ಕರ್ನಾಟಕ ಶಾಸನಗಳು

karnataka shasanagalu in kannada, shasanagalu ,ashokana shasanagalu,karnataka history,karnataka history in kannada

karnataka shasanagalu in kannada, shasanagalu ,ashokana shasanagalu,karnataka history,karnataka history in kannada

 ಮಹಾಕೂಟ ಸ್ತಂಭ ಶಾಸನ :

ಜಯಸಿಂಹನ ಕಾಲಾವಧಿಯಲ್ಲಿ ಒಂದು ಸಾಮಂತ ಮನೆತನವಾಗಿ ಆರಂಭವಾದ

ಬಾದಾಮಿ ಚಾಲುಕ್ಯ ಮನೆತನ 1 ನೇ ಮಲಿಕೇಶಿಯ ಕಾಲಾವಧಿಯಲ್ಲಿ ( 540-566 )

ಒಂದು ಸಾರ್ವಭೌಮ ಮನೆತನವಾಗಿ ಪರಿವರ್ತಿತವಾಯಿತು ಎನ್ನುವ ವಿಚಾರ ಈ ಶಾಸನದಿಂದ ತಿಳಿದುಬರುತ್ತದೆ .

 ಐಹೊಳೆ ಶಾಸನ ( ಕ್ರಿ . ಶ . 635 ) :

ಸಂಸ್ಕೃತದಲ್ಲಿ ರವಿಕೀರ್ತಿಯಿಂದ ರಚಿಸಲ್ಪಟ್ಟ ಚಾಲುಕ್ಯ ಅರಸ ಇಮ್ಮಡಿ ಪುಲಕೇಶಿಯ ಶಾಸನವಿದು

( ಶಾಲಿವಾಹನ ಶಕ 556 634 )

( ಐಹೊಳೆಯ ಮೇಗುತಿ ದೇವಾಲಯದಲ್ಲಿ ಇರುವ ಶಾಸನ ) ,

ಇಮ್ಮಡಿ ಮಲಿಕೇಶಿಯ ಸೈನಿಕ ಸಾಧನೆಗಳನ್ನು ತಿಳಿಯಲು ಇದು ಸಹಾಯಕವಾಗಿದೆ .

 ಕಪ್ಪೆ ಆರ ( ರೆ ) ಭಟ್ಟನ ಶಾಸನ ( ಬಿಜಾಮರ ಜಿಲ್ಲೆ ) ( ಬಾದಾಮಿ ) ( ಕ್ರಿ.ಶ. 7 ನೇ ಶತಮಾನ ) :

ಅರೆಭಟ್ಟನ ಶಾಸನದಲ್ಲಿ ಕನ್ನಡಿಗರ ತನವನ್ನು ಉಲ್ಲೇಖಿಸಿರುವ ಅಂಶ ತಿಳಿದುಬರುತ್ತದೆ .

ಶಾಸನದ ಪ್ರಕಾರ , ‘ ಕನ್ನಡದ ಮೊಟ್ಟಮೊದಲ ಶಾಸನ

ಒಳ್ಳೆಯವರಿಗೆ ಒಳ್ಳೆಯವನು ,

ಸದ್ಗುಣವುಳ್ಳವರಿಗೆ ,

ಸದ್ಗುಣನು ( ಸಾಧುಗೆ ಸಾಧು , ಮಾಧುರ್ಯಕ್ಕೆ ಮಾಧುರ್ಯ ೦ ) ,

ಕಿರುಕುಳ ನೀಡುವ ಜಗಳಗಂಟಿಗೆ ,

ತನ್ನ ಶೂರತ್ವವನ್ನು ವ್ಯಕ್ತಪಡಿಸದೆ ಬಿಡನು  ಬಾಧಿಷ್ಪಕಲಿಗೆ ಕಲಿಯುಗ ವಿಪರೀತನ್ ಬಂಧನಕ್ಕೆ ಗುರಿಪಡಿಸಿದ ಸಿಂಹವನ್ನು ಮುಕ್ತಗೊಳಿಸಿದವನು ಹೇಗೆ ಕೆಡುಕನ್ನು ಅನುಭವಿಸುತ್ತಾನೆಯೋ ,

ಅದೇ ರೀತಿ , ಅರಭಟ್ಟನೊಡನೆ ದ್ವೇಷವನ್ನು ಕಟ್ಟಿಕೊಂಡವನು ,

ಕೆಡುಕನ್ನೇ ಅನುಭವಿಸಬೇಕಾಗುತ್ತದೆ ಎನ್ನುವ ಅಂಶವನ್ನು ವ್ಯಕ್ತಪಡಿಸಿದೆ .

ಸಂಜನ ಫಲಕಗಳು ( ಪಾಸನಗಳು ) :

ಗೂರ್ಜರ ಪ್ರತೀಹಾರರು ಮತ್ತು ಪಾಲರನ್ನು ಸೋಲಿಸಿದ

ರಾಷ್ಟ್ರಕೂಟ ಅರಸ 3 ನೇ ಗೋವಿಂದನ ಸೇನೆ ಹಿಮಾಲಯದ ತಪ್ಪಲಿನವರೆಗೂ ಮುಂದುವರೆಯಿತು .

