ಕ್ಯಾಬಿನೆಟ್ ಆಯೋಗದ ಯೋಜನೆ

( Cabinet Mission Plan – 1946 )

ಕ್ಯಾಬಿನೆಟ್ ಆಯೋಗದ ಯೋಜನೆ, cabinet mission 1946, cabinet mission plan, cabinet mission plan 1946, cabinet plan 1946, 1946 cabinet mission

ಕ್ಯಾಬಿನೆಟ್ ಆಯೋಗದ ಯೋಜನೆ, cabinet mission 1946, cabinet mission plan, cabinet mission plan 1946, cabinet plan 1946, 1946 cabinet mission

ಕ್ರಿಪ್ಸ್ ಆಯೋಗವು ಬ್ರಿಟನ್‌ಗೆ ಹಿಂತಿರುಗಿದ ನಂತರ ರಚನಾ ಸಭೆಯ ಒತ್ತಾಯವನ್ನು ಈಡೇರಿಸುವ ಉದ್ದೇಶದಿಂದ ಕ್ಯಾಬಿನೆಟ್ ಆಯೋಗವನ್ನು 1946 , ಮಾರ್ಚ್ 23 ರಂದು ಅಂದಿನ ಬ್ರಿಟನ್ ಪ್ರಧಾನಿ ಕ್ಲಮೆಟ್ ಆಟ್ಲಿರವರು ಲಾರ್ಡ್ ಪಿತಿಕ್ ಲಾರೆನ್ಸ್ ( ಭಾರತದ ವ್ಯವಹಾರ ಕಾರ್ಯದರ್ಶಿ ) , ಸ್ಪ್ಯಾಥೋರ್ಡ್ ಕ್ರಿಪ್ಸ್ ( ವಾಣಿಜ್ಯ ಮಂಡಳಿ ಅಧ್ಯಕ್ಷರು ) ಮತ್ತು ಎ.ವಿ. ಅಲೆಕ್ಸಾಂಡರ್ ( ನೌಕಾಪಡೆಯ ಮುಖ್ಯಸ್ಥರು ) ಒಳಗೊಂಡ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಕಳುಹಿಸಿದರು . ಈ ಆಯೋಗವು ಹಿಂದು ಮತ್ತು ಮುಸ್ಲಿಂಲೀಗ್ ನಡುವೆ ಇದ್ದ ವ್ಯತ್ಯಾಸಗಳನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಿ ಸಂವಿಧಾನ ರಚನಾ ಸಭೆಯ ಸೂತ್ರಗಳನ್ನೊಳಗೊಂಡ ಕ್ಯಾಬಿನೆಟ್ ಆಯೋಗದ ಯೋಜನೆಯನ್ನು ನವಂಬರ್ 1946 ರಲ್ಲಿ ರೂಪಿಸಿ ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿತು .

ಭಾರತ ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಅನೇಕ ಸಲಹೆಗಳನ್ನು ಕೂಡ ಈ ಆಯೋಗವು ನೀಡಿತು .

ಕ್ಲೆಮೆಟ್ ಅಟ್ಲಿ :

ಬ್ರಿಟನ್ ಲೇಬರ್ ಪಕ್ಷದ ಅಧ್ಯಕ್ಷರಾಗಿ 1935 ರಿಂದ 1955 ರವರೆಗೆ ಕಾರ್ಯನಿರ್ವಹಿಸಿದ್ದಾರೆ . ಇವರು ಯು.ಕೆ. ಪ್ರಧಾನಮಂತ್ರಿಗಳಾಗಿ 1945 ರಿಂದ 1951 ರವರೆಗೆ ಕಾರ್ಯನಿರ್ವಹಿಸಿದ್ದಾರೆ . ಯುದ್ಧ ಕಾಲದಲ್ಲಿ ವಿನ್‌ಸ್ಟನ್ ಚರ್ಚಿ ಅವರ ನೇತೃತ್ವದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು . ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ ಪ್ರಧಾನಿಯಾಗಿದ್ದರು .

