ಎರವಲು ಸಂವಿಧಾನ | Borrowed Constitution

ಎರವಲು ಸಂವಿಧಾನ

(Borrowed Constitution )

borrowed constitution, fundamental duties borrowed from, dpsp borrowed from,borrowed features of indian constitution

borrowed constitution, fundamental duties borrowed from, dpsp borrowed from,borrowed features of indian constitution

ಭಾರತದ ಸಂವಿಧಾನವು ಜಗತ್ತಿನ ಸಂವಿಧಾನಗಳಲ್ಲೇ ಅತ್ಯುನ್ನತವಾದ ಸಂವಿಧಾನ ಎಂದು ಕರೆಸಿಕೊಂಡಿದೆ . ಇದಕ್ಕೆ ಪ್ರಮುಖ ಕಾರಣವೆಂದರೆ ಭಾರತದ ಸಂವಿಧಾನಕ್ಕೆ ಸಂವಿಧಾನ ರಚನಾಕಾರರು ವಿವಿಧ ದೇಶಗಳ ಸಂವಿಧಾನದಿಂದ ಉತ್ತಮ ಅಂಶಗಳನ್ನು ಎರವಲು ಪಡೆದಿದ್ದಾರೆ .

ಪ್ರಮುಖವಾಗಿ 1935 ರ ಕಾಯ್ದೆಯು ಅನೇಕ ಉತ್ತಮ ಅಂಶಗಳನ್ನು ಹೊಂದಿದ್ದು , ಅಂತಹ 1935 ರ ಭಾರತ ಸರ್ಕಾರ ಕಾಯ್ದೆಯನ್ನೇ ಶೇಕಡಾ 75 ಕ್ಕಿಂತ ಹೆಚ್ಚು ಭಾಗದಷ್ಟು ಎರವಲು ಪಡೆಯಲಾಗಿದೆ . ಸುಮಾರು 60 ದೇಶಗಳಿಂದ ಉತ್ತಮ ಅಂಶಗಳನ್ನು ಎರವಲು ಪಡೆದಯಲಾಗಿದೆ .

ಜಗತ್ತಿನ ವಿವಿಧ ರಾಷ್ಟ್ರಗಳಿಂದ ಎರವಲು ಪಡೆದ ಹಾಗೂ 1935 ರ ಭಾರತ ಸರ್ಕಾರ ಕಾಯ್ದೆಯಿಂದ ಎರವಲು ಪಡೆದ ಅಂಶಗಳು ಈ ಕೆಳಕಂಡಂತಿವೆ . ಭಾರತದ ಸಂವಿಧಾನವನ್ನು ಕುರಿತು ಡಾ || ಬಿ.ಆರ್ . ಅಂಬೇಡ್ಕರ್‌ರವರು ಹೀಗೆ ಹೇಳುತ್ತಾರೆ .

” The Con stitution of India has been framed after ransacking all the known Constitutions of the world ”

ನಮ್ಯ ಹಾಗೂ ಅನಮ್ಯ ಸಂವಿಧಾನ ( Blend of regidity & Flexibility )

ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡುವುದು ಬ್ರಿಟನ್ ಸಂವಿಧಾನವನ್ನು ತಿದ್ದುಪಡಿ ಮಾಡುವಷ್ಟು ಸುಲಭವೂ ಅಲ್ಲ ಹಾಗೂ ಅಮೆರಿಕಾ ಸಂವಿಧಾನದಷ್ಟು ಕಷ್ಟವಾಗಿಯೂ ಇಲ್ಲ . ಸಂದರ್ಭ ಕಾಲಾನುಸಾರ ಬದಲಾವಣೆಗನುಗುಣವಾಗಿ

368 ನೇ ವಿಧಿ ಅನ್ವಯ ಎರಡು ವಿಧಾನದಲ್ಲಿ ತಿದ್ದುಪಡಿಯನ್ನು ಮಾಡಬಹುದು . 368 ನೇ ವಿಧಿ ಅಲ್ಲದೆ ಸರಳ ಬಹುಮತದಿಂದಲೂ ತಿದ್ದುಪಡಿ ಮಾಡಬಹುದು ಬಹುಮತದಿಂದ ಅಂದರೆ 2/3 ಬಹುಮತದಿಂದ ಹಾಗೂ ವಿಶೇಷ ತಿದ್ದುಪಡಿ ಮಾಡಬಹುದು .