ಈ ಸಂದರ್ಭವನ್ನು ಕುರಿತು ಸಂಜನ ಫಲಕಗಳು ( ಶಾಸನಗಳು )

ಕುದುರೆಗಳು ಹಿಮಾಲಯದ ನದಿ ಪ್ರವಾಹಗಳ ತಣ್ಣನೆಯ ನೀರನ್ನು ಪಾನ ಮಾಡಿದವು ,

ಅವನ ಯುದ್ಧದ ಮದಗಜಗಳು ಗಂಗಾ ನದಿಯ ಪವಿತ್ರ ತೀರ್ಥವನ್ನು ಸೇವಿಸಿದವು ” ಎಂದು ಹೇಳುತ್ತವೆ .

ಈ ಹೇಳಿಕೆಯಲ್ಲಿ ಉತ್ತೇಕೆ ಇದ್ದರೂ ಕೂಡ ತನ್ನ ತಂದೆಯಂತೆ 3 ನೇ ಗೋವಿಂದ ದಿಗ್ವಿಜಯವನ್ನು ಸಾಧಿಸಿ ಹಿಂದಿರುಗಿದನೇ

ವಿನಃ ಯಾವುದೇ ಪ್ರದೇಶಗಳನ್ನು ವಶಪಡಿಸಿಕೊಳ್ಳಲಿಲ್ಲ ಎನ್ನುವ ಅಂಶ ಮನವರಿಕೆಯಾಗುತ್ತದೆ .

 ಬೇಲೂರು ( ಹಾಸನ ಜಿಲ್ಲೆ ) ಶಾಸನ ( ಕ್ರಿ . ಶ . 1117 ) :

ಅಲ್ಪ ಭಾಗ ಸಂಸ್ಕೃತ ಮತ್ತು ಅಧಿಕ ಭಾಗ ಕನ್ನಡದಲ್ಲೂ ಬರೆಯಲ್ಪಟ್ಟಿರುವ ಈ ಶಾಸನ ಹೊಯ್ಸಳ ಅರಸ ವಿಷ್ಣುವರ್ಧನನ ದಿಗ್ವಿಜಯಗಳನ್ನು ಕುರಿತು ವಿಶ್ಲೇಷಿಸುತ್ತದೆ .

ಈ ದಿಗ್ವಿಜಯಗಳ ಸವಿನೆನಪಿಗಾಗಿ 1117 ರಲ್ಲಿ ಚನ್ನಕೇಶವ ( ವಿಜಯನಾರಾಯಣ ) ದೇವಾಲಯವನ್ನು ನಿರ್ಮಿಸಿ ಶಾಸನವನ್ನು ದೇವಾಲಯದಲ್ಲಿ ಕೊರೆಸಲಾಗಿದೆ .
ಶಾಸನದಲ್ಲಿ ಪಟ್ಟದ ರಾಣಿ ಶಾಂತಲೆಯ ಉಲ್ಲೇಖವನ್ನೂ ಕಾಣಬಹುದು .

 ಶ್ರವಣಬೆಳಗೊಳದ ( ಹಾಸನ ಜಿಲ್ಲೆ ) ಶಾಸನ ( ಕ್ರಿ.ಶ. 1368 ) :

ಕನ್ನಡ ಭಾಷೆಯಲ್ಲಿ ಇರುವ ಈ ಶಾಸನ ಜೈನರು ಮತ್ತು ವೈಷ್ಣವರ ನಡುವೆ ಉಂಟಾದ ವೈಷಮ್ಯವನ್ನು

( ದೇವರ ಉತ್ಸವದ ವಿಚಾರದಲ್ಲಿ ಅಂದರೆ , ಆರಸರಿಂದ ಜೈನರು ಪಡೆದಿದ್ದ ಮಹಾವಾದ್ಯಗಳನ್ನು ವೈಷ್ಣವರು ಕಿತ್ತುಕೊಂಡಿದ್ದರು ) ಕುರಿತು ಉಲ್ಲೇಖಿಸಿದೆ .

ವಿಜಯನಗರ ಅರಸ ಬುಕ್ಕರಾಯನು ಅವರಲ್ಲಿದ್ದ ವೈಷಮ್ಯವನ್ನು ಬಗೆಹರಿಸಲು ಈ ಶಾಸನವನ್ನು ಹೊರಡಿಸಿದ್ದನು .

ಇದೇ ರೀತಿ ಇನ್ನೂ ಹತ್ತು ಹಲವು ಶಾಸನಗಳು ಇತಿಹಾಸ ರಚನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಹೇಳಬಹುದು .


0 Comments

Leave a Reply

Avatar placeholder

Your email address will not be published. Required fields are marked *