
Table of Contents
ಕುಂಭಕಗಳು
ceramics, ಸಿರಾಮಿಕ್, pottery, pottery wheel, ceramic pots,pottery painting near me, pottery near me, ceramic vase,pottery painting
ಗಡಿಗೆ ತಯಾರಿಸುವವನು ಮಣ್ಣನ್ನು ನೀರಿನಲ್ಲಿ ಕಲಸಿ ಗಡಿಗೆಯನ್ನು ಹೇಗೆ ತಯಾರಿಸುತ್ತಾನೆ ಎಂಬುದನ್ನು ಗಮನಿಸಿ , ಈ ರೀತಿ ನಿರ್ದಿಷ್ಟವಾದ ಮಣ್ಣಿನಿಂದ ತಯಾರಿಸುವ ವಸ್ತುಗಳನ್ನು ಸಿರಾಮಿಕ್ಸ್ ಗಳೆನ್ನುವರು .
ತಯಾರಿಸುವ ಗಡಿಗೆಗಳು ಅಗೋಚರ ರಂಧ್ರಮಯವಾಗಿದ್ದು ಆಕರ್ಷಕ ಬಣ್ಣದಿಂದ ಕೂಡಿಲ್ಲ . ಇವುಗಳನ್ನು ಮುಖ್ಯವಾಗಿ ಸಂಗ್ರಾಹಕಗಳಾಗಿ ಬಳಕೆ ಮಾಡಲಾಗುತ್ತದೆ .
ಆಗೋಚರ ರಂಧ್ರಮಯ ಗಡಿಗೆಗಳಲ್ಲಿ ಸಂಗ್ರಹಿಸಿದ ನೀರು ತಂಪಾಗಿರುತ್ತದೆ .
ರಂಧ್ರರಹಿತ ಟೈಲ್ಗಳು ನಯ ಮೇಲೆ ಮತ್ತು ಹೊಳಪುಳ್ಳವು , ಆಕರ್ಷಕ ಬಣ್ಣಗಳಿಂದಲೂ ಕೂಡಿವೆ .
ಮಣ್ಣಿನಿಂದ ತಯಾರಿಸಿದ ವಸ್ತುಗಳನ್ನು ರಂಧ್ರರಹಿತವಾಗಿ ಮತ್ತು ಹೊಳೆಯುವಂತೆ ಮಾಡುವ ಕ್ರಿಯೆಗೆ ಸ್ಟೇಜಿಂಗ್ ( glazing ) ಎನ್ನುವರು .
ಕಚ್ಚಾರೂಪದ ಟೈಲ್ ಇಲ್ಲವೇ ಗಡಿಗೆ ಯಾವುದೇ ಇರಲಿ ತಯಾರಿಕೆಗೆ ಬಳಕೆಯಾಗುವ ಕಚ್ಚಾ ವಸ್ತುಗಳು ಮತ್ತು ತಯಾರಿಕೆ ಕ್ರಿಯೆ ಸರಿಸುಮಾರು ಒಂದೇ ತೆರನಾದದ್ದು ,
ಕೊಂಚ ವ್ಯತ್ಯಾಸ ಉಂಟು . ಹೀಗಾಗಿ ಇವುಗಳನ್ನು ಕುಂಭಕಗಳು ಇಲ್ಲವೇ ಸಿರಾಮಿಕ್ಸ್ಗಳೆನ್ನುವರು .
ಕುಂಭಕಗಳು ಹೊಸದೇನೂ ಅಲ್ಲ , ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪ್ರಾಚೀನರು ರೂಪಿಸಿ ಬಳಕೆ ಮಾಡುತ್ತಿದ್ದುದಕ್ಕೆ ಪುರಾವೆಗಳಿವೆ . ‘ ಕುಂಭಜ ‘ ಎಂಬುದು ದ್ರೋಣನ ಹೆಸರು !
ಸಿರಾಮಿಕ್ಸ್ ಎಂಬ ಪದವನ್ನು ಸುಟ್ಟ ಮಣ್ಣಿನ ಮಡಕೆ ಎಂಬರ್ಥದ ಸಿರಿಮೋಸ್ ( karamos ) ಎಂಬ ಗ್ರೀಕ್ ಪದದಿಂದ ಪಡೆಯಲಾಗಿದೆ .
