ಕಾಗದ
paper manufacturing, paper bag making machine, paper is made from, paper making machine,paper glass making machine, paper production
ನೀವು ಓದುವ ಪುಸ್ತಕ , ಬರೆಯಲು ಉಪಯೋಗಿಸುವ ಪುಸ್ತಕ , ಬಸ್ ಟಿಕೇಟ್ , ವ್ಯವಹರಿಸಲು ಬಳಸುವ ಪತ್ರ ಇವೆಲ್ಲ ಕಾಗದದಿಂದ ಆದವುಗಳು .
ಇಷ್ಟಕ್ಕೂ ಇಂಗ್ಲೀಷಿನ ಪೇಪರ್ ಪದವು , ಕನ್ನಡದ ಪತ್ರ ಎಂಬ ಪದವು , ಬರೆಯುವ ಸಾಧನವನ್ನೇ ಪರೋಕ್ಷವಾಗಿ ಸೂಚಿಸುತ್ತದೆ .
‘ ಸಂಶೋಧನಾ ಪ್ರಬಂಧ ‘ ಎಂಬ ಪದ ಇಂಗ್ಲೀಷಿನಲ್ಲಿ ರಿಸರ್ಚ್ ಪೇಪರ್ ‘ ಎಂದೇ ಹೇಳಲಾಗುವುದು .
ಭಾರತೀಯ ಭಾಷೆಗಳಲ್ಲಿ ಕಾಗದ ಎಂಬುದಕ್ಕೆ ಪತ್ರ ಓಲೆ ಎಂದು ಬಳಕೆಯಾಗಿದೆ . ಅನಾದಿ ಕಾಲದಿಂದ ಎಲೆಗಳ ಗರಿಗಳ ಮೇಲೆ ಬರೆಯುತ್ತಿದ್ದುದಕ್ಕೆ ಈ ಪದದ ಬಳಕೆಯೇ ಪುರಾವೆ .
ಈಗಾಗಲೇ ಕಾಗದ ಬಹು ಉಪಯೋಗಿ ವಸ್ತು ಎಂಬುದು ನಿಮಗೆ ಗೊತ್ತು . ಸಾಮಾನ್ಯವಾಗಿ ಬರೆಯಲು ಮತ್ತು ಮುದ್ರಣಕ್ಕಾಗಿ ಕಾಗದವನ್ನು ಬಳಸುತ್ತಾರಾದಾರೂ ಪೊಟ್ಟಣ ಕಟ್ಟಲು ,
ಚೀಲ ತಯಾರಿಸಲು , ಪ್ಯಾಕಿಂಗ್ ಸಾಮಗ್ರಿಯಾಗಿ ಮತ್ತಿತರ ಅನ್ವಯಗಳು ಇವೆ .
ಪೇಪರ್ ತೆಳುವಸ್ತು , ಒದ್ದೆ ಎಳೆಗಳನ್ನು ಅದರಲ್ಲೂ ಚಿಂದಿ , ಕಬ್ಬಿನ ಸಿಪ್ಪೆ ,
ಕಟ್ಟಿಗೆ ಅಥವಾ ಹುಲ್ಲುಗಳಿಂದ ಪಡೆದ ಸೆಲ್ಯುಲೋಸ್ ತಿರುಳನ್ನು ಒತ್ತಿ , ದೊರಕಿದ ನಮ್ಮ ಹಾಳೆಗಳನ್ನು ಒಣಗಿಸಿ ಕಾಗದವನ್ನು ಪಡೆಯಲಾಗುತ್ತದೆ .
ಕಾಗದದ ತಯಾರಿಕಾ ಹಂತಗಳನ್ನು ಅಭ್ಯಸೋಣ
1 ) ಪಲ್ಟಿಂಗ್ ( pulping ) – ತಿರುಳನ್ನು ಬೇರ್ಪಡಿಸುವುದು
ಕಟ್ಟಿಗೆಯನ್ನು ಚೂರುಗಳನ್ನಾಗಿಸಿ ಅದರಲ್ಲಿರುವ ತಿರುಳನ್ನು ಹಾಳೆಗಳನ್ನಾಗಿ ಮಾಡುವ ಕ್ರಿಯೆ . ಚೆಲುವೆಕಾರಕ ವಸ್ತುಗಳನ್ನು ಬೆರೆಸಿ ಚೆಲುವೆಗೊಳಿಸಲಾಗುತ್ತದೆ .
