ಕನಕದಾಸರು ( ಕ್ರಿ..1508-1606 )ಕನಕದಾಸರು,kanakadasa information in kannada,kanakadasa poems in kannada,kanakadasa poems in kannada pdf,information of kanakadasa in kannada

 

 

ಕನಕದಾಸರು,kanakadasa information in kannada,kanakadasa poems in kannada,kanakadasa poems in kannada pdf,information of kanakadasa in kannada

 

 

 

 

ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದು ಪರಿಗಣಿತವಾಗಿರುವ ಕನಕದಾಸರು ಕನ್ನಡದ ಶ್ರೇಷ್ಠ ಸಂತ ಕವಿ , ಹಾಗೂ ಕೀರ್ತನಕಾರರು , ಪುರಂದರ ದಾಸರ ಸಮಕಾಲೀನರು , ವ್ಯಾಸರಾಯರ ಶಿಷ್ಯರೂ ಆದ ಕನಕದಾಸರು ಧಾರವಾಡ ಜಿಲ್ಲೆಯ ( ಈಗ ಹಾವೇರಿ ) ಬಾಡ ಎಂಬ ಗ್ರಾಮದಲ್ಲಿ ಜನಿಸಿದರು .

ಇವರ ಪೂರ್ಣ ಹೆಸರು ತಿಮ್ಮಪ್ಪನಾಯಕ , ತಂದೆ- ಬೀರಪ್ಪ , ತಾಯಿ – ಬಚ್ಚಮ್ಮ ಕಾಗಿನೆಲೆಯ ಆದಿಕೇಶವ ಇವರ ಆರಾಧ್ಯ ದೈವ ಆದ್ದರಿಂದಲ್ಲೇ ತಮ್ಮ ಕೀರ್ತನೆಗಳನ್ನು ಕಾಗಿನೆಲೆಯಾದಿ ಕೇಶವಬಾಡಾದಾದಿಕೇಶವ ( ಆದಿ ಕೇಶವ )  ಅಂಕಿತದಿಂದ ರಚಿಸಿದ್ದಾರೆ . ಇವರು ಜೀವನದಲ್ಲುಂಟಾದ ನಿರಸನದಿಂದ ವ್ಯಾಸರಾಯರಿಂದ ದೀಕ್ಷೆ ಪಡೆದು ಕನಕದಾಸರಾದರು .

.ದಾಸರೆಂಬ ಒಂದು ಬುಡಕಟ್ಟಿಗೆ ಆದರೆ ಸೇರಿದವರಿರಬಹುದೆಂದು ಕೆಲವರ ಅಭಿಪ್ರಾಯ ಈ ದಾಸ ಜನಾಂಗದವರು ರಾಮಾನುಜ ಪಂಥದ ಅನುಯಾಯಿಗಳಾಗಿದ್ದರೆಂದೂ ಇದರಿಂದ ಕನಕದಾಸರು ತಮ್ಮ ಮೋಹನ ತರಂಗಿಣಿಯಲ್ಲಿ ರಾಮಾನುಜಚಾರ್ಯರನ್ನು ತಾತಾಚಾರ್ಯರನ್ನು ಸುತ್ತಿಸಿದ್ದಾರೆ .

ಎಂದು ತರ್ಕಿಸಲಾಗಿದೆ . ತಮ್ಮ ಕೀರ್ತನೆಗಳಲ್ಲಿ ದೇರ ದೇವರನ್ನು ಕೆಲವು ಕೊಂಡಾಡಿರುವುದರಿಂದ ಇವರು ಕುರುಬರೆಂದು ಇಲ್ಲವೆ ಬೇಡರ ಬುಡಕಟ್ಟಿನ ಪಂಥದವರೆಂದು ಹೇಳುವವರೂ ಇದ್ದಾರೆ .

ಒಟ್ಟಿನಲ್ಲಿ ತಮ್ಮ ಕೃತಿ ಹಾಗೂ ಸಾಧನೆಯಿಂದ ಕನಕದಾಸರೆಂದೇ ಪ್ರಸಿದ್ಧಿ ಹೊಂದಿದರು .

ಇವರು ಹಲವು ಪವಾಡಗಳನ್ನು ಮೆರೆದಂತೆ ತಿಳಿಯುತ್ತದೆ .

ಉಡುಪಿಯ ಶ್ರೀ ಕೃಷ್ಣ ದೇವಾಲಯದಲ್ಲಿರುವ ಕನಕನ ಕಿಂಡಿ ಇಂಥ ಪವಾಡಗಳಲ್ಲಿ ಒಂದೆಂಬ ನಂಬಿಕೆಯಿದೆ .

