ಕೇಂದ್ರಮಂತ್ರಿ ಮಂಡಲ

Council of Ministers

Council of Ministers , ಕೇಂದ್ರಮಂತ್ರಿ ಮಂಡಲ, council of ministers of india,list of council of ministers of india 2022

Council of Ministers , ಕೇಂದ್ರಮಂತ್ರಿ ಮಂಡಲ, council of ministers of india,list of council of ministers of india 2022

ರಾಷ್ಟ್ರಪತಿಗಣೆಗೆ ಸಲಹೆ ನೀಡಲು ಪ್ರಧಾನ ಮಂತ್ರಿ ನೇತೃತ್ವದ ಮಂತ್ರಿಮಂಡಲವಿರುತ್ತದೆ . ಈ ಮಂತ್ರಿ ಮಂಡಲವು ಸಂವಿಧಾನದ 74 ನೇ ವಿಧಿ ಅನ್ವಯ ಸಲಹೆಗಳನ್ನು ನೀಡುವ ಮೂಲಕ ರಾಷ್ಟ್ರಪತಿಗಳ ಕಾರ್ಯಾಂಗೀಯ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಸಹಕಾರಿಯಾಗುತ್ತದೆ .

ಮಂತ್ರಿಮಂಡಲದ ಮುಖ್ಯಸ್ಥರಾಗಿ ಪ್ರಧಾನ ಮಂತ್ರಿಗಳು ಕಾರ್ಯನಿರ್ವಹಿಸುತ್ತಾರೆ . ಮಂತ್ರಿ ಮಂಡಲವು ಲೋಕಸಭೆಗೆ ಜವಾಬ್ದಾರವಾಗುತ್ತದೆ . ಸರ್ಕಾರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಧಾನ ಮಂತ್ರಿಗಳು ಕೇಂದ್ರ ಮಂತ್ರಿಮಂಡಲದ ಸಭೆ ಕರೆದು ಚರ್ಚಿಸುತ್ತಾರೆ .

ಕೇಂದ್ರ ಸರ್ಕಾರದ ಕಾರ್ಯಗಳನ್ನು ಹಾಗೂ ಆಡಳಿತ ಗಳನ್ನು ಸುವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿ ನಡೆಸಲು ಮಂತ್ರಿ ಮಂಡಲದಲ್ಲಿ ವಿವಿಧ ಸಚಿವರಿಗೆ ಬೇರೆ ಬೇರೆ ಖಾತೆಗಳನ್ನು ನೀಡಲಾಗುತ್ತದೆ .

ಪ್ರಧಾನ ಮಂತ್ರಿಗಳ ಸಲಹೆ ಮೇರೆಗೆ ರಾಷ್ಟ್ರಪತಿಗಳು ಮಂತ್ರಿ ಮಂಡಲದ ಮಂತ್ರಿಗಳನ್ನು ನೇಮಕ ಮಾಡುತ್ತಾರೆ . ಹಾಗೂ ಅವರಿಗೆ ಪ್ರಧಾನ ಮಂತ್ರಿಗಳ ಸಲಹೆ ಮೇರೆಗೆ ಖಾತೆಗಳನ್ನು ಹಂಚುತ್ತಾರೆ .

ಕೇಂದ್ರ ಮಂತ್ರಿ ಮಂಡಲದ ಸಚಿವರುಗಳು ರಾಷ್ಟ್ರಪತಿಗಳ ತೆ ಇಚ್ಛೆ ಇರುವವರಗೆ ಅಧಿಕಾರದಲ್ಲಿರುತ್ತಾರೆ .

ಪ್ರಧಾನ ಮಂತ್ರಿಗಳು ಯಾವುದಾದರೂ ಮಂತ್ರಿಗಳನ್ನು ಗೆದು ಹಾಕಬೇಕಾದರೆ ರಾಷ್ಟ್ರಪತಿಗೆ ಸಲಹೆ ನೀಡಿ ತೆ ಗೆದು ಹಾಕುವಂತೆ ಮಾಡುತ್ತಾರೆ .

ಮಂತ್ರಿಗಳು ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿಗೆ ಸಲ್ಲಿಸುತ್ತಾರೆ . ಕೇಂದ್ರ ಸಚಿವ ಸಂಪುಟವು ಮೂರು ವಿಧದ ಮಂತ್ರಿ ಗಳನ್ನು ಒಳಗೊಂಡಿದೆ .

1 ) ಕ್ಯಾಬಿನೇಟ್ ದರ್ಜೆಯ ಸಚಿವರು ( Union cabinet Minister )

2 ) ರಾಜ್ಯ ಸಚಿವರು ( ಸ್ವತಂತ್ರ ನಿರ್ವಹಣೆ ) ( Minister of State ( Independent charge )

3 ) ರಾಜ್ಯ ಸಚಿವರು ( Minister of State ) ( MOS )

1 ) ಕ್ಯಾಜನೇಟ್ ದರ್ಜೆಯ ಸಚಿವರು :

ಇವರು ಕೇಂದ್ರ ಮಂತ್ರಿ ಮಂಡಲದಲ್ಲಿ ಪ್ರಮುಖ ವಾದಂತಹ ಪಾತ್ರವನ್ನು ವಹಿಸುತ್ತಾರೆ .

ಇವರು ಮಂತ್ರಿಗಳಲ್ಲೇ ಮೇಲ್ದರ್ಜೆಯವರು , ಸರ್ಕಾರದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೆ ಪ್ರಧಾನ ಮಂತ್ರಿಗಳು ಕೇಂದ್ರ ಕ್ಯಾಬಿನೆಟ್ ದರ್ಜೆಯ ಸಚಿವರುಗಳನ್ನು ಸಭೆ ಕರೆದು ನಿರ್ಣಯ ಕೈಗೊಳ್ಳುತ್ತಾರೆ .