2 )ಮಿಶ್ರಕ ( additives ) ಗಳನ್ನು ಬೆರೆಸುವುದು ,
ಕಚ್ಚಾ ಕಾಗದ ಸಚ್ಚಿದ , ಅದಕ್ಕೆ ತುಂಬುಕ ( iller ) ಸೇರಿಸದಿದ್ದರೆ ಮಸಿಯು ಹರಡಿ ಹೋಗುವುದು . ಕಾಗದದ ಮೇಲೆ ಮುದ್ರಿಸುವ ಅಥವಾ ಬರೆಯುವ ಲಕ್ಷಣ ಬರಲು ಕಚ್ಚಾ ಪದಾರ್ಥವಾದ ಸಸ್ಯದ ತಿರುಳಿನಲ್ಲಿ ಅಥವಾ ಎಳೆಗಳಲ್ಲಿ ಬಳಪ ಅಥವಾ ಚೀನಾ ಮಣ್ಣನ್ನು ಬೆರಸಲಾಗುತ್ತದೆ .
ಅನಂತರ ತಿರುಳನ್ನು ಯಂತ್ರದ ಸಹಾಯದಿಂದ ತೆಳುವಾದ ಹಾಳೆಗಳನ್ನಾಗಿ ಮಾಡಿ , ಅದರಲ್ಲಿರುವ ನೀರಿನ ಅಂಶವನ್ನು ಒತ್ತಿ ಮತ್ತು ಒಣಗಿಸಿ ತೆಗೆಯಲಾಗುತ್ತದೆ .
ಕಾಗದದಿಂದ ನೀರಿನ ಅಂಶವನ್ನು ಗಾಳಿ ಹಾಯಿಸಿ ಮತ್ತು ಬಿಸಿಮಾಡಿ ಒಣಗಿಸುವ ಹಂತ ಇದು . ಹಿಂದಿನ ದಿನಗಳಲ್ಲಿ ಒಣಗಿಸಲು ಬಟ್ಟೆಯನ್ನು ಒಣಗಲು ನೇತು ಹಾಕುವಂತೆ , ಕಾಗದದ ಹಾಳೆಗಳನ್ನು ಹಾಕಲಾಗುತ್ತಿತ್ತು .
ಪ್ರಸ್ತುತ ದಿನಗಳಲ್ಲಿ ಒಣಗಿಸುವ ಹಬೆ ಯಂತ್ರದಿಂದ ಈ ಕಾರ್ಯ ಮಾಡಲಾಗುತ್ತದೆ .
- ಮುಕ್ತಾಯ ಹಂತ
ಹೀಗೆ ಪಡೆದ ಕಾಗದವನ್ನು ಬೇರೆ , ಬೇರೆ ಅನ್ವಯಗಳಿಗಾಗಿ ಅದರ ಭೌತಿಕ ಲಕ್ಷಣಗಳನ್ನು ಮಾರ್ಪಾಡುಗೊಳಿಸಲಾಗುತ್ತದೆ . ಈ ಹಂತದಲ್ಲಿ ಕಾಗದ ಲೇಪನ ರಹಿತವಾಗಿರುತ್ತದೆ .
ಲೇಪನಯುಕ್ತ ಕಾಗದ ವೆಂದರೆ , ಕಾಗದದ ಮೇಲೆ ಮೇಲೆ ಕ್ಯಾಲ್ಸಿಯಮ್ ಕಾರ್ಬೋನೇಟ್ ಅಥವಾ ಚೀನಾ ಮಣ್ಣಿನ ತೆಳುವಾದ ಲೇಪನಮಾಡುವುದು . ಕಾಗದವು ಬಿಳುಪಾಗಿ ನುಣುಪಾಗುವುದು .
ಮರದ ತಿರುಳಿನಲ್ಲಿನ ಪ್ರಧಾನ ಘಟಕವಾದ ಲಿಗ್ವಿನ್ , ಕಾಗದದಲ್ಲಿರುತ್ತದೆ .
