ಕಾರ್ಪೊರೇಷನ್

corporation , incorporate , company secretary , privately held company , private limited company, limited company

corporation , incorporate , company secretary , privately held company , private limited company, limited company

ನಿಗಮ ಎಂಬುದು ಒಂದು ಕ್ರಮಬದ್ಧ(ವ್ಯವಸ್ಥಿತ) ವ್ಯಾಪಾರ ಸಂಘಟನೆಯಾಗಿದ್ದು, ಸಾರ್ವಜನಿಕವಾಗಿ ನೋಂದಾಯಿಸಲಾದ ಹಕ್ಕುಪತ್ರದ ನಿಯಮಾವಳಿಯ ಆಧಾರ ಹೊಂದಿದೆ. ಇದನ್ನು ಪ್ರತ್ಯೇಕ ಕಾನೂನಿನ ಘಟಕವೆಂದು ಗುರುತಿಸಲಾಗುತ್ತದೆ. ಇದು ಅದರದೇ ಆದ ಸವಲತ್ತು ಮತ್ತು ಜವಾಬ್ದಾರಿಯನ್ನು ಹೊಂದಿದ್ದು, ಇದರ ಸದಸ್ಯರ ವ್ಯಕ್ತಿಗತ ಚಟುವಟಿಕೆಗಳಿಗಿಂತ ಭಿನ್ನವಾಗಿದೆ. ನಿಗಮಗಳಲ್ಲಿ ಅನೇಕ, ವಿಭಿನ್ನ ರಚನೆಗಳಿವೆ, ಅವುಗಳಲ್ಲಿನ ಬಹುಪಾಲನ್ನು ವ್ಯಾಪಾರ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ನಿಗಮಗಳು,ಕಾರ್ಪೋರೆಟ್ ಕಾನೂನಿನ ಉತ್ಪನ್ನವೆಂಬಂತೆ ಅಸ್ತಿತ್ವದಲ್ಲಿವೆ. ಅಲ್ಲದೇ ಅವುಗಳ ನಿಯಮಗಳು,ನಿಗಮ,ಸಾಲದಾತರು, ಷೇರುದಾರರು, ಮತ್ತು ಕೆಲಸ ಮಾಡುವ ಶ್ರಮಿಕ ನೌಕರರನ್ನು ನೋಡಿಕೊಳ್ಳುವ ಆಡಳಿತ ಮಂಡಳಿಯ ಆಸಕ್ತಿಯನ್ನು ಸಮತೋಲನದಲ್ಲಿಡುತ್ತದೆ. ಆಧುನಿಕ ಕಾಲದಲ್ಲಿ, ನಿಗಮಗಳು ಆರ್ಥಿಕ ಬದುಕಿನ (ಜೀವನದ) ಪ್ರಮುಖ ಭಾಗವಾಗಿ ಬೆಳೆಯುತ್ತಿವೆ.

ಸೀಮಿತ ಹೊಣೆಗಾರಿಕೆಯು ನಿಗಮದ ಒಂದು ಪ್ರಮುಖ (ಆದರೆ ಸಾರ್ವತ್ರಿಕವಾಗಲ್ಲ) ಗುಣಲಕ್ಷಣವಾಗಿದೆ. ಒಂದು ವೇಳೆ ನಿಗಮ ವಿಫಲವಾದಲ್ಲಿ, ಸಾಮಾನ್ಯವಾಗಿ ಷೇರುದಾರರು ಕೇವಲ ಅವರ ಪಾಲಿನ ಬಂಡವಾಳವನ್ನು ಮಾತ್ರ ಕಳೆದುಕೊಳ್ಳುತ್ತಾರೆ ಹಾಗು ನೌಕರರು ಅವರ ಕೆಲಸ ಕಳೆದುಕೊಳ್ಳುತ್ತಾರೆ. ಆದರೆ ನಿಗಮದ ಸಾಲದಾತರಿಗೆ ಪಾವತಿಸಬೇಕಾದ ಸಾಲಕ್ಕೆ ಇವರು ಜವಾಬ್ದಾರರಾಗುವುದಿಲ್ಲ.

ಸಹಜವಾದ ವ್ಯಕ್ತಿಯಾಗಿಲ್ಲದಿದ್ದರೂ ಕೂಡ ಕಾನೂನು ನಿಗಮಗಳನ್ನು ಸಹಜವಾದ ವ್ಯಕ್ತಿಯಂತೆ(“ಜನರು”) ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿವೆ ಎಂದು ಪರಿಗಣಿಸುತ್ತದೆ.

ನಿಗಮಗಳು, ನಿಜವಾದ ವ್ಯಕ್ತಿಯ ಮೇಲೆ ಮತ್ತು ರಾಷ್ಟ್ರದ ಮೇಲೆ ಮಾನವ ಹಕ್ಕುಗಳನ್ನು ಚಲಾಯಿಸಬಹುದಾಗಿವೆ,ಅಲ್ಲದೇ ಅವು ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಜವಾಬ್ದಾರರಾಗಬಲ್ಲವು.ನಿಗಮಗಳ ಸದಸ್ಯರು ಸಂಘಟನಾ ಪ್ರಮಾಣಪತ್ರ(ಸರ್ಟಿಫಿಕೆಟ್ ಆಫ್ ಇನ್ ಕಾರ್ಪೊರೇಷನ್)ವನ್ನು ಪಡೆದ ನಂತರ ಇವುಗಳು ತಮ್ಮ ಅಸ್ತಿತ್ವದೊಂದಿಗೆ “ಹುಟ್ಟುತ್ತವೆ”.

ಅಲ್ಲದೇ ಕಾನೂನು ಸಮ್ಮತ ಕಾರ್ಯಚಟುವಟಿಕೆ ಉಲ್ಲಂಘಿಸಿದಾಗ, ನ್ಯಾಯಾಲಯದ ಆದೇಶದ ಮೇರೆಗೆ ಅಥವಾ ಷೇರುದಾರರು ಸ್ವತಃ ಇದನ್ನು ಮುಂದುವರೆಸಲು ನಿರಾಕರಿಸಿದಾಗ ಇವು “ಕೊನೆಗಾಣು”ತ್ತವೆ. ದಿವಾಳಿತನದ ಫಲಿತಾಂಶವೆಂದರೆ ನಿಗಮದ “ಸಾವೆನಿಸಿದೆ”.

ಸಾಲದಾತರು ನ್ಯಾಯಾಲಯದ ಆದೇಶದಂತೆ ನಿಗಮವನ್ನು ಅಂತಿಮ ತೀರ್ಮಾನದಡಿ ಅಂತ್ಯಗೊಳಿಸಲು ಒತ್ತಾಯಿಸಿದಾಗ ನಿಗಮ ವಿಸರ್ಜಿಸಲ್ಪಟ್ಟು ದಿವಾಳಿಯಾಗುತ್ತದೆ.

ಆದರೆ ಇಂತಹ ಹೆಚ್ಚಿನ ಸಂದರ್ಭಗಳಲ್ಲಿ ನಿಗಮವನ್ನು ಪುನಃ ನಿರ್ಮಿಸಲಾಗಿದೆ. ನಿಗಮಗಳು, ವಂಚನೆ ಮತ್ತು ನರಹತ್ಯೆಯಂತಹ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಅಪರಾಧಿ ಸ್ಥಾನದಲ್ಲಿ ನಿಂತಿರುವುದು ರುಜುವಾತಾಗಿವೆ.

ಆದರೂ ಬೇರೆ ಬೇರೆ ಕಾನೂನು ವಲಯಗಳಲ್ಲಿ ಕಾರ್ಪೋರೆಟ್ ನಿಯಮಾವಳಿ ಭಿನ್ನವಾಗಿರುತ್ತದೆ. ವ್ಯಾಪಾರ ನಿಗಮದ ಪ್ರಮುಖ ನಾಲ್ಕು ಗುಣಲಕ್ಷಣಗಳು ಕೆಳಕಂಡಂತಿವೆ:

  • ಕಾನೂನು ವ್ಯಕ್ತಿತ್ವ
  • ಸೀಮಿತ ಹೊಣೆಗಾರಿಕೆ
  • ವರ್ಗಾಯಿಸಬಲ್ಲ ಷೇರುಗಳು
  • ನಿರ್ದೇಶಕರ ಮಂಡಳಿ ವ್ಯವಸ್ಥೆಯಡಿ ಕೇಂದ್ರೀಕೃತ ಆಡಳಿತ

ಇತಿಹಾಸ

“ಕಾರ್ಪೊರೇಷನ್” (ನಿಗಮ) ಎಂಬ ಪದವು ಕಾರ್ಪಸ್ ಎಂಬ ಪದದಿಂದ ಹುಟ್ಟಿಕೊಂಡಿದೆ. ಇದು ಸಂಘ ಅಥವಾ “ಜನರ ಕೂಟ” ಎಂಬುದನ್ನು ಸೂಚಿಸುವ ಲ್ಯಾಟಿನ್ ಪದವಾಗಿದೆ.

ವ್ಯಾಪಾರದಲ್ಲಿರುವ ಮುಖ್ಯ ಗುಣಲಕ್ಷಣಗಳು ಮತ್ತು ಕಾನೂನು ಹಕ್ಕುಗಳಿಗೆ ಸಂಬಂಧಪಟ್ಟ ವಿಷಯಗಳು ಪ್ರಾಚೀನ ರೋಮ್ ಮತ್ತು ಪ್ರಾಚೀನ ಭಾರತದ ಮೌರ್ಯ ಸಾಮ್ರಾಜ್ಯದಲ್ಲಿ ಕಂಡು ಬಂದಿವೆ.ಮಧ್ಯಕಾಲೀನ ಯುರೋಪ್ ನಲ್ಲಿ, ಚರ್ಚ್ ಗಳು ಸ್ಥಳೀಯ ಸರ್ಕಾರಗಳಂತೆ ಸುಸಂಘಟಿತವಾಗಿದ್ದವು.

ಉದಾಹರಣೆಗೆ ಪೋಪ್ ಮತ್ತು ದಿ ಸಿಟಿ ಆಫ್ ಲಂಡನ್ ಕಾರ್ಪೊರೇಷನ್. ಯಾವುದೇ ಪ್ರತ್ಯೇಕ ಸದಸ್ಯನೊಬ್ಬ ಬದುಕಿರುವುದಕ್ಕಿಂತ ಹೆಚ್ಚಿನ ಕಾಲ ಸಂಘಟನೆಗಳು ಅಸ್ತಿತ್ವದಲ್ಲಿರುತ್ತವೆ ಎಂಬುದು ಮಹತ್ವದ ಅಂಶವಾಗಿದೆ.

ಸ್ವಿಡನ್ ನ ಫ್ಯಾಲುನ್ ನಲ್ಲಿದ್ದ ಸ್ಟೋರಾ ಕಾಪರ್ ಬರ್ಗ್ ಎಂಬ ಗಣಿಗಾರಿಕೆ ಸಮುದಾಯ ವಿಶ್ವದಲ್ಲೇ ಅತ್ಯಂತ ಹಳೆಯದಾದ ವಾಣಿಜ್ಯ ನಿಗಮವೆಂದು ಹೇಳಲಾಗುತ್ತದೆ.

ಇದು 1347 ರಲ್ಲಿ ಮ್ಯಾಗ್ನುಸ್ ಎರಿಕ್ಸನ್ ಎಂಬ ರಾಜನಿಂದ ಹಕ್ಕುಪತ್ರವನ್ನು ಪಡೆದುಕೊಂಡಿತ್ತು.

ಯುರೋಪಿಯನ್ ರಾಷ್ಟ್ರಗಳ ಅನೇಕ ಸನ್ನದು ಪಡೆದ ನಿಗಮಗಳು, ಡಚ್ ಈಸ್ಟ್ ಇಂಡಿಯಾ ಕಂಪನಿ ಅಥವಾ ಹಡ್ಸನ್ಸ್ ಬೇ ಕಂಪನಿಯಂತಹ ವಸಾಹತು ತತ್ವಾಧಾರಿತ ವ್ಯಾಪಾರ ಸಾಹಸಗಳನ್ನು ಆರಂಭಿಸಿದವು.

ಈ ನಿಗಮಗಳು ವಸಾಹತು ನೀತಿಗಾಗಿ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿವೆ.

17 ನೇ ಶತಮಾನದಲ್ಲಿ ವಸಾಹತುಗಳನ್ನು ವಿಸ್ತರಿಸುವ ಸಮಯದಲ್ಲಿ ಆಧುನಿಕ ನಿಗಮದ ಪ್ರವರ್ತಕರು “ಸನ್ನದು ಸಂಘ”ದ ರೂಪದಲ್ಲಿ ಉದಯಿಸಿದರು.

ಡಚ್ ಅರಸರಿಂದ ಅನುಮೋದಿತ ಹಕ್ಕುಪತ್ರದಡಿ ಕಾರ್ಯನಿರ್ವಹಿಸುತ್ತಿದ್ದಾಗ,ಡಚ್ ಈಸ್ಟ್ ಇಂಡಿಯಾ ಕಂಪನಿ (VOC),

ಪೋರ್ಚುಗೀಸ್ ಸೈನ್ಯವನ್ನು ಸೋಲಿಸಿತು. ಅಲ್ಲದೇ ಸಂಬಾರ ಪದಾರ್ಥಗಳಿಗಿದ್ದ ಯುರೋಪಿನ ಬೇಡಿಕೆಯಿಂದ ಲಾಭ ಪಡೆಯಲು ಮೌಲುಕನ್ ದ್ವೀಪಗಳಲ್ಲಿ ನೆಲೆಯೂರಿತು.  ಯಲ್ಲಿ ಬಂಡವಾಳ ಹೂಡಿದ್ದವರಿಗೆ, ಷೇರುಗಳ ಪುರಾವೆಯಾಗಿ ಕಾಗದದ ಮೂಲಕ ಪ್ರಮಾಣ ಪತ್ರವನ್ನು ನೀಡಲಾಗಿತ್ತು.

ಅಲ್ಲದೇ ಅವರು ತಮ್ಮ ಷೇರುಗಳನ್ನು ಮೂಲ ಆಂಸ್ಟರ್ಡ್ಯಾಮ್ ನ ಸ್ಟಾಕ್ ಮಾರುಕಟ್ಟೆಯಲ್ಲಿ ವಹಿವಾಟು ಮಾಡಬಹುದಾಗಿತ್ತು. ಕಂಪನಿಯ ರಾಯಲ್ ಚಾರ್ಟರ್ ನಲ್ಲಿ ಷೇರುದಾರರಿಗೆ ಸ್ಪಷ್ಟವಾಗಿ ಸೀಮಿತ ಹೊಣೆಗಾರಿಕೆಯನ್ನು ನೀಡಲಾಗಿತ್ತು.

ಇಂಗ್ಲೀಷ್ ಭಾಷೆಯಲ್ಲಿ ಕಾರ್ಪೋರೆಟ್ ಕಾನೂನಿನ ಮೇಲೆ ಬರೆದಂತಹ ಮೊದಲನೆಯ ಪ್ರಬಂಧ ಗ್ರಂಥದ ಕರ್ತೃ ಸ್ಟಿವಾರ್ಟ್ ಕೈಡ್ ಎಂಬುವವರು 18ನೇ ಶತಮಾನದ ಉತ್ತರಾರ್ಧದಲ್ಲಿ ನಿಗಮವನ್ನು ಕೆಳಕಂಡಂತೆ ವ್ಯಾಖ್ಯಾನಿಸಿದ್ದಾರೆ.

ವಾಣಿಜ್ಯ ಸಿದ್ದಾಂತ

1623 ರ ನವೆಂಬರ್ 7 ದಿನಾಂಕವನ್ನು ನಮೂದಿಸಿ 2,400 ರೂಪಾಯಿಗಳಿಗೆ ಡಚ್ ಈಸ್ಟ್ ಇಂಡಿಯ ಕಂಪನಿ ಹೊರಡಿಸಿದ ಬಾಂಡ್

ಸಮಕಾಲೀನರು ಮತ್ತು ಇತಿಹಾಸಕಾರರಿಂದ “ಭೂಮಂಡಲದಲ್ಲಿರುವ ವ್ಯಾಪಾರಿಗಳ ಅತ್ಯಂತ ವೈಭವಪೂರ್ಣ ಸಮಾಜ” ವೆಂಬ ಹೆಗ್ಗಳಿಕೆಗೆ ಪಾತ್ರವಾಗುವುದರೊಂದಿಗೆ,  ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ, ಬೆರಗುಗೊಳಿಸುವಂತಹ ನಿಗಮದ ಪ್ರಬಲ ಶಕ್ತಿಯನ್ನು ಸಂಕೇತಿಸಲು ಹಾಗು ವ್ಯಾಪಾರದ ಹೊಸ ವಿಧಾನಗಳಾದ ನಿರ್ದಯ ಸ್ವರೂಪ ಮತ್ತು ಶೋಷಣೆಗಳ ಪದ್ದತಿಗಳನ್ನು ಪರಿಚಯಿಸಿತು.

1600ರ ಡಿಸೆಂಬರ್ 13 ರಂದು,ಇಂಗ್ಲೆಂಡ್ ರಾಜಪ್ರಭುತ್ವವು ಕಂಪನಿಗೆ ಈಸ್ಟ್ ಇಂಡೀಸ್ ಮತ್ತು ಆಫ್ರಿಕಾಗಳ ಮೂಲಕ ಹದಿನೈದು ವರ್ಷಗಳ ಕಾಲ ಏಕಸ್ವಾಮ್ಯದ ವ್ಯಾಪಾರ ಮಾಡಲು ಸಂಪೂರ್ಣ ಹಕ್ಕು ನೀಡಿತು.

1611ರ ಹೊತ್ತಿಗೆ, ಈಸ್ಟ್ ಇಂಡಿಯ ಕಂಪನಿಯ ಷೇರುದಾರರು ಅವರ ಬಂಡವಾಳ ಹೂಡಿಕೆಯ ಮೇಲೆ ಸುಮಾರು 150 ಪ್ರತಿಶತದಷ್ಟು ಗಳಿಸಿದರು.