ಕುಂಬಾರ ‘ ಎಂಬ ಶಬ್ದ ಕುಂಭಕಾರ ಎಂಬ ಪದದ ತದ್ಭವ
ಹಿಂದಿನ ಕಾಲದಲ್ಲಿ ಸಿರಾಮಿಕ್ಸ್ ಎಂದರೆ ಗಡಿಗೆ ಎಂದು ತಿಳಿದುಕೊಳ್ಳಲಾಗುತ್ತಿತ್ತು . ಅವುಗಳನ್ನು ಮಣ್ಣಿನಿಂದ ಇಲ್ಲವೇ ಮಣ್ಣಿನಲ್ಲಿ ಇತರ ವಸ್ತುಗಳನ್ನು ಬೆರೆಸಿ , ಬೆಂಕಿಯಲ್ಲಿ ಕಾಸಿ ತಯಾರಿಸಲಾಗುತ್ತಿತ್ತು .
ಈ ರೀತಿ ತಯಾರಿಸಿದ ವಸ್ತುಗಳು ಕಚ್ಚಾ ರೂಪದಲ್ಲಿದ್ದು ರಂಧ್ರಯುಕ್ತವಾಗಿರುತ್ತಿದ್ದವು . ನುಣುಪಾದ ರಂಧ್ರ ರಹಿತವಾದ ಸಿರಾಮಿಕ್ಸ್ ಗಳನ್ನು ಗೇಜಿಂಗ್ ಮೂಲಕ ತಯಾರಿಸಲಾಗುತ್ತದೆ .
ಸಜಲ ಜೇಡಿಯನ್ನು ಫಿಲ್ಲರ್ಗಳೊಂದಿಗೆ ( fillers ) ಬೆರೆಸಿ , ಕಾಸಿ , ನಯಗೊಳಿಸಲಾಗುತ್ತದೆ .
ಕುಂಧಕಗಳನ್ನು ಈಗ ಗೃಹಉಪಯೋಗಿ , ಕೈಗಾರಿಕೆ , ಗೃಹನಿರ್ಮಾಣ , ಕಲಾಕೃತಿ ವಸ್ತುಗಳಾಗಿಯೂ ಪರಿಗಣಿಸಲಾಗುತ್ತಿದೆ
. ಪ್ರಸ್ತುತ ದಿನಗಳಲ್ಲಿ ಹೊಸ ಕುಂಭಕಗಳನ್ನು ಅತ್ಯಾಧುನಿಕ ಕುಂಭಕ ತಂತ್ರಜ್ಞಾನ ಸಾಮಗ್ರಿಗಳಾಗಿ ಅಭಿವೃದ್ಧಿಪಡಿಸಲಾಗಿದೆ . ಉದಾಹರಣೆಗೆ ಅರೆವಾಹಕ ವಸ್ತುಗಳ ತಯಾರಿಕೆಯಲ್ಲಿ ಇವುಗಳ ಪಾತ್ರ ಇದೆ .
ಕಚ್ಚಾ ಪದಾರ್ಥಗಳು
ಕೆಯೊಲಿನೈಟ್ ಮಣ್ಣು ( kaolinite ) ಮತ್ತು ಬೆಂಟೊನೈಟ್ ಮಣ್ಣು ( bentonite )
ಚಕಮುಕಿ ( ಪ್ರಿಂಟ್ )
ಬಿಳಿ ಜೇಡಿಮಣ್ಣು
ಬೆಣಚು
ಫೆಲ್ಡ್ಸ್ಟಾರ್
ನಿಮಗೆ ಪರಿಚಿತವಾದ ಕುಂಭಕಗಳೆಂದರೆ
ಮಡಕೆ , ಕುಡಿಕೆಗಳು , ಇವುಗಳ ತಯಾರಿ ಬಗ್ಗೆ ನೆನಪಿಸಿಕೊಳ್ಳಿರಿ . ಇವುಗಳನ್ನು ತಯಾರಿಸುವಾಗ ಜೇಡಿಮಣ್ಣು ಮತ್ತು ನಿಗದಿತ ಪ್ರಮಾಣದಲ್ಲಿ ನೀರನ್ನು ಹದವಾಗಿ ಬೆರೆಸಲಾಗುತ್ತದೆ .
ಹೀಗೆ ಮಿಶ್ರಣಗೊಳಿಸಿದಾಗ ಮಾತ್ರ ಅಪೇಕ್ಷಿತ ಆಕಾರವನ್ನು ಕೊಡಲು ಸಾಧ್ಯ ಉಪಕರಣ ಬಳಕೆ ಮಾಡಿ ಆಕಾರ ನೀಡಲಾಗುವುದು
ಆಕಾರ ನೀಡಿದ ಒದ್ದ ಜೋಡಿಯನ್ನು ಕಾಸಿದಾಗ , ಮಣ್ಣಿನ ಜೊತೆಗಿದ್ದ ನೀರಿನ ಭಾಗಶಃ ಅಂಶ ಆವಿಯಾಗಿ ಮಡಕೆಯಲ್ಲಿ ಆಗೋಚರ ರಂಧ್ರಗಳು ಉಂಟಾಗುವವು .
ಕೇವಲ ಜೇಡಿಮಣ್ಣಲ್ಲದೆ ಕೆಯೊಲಿನೈಟ್ ಮಣ್ಣು ಮತ್ತು ಬೆಂಟೊನೈಟ್ ಮಣ್ಣನ್ನು ಬಳಕೆ ಮಾಡಲಾಗುತ್ತದೆ . ಆದರೆ ಈ ಬಗೆಯ ಕುಂಭಕಗಳಲ್ಲೂ ರಂಧ್ರಮಯತೆ ಇರುತ್ತದೆ .
ಈ ರಂಧ್ರಮಯತೆಯನ್ನು ನಿವಾರಿಸಲು ಏನು ಮಾಡಬೇಕು ?
ಮಣ್ಣನ್ನು ಕಾಸಿದಾಗ ನೀರು ಆವಿಯಾಗಿ ರಂಧ್ರಮಯವಾಗುತ್ತವೆ . ಆ ಸ್ಥಳದಲ್ಲಿ ಗಾಳಿ ತುಂಬಿ ಕೊಳ್ಳುತ್ತದೆ . ಕುಂಭಕ ಸಾಮಗ್ರಿಗಳ ಬಿಧುರತೆಯನ್ನು ತಪ್ಪಿಸಲು ತಯಾರಿಕಾ ಸಾಮಗ್ರಿಗಳಲ್ಲಿ ಮಣ್ಣಲ್ಲದ ಪ್ರಿಂಟ್ ಮತ್ತು ಕ್ವಾರ್ಟನ್ನು ಬೆರೆಸಲಾಗುತ್ತದೆ .
ಸಿಲಿಕಾದ ಬೇರೆ ಬೇರೆ ರೂಪಗಳಾದ ಫಿಂಟ್ ಮತ್ತು ಕ್ವಾರ್ಟ್ಗಳು ನೀರನ್ನು ಹೀರಿಕೊಳ್ಳುವುದಿಲ್ಲ . ಇವು ನೀರನ್ನು ಹೀರಿಕೊಳ್ಳದಿರುವುದರಿಂದ ಉಷ್ಣ ನೀಡಿದಾಗ ರೂಪಾಂತರಗೊಳ್ಳುವುದಿಲ್ಲ ಹಾಗೇನೇ ಕುಗ್ಗುವುದಿಲ್ಲ .
ಮಣ್ಣಿನ ಜೊತೆ ಟ್ವೆಂಟ್ ಮತ್ತು ಕ್ವಾರ್ಟ್ಸ್ ಬೆರೆಸಿ ತಯಾರಿಸಿದ ಕುಂಭಕಗಳು ರಂಧ್ರರಹಿತವಾಗಿರುತ್ತವೆ .
ಅನಂತರ ತಿಳಿದು ಬಂದಿದ್ದೆಂದರೆ ಫೆಲ್ಡ್ಸ್ಪಾರ್ನ್ನು ಬೆರೆಸಿದಾಗ ಕುಂಭಕಗಳು ನಯ ಮತ್ತು ಗಟ್ಟಿಯಾಗುತ್ತವೆ ಎಂಬುದು .
ಸೂಕ್ತ ಕಚ್ಚಾಪದಾರ್ಥಗಳನ್ನು ಒಂದು ಸಲ ಆಯ್ದುಕೊಂಡು ಕಾಸಿ ಪಡೆದದ್ದನ್ನು ಅನಂತರದಲ್ಲಿ ಆಕಾರ ನೀಡುವುದು , ಆಕಾರ ನೀಡಿದವುಗಳನ್ನು ಒಣಗಿಸಿ , ಕಾಸುವುದು , ಕಾಸುವುದರಿಂದ ಆಕಾರ ಉಳಿದುಕೊಳ್ಳುತ್ತದೆ .
ಆದ್ದರಿಂದ ಆಕಾರ ನೀಡುವುದು – ಒಣಗಿಸುವುದು – ಕಾಸುವುದು ಈ ಹಂತಗಳು ಎಲ್ಲಾ ಕುಂಭಕಗಳ ತಯಾರಿಕೆಯಲ್ಲಿ ಸಾಮಾನ್ಯ
ಸುಮಾರು 1073K ದಿಂದ 1273K ಕೈ ಕಾಸಿದಾಗ ಕುಂಭಕಗಳು ಗಾಜಿನಂತಹ ದ್ರವವಾಗಿ ಮಣ್ಣಿನ ಕಣಗಳ ಮಧ್ಯದಲ್ಲಿ ಸೇರಿಕೊಂಡು , ರಂಧ್ರಗಳನ್ನು ಮುಚ್ಚುತ್ತವೆ ಹಾಗೂ ಸೇರಿದ ಭಾಗವನ್ನು ಬಲಯುತವನ್ನಾಗಿಸುತ್ತದೆ .
ತಂಪಾಗಿಸಿದಾಗ ಗ್ಲಾಜ್ ಪದಾರ್ಥ ವಸ್ತುಗಳನ್ನು ಹೊಳಪಾಗಿಸಿ ನಯವಾಗಿಸುತ್ತದೆ .
ಕುಂಭಕ ವಸ್ತುಗಳನ್ನು ತಯಾರಿಸುವಾಗ ಕಚ್ಚಾವಸ್ತುಗಳಲ್ಲಿ ಸೇರಿಸುವ ಕೆಲವು ಲೋಹದ ಆಕ್ಸೆಡ್ ಗಳು ಕುಂಭಕ ವಸ್ತುಗಳಿಗೆ ಬಣ್ಣದ ಛಾಯೆ ನೀಡುತ್ತವೆ .
ಉಪಯೋಗಗಳು
ವಿದ್ಯುತ್ ಹರಿಯದಂತೆ ತಡೆಯುವ ಉತ್ತಮ ಲಕ್ಷಣ ಕುಂಭಕಗಳಿಗಿದೆ . ಕುಂಭಕಗಳು ವಿದ್ಯುತ್ ಅವಾಹಕಗಳು , ವಿದ್ಯುತ್ ಸಲಕರಣೆಗಳ ಉಪಯುಕ್ತ ಭಾಗವಾಗಿಬಿಟ್ಟಿವೆ .
ಸ್ಟೀಲ್ ಬಾಲ್ ಬೇರಿಂಗ್ಗಳ ಬದಲಾಗಿ ಕುಂಭಕ ಬಾಲ್ ಬೇರಿಂಗ್ಗಳನ್ನು ಬಳಸಬಹುದು .
ಕುಂಭಕಗಳನ್ನು ಬಳಸಿ ಅನಿಲ ಟರ್ಬೈನ್ ಇಂಜಿನ್ಗಳ ಬಿಡಿ ಭಾಗಗಳನ್ನು ಉತ್ಪಾದಿಸುವ ಕಾರ್ಯ ಪ್ರಗತಿಯಲ್ಲಿದೆ . ಇದರಿಂದ ಬಿಡಿ ಭಾಗಗಳು ಸುಲಭವಾಗಿ ನಶಿಸವು .
ಕುಂಭಕಗಳಿಗೆ ಜೈವಿಕ ಉಪಯುಕ್ತತೆಯೂ ಉಂಟು . ಇದನ್ನು ಜೈವಿಕ ಕುಂಭಕ ಎನ್ನಲಾಗುವುದು . ಕೃತಕ ಹಲ್ಲುಗಳನ್ನು ಅಳವಡಿಸುವುದು ಮತ್ತು ಕೃತಕ ಮೂಳೆಗಳು ಇದಕ್ಕೆ ಉದಾಹರಣೆ .