ಬೆಳಕು ಮತ್ತು ಆಕ್ಸಿಜನ್ಗೆ ಕಾಗದೆ ತೆರೆದುಕೊಂಡಾಗ ಲಿಗ್ನಿನ್ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಹಳದಿ ಬಣ್ಣಕ್ಕೆ ( ಮೂಲ ಬಣ್ಣಕ್ಕೆ ) ತಿರುಗಿಕೊಳ್ಳುತ್ತದೆ . ಹೀಗಾಗಿ ಹಳೆಯ ಕಾಗದ ಹಳದಿ ಬಣ್ಣದ್ದಾಗಿರುತ್ತದೆ .
ವಿವಿಧ ಬಗೆಯ ಕಾಗದಗಳು
ಸೋಸು ( filter ) ಕಾಗದ : ಸೋಸು ಕಾಗದವು ಅರೆ ಪಾರಕ ಮೊರೆ . ಇದರಲ್ಲಿ ಇದು ಸಚ್ಚಿದ್ರವಾಗಿದೆ . ದ್ರವ ಅಥವಾ ಗಾಳಿಯಿಂದ ಸೂಕ್ಷ್ಮ ಘನ ಕಣಗಳನ್ನು ಪ್ರತ್ಯೇಕಿಸಲು ಬಳಸಲಾಗುತ್ತದೆ .
ಪ್ರಯೋಗ ಶಾಲೆಯಲ್ಲಿ ಸೋಸುಕಾಗದವನ್ನು ಆಲಿಕೆಯಲ್ಲಿಟ್ಟು ಬಳಕೆ ಮಾಡುತ್ತಾರೆ . ಸೋಸು ಕಾಗದ ವಿವಿಧ ಕ್ರಿಯಾಕಾರಕಗಳೊಡನೆ ( reagents ) ಸಂಸೇಚಿಸುವುದರಿಂದ ( impregnated ) pH ದಂತಹ ಪರೀಕ್ಷೆಗೆ ಬಳಸಲಾಗುತ್ತದೆ .
ಅದ್ದುವ ಚಹ ಚೀಲಗಳ ( dip tea bags ) ತಯಾರಿಕೆಗೆ ಈ ಕಾಗದದ ಉಪಯೋಗವಿದೆ
ಟಿಶ್ಯು (Tissue ) ಕಾಗದ :
ಟಿಶ್ಯು ಕಾಗದ ಹಗುರವಾದದ್ದು , ಟಿಶ್ಯು ಕಾಗದವನ್ನು ಮರದ ತಿರುಳಿನಿಂದ ಅಥವಾ ಕಾಗದದ ಪುನರ್ಬಳಕೆಯಿಂದಲೂ ತಯಾರಿಸಬಹುದು . ಮುಖ ಒರೆಸುವುದಕ್ಕೆ , ಗೃಹ ಉಪಯೋಗಕ್ಕೆ ಬಳಸುವರು .
ಮೇಣದ ( Wax ) ಕಾಗದ :
ಇದನ್ನು ಪ್ಯಾರಾಫಿನ್ ಕಾಗದವೆಂತಲೂ ಕರೆಯುತ್ತಾರೆ . ಕಾಗದದ ಮೇಲೆ ಮೇಣದ ಲೇಪನದಿಂದ ಇದನ್ನು ಆದ್ರ್ರತೆಯಿಂದ ರಕ್ಷಿಸುವಂತೆ ಮಾಡಬಹುದು .
ಅಂಟಿಕೊಳ್ಳದ ಗುಣಲಕ್ಷಣವಿರುವುದರಿಂದ ಮೇಣದ ಕಾಗದವನ್ನು ಅಡುಗೆ ತಯಾರಿಸುವಾಗ , ಆಹಾರ ಸಂರಕ್ಷಣೆಯಲ್ಲಿ ಇದನ್ನು ಬಳಸುತ್ತಾರೆ .
ಐಸ್ ಕ್ರೀಮ್ , ಕುಕೀಸ್ ( Cookies ) ಮೇಲೆ ಸುತ್ತುವುದರಿಂದ ಆರ್ದತೆಯಿಂದ ಸಂರಕ್ಷಿಸಲು ಸಾಧ್ಯ . ಕರಕುಶಲ ಕಲೆಯಲ್ಲಿ ಇದನ್ನು ಉಪಯೋಗಿಸುತ್ತಾರೆ .