ಅನಂತರದ ಸಾರ್ವಜನಿಕ ಶೇರು, ಸ್ಟಾಕ್ ಬಿಡುಗಡೆಗಳು, ಕಂಪನಿಗೆ ಎಷ್ಟು ಲಾಭದೊರೆಯಿತು ಎಂಬುದನ್ನು ತೋರಿಸುತ್ತವೆ. 1613-1616 ರಲ್ಲಿ ಬಿಡುಗಡೆ ಮಾಡಲಾದ ಇದರ ಮೊದಲ ಶೇರು ಬಂಡವಾಳ ಶೇಖರಣೆಯಲ್ಲಿ ₤418,೦೦೦ ನಷ್ಟು ಸಂಗ್ರಹಿಸಿತು.

ಅಲ್ಲದೇ 1617-1622ರಲ್ಲಿ ಬಿಡುಗಡೆ ಮಾಡಲಾದ ಇದರ ಮೊದಲ ಸ್ಟಾಕ್ ₤1.6 ಮಿಲಿಯನ್ ನಷ್ಟು ಸಂಗ್ರಹಿಸಿತು.

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ 19 ನೇ ಶತಮಾನದ ಮಧ್ಯಾವಧಿಯಲ್ಲಿ ಸರ್ಕಾರವು ಅಧಿಕಾರ ಪತ್ರ ನೀಡುವ ವಾಡಿಕೆಯನ್ನು ಕಡಿಮೆ ಮಾಡಿತು.

ಆ ಸಮಯದಲ್ಲಿ ಕಾರ್ಪೋರೆಟ್ ಕಾನೂನು, ನಿಗಮದ ಷೇರುದಾರರ ಆಸಕ್ತಿಯ ಕಡೆ ಗಮನ ಹರಿಸದೇ ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ಕಡೆಗೆ ಹೆಚ್ಚು ಗಮನ ಹರಿಸಿತು.

ನಿಗಮದ ಹಕ್ಕುಪತ್ರಗಳನ್ನು ಆಯಾ ವಲಯದ ರಾಜ್ಯ-ರಾಷ್ಟ್ರಗಳು ನಿಯಂತ್ರಿಸುತ್ತಿದ್ದವು. ನಿಗಮವನ್ನು ರೂಪಿಸಲು ಸಾಮಾನ್ಯವಾಗಿ ಶಾಸಕಾಂಗದ ಕಾಯ್ದೆಯ ಅಗತ್ಯವಿರುತ್ತದೆ.

ನಿಗಮದ ಆಡಳಿತದಲ್ಲಿ ಬಂಡವಾಳ ಹೂಡಿಕೆದಾರರಿಗೆ ಸಾಮಾನ್ಯವಾಗಿ ಸಮಾನ ಹಕ್ಕನ್ನು ನೀಡಲಾಗಿರುತ್ತದೆ. ಅಲ್ಲದೇ ನಿಗಮಗಳು ಅವುಗಳ ಹಕ್ಕುಪತ್ರದಲ್ಲಿ ಹೇಳಲಾದ ಉದ್ದೇಶವನ್ನು ನೆರವೇರಿಸಬೇಕಾಗಿರುತ್ತದೆ.

ಈ ಕಾರಣಗಳಿಗಾಗಿಯೇ 19 ನೇ ಶತಮಾನದ ಅನೇಕ ಖಾಸಗಿ ಸಂಸ್ಥೆಗಳು ಕಾರ್ಪೋರೆಟ್ ಮಾದರಿಯನ್ನು ತೆಗೆದುಕೊಳ್ಳಲಿಲ್ಲ.

(ಆಂಡ್ರೀವ್ ಕ್ಯಾರ್ನೆಜ್ , ಸೀಮಿತ ಪಾಲುದಾರಿಕೆಯ ರೂಪದಲ್ಲಿ ಅವರ ಭದ್ರ ಕಾರ್ಯಾಚರಣೆ ರೂಪಿಸಿದರು. ಜಾನ್ ಡಿ. ರಾಕ್ ಫೆಲ್ಲರ್, ಸ್ಟ್ಯಾಂಡರ್ಡ್ ಆಯಿಲ್ ಅನ್ನು ಟ್ರಸ್ಟ್ ನ ರೂಪದಲ್ಲಿ ಕಟ್ಟಿದರು).

ಅಂತಿಮವಾಗಿ ರಾಜ್ಯ ಸರ್ಕಾರಗಳು, ಕಾರ್ಪೋರೆಟ್ ಕಾನೂನಿನ ಮೂಲಕ ಹೆಚ್ಚು ಪರವಾನಿಗೆಯ ಅಧಿಕಾರವನ್ನು ವಿಸ್ತರಿಸುವದರ ಜೊತೆಗೆ ನಿಗಮಗಳ ದಾಖಲಾತಿ ಆದಾಯ ಹೆಚ್ಚುತ್ತದೆ ಎಂಬುದನ್ನು ಮನಗಂಡವು.

ನ್ಯೂ ಜೆರ್ಸಿ “ಸ್ವಯಂ ಆಡಳಿತಾಧಿಕಾರ ನೀಡುವ” ಕಾರ್ಪೋರೆಟ್ ಕಾನೂನನ್ನು ಒಪ್ಪಿಕೊಂಡ ಮೊದಲ ರಾಜ್ಯವಾಗಿದೆ. ರಾಜ್ಯದ ಕಡೆಗೆ ಹೆಚ್ಚಿನ ವ್ಯಾಪಾರ ಆಕರ್ಷಿಸುವ ಗುರಿಯೊಂದಿಗೆ ಇದನ್ನು ಅಳವಡಿಸಿಕೊಂಡಿತು.

ಡೆಲವೇರ್ ಕೂಡ ಇದನ್ನೇ ಅನುಸರಿಸಿತು. ಅಲ್ಲದೇ ಅತಿ ಶೀಘ್ರದಲ್ಲಿ ನ್ಯೂ ಜೆರ್ಸಿಯ ನಂತರ ರಾಷ್ಟ್ರದಲ್ಲೇ ನಿಗಮ ವ್ಯವಸ್ಥೆಗೆ ಅತ್ಯಂತ ನಿಕಟವಾಗಿರುವ ರಾಜ್ಯವೆಂಬ ಹೆಸರು ಪಡೆಯಿತು. ಅದಲ್ಲದೇ ನಿಗಮಗಳ ಮೇಲೆ ತೆರಿಗೆ ಹೆಚ್ಚಿಸಿತು.

ನ್ಯೂ ಜೆರ್ಸಿ ಗೆ ಈ ತಪ್ಪು ಅರಿವಾದ ನಂತರ ಅದು ಈ ತೆರಿಗೆಗಳನ್ನು ಕಡಿಮೆ ಮಾಡಿತಾದರೂ ಅಷ್ಟೊತ್ತಿಗೆ ತಡವಾಗಿ ಹೋಗಿತ್ತು; ಇಂದೂ ಕೂಡ ಅತ್ಯಂತ ಪ್ರಮುಖ ಸಾರ್ವಜನಿಕ ನಿಗಮಗಳನ್ನು ಡೆಲವೇರ್ ಕಾನೂನಿನಡಿಯಲ್ಲಿ ನಿರ್ಮಿಸಲಾಗುತ್ತದೆ.

ನಿಗಮಗಳು ಭವಿಷ್ಯದ ಆರ್ಥಿಕ ಗತಿಯನ್ನು ನಿಯಂತ್ರಿಸುತ್ತವೆ ಎಂಬ ಸೂಚನೆಯಿಂದಾಗಿ, 19ನೇ ಶತಮಾನದ ಆರಂಭದಿಂದ ಅಟ್ಲಾಂಟಿಕ್ ನ ಎರಡೂ ಕಡೆಯ ಸರ್ಕಾರಿ ನೀತಿಗಳು ಬದಲಾಗತೊಡಗಿದವು.

1819 ರಲ್ಲಿ U.S. ನ ಸರ್ವೋಚ್ಚ ನ್ಯಾಯಾಲಯವು ನಿಗಮಗಳಿಗೆ ಅವು ಹಿಂದೆಂದೂ ಅನುಭವಿಸದ ಮತ್ತು ಪರಿಗಣಿಸದಂತಹ ಅತ್ಯಧಿಕ ಹಕ್ಕುಗಳನ್ನು ನೀಡಿತು. ಕಾರ್ಪೋರೆಟ್ ಹಕ್ಕುಪತ್ರವನ್ನು “ಅನುಲ್ಲಂಘನೀಯ”ವೆಂದು ಪರಿಗಣಿಸಲಾಯಿತು.

ಅಲ್ಲದೇ ಇದನ್ನು ಇಚ್ಛಾನುಸಾರವಾಗಿ ತಿದ್ದುಪಡಿಗೊಳಪಡಿಸುವಂತಿಲ್ಲ ಅಥವಾ ರಾಜ್ಯ ಸರ್ಕಾರ ಇದನ್ನು ರದ್ದು ಮಾಡುವಂತಿಲ್ಲ ಎಂದು ತಿಳಿಯಲಾಯಿತು. ನಿಗಮವನ್ನು ಸಂಪೂರ್ಣ ಪ್ರತ್ಯೇಕತೆ ಮತ್ತು ಶಾಶ್ವತತೆಯನ್ನು ಹೊಂದಿರುವ “ಕೃತಕ ವ್ಯಕ್ತಿ” ಎಂದು ಪರಿಗಣಿಸಲಾಯಿತು.

ಇದೇ ಸಮಯದಲ್ಲಿ ಬ್ರಿಟಿಷ್ ಶಾಸಕಾಂಗ ಕೂಡ ನಿಗಮವನ್ನು ಪ್ರಾಚೀನ, ಐತಿಹಾಸಿಕ ಪರಿಮಿತಿಗಳ ಸಂಕೋಲೆಗಳಿಂದ ಮುಕ್ತಗೊಳಿಸಿತು.

1844 ರಲ್ಲಿ ಬ್ರಿಟಿಷ್ ಸಂಸತ್ತು ಜಾಯಿಂಟ್ ಸ್ಟಾಕ್ ಕಂಪನಿಗಳ ಕಾಯ್ದೆಯನ್ನು ಹೊರತಂದಿತು. ಈ ಕಾಯ್ದೆ ಕಂಪನಿಗಳಿಗೆ ಹಕ್ಕುಪತ್ರವಿಲ್ಲದೆಯೇ ಅಥವಾ ಸಂಸತ್ತಿನ ಕಾಯ್ದೆಯಿಲ್ಲದೆಯೇ ವ್ಯಾಪಾರೀ ಸಂಘಟನೆಯನ್ನು ರಚಿಸಿಕೊಳ್ಳಬಹುದಾದ ಅವಕಾಶ ನೀಡಿತು.

ಹತ್ತು ವರ್ಷಗಳ ನಂತರ, ಸೀಮಿತ ಹೊಣೆಗಾರಿಕೆ, ಕಾರ್ಪೋರೆಟ್ ಕಾನೂನಿನ ಪ್ರಮುಖ ಕರಾರುಗಳು ಇಂಗ್ಲೀಷ್ ಕಾನೂನಿಗೆ ರವಾನೆಯಾದವು: ಹೊಸದಾಗಿ ಉದಯಿಸಿದ ಬಂಡವಾಳ ಆಸಕ್ತಿ ಹೆಚ್ಚುತ್ತಿರುವ ಒತ್ತಡಕ್ಕೆ ಪ್ರತಿಕ್ರಿಯಿಸುವಂತೆ ಸಂಸತ್ತು 1855 ರ ಸೀಮಿತ ಹೊಣೆಗಾರಿಕೆ ಕಾಯ್ದೆಯನ್ನು ಹೊರತಂದಿತು.

ಈ ಕಾಯ್ದೆಯು, ಯಾವುದೇ ನಿಗಮ ಕಾನೂನು ಬದ್ಧ ಸೀಮಿತ ಹೊಣೆಗಾರಿಕೆಯನ್ನು ಒಪ್ಪಂದ ಮತ್ತು ಕರ್ತವ್ಯ ಲೋಪದ ವ್ಯಾಜ್ಯ ಹೂಡುವುದರಲ್ಲಿ ಅನುಸರಿಸಬಹುದು ಎಂಬ ನಿಯಮಗಳನ್ನು ಜಾರಿಗೆ ತಂದಿತು.

ಸರಿಯಾದ ಸರ್ಕಾರಿ ನಿಯೋಗದೊಂದಿಗೆ ಸರಳವಾಗಿ “ಲಿಮೆಟೆಡ್” ಕಂಪನಿ ಎಂದು ನೋಂದಾಯಿಸಿಕೊಳ್ಳುವ ಮೂಲಕ ಈ ಸೀಮಿತ ಹೊಣೆಗಾರಿಕೆಯನ್ನು ಕಂಪನಿ ಅಳವಡಿಸಬಹುದಾಗಿದೆ.

ಈ ಕುರಿತು 1855 ರಲ್ಲಿ ದಿ ಎಕನಾಮಿಸ್ಟ್ ಎಂಬ ಇಂಗ್ಲೀಷ್ ನಿಯತಕಾಲಿಕೆ “ಬಹುಶಃ ಎಂದಿಗೂ ಸಾರ್ವತ್ರಿಕವಾಗಿ ಮತ್ತು ಉತ್ಕಟವಾಗಿ ಇಂತಹ ಬದಲಾವಣೆಯ ಬೇಡಿಕೆಯನ್ನು ಇಟ್ಟಿರಲಿಲ್ಲ.

ಇದರ ಪ್ರಾಮುಖ್ಯತೆಯನ್ನು ಮಿತಿಮೀರಿ ಗೌರವಿಸಲಾಗುತ್ತಿದೆ” ಎಂದು ಬರೆದಿದೆ ಇದೇ ನಿಯತಕಾಲಿಕೆ 75 ವರ್ಷಗಳ ನಂತರ ” ಭವಿಷ್ಯದ ಆರ್ಥಿಕ ವಿದ್ವಾಂಸರನ್ನು . . . ಬಹುಶಃ ಸೀಮಿತ ಹೊಣೆಗಾರಿಕೆಯ ನಿಯಮಗಳ ಹೆಸರಿಲ್ಲದ ಸೃಷ್ಟಿಕರ್ತನಿಗೆ ನಿರ್ದೇಶಿಸುವಂತೆ ಒಪ್ಪಿಸಲಾಗುವುದು.

ವಾಟ್ ಮತ್ತು ಸ್ಟೀಫೆನ್ ರೊಂದಿಗೆ ಹಾಗು ಕೈಗಾರಿಕಾ ಕ್ರಾಂತಿಯ ಇತರ ಪ್ರವರ್ತಕರೊಂದಿಗೆ ವಾಣಿಜ್ಯ ನಿಗಮಗಳಿಗೆ ಅರ್ಜಿ ಸಲ್ಲಿಸಲಾಗುವುದು” ಎಂದು ತಿಳಿಸಿದಾಗ ಈ ತೀರ್ಪಿನ ಎರಡನೆಯ ಭಾಗದಲ್ಲಿ ಎದ್ದುಕಾಣುವ ಅಸ್ಪಷ್ಟತೆಯನ್ನು ಇದು ಗುರುತಿಸಿತು.

ಆಧುನಿಕ ನಿಗಮಗಳು

19 ನೇ ಶತಮಾನದ ಕೊನೆಯಲ್ಲಿ ನ್ಯೂ ಜೆರ್ಸಿ ಯ ಶೆರ್ಮನ್ ಕಾಯ್ದೆ, ಇತರ ಕಂಪನಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ, ಹೊಲ್ಡಿಂಗ್ ಕಂಪನಿಗಳು, ಮತ್ತು ಒಕ್ಕೂಟಗಳು ಹಂಚಿಹೋಗಿದ್ದ ಷೇರುದಾರರೊಂದಿಗೆ ವಿಲೀನಗೊಂಡು ವಿಸ್ತೃತ ನಿಗಮ ಸೃಷ್ಟಿಗೆ ಅವಕಾಶ ನೀಡಿತು.

(ದಿ ಮಾಡರ್ನ್ ಕಾರ್ಪೊರೇಷನ್ ಅಂಡ್ ಪ್ರೈವೆಟ್ ಪ್ರಾಪರ್ಟಿಯನ್ನು ನೋಡಿ. ಸ್ಯಾಂಟ ಕ್ಲಾರಾ ಕೌಂಟಿ v. ಸದರನ್ ಫೆಸಿಫಿಕ್ ರೇಲ್ ರೋಡ್ ಪ್ರಕರಣದ ಹೆಸರಾಂತ ತೀರ್ಪು, ಕಾರ್ಯನೀತಿ ರಚನೆಯ ಮೇಲೆ ಮತ್ತು ಉದಯಿಸಿದ್ದ ಆಧುನಿಕ ಕಾರ್ಪೋರೆಟ್ ಯುಗದ ಮೇಲೆ ಪ್ರಭಾವ ಬೀರಿತು.

20 ನೇ ಶತಮಾನದಲ್ಲಿ ಸ್ವಯಂ ಆಡಳಿತಕ್ಕೆ ಅವಕಾಶ ನೀಡುವ ಕಾನೂನು ವಿಶ್ವದಾದ್ಯಂತ ವ್ಯಾಪಕವಾಯಿತು. ಇದರಿಂದ ವಿಶ್ವಮಹಾಯುದ್ಧ I ರ ಮೊದಲು ಮತ್ತು ಅನಂತರ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಲು ಸಹಾಯವಾಯಿತು.

1980ರ ಪ್ರಾರಂಭದಲ್ಲಿ, ಸರ್ಕಾರಿ ಸ್ವಾಮ್ಯದ ದೊಡ್ಡ ದೊಡ್ಡ ಸಾರ್ವಜನಿಕ ಸೇವಾ ನಿಗಮಗಳು ಖಾಸಗೀಕರಣದತ್ತ ಸಾಗಿದವು. ಈ ಸಂದರ್ಭದಲ್ಲಿ ಸರ್ಕಾರದ ವಶದಲ್ಲಿರುವ ಸೇವೆಗಳು ಮತ್ತು ಉದ್ಯಮಗಳನ್ನು ಖಾಸಗಿ ನಿಗಮಗಳಿಗೆ ಮಾರಾಟದ ಮೂಲಕ ಹಸ್ತಾಂತರಿಸಲಾಯಿತು.

