
ಕ್ರಿಯಾಪದಗಳು ( ಧಾತು )
ಕ್ರಿಯಾಪದಗಳು ( ಧಾತು ),kannada kriya padagalu,kriya padagalu in kannada,kriya padagalu kannada.kriya padagalu in kannada examples
ಧಾತು : -ಕ್ರಿಯಾಪದದ ಮೂಲರೂಪಕ್ಕೆ ಧಾತು ಎನ್ನುವರು .
ಕ್ರಿಯೆ ಎಂದರೆ ಕೆಲಸ , ಪದವೆಂದರೆ ಪ್ರಕೃತಿಗೆ ಪ್ರತ್ಯಯ ಸೇರಿ ಆಗುವ ಶಬ್ದರೂಪ , ಕ್ರಿಯೆಯ ಅರ್ಥ ಕೊಡುವ ಪದಗಳಿಗೆ ಸಾಮಾನ್ಯವಾಗಿ ಕ್ರಿಯಾಪದವೆಂದು ಹೇಳುತ್ತೇವೆ .
ಉದಾ : ಮಾಡುತ್ತಾನೆ . ಇಲ್ಲಿ ‘ ಮಾಡು ‘ ಎಂಬುದು ಕ್ರಿಯಾ ಪ್ರಕೃತಿ ಅಥವಾ ಧಾತು . ಧಾತುಗಳಲ್ಲಿ ಎರಡು ಪ್ರಕಾರಗಳು , ಅವು ಮೂಲಧಾತು ಮತ್ತು ಸಾಧಿತಧಾತು .
ಮೂಲಧಾತು : –
ಭಾಷೆಯಲ್ಲಿ ಸ್ವತಂತ್ರವಾಗಿರುವಂಥ ಧಾತುಗಳಿಗೆ ಮೂಲಧಾತು ಎನ್ನುವರು .
ಉದಾ : ಬಾ ,
ಸಾಕು ,
ಮಾಡು ,
ಕುಣಿ ,
ಮಲಗು ,
ಅಂಜು ,
ಈಜು ,
ಓಡು ,
ನೋಡು
ತಿನ್ನು ಇತ್ಯಾದಿ
ಸಾಧಿತಧಾತು : –
ಕೆಲವು ಸಂದರ್ಭದಲ್ಲಿ ‘ ಇಸು ‘ ಪ್ರತ್ಯಯ ಸೇರಿ ಆಗುವ ಧಾತುಗಳಿಗೆ ಸಾಧಿತಧಾತು ಎನ್ನುವರು .
ಉದಾ : ಸೇರಿಸು ,
ಕಳವಳಿಸು ,
ಪ್ರೀತಿಸು ,
ಭಾವಿಸು ,
ಶೋಕಿಸು ಇತ್ಯಾದಿಗಳು .
ಗಮನಿಸಿ :
ಎಲ್ಲ ಧಾತುಗಳಿಗೂ ಪ್ರೇರಣಾರ್ಥದಲ್ಲಿ ‘ ಇಸು ‘ ಪ್ರತ್ಯಯ ಸೇರುತ್ತದೆ . ಆಗ ಅದಕ್ಕೆ ಪ್ರೇರಣಾರ್ಥಕ ಸಾಧಿತಧಾತುಗಳೆಂದು ಕರೆಯುವರು .
ಉದಾ : ನುಡಿಸು ,
ಹೇಳಿಸು ,
ಮೂಡಿಸು ,
ಕಲಿಸು ಇತ್ಯಾದಿ . ಬಳಕೆಗೆ ಅನುಗುಣವಾಗಿ ಮತ್ತೆ ಎರಡು ಪ್ರಕಾರಗಳಲ್ಲಿ ಎರಡು ವಿಧಗಳು
ಸಕರ್ಮಕ ಧಾತು : –
ತಮ್ಮ ಅರ್ಥಪೂರ್ಣತೆಗಾಗಿ ಕರ್ಮಪದವನ್ನು ಅಪೇಕ್ಷಿಸುವ ಧಾತುಗಳೆಲ್ಲ ಸಕರ್ಮಕ ಧಾತುಗಳೆನಿಸುವದು .
