ನಮ್ಮಪ್ಪ ಖರೆನ ಕವಿತೆ

ಕನ್ನಡ ಕವಿತೆಗಳು । kannada kavithegalu । kavithegalu । kavithegalu in kannada । ನಮ್ಮಪ್ಪ ಖರೆನ ಕವಿತೆ । kannada kavanagalu

ಕನ್ನಡ ಕವಿತೆಗಳು । kannada kavithegalu । kavithegalu । kavithegalu in kannada । ನಮ್ಮಪ್ಪ ಖರೆನ ಕವಿತೆ । kannada kavanagalu

ನಮ್ಮಪ್ಪ ಯಾವಾಗ್ಲೂ
ಅವ್ವನ ಬದುಕು ಸಂತ್ಯಾಗ
ಹೆಂಗ್ ಕಳ್ದೋದ್ನೋ ಅಂತಾ
ಕೇಳ್ತಿದ್ದೆ
ಅವ್ವ ಆ ಮಾತಿಗೆ ಮೂಕಿ.

ಅವ್ವ ಹೇಳ್ತಿದ್ಲು ‘ನೀನ್ ಥೇಟ್ ನಿಮ್ ಅಪ್ಪನ್ ಹಂಗ
ಕಿವಿಗೆ ಬಿದ್ದೇಟಿಗೆ ಮುರುಕು ಕನ್ನಡಿ ಮುಂದ ನಿಂತು ಹುಡುಕ್ತಿದ್ದೆ ಕಾಣಲೇ ಇಲ್ಲ
ಕಂಡಿದ್ದು ಅವ್ವನ ಒಡಕು ಬದುಕು ಮಾತ್ರ

ನನಗೆ ಕಂಡಿದ್ದು ಬದುವಷ್ಟ
ಅದ್ರಾಗ ಇಣುಕಿ ಕಣ್ ಕಣ್ ಬಿಟ್ಟು ದ್ದೆ
ಅಂಚಿನ ನೆರಳಾಗ ಕುಂತಪ್ಪ ನನ್ನ ನೋಡ್ತಾನನಕೊಂಡು..
ಅವ್ವನ ಕೊಳ್ಳಾಗಿನ ದ್ಯಾವ್ರು
ಬೆವರು ಕುಡುದು ಕಳ್ಳಾಗ ಇಳುದು ಕುಣುದಿದ್ದ.

ತೆಲಿಮ್ಯಾಗ ಪುಟ್ಟಿ ಹೊತ್ತವ್ವ
ಊರಾಡಾಕ ಹೊಂಟಾಗ
ಯಾವುದಾರ ಮನಿಗೆ
ಬಾಗಲಾಗ್ಯಾನೇನಂತ
ಮನ್ಯಾನವ್ರನೆಲ್ಲಾ ಕೇಳಿದ್ದೆ.
ಬಾಗಲಾಗಿ ಕಾಣದಪ್ಪ
ಕನಸ್ನ್ಯಾಗ ಉಳುಕೊಂಡ.

kannada kavithegalu

ಒಲಿಮುಂದೆ ಕುಂತವ್ವ
ರೂಟ್ಪೆ ಬಡಿಬಕಾರ ಕಣ್ಣಾಗ
ಉಕ್ಕಿದ್ಲು ಗಂಗಮ್ಮ ತಾಯಿ
ನನ್ನ ಕಣ್ಣಾಗ ಉಕ್ಕಿದ ಯಮುನೀನೂ ಕಲಿಸ್ಕೊಂಡು
ನೀರುಹರಿದ ತಂಪಿನ ಜಾಡು ಒಳಗ
ಅಪ್ಪ ಧಿಗ್ಗಂತಾ ಬಂದಾನೇನೋ ಅಂದ್ರ
ಬಂದದ್ದು ಕಟ್ಟು ಕಥೆ ಹುದ್ಲು.

ಅವ್ವಗ ಆಕಿ ಅಪ್ಪ ಯಾರೊ
ಯಾವಾಗ್ಲೂ ನನ್ನ ನೋಡಿ
ನೀನ ನನ್ನಪ್ಪಂತೇಳಿ ಲಟುಗೆ ಮುರೀತಿದ್ಳು.
ಈಕಿಗೆ ನಾ ಅಪ್ಪಾ ಆದಂಗ
ನನ್ ಹೊಟ್ಯಾಗಾರ ನಮ್ಮಪ್ಪ ಹುಟ್ಟತಾನ ಅಂತಾ ಅನ್ಕಂಡೆ

ನಮ್ಮಪ್ಪ ಇಷ್ಟೆಲ್ಲಾ ಕತಿ ಹೇಳಿ ಕಣ್ಣಾಗ ನೀರು ತಗಿಬಕಾರೆ
ನಂಗನ್ನಿಸ್ತಿತ್ತು ನಮ್ಮಪ್ಪ ಖರೆನಾ
ಕವಿತ

ತಂದೆಯರ ದಿನಾಚರಣೆ ಒಂದು ಕವನ

ತಂದೆ ಎಂದರೆ…..
ನಮ್ಮನ್ನು ಎತ್ತರಕ್ಕೆ ಎತ್ತುವ ಶಕ್ತಿ,
ಪ್ರೀತಿಸುವ ಹೃದಯ,
ಬಲ ತುಂಬುವ ಭುಜ,
ಭರವಸೆಯ ನಗು,
ಆಶೀರ್ವದಿಸುವ ಹಸ್ತ,
ಬೆಚ್ಚಗಿನ ಅಪ್ಪುಗೆ ನೀಡುವ ತೋಳು.
ಈ ಪ್ರೀತಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ?.

