ಏಡ್ಸ್ (AIDS Acquired Immuno Deficiency Syndrome )
ಏಡ್ಸ್, AIDS, aids ymptoms, world aids day, aids day, hiv and aids, opportunistic infection, visual aids, early signs of hiv, hiv positive
1981 ರಲ್ಲಿ ಮೊದಲ ಬಾರಿಗೆ ಅಮೇರಿಕಾದಲ್ಲಿ ಈ ರೋಗವನ್ನು ಪತ್ತೆ ಮಾಡಲಾಯಿತು . ಡ್ಯೂಮನ್ ಡಿಫಿಷಿಯನ್ಸಿ ವೈರಸ್ ( ಎಚ್ಐವಿ ) ಎಂಬ ವೈರಸ್ನಿಂದ ಇದು ಉಂಟಾಗುತ್ತದೆ .
ಭಾರತದಲ್ಲಿ 1987 ರಲ್ಲಿ ಮೊದಲ ಏಡ್ಸ್ ರೋಗಿಯನ್ನು ಚೆನ್ನೈನಲ್ಲಿ ಪತ್ತೆ ಮಾಡಲಾಯಿತು .
ಎಚ್ಐವಿ ರಚನೆ
ಎಚ್ಐವಿ ದುಂಡಾಕಾರವಾಗಿದ್ದು ತನ್ನ ಆನುವಂಶೀಯ ವಸ್ತುವಾಗಿ ಆರ್ಎನ್ಎ ಯನ್ನು ಒಳಗೊಂಡಿದೆ . ಅದರ ಸುತ್ತ ಕೊಬ್ಬಿನ ಪದಾರ್ಥದಿಂದಾದ ಎರಡು ಪದರಗಳ ಮೊರೆ ಇದೆ .
ಇದರ ಒಳಭಾಗದಲ್ಲಿ ಪ್ರೋಟೀನ್ನಿಂದ ಕೂಡಿದ ತಿರುಳು ಇದ್ದು ಅದರ ಮಧ್ಯದಲ್ಲಿ ಆರ್ಎನ್ಎ ಮತ್ತು ರಿವರ್ಸ್ ಟಾನ್ಕಿಪ್ಪೇಸ್ ( reverse transcriptase ) ಎಂಬ ಕಿಣ್ವ ಕಂಡುಬರುತ್ತದೆ .
ಈ ಕಿಣ್ವದ ಸಹಾಯದಿಂದ ವೈರಸ್ನ ಆರ್ಎನ್ಎ ಆತಿಥೇಯ ಜೀವಕೋಶದಲ್ಲಿ ಡಿಎನ್ಎಯನ್ನು ಸಂಶ್ಲೇಷಿಸುತ್ತದೆ . ಹೀಗಾಗಿ ಎಚ್ಐವಿ ಅನ್ನು ರೆಟ್ರೋವೈರಸ್ ( retrovirus ) ಎಂದು ವರ್ಗೀಕರಿಸಲಾಗಿದೆ .
ಎಚ್ಐವಿ ಸೋಂಕುತಗುಲಿದ ಮೇಲೆ ಆತಿಥೇಯ ಜೀವಿಯ ಜೀವಕೋಶಗಳು ಅದನ್ನು ಅಷ್ಟು ಸುಲಭವಾಗಿ ಗುರುತಿಸುವುದಿಲ್ಲ .
ಹೀಗಾಗಿ ರೋಗಲಕ್ಷಣಗಳು ಕಾಣಿಸಿಕೊಳ್ಳಲು ವರ್ಷಗಳೇ ಬೇಕಾಗಬಹುದು . ವೈರಸ್ ದೇಹದ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ .
ಇದರಿಂದಾಗಿ ದ್ವಿತೀಯಕ ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ . ರೋಗಿಯು ವಿವಿಧ ರೋಗಗಳಿಗೆ ತುತ್ತಾಗಬಹುದು . ಕೊನೆಗೆ ಸಾವು ಸಂಭವಿಸುತ್ತದೆ .