ನಾಯಕ  ಕನಕದಾಸರು ಆನೇಕ ಭಾವಪೂರ್ಣ ಕೀರ್ತನೆಗಳನ್ನು ರಚಿಸಿರುವವರಲ್ಲದೆ ,

ಮೋಹನ ತರಂಗಿಣಿ ,

ನಳಚರಿತ್ರೆ ,

ಹರಿಭಕ್ತಿಸಾರ ,

ರಾಮಧಾನ್ಯ ಚರಿತ್ರೆ ”

ಎಂಬ ಕೃತಿಗಳನ್ನು ರಚಿಸಿದ್ದಾರೆ ಅಲ್ಲದೆ ನೃಸಿಂಹಸ್ತವ ಕೃತಿಯನ್ನು ಸಹ ರಚಿಸಿದ್ದಾರೆ . ಆದರೆ ಅದು ಉಪಲಬ್ಧವಿಲ್ಲ .

ಕನಕದಾಸರ ಕಾವ್ಯಗಳಲ್ಲಿ

” ಮೋಹನ ತರಂಗಿಣಿ ” ಸಾಂಗತ್ಯ ಗ್ರಂಥವಾಗಿದೆ ಇದಕ್ಕೆ ಕೃಷ್ಣ ಚರಿತ್ರೆ ಎಂಬ ಮತ್ತೊಂದು ಹೆಸರೂ ಇದೆ .. ಮನ್ಮಥನ ಮನರ್ಜನ ಶಂಬರಾಸುರವಧೆ , ಉಷಾ ಅನಿರುದ್ಧರ ಪ್ರೇಮಲೀಲೆ ಬಾಣಾಸುರ ವಿಜಯ , ಹಣೆಗಣ್ಣಿನಿಂದ ಕಾಮದಹನ ಕಾಮೋತ್ಪತ್ತಿ ಶಿವ ಎಂದು . ಇವು ಕಾವ್ಯದ ವಸ್ತುಗಳಾಗಿವೆ . ತಮ್ಮ ಕೃತಿಯನ್ನು ” ಪರಿಶರಣರಚ್ಚು ಬುಧಜನರಿಗೆ ಮೆಚ್ಚು … ಕೇಳ್ವರಿಗಿದು … ನಿಬೆಲ್ಲದಚ್ಚು ದಾಸರೇ ಪ್ರಶಂಸಿಸಿ ಕೊಂಡಿದ್ದಾರೆ .

ನಳಚರಿತ್ರೆ

ಅತ್ಯಂತ ರಮ್ಯವಾದ ಒಂದು ಕಥನಕಾವ್ಯವಾಗಿ ಮೂಲವಾಗಿ ಹೊಂದಿರುವ ಇದು ಭಾಮಿನಿ ಮಹಾಭಾರತದ ಕತೆಯನ್ನು ಷಟ್ನಧಿಯಲ್ಲಿದೆ . ಇದರಲ್ಲಿ 9 ಸಂಧಿಗಳೂ 480 ಇವೆ . ನಳ ದಮಯಂತಿರ ಪ್ರೇಮದ ಚಿತ್ರಣ ಕಾವ್ಯದ  ಜೀವಾಳವಾಗಿದೆ .

ರಾಮಧಾನ್ಯ ಚರಿತ್ರೆ – ಇದು ಒಂದು ಖಂಡಕಾವ್ಯವಾಗಿದೆ . ಚಿರಂತನ | ಧಾಮಿನಿ ನಿರೂಪಿಸಲಾಗಿದೆ . ರಾಗಿ ) ಸತ್ವ ಪಟ್ಟಧಿಯಲ್ಲಿದೆ .

ಸುಮಾರು 156 ಪದ್ಯಗಳಲ್ಲಿ ರಾಮಧಾನ್ಯದ ( ರಾಗಿ ) ಉತ್ಪಪಟತೆಯನ್ನು ಬಹಳ ಚಮತ್ಕಾರವಾಗಿ ಇದರಲ್ಲಿ

ಪ್ರೀ  ನರೆದಲಗರ ( ಅಕ್ಕಿ , ಪರೀಕ್ಷೆಯಿದ್ದು , ರಾಗಿಯ ಹಿರಿಮೆಯನ್ನು ಎತ್ತಿ ಹಿಡಿಯುವ ಪ್ರಯತ್ನವಿದೆ , ಆದ್ದರಿಂದಲ್ಲೇ ರಾಮನು ಅದಕ್ಕೆ ತನ್ನ ರಾಘವ ‘ ಎಂಬ ನಾಮವನ್ನಿತ್ರ ಎನ್ನಲಾಗಿದೆ . ಈ ಕೃತಿಯಲ್ಲಿ ಭತ್ತ ಮತ್ತು ರಾಗಿಯನ್ನು ವರ್ಗ ಸಂಘರ್ಷದ ರೂಪಕವನ್ನು ನೀಡಿದ್ದಾರೆ .

