
ಕನ್ನಡ ಸಂಧಿಗಳು
ಕನ್ನಡ ಸಂಧಿಗಳು,kannada sandhigalu,sandhigalu in kannada,sandhigalu,sandhi galu in kannada,sandhigalu kannada grammar,kannada sandhigalu pdf
ಎರಡು ಪದಗಳ ನಡುವೆ ಕಾಲ ವಿಳಂಬವಿಲ್ಲದಂತೆ ಮತ್ತು ಆ ಪದಗಳ ಮೊದಲ ಪದದ ಕೊನೆಯಂಶವೂ , ಎರಡನೆಯ ಪದದ ಮೊದಲಂಶವೂ ಅರ್ಥಕ್ಕೆ ವ್ಯತ್ಯಾಸಬಾರದಂತೆ ಸೇರುವುದಕ್ಕೆ ‘ ಸಂಧಿ ‘ ಎಂದು ಕರೆಯುವರು .
ಅಥವಾ ಎರಡು ವರ್ಣಗಳನ್ನು ಕಾಲವಿಳಂಬವಿಲ್ಲದಂತೆ ಉಚ್ಚರಿಸುವುದನ್ನು ಸಂಧಿ ಎನ್ನುವರು .
ಉದಾ : –
ಮನೆ + ಯಿಂದ = ಮನೆಯಿಂದ
ಎ + ಇ = ಯ ಅಕ್ಷರ ಆಗಮವಾಗಿದೆ .
ಮಾತು + ಅನ್ನು = ಮಾತನ್ನು
ಉ + ಅ = ತ ಅಕ್ಷರ ಆಗಮವಾಗಿದೆ .
ಸಂಧಿಯಲ್ಲಿ ಎರಡು ವಿಧ
1 ) ಸ್ವರ ಸಂಧಿ : ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದನ್ನು ಸ್ವರಸಂಧಿ ಎನ್ನುತ್ತೇವೆ
2 ) ವ್ಯಂಜನ ಸಂಧಿ : – ಸ್ವರದ ಮುಂದೆ ವ್ಯಂಜನ ಬಂದು ಅಥವಾ ವ್ಯಂಜನದ ಮುಂದೆ ಸಂಧಿಯಾದರೆ ವ್ಯಂಜನ ಸಂಧಿ ಎನ್ನುತ್ತೇವೆ
ಕನ್ನಡ ಸಂಧಿಗಳು
ಸ ೦ ಧಿ ಪ್ರಕರಣ ನಡೆಯುವಾಗ ಅದರಲ್ಲಿ ಪದಗಳೆರಡು ಕನ್ನಡ ಪದಗಳಾಗಿದ್ದು , ಅಥವಾ ಯಾವುದಾದರೊಂದು ಪದ ಕನ್ನಡ ವಾಗಿದ್ದರೆ ಅದನ್ನು ಕನ್ನಡ ಸಂಧಿ ಎನ್ನುವರು
ಕನ್ನಡ ಸಂಧಿಯಲ್ಲಿ ಮೂರು ವಿಧಗಳು
1 ) ಲೋಪ ಸಂಧಿ
ಸ್ವರದ ಮುಂದೆ ಸ್ವರ ಬಂದರೆ ಪೂರ್ವಪದದ ಸ್ವರವು ಸಾಮಾನ್ಯವಾಗಿ ಬಿಟ್ಟುಹೋಗುತ್ತದೆ .
ಸಂಧಿಪದದಲ್ಲಿ ಬಿಟ್ಟುಹೋಗುವುದಕ್ಕೆ ಲೋಪವೆಂದೂ ಕರೆಯುತ್ತಾರೆ .
ಈ ಸಂಧಿಗೆ ‘ ಲೋಪಸಂಧಿ ‘ ಎನ್ನುವರು .
ಉದಾ : –
ಊರು + ಅಲ್ಲಿ = ಊರಲ್ಲಿ ( ಉ ಕಾರ ಲೋಪ )
1 ) ಊರು + ಅನ್ನು = ಊರನ್ನು
2 ) ಬೇರೊಬ್ಬ = ಬೇರೆ + ಒಬ್ಬ
3 ) ಊರೂರು = ಊರು + ಊರು
4 ) ಮೇಲೆಸೆ = ಮೇಲೆ + ಎಸ
5 ) ಊರೊಳಗೆ = ಊರ + ಒಳಗೆ
6 ) ಹುಚ್ಚೆದ್ದು ಹುಚ್ಚು + ಎದ್ದು
7 ) ನಾವೆಲ್ಲ = ನಾವು + ಎಲ್ಲ
8 ) ಮಾತನ್ನು = ಮಾತು + ಅನು
2 ) ಆಗಮ ಸಂಧಿ
ಸ್ವರಕ್ಕೆ ಸ್ವರವನ್ನು ಸೇರಿಸುವಾಗ ಅರ್ಥ ಕೆಡುವಂತಿದ್ದರೆ , ಅವೆರಡು ಸ್ವರಗಳ ಜೊತೆಗೆ ಇನ್ನೊಂದು ವರ್ಣ ( ಅಕ್ಷರ ) ವನ್ನು ಸೇರಿಸಬೇಕು .