ಕ್ಯಾಬಿನೇಟ್ ದರ್ಜೆಯ ಸಚಿವರುಗಳು ನಿಗಧಿತವಾದ ಖಾತೆಯ ಜವಾಬ್ದಾರಿಯನ್ನು ಕೂಡ ಹೊಂದಿರುತ್ತಾರೆ .

 

2)ರಾಜ್ಯ ಸಚಿವರು ( ಸ್ವತಂತ್ರ ನಿರ್ವಹಣೆ ) :

ಇವರು ಕೇಂದ್ರದಲ್ಲಿ ನಿಗಧಿತ ಖಾತೆಯನ್ನು ನಿರ್ವಹಿಸುತ್ತಾರೆ . ಇವರು  ಕ್ಯಾಬಿನೇಟ್ ದರ್ಜೆಯ ಅಡಿಯಲ್ಲಿ ಒಂದು ಖಾತೆ ಜವಾಬ್ದಾರಿಯನ್ನು ಹೊಂದಿರುತ್ತಾರೆ ಆದರೆ ಇವರು ಕೆಲಸ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡುವಂತಹ ಅಧಿಕಾರವನ್ನು ಹೊಂದಿರುತ್ತಾರೆ .

 3 ) ರಾಜ್ಯ ಸಚಿವರು :

ಇವರು ಕಿರಿಯ ಸಚಿವರಾಗಿದ್ದು , ಇವರು ಕ್ಯಾಬಿನೆಟ್ ದರ್ಜೆಯ ಸಚಿವರ ಅಡಿಯಲ್ಲಿ ಕೆಲವು ಸೀಮಿತವಾದ ಜವಾಬ್ದಾರಿಗಳನ್ನು ಹೊಂದಿರುತ್ತಾರೆ . ಆದರೆ ಇವರು ಸ್ವತಂತ್ರ ನಿರ್ವಹಣೆಯನ್ನು ಹೊಂದಿರುವುದಿಲ್ಲ . ಆದರೆ ಹಣಕಾಸು ರಾಜ್ಯ ಸಚಿವರು ಮಾತ್ರ ತೆರಿಗೆಗಳ ಬಗ್ಗೆ ಮಾತ್ರ ನಿರ್ವಹಣೆ ಹೊಂದಿರುತ್ತಾರೆ .

ಕೇಂದ್ರ ಸಚಿವ ಸಂಪುಟದ ಸಂಖ್ಯೆ : –

ಕೇಂದ್ರ ಸಚಿವ ಸಂಪುಟದಲ್ಲಿ ಎಷ್ಟು ಸಚಿವರನ್ನು ಒಳಗೊಂಡಿರಬೇಕೆಂದು ಮೊದಲು ನಿರ್ಧರವಾಗಿರಲಿಲ್ಲ . ಅನೇಕ ಸರ್ಕಾರಗಳು ತಮ್ಮ ವಿವೇಚನೆಗೆ ಅನುಗುಣವಾಗಿ ಸಚಿವರ ಸಂಖ್ಯೆಗಳನ್ನು ಹೊಂದಿರುತ್ತಿದ್ದರು .

ಇದರಿಂದ ಗಜ ಗಾತ್ರದ ಸಚಿವ ಸಂಪುಟ ನಿರ್ಮಾಣವಾಗುತ್ತಿತ್ತು . ಇದು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಹೊರೆ ಉಂಟು ಮಾಡುತ್ತಿತ್ತು . ಕೆಲವೊಮ್ಮೆ ಅತೃಪ್ತರನ್ನು ತೃಪ್ತಿ ಪಡಿಸಲು ಸಚಿವ ಸ್ಥಾನವನ್ನು ನೀಡಲಾಗುತ್ತಿತ್ತು .

ಇದನ್ನು ನಿಯಂತ್ರಿಸಲು 2003 ರ 91 ನೇ ತಿದ್ದುಪಡಿಯಲ್ಲಿ ತಿದ್ದುಪಡಿ ಮಾಡಿ ಸಚಿವರ ನೇಮಕ ಮತ್ತು ಮಂತ್ರಿ ಮಂಡಲದ ಗಾತ್ರವನ್ನು ನಿಗಧಿಪಡಿಸಲಾಯಿತು .

ಈ ತಿದ್ದುಪಡಿಯನ್ನು 2004 ಜ .1 ರಿಂದ ಜಾರಿಗೆ ತರಲಾಯಿತು . ಈ ಕಾಯ್ದೆಯ ಅನ್ವಯ ಪ್ರಧಾನಮಂತ್ರಿ ಸೇರಿ ಮಂತ್ರಿಗಳ ಒಟ್ಟು ಸಂಖ್ಯೆಯು ಲೋಕಸಭಾ ಸದಸ್ಯರ ಒಟ್ಟು ಸಂಖ್ಯೆಯ ಶೇ .15 ಕ್ಕಿಂತ ಹೆಚ್ಚಿರಬಾರದೆಂದು ತಿದ್ದುಪಡಿ ಮಾಡಲಾಯಿತು .

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳುಲಿಂಕ್ :

ಸ್ವಾತಂತ್ರ್ಯದ ಹಕ್ಕು

 

ಶೋಷಣೆ ವಿರುದ್ಧದ ಹಕ್ಕು

ಬಾಲಕಾರ್ಮಿಕ ನಿಷೇಧ


0 Comments

Leave a Reply

Avatar placeholder

Your email address will not be published. Required fields are marked *