ಡೀರೆಗ್ಯುಲೇಷನ್[ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸುವಿಕೆ] (ಕಾರ್ಪೋರೆಟ್ ಚಟುವಟಿಕೆಯ ಮೇಲೆ ವಿಧಿಸಲಾದ ಕಟ್ಟಳೆಗಳನ್ನು ಕಡಿಮೆಮಾಡುವುದು.) ಇಲ್ಲಿ ಖಾಸಗೀಕರಣ ಕೂಡಾ ಹೆಚ್ಚಾಗಿ ಲೈಸ್ಸೆಸ್-ಫೇರ್, ಆರ್ಥಿಕ ವಲಯದಲ್ಲಿ ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವ ನೀತಿಯ ಭಾಗವಾಗಿಸುತ್ತದೆ.

ಯುದ್ಧದ ನಂತರ ಸಂಘಟಿತ ವ್ಯಾಪಾರಿ ಸಂಸ್ಥೆಗಳ ಅಭಿವೃದ್ಧಿಯ ಹಾದಿಯಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯಾಯಿತು.

ಈ ಬದಲಾವಣೆಯಲ್ಲಿ ದೊಡ್ಡ ದೊಡ್ಡ ನಿಗಮಗಳು ಅವುಗಳ ಕೈಗಾರಿಕೆಯ ನೆಲೆಯನ್ನು ಮತ್ತಷ್ಟು ವಿಸ್ತರಿಸಲು ಸಣ್ಣ ಸಣ್ಣ ನಿಗಮಗಳನ್ನು ಕೊಂಡುಕೊಂಡವು.

ಜಪಾನೀ ವ್ಯಾಪಾರ ಸಂಸ್ಥೆಗಳು ಕೈರೆಟ್ಸು ಎಂಬ ಸಮಾನ ಹಂತದ ಮಿಶ್ರ ಮಾದರಿಯನ್ನು ಅಭಿವೃದ್ಧಿ ಪಡಿಸಿದವು. ತರುವಾಯ ಇದನ್ನು ಇತರ ರಾಷ್ಟ್ರಗಳು ಅನುಸರಿಸಿದವು.

ಕಾರ್ಪೋರೆಟ್ ಕಾನೂನು

ನಿಗಮದ ಅಸ್ತಿತ್ವಕ್ಕೆ ವಿಶೇಷ ಕಾನೂನು ಕಾರ್ಯಚೌಕಟ್ಟಿನ ಅವಶ್ಯಕತೆ ಇರುತ್ತದೆ.

ಇಷ್ಟೇ ಅಲ್ಲದೇ ನಿಗಮಕ್ಕೆ ಕಾನೂನು ವ್ಯಕ್ತಿತ್ವ ನೀಡುವ ಮತ್ತು ಅದನ್ನು ಕಾಲ್ಪನಿಕ ವ್ಯಕ್ತಿ , ಕಾನೂನು ವ್ಯಕ್ತಿ ಅಥವಾ ನೀತಿ ಬದ್ಧ ವ್ಯಕ್ತಿ ಎಂಬಂತೆ ಕಾಣುವ ಕಾನೂನಿನ ಅಂಗದ ಅಗತ್ಯವಿರುತ್ತದೆ.

( ಸಹಜವಾದ ವ್ಯಕ್ತಿಗೆ ವ್ಯತಿರಿಕ್ತವಾಗಿ) ಕಾರ್ಪೋರೆಟ್ ಕಾನೂನು ಸಾಂಪ್ರದಾಯಿಕವಾಗಿ ನಿಗಮಗಳಿವೆ,

ಅವುಗಳದೇ ಆಸ್ತಿಯನ್ನು ಹೊಂದಲು,

ನಿರ್ಬಂಧಕ್ಕೊಳಪಟ್ಟ ಒಪ್ಪಂದಕ್ಕೆ ಸಹಿಹಾಕಲು ಮತ್ತು ಅದರ ಷೇರುದಾರರಿಂದ (ಕೆಲವೊಮ್ಮೆ “ಸದಸ್ಯರೆಂದು” ಸೂಚಿಸಲಾಗುವವರು) ಪ್ರತ್ಯೇಕವಾಗಿ ಅದರ ಸಾಮರ್ಥ್ಯಕ್ಕನುಗುಣವಾಗಿ ತೆರಿಗೆ ಪಾವತಿಸಲು ಅಧಿಕಾರ ನೀಡುತ್ತದೆ.

ಲಾರ್ಡ್ ಚಾನ್ಸಲರ್ ಆದ ಹ್ಯಾಲ್ಡೇನ್ ರವರ ಪ್ರಕಾರ,ಕಾನೂನಿನ ವ್ಯಕ್ತಿತ್ವವು ಎರಡು ಆರ್ಥಿಕ ತೊಡಕುಗಳನ್ನು ಹೊಂದಿದೆ.

ಮೊದಲನೆಯದು, ದಿವಾಳಿಯ ಸಂದರ್ಭದಲ್ಲಿ ಕಾರ್ಪೋರೆಟ್ ಆಸ್ತಿಗಳ ಮೇಲೆ ಸಾಲದಾತರಿಗೆ (ಷೇರುದಾರರು ಅಥವಾ ನೌಕರರ ಪಾಲು ನೀಡುವ ಕುರಿತು ವಿರೋಧವಿದೆ.) ಆದ್ಯತೆ ನೀಡುತ್ತದೆ.

ಎರಡನೆಯದು, ಕಾರ್ಪೋರೆಟ್ ಸೊತ್ತನ್ನು ಅದರ ಷೇರುದಾರರು ಹಿಂದಕ್ಕೆ ತೆಗೆದುಕೊಳ್ಳುವಂತಿಲ್ಲ. ಅಲ್ಲದೇ ವ್ಯವಹಾರ ಸಂಸ್ಥೆಯ ಸೊತ್ತನ್ನು ಆ ಸಂಸ್ಥೆಯ ಷೇರುದಾರರ ವೈಯಕ್ತಿಕ, ಸಾಲದಾತರೂ ಕೂಡ ಹಿಂದಕ್ಕೆ ತೆಗೆದುಕೊಳ್ಳುವಂತಿಲ್ಲ.

ಇದನ್ನು ಗುತ್ತಿಗೆ ಮಾನದಂಡ ದರ್ಜೆ ಕಾನೂನಿನ ಮೂಲಕ ನಕಲು ಮಾಡಬಾರದೆಂಬ ಉದ್ದೇಶದಿಂದ ಎರಡನೆಯ ಸೂಚನೆಗೆ ವಿಶೇಷ ಶಾಸಕಾಂಗದ ಮತ್ತು ವಿಶೇಷ ಕಾನೂನು ಕಾರ್ಯಚೌಕಟ್ಟಿನ ಅವಶ್ಯಕತೆ ಇದೆ.

ಸಂಘಟನೆಗಳಿಗೆ ಅತ್ಯಂತ ಅನುಕೂಲಕರವಾಗಿರುವ ನಿಯಂತ್ರಣ ಕಟ್ಟಳೆಗಳು ಕೆಳಕಂಡಂತಿವೆ:

ಕಟ್ಟಳೆನಿಯಂತ್ರಣ ವಿವರಣೆ
ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಅಥವಾ ಏಕಮಾತ್ರ ಒಡೆತನದ ಹೊರತಾಗಿ, ಆಧುನಿಕ ವ್ಯಾಪಾರ ನಿಗಮದ ಷೇರುದಾರರು, ನಿಗಮದ ಸಾಲಕ್ಕೆ ಮತ್ತು ಕಟ್ಟುಪಾಡುಗಳಿಗೆ “ಸೀಮಿತ” ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.

ಈ ಕಾರಣದಿಂದಾಗಿ ಅವರು ನಿಗಮಕ್ಕೆ ಕೊಡುಗೆಯಾಗಿ ಅಥವಾ ಷೇರು ಗಳಲ್ಲಿ ತೊಡಗಿಸಿದ ಮೊತ್ತಕ್ಕಿಂತ ಹೆಚ್ಚು ನಷ್ಟಕ್ಕೆ ಗುರಿಯಾಗುವಂತಿಲ್ಲ.

ಇದು ಷೇರುದಾರರ ಪ್ರಾಥಮಿಕ ಲಾಭಕ್ಕಾಗಿರುವ ನಿಗಮಗಳು “ಅವುಗಳ ವೆಚ್ಚವನ್ನು ಸಮಾಜೀಕರಿಸುವಂತೆ” ಮಾಡುತ್ತದೆ; ಈ ಖರ್ಚು-ವೆಚ್ಚವನ್ನು ಸಮಾಜೀಕರಿಸುವುದೆಂದರೆ ಅದನ್ನು ಸಮಾಜಕ್ಕೆ ಸಾರ್ವತ್ರಿಕವಾಗಿ ಬಹಿರಂಗ ಪಡಿಸುವುದು.

ಇದು ವ್ಯಾಪಾರದಲ್ಲಿರುವ ಷೇರುದಾರರಂತೆ ನಿಗಮದ ಸಾಲದಾತರನ್ನು ಷೇರುದಾರರ ಪಟ್ಟಿಯಲ್ಲಿ ಪರಿಗಣಿಸಲಾಗದು. ಈ ಮೂಲಕ ನಿಗಮದ ಷೇರುಗಳಲ್ಲಿ ಅಜ್ಞಾತ ವ್ಯಾಪಾರಕ್ಕೆ ಅವಕಾಶ ನೀಡುತ್ತದೆ ಎಂಬುದು ಇದಕ್ಕಿರುವ ಆರ್ಥಿಕ ಸಕಾರಣ ಹೇಳಿಕೆಯಾಗಿದೆ.

ಸೀಮಿತ ಹೊಣೆಗಾರಿಕೆ ಇಲ್ಲದಿದ್ದರೆ, ಸಾಲದಾತ ಬಹುಶಃ ಯಾವುದೇ ಷೇರನ್ನು ಕೊಳ್ಳುಗನಿಗೆ ಮಾರಲು ಬಿಡುವುದಿಲ್ಲ. ಕೊನೆಯ ಪಕ್ಷ ಮಾರಾಟಗಾರನಿಗೂ ಕೊಡುವಂತಿಲ್ಲ. ಸೀಮಿತ ಹೊಣೆಗಾರಿಕೆ ನಿಗಮಗಳಿಗೆ ಮುಂದೆ ಸ್ಟಾಕ್ ನ ಅನೇಕ ಷೇರುದಾರರಿಂದ ಬಂಡವಾಳ ಒಟ್ಟುಗೂಡಿಸಿ ಅವುಗಳ ಉದ್ಯಮಗಳ ಮೇಲೆ ಬೃಹತ್ ಪ್ರಮಾಣದಲ್ಲಿ ಹೂಡಿಕೆಗೆ ಅವಕಾಶ ನೀಡುತ್ತದೆ.

ಸೀಮಿತ ಹೊಣೆಗಾರಿಕೆಯು, ಷೇರುದಾರನಿಗೆ ಕಂಪನಿಯಲ್ಲಿ ಕಳೆದುಕೊಳ್ಳಬಹುದಾದ ಮೊತ್ತದ ಪ್ರಮಾಣ ಕಡಿಮೆ ಮಾಡುತ್ತದೆ. ಇದು ಸಂಭವನೀಯ,ಪ್ರಬಲ ಷೇರುದಾರರ ಆಕರ್ಷಣೆ ಹೆಚ್ಚಿಸುತ್ತದೆ. ಇದರಿಂದಾಗಿ ಇಚ್ಛಿತ ಷೇರುದಾರರ ಸಂಖ್ಯೆ ಮತ್ತು ಬಂಡವಾಳ ಹೂಡುವ ಮೊತ್ತ ಹೆಚ್ಚುತ್ತದೆ.

ಅದೇನೇ ಆದರೂ ಕೆಲವು ನ್ಯಾಯವ್ಯಾಪ್ತಿ ಕ್ಷೇತ್ರಗಳು ಮತ್ತೊಂದು ವಿಧದ ನಿಗಮಕ್ಕೂ ಕೂಡ ಅವಕಾಶ ನೀಡುತ್ತವೆ. ಇದರಲ್ಲಿ ಷೇರುದಾರರ’ ಹೊಣೆಗಾರಿಕೆ ಅಪರಿಮಿತವಾಗಿರುತ್ತದೆ. ಉದಾಹರಣೆಗೆ ಕೆನಡಾದ ಎರಡು ಪ್ರಾಂತ್ಯಗಳಲ್ಲಿರುವ ಅಪರಿಮಿತ ಹೊಣೆಗಾರಿಕೆ ನಿಗಮ ಮತ್ತು ಇಂಗ್ಲೆಂಡ್ ನಲ್ಲಿರುವ ಅನ್ ಲಿಮಿಟೆಡ್ ಕಂಪನಿ.

ಶಾಶ್ವತ ಜೀವಮಾನ ಇದರ ಮತ್ತೊಂದು ಅನುಕೂಲವೆಂದರೆ ನಿಗಮದ ಆಸ್ತಿಗಳು ಮತ್ತು ರಚನಾ ವ್ಯವಸ್ಥೆ ಅದರ ಷೇರುದಾರರು ಮತ್ತು ಬಾಂಡುದಾರರ ಬದುಕಿನ ಅವಧಿಯನ್ನು ಮೀರಿ ಮುಂದುವರೆಯುತ್ತವೆ. ಇದು ಬಂಡವಾಳದ ಸ್ಥಿರತೆ ಮತ್ತು ಶೇಖರಣೆಗೆ ಅವಕಾಶ ನೀಡುತ್ತದೆ.

ಇದರಿಂದಾಗಿ ಕಾರ್ಪೋರೆಟ್ ನ ಸೊತ್ತುಗಳ ವಿಘಟನೆಮತ್ತು ಹಂಚಿಹೋಗುವುದರ ಬದಲು ಬೃಹತ್ ಪ್ರಮಾಣದ ಮತ್ತು ಸುದೀರ್ಘ ಯೋಜನೆಗಳ ಮೇಲೆ ಬಂಡವಾಳ ಹೂಡಲು ಹಣಕಾಸು ದೊರೆತಂತಾಗುತ್ತದೆ.

ಇದು ಮಧ್ಯಕಾಲೀನಯುಗದ ಸಮಯದಲ್ಲಿ ಕೂಡ ಅತ್ಯಂತ ಮುಖ್ಯವಾಗಿತ್ತು. ಈ ಕಾಲದಲ್ಲಿ ಚರ್ಚ್ ಗೆ(ನಿಗಮ) ಭೂಮಿಯನ್ನು ದಾನವಾಗಿ ಕೊಡಲಾಗುತ್ತಿತ್ತು.ಅದು ತೆರಿಗೆ ಆಕರಣೆಯಿಂದ ಮುಕ್ತವಾಗಿತ್ತು.

ಆದರೆ ಭೂಹಿಡುವಳಿದಾರನ ಮರಣದ ನಂತರವೂ ರಾಜನಿಗೆ ಅಥವಾ ಭೂಮಾಲಿಕನಿಗೆ ಸೇವಾ ಉಂಬಳಿ ನೀಡಬೇಕಾಗುತಿತ್ತು. ಇದನ್ನು ಕುರಿತಂತೆ ಮಾರ್ಟ್ ಮ್ಯೇನ್ ನ ಕಾನೂನು ನೋಡಿ. (ಅದೇನೇ ಆದರೂ, ಕಾನೂನು ಘಟಕದಂತಿರುವ ನಿಗಮದ ಅಸ್ತಿತ್ವದ ಅಂತ್ಯಕ್ಕೆ, ಸರ್ಕಾರಿ ಅಧಿಕಾರದ ಮೂಲಕ ಕೊನೆ ಹೇಳಬಹುದು.

ಆದರೆ ಕಂಪನಿ ಕಾನೂನನ್ನು ಉಂಲ್ಲಘಿಸಿದಾಗ ಮಾತ್ರ ಇದು ನಡೆಯುತ್ತದೆ. ಉದಾಹರಣೆಗೆ, ವಾರ್ಷಿಕ ಅಗತ್ಯತೆಗಳನ್ನು ಪೂರೈಸುವಲ್ಲಿ ವಿಫಲವಾದಾಗ, ಅಥವಾ ಕೆಲವೊಂದು ಪರಿಸ್ಥಿತಿಗಳಲ್ಲಿ ವಿಸರ್ಜಿಸಬೇಕೆಂದು ಕಂಪನಿ ವಿನಂತಿಸಿಕೊಂಡಾಗ.)

ಒಡೆತನ ಮತ್ತು ನಿಯಂತ್ರಣ

ವ್ಯಕ್ತಿಗಳು ಮತ್ತು ವ್ಯಕ್ತಿಗಳಿಂದ ರಚಿತ ಇತರ ಕಾನೂನು ಘಟಕಗಳು (ಉದಾಹರಣೆಗೆ ಟ್ರಸ್ಟ್ಸ್ ಮತ್ತು ಇತರ ನಿಗಮಗಳು) ಸದಸ್ಯರ ಮತ ಚಲಾಯಿಸುವ ಹಕ್ಕನ್ನು ಪಡೆದಿರುತ್ತವೆ. ಅಥವಾ ಮಂಡಳಿಯಿಂದ ಒಮ್ಮೆ ಘೋಷಿಸಿದ ಲಾಭಾಂಶ ಪಡೆಯುವ ಹಕ್ಕನ್ನು ಸದಸ್ಯರು ಪಡೆದುಕೊಂಡಿರುತ್ತಾರೆ.

ಲಾಭ ಉದ್ದೇಶಿತ ನಿಗಮಗಳ ವಿಷಯದಲ್ಲಿ, ಈ ಮತದಾರರು ಸ್ಟಾಕ್ ನ ಷೇರುಗಳನ್ನು ಹೊಂದಿರುತ್ತಾರೆ. ಈ ಕಾರಣಕ್ಕಾಗಿ ಅವರನ್ನು ಷೇರುದಾರರು ಅಥವಾ ಸ್ಟಾಕ್ ನ ಪಾಲುದಾರರು ಎಂದು ಕರೆಯಲಾಗುತ್ತದೆ.  ಯಾವಾಗ ಸ್ಟಾಕ್ ನ ಶೇರುದಾರರು ಇಲ್ಲದಿದ್ದ ಪಕ್ಷದಲ್ಲಿ, ನಿಗಮವು ನಾನ್ ಸ್ಟಾಕ್ ನಿಗಮ (ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ,  “ಎ ಕಂಪನಿ ಲಿಮಿಟೆಡ್ ಬೈ ಗ್ಯಾರಂಟಿ”)ದ ಈ ರೂಪದಲ್ಲಿ ಅಸ್ತಿತ್ವದಲ್ಲಿರಬಹುದು.