 

ಕ್ಯಾಬಿನೆಟ್ ಆಯೋಗದ ಯೋಜನೆಯ ಮುಖ್ಯ ಅಂಶಗಳು

ಭಾರತದ ಸಂವಿಧಾನವನ್ನು ರಚಿಸಲು ಭಾರತದ ಸಂವಿಧಾನ ರಚನಾ ಸಭೆಯು ಕೆಳಕಂಡ ಕ್ಯಾಬಿನೆಟ್ ಅಂಶಗಳನ್ನು ಒಳಗೊಂಡಿರಬೇಕೆಂದು ಆಯೋಗವು ತನ್ನ ಯೋಜನೆಯಲ್ಲಿ ಸೂಚಿಸಿತು . ಅಂತಹ ಅಂಶಗಳೆಂದರೆ

1 ) ಸಂವಿಧಾನ ರಚನಾ ಸಭೆಯ ಒಟ್ಟು ಸಂಖ್ಯೆ 389 ಎಂದು ನಿಗಧಿಪಡಿಸಿತು .ಅದರಲ್ಲಿ 296 ಸ್ಥಾನಗಳು ಬ್ರಿಟಿಷ್ ಇಂಡಿಯಾ ಹಾಗೂ 93 ಸ್ಥಾನಗಳು ದೇಶೀಯ ರಾಜ್ಯಗಳಿಗೂ ಅವಕಾಶ ಕಲಿಸಿತು . 296 ಬ್ರಿಟೀಷ್ ಸ್ಥಾನಗಳಲ್ಲಿ 292 ಸ್ಥಾನಗಳನ್ನು ಹನ್ನೊಂದು ಗೌರ‌ ಪ್ರಾಂತ್ಯಗಳಿಂದಲೂ ಉಳಿದ ನಾಲ್ಕು ಸ್ಥಾನಗಳನ್ನು ನಾಲ್ಕು ಚೀಫ್ ಕಮೀಷನರ್‌ಗಳ ಪ್ರಾಂತ್ಯಗಳಿಂದ ತಲಾ ಒಂದರಂತೆ ಆಯ್ಕೆ ಮಾಡಬೇಕೆಂದು ನಿಗಧಿಪಡಿಸಿತು .

2 ) ಪ್ರತಿ ಪ್ರಾಂತ್ಯವು ಹಾಗೂ ದೇಶೀಯ ಸಂಸ್ಥಾನವು ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳನ್ನು ನಿಗಧಿಪಡಿಸಬೇಕು . ಒಂದು ಸ್ಥಾನವನ್ನು ಒಂದು ಮಿಲಿಯನ್ ಜನಕ್ಕೆ ನಿಗಧಿ ಪಡಿಸಬೇಕು .

3 ) ಬ್ರಿಟೀಷ್ ಪ್ರಾಂತ್ಯಗಳಿಗೆ ಸ್ಥಾನಗಳನ್ನು ನಿಗಧಿಪಡಿಸುವಾಗ ಮೂರು ಪ್ರಮುಖ ಪಂಗಡಗಳಾದ ಮುಸ್ಲಿಂ , ಸಿಖ್ , ಹಾಗೂ ಇತರರಿಗೆ ಜನಸಂಖ್ಯೆಯನ್ನು ಆಧರಿಸಿ ಸ್ಥಾನ ನಿರ್ಧರಿಸಬೇಕು .

4 ) ದೇಶೀಯ ಪ್ರಾಂತ್ಯಗಳ ಸ್ಥಾನಗಳನ್ನು ದೇಶೀಯ ಸಂಸ್ಥಾನದ ಮುಖ್ಯಸ್ಥರು ನಾಮಕರಣ ಮಾಡಬೇಕು .

5 ) ಏಕ ವರ್ಗಾವಣಾ ಮತದಾನ ಪದ್ಧತಿಯಿಂದ ಪ್ರತಿಯೊಂದು ಪಂಗಡದ ಸದಸ್ಯರು ಆಯ್ಕೆ ಮಾಡಬೇಕು .

ದೇಶೀಯ ಸಂಸ್ಥಾನಗಳಲ್ಲಿ ರಾಜರುಗಳು ಆಳ್ವಿಕೆ ನಡೆಸುತ್ತಿದ್ದು , ಅವರಿಗೂ ಕೂಡ ಸಂವಿಧಾನ ರಚನಾ ಸಭೆಯಲ್ಲಿ ಪಾಲ್ಗೊಳ್ಳಲು ಕ್ಯಾಬಿನೆಟ್ ಆಯೋಗವು ಅವಕಾಶ ಕಲ್ಪಿಸಿತು . ದೇಶದ ಎಲ್ಲ ಪ್ರಾಂತ್ಯಗಳು , ಎಲ್ಲ ವರ್ಗದವರೂ ಭಾಗವಹಿಸಲು ಕ್ಯಾಬಿನೆಟ್ ಆಯೋಗವು ಅವಕಾಶ ಕಲ್ಪಿಸಿತ್ತು .


0 Comments

Leave a Reply

Avatar placeholder

Your email address will not be published. Required fields are marked *