ಬಿದ್ದಾಗ ಕೈ ಹಿಡಿದು ಎತ್ತಿದ್ದ…
ಅತ್ತಾಗ ಕಣ್ಣೀರು ಒರೆಸಿದ…..
ದಾರಿ ಕಾಣದಿದ್ದಾಗ ಕೈ ಹಿಡಿದು ಮುನ್ನಡೆಸಿದ ಎಲ್ಲಾ ತಂದೆಯರಿಗೆ…

ಮನದ ಮೂಲೆಯ ಕದವ ತೆರೆಯಲು ಮಧುರ ನೆನಪಿನ ಸ್ಪರ್ಷವೋ, ಹೃದಯದಾಚೆಗೆ ಕನಸಿನೀಚೆಗೆ ಅನುಬಂಧದರಿವಿನ ತ್ಯಾಗವೋ, ಮನೆಯ ಅಂಗಳದ ಹೂವು ಅರಳಿದೆ ಅಹ್ಲಾದಿಸುವವರಿಲ್ಲವೋ, ಮನದೊಳಗಿನ ಹೂವು ಬಾಡಿದೆ ಅರಿತು ನೀರೆರೆವರಿಲ್ಲವೋ,
ಭೂಮಿ ಬಂಜರವಾಯಿತು,
ನಂಬಿಕೆಯೇ ಪಂಜರವಾಯಿತು.‌..☺️

ಹಾಲ್ಬೆಳದಿಂಗಳನು ಸೂಸುವ ಓ ಶಶಿಯೆ,
ನೀ ಅಡಗಿ ಕುಳಿತಿರುವೆಯಾ ನನ್ನ ಚೆಲುವೆಯ ಕಂಡು?
ಪ್ರತಿ ಮಾಸ ನೀ ಬರುವೆ,
ಪ್ರತಿ ಮನಸ ನೀ ಕದಿಯುವೆ,
ಮಾಸದ ಪ್ರೀತಿಯ ಕೊಡುವ ನನ್ನ ಗೆಳತಿಯ ಜೊತೆ ಸ್ಪರ್ಧೆಗೆ ನೀನಿಳಿವೆ, ಸೋತು ಸೊರಗಿ ಹೋಗಿ ಸರಸರನೇ ಮರೆಯಾಗುವೆ,

ನಿನ್ನ ಕಾಂತಿಗೆ ನಾನು ಸೋಲೆನು, ಭೂಮಿಯೊಲವ ಮರೆತು ನಾನಿರೆನು….

ಸುಖ ಜೀವನಕ್ಕೆ ಸಪ್ತಸೂತ್ರಗಳು :-

೧. ಈಗಿನ ಕಾಲ ಪರಿಸ್ಥಿತಿಯಲ್ಲಿ ಹಣ ಬಹಳ ಮುಖ್ಯ. ಆದರೆ ಹಣವನ್ನೇ ಜೀವನದ ಗುರಿ ಮಾಡಿಕೊಳ್ಳಬೇಡಿ. ಕೋಟ್ಯಾಧೀಶರಾಗುವುದು ಬೇಡ. ಸಾಲ ಸೋಲ ಗಳಿಲ್ಲದ ಕೆಲವು ಲಕ್ಷಗಳಾದರೂ ನಿಮ್ಮಬಳಿ ಇರಲಿ. ಯಾವುದನ್ನೂ ಕಾನೂನು ಕಾಯ್ದೆಯ ಚೌಕಟ್ಟಿನೊಳಗೆ ಸಂಪಾದಿಸಿರಿ.

೨. ಬಾಡಿಗೆ ಮನೆ ಎಂದಿಗೂ ನಿಮಗೆ ಖುಷಿತರಲಾರದು.
ಅಲ್ಪ ತೃಪ್ತರಾಗಿ ಚಿಕ್ಕದಾದರೂ ಚೊಕ್ಕದಾದ ನಿಮ್ಮದೇ ಒಂದು ಸಣ್ಣ ಸ್ವಂತ ಮನೆ ಮಾಡಿಕೊಳ್ಳಿರಿ. ಸಾಲಮಾಡಿ ಮನೆ ಮಾಡಿದ್ದರೆ ಆದಷ್ಟು ಶೀಫ್ರ ಸಾಲತೀರಿಸಿ. ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ.