ಅಲ್ಲದೇ ಸ್ಟಾಕ್ ಮಾಲೀಕರನ್ನು ಇಟ್ಟುಕೊಳ್ಳುವ ಬದಲು, ನಿಗಮ ಅದರ ಕಾರ್ಯಾಚರಣೆಗಳಿಗೆ ಮತಚಲಾಯಿಸುವ ಹಕ್ಕನ್ನು ಪಡೆದಿರುವ ಸದಸ್ಯರನ್ನು ಹೊಂದಿರುತ್ತದೆ.  ಕೇವಲ ಮತಚಲಾಯಿಸುವ ಸದಸ್ಯರು ಮಾತ್ರ “ನಿಗಮ”ದ ಸದಸ್ಯರಲ್ಲ. ನಾನ್ ಸ್ಟಾಕ್ ನಿಗಮದ ಸದಸ್ಯರನ್ನು ಸಂಘಟನಾ ಅನುಚ್ಛೇದದಲ್ಲಿ ಗುರುತಿಸಲಾಗಿದೆ. (UK ದಲ್ಲಿ ಇದಕ್ಕೆ ಸಮರೂಪದ: ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ );

ಅಲ್ಲದೇ ಸದಸ್ಯ ವರ್ಗವನ್ನು ಈ ಕೆಳಕಂಡ ಹೆಸರುಗಳಲ್ಲಿ ಗುರುತಿಸಲಾಗುತ್ತದೆ: “ಟ್ರಸ್ಟೀ(ಧರ್ಮದರ್ಶಿ),” “ಆಕ್ಟೀವ್ (ಕ್ರಿಯಾಶೀಲ),” “ಅಸೊಸಿಯೇಟ್(ಸಹೋದ್ಯೋಗಿ),” ಮತ್ತು/ಅಥವಾ “ಗೌರವ ಸದಸ್ಯ.” ಆದಾಗ್ಯೂ ಇದರಲ್ಲಿರುವ ಪ್ರತಿಯೊಬ್ಬರನ್ನೂ ನಿಗಮದ ಅನುಚ್ಛೇದದಲ್ಲಿ ನಿಗಮದ ಸದಸ್ಯರೆಂದು ಪಟ್ಟಿ ಮಾಡಲಾಗಿದೆ. ಸಂಘಟನೆಯ ಅನುಚ್ಛೇದಗಳು ಉದಾಹರಣೆಗೆ “ನಿಗಮ”ವನ್ನು “ದಿ ABC ಕ್ಲಬ್, Inc.” ನಂತಹ ಮತ್ತೊಂದು ಹೆಸರಿನಿಂದ ವ್ಯಾಖ್ಯಾನಿಸಬಹುದು.

“ನಿಗಮ” ಮತ್ತು “ದಿ ABC ಕ್ಲಬ್, Inc.” ಅಥವಾ ಕೇವಲ “ದಿ ಕ್ಲಬ್” ಗಳನ್ನು ಸಮಾನಾರ್ಥಕಗಳೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಅವುಗಳು ಸಂಘಟನೆಯ ಅನುಚ್ಛೇದಗಳಲ್ಲಿ ಅಥವಾ ಉಪ ನಿಂಬಂಧನೆಗಳಲ್ಲಿ ಎಲ್ಲಾದರೂ ಕಾಣಿಸಿದ್ದರೆ ಅವುಗಳನ್ನು ಅದಲು ಬದಲು ಮಾಡಿಕೊಳ್ಳಬಹುದೆಂದು ಪರಿಗಣಿಸಲಾಗಿದೆ. ನಾನ್ ಸ್ಟಾಕ್ ನಿಗಮವನ್ನು ಲಾಭಕ್ಕಾಗಿ ನಡೆಸದಿದ್ದರೆ ಅದನ್ನು ಲಾಭರಹಿತ ಉದ್ದೇಶದ ನಾಟ್ ಫಾರ್ ಪ್ರಾಫಿಟ್ ನಿಗಮವೆಂದು ಕರೆಯಲಾಗುತ್ತದೆ.

ಈ ಎರಡೂ ವಿಭಾಗಗಳಲ್ಲಿ, ನಿಗಮ ವಿಶಿಷ್ಟ ಕಾನೂನಿನಡಿ ಒಟ್ಟುಗೂಡಿದ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ.

ಅಲ್ಲದೇ ಸಂಘಟಿತವಲ್ಲದ ಸಾಮಾನ್ಯ ವ್ಯಾಪಾರಗಳಿಗೆ,   ಸ್ವಯಂಸೇವಾ ಸಂಘಗಳಿಗೆ, ಅಥವಾ ವೈಯಕ್ತಿಕ ಗುಂಪುಗಳಿಗೆ ಒದಗಿಸದ ವಿಶೇಷ ಸವಲತ್ತುಗಳನ್ನು ಕೂಡ ಒಳಗೊಂಡಿರುತ್ತದೆ.

ವಿಶ್ವದಲ್ಲಿ ವಿಶಾಲವಾದ ಎರಡು ರೀತಿಯ ಕಾರ್ಪೋರೆಟ್ ವರ್ಗಗಳ ಆಡಳಿತ ಸ್ವರೂಪಗಳಿವೆ. ವಿಶ್ವದ ಬಹುತೇಕ ಕಡೆ, ನಿರ್ದೇಶಕರ ಮಂಡಳಿಯೇ ನಿಗಮದ ಆಡಳಿತ ನಿಯಂತ್ರಣವನ್ನು ನಿರ್ಣಯಿಸುತ್ತದೆ. ಇದು ಷೇರುದಾರರಿಂದ ಆಯ್ಕೆಯಾದ ಮಂಡಳಿಯಾಗಿದೆ.

ಜರ್ಮನಿಯಂತಹ ಕೆಲವೊಂದು ನ್ಯಾಯವ್ಯಾಪ್ತಿ ಕ್ಷೇತ್ರಗಳಲ್ಲಿ, ನಿಗಮದ ನಿಯಂತ್ರಣವನ್ನು ಮೇಲ್ವಿಚಾರಣೆಯ ಮಂಡಳಿಯೊಂದಿಗೆ ಎರಡು ಪಂಕ್ತಿಗಳಲ್ಲಿ ವಿಂಗಡಿಸಲಾಗಿದೆ.

ಈ ಮೇಲ್ವಿಚಾರಣಾ ಮಂಡಳಿ ಆಡಳಿತ ಮಂಡಳಿಯನ್ನು ಆಯ್ಕೆಮಾಡುತ್ತದೆ. ಜರ್ಮನಿಯು ಕೂಡ ಕೋ-ಡಿಟರ್ಮಿನೇಷನ್ (ಸಹನಿರ್ಣಯ) ಎಂದು ಕರೆಯಲಾಗುವ ಅಪರೂಪದ ವ್ಯವಸ್ಥೆ ಹೊಂದಿದೆ.

ಈ ಆಡಳಿತ ವ್ಯವಸ್ಥೆಯಲ್ಲಿ ಮೇಲ್ವಿಚಾರಣೆ ಮಂಡಳಿಯು ಅರ್ಧಭಾಗದಷ್ಟು ನೌಕರರ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ನಿಗಮದ ವಹಿವಾಟುಗಳನ್ನು ನೋಡಿಕೊಳ್ಳಲು,CEO, ಅಧ್ಯಕ್ಷ, ಖಜಾಂಜಿ, ಮತ್ತು ಇತರ ನಾಮಾಂಕಿತ ಅಧಿಕಾರಿಗಳನ್ನು ಸಾಮಾನ್ಯವಾಗಿ ಮಂಡಳಿಯು ಆಯ್ಕೆ ಮಾಡುತ್ತದೆ.

ಇದಕ್ಕೂ ಹೆಚ್ಚಾಗಿ ಷೇರುದಾರರ ಸೀಮಿತ ಹೊಣೆಗಾರಿಕೆಯ ಪ್ರಭಾವದ ಜೊತೆಯಲ್ಲಿ,ನಿಗಮಗಳನ್ನು ಸಾಲದಾತರು ನಿಯಂತ್ರಿಸಬಹುದಾಗಿದೆ. (ಭಾಗದಲ್ಲಿ), ಉದಾಹರಣೆಗೆ ಬ್ಯಾಂಕ್ ಗಳು. ನಿಗಮಕ್ಕೆ ಸಾಲಕೊಡುವುದರ ಪ್ರತಿಯಾಗಿ ಸಾಲದಾತರು, ನಿರ್ದೇಶಕರ ಮಂಡಳಿಯಲ್ಲಿ ಒಂದು ಅಥವಾ ಎರಡು ಸ್ಥಾನಗಳನ್ನು ಕೇಳಬಹುದು.

ಇದರ ಜೊತೆಯಲ್ಲಿ ಅದರ ಸದಸ್ಯರು ಹೊಂದಿರುವ ನಿಯಂತ್ರಣ ಹಕ್ಕುಗಳ ಬೇಡಿಕೆಯನ್ನೂ ಮುಂದಿಡಬಹುದು. ಜರ್ಮನಿ ಮತ್ತು ಜಪಾನ್ ನಂತಹ ಕೆಲವು ನ್ಯಾಯ ವ್ಯಾಪ್ತಿಕ್ಷೇತ್ರಗಳ, ನಿಗಮಗಳಲ್ಲಿ ಬ್ಯಾಂಕ್ ಗಳೂ ಷೇರುಗಳನ್ನು ಹೊಂದಿರಬೇಕೆಂಬುದು ಪ್ರಮಾಣಕವಾಗಿದೆ.

ಆದರೆ ಅಮೇರಿಕ ಸಂಯುಕ್ತ ಸಂಸ್ಥಾನದಂತಹ ಇತರ ನ್ಯಾಯ ವ್ಯಾಪ್ತಿಕ್ಷೇತ್ರಗಳಲ್ಲಿ 1933 ರ ಗ್ಲಾಸ್-ಸ್ಟಿಗಲ್ ಕಾಯ್ದೆಯಡಿ(ಬ್ಯಾಂಕ್ ಮತ್ತು ವಿಮೆಗಳ ನಿಯಂತ್ರಣ ನಿಯಮ,

ಈ ಕಾನೂನನ್ನು 1999 ರಲ್ಲಿ ಹಿಂಪಡೆಯಲಾಗಿದೆ) ಹಾಗು ಇಂಗ್ಲೆಂಡ್ ನಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ನಡಿ, ಬಾಹ್ಯ ನಿಗಮಗಳಲ್ಲಿ ಷೇರುಗಳನ್ನು ಹೊಂದುವಂತಿಲ್ಲವೆಂದು ಈ ವಲಯದಿಂದ ಬ್ಯಾಂಕುಗಳನ್ನು ನಿಷೇಧಿಸಲಾಗಿದೆ. ಆದರೂ, 1999 ರಿಂದ U. S. ನಲ್ಲಿ ವಾಣಿಜ್ಯ ಬ್ಯಾಂಕ್ ಗಳಿಗೆ ಪ್ರತ್ಯೇಕ ಅಂಗಸಂಸ್ಥೆಗಳ ಮೂಲಕ,

ಬಂಡವಾಳ ಹೂಡಬಹುದಾದ ಬ್ಯಾಂಕ್ ವಹಿವಾಟನ್ನು ಪ್ರವೇಶಿಸಲು ಅವಕಾಶ ನೀಡಲಾಯಿತು. ವಾಣಿಜ್ಯ ಬ್ಯಾಂಕ್ ಗಳಿಗೆ ಈ ಅವಕಾಶವನ್ನು ಫೈನ್ಯಾನ್ಷಿಯಲ್ ಸರ್ವೀಸ್ ಮಾಡ್ರನೈಸೇಷನ್ ಕಾಯ್ದೆ ಅಥವಾ ಗ್ರಾಮ್-ಲೀಚ್-ಬಿಲ್ಲೆ ಕಾಯ್ದೆಯಡಿ ನೀಡಲಾಯಿತು.

1997 ರಿಂದ U. K.ಯಲ್ಲಿರುವ ಬ್ಯಾಂಕುಗಳನ್ನು ಆರ್ಥಿಕ ಸೇವಾ ಪ್ರಾಧಿಕಾರ ನೋಡಿಕೊಳ್ಳುತ್ತಿದೆ; ಇದರ ನಿಯಮಗಳು ವಿಮಾ, ವಾಣಿಜ್ಯ ಮತ್ತು ಹಣಕಾಸಿನ ಬ್ಯಾಂಕ್ ವ್ಯವಸ್ಥೆಯನ್ನು ಒಳಗೊಂಡಂತೆ ಎಲ್ಲಾ ಹಣಕಾಸು ಸಂಸ್ಥೆಗಳನ್ನು ನಡೆಸಲು ಸ್ಥಳೀಯ ಮತ್ತು ಹೊರಗಿನ ಬಂಡವಾಳಕ್ಕೆ ಅವಕಾಶ ನೀಡುವಲ್ಲಿ ನಿರ್ಬಂಧಿತವಾಗಿರಲಿಲ್ಲ.

ಇನ್ನೂ ನಷ್ಟಕ್ಕೆ ದೂರದಲ್ಲಿರುವ ಲಾಭ-ಉದ್ದೇಶಿತ ನಿಗಮವನ್ನು ವಿಸರ್ಜಿಸಬೇಕೆಂಬ ಮಂಡಳಿಯ ನಿರ್ಧಾರದ ಮೇಲೆ, ಉಳಿದ ಭಾಗಾಂಶವನ್ನು ಷೇರುದಾರರು ಸಾಲದಾತರು ಹಾಗು ನಿಗಮದೆಡೆಗಿನ ಆಸಕ್ತಿಯಿಂದಾಗಿ ಇತರರು ಪಡೆದುಕೊಳ್ಳುತ್ತಾರೆ. ಅದೇನೇ ಆದರೂ ಷೇರುದಾರರು ಸೀಮಿತ ಹೊಣೆಗಾರಿಕೆಯ ಲಾಭ ಪಡೆದುಕೊಳ್ಳುತ್ತಾರೆ. ಆದ್ದರಿಂದ ಅವರು ತಾವು ಹೂಡಿಕೆ ಮಾಡಿದ ಬಂಡವಾಳಕ್ಕೆ ಮಾತ್ರ ಬಾಧ್ಯರಾಗಿರುತ್ತಾರೆ.

ರಚನೆ

ಐತಿಹಾಸಿಕವಾಗಿ, ನಿಗಮಗಳನ್ನು ಸರ್ಕಾರ ನೀಡಿದ ಶಾಸನದ ಅನುಮತಿ, ಅಧಿಕಾರಪತ್ರದಿಂದ ರಚಿಸಲಾಗುತ್ತದೆ. ಇಂದು, ನಿಗಮಗಳನ್ನು ಸಾಮಾನ್ಯವಾಗಿ ರಾಜ್ಯ, ಪ್ರಾಂತ್ಯ ಅಥವಾ ರಾಷ್ಟ್ರೀಯ ಸರ್ಕಾರದೊಂದಿಗೆ ನೋಂದಾಯಿಸಲಾಗುತ್ತದೆ. ಅಲ್ಲದೇ ಇವುಗಳನ್ನು ಆ ಸರ್ಕಾರ ರಚಿಸಿದ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ.

ನೊಂದಣಿಯು, ಸೀಮಿತ ಹೊಣೆಗಾರಿಕೆಯನ್ನು ಸ್ವೀಕರಿಸಲು ನಿಗಮಕ್ಕೆ ಇರಲೇ ಬೇಕಾದ ಪ್ರಧಾನ ಪೂರ್ವಾಪೇಕ್ಷಿತವಾಗಿದೆ. ಕಾನೂನು ಕೆಲವೊಮ್ಮೆ ನಿಗಮ, ಅದರ ಪ್ರಮುಖ ಅಭಿಪ್ರಾಯ ಮಂಡಿಸುವ ಮತ್ತು ನೊಂದಾಯಿತ ಪ್ರತಿನಿಧಿಯನ್ನು ನೇಮಿಸಬೇಕೆಂದು ಕೇಳುತ್ತದೆ.(ಕಾರ್ಯವಿಧಾನದ ಕಾನೂನು ಸೇವೆ ಪಡೆಯಲು ಉದ್ದೇಶಿತ ಒಬ್ಬ ವ್ಯಕ್ತಿ ಅಥವಾ ಒಂದು ಕಂಪನಿ).

ಇಷ್ಟೇ ಅಲ್ಲದೇ ಇದು ಪ್ರತಿನಿಧಿ ಅಥವಾ ನಿಗಮದ ಇತರ ಕಾನೂನಿನ ಪ್ರತಿನಿಧಿಯನ್ನು ಕೂಡ ನೇಮಿಸಬೇಕೆಂದು ಕೇಳುತ್ತದೆ.

ಸಾಮಾನ್ಯವಾಗಿ ನಿಗಮ, ಅದರ ಸಾರ್ವತ್ರಿಕ ಗುಣಲಕ್ಷಣಗಳ ಬಗ್ಗೆ ಮತ್ತು ಎಷ್ಟು ಮೊತ್ತದ ಸ್ಟಾಕ್ ಅನ್ನು ಬಿಡುಗಡೆ ಮಾಡಲು ಅಧಿಕಾರವಿದೆ ಎಂಬುದ ಬಗ್ಗೆ ಹಾಗು ನಿರ್ದೇಶಕರ ಹೆಸರುಗಳು ಮತ್ತು ವಿಳಾಸದ ಬಗ್ಗೆ ಮಾಹಿತಿ ನೀಡುವ ಮೂಲಕ ಸರ್ಕಾರದೊಂದಿಗೆ ಆರ್ಟಿಕಲ್ಸ್ ಆಫ್ ಇನ್ ಕಾರ್ಪೊರೇಷನ್ ಅನ್ನು ದಾಖಲಿಸುತ್ತದೆ.

ಒಮ್ಮೆ ಈ ಅನುಚ್ಛೇದನಗಳಿಗೆ ಒಪ್ಪಿಗೆ ದೊರೆತ ನಂತರ ನಿಗಮದ ನಿರ್ದೇಶಕರು ನಿಗಮದ ಆಂತರಿಕ ಆಡಳಿತ ನಿಯಂತ್ರಿಸಲು ಅಗತ್ಯ ಉಪ ನಿಬಂಧನೆಗಳನ್ನು ಸಿದ್ಧಪಡಿಸುವ ಅಗತ್ಯವಿರುತ್ತದೆ. ಉದಾಹರಣೆಗೆ , ಸಭೆಯ ಕಾರ್ಯವಿಧಾನಗಳು ಮತ್ತು ಅಧಿಕಾರಿಗಳ ಸ್ಥಾನ.