ಎಚ್ಐವಿ ಸೋಂಕು ಪತ್ತೆಯಾದ ವ್ಯಕ್ತಿಯನ್ನು ಎಚ್ಐವಿ + ಎಂದು ಗುರುತಿಸಲಾಗುತ್ತದೆ . ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ,
ಎಲ್ಲಾ ಎಚ್ಐವಿ + ವ್ಯಕ್ತಿಗಳಲ್ಲಿ ಏಡ್ಸ್ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ
ಎಚ್ಐವಿ ಹರಡುವ ವಿಧಾನ
ಎಚ್ಐವಿ ಶಾಲೆಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ , ಸೋಂಕಿತ ವ್ಯಕ್ತಿಗಳ ಜೊತೆ ಅಥವಾ ಸುತ್ತ ಮುತ್ತ ಇರುವುದರಿಂದ ಅಥವಾ ಗಾಳಿ , ನೀರಿನಿಂದ ಹರಡುವುದಿಲ್ಲ .
ಬದಲಿಗೆ ಅದು ಹರಡುವ ವಿಧಾನಗಳು ಹೀಗಿವೆ .
- ಸೋಂಕಿತ ವ್ಯಕ್ತಿಗಳ ಜೊತೆ ಲೈಂಗಿಕ ಸಂಪರ್ಕ .
- ಸೋಂಕಿತ ರಕ್ತಪೂರಣ .
- ಸೂಜಿ , ಸಿರಿಂಜುಗಳನ್ನು ಸೋಂಕಿತ ವ್ಯಕ್ತಿಗಳ ಜೊತೆ ಹಂಚಿಕೊಳ್ಳುವುದು .
- ಸೋಂಕಿತ ತಾಯಿಯಿಂದ ಭ್ರೂಣಕ್ಕೆ ಜರಾಯುವಿನ ಮೂಲಕ .
ಇವುಗಳಿಂದ ಏಡ್ಸ್ ಬರುವುದಿಲ್ಲ
- ಆಹಾರವನ್ನು ಹಂಚಿಕೊಳ್ಳುವುದು
- ಹಾಸಿಗೆ ವಸ್ತ ಬಾಗಿಲಿನಚಿಲಕ , ಟವಲ್ , ಹಣೆಗೆ
- ಈಜು ಕೊಳ
- ಸಹ ಪ್ರಯಾಣ ಕೈ ಕುಲುಕುವುದು . ಸೋಂಕಿತರ ಜೊತೆ ಇರುವುದು ಮತ್ತು ಕೆಲಸ ಮಾಡುವುದು .
- ಚುಂಬಿಸುವುದು ಅಪ್ಪಿಕೊಳ್ಳುವುದು
- ಶೌಚಾಲಯ ಪೀಠ
- ಸೊಳ್ಳೆ , ನೊಣ ಮುಂತಾದ ಕೀಟಗಳು
ತಡೆಗಟ್ಟುವುದು
ಏಡ್ಸ್ ರೋಗಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ . ಎಚ್ಐವಿ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವುದೊಂದೇ ಮಾರ್ಗ
- ಬಹು ಲೈಂಗಿಕ ಸಂಪರ್ಕದಿಂದ ದೂರ ಇರುವುದು ( Avoiding multiple sex ) .
- ವೈದ್ಯಕೀಯ ಅವಶ್ಯಕವಿರುವ ಸಂದರ್ಭಗಳನ್ನು ಬಿಟ್ಟು ಚುಚ್ಚುಮದ್ದು ಅಥವಾ ಚರ್ಮಕ್ಕೆ ಗಾಯ ಉಂಟುಮಾಡುವ ಯಾವುದೇ ಸಲಕರಣೆಯಿಂದ ದೂರ ಇರುವುದು ( Abstaining from intravenous injection ) .
- ಸೋಂಕಿತ ವ್ಯಕ್ತಿಯ ದೇಹದ್ರವಗಳೊಂದಿಗೆ ಸಂಪರ್ಕ ತಡೆಯುವುದು ( Avoiding contact with body fluids )
ಇದನ್ನು ಏಡ್ಸ್ ತಡೆಗಟ್ಟುವ 3A ಮಾರ್ಗೋಪಾಯಗಳು ಎಂದು ಕರೆಯಲಾಗುತ್ತದೆ
0 Comments