ಆದರೆ ಸದನದಲ್ಲಿ ಶೇ 50 ಕ್ಕಿಂತ ಹೆಚ್ಚು ಜನರು ಹಾಜರಿರಬೇಕು . ಹಾಗೂ ಬಹುಮತದಿಂದ ಮೂಲಭೂತ ಹಕ್ಕು ಹಾಗೂ ರಾಜ್ಯ ನಿರ್ದೇಶಕ ವಿಶೇಷ ತತ್ವಗಳನ್ನು ತಿದ್ದುಪಡಿ ಮಾಡಬಹುದು .

368 ನೇ ವಿಧಿ ಅನ್ವಯ ಕೆಲವು ವಿಷಯಗಳನ್ನು ವಿಶೇಷ ಬಹುಮತದೊಂದಿಗೆ ದೇಶದ 14 ರಾಜ್ಯಗಳಿಂದ ಒಪ್ಪಿಗೆ ಪಡೆಯಬೇಕು .

ಅಂತಹ ವಿಷಯಗಳೆಂದರೆ ರಾಷ್ಟ್ರಪತಿ ಚುನಾವಣೆ ಸಂಬಂಧಿಸಿದ 54 , ಹಾಗೂ 55 ನೇ ವಿಧಿಗಳು ,

7 ನೇ ಅನುಸೂಚಿ , 368 ನೇ ಕೋರ್ಟ್ ವಿಧಿಗೆ ತಿದ್ದುಪಡಿ ,

241 ನೇ ವಿಧಿಯ ಕೇಂದ್ರಾಡಳಿತ ಪ್ರದೇಶಗಳ ಹೈಕೋರ್ಟ್‌ಗಳು ,

ಸುಪ್ರೀಂ ಮತ್ತು ಹೈಕೋರ್ಟಿಗೆ ಸಂಬಂಧಿಸಿದ 5 ನೇ ಭಾಗದ 4 ನೇ ಅಧ್ಯಾಯ ಮತ್ತು 6 ನೇ ಭಾಗದ 5 ನೇ ಅಧ್ಯಾಯ ಕೇಂದ್ರ ಹಾಗೂ ರಾಜ್ಯಗಳಿಗೆ ಸಂಬಂಧಿಸಿದ ಶಾಸನ 11 ನೇ ಭಾಗದ 1 ನೇ ರಾಜ್ಯಗಳಿಗೆ ಪ್ರಾತಿನಿಧ್ಯ ,

ಸರಳ ರಾಜ್ಯಗಳ ಬದಲಾವಣೆ ,

ರಾಜ್ಯದ ಮೇಲ್ಮನೆ ರದ್ದು ಮಾಡುವುದು ಹಾಗೂ ಸ್ಥಾಪಿಸುವುದು ,

ಎರಡನೇ ಸಂವಿಧಾನದಲ್ಲಿ ಅನುಸೂಚಿ ಇಂಗ್ಲೀಷ್ ಬಳಕೆ ,

ಅಧಿಕೃತ ಭಾಷೆ ಬಳಕೆ ,

ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟುಗಳು ಹಾಗೂ ಈಶಾನ್ಯ ಕೆಲವು ರಾಜ್ಯಗಳಲ್ಲಿನ ಬುಡಕಟ್ಟು ಪ್ರದೇಶಗಳು ಆಡಳಿತಕ್ಕೆ ಸಂಬಂಧಿಸಿದ 5 ಮತ್ತು 6 ನೇ ಅನುಸೂಚಿಗಳು ತಿದ್ದುಪಡಿ ಮಾಡಬಹುದು .

ಆದರೆ ಕೇಶವಾನಂದ ಭಾರತಿ ಮೊಕದ್ದಮೆ ( 1973 ) ಯಲ್ಲಿ ನೀಡಿದ ಮೊಕದ್ದಮೆಯು ಮೂಲ ಸಂವಿಧಾನ ದಲ್ಲಿ ಬದಲಾಯಿಸಬಾರದೆಂದು ತೀರ್ಪು ನೀಡಿತು .

ಆದರೆ  2016 ರವರೆಗೆ ಭಾರತದ ಸಂವಿಧಾನವನ್ನು 101 ಬಾರಿ ತಿದ್ದುಪಡಿ ಮಾಡಲಾಗಿದೆ . ಎಲ್ಲಾ ಸಂದರ್ಭದಲ್ಲೂ ಸಂವಿಧಾನವನ್ನು ತಿದ್ದಲು ಸಾಧ್ಯವಿಲ್ಲ ವಿಶೇಷವಾದ ಹಾಗೂ ಅವಶ್ಯವಾದ ಸಂದರ್ಭಗಳಲ್ಲಿ ಸಂವಿಧಾನವನ್ನು ತಿದ್ದಲು ಅವಕಾಶವಿದೆ .

 

Comments

Leave a Reply

Your email address will not be published. Required fields are marked *