ನಿಗಮ ಯಾವ ನ್ಯಾಯ ಕ್ಷೇತ್ರದಲ್ಲಿ ಅದರ ಕಾರ್ಯಾಚರಣೆ ನಡೆಸುತ್ತದೆಯೋ, ಆ ನ್ಯಾಯಕ್ಷೇತ್ರದ ಕಾನೂನು, ನಿಗಮದ ಆಂತರಿಕ ವ್ಯವಹಾರ ಮತ್ತು ಅದರ ಹಣಕಾಸಿನ ವ್ಯವಹಾರವನ್ನು ನಿಯಂತ್ರಿಸುತ್ತದೆ.

ಒಂದು ವೇಳೆ ನಿಗಮವನ್ನು ಅದರ ತವರು ರಾಜ್ಯದ ಬದಲು ಹೊರವಲಯದಲ್ಲಿ ನಡೆಸುತ್ತಿದ್ದರೆ, ಆಗ ಅದು ಇತರ ಸರ್ಕಾರಗಳೊಂದಿಗೆ ಫಾರೀನ್ ಕಾರ್ಪೊರೇಷನ್(ವಿದೇಶೀಯ) ಎಂದು ನೊಂದಾಯಿಸಿಕೊಳ್ಳಬೇಕು.

ಅಲ್ಲದೇ ಉದ್ಯೋಗ, ಅಪರಾಧಗಳು, ಒಪ್ಪಂದಗಳು, ಮೊಕದ್ದಮೆಗಳು ಮತ್ತು ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳು ಅದರ ಆತಿಥೇಯ (ರಾಜ್ಯ) ರಾಷ್ಟ್ರದ ಕಾನೂನಿಗೆ ಒಳಪಟ್ಟಿರುತ್ತವೆ.

ನಾಮಾಂಕಿತ ಅಥವಾ ಹೆಸರು ಅಥವಾ ಅಭಿಧಾನ

ನಿಗಮಗಳು ಸಾಮಾನ್ಯವಾಗಿ ವಿಶಿಷ್ಟ ಹೆಸರುಗಳನ್ನು ಹೊಂದಿರುತ್ತವೆ. ಐತಿಹಾಸಿಕವಾಗಿ, ಕೆಲವು ನಿಗಮಗಳಿಗೆ ಅವುಗಳ ಸದಸ್ಯತ್ವ ಸೂಚಿತ ಹೆಸರಿಡಲಾಗುತ್ತದೆ: ಉದಾಹರಣೆಗೆ, “ಅಧ್ಯಕ್ಷರು ಮತ್ತು ಹಾರ್ವರ್ಡ್ ಕಾಲೇಜಿನ ಫೆಲೋ(ಹಿರಿಯ ಸದಸ್ಯರು).”

ಇತ್ತೀಚಿನ ದಿನಗಳಲ್ಲಿ, ಬಹುಪಾಲು ನ್ಯಾಯ ಕ್ಷೇತ್ರಗಳಲ್ಲಿರುವ ನಿಗಮಗಳು ವಿಭಿನ್ನ ಹೆಸರುಗಳನ್ನು ಹೊಂದಿರುತ್ತವೆ. ಇಂತಹ ಹೆಸರುಗಳು ಅವರ ಸದಸ್ಯತ್ವ ಸೂಚಿಸಬೇಕೆಂದಿಲ್ಲ.

ಕೆನಡಾದಲ್ಲಿ, ಈ ಸಾಧ್ಯತೆ ವ್ಯತಿರಿಕ್ತದ ತಾರ್ಕಿಕತೆ ದಾಟಿತು: ಕೆನಡಾದ ಅನೇಕ ಸಣ್ಣ ಪುಟ್ಟ ನಿಗಮಗಳು ಯಾವ ಹೆಸರನ್ನು ಕೂಡ ಹೊಂದಿಲ್ಲ. ಅವುಗಳ ಪ್ರಾವಿನ್ಷಲ್ ಸೇಲ್ಸ್ ಟ್ಯಾಕ್ಸ್ ನೋಂದಣಿ ಗುರುತಿನ ಆಧಾರದ ಮೇಲೆ ಕೇವಲ ಸಂಖ್ಯೆಗಳನ್ನು ಮಾತ್ರ ಹೊಂದಿವೆ. (ಉದಾಹರಣೆಗೆ, “12345678 ಒಂಟ್ಯಾರಿಯೊ ಲಿಮಿಟೆಡ್”).

ಬಹುತೇಕ ರಾಷ್ಟ್ರಗಳಲ್ಲಿ, ಕಾರ್ಪೋರೆಟ್ ಹೆಸರುಗಳು “ನಿಗಮ” ಎಂಬ ಪದವನ್ನು ಒಳಗೊಂಡಿರುತ್ತವೆ ಅಥವಾ ಆ ಘಟಕದ ಕಾರ್ಪೋರೆಟ್ ಸ್ಥಾನಮಾನ ಸೂಚಿಸುವ ಸಂಕ್ಷೇಪವನ್ನು ಒಳಗೊಂಡಿರುತ್ತವೆ.(ಉದಾಹರಣೆಗೆ.

“ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಇನ್ ಕಾರ್ಪೊರೇಟೆಡ್” ಅಥವಾ “Inc.”), ಅಥವಾ ಅದರ ಸದಸ್ಯರ ಸೀಮಿತ ಹೊಣೆಗಾರಿಕೆ ಒಳಗೊಂಡಿರುತ್ತವೆ. (ಉದಾಹರಣೆಗೆ “ಲಿಮಿಟೆಡ್” ಅಥವಾ “Ltd.”).

ಈ ಪದಗಳು ಕಾರ್ಯವ್ಯಾಪ್ತಿ ನ್ಯಾಯಕ್ಷೇತ್ರ ಮತ್ತು ಭಾಷೆಯಿಂದ ಬೇರೆ ಬೇರೆಯಾಗಿರುತ್ತವೆ. ಕೆಲವು ನ್ಯಾಯ ಕ್ಷೇತ್ರಗಳಲ್ಲಿ ಅವು ಕಡ್ಡಾಯವಾಗಿರುತ್ತವೆ.

ಇನ್ನುಳಿದವುಗಳಲ್ಲಿ ಕಡ್ಡಾಯವಾಗಿರುವುದಿಲ್ಲ.ಇವುಗಳ ಬಳಕೆ ಪ್ರತಿಯೊಬ್ಬರಿಗೂ ಅವರು ಸೀಮಿತ ಹೊಣೆಗಾರಿಕೆ ಇರುವಂತಹ ಒಂದು ಘಟಕದೊಂದಿಗೆ ವ್ಯವಹರಿಸುತ್ತಿದ್ದಾರೆ ಎಂಬ ಕಾನೂನಿನ ಕಲ್ಪನೆಯನ್ನು ನೀಡುತ್ತದೆ.

ಕೆಲವೊಂದು ನ್ಯಾಯಕ್ಷೇತ್ರಗಳು ಕಾರ್ಪೋರೆಟ್ ನ ಸ್ಥಾನವನ್ನು ತಿಳಿಸಲು “ಕಂಪನಿ ” ಎಂಬ ಪದ ಒಂದನ್ನೇ ಬಳಸಲು ಅವಕಾಶ ನೀಡುವುದಿಲ್ಲ.

“ಕಂಪನಿ” ಎಂಬ ಪದವು ಪಾಲುದಾರಿಕೆಯನ್ನು ಅಥವಾ ಏಕಮಾತ್ರ ಸ್ವಾಮ್ಯತ್ವವನ್ನು (ಅಮೇರಿಕ ಸಂಯುಕ್ತ ಸಂಸ್ಥಾನದ ಬಳಕೆಯಲ್ಲಿದೆ ಆದರೆ ಬ್ರಿಟಿಷ್ ಬಳಕೆಯಲ್ಲಿ ಸಾರ್ವತ್ರಿಕವಾಗಿಲ್ಲ), ಅಥವಾ ಪ್ರಾಚೀನವಾಗಿ, ಸಂಬಂಧವಿಲ್ಲದ ಜನರ ಗುಂಪನ್ನು ಸೂಚಿಸಬಹುದಾದ ಕಾರಣದಿಂದ ಇದನ್ನು ಬಳಸಲು ಅವಕಾಶ ನೀಡುವುದಿಲ್ಲ. (ಉದಾಹರಣೆಗೆ , ಪ್ರವಾಸಿ ಹೋಟೆಲ್ ನಲ್ಲಿ ತಂಗಿರುವವರು).

ಹಣಕಾಸಿನ ವಿವರ ಪ್ರಕಟಣೆ

ಅನೇಕ ನ್ಯಾಯ ಕ್ಷೇತ್ರಗಳಲ್ಲಿ, ಸೀಮಿತ ಹೊಣೆಗಾರಿಕೆಯಿಂದ ಲಾಭ ಪಡೆಯುವ ಷೇರುದಾರರನ್ನು ಹೊಂದಿರುವ ನಿಗಮಗಳು ಆರ್ಥಿಕ ವರ್ಷದ ಹಣಕಾಸು ವರದಿಯನ್ನು ಮತ್ತು ಇತರ ಮಾಹಿತಿಗಳನ್ನು ಪ್ರಕಟಿಸಬೇಕು.

ಇದರಿಂದಾಗಿ ನಿಗಮದೊಂದಿಗೆ ವ್ಯವಹರಿಸುವ ಸಾಲದಾತರು ನಿಗಮದ ಸಾಲಾರ್ಹತೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಷೇರುದಾರರ ಬೇಡಿಕೆಯ ಹಕ್ಕಿನ ಕೋರಿಕೆ ಮಾಡಲಾಗುವುದಿಲ್ಲ.

ಇದರಿಂದಾಗಿ ಷೇರುದಾರರು ಸೀಮಿತ ಹೊಣೆಗಾರಿಕೆಗೆ ಪ್ರತಿಯಾಗಿ ಸ್ವಲ್ಪ ಖಾಸಗಿತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಅವಶ್ಯಕತೆಗಳು ಸಾಮಾನ್ಯವಾಗಿ ಯುರೋಪ್ ನಲ್ಲಿ ಅನ್ವಯಿಸುತ್ತವೇ ಹೊರತು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ನಿಗಮಗಳನ್ನು ಹೊರತುಪಡಿಸಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಅನ್ವಯಿಸುವುದಿಲ್ಲ. ಈ ನಿಗಮಗಳಲ್ಲಿ ಬಂಡವಾಳದಾರನ ಸುರಕ್ಷತೆಗಾಗಿ ಆರ್ಥಿಕ ವರದಿಯನ್ನು ಪ್ರಕಟಿಸಬೇಕಾಗಿರುತ್ತದೆ.

ಬಗೆಹರಿಸದ ವಿವಾದಗಳು

ಅಸ್ತಿತ್ವದಲ್ಲಿರುವ ನಿಗಮಗಳು ಹಲವಾರು ಕಾನೂನು ವಿಷಯಗಳನ್ನು ತನ್ನ ರಚನಾ ವ್ಯವಸ್ಥೆಗೆ ತಕ್ಕಂತೆ ಹೊಂದಿಸಿಕೊಳ್ಳಬೇಕಾಗುತ್ತದೆ.ಹೊಸ ಆಲೋಚನೆ ಮತ್ತು ವಿನ್ಯಾಸ, ನ್ಯಾಯಾಲಯದ ಪ್ರತಿಕ್ರಿಯೆ ಮತ್ತು ಸರ್ಕಾರ ಹೊರಡಿಸುವ ಹೊಸ ಕಟ್ಟಳೆಗಳನ್ನು ಅನುಸರಿಸುವ ಮೂಲಕ, ನಿಗಮದ ಸ್ವರೂಪ ಹೊಸ ಪರಿಸ್ಥಿತಿಗೆ ಪ್ರತಿಕ್ರಿಯಿಸುವುದನ್ನು ಮುಂದುವರೆಸಬೇಕಿದೆ.

ವಿಸ್ತೃತ ಹೊಣೆಗಾರಿಕೆಯ ಸಮಾನ ಹಂಚಿಕೆ ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಪ್ರಶ್ನೆಯಾಗಿದೆ. ಉದಾಹರಣೆಗೆ, ಒಂದು ವೇಳೆ ನಿಗಮವೇನಾದರೂ ಕೊನೆಗಾಣುವ ಹಂತ ತಲುಪಿದಲ್ಲಿ,

ಇದಕ್ಕೆ ಕಾರಣರಾದ ಷೇರುದಾರರು, ನಿರ್ದೇಶಕರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗ ಮತ್ತು ಸ್ವತಃ ನಿಗಮಕ್ಕೆ ಶಿಕ್ಷೆ ಮತ್ತು ದಂಡನೆಯನ್ನು ಹೇಗೆ ನಿರ್ಧರಿಸುವುದು? ಕಾರ್ಪೋರೆಟ್ ಹೊಣೆಗಾರಿಕೆ, ಮತ್ತು ನಿರ್ದಿಷ್ಟವಾಗಿ, ಕಾರ್ಪೋರೆಟ್ ನರಹತ್ಯೆ ಯನ್ನು ನೋಡಿ.

ಆಯಾ ವ್ಯಾಪ್ತಿ ಕ್ಷೇತ್ರಗಳೊಳಗೆ ಕಾನೂನು ಬೇರೆ ಬೇರೆಯಾಗಿರುತ್ತದೆ. ಅಲ್ಲದೇ ಅವು ಸದಾ ಪ್ರವಹರಿಸುವ ಸ್ಥಿತಿಯಲ್ಲಿರುತ್ತವೆ. ಷೇರುದಾರರನ್ನು ಬಂಡವಾಳ ಹೂಡುವಾಗ ಲಾಭದ ಬದಲಿಗೆ ನಿಗಮದ ವಿವರಗಳನ್ನು ಪರಿಗಣಿಸುವಂತೆ ಒತ್ತಾಯಿಸಲಾಗುತ್ತಿದೆ.

ಇಂತಹ ಪರಿಸ್ಥಿತಿಗಳಲ್ಲಿ ಷೇರುದಾರರೇ ಅಂತಿಮವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಕೆಲವರು ವಾದಿಸಿದ್ದಾರೆ.ಆದರೂ ನಿಗಮವು ಅದರ ವ್ಯಾಪಾರ ಚಟುವಟಿಕೆ ಬಗ್ಗೆ ಏನೂ ತಿಳಿಯದ ಮಿಲಿಯನ್ ಗಟ್ಟಲೆ ಸಣ್ಣ ಪುಟ್ಟ ಷೇರುದಾರರನ್ನು ಹೊಂದಿದೆ. ಇದರ ಜೊತೆಗೆ, ವ್ಯಾಪಾರಿಗಳು — ವಿಶೇಷವಾಗಿ ಹೆಡ್ಜ್ ಫಂಡ್ಸ್ (ರಕ್ಷಣೋಪಾಯದ ನಿಧಿಯಡಿ)— ದಿನಕ್ಕೆ ಅನೇಕ ಬಾರಿ ನಿಗಮದಲ್ಲಿ ಷೇರುಗಳನ್ನು ವ್ಯಾಪಾರ ಮಾಡಬಹುದು.

ಕಾರ್ಪೋರೆಟ್ ನ ವಿವಾದವು ಮತ್ತೆ ಮತ್ತೆ ಅಪರಾಧಿಗಳನ್ನು ಸೃಷ್ಟಿಸುತ್ತದೆ ಎಂಬ ವಿಷಯವು( H. ಗ್ಲ್ಯಾಸ್ ಬೀಕ್, “ವೆಲ್ತ್ ಬೈ ಸ್ಟಿಲ್ತ್:

ಕಾರ್ಪೋರೆಟ್ ಕ್ರೈಂ, ಕಾರ್ಪೋರೆಟ್ ಲಾ, ಅಂಡ್ ದಿ ಪರ್ವರ್ಷನ್ ಆಫ್ ಡೆಮೊಕ್ರಸಿ” (ಲೈನ್ಸ್ ಪ್ರೆಸ್ ನ ನಡುವೆ: ಟೊರೆಂಟೊ 2002) “ನಿಗಮಗಳಿಗೆ ಮರಣದಂಡನೆಯ” ಶಿಕ್ಷೆಯ ಪ್ರಶ್ನೆಯನ್ನೆತ್ತುತ್ತದೆ.

ವಿಧಗಳು

ನಿಗಮದ ವಿಧಗಳ ಪಟ್ಟಿಗಾಗಿ ಮತ್ತು ರಾಷ್ಟ್ರದಿಂದ ಇತರ ವ್ಯಾಪಾರ ಮಾದರಿಗಳಿಗಾಗಿ ವ್ಯಾಪಾರ ಘಟಕದ ವಿಧಗಳನ್ನು ನೋಡಿ.

ಸ್ಟಾಕ್ ನಿಗಮವಾಗಿರಬಹುದು ಅಥವಾ ನಾನ್ ಸ್ಟಾಕ್ ನಿಗಮವಾಗಿರಬಹುದು ಬಹುತೇಕ ನಿಗಮಗಳನ್ನು ಸ್ಥಳೀಯ ನ್ಯಾಯವ್ಯಾಪ್ತಿಗಳಲ್ಲಿ ನೋಂದಾಯಿಸಲಾಗುತ್ತದೆ.

ಸ್ಟಾಕ್ ನಿಗಮಗಳು ಬಂಡವಾಳ ಸಂಗ್ರಹಕ್ಕೆ ಸ್ಟಾಕ್ ಅನ್ನು ಮಾರಾಟಮಾಡುತ್ತವೆ. ಸ್ಟಾಕ್ ನಿಗಮವು ಸಾಮಾನ್ಯವಾಗಿ ಲಾಭದ ಅಸ್ತಿತ್ವ ಹೊಂದಿರುವ ನಿಗಮವಾಗಿದೆ. ನಾನ್ ಸ್ಟಾಕ್ ನಿಗಮ ಸ್ಟಾಕ್ ದಾರರನ್ನು ಹೊಂದಿರುವುದಿಲ್ಲ. ಆದರೆ ನಿಗಮದಲ್ಲಿ ಮತಚಲಾಯಿಸುವ ಹಕ್ಕುಳ್ಳ ಸದಸ್ಯರನ್ನು ಹೊಂದಿರುತ್ತದೆ.