ಉದಾ : ಮಾಡು ,
ತಿನ್ನು ,
ಕೊಡು ,
ಹೇಳು ಇತ್ಯಾದಿ , * ರಾಮನು ಹಣ್ಣನ್ನು ತಿನ್ನುತ್ತಾನೆ .
ಅಕರ್ಮಕ ಧಾತು : – ಇವು ಕರ್ಮಪದವನ್ನು ಬಯಸದೇ ಇರುವ ಧಾತುಗಳು ,
ಉದಾ : ಮಲಗು ,
ಓದು ,
ಬದುಕು ,
ಸಾಯು ,
ಏಳು , ಇತ್ಯಾದಿ .
ಧಾತು ಪ್ರತ್ಯಯಗಳು : –
ಧಾತುಗಳಿಗೆ ಎರಡು ಬಗೆ ಯ ಪ್ರತ್ಯಯಗಳು ಸೇರುತ್ತವೆ . ಆಖ್ಯಾತ ಪ್ರತ್ಯಯ ಬಂದಾಗ ಕ್ರಿಯಾಪದವೆಂದು , ಕೃತ್ ಪ್ರತ್ಯಯ ಬಂದಾಗ ಕೃದಂತವೆಂದು ಕರೆಯುತ್ತಾರೆ
ಒಂದು ವಾಕ್ಯದಲ್ಲಿಯ ಕ್ರಿಯೆಯ ಅರ್ಥವನ್ನು ಪೂರ್ಣಗೊಳಿಸುವ ಅಥವಾ ಪೂರ್ಣವಾಗಿರುವುದನ್ನು ತಿಳಿಸುವ ಶಬ್ದವು ‘ ಕ್ರಿಯಾಪದ ‘ ಆಗಿರುತ್ತದೆ .
ಉದಾ : ನೋಡಿದನು ,
ಬರೆದಳು ,
ಬಂದಳು ,
ಓಡುತ್ತದೆ . ಇತ್ಯಾದಿ . ಕ್ರಿಯಾಪದವು ಮೂರು ಅಂಶಗಳನ್ನು ಸೂಚಿಸುತ್ತದೆ .
ಧಾತುವಿನ ಕ್ರಿಯೆಯ ಬಗ್ಗೆ ಸೂಚಿಸುತ್ತದೆ . ಧಾತುಗಳಿಗೆ ಕಾಲಸೂಚಕ ಪ್ರತ್ಯಯಗಳು ಸೇರಿ ಕಾಲವನ್ನು ಸೂಚಿಸುತ್ತದೆ .
ಆಖ್ಯಾತ ಪ್ರತ್ಯಯಗಳು ಸೇರಿ ಕರ್ತೃವಿನ ಲಿಂಗ , ವಚನಗಳನ್ನು ತಿಳಿಸುತ್ತದೆ
1 ) ವರ್ತಮಾನರೂಪ
ಕ್ರಿಯೆ ನಡೆಯುತ್ತಿರುವ ಕಾಲ ವರ್ತಮಾನಕಾಲ , ಧಾತುಗಳಿಗೆ ವರ್ತಮಾನಕಾಲದ ಆಖ್ಯಾತ ಪ್ರತ್ಯಯಗಳು ಸೇರಿ ವರ್ತಮಾನಕಾಲದ ಕ್ರಿಯಾಪದಗಳಾಗುವವು .
ವರ್ತಮಾನಕಾಲದಲ್ಲಿ ಧಾತುವಿಗೂ ಅಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ‘ ಉತ್ತ ‘ ಎಂಬ ಕಾಲಸೂಚಕ ಪ್ರತ್ಯಯ ಬರುತ್ತದೆ .