ಕಾರ್ಡ್ ಬೋರ್ಡ್ ಕಾಗದ :
ಕಾಗದದ ಸೆಳೆತಾಣವನ್ನು ( tensile strength ) ನಿರ್ಧರಿಸುವುದು ಕಾಗದದ ದಪ್ಪ . ಅವಶ್ಯಕತೆಗೆ ಅನುಗುಣವಾಗಿ ಕಾರ್ಡ್ ಬೋರ್ಡ್ಅನ್ನು ಗಟ್ಟಿಯಾಗಿಸಿರುತ್ತಾರೆ .
ಒಂದು ಪದರ ಅಥವಾ ಬಹಳ ಪದರಗಳನ್ನು ಬಳಸಿ ದಪ್ಪವಾಗುವಿಕೆಯನ್ನು ಮಾಡಿರುತ್ತಾರೆ . ಇದನ್ನು ಅಂಚೆ ಕಾರ್ಡ್ , ಪೋಸ್ಟರ್ ಪ್ರದರ್ಶಿಕೆ ಬೋರ್ಡ್ ತಯಾರಿಕೆಯ ಕಾಗದದ ತಯಾರಿಕೆಯಲ್ಲಿ ಬಳಸುತ್ತಾರೆ .
ಕಾಗದಕ್ಕೆ ಮುಖ್ಯವಾಗಿ ಎರಡು ಇತಿ ಮಿತಿಗಳಿವೆ
- ಪ್ಲಾಸ್ಟಿಕ್ ಹಾಗೆ ಕಾಗದ ಪೂರ್ಣ ರಂಧ್ರರಹಿತವಲ್ಲ .
- ಒದ್ದೆಯಾದಂತೆ ಕಾಗದದ ಸೆಳೆತ್ರಾಣ ಕಡಿಮೆಯಾಗುತ್ತದೆ .
ಮುಂಬರುವ ದಿನಗಳಲ್ಲಿ – ಕಾಗದ ಬಳಕೆ
ವಾಣಿಜ್ಯೋದ್ಯಮಿಗಳು ಪರಿಸರ ಸ್ನೇಹಿಯಾದ , ಪ್ಲಾಸ್ಟಿಕ್ದಂತಹ ಪ್ಯಾಕೇಜಿಂಗ್ ವಸ್ತುವನ್ನು ಕಾಗದದಿಂದ ತಯಾರಿಸಲು ಪ್ರಾರಂಭಿಸಿದ್ದಾರೆ . ವಾಣಿಜ್ಯಕವಾಗಿ ಅದನ್ನು ಕಾಗದದ ಮೊರೆ ಎನ್ನುವರು .
ಪ್ಯಾಕೇಜಿಂಗ್ ವಸ್ತುವು ತಕ್ಕಮಟ್ಟಿಗೆ ಪ್ಲಾಸ್ಟಿಕ್ ಅನ್ನು ಹೋಲುವ ಲಕ್ಷಣಗಳಿದ್ದರೂ , ಜೈವಿಕ ವಿಘಟನೆಯಾಗುವ ಮತ್ತು ಪುನರ್ ಬಳಕೆಯಾಗುವ ಸಾಮಾನ್ಯ ಕಾಗದದಂತಿದೆ .
ಮುದ್ರಣ ಮಾಧ್ಯಮಕ್ಕೆ ಬಳಕೆಯಾಗುವ ಈ ಸಂಶ್ಲೇಷಿತ ವಸ್ತು ಕಾಗದಕ್ಕಿಂತಲೂ ಹೆಚ್ಚು ಬಾಳಿಕೆ ಬರುವಂಥದ್ದು . ಕಾಗದವು ಪ್ರಾಣಿಗಳಿಗೆ ಹಾನಿಕಾರಕವಾದರೂ ,
ಗೆದ್ದಲು ಕಾಗದವನ್ನು ವಿಘಟನೆಗೊಳಿಸುವುದರಿಂದ ಕಾಗದವು ಪರಿಸರ ಸ್ನೇಹಿ . ಪ್ಲಾಸ್ಟಿಕ್ ಕೈ ಚೀಲಗಳ ಬದಲಾಗಿ ಪರಿಸರ ಸ್ನೇಹಿ ಕಾಗದದ ಚೀಲಗಳನ್ನು ಬಳಸಬಹುದು .
0 Comments