ಕೆಲವು ನ್ಯಾಯಾಧಿಕರಣ ವ್ಯಾಪ್ತಿ ವಲಯಗಳಲ್ಲಿ (ಉದಾಹರಣೆಗೆ ವಾಷಿಂಗ್ಟನ್, D.C.) ನಿಗಮಗಳನ್ನು ಸದ್ಯ ಲಾಭದ ಅಸ್ತಿತ್ವ ಹೊಂದಿರುವ ಮತ್ತು ಲಾಭರಹಿತ ನಿಗಮಗಳೆಂದು ಪ್ರತ್ಯೇಕಿಸಲಾಗುತ್ತದೆ. ಇದನ್ನು ಸ್ಟಾಕ್ ಮತ್ತು ನಾನ್ ಸ್ಟಾಕ್ ಎಂದು ವಿಂಗಡಿಸುವುದಕ್ಕೆ ವಿರೋಧವಿದೆ.

ಅನೇಕ ರಾ(ಜ್ಯ)ಷ್ಟ್ರಗಳು ವೃತ್ತಿನಿರತರ ಸೇವೆಯ ಬಳಕೆಗಾಗಿ ನಿಗಮದ ಅಗತ್ಯ ಬದಲಾವಣೆಗೂ ಅವಕಾಶ ನೀಡುತ್ತವೆ.(ಉದಾಹರಣೆಗೆ, ವೃತ್ತಿಪರರೆಂದು ಪರಿಗಣಿಸಲಾಗುವ ವ್ಯಕ್ತಿಗಳು ವ್ಯಾಪಾರ ಮಾಡಲು ಆಯಾ ವ್ಯಾಪ್ತಿಯಲ್ಲಿ ಲೈಸನ್ಸ್ ಅನ್ನು (ಅನುಮತಿ) ಪಡೆದುಕೊಳ್ಳಬೇಕಿರುತ್ತದೆ).  ದಂತಹ ಕೆಲವು ರಾಷ್ಟ್ರಗಳಲ್ಲಿ ಈ ನಿಗಮಗಳನ್ನು “ವೃತ್ತಿಪರ ನಿಗಮಗಳೆಂದು” ಕರೆಯಲಾಗುತ್ತದೆ.

ಲಾಭಕ್ಕಾಗಿ ಮತ್ತು ಲಾಭ ರಹಿತ

ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ಕಾರ್ಪೋರೆಟ್ ಆಡಳಿತದ ರೀತಿನೀತಿಗಳು ಸಾಮಾನ್ಯವಾಗಿ ವಿಭಿನ್ನ ವ್ಯಾಪಾರಗಳಲ್ಲಿ ಮತ್ತು ನಾನ್ ಪ್ರಾಫಿಟ್ ಚಟುವಟಿಕೆಗಳಲ್ಲಿ ಕಂಡುಬರುತ್ತವೆ.

ಕಾಯ್ದೆಯ ಈ ಸೃಷ್ಟಿಗಳನ್ನು ನೋಡಿಕೊಳ್ಳುವ ಕಾನೂನು ವಿಭಿನ್ನವಾಗಿದ್ದರೂ ಕೂಡ, ನ್ಯಾಯಾಲಯವು ಸಾಮಾನ್ಯವಾಗಿ ಲಾಭ ಗಳಿಸುವ ಸಂಸ್ಥೆಗಳಿಗೆ ನೀಡಲಾದ ಕಾನೂನಿನ ಸವಲತ್ತುಗಳನ್ನು, ನಾನ್ ಪ್ರಾಫಿಟ್ ಆರ್ಗನೈಸೇಷನ್ಸ್ ಗಳಿಗೆ ಅನ್ವಯಿಸುವಾಗಲೂ ಒಂದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ.(ಅಥವಾ ಪರಸ್ಪರ ಹೋಲುವ ರೀತಿಯಲ್ಲಿ).

ಸಣ್ಣ ಪ್ರಮಾಣದ ಕೆಲವು ಶೇರುದಾರರ ಗುಂಪುಗಳು ನಡೆಸುವ ನಿಗಮಗಳು ಮತ್ತು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ನಿಗಮಗಳು

“ನಿಗಮ” ಎಂಬ ಪದದಿಂದ ಹೆಚ್ಚಾಗಿ ಉಲ್ಲೇಖಿಸಲ್ಪಡುವ ಸಂಸ್ಥೆಯೆಂದರೆ ಸಾರ್ವಜನಿಕವಾಗಿ ವ್ಯವಹರಿಸುವ ಸಂಸ್ಥೆಯು ನಿಗಮವೆನಿಸಿದೆ.

(ಪಬ್ಲಿಕಲಿ ಟ್ರೇಡೆಡ್ ಕಾರ್ಪೊರೇಷನ್) ಈ ನಿಗಮದ ಷೇರುಗಳನ್ನು ಸ್ಟಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.(ಉದಾಹರಣೆಗೆ, ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೆಂಜ್ ಅಥವಾ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನಾಸ್ಡಾಕ್).ಇಲ್ಲಿ ನಿಗಮದ ದಾಸ್ತಾನಿನ ಷೇರುಗಳನ್ನು ತಂದು ಸಾಮಾನ್ಯವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ.

ವಿಶ್ವದ ಬಹುಪಾಲು ಬೃಹತ್ ವ್ಯಾಪಾರಗಳು ಸಾರ್ವಜನಿಕವಾಗಿ ವ್ಯವಹರಿಸುವ ನಿಗಮಗಳಾಗಿವೆ. ಆದರೂ, ಬಹುಪಾಲು ನಿಗಮಗಳನ್ನು ಕ್ಲೋಸ್ಲಿ ಹೆಲ್ಡ್ , ಪ್ರೈವೆಟ್ಲಿ ಹೆಲ್ಡ್ ಅಥವಾ ಕ್ಲೋಸ್ ಕಾರ್ಪೊರೇಷನ್ ಗಳೆಂದು ಕರೆಯಲಾಗುತ್ತದೆ.

ಇವುಗಳ ಷೇರುಗಳನ್ನು ಮಾರಾಟಮಾಡಲು ಯಾವುದೇ ಸಿದ್ಧ ಮಾರುಕಟ್ಟೆಯಿರುವುದಿಲ್ಲವೆಂಬುದು ಇದರ ಅರ್ಥವಾಗಿದೆ.

ಇಂತಹ ಅನೇಕ ನಿಗಮಗಳನ್ನು ವ್ಯಾಪಾರಿಗಳ ಸಣ್ಣ ಗುಂಪುಗಳು ಅಥವಾ ಸಣ್ಣ ಕಂಪನಿಗಳು ನೋಡಿಕೊಳ್ಳುತ್ತವೆ, ಮತ್ತು ನಿರ್ವಹಿಸುತ್ತವೆ. ಆದರೂ ಅಂತಹ ನಿಗಮಗಳ ಗಾತ್ರ ಬೃಹತ್ ಸಾರ್ವಜನಿಕ ನಿಗಮಗಳಷ್ಟೇ ಇರುತ್ತದೆ.

ಸಣ್ಣ ಗುಂಪುಗಳು ನಡೆಸುವ ನಿಗಮಗಳು ಸಾರ್ವಜನಿಕವಾಗಿ ವ್ಯವಹರಿಸುವ ನಿಗಮಗಳಿಗಿಂತ ಕೆಲವೊಂದು ಅನುಕೂಲತೆಗಳನ್ನು ಪಡೆದಿವೆ. ಸಣ್ಣ ಗುಂಪುಗಳು ನಡೆಸುವ ಪುಟ್ಟ ಕಂಪನಿಗಳು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳಿಗಿಂತ ಅತ್ಯಂತ ವೇಗವಾಗಿ ನಿರ್ಧಾರಗಳನ್ನು ಬದಲಾಯಿಸುತ್ತವೆ.

ಸಾರ್ವಜನಿಕವಾಗಿ ವ್ಯಾಪಾರಮಾಡುವ ಕಂಪನಿ ಕೂಡ ಮಾರುಕಟ್ಟೆಯ ಕೃಪೆಯಲ್ಲಿದೆ. ಅದರ ಬಂಡವಾಳದ ಹರಿವು ಕೇವಲ ಕಂಪನಿ ಏನನ್ನು ಮಾಡುತ್ತಿದೆ ಎಂಬುದರ ಮೇಲೆ ಮಾತ್ರ ಆಧರಿಸದೇ ಸ್ಪರ್ಧಾಳುಗಳು ಏನನ್ನು ಮಾಡುತ್ತಿದ್ದಾರೆ ಎಂಬುದರ ಮೇಲೂ ಆಧರಿಸಿರುತ್ತದೆ.

ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳು ಕೂಡ ಅವುಗಳ ಪ್ರತಿರೂಪವಾದ ಅಂಗ ಸಂಸ್ಥೆಗಳಿಗಿಂತಲೂ ಹೆಚ್ಚಿನ ಅನುಕೂಲತೆಗಳನ್ನು ಪಡೆದಿವೆ. ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳು ಹೆಚ್ಚಾಗಿ ವರ್ಕಿಂಗ್ ಕ್ಯಾಪಿಟಲ್ ಅನ್ನು(ದೈನಂದಿನ ಆಡಳಿತ ನಿರ್ವಹಣಾ ಬಂಡವಾಳ) ಒಳಗೊಂಡಿರುತ್ತವೆ.

ಅಲ್ಲದೇ ಅವು ಎಲ್ಲಾ ಷೇರುದಾರರುದ್ದಕ್ಕೂ ಸಾಲವನ್ನು ನಿಯೋಜಿಸಬಲ್ಲವು. ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯಲ್ಲಿ ಬಂಡವಾಳ ಹೂಡಿದ ಪ್ರತಿಯೊಬ್ಬರೂ ಅವರ ಬಂಡವಾಳದ ಮೇಲೆ ಸಣ್ಣ ಹೊಡೆತವನ್ನು ಅನುಭವಿಸಬೇಕಾಗುತ್ತದೆ ಎಂಬುದು ಇದರ ಅರ್ಥವಾಗಿದೆ.

ಇದು ವ್ಯಾಪಾರಿಗಳ ಸಣ್ಣ ಗುಂಪು ನಡೆಸುವ ನಿಗಮದಲ್ಲಿ ಬಂಡವಾಳ ಹೂಡುವವರಿಗೆ ಅನ್ವಯವಾಗುವುದಿಲ್ಲ. ಆದ್ದರಿಂದ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳು ಈ ಖಚಿತವಾದ ಅನುಕೂಲದಿಂದಲೇ ನರಳುತ್ತಿವೆ.

ವ್ಯಾಪಾರಿಗಳ ಸಣ್ಣ ಗುಂಪು ನಡೆಸುವ ನಿಗಮವು ಸ್ವಯಂ ಪ್ರೇರಣೆಯಿಂದ ಯಾವುದೇ ಪರಿಣಾಮವಿಲ್ಲದೆಯೇ ನಷ್ಟ ಅನುಭವಿಸಬಹುದು.(ತಡೆದುಕೊಳ್ಳಲಾಗುವ ನಷ್ಟವಾಗುವವರೆಗೆ) ಒಂದು ವೇಳೆ ಲಾಭ ಮತ್ತು ಬೆಳವಣಿಗೆಯ ಬಗ್ಗೆ ಸ್ಟಾಕ್ ಮಾಲೀಕರಿಗೆ ಸ್ಪಷ್ಟವಾದ ಮಾಹಿತಿ ಇಲ್ಲದಿದ್ದರೂ ಕೂಡ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿ ಅತ್ಯಂತ ಸೂಕ್ಷ್ಮ ಪರಿಶೀಲನೆಗೆ ಒಳಪಡುತ್ತದೆ.

ಆದ್ದರಿಂದ ಸ್ಟಾಕ್ ಪಾಲುದಾರರು ಮುಂದೆ ಕಂಪನಿ ನಷ್ಟ ಲೆಕ್ಕಿಸದೇ ಮಾರಾಟ ಮಾಡಬಹುದು. ಇಂತಹ ಹೊಡೆತವು ಸಣ್ಣ ಸಾರ್ವಜನಿಕ ಕಂಪನಿಯನ್ನು ವಿಫಲಗೊಳಿಸಲು ಸಾಕಾಗಿದೆ.

ಹೂಡಿಕೆ ಸಮುದಾಯಗಳು ಹೆಚ್ಚಾಗಿ ಸಾರ್ವಜನಿಕ ಕಂಪನಿಗಿಂತ ಸಣ್ಣ ಗುಂಪು ನಡೆಸುವ ಕಂಪನಿಯಿಂದ ಹೆಚ್ಚು ಲಾಭ ಪಡೆಯುತ್ತವೆ. ಸಣ್ಣ ಗುಂಪು ನಿರ್ವಹಿಸುವ ಕಂಪನಿಯನ್ನು ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕ್ಲಿಷ್ಟ ಸಮಯದಲ್ಲೂ ಕೂಡ ಅವು ಹೆಚ್ಚು ಕಾಲದ ವರೆಗೆ ಒಂದೇ ಸ್ಥಳದಲ್ಲಿ ಮುಂದುವರೆಯುತ್ತವೆ.

ಕಂಪನಿಯು ಲಾಭಗಳಿಸುವುದರಲ್ಲಿ ಮಂದಗತಿಯಲ್ಲಿದ್ದರೆ ಅಥವಾ ಕಳಪೆ ಸಾಧನೆ ವರ್ಷದಿಂದ ಅದು ನಷ್ಟಕ್ಕೀಡಾದರೆ ಷೇರುದಾರರೂ ನಷ್ಟಕ್ಕೆ ಗುರಿಯಾಗಬಹುದು.

ಸಣ್ಣ ಗುಂಪುಗಳು ನಡೆಸುವ ಕಂಪನಿಗಳು ಸಾಮಾನ್ಯವಾಗಿ ನೌಕರರೊಡನೆ ಉತ್ತಮ ಸಂಬಂಧ ಹೊಂದಿರುತ್ತವೆ. ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳು ನಷ್ಟ ಅನುಭವಿಸಿದ ವರ್ಷದಲ್ಲಿ ಅದನ್ನು ತುಂಬಲು ಕೆಲಸಗಾರರನ್ನು ತೆಗೆದುಹಾಕುತ್ತವೆ ಅಥವಾ ಕೆಲಸಗಾರರ ಕಾರ್ಯಾವಧಿಯ ಮೇಲೆ ಪರಿಣಾಮಬೀರುತ್ತದೆ. ಸಂಬಳ ಅಥವಾ ಅನುಕೂಲತೆಗಳನ್ನು ಕಡಿತಗೊಳಿಸಲಾಗುತ್ತದೆ.

ಸಣ್ಣ ಗುಂಪು ನಡೆಸುವ ವ್ಯಾಪಾರಗಳಲ್ಲಿ ಈ ಲಾಭದ ಹಾನಿಯನ್ನು ನೌಕರರ ಮೇಲೆ ಹೇರುವ ಬದಲು ಷೇರುದಾರರು ಹೊರಬಹುದಾಗಿದೆ.

ಸಾರ್ವಜನಿಕವಾಗಿ ವ್ಯಾಪಾರ ಮಾಡುವ ನಿಗಮಗಳ ಮತ್ತು ಸಣ್ಣ ಗುಂಪುಗಳು ನಡೆಸುವ ನಿಗಮಗಳ ವ್ಯಾಪಾರ ವ್ಯವಹಾರಗಳು ಅನೇಕ ಸಂಬಂಧಗಳಲ್ಲಿ ಒಂದೇ ರೀತಿಯಾಗಿವೆ.

ಸಾರ್ವಜನಿಕವಾಗಿ ವ್ಯಾಪಾರ ಮಾಡುವ ನಿಗಮಗಳು ಸುರಕ್ಷತೆಯ ಅಧಿಕ ಭದ್ರತಾ ಕಾನೂನುಗಳನ್ನು ಅನುಸರಿಸಬೇಕಾದ ಹೊಣೆ ಹೊಂದಿರುತ್ತವೆ.

ಇದು ಬಹುಪಾಲು ರಾಷ್ಟ್ರಗಳಲ್ಲಿರುವ ಪ್ರಮುಖ ವ್ಯತ್ಯಾಸವಾಗಿದೆ. ಇದಕ್ಕಾಗಿ (ವಿಶೇಷವಾಗಿ U.S. ನಲ್ಲಿ)ಮತ್ತೆ ಮತ್ತೆ ಮಾಹಿತಿಯನ್ನು ಪ್ರಕಟಿಸುತ್ತಿರಬೇಕಾಗುತ್ತದೆ.

(ಕಠಿಣ, ಅಧಿಕ ಅಗತ್ಯತೆಗಳೊಂದಿಗೆ), ಕಟ್ಟುನಿಟ್ಟಾದ ಕಾರ್ಪೋರೆಟ್ ಆಡಳಿತದ ಪ್ರಮಾಣಕಗಳು, ಮತ್ತು ಪ್ರಧಾನ ಕಾರ್ಪೋರೆಟ್ ವ್ಯವಹಾರಗಳೊಂದಿಗೆ (ಉದಾಹರಣೆಗೆ ಒಕ್ಕೂಟಗಳು) ಸಂಬಂಧಿಸಿರುವ ಕಾರ್ಯವಿಧಾನದ ಕಟ್ಟುಪಾಡುಗಳ ಅಥವಾ ಕಾರ್ಯಕ್ರಮಗಳ ಅಗತ್ಯವಿರುತ್ತದೆ.(ಉದಾಹರಣೆಗೆ ನಿರ್ದೇಶಕರ ಚುನಾವಣೆ).

ಸಣ್ಣ ಗುಂಪು ನಡೆಸುವ ನಿಗಮವು ಮತ್ತೊಂದು ನಿಗಮದ ಅಂಗಸಂಸ್ಥೆಯಾಗಿರಬಹುದು. (ಅದರ ಮಾತೃ ಸಂಸ್ಥೆ), ಅದು ಸಣ್ಣ ಗುಂಪು ನಿರ್ವಹಿಸುವ ಅಥವಾ ಸಾರ್ವಜನಿಕ ನಿಗಮವಾಗಿರಬಹುದು.