2 ) ಭೂತಕಾಲರೂಪ :
ಕ್ರಿಯೆ ಮುಗಿದುಹೋದ ಕಾಲ ಭೂತಕಾಲ , ಧಾತುಗಳಿಗೆ ಭೂತಕಾಲದ ಆಖ್ಯಾತ ಪ್ರತ್ಯಯಗಳು ಸೇರಿ ಭೂತಕಾಲದ ಕ್ರಿಯಾಪದ ಉಂಟಾಗುತ್ತದೆ . ಇದರ
3 ) ಭವಿಷ್ಯತ್ಕಾಲರೂಪ :
ಭವಿಷ್ಯತ್ಕಾಲವೆಂದರೆ ಮುಂದೆ ನಡೆಯುವುದು ಎಂದರ್ಥ , ಧಾತುಗಳಿಗೆ ಭವಿಷ್ಯತ್ ಕಾಲದ ಆಖ್ಯಾತ ಭವಿಷ್ಯತ್ ಕಾಲದ ಕ್ರಿಯಾಪದಗಳಾಗುತ್ತವೆ .
ಇಲ್ಲಿ ವ , ಉವ , ಎಂಬ ಕಾಲಸೂಚಕ ಪ್ರತ್ಯಯಗಳಿವೆ . ಭವಿಷ್ಯತ್ಕಾಲದ ಆಖ್ಯಾತ ಪ್ರತ್ಯಯಗಳು ಪುರುಷ ಲಿಂಗ ಏಕವಚನ ಬಹುವಚನ ಅರು ಅರು ಅವು ,
ಉವು ಎವು ಇರಿ ಪ್ರಥಮ ಉತ್ತಮ ಮಧ್ಯಮ ಪುಲ್ಲಿಂಗ ಸ್ತ್ರೀಲಿಂಗ ನಮಂಸಕ ಲಿಂಗ ಅರು , ಉದು ಏನು ( ಎ ) ಸಾಮಾನ್ಯವಾಗಿ ಕಾಲಾರ್ಧಕ ಕ್ರಿಯಾಪದಗಳಿಗೆ ಒಂದು
ಕ್ರಿಯಾಪದದ ಪ್ರಕಾರಗಳು
1 ) ಸಂಪೂರ್ಣ ಕ್ರಿಯಾಪದ :
ಮೂರು ಕಾಲರೂಪಗಳನ್ನು ಮತ್ತು ಅರ್ಥರೂಪಗಳನ್ನು ಹೊಂದಿರುವ ಕ್ರಿಯಾಪದಗಳು ವಾಕ್ಯಗಳು ಅರ್ಥವನ್ನು ಪೂರ್ಣಗೊಳಿಸುತ್ತವೆ . ಆದುದರಿಂದ ಈ ಕ್ರಿಯಾಪದಗಳಿಗೆ ಪೂರ್ಣ ಕ್ರಿಯಾಪದಗಳೆನ್ನುವರು .
ಉದಾ : ಅವನು ಹಣ್ಣನ್ನು ತಂದನು .
2 ) ಸಾಪೇಕ್ಷತಿಯಾಪದ :
ಒಂದು ವಾಕ್ಯದ ಅರ್ಥವನ್ನು ನೀಡಲು ಇನ್ನೊಂದು ಪೂರ್ಣಕ್ರಿಯಾದ ಸಹಾಯವನ್ನು ಅಪೇಕ್ಷಿಸುವ ಕ್ರಿಯಾಪದಕ್ಕೆ ಸಾಪೇಕ್ಷ ಕ್ರಿಯಾಪದ ಎನ್ನುವರು .
ಉದಾ : ಹುಡುಗರು ಕುಣಿಯುತ್ತಾ ಮನೆಗೆ ಬಂದರು . ಅವನು ಹಾಡುತ್ತಾ ನಲಿದಾಡಿದನು .
3 ) ಸಂಯುಕ್ತ ಪ್ರಿಯಾಪದ :
ಎರಡು ಕ್ರಿಯೆಗಳನ್ನು ಹೇಳುವ ಕ್ರಿಯಾಪದಗಳಿಗೆ ‘ ಸಂಯುಕ್ತ ಕ್ರಿಯಾಪದ ‘ ಎನ್ನವರು .
ಉದಾ : ಮನೆಗೆ ಹೋಗುತ್ತಿದ್ದಾನೆ . ಮನೆಗೆ ಹೋಗುತ್ತಿದ್ದನು . ಮನೆಗೆ ಹೋಗುತ್ತಿರುತ್ತಾನೆ