೩. ಎಲ್ಲಕ್ಕಿಂತಾ ಅತಿಮುಖ್ಯ ನಿಮ್ಮ ಆರೋಗ್ಯ.
ನಿಮ್ಮ ಆಹಾರ ಹಾಗೂ ಚಿಂತನೆ ಆರೋಗ್ಯವನ್ನು ನಿರ್ಧರಿಸುತ್ತದೆ. ಆದುದರಿಂದ ಹಿತ ಮಿತ ಆರೋಗ್ಯಯುಕ್ತ ಸಾತ್ವಿಕ ಆಹಾರ , ವ್ಯಾಯಾಮ , ಧ್ಯಾನ ಹಾಗೂ ಮನಸ್ಸಿಗೆ ಸಕಾರಾತ್ಮಕ ಭಾವನೆ ಉಂಟುಮಾಡುವ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಿರಿ.
ಅದರ ಜತೆಗೆ ಮೆಡಿಕಲ್ ಪಾಲಿಸಿ ಮಾಡುವುದನ್ನು ಮರೆಯದಿರಿ.

೪. ವೃಥಾ ಸಣ್ಣಪುಟ್ಟ ವಿಷಯಕ್ಕೆ ವೈದ್ಯರನ್ನಾಗಲಿ , ವಕೀಲರನ್ನಾಗಲಿ, ರಾಜಕಾರಣಿಗಳನ್ನಾಗಲಿ, ಜ್ಯೋತಿಷ್ಯ , ವಾಸ್ತು ತಜ್ಞ ರನ್ನಾಗಲಿ ಭೇಟಿಮಾಡುವ ದುರಭ್ಯಾಸ ದಿಂದ ದೂರವಿರಿ. ನಿಮ್ಮ ಹಣೆ ಬರಹ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.

೫. ನಿಮ್ಮ ೫೦ ರ ಪ್ರಾಯದವರೆಗೆ ಹಣ ಸಂಪಾದನೆ – ಆರೋಗ್ಯ ವರ್ಧನೆಗೆ ಹೆಚ್ಚು ಗಮನ ನೀಡಿರಿ.
ನಂತರದ ದಿನ ಪ್ರವಾಸ , ಸಂಗೀತ , ನಾಟಕ , ಸಾಹಿತ್ಯ , ಕಲೆ ಕಡೆ ಹೆಚ್ಚು ಆಸಕ್ತರಾಗಿರಿ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಿರಿ. ಸಾಲ ಮುಕ್ತ ಜೀವನ ನಡೆಸಿರಿ.

೬. ವೃಥಾ ಯಾರೊಂದಿಗೂ ಚರ್ಚೆ, ವಾಗ್ವಾದ ಕ್ಕೆ ಇಳಿಯಬೀಡಿ.
ಅಂತಹ ಸ್ಥಳ ಯಾ ವ್ಯಕ್ತಿ ಗಳಿಂದ ದೂರ ಇರುವುದು ನಿಮ್ಮ ಆರೋಗ್ಯ ಕ್ಕೆ ಕ್ಷೇಮಕರ.
ನಿಜಕ್ಕೂ ಯಾವುದು ಸತ್ಯವಲ್ಲ – ಯಾವುದು ಸುಳ್ಳಲ್ಲ!!
ಆದುದರಿಂದ ನಿಮ್ಮ ಮನಸ್ಸಿಗೆ ಯಾವುದು ಸರಿಯೋ ಅದನ್ನು ಮಾಡಿ.

೭. ಅತಿ ಸಲುಗೆ ಅತಿ ಪ್ರೀತಿ ಯಾರೊಂದಿಗೂ ಬೇಡ.
ಎಲ್ಲರೂ ಸ್ವಾರ್ಥಿಗಳೇ! ಇತರರಿಗಿಂತಾ ಮನೆ ಮಂದಿಯನ್ನು ಹೆಚ್ಚು ಪ್ರೀತಿಸಿ.‌
ನಾನು ನನಗಾಗಿ ..ದೇವರು ಎಲ್ಲರಿಗಾಗಿ ಎಂಬಂತೇ ಬಾಳಿರಿ.

ಇಂದೇ ನನ್ನ ಕೊನೆಯದಿನ ! ನಾಳೆ ನಾನಿಲ್ಲ !!! ಎಂಬಂತೆ ಕಾಯಾ ವಾಚಾ ಮನಸಾ ಬದುಕಿದಲ್ಲಿ , ನಿಮ್ಮಷ್ಟು ಸುಖಿ ಜಗತ್ತಿನಲ್ಲಿ ಬೇರಾರು ಇರಲಿಕ್ಕೆ ಸಾಧ್ಯ ವಿಲ್ಲ….

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ

ಉಪರಾಷ್ಟ್ರಪತಿ ನೇಮಕ &ಅಧಿಕಾರ

ಪ್ರಧಾನ ಮಂತ್ರಿ ನೇಮಕ

ಪ್ರಧಾನ ಮಂತ್ರಿ ಅಧಿಕಾರ


0 Comments

Leave a Reply

Avatar placeholder

Your email address will not be published. Required fields are marked *