ಅಮೇರಿಕ ಸಂಯುಕ್ತ ಸಂಸ್ಥಾನದ ಬಹುಪಾಲು ವ್ಯಾಪಾರಗಳು ಸಣ್ಣ ಗುಂಪುಗಳು ನಡೆಸುವ ನಿಗಮಗಳಾಗಿವೆ. ಅವುಗಳಲ್ಲಿ ತೊಂಭತ್ತೈದು ಪ್ರತಿಶತ ಕಂಪನಿಗಳನ್ನು ಕುಟುಂಬಗಳೇ ನಡೆಸುತ್ತಿವೆ.

ಅಲ್ಲದೇ ರಾಷ್ಟ್ರದ ಜನಸಂಖ್ಯೆಯ ಸರಿಸುಮಾರು ಐವತ್ತು ಪ್ರತಿಶತದಷ್ಟು ಜನರಿಗೆ ಉದ್ಯೋಗ ಒದಗಿಸಿವೆ. ಆದರೂ, ಷೇರುದಾರರ ಭಿನ್ನಾಭಿಪ್ರಾಯದಿಂದಾಗಿ, ಕೇವಲ ಇಪ್ಪತ್ತು ಪ್ರತಿಶತದಷ್ಟು ಕುಟುಂಬ ಆಡಳಿತವಿರುವ ವ್ಯವಹಾರಗಳು ಒಂದು ತಲೆಮಾರಿಗಿಂತಲೂ ಹೆಚ್ಚಿನ ಅವಧಿಯಿಂದ ನಡೆದುಕೊಂಡುಬರುತ್ತಿವೆ.

ಸಣ್ಣ ಗುಂಪುಗಳು ನಡೆಸುವ ನಿಗಮಗಳು ಷೇರುದಾರರ ದಬ್ಬಾಳಿಕೆಯನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿವೆ. ಅಲ್ಪ ಸಂಖ್ಯಾತ ಷೇರುದಾರರು ಸಾರ್ವಜನಿಕ ಮಾರುಕಟ್ಟೆಯಲ್ಲಿ ಅವರ ಸ್ಟಾಕ್ ಗಳನ್ನು ಮಾರಾಟಮಾಡದಂತೆ ಮತ್ತು ನಿಗಮದಿಂದ ನಿರ್ಗಮನವಾಗುವಂತೆ ಮಾಡುವ ಬಹುಸಂಖ್ಯಾತ ಷೇರುದಾರರ ದಬ್ಬಾಳಿಕೆಯನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿವೆ.

ಪರಸ್ಪರ ಲಾಭಕಾರಕ ನಿಗಮಗಳು

ಪರಸ್ಪರ ಲಾಭಕಾರಕರವಾಗಿರುವ ಲಾಭೋದ್ದೇಶವಿಲ್ಲದ ನಿಗಮವು, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಅದರ ಸದಸ್ಯರ ಅನುಕೂಲತೆಗಾಗಿ ರಚಿತ ನಿಗಮವಾಗಿದೆ. ಗಾಲ್ಫ್ ಕ್ಲಬ್, ಪರಸ್ಪರ ಅನುಕೂಲಕ್ಕಾಗಿರುವ ಲಾಭೋದ್ದೇಶವಿಲ್ಲದ ನಿಗಮಕ್ಕೆ ಉದಾಹರಣೆ ಯಾಗಿದೆ. ವ್ಯಕ್ತಿಗಳು ಕ್ಲಬ್ ಸೇರಲು ಹಣ ಪಾವತಿಸುತ್ತಾರೆ.

ಸದಸ್ಯತ್ವ ಕೊಂಡುಕೊಳ್ಳಬಹುದು ಮತ್ತು ಮಾರಬಹುದು. ಒಂದು ವೇಳೆ ಕ್ಲಬ್ ವಿಸರ್ಜನೆಯಾದರೆ ಅದರ ಸ್ವತ್ತನ್ನು ಅದರ ಸದಸ್ಯರಿಗೆ ಹಂಚಲಾಗುವುದು. ಕಾರ್ಪೋರೆಟ್ ಅದರ ಉಪ ನಿಬಂಧನೆಗಳೊಳಗೆ ಎಷ್ಟು ಜನ ಸದಸ್ಯರನ್ನು ಹೊಂದಬಹುದು ಮತ್ತು ಯಾರು ಸದಸ್ಯರಾಗಬಹುದು ಎಂಬುದನ್ನು ನಿರ್ಧರಿಸುತ್ತದೆ.

ಸಾಮಾನ್ಯವಾಗಿ, ಇದು ಲಾಭೋದ್ದೇಶರಹಿತ ನಿಗಮವಾಗಿರುವುದರಿಂದ ಪರಸ್ಪರ ಸವಲತ್ತು ಪಡೆವ ನಿಗಮ ದತ್ತಿ ಸಂಸ್ಥೆಯಲ್ಲ.

ಪರಸ್ಪರ ಉಪಕಾರದ, ಲಾಭೋದ್ದೇಶವಿಲ್ಲದ ನಿಗಮ ದತ್ತಿಸಂಸ್ಥೆಯಾಗಿರದ ಕಾರಣ 501(c)(3) ನೇ ವಿಧಿಯಲ್ಲಿ ಅದಕ್ಕೆ ಸ್ಥಾನವಿಲ್ಲ. ಪರಸ್ಪರ ಉಪಕಾರದ, ಲಾಭೋದ್ದೇಶವಿಲ್ಲದ ನಿಗಮವು ಕೇವಲ ಅದರ ಸದಸ್ಯರ ಅವಶ್ಯಕತೆಗಳನ್ನು ಪೂರೈಸಲು ಅಸ್ತಿತ್ವದಲ್ಲಿದೆಯೇ ಹೊರತು ಸಾರ್ವಜನಿಕರ ಅವಶ್ಯಕತೆಗಳನ್ನು ಪೂರೈಸಬೇಕೆಂದಲ್ಲ.

ಆದ್ದರಿಂದ ನಿಗಮವನ್ನು ಹೇಗೆ ನಡೆಸಬೇಕೆಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಬಗೆಹರಿಸುವುದು ಅದರ ಸದಸ್ಯರಿಗೆ ಬಿಟ್ಟ ವಿಷಯವಾಗಿದೆ.

ಜಾಗತಿಕವಾಗಿ ನಿಗಮಗಳು

ರಾಷ್ಟ್ರೀಯ ಮಟ್ಟದಲ್ಲಿ ಯಶ್ವಸಿಯಾದ ಕಾರ್ಪೋರೆಟ್ ಮಾದರಿಯನ್ನು ಅನುಸರಿಸಿ ಅನೇಕ ನಿಗಮಗಳು ರಾಷ್ಟ್ರದ ಗಡಿಗಳಿಂದಾಚೆ ವಿಸ್ತೃತಗೊಂಡು ಅಥವಾ ಬಹುರಾಷ್ಟ್ರೀಯ ನಿಗಮಗಳಾದವು: ಜಾಗತೀಕರಣದ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಪ್ರಾಬಲ್ಯ ಪಡೆಯಲು ಮತ್ತು ಪ್ರಭಾವೀ ಎನಿಸಲು ರಾಷ್ಟ್ರೀಯ ಗಡಿಗಳಿಂದಾಚೆ ತಮ್ಮ ಕಾರ್ಯಚಟುವಟಿಕೆ ವಿಸ್ತರಿಸಿದವು.

ಇಂತಹ “ರಾಷ್ಟ್ರದ ಗಡಿಗಳಿಂದಾಚೆ ಹರಡಿದ” ಅಥವಾ “ಬಹುರಾಷ್ಟ್ರೀಯ” ಎಂಬ ಪದವು ವಿಭಿನ್ನ ಪ್ರದೇಶಗಳಲ್ಲಿ ಅನೇಕ ಶಾಖೆಗಳನ್ನು ತೆರೆಯುವುದರೊಂದಿಗೆ ಷೇರುದಾರರು ಮತ್ತು ನಿರ್ದೇಶಕತ್ವದ ಅತಿಕ್ರಮದ ಜಾಲ ಸೂಚಿಸಲು ಸೂಕ್ತವಾಗಿರಬಹುದು.

ಆದರೆ ಇಂತಹ ಅನೇಕ ಉಪಗುಂಪುಗಳು ಅವುಗಳ ಸ್ವಂತ ಹಕ್ಕಿನಲ್ಲಿ ನಿಗಮಗಳನ್ನು ಒಳಗೊಳ್ಳುತ್ತವೆ. ಇದನ್ನು ವಿಸ್ತರಿಸುವ ಮೂಲಕ ಗಳಿಸಿದ ಅಭಿವೃದ್ಧಿ ರಾಷ್ಟ್ರೀಯ ಅಥವಾ ಪ್ರಾದೇಶಿಕ ಶಾಖೆಗಳಿಗೆ ಅನುಕೂಲಕರವಾಗಿದೆ; ಸ್ವಾಮ್ಯಸ್ವಾಧೀನ ಅಥವಾ ಒಕ್ಕೂಟದ ಮೂಲಕ ಗಳಿಸಿದ ಅಭಿವೃದ್ಧಿಯಿಂದಾಗಿ ಜಗತ್ತಿನಾದ್ಯಂತ ಹರಡಿರುವ ಮತ್ತು/ಅಥವಾ ಆಕ್ರಮಿಸಿರುವ ಗುಂಪುಗಳಲ್ಲಿ ನೆರವಿನ ಕೊರತೆಯುಂಟಾಗುತ್ತದೆ.

ಇದರ ಜೊತೆಯಲ್ಲಿ ರಚನೆಗಳು ಮತ್ತು ಹೆಸರುಗಳು , ಇವು ಯಾವಾಗಲೂ ಷೇರುದಾರರ ಒಡೆತನದ ಮತ್ತು ಪರಸ್ಪರ ಕ್ರಿಯೆಯ ರಚನೆಯನ್ನು ಎಂದಿಗೂ ಸ್ಪಷ್ಟಪಡಿಸುವುದಿಲ್ಲ.

ಭೂಖಂಡಗಳುದ್ದಕ್ಕೂ ನಿಗಮಗಳು ಹರಡಿದ್ದರಿಂದ ಕಾರ್ಪೋರೆಟ್ ಸಂಸ್ಕೃತಿಯ ಮಹತ್ವವು ಐಕ್ಯತೆಯ ಪ್ರತಿನಿಧಿಯಾಗಿ ಬೆಳೆಯಿತು. ಅಲ್ಲದೇ ಸ್ಥಳೀಯ, ರಾಷ್ಟ್ರೀಯ ಸಂವೇದನೆಗಳನ್ನು ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ಸರಿದೂಗಿಸುವಂತೆ ಬೆಳೆಯಿತು.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾದಲ್ಲಿ ನಿಗಮಗಳನ್ನು ಕಾಮನ್ ವೆಲ್ತ್ ಸರ್ಕಾರವು ಆಸ್ಟ್ರೇಲಿಯನ್ ಸೆಕ್ಯುರಿಟೀಸ್ ಅಂಡ್ ಇನ್ ವೆಸ್ಟ್ ಮೆಂಟ್ಸ್ ಕಮಿಷನ್ ಮೂಲಕ ನೋಂದಾಯಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ನಿಗಮಗಳ ಕಾನೂನನ್ನು 2001ರ ನಿಗಮಗಳ ಕಾಯ್ದೆಯಡಿ ಕ್ರೋಡೀಕರಿಸಲಾಗಿದೆ.

ಬ್ರೆಜಿಲ್

ಬ್ರೆಜಿಲ್ ನಲ್ಲಿ ವಿಭಿನ್ನ ನಿಗಮಗಳಿವೆ. (“ಸೊಸೈಡೆಡ್ಸ್”), ಆದರೆ ವಾಣಿಜ್ಯವಾಗಿ ಹೆಸರಿಸುವ ಅತ್ಯಂತ ಸಾಮಾನ್ಯವಾದ ಎರಡು ನಿಗಮಗಳು ಕೆಳಕಂಡಂತಿವೆ: (i) “ಸೊಸೈಡೆಡ್ ಲಿಮಿಟೆಡಾ”, ಕಂಪನಿಯ ಹೆಸರು ಬ್ರಿಟಿಷ್ ಲಿಮಿಟೆಡ್ ಕಂಪನಿಯ ಹೆಸರಿಗೆ ಸಮನಾದ ನಂತರ ಇದನ್ನು “Ltda.”ವೆಂದು ಗುರುತಿಸಲಾಗುತ್ತದೆ, ಮತ್ತು (ii) “ಸೊಸೈಡೆಡ್ ಅನಾನಿಮ” ಅಥವಾ “ಕಾಂಪ್ಯಾನಿಯಾ”,ಇದನ್ನು “SA” ಅಥವಾ ಕಂಪನಿಯ ಹೆಸರಾದ “ಕಾಂಪ್ಯಾನಿಯಾ”ದಿಂದ ಗುರುತಿಸಲಾಗುತ್ತದೆ.

ಈ ಕಂಪನಿಯ ಹೆಸರು ಬ್ರಿಟಿಷ್ ಪಬ್ಲಿಕ್ ಲಿಮಿಟೆಡ್ ಕಂಪನಿಯ ಹೆಸರಿಗೆ ಸಮನಾಗಿದೆ. “Ltda.” ಯನ್ನು 2002 ರಲ್ಲಿ ವಿಧಿಸಲಾದ ನ್ಯೂ ಸಿವಿಲ್ ಕೋಡ್ (ನಾಗರಿಕ ನಿಯಮಾವಳಿಯ ಹೊಸ ನಿಯಮ) ನೋಡಿಕೊಳ್ಳುತ್ತದೆ. “SA” ಯನ್ನು 1976 ರ ಡಿಸೆಂಬರ್ 15 ರಲ್ಲಿ ವಿಧಿಸಲಾದ 6.404 ಕಾನೂನು ನೋಡಿಕೊಳ್ಳುತ್ತದೆ.

ಕೆನಡಾ

ಕೆನಡಾದಲ್ಲಿ ಫೆಡರಲ್ ಸರ್ಕಾರ ಮತ್ತು ಪ್ರಾಂತಗಳು ಕಾರ್ಪೋರೆಟ್ ಶಾಸನಗಳನ್ನು ಹೊಂದಿವೆ. ಈ ಕಾರಣದಿಂದಾಗಿ ನಿಗಮವು ಪ್ರಾಂತೀಯ ಮತ್ತು ಫೆಡರಲ್ ಸರ್ಕಾರದ ಸನ್ನದನ್ನು ಹೊಂದಿರಬಹುದು. ಕೆನಡಾದಲ್ಲಿ ಹಳೆಯ ಅನೇಕ ನಿಗಮಗಳನ್ನು ಸಾರ್ವತ್ರಿಕ ನಿಗಮ ಕಾನೂನಿನ ಜಾರಿಗೆ ಮೊದಲು ಆಕ್ಟ್ ಆಫ್ ಪಾರ್ಲಿಮೆಂಟ್ ಮೂಲಕ ನೊಂದಾಯಿಸಲಾಗುತ್ತಿತ್ತು.

ಹಡ್ಸನ್ಸ್ ಬೇ ಕಂಪನಿ ಕೆನಡಾದಲ್ಲಿರುವ ಅತ್ಯಂತ ಹಳೆಯ ನಿಗಮವಾಗಿದೆ; ಇದರ ವ್ಯಾಪಾರ ಕೆನಡಾವನ್ನು ಆಧರಿಸಿದ್ದರೂ ಕೂಡ ಇದರ ರಾಯಲ್ ಸನ್ನದು ಅನ್ನು 1670 ರಲ್ಲಿ ಕಿಂಗ್ ಚಾರ್ಲ್ಸ್ II ಎಂಬ ಅರಸು ಇಂಗ್ಲೆಂಡ್ ನಲ್ಲಿ ನೀಡಿದ್ದಾನೆ.

ಇದರ ಕಾರ್ಪೊರೇಟ್ ಕೇಂದ್ರಕಾರ್ಯಾಲಯವನ್ನು ಲಂಡನ್ ನಿಂದ ಕೆನಡಾಕ್ಕೆ ಬದಲಾಯಿಸಿದಾಗ ಇದನ್ನು 1970 ರ ತಿದ್ದುಪಡಿಯಲ್ಲಿ ಕೆನಡಿಯನ್ ಸನ್ನದಾಗಿ ಬದಲಾಯಿಸಲಾಯಿತು. ಸಂಯುಕ್ತ ಒಕ್ಕೂಟ ವಿಧಾನದಲ್ಲಿ ಅಂಗೀಕರಿಸಲಾದ ನಿಗಮಗಳನ್ನು ಕೆನಡಾ ಬಿಸಿನೆಸ್ ಕಾರ್ಪೊರೇಷನ್ ಆಕ್ಟ್ ನಿಯಂತ್ರಿಸುತ್ತದೆ.

ಜರ್ಮನ್‌-ಭಾಷಿಕ ದೇಶಗಳು

ಜರ್ಮನಿ, ಆಸ್ಟ್ರಿಯ, ಸ್ವಿಜರ್ಲೆಂಡ್ ಮತ್ತು ಲಿಚ್ ಟೆನ್ಸ್ಟೀನ್ ಎರಡು ರೀತಿಯ ನಿಗಮಗಳನ್ನು ಒಪ್ಪಿಕೊಂಡಿವೆ: ಅಕ್ಟಿನ್ಗೆಸೆಲ್ ಸ್ಚಾಫ್ಟ್ (AG), ಇದು ಇಂಗ್ಲೀಷ್ ಭಾಷೆಯನ್ನು ಮಾತನಾಡುವ ಜಗತ್ತಿನಲ್ಲಿ ಸಾರ್ವಜನಿಕ ನಿಗಮಗಳನ್ನು ಹೋಲುತ್ತದೆ. ಗೆಸೆಲ್ ಸ್ಚಾಫ್ಟ್ ಮಿಟ್ ಬೇಸ್ ಚಾಂಕ್ಟರ್ ಹ್ಯಾಫ್ ಟಂಗ್ (GmbH), ಇದು ಆಧುನಿಕ ಸೀಮಿತ ಹೊಣೆಗಾರಿಕೆಯ ಕಂಪನಿಯನ್ನು (ಅಲ್ಲದೇ ಇದಕ್ಕೆ ಪ್ರೇರಣೆಯಾಗಿದೆ) ಹೋಲುತ್ತದೆ.

