ಕವನಗಳು

kannada kavanagalu

kavanagalu | kannada kavanagalu | kannada kavanagalu love | love kavanagalu | kannada feeling kavanagalu | kannada kavanagalu about life

1

ಸತ್ಕಾರ್ಯ ಮಾಡುವಾಗ
ಶತ್ರುಗಳು ಹುಟ್ಟುವುದು ಸಹಜ !!

ಸಮಾಜದ ಒಳಿತಿಗಾಗಿ ಹೆಜ್ಜೆಯನ್ನಿಟ್ಟ
ಕಾಲ ಎಳೆಯುವುದು ಸಹಜ !!

ಹೊಗಳಿದಾಗ ಹಿಗ್ಗದೆ
ತೆಗಳಿದಾಗ
ಕುಗ್ಗದೆ ಬದುಕು ಸಾಗಿಸು ಸಹಜ!!

2

ಬಣ್ಣದ ದಾವಣಿಯ ತೊಟ್ಟು
ಉದ್ದನೆಯ ಜಡೆಗೆ ಮಲ್ಲಿಗೆಯ ಏರಿಸಿ
ಬೆಳ್ಳಿಯ ಕಾಲ್ಗೆಜ್ಜೆ ಸದ್ದು ಮಾಡುತ್ತಾ
ಹಂಸವನ್ನೆ ನಾಚಿಸುತ್ತ ನೀ ನಡೆದಾಗ
ಮನದಲ್ಲಿ ಇನ್ನಿಲ್ಲದ ಬಯಕೆ
ಹೇಳು ಚೆಲುವೆ

ನೀ ಒಮ್ಮೆ ಹಿಂತಿರುಗಿ ಬೀರುವೆಯ ಎನಗೆ ಹೂ ನಗೆ
ಪ್ರೀತಿಯ ಕೊಳದಲ್ಲಿ ಪಾದವ ತೊಳೆದು
ಹೊರಟಿರುವೆ ನೀ ಎಲ್ಲಿಗೆ?

ಎದೆಯ ಕೊಳದಲ್ಲಿ ನೀ ಎಬ್ಬಿಸಿದ ತರಂಗ ಹಾಡುತಿದೆ
ಕೇಳಿದೆಯ ಒಲವಿನ ಶೃತಿಯ ಅನುರಾಗ
ಯಾವ ಶಿಲ್ಪಿಯ ಕಲ್ಪನೆಯಾ ಕಲಾಕೃತಿ ನೀನು?
ಬಿಡುವಿನ ಸಮಯದಿ ಆ ಬ್ರಹ್ಮ ನಿನ್ನ ಸೃಷ್ಟಿಸಿದನೇನು?
ಅಸೂಯೆ ಮೂಡುವುದು ನೋಡುತ್ತಿದ್ದರೆ ನಿನ್ನ ಅಂದವ
ನಾಚುವ ನಿನ್ನ ಕಣ್ಣಿನಲ್ಲೇ ಕಾಣಬಲ್ಲೆ ಕಣೆ ನಿನ್ನ ಚಂದವ

3

ನಿನ್ನ ನಾ ಕೃಷ್ಣನೆಂದು ಊಹಿಸಿದರೆ
ನಾನೇನಾಗಲಿ?
ನಿನ್ನ ಮನದರಸಿ ರಾಧೆಯಾಗಲೇ?
ಪಟ್ಟದರಸಿ ರುಕ್ಮಿಣಿ ಯಾಗಲೆ?
ಸತಿ ಸತ್ಯಭಾಮೆ ಯಾಗಲೆ?
ಅಥವಾ
ನಿನ್ನ ಕೊಳಲ ನಾದಕ್ಕೆ ಸೋತ ಗೋಪಿಕೆ ಯಾಗಲೆ?
ನೂರಾ ಎಂಟು ಆಯ್ಕೆಗಳಿವೆ ಆದರೂ
ನಿನ್ನ ಅರಾಧಿಸೋ ಮೀರಳಾಗೋ ಆಸೆ ನನದು
ನನಗಿಲ್ಲ ನಿನ್ನ ಮನದಿ ನೆಲೆಸೋ ಬಯಕೆ
ನನಗಿಲ್ಲ ನಿನ್ನ ಪತ್ನಿಯಾಗೊ ಹರಕೆ
ನಿನ್ನ ಸ್ಮರಿಸುತ ಬದುಕಿರಲು ನಾ
ಬೇಡ ಮಾಧವ ಇನ್ನೇನು ಈ ಜೀವಕೆ

4

ಜೀವನ ಒಂದು ಜಾತ್ರೆ
ಹುಟ್ಟು ಒಂದು ಆರಂಭ
ನಂತರ ಬದುಕುವ ದಿವಸಗಳು
ಓಂದಡೆ ಜಗಳ ಇನೋಂದಡೆ
ಸಂತೋಷ ಸಮಯ ನೀಡುವ
ಸವಾಲುಗಳನ್ನು ಸಮರ್ಥವಾಗಿ
ಎದುರಿಸಲು ಪ್ರಯತ್ನಿಸುವ ವೇಳೆಗೆ
ಜೀವಿತಾವಧಿ ಮುಗಿದು ಸಾವು ಬೆನ್ನ
ಹಿಂದೆ ಬಂದು ಸ್ಮಶಾನದ ಕಡೆಗೆ
ಮೌನವಾಗಿ ಕರೆದ್ವಯೂವದು
ಒಂದು ದಿನ ಮುಗಿದು ಹೋಯಿತು
ಇಷ್ಟೇ ಜೀವನ………