ಹರಿಭಕ್ತಸಾರ

ಒಂದು ರೀತಿಯಲ್ಲಿ ಭಕ್ತಿಭಾವಭರಿತ ಶತಕ ಗ್ರಂಥವೆನ್ನಬಹುದು . ಇದು ಸಹ ಭಾಮಿನೀ ಷಟ್ನಧಿಯಲ್ಲಿ ರಚಿತವಾಗಿದೆ . ಪ್ರತಿ ಪದ್ಯದಲ್ಲಿಯ ಕೊನೆಯ ಚರಣ ರಕ್ಷಿಸು ನಮ್ಮನನವರತ ಎಂದು ಮುಗಿಯುತ್ತದೆ . ನೀತಿ , ಭಕ್ತಿ , ವೈರಾಗ್ಯ ಇವುಗಳ ಬೊಧೆ ಗ್ರಂಥದ ಮುಖ್ಯ ಗುರಿ .

ಕನಕದಾಸರು ಕೀರ್ತನೆ ಮತ್ತು ಕಾವ್ಯಗಳಲ್ಲಿ ಬಂಡಾಯದ ದನಿ , ಸಾಮಾಜಿಕ ಕಳಕಳಿ , ವಿಡಂಬನಾ ಇವೆ . ಚಾತುರಗಳು

ಕುಲವ್ಯಾವುದು ಸತ್ಯಸುಖ “ ಕುಲಕುಲವೆನ್ನುತಿಹರು , ವುಳ್ಳ ಜನರಿಗೆ ” “ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ನೇನಾದರೂ ಬಲ್ಲಿರಾ ” ಎಂಬಲ್ಲಿ ಸಮಾಜದಲ್ಲಿಯ ಜಾತಿ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದ್ದಾರೆ .

“ ಜಪವ ಮಾಡಿದರೇನು , ತಪವ ಮಾಡಿದರೇನು ಕಪಟಗುಣ ವಿಪರೀತ ಕಲುಷವಿದ್ದವರು ” ನೇಮವಿಲ್ಲದ ಹೇಮವೇತಕಯ್ಯ ” ಎಂಬಲ್ಲಿ ಡಾಂಭಿಕತನವನ್ನು ಖಂಡಿಸಿದ್ದಾರೆ .

“ ಎಲ್ಲರೂ ಮಾಡುವುದು ಹೊಟ್ಟೆಗಾಗಿ , ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ ” ಎಂಬಲ್ಲಿ ಲೋಕ ಜೀವನವನ್ನು ವ್ಯಾಖ್ಯಾನ ಮಾಡಿದ್ದಾರೆ .

“ ತಲ್ಲಣಿಸದಿರು ಕಂಡ್ಯ ತಾಳು ಮನವೆ ,

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ ,

ತೀರ್ಥವನ್ನು ಪಿಡಿದವರೆಲ್ಲ ತಿರುನಾಮಧಾರಿಗಳೆ ,

ಮಾಯೆಯೊಳಗೂ ನಿಮ್ಮೊಳು ಮಾಯೆಯೋ ,

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು ,

ದೇವಿ ನಮ್ಮ ದ್ಯಾವರು ಬಂದರು . ನೋಡಿರೆ ಮುಂತಾದ ಕೀರ್ತನೆಗಳಲ್ಲಿ ದೈವ ಭಕ್ತಿ , ಜೀವನದರ್ಶನ , ಸಮಾಜ ವಿಮರ್ಶೆ ಸಮಾಜದ ಅಂಕುಡೊಂಕುಗಳನ್ನು ಬಿಚ್ಚು ಮಾತುಗಳಲ್ಲಿ ಚುಚ್ಚಿ ಎಚ್ಚರಿಸಿದ್ದಾರೆ . ಇವರ ಕೀರ್ತನೆಗಳು ವಚನ ಸಾಹಿತ್ಯದಲ್ಲಿ ಕಂಡು ಬರುವ ಬೆಡಗಿನ ವಚನಗಳಂತೆ ಒಗಟಿನಂತೆ , ಬಿಡಿಸಲಾರದ ಕಗ್ಗಂಟಿನಂತೆ ಇವೆ .