕನ್ನಡ ಭಾಷೆಯ ಜಾಯಮಾನಕ್ಕನುಗುಣವಾಗಿ ದುರ್ಯೋಧನ , ನಿರ್ದೇಶಕ , ಸೂರ್ಯೋದಯ – ಹೀಗೇ ಬರೆಯಬೇಕೆಂಬ ವಾದವೂ ಇದೆ . ಈ ಬಗೆಗೆ ಅಂತಿಮ ನಿರ್ಧಾರವಿನ್ನೂ ಆಗಿಲ್ಲ .
ವರ್ಣೋತ್ಪತ್ತಿ ಸ್ಥಾನ ಅಥವಾ ಅಕ್ಷರಗಳು ಹುಟ್ಟುವ ಸ್ಥಾನಗಳು :
ಧ್ವನಿಶಾಸ್ತ್ರ ಅಥವಾ ಶಿಕ್ಷಾಶಾಸ್ತ್ರವು ವರ್ಣಗಳ ಉತ್ಪತ್ತಿ , ಸ್ನಾನ ಮತ್ತು ಉಚ್ಚಾರ ಕ್ರಮಗಳನ್ನು ತಿಳಿಸುತ್ತದೆ . ಇವನ್ನು ಸರಿಯಾಗಿ ತಿಳಿದುಕೊಳ್ಳುವುದರಿಂದ ವರ್ಣಗಳನ್ನು ತಪ್ಪಿಲ್ಲದಂತೆ , ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುತ್ತದೆ .
೧.ಕಂಠ – ಕಂಠದಲ್ಲಿ ( ಕೊರಳಿನಲ್ಲಿ ಹುಟ್ಟುವ ವರ್ಣಗಳು : ಅ , ಆ , ಕ , ಖ , ಗ , ಫ್ , ಬಿ , ಹ ಮತ್ತು ವಿಸರ್ಗ ( 1 ) – ಇವು ಕಂಠ ವರ್ಣಗಳು .
೨. ತಾಲವ್ಯ – ದವಡೆಯ ಮತ್ತು ನಾಲಗೆಯ ನೆರವಿನಿಂದ ಹುಟ್ಟುವ ವರ್ಣಗಳು : ಇ , ಈ , ಚ , ಛ , ಜ , ಝ , ಞ , ಯ , ಶ – ಇವು ತಾಲವ್ಯಾಕ್ಷರಗಳು .
೩. ಮೂರ್ಧನ್ಯ – ಶಿರಸ್ಸನ್ನೇ ಮೂರ್ಧಾ ಎನ್ನುತ್ತಾರೆ , ಅಲ್ಲಿಂದ ಜನಿಸುವ ವರ್ಣಗಳನ್ನು ಮೂರ್ಧನ್ಯವೆನ್ನುತ್ತಾರೆ . ಧ್ವನಿಯ ಅಭಿವ್ಯಕ್ತಿ ಸ್ಥಾನಗಳು ಮೂರು : ನಾಭಿ , ಶಿರಸ್ಸು , ಕಂಠ , ಋ , ಟ , ಠ , ಡ , ಢ , ಣ , ರ , ಷ – ಇವು ಮೂರ್ಧನ್ಯಗಳು ,
೪ , ದಂತ್ಯ – ಹಲ್ಲುಗಳ ಸಹಾಯದಿಂದ ಹುಟ್ಟುವ ವರ್ಣಗಳು : ತ , ಥ , ದ , ಧ , ಲ , ಸ – ಇವು ದಂತ್ಯವರ್ಣಗಳು ,
೫. ಓಷ್ಠ್ಯ – ತುಟಿಯ ನೆರವಿನಿಂದ ಜನಿಸುವ ವರ್ಣಗಳು : ಉ , ಊ , ಪ , ಫ , ಬ , ಭ , ಮ – ಇವು ಓಷ್ಠ್ಯ ವರ್ಣಗಳು ,
೬. ನಾಸಿಕ – ಮೂಗಿನ ಸಹಾಯದಿಂದ ಹುಟ್ಟುವ ವರ್ಣಗಳು : ಬಿ , ಞ , ಣ , ನ , ಮ ವರ್ಣಗಳು – ಇವು ಅನುನಾಸಿಕ ವರ್ಣಗಳು .
೭. ಕಂಠತಾಲವ್ಯ – ಕಂಠ ಮತ್ತು ತಾಲು [ ಕಿರುನಾಲಿಗೆ ) ಗಳ ನೆರವಿನಿಂದ ಹುಟ್ಟುವ ವರ್ಣಗಳು : ಎ , ಏ , ಐ – ಇವು ಕಂಠತಾಲವ್ಯಗಳು . ೮. ಕಂಠೋ – ಕಂಠ ಮತ್ತು ತುಟಿಗಳೆರಡರ ಸಹಾಯದಿಂದ ಜನಿಸುವ ವರ್ಣಗಳು : ಒ , ಓ , ಔ – ಇವು ಕಂಠೋಪ ವರ್ಣಗಳು .
೯. ದಂತೋಷ್ಠ್ಯ – ಹಲ್ಲು ಮತ್ತು ತುಟಿಗಳ ಸಹಕಾರದಿಂದ ಹುಟ್ಟುವ ವರ್ಣ : ವ – ಇದು ದಂತೋಷ್ಣವರ್ಣ ,
೧೦ , ಕಂಠನಾಸಿಕ – ಕಂಠ ಮತ್ತು ಮೂಗಿನ ನೆರವಿನಿಂದ ಅನುಸ್ವಾರವು ಜನಿಸುತ್ತದೆ . ಇದನ್ನು ಕಂಠನಾಸಿಕವೆನ್ನುತ್ತಾರೆ
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
ಟೆಲಿಗ್ರಾಮ್ ಲಿಂಕ್
ಇತರೆ ವಿಷಯಗಳು :