ಹೀಗೆ ಹೊಸದಾಗಿ ಒಂದು ವರ್ಣವನ್ನು ಸೇರಿಸಿ ಸಂಧಿ ಮಾಡುವುದನ್ನು ‘ ಆಗಮ ಸಂಧಿ ‘ ಎನ್ನುವರು
ಉದಾ : –
1 ) ಕೈಯೆತ್ತು = ಕೈ + ಎತ್ತು
2 ) ಈಯಲು = ಈ + ಅಲು
3 ) ಕುಲವನ್ನು = ಕುಲ + ಅನ್ನು
4 ) ಗೋವಿಂದ = ಗೋ + ಇಂದ
ಈ ಸಂಧಿಕಾರ್ಯದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಯ್ , ವ್ಯ ವ್ಯಂಜನಗಳು ಹೊಸದಾಗಿ ಆಗಮವಾಗುತ್ತವೆ .
-
ಯಕಾರಾಗಮ
ಆ ಇ ಈ ಎ ಏ ಐ ಒ ಸ್ವರಗಳ ಮುಂದೆ ಸ್ವರಗಳು ಬಂದರೆ , ಆ ಎರಡೂ ಸ್ವರಗಳ ಮಧ್ಯದಲ್ಲಿ ಯಕಾರಾಗಮವಾಗುತ್ತದೆ . ಇದು ‘ ಯಕಾರಾಗಮ ಸಂಧಿ ‘
ಉದಾ : –
1 ) ಮುದಿ + ಅಪ್ಪ = ಮುದಿಯಪ್ಪ ( ಇ + ಅ = ಯ್ )
2 ) ಸ್ತ್ರೀ + ಆರು = = ಸ್ತ್ರೀಯರು
3 ) ಕೆರೆ + ಅಲ್ಲಿ = ಕೆರೆಯಲ್ಲಿ
4 ) ಮಳೆ + ಯಿಂದ = ಮಳೆಯಿಂದ
5 ) ಚಳಿ + ಅಲ್ಲಿ = ಚಳಿಯಲ್ಲಿ
6 ) ಗಾಳಿ + ಅನ್ನು ಗಾಳಿಯನ್ನು
7 ) ದೊರೆ + ಎಂದು = ದೊರೆಯೆಂದು
- ‘ವ’ಕಾರಾಗಮ
ಉ ಊ ಋ ಓ ಔ ಕಾರಗಳ ಮುಂದೆ ಸ್ವರವು ಬಂದರೆ ‘ ವ್ ‘ ವ್ಯಂಜನ ಆಗಮವಾಗುವದು . ‘ ವ ‘ ಕಾರ ಆಗಮವಾಗುವುದು .
ಉದಾ : –
ಕರು + ಅನ್ನು = ಕರುವನ್ನು
ಗುರು + ಅನ್ನು = ಗುರುವನ್ನು
ಗುರು + ಇಗೆ = ಗುರುವಿಗೆ
ಪಿತ್ರು + ಅನ್ನು = ಪಿತ್ರುವನ್ನು ಹೂ + ಇಂದ = ಹೂವಿಂದ
3 ) ಆದೇಶ ಸಂಧಿ
ಇದು ಕನ್ನಡದ ವ್ಯಂಜನ ಸಂಧಿ . ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶ ಸಂಧಿ .
ಇಲ್ಲಿ ಉತ್ತರಪದದ ಮೊದಲ ವ್ಯಂಜನದ ಬದಲಾಗಿ ಇನ್ನೊಂದು ವ್ಯಂಜನ ಬರುತ್ತದೆ .
ಸಾಮಾನ್ಯವಾಗಿ ಉತ್ತರಪದದ ಮೊದಲಿನ ಕ್ ತ್ ಪ್ ಗಳಿಗೆ ಗ್ ದ್ ಬ್ ಗಳು ಆದೇಶವಾಗುವುದರಿಂದ , ಈ ಆದೇಶ ಸಂಧಿ ಎನ್ನುವರು .
ಸಂಧಿಯನ್ನು ಕೆಲವು ಕಡೆ ” ಪ ” ಕಾರಕ್ಕೆ ‘ ಚ ‘ ಕಾರ ಈ ಕಾರಕ್ಕೆ ವ ಕಾರ ಆದೇಶವಾಗುತ್ತದೆ .
ಉದಾ : –
1 ) ಕಂಬನಿ = ಕಣ್ + ಪನಿ
2 ) ಮಳೆಗಾಲ – ಮಳೆ + ಕಾಲ
3 ) ಹಳೆಗನ್ನಡ ಮಳೆ ಕನ್ನಡ
4 ) ಬೆಟ್ಟದಾವರೆ ಪಟ್ಟದ + ತಾವರೆ
5 ) ಕಂಗೆಟ್ಟು = ಕಣ್ + ಕಟ್ಟು
6 ) ಅಡಿಗಲ್ಲು = ಆಡಿ + ಕಲ್ಲು
7 ) ಕೆಳದುಟಿ = ಕೆಳ + ತುಟಿ
8 ) ಮನೆಗೆಲಸ = ಮನೆ + ಕೆಲಸ