5

ನಾಚಿ ನೀರಾದ ಸೊಬಗಿಗೆ ಮೌನಿ ನಾನಾದೆ ಈಗಲೇ ಚೆಂದ ಚೆಲುವಿನ ಮೆರಗಿಗೆ ಶರಣಾದೆ ಹಗಲೇ ಮುಂಗುರುಳ ಕೆಣಕಿದ ಕೇಶಕೆ ನಯನವೇ ನಾಚಿದೆ ಯಾಕೆಲೇ ಹಳದಿಕೆಂಪು ರವಿಕೆಗೆ ಕನ್ನಡತಿಯ ಕಂಪು‌ಸೂಸಿದೆ ಹೇಳೆಲೇ ಇದು ನಿನೇನಾ ನಿನ್ನ ಭ್ರಮೆಯೇನಾ…….

6

ಮುಂಜಾನೆ ಸೋನೆ ಸುರಿದಿದೆ ತಣ್ಣನೆ ತಂಬೆಲರ ಇಂಪಿಗೆ ನಡುಗಿದ ಮೆಲ್ಲನೆ ಅಡಗರುವ ನೇಸರನೇ ಹೊರಬರದೇ ನಡುಗಿದೆ ಮೋಡಗಳ‌ ತುಂಟಾಟಕೆ ಭೂರಮೆಯೆ ನಡುಗಿದೆ ನಗುವನು ಬೀರಿದೆ…….

7

ಪ್ರಕೃತಿಯ ಒಡಲಲ್ಲಿ ಅರಳಿರುವ ಮಲ್ಲಿಗೆ ನಗುವಿನ ಸಂಪಿಗೆ ಮೊಗದಲ್ಲಿ ಕಾಡುವ ಕಮಲದ ಕಣ್ಣಿಗೆ ಮೂಗುತಿಯ ಬಾರಕೆ ಸೋತಿರುವ ಜಾಜಿಯೇ ಖುಷಿಯಲಿ ಬೆಳಗುವ ತುಟಿಜೇನ ಕಾಡಿಗೆ ಇನ್ನೆಷ್ಟು ಚೆಂದವೇ ನಿನಲೊವಿನ ಸಿಹಿಯು‌ ಜೊತೆಯಾಗಿ ನೀನೀರು ಬಹುದಿನದವರೆಗೂ…….

8

ಮುದ್ದು ಮುಖದ ಅಂದಗಾತಿಯೆ
ಪಟ ಪಟ ಮಾತನಾಡುವ ಮಾತುಗಾತಿಯೆ
ಮಾರುದ್ದ ಜಡೆಯೋಳೆ
ಕಣ್ಣಂಚ್ಚಿಂದ ಸೆಳೆಯೋಳೆ
ಎಷ್ಟು ವರ್ಣಿಸಿದರೂ ಸಾಲುತ್ತಿಲ್ಲ ಪದಗಳು
ನಿನ್ನೆದುರಿಗೆ ಸೋಲುತ್ತಿವೆ ನನ್ನ ಭಾವನೆಗಳು
ಹೀಗೆಯೇ ಸಾಗಲಿ ನಮ್ಮಿಬ್ಬರ ಸಂಬಂಧ
ಎಂದು ಮುರಿಯದಿರಲಿ ಈ ಅನುಬಂಧ

9

ಓ ಹೆಣ್ಣೇ
ನಿನ್ನ ಕೂದಲು ಎಲೆಗಳ ಹಂಗೆ
ನೀನು ನಕ್ಕರೆ ಮರದ ಫಲನೆ

ನಿನ್ನ ನೋಡಿದರೆ ಅಷ್ಟೆ
ನಮ್ಮ ಕತೆ

ನೀ ಶಾಂತಿಯಿಂದ ಸುಮ್ಮನೆ ಇರುವೆ
ಆದರೆ ಕೋಪಗೊಂಡರೇ
ಜಗತ್ತನ್ನೇ ಕೆಂಡಮಂಡಲವನ್ನಾಗಿ ಮಾಡುವೆ

ಪ್ರಕೃತಿ ನೀ ಎಷ್ಟು ಸುಂದರ

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ ,  

ಉಪರಾಷ್ಟ್ರಪತಿ ನೇಮಕ &ಅಧಿಕಾರ           

 ,ಪ್ರಧಾನ ಮಂತ್ರಿ ನೇಮಕ

 ,ಪ್ರಧಾನ ಮಂತ್ರಿ ಅಧಿಕಾರ

kannada kannada

 


0 Comments

Leave a Reply

Avatar placeholder

Your email address will not be published. Required fields are marked *