ಇಟಲಿ

ಇಟಲಿಯನ್ ರಿಪಬ್ಲಿಕ್, ಸೀಮಿತ ಹೊಣೆಗಾರಿಕೆಯೊಂದಿಗೆ ಮೂರು ವಿಧದ ಕಂಪನಿಯನ್ನು ಅಂಗೀಕರಿಸಿದೆ: “S.r.l”, ಅಥವಾ “ಸೊಸೈಟಾ ಅ ರೆಸ್ಪಾನ್ಸಿಬಲಿಟಾ ಲಿಮಿಟೆಟಾ” ( ಖಾಸಗಿ ಲಿಮಿಟೆಡ್ ಕಂಪನಿ), “S.p.A” ಅಥವಾ “ಸೊಸೈಟಾ ಪರ್ ಅಜಾಯ್ನಿ” (ಜಾಯಿಂಟ್ ಸ್ಟಾಕ್ ಕಂಪನಿಯಾಗಿದ್ದು, ಇಂಗ್ಲೆಂಡ್ ನಲ್ಲಿರುವ ಪಬ್ಲಿಕ್ ಲಿಮಿಟೆಡ್ ಕಂಪನಿಯನ್ನು ಹೋಲುತ್ತದೆ), ಮತ್ತು “S.a.p.a” (“ಸೊಸೈಟಾ ಇನ್ ಅಕಮ್ಯಾನ್ಡಿಟಾ ಪರ್ ಅಜಾಯ್ನಿ”).

ತರುವಾಯದಲ್ಲಿ ಬಂದದ್ದು ಮಿಶ್ರ ರೀತಿಯ ನಿಗಮವಾಗಿದ್ದು, ಷೇರುದಾರರ ಎರಡು ವರ್ಗಗಳನ್ನು ಒಳಗೊಂಡಿದೆ. ಇದು ಸೀಮಿತ ಹೊಣೆಗಾರಿಕೆಯನ್ನು ಸ್ವಲ್ಪ ಮಟ್ಟಿಗೆ ಹೊಂದಿದೆ, ಸ್ವಲ್ಪ ಮಟ್ಟಿಗೆ ಹೊಂದಿಲ್ಲ. ಅಲ್ಲದೇ ಇದನ್ನು ವಿರಳವಾಗಿ ಬಳಸಲಾಗುತ್ತದೆ.

ಜಪಾನ್

ಜಪಾನ್ ನಲ್ಲಿ,ಲೋಕಲ್ ಅಟಾನಮಿ ಲಾ ನ (ಪ್ರಾಂತಗಳು ಮತ್ತು ಪುರಸಭೆಗಳು) ಅಡಿಯಲ್ಲಿ ಬರುವ ರಾಜ್ಯ ಮತ್ತು ಸ್ಥಳೀಯ ಸಾರ್ವಜನಿಕ ಘಟಕಗಳನ್ನು ಎಂದು ಪರಿಗಣಿಸಲಾಗುತ್ತದೆ.

ಲಾಭೋದ್ದೇಶವಿಲ್ಲದ ನಿಗಮಗಳನ್ನು ಬಹುಶಃ ಸಿವಿಲ್ ಕೋಡ್ ನಡಿ ಸ್ಥಾಪಿಸಲಾಗಿದೆ.

ಇಂಗ್ಲೆಂಡ್ (ಯುನೈಟೆಡ್ ಕಿಂಗ್ಡಮ್)ಮತ್ತು ಐರ್ಲೆಂಡ್ ಗಣರಾಜ್ಯ

 

ಯುನೈಟೆಡ್ ಕಿಂಗ್ಡಮ್ ನಲ್ಲಿ ‘ನಿಗಮ’ವು ಸಾಮಾನ್ಯವಾಗಿ ರಾಜಪ್ರಭುತ್ವ ಅನುಮತಿ, ರಾಯಲ್ ಸನ್ನದು ಅಥವಾ ಈಗ ಉಳಿದಿರುವ ಕೆಲವು ಕಾನೂನುಗಳಿಂದ ರಚಿಸಲಾದ ಕಾನೂನು ವ್ಯಕ್ತಿತ್ವವನ್ನು ಸೂಚಿಸುತ್ತದೆ. BBCಯು UK ಯಲ್ಲಿರುವಂತಹ ಅತ್ಯಂತ ಹಳೆಯ ಮತ್ತು ಅತ್ಯಂತ ಜನಪ್ರಿಯ ನಿಗಮವಾಗಿದ್ದು, ಇನ್ನೂ ಅಸ್ತಿತ್ವದಲ್ಲಿದೆ. ಬ್ರಿಟಿಷ್ ಸ್ಟೀಲ್ ಕಾರ್ಪೊರೇಷನ್ ನಂತಹ ಇತರ ನಿಗಮಗಳು, 1980 ರಲ್ಲಿ ಖಾಸಗೀಕರಣಗೊಂಡವು.

ಖಾಸಗಿ ಕ್ಷೇತ್ರಗಳಲ್ಲಿ, ಕಾನೂನಿನ ಪ್ರಕಾರ ನಿಗಮಗಳನ್ನು ಕಂಪನಿಗಳೆಂದು ಉಲ್ಲೇಖಿಸಲಾಗುತ್ತದೆ. ಅಲ್ಲದೇ ಇವುಗಳನ್ನು 2006 ರ ಕಂಪನಿಗಳ ಕಾಯ್ದೆ ನಿಯಂತ್ರಿಸುತ್ತದೆ.

(ಅಥವಾ ಇದಕ್ಕೆ ಸಮರೂಪವಾದುದು ಉತ್ತರದ ಐರ್ಲೆಂಡ್). ಖಾಸಗಿ ಲಿಮಿಟೆಡ್ ಕಂಪನಿ(“Limited” ಅಥವಾ “Ltd.”) ಇಲ್ಲಿ ಅತ್ಯಂತ ಸಾಮಾನ್ಯ ವಿಧವಾಗಿದೆ.

ಖಾಸಗಿ ಸೀಮಿತ ಕಂಪನಿಗಳನ್ನು ಷೇರುಗಳಿಂದ ಅಥವಾ ಗ್ಯಾರಂಟಿಯ ಮೂಲಕ ಸೀಮಿತಗೊಳಿಸಬಹುದು. ಇತರ ಕಾರ್ಪೋರೆಟ್ ರಚನೆಗಳು ಕೆಳಕಂಡವುಗಳನ್ನು ಒಳಗೊಂಡಿವೆ: ಪಬ್ಲಿಕ್ ಲಿಮಿಟೆಡ್ ಕಂಪನಿ (“PLC”) ಮತ್ತು ಖಾಸಗಿ ಅನ್ ಲಿಮಿಟೆಡ್ ಕಂಪನಿ, ಹಾಗು ಗ್ಯಾರಂಟಿಯ ಮೂಲಕ ಸೀಮಿತಗೊಳಿಸುವ ಕಂಪನಿಗಳು.

ಐರ್ಲೆಂಡ್ ಗಣರಾಜ್ಯವು, 1922 ರಿಂದ ಅದರದೇ ಆದ ಅತ್ಯುತ್ತಮ ಕಂಪನಿ ಕಾನೂನನ್ನು ಹೊಂದಿದೆ.

ಈ ಕಾನೂನನ್ನು ಬ್ರಿಟಿಷ್ ಕಾನೂನುಗಳ ಮಾದರಿಯಲ್ಲಿ ಸೃಷ್ಟಿಸಿದ ಕಾರಣ ಇವು ಬ್ರಿಟನ್ ಕಾನೂನನ್ನು ಹೆಚ್ಚಾಗಿ ಹೋಲುತ್ತವೆ.

ಯುನೈಟೆಡ್ ಕಿಂಗ್ಡಮ್ ನಲ್ಲಿ ‘ನಿಗಮ’ವು ಕಾರ್ಪೊರೇಷನ್ ಸೋಲೋವನ್ನು ಕೂಡ ಸೂಚಿಸುತ್ತದೆ. ಇದು ಸಹಜ ಪ್ರತ್ಯೇಕ ವ್ಯಕ್ತಿಯೊಬ್ಬ ನಡೆಸುವ ಕಛೇರಿ ಮಾದರಿ ಹೊಂದಿದೆ.

ಅಲ್ಲದೇ ಆ ವ್ಯಕ್ತಿಯಿಂದ ಪ್ರತ್ಯೇಕಗೊಂಡ ಕಾನೂನು ಘಟಕವನ್ನೂ ಕೂಡ ಹೊಂದಿದೆ.

ಅಮೇರಿಕ ಸಂಯುಕ್ತ ಸಂಸ್ಥಾನ

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಅನೇಕ ವಿಧದ ಸಾಂಪ್ರದಾಯಿಕ ನಿಗಮಗಳು ಅಸ್ತಿತ್ವದಲ್ಲಿವೆ. ಸಾಮಾನ್ಯವಾಗಿ, ಯಾವುದೇ ವ್ಯಾಪಾರ ಘಟಕವಾಗಿದ್ದು, ಅದನ್ನು ನಡೆಸುವ ಜನರಿಂದ ಭಿನ್ನವಾದುದ್ದೆಂದು ಗುರುತಿಸಿಕೊಳ್ಳುವಂತಹದ್ದಾಗಿದೆ.

(ಉದಾಹರಣೆಗೆ ಇದು ಏಕಮಾತ್ರ ಒಡೆತನದಲ್ಲ ಅಥವಾ ಪಾಲುದಾರಿಕೆಯೂ ಅಲ್ಲ) ನಿಗಮವಾಗಿದೆ.

ಈ ಸಾರ್ವತ್ರಿಕ ಗುರುತು ‘ಸಂಘ’, ‘ಸಂಸ್ಥೆ’ ಮತ್ತು ‘ಸೀಮಿತ ಹೊಣೆಗಾರಿಕೆಯ ಕಂಪನಿ’,ಮತ್ತು ಸರಿಯಾದ ನಿಗಮಗಳಂತಹ ಕಾನೂನಿನ ಸಂಕೇತಗಳ ಗುರುತುಗಳಿಂದ ಕರೆಯಲ್ಪಡುವವುಗಳನ್ನು ಹೊಂದಿದೆ.

ಆಯಾ ರಾಜ್ಯದ ಕಾನೂನಿನ ಪ್ರಕಾರ ವಿಧ್ಯುಕ್ತವಾಗಿ ಸಂಘಟಿತವಾಗಿರುವ ಕಂಪನಿಯನ್ನು ಮಾತ್ರ ‘ನಿಗಮ’ವೆಂದು ಕರೆಯಲಾಗುತ್ತದೆ.

ಒಂದು ನಿಗಮವನ್ನು 1819 ರ ಡಾರ್ಟ್ ಮೌತ್ ಕಾಲೇಜ್ ಪ್ರಕರಣದಲ್ಲಿ ವ್ಯಾಖ್ಯಾನಿಸಲಾಗಿದೆ. ಇಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ವೋಚ್ಛ ನ್ಯಾಯಾಲಯದ ಚೀಫ್ ಜಸ್ಟೀಸ್ ಮಾರ್ಷಲ್ ಈ ಕಂಡಂತೆ ಹೇಳಿದ್ದಾರೆ

“ಕೃತಕವಾಗಿರುವ ನಿಗಮವು, ಅದೃಶ್ಯವಾದದ್ದು, ಅಮೂರ್ತವಾದದ್ದು ಮತ್ತು ಕಾನೂನಿನ ಚಿಂತನೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವಂತಹದ್ದು”.

ನಿಗಮವು ಕಾನೂನಿನ ಘಟಕವಾಗಿದ್ದು, ಇದನ್ನು ರಚಿಸುವ ಮತ್ತು ನಡೆಸುವ ವ್ಯಕ್ತಿಗಳಿಗಿಂತ ಭಿನ್ನ ಮತ್ತು ಪ್ರತ್ಯೇಕವಾಗಿದೆ.

ಕಾನೂನಿನ ಘಟಕವಾಗಿರುವ ನಿಗಮವು, ಕಟ್ಟಡಗಳು, ಜಮೀನು ಮತ್ತು ಯಂತ್ರೋಪಕರಣಗಳಂತಹ ಅದರದೇ ಹೆಸರಿನಲ್ಲಿರುವ ಸ್ವಂತ ಸ್ವತ್ತನ್ನು ಕೊಳ್ಳಬಲ್ಲದು ಮತ್ತು ಮಾರಬಲ್ಲದು.

ಇದು ಹೊಣೆಗಾರಿಕೆಗಳಲ್ಲೂ ಕೂಡ ಭಾಗಿಯಾಗಬಲ್ಲದು.ಅಲ್ಲದೇ ಸಹಪೌರತ್ವದ ಮತ್ತು ಗುತ್ತಿಗೆಯಂತಹ ಒಪ್ಪಂದಗಳನ್ನು ಮಾಡಿಕೊಳ್ಳಬಲ್ಲದು. ಅಮೇರಿಕಾದ ನಿಗಮಗಳು ಲಾಭ ಮಾಡುವ ಕಂಪನಿಗಳಾಗಿರಬಹುದು ಅಥವಾ ಲಾಭೋದ್ದೇಶವಿಲ್ಲದ ಘಟಕಗಳಾಗಿರಬಹುದು

ಬ್ಯಾಂಕುಗಳನ್ನು ಒಳಗೊಂಡಂತೆ ಕೇವಲ ಕೆಲವು ನಿಗಮಗಳು ಮಾತ್ರ ಅನುಮತಿ ಹಕ್ಕುಪತ್ರ ಪಡೆದಿದ್ದವು. ನೋಂದಾವಣಿ ಪ್ರಕ್ರಿಯೆಯ ಭಾಗವೆಂಬಂತೆ ರಾಜ್ಯ ಸರ್ಕಾರದೊಂದಿಗೆ ಇತರ ನಿಗಮಗಳು ಸರಳವಾಗಿ ಅವುಗಳ ಅನುಚ್ಛೇದಗಳನ್ನು ದಾಖಲಿಸುತ್ತಿದ್ದವು.

ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನದಲ್ಲಿ ನೀಡಲಾದ ಪ್ರಸ್ತುತ ಅಧಿಕಾರಗಳ ಪ್ರಕಾರ ಒಕ್ಕೂಟ ಸರ್ಕಾರವಾದ ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ಕಾರಮಾತ್ರ ಕಾರ್ಪೋರೆಟ್ ಘಟಕಗಳನ್ನು ಸೃಷ್ಟಿಸಬಹುದಾಗಿದೆ.

ಉದಾಹರಣೆಗೆ, ಅಂಚೆ ಸೇವೆಗಳನ್ನು ಒದಗಿಸಲು ಕಾಂಗ್ರೆಸ್ ಸಂವಿಧಾನಾತ್ಮಕ ಅಧಿಕಾರ ಹೊಂದಿದೆ. ಆದ್ದರಿಂದ ಇದು ಅಮೇರಿಕ ಸಂಯುಕ್ತ ಸಂಸ್ಥಾನದ ಅಂಚೆ ಸೇವೆಯನ್ನು ನಡೆಸಲು ಅಧಿಕಾರ ಹೊಂದಿದೆ.

ಒಮ್ಮೆ ಇದನ್ನು ಸಂಘಟಿಸಿದ ನಂತರ ನಿಗಮವನ್ನು ವಿಸರ್ಜಿಸುವವರೆಗೂ ಅದನ್ನು ನಡೆಸುವ ಪ್ರತಿಯೊಂದು ಕಡೆಯಲ್ಲೂ ಅದು ಕೃತಕ ವ್ಯಕ್ತಿತ್ವ ಹೊಂದಿರುತ್ತದೆ.

ಒಂದು ರಾಜ್ಯದಲ್ಲಿ ನಡೆಸುವ ನಿಗಮವನ್ನು ಮತ್ತೊಂದು ರಾಜ್ಯದಲ್ಲಿ ಸಂಘಟಿಸಲಾಗಿದ್ದರೆ ಅದನ್ನು “ವಿದೇಶೀ ನಿಗಮ”(ಫಾರೀನ್ ಕಾರ್ಪೊರೇಷನ್)ವೆಂದು ಕರೆಯಲಾಗುತ್ತದೆ. ಈ ಗುರುತು ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಬಾಹ್ಯವಾಗಿ ಸಂಘಟಿತ ನಿಗಮಗಳಿಗೆ ಅನ್ವಯವಾಗುತ್ತದೆ.

ವಿದೇಶೀ ನಿಗಮಗಳು ಯಾವ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತವೋ ಆ ಪ್ರತಿಯೊಂದು ರಾಜ್ಯದಲ್ಲಿ ನ್ಯಾಯಸಮ್ಮತವಾಗಿ ವ್ಯವಹಾರನಡೆಸುತ್ತವೆಂದು ರಾಜ್ಯಗಳ ಸಚಿವಾಲಯದ ಕಛೇರಿಯೊಂದಿಗೆ ಕಾನೂನು ರೀತ್ಯ ನೋಂದಾಯಿಸಿಕೊಳ್ಳಲೇಬೇಕು.

ನಿಗಮವು ಕಾನೂನುಬದ್ಧವಾಗಿ ಯಾವ ರಾಜ್ಯದಲ್ಲಿ ಸಂಘಟಿತವಾಗಿದೆಯೊ ಆ ರಾಜ್ಯದ (ಅಥವಾ ಇತರ ನ್ಯಾಯಕ್ಷೇತ್ರದ)ನಾಗರಿಕ ಎನಿಸಿದೆ.

ಕಾರ್ಪೋರೆಟ್ ಕಾನೂನುಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗುತ್ತವೆ. ಅಲ್ಲದೇ ಅನೇಕ ಭವಿಷ್ಯದ ನಿಗಮಗಳನ್ನು ಸಂಘಟಿಸಲು ಯಾವ ರಾಜ್ಯದ ಕಾನೂನುಗಳು ನಿಗಮದ ವ್ಯವಹಾರಕ್ಕೆ ಅನುಕೂಲಕರವಾಗಿರುತ್ತವೆಯೋ ಅಂತಹ ರಾಜ್ಯವನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ.

ದೊಡ್ಡ ದೊಡ್ಡ ಅನೇಕ ನಿಗಮಗಳು ಡೆಲವೇರ್ ನಲ್ಲಿ ಸಂಘಟಿತವಾಗಿವೆ. ಉದಾಹರಣೆಗೆ, ಅವುಗಳು ಡೆಲವೇರ್ ನಲ್ಲಿಲ್ಲದಿದ್ದರೂ ಅಲ್ಲಿಯೇ ಸಂಘಟಿತವಾಗಿವೆ.


0 Comments

Leave a Reply

Avatar placeholder

Your email address will not